ವಿಷಯಕ್ಕೆ ಹೋಗು

ಮನೋಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನೋವಿಜ್ಞಾನದಲ್ಲಿ, ಮನೋಧರ್ಮ ಪದವು ವಿಶಾಲವಾಗಿ ಜೈವಿಕ ಆಧಾರವನ್ನು ಹೊಂದಿರುವ ಮತ್ತು ಕಲಿಕೆ, ಮೌಲ್ಯ ವ್ಯವಸ್ಥೆ ಮತ್ತು ಮನೋಭಾವಗಳಿಂದ ತುಲನಾತ್ಮಕವಾಗಿ ಸ್ವತಂತ್ರವಾಗಿರುವ, ವರ್ತನೆಯಲ್ಲಿ ಸುಸಂಗತವಾದ ವೈಯಕ್ತಿಕ ವ್ಯತ್ಯಾಸಗಳನ್ನು ಸೂಚಿಸುತ್ತದೆ. ಕೆಲವು ಸಂಶೋಧಕರು ಶಕ್ತಿ ಸಂಬಂಧಿ ಅಂಶಗಳು, ನಮ್ಯತೆ, ನಿರ್ದಿಷ್ಟ ಬಲವರ್ಧಕಗಳಿಗೆ ಸೂಕ್ಷ್ಮತೆ ಮತ್ತು ಭಾವನಾತ್ಮಕತೆಯಂತಹ ವರ್ತನೆಯ ವಿಧ್ಯುಕ್ತ ಕ್ರಿಯಾತ್ಮಕ ಲಕ್ಷಣಗಳೊಂದಿಗೆ ಮನೋಧರ್ಮದ ಸಂಬಂಧದ ಕಡೆಗೆ ಗಮನ ಸೆಳೆಯುತ್ತಾರೆ.[] (ನರವಿಕಾರ, ಸಂಗಶೀಲತೆ, ಆವೇಗಯುಕ್ತತೆ, ಇತ್ಯಾದಿಗಳಂತಹ) ಮನೋಧರ್ಮದ ವಿಶೇಷ ಲಕ್ಷಣಗಳು ವರ್ತನೆಯಲ್ಲಿನ ಅದರ ವಿಶಿಷ್ಟ ನಮೂನೆಗಳಾಗಿ ಪ್ರೌಢಾವಸ್ಥೆಯಾದ್ಯಂತ ಉಳಿಯುತ್ತವೆ, ಆದರೆ ಇವು ಮಕ್ಕಳಲ್ಲಿ ಅತ್ಯಂತ ಗಮನಾರ್ಹವಾಗಿವೆ ಮತ್ತು ಅತಿ ಹೆಚ್ಚು ಅಧ್ಯಯನಿಸಲ್ಪಡುತ್ತವೆ. ಶಿಶುಗಳನ್ನು ಸಾಮಾನ್ಯವಾಗಿ ಮನೋಧರ್ಮದಿಂದ ವರ್ಣಿಸಲಾಗುತ್ತದೆ, ಆದರೆ ೧೯೨೦ರ ದಶಕದಲ್ಲಿನ ಅನುಲಂಬ ಸಂಶೋಧನೆಯು ಮನೋಧರ್ಮವು ಆಯಸ್ಸು ಪೂರ್ತಿ ಸ್ಥಿರವಾಗಿರುವಂಥದ್ದು ಎಂದು ಸ್ಥಿರೀಕರಿಸಲು ಆರಂಭಿಸಿತು.

ಉಲ್ಲೇಖಗಳು

[ಬದಲಾಯಿಸಿ]
  1. Rusalov, VM; Trofimova, IN (2007). Structure of Temperament and Its Measurement. Toronto, Canada: Psychological Services Press.


"https://kn.wikipedia.org/w/index.php?title=ಮನೋಧರ್ಮ&oldid=916620" ಇಂದ ಪಡೆಯಲ್ಪಟ್ಟಿದೆ