ವಿಷಯಕ್ಕೆ ಹೋಗು

ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2001 -2011 ರ ಜನಗಣತಿಯ ಅಂಕಿ ಅಂಶಗಳನ್ನು ಹೋಲಿಸಿ ನೋಡಿದಾಗ ಈ ಹತ್ತು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯಾಗಿರುವುದು ಕಂಡುಬರುತ್ತದೆ.

ಭಾರತದ ಒಟ್ಟು ಸಾಕ್ಷರತೆ 2011 ರಲ್ಲಿ 74%/ದಟ್ಟ ಬಣ್ಣವು ಹೆಚ್ಚು ಸಾಕ್ಷರತೆ ತೋರಿಸುತ್ತದೆ.

ರ ಜನಗಣತಿಯ ಸಾಕ್ಷರತೆ ಹೋಲಿಕೆ ಮತ್ತು ಪ್ರಗತಿ

[ಬದಲಾಯಿಸಿ]
ಭಾರತವು ,56 ಕೋಟಿ ಜನರ(?) (38.42%) ಓದಲು ಮತ್ತು ಬರೆಯಲು ತಿಳಿದಿರುವ ಕನಿಷ್ಠ ನಾಲ್ಕು ಸದಸ್ಯರು ಹೊಂದಿರುವ ಒಟ್ಟು 24,88 ಕೋಟಿ ಕುಟುಂಬಗಳನ್ನು ಹೊಂದಿದೆ. ಆದರೆ ಒಬ್ಬರೂ ಸಾಕ್ಷರ ಹೊಂದಿಲ್ಲದ 2.42 ಕೋಟಿ ಕುಟುಂಬಗಳಿವೆ (9.74%) . (ಹೋಲಿಸಿದರೆ,) 2001 ರ ಜನಗಣತಿಯ ಪ್ರಕಾರ, 35,28% ಕುಟುಂಬಗಳು ಕನಿಷ್ಠ ನಾಲ್ಕು ಸಾಕ್ಷರ ಸದಸ್ಯರನ್ನು ಹೊಂದಿತ್ತು ಮತ್ತು 14.4% ನಿರಕ್ಷರತೆ ಹೊಂದಿತ್ತು..
ಭಾರತದ 2001 ರಲ್ಲಿ ಕೇವಲ 64.84% ಇದ್ದ ಸಾಕ್ಷರತೆ 2011 ರಲ್ಲಿ 74%, ಬಂದಾಗ ಗಮನಾರ್ಹ ಸುಧಾರಣೆಯನ್ನು ಕಂಡಿದೆ .(ಮೇಲೆ 7 ವರ್ಷ ವಯಸ್ಸಿ ಗೆ ಹೆಚ್ಚಿನವರಲ್ಲಿ ).. ನಗರ ಪ್ರದೇಶಗಳಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು. ಇದು 84% ಇದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ, ದರ ಸುಮಾರು 68% ಇದ್ದು (ಕಡಿಮೆ ಇದೆ). (ಒಂದು 'ಮನೆಯ'ಲ್ಲಿ, ಸಾಮಾನ್ಯವಾಗಿ ಒಟ್ಟಿಗೆ ವಾಸಿಸುವ ಸಾಮಾನ್ಯ ಅಡುಗೆ ಊಟ ಮಾಡುವ ವ್ಯಕ್ತಿಗಳು ಒಂದು ಕುಟುಂಬ)
ಗ್ರಾಮೀಣ ಪ್ರದೇಶಗಳಲ್ಲಿ, ಒಟ್ಟು 16.82 ಕೋಟಿ ಕುಟುಂಬಗಳಲ್ಲಿ , 5,80 ಕೋಟಿ (34.51%) ಕನಿಷ್ಠ ನಾಲ್ಕು ಸಾಕ್ಷರ ಸದಸ್ಯರನ್ನು ಹೊಂದಿವೆ, ಆದರೆ ಒಂದೂ ಸಾಕ್ಷರ ಸದಸ್ಯ ಹೊಂದಿಲ್ಲದ 2.04 ಕೋಟಿ (12.17%) ಕುಟುಂಬಗಳು ಇವೆ. ಇವು ಹೆಚ್ಚು ಏಳು ಸದಸ್ಯರು ಇರುವ 7.30 ಲಕ್ಷ ಕುಟುಂಬಗಳು ಇವೆ .ಮತ್ತು ಇವರಲ್ಲಿ ಯಾರೂ ಸಾಕ್ಷರರಲ್ಲ. ಅಂತಹ ಕುಟುಂಬಗಳು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇವೆ.
ದೊಡ್ಡ ರಾಜ್ಯಗಳಲ್ಲಿ ಬಿಹಾರವು ಒಂದೂ ಸಾಕ್ಷರ ಸದಸ್ಯನನ್ನು ಹೊಂದಿಲ್ಲದ ಗರಿಷ್ಠ ಮನೆ-ಕುಟುಂಬಗಳನ್ನು ಹೊಂದಿದೆ. ಬಿಹಾರ ರಾಜ್ಯದಲ್ಲಿ ಒಂದು ಸಾಕ್ಷರ ಸದಸ್ಯ ಇಲ್ಲದೆ 33,59 ಲಕ್ಷ (17.79%) ಮನೆಗಳು ಇವೆ. . ದೇಶದ ಅತ್ಯಧಿಕ ಸಾಕ್ಷರತೆಯ ರಾಜ್ಯವಾದ, ಕೇರಳವು 1. 21 ಲಕ್ಷ (1. 5% )-ಕನಿಷ್ಠ ಅಂತಹ ಕುಟುಂಬಗಳನ್ನು ಹೊಂದಿದೆ..
ಕೆಲವು ಮಾಹಿತಿ/ ಸಂಗತಿಗಳು
ಒಟ್ಟು ಕುಟುಂಬಗಳು: 24,88 ಕೋಟಿ
ಒಂದೂ ಸಾಕ್ಷರ ಸದಸ್ಯರು ಇಲ್ಲದವು-2.42 ಕೋಟಿ ಕುಟಂಬಗಳು
1 ಸಾಕ್ಷರ ಸದಸ್ಯರನ್ನು ಹೊಂದಿದವು: 3.09 ಕೋಟಿ ಕುಟುಂಬಗಳು
2 ಸಾಕ್ಷರ ಸದಸ್ಯರನ್ನು ಹೊಂದಿದವು: 5,14 ಕೋಟಿ ಕುಟುಂಬಗಳು
3 ಸಾಕ್ಷರ ಸದಸ್ಯರನ್ನುಹೊಂದಿದವು: 4.65 ಕೋಟಿ ಕುಟುಂಬಗಳು
4 ಸಾಕ್ಷರ ಸದಸ್ಯರನ್ನು ಅಥವಾ ಹೆಚ್ಚು: 9,56 ಕೋಟಿ.ಕುಟುಂಬಗಳು

ರಾಜ್ಯವಾರು ಸಾಕ್ಷರತಾ ಪ್ರಗತಿ

[ಬದಲಾಯಿಸಿ]
ಸಾಕ್ಷರತೆಯು ಶೇಕಡಾ(%)
ಸಾಕ್ಷರತೆಯ ಶ್ರೇಣಿ

ಮತ್ತು ರಾಜ್ಯ

2011 ರ ಜನಗಣತಿಯ

ಸಾಕ್ಷರತೆಯು ಶೇ.(%)

2001 ರ ಜನಗಣತಿಯ

ಶೇ.(%)

ಶೇಕಡಾ ವ್ಯತ್ಯಾಸ

-ಪ್ರಗತಿ

ಸಮಗ್ರ ಭಾರತ 74,04 64,83 9,21
1 ಕೇರಳ 93.91 90.86 3.05
2 ಲಕ್ಷದ್ವೀಪ 92,28 86,66 5,62
3 ಮಿಜೋರಮ್ 91.58 88.80 2.78
4 ತ್ರಿಪುರ 87,75 73,19 14,56
5 ಗೋವಾ 87.40 82.01 5,39
6 ಡಾಮನ್ ಮತ್ತು ಡಿಯು 87,07 78,18 8,89
7 ಪುದುಚೇರಿ 86,55 81,24 5,31
8 ಚಂಡೀಗಢ 86.43 81.94 4.49
9 ದೆಹಲಿ 86.34 81.67 4.67
10 ಅಂಡಮಾನ್ ಮತ್ತು ನಿಕೋಬಾರ್ 86.27 81.30 4.97
11 ಹಿಮಾಚಲ ಪ್ರದೇಶ 83.78 76.48 7.30
12 ಮಹಾರಾಷ್ಟ್ರ 82.91 76.88 6.03
13 ಸಿಕ್ಕಿಂ 82,20 68,81 13,39
14 ತಮಿಳುನಾಡು 80.33 73.45 6.88
15 ನಾಗಾಲ್ಯಾಂಡ್ 80,11 66,59 13,52
16 ಮಣಿಪುರ 79,85 69,93 9,92
17 ಉತ್ತರಾಂಚಲ 79.63 71.62 8.01
18 ಗುಜರಾತ್ 79,31 69,14 10,17
19 ದಾದ್ರಾ ಮತ್ತು ನಗರ್ ಹವೇಲಿ 77,65 57,63 20,02
20 ಪಶ್ಚಿಮ ಬಂಗಾಳ 77,08 68,64 8,44
21 ಪಂಜಾಬ್ 76.68 69.65 7.03
22 ಹರಿಯಾಣ 76.64 67.91 8.73
23 ಕರ್ನಾಟಕ 75,60 66,64 8,96
24 ಮೇಘಾಲಯ 75,48 62,56 12,92
25 ಒಡಿಶಾ 73,45 63,08 10,37
26 ಅಸ್ಸಾಂ 73.18 63.25 9.93
27 ಚತ್ತೀಸ್‌ಗಢ 71.04 64.66 6,38
28 ಮಧ್ಯಪ್ರದೇಶ 70,63 63,74 6,89
29 ಉತ್ತರ ಪ್ರದೇಶ 69.72 56.27 13,45
30 ಜಮ್ಮು ಮತ್ತು ಕಾಶ್ಮೀರ 68,74 55,52 13,22
31 ಆಂಧ್ರಪ್ರದೇಶ(ಒಟ್ಟು) 67.66 60.47 7.19
32 ಜಾರ್ಖಂಡ್ 67,63 53,56 14,07
33 ರಾಜಸ್ಥಾನ 67.06 60.41 6.65
34 ಅರುಣಾಚಲ ಪ್ರದೇಶ 66,95 54,34 12,61
35 ಬಿಹಾರ 63.82 47.00 16.82

(Source: Election Commission of India)

[] []

(ಮೂಲ: ಜನಗಣತಿ ನಿರ್ದೇಶನಾಲಯ) IndiaTNN: ಟೈಮ್ಸ್ ಆಫ್ ಇಂಡಿಯ | ನವೆಂಬರ್ 23, 2014 1

ಉಲ್ಲೇಖಗಳು

[ಬದಲಾಯಿಸಿ]
  1. (Source: Election Commission of India)
  2. (ಮೂಲ: ಜನಗಣತಿ ನಿರ್ದೇಶನಾಲಯ) IndiaTNN: ಟೈಮ್ಸ್ ಆಫ್ ಇಂಡಿಯ | ನವೆಂಬರ್ 23, 2014