ಭದ್ರಾ ಅಣೆಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನದಿಯ ಉಗಮ[ಬದಲಾಯಿಸಿ]

ಲಕ್ಕವಳ್ಳಿ-ಭದ್ರಾ ಅಣೆಕಟ್ಟು
  • ಭದ್ರಾ ನದಿ ಕುದುರೆಮುಖ ಶ್ರೇಣಿಯ ಪಶ್ಚಿಮ ಘಟ್ಟಗಳ ಅರೋಲಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಕುದುರೆಮುಖದ ಸಂಸೆ ಯಲ್ಲಿ, ಗಂಗಾಮೂಲ ಎಂಬಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ 'ಕೂಡ್ಲಿ'ಯಲ್ಲಿ ತುಂಗಾ ನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.[೧]
Bhadra Dam

ಜಲಾನಯನ ಪ್ರದೇಶ-ಅಣೆಕಟ್ಟು[ಬದಲಾಯಿಸಿ]

  • ಭದ್ರಾವತಿ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯದ ಮೂಲಕ ಹರಿಯುತ್ತದೆ., ಶಿವಮೊಗ್ಗ ಸನಿಹದ ಭದ್ರಾವತಿ ಮೂಲಕ ಹರಿದು, ಉಪನದಿಗಳಿಂದ ಸಂಯೋಜಿತ ನದಿ ಕೃಷ್ಣ ನದಿ ಸೇರಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ತುಂಗಭದ್ರ, ಕೃಷ್ಣ ನದಿಯ ಪ್ರಮುಖ ಉಪನದಿ, ಪೂರ್ವದ ದಿಕ್ಕಿನಲ್ಲಿ ಮುಂದುವರೆಯುತ್ತದೆ. ಭದ್ರಾ ಅಣೆಕಟ್ಟು ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ, ಲಕ್ಕವಳ್ಳಿ ಹಳ್ಳಿಯಿಂದ 1.5 ಕಿಲೋಮೀಟರ್ (0.93 ಮೈಲಿ) ಮತ್ತು ಶಿವಮೊಗ್ಗ ನಗರದ 28 ಕಿಲೋಮೀಟರ್ ಇದೆ (17 ಮೈಲಿ ) ಭದ್ರಾ ನದಿಯ ತುಂಗಭದ್ರೆಯ ಸಂಗಮ 50 ಕಿಲೋಮೀಟರ್ (31 ಮೈಲಿ). ಭದ್ರಾ ಅಣೆಕಟ್ಟಿನ ಜಲಾನಯನ ಪ್ರದೇಶ. 1,968 ಚದರ ಕಿಲೋಮೀಟರ್ (760 ಚದರ ಮೈಲಿ) ಅದರಲ್ಲಿ ಅರಣ್ಯ ಪ್ರದೇಶ 717.49 ಹೆಕ್ಟೇರ್ (1,773.0 ಎಕ್ರೆಗಳು) ಅಚ್ಚುಕಟ್ಟು ಪ್ರದೇಶವಿದೆ ತೂಬುಗಳಲ್ಲಿ, ನೀರಾವರಿ ಕೃಷಿ ಭೂಮಿ 3,274.65 ಹೆಕ್ಟೇರ್ (8,091.8 ಎಕರೆ) ಮತ್ತು 7,258.74 ಹೆಕ್ಟೇರ್ (17,936.7 ಎಕರೆ)ಪಾಳು ಭೂಮಿ ಆಗಿದೆ. ನೀರಾವರಿ ಯೋಜನೆಯ ಪ್ರದೇಶ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಇದೆ. ಹಲವಾರು ಕೈಗಾರಿಕೆಗಳು, ನಗರ ಮತ್ತು ಗ್ರಾಮೀಣ ವಸಾಹತುಗಳು ಈ ನದಿಯ ನೀರು ಸರಬರಾಜು ಅವಲಂಬಿಸಿದೆ; ಪ್ರಮುಖ ಕೈಗಾರಿಕಾ ಚಟುವಟಿಕೆ ಯೋಜನೆಯ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್, ಮೈಸೂರು ಪೇಪರ್ ಮಿಲ್ಸ್ ಮತ್ತು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇದರ ನೀರಿನಾಶ್ರಯದಲ್ಲಿ ಇವೆ. ಮೀನುಗಾರಿಕೆ ಚಟುವಟಿಕೆಗಳಿಗೆ ಈ ನದಿಯ ಉಪಯೋಗ ಹೆಚ್ಚಾಗಿದೆ; (ಮೀನಿನ 81 ಮೀನುಗಳ ಜಾತಿ/ಕುಟುಂಬಗಳು, ಅವುಗಳ 8 ವಿಭಾಗದವುಗಳು ಭದ್ರಾ ನದಿ ಯಲ್ಲಿ ರೋಗ ಪೀಡಿತವಾದ ದಾಖಲೆಗಳಿವೆ.?)[೨]

ಮಳೆ ನೀರಿನ ಪ್ರಮಾಣ[ಬದಲಾಯಿಸಿ]

  • ಭದ್ರಾ ನದಿ ಜಲಾನಯನ ಮಳೆ ಮುಂಗಾರು ಅವಧಿಯಲ್ಲಿ (ನವೆಂಬರ್ ಜೂನ್) ಅವಧಿಯಲ್ಲಿ ಸಂಭವಿಸುತ್ತವೆ. 2320 ಮಿಮೀ ಸರಾಸರಿ ವಾರ್ಷಿಕ ಮಳೆಯಾಗುತ್ತದೆ [3]. ಮಳೆ ಎರಡೂ ನೈಋತ್ಯ ಮುಂಗಾರು ಹಾಗೂ ಈಶಾನ್ಯ ಮುಂಗಾರಿನ ಲಾಭದುರೆಯುವುದು.. ಒಳಹರಿವು ಕೊಡುಗೆ ನೈರುತ್ಯ ಮುಂಗಾರು (ಜೂನ್ ಸೆಪ್ಟೆಂಬರ್) 82%. ಮತ್ತು ಈಶಾನ್ಯ ಮಾರುತಗಳಿಂದ 18% (ಅಕ್ಟೋಬರ್ನಿಂದ ಡಿಸೆಂಬರ್ವರೆಗೆ) ನಿಂದ ಅಣೆಕಟ್ಟೆ ನೀರು ಪಡೆಯುವುದು. 1,968 ಚದರ ಕಿಲೋಮೀಟರ್ (760 ಚದರ ಮೈಲಿ) ಅಚ್ಚುಕಟ್ಟು ಪ್ರದೇಶದ ಅಂದಾಜು ವಾರ್ಷಿಕ ನೀರಿನ ಇಳುವರಿ/ಒದಗಣೆ 75% ನಂಬಬಹುದಾದ ವರ್ಷದಲೆಖ್ಖ 84,63ಬಿಚಿಎಫ್ ಃಅಈ (ಶತಕೋಟಿ ಘನ ಅಡಿ)ಎಂದಿದ್ದಾರೆ. 25 ವರ್ಷಗಳ ಕಾಲದ ರೆಕಾರ್ಡಿಂಗ್ ಆಧರಿಸಿ, ಇದು 1,678 ಮಿಮೀ ಅಂದಾಜು ವಾರ್ಷಿಕ ಇವ್ಯಾಪೊಟ್ರಾನ್ಸ್ಪಿರೇಷನ್ (ಭಾಷ್ಪೀಕರಣ?)ಹೊಂದಿದೆ.[೩]

ನೀರಿನ ಕೊರತೆ ಏಪ್ರಿಲ್ ೨೦೧೬[ಬದಲಾಯಿಸಿ]

  • 71.53 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ (ಜಲಾಶಯದ ಗರಿಷ್ಠಮಟ್ಟ 186 ಅಡಿ) ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 27 ಟಿಎಂಸಿ ನೀರಿದೆ. ಅದರಲ್ಲಿ 13 ಟಿಎಂಸಿ ಅನುಪಯುಕ್ತ ಸಂಗ್ರಹ. ಉಳಿದ 14 ಟಿಎಂಸಿಯಲ್ಲಿ ನದಿ ತೀರದ ನಗರ–ಪಟ್ಟಣ, ಗ್ರಾಮೀಣ ಭಾಗದ ನೀರು ಸರಬರಾಜು ಯೋಜನೆಗಳು ಹಾಗೂ ಕೈಗಾರಿಕೆಗಳ ಬಳಕೆಗೆ 4 ಟಿಎಂಸಿ ಮೀಸಲಿಡಬೇಕಿದೆ. ಹಾಗಾಗಿ, ಭದ್ರಾ ಬಲ ಹಾಗೂ ಎಡ ದಂಡೆ ನಾಲೆಗಳ 1,82,818 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಕೇವಲ 10 ಟಿಎಂಸಿ ಮಾತ್ರ ಲಭ್ಯವಿದೆ.
  • ಸಮಿತಿ ತೀರ್ಮಾನದಂತೆ ಈಗಾಗಲೇ 54 ದಿನ ನೀರು ಹರಿಸಲಾಗಿದೆ. ಈಗ ನಾಲೆಯಲ್ಲಿ ಹರಿಯುತ್ತಿರುವ ನೀರನ್ನು ಏ. 10ಕ್ಕೆ ನಿಲುಗಡೆ ಮಾಡಿ, ನಂತರ ಏ.28ರಿಂದ 21 ದಿನ ಹರಿಸಿದರೆ ಜಲಾಶಯದ ನೀರು ಖಾಲಿಯಾಗಲಿದೆ. ಪ್ರಸ್ತುತ ಜಲಾಶಯದ ಮಟ್ಟ 139 ಅಡಿ ಇದೆ. 30 ದಿನ ನೀರು ಹರಿಸಿದರೆ ಅದು 113 ಅಡಿಗೆ ತಲುಪಲಿದೆ. ನಂತರ ಮಳೆ ಬೀಳುವವರೆಗೂ ಒಂದು ಹನಿ ನೀರು ನಾಲೆಗೆ ಹರಿಸಲು ಸಾಧ್ಯವಾಗುವುದಿಲ್ಲ.
  • ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ: ಜಲಾಶಯದ ನೀರು ಬಳಸಿಕೊಂಡು ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ಹಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹಿಂದೆ ಕುಡಿಯುವ ನೀರಿಗಾಗಿ ಕೇವಲ 2 ಟಿಎಂಸಿ ನೀರು ಬಳಸಲಾಗುತ್ತಿತ್ತು. ಈಗ ಈ ಪ್ರಮಾಣ 7 ಟಿಎಂಸಿಗೆ ತಲುಪಿದೆ.
  • ಜಲಾಶಯದ ನೀರು ಮುಖ್ಯ ನಾಲೆ, ವಿತರಣಾ ಹಾಗೂ ಉಪ ನಾಲೆಗಳು ಸೇರಿ ಎಡ ನಾಲೆ 78 ಕಿ.ಮೀ ಮತ್ತು ಬಲ ನಾಲೆ 387.90 ಕಿ.ಮೀ ಸಾಗುತ್ತವೆ. ನಾಲೆ ಸಾಗುವ ಹಲವು ಪ್ರದೇಶಗಳು ಎತ್ತರದಲ್ಲಿದ್ದು, ಅಲ್ಲೆಲ್ಲ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆದು ಒಣ ಭೂಮಿಯಲ್ಲೂ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ. ಹೀಗೆ ಅಕ್ರಮವಾಗಿ ಪಡೆದ ನೀರಿನಲ್ಲಿ ಸಾವಿರಾರು ಎಕರೆ ತೋಟಗಳನ್ನೂ ಬೆಳೆಸಲಾಗಿದೆ.
  • ಅಕ್ರಮವಾಗಿ ನೀರು ಬಳಸುವ ಕಾರಣ ನಾಲೆಯಲ್ಲಿ ಪ್ರತಿದಿನ 2,650 ಕ್ಯುಸೆಕ್‌ ನೀರು ಹರಿದರೂ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಒಂದು ವೇಳೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹೆಚ್ಚು ನೀರು ಹರಿಸುವ ನಿರ್ಧಾರ ತೆಗೆದುಕೊಂಡರೂ, ನಾಲೆಗಳಿಗೆ ಧಕ್ಕೆಯಾಗುವ ಜತೆಗೆ, ನೀರು ನಿಗದಿಪಡಿಸಿದ ಅವಧಿಗೂ ಮೊದಲೇ ಖಾಲಿಯಾಗಿ ಬಿಡುತ್ತದೆ. ಹಿಂದೆಯೂ ಕೆಲ ವರ್ಷ ಭದ್ರಾ ಜಲಾಶಯ ಇಂತಹ ಸ್ಥಿತಿಗೆ ತಲುಪಿತ್ತು. ನೀರಾವರಿ ಬಳಕೆಗಾಗಿ ಮೀಸಲಾದ ನೀರು 2004ರಲ್ಲಿ 16.64 ಟಿಎಂಸಿಗೆ ಕುಸಿದಿತ್ತು.[೪]

ಕುಡಿಯುವ ನೀರಿನ ಯೋಜನೆ[ಬದಲಾಯಿಸಿ]

  • ಕುಡಿಯುವ ನೀರಿನ ಯೋಜನೆಗಳಿಗೆ ನದಿ ಮೂಲಕ ಹರಿಸುವ ನೀರಿನ ದುರ್ಬಳಕೆ ತಡೆಯಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹೊಸ ಕಾರ್ಯ ತಂತ್ರ ರೂಪಿಸಿದೆ. ಭದ್ರಾ ಜಲಾಶಯದಿಂದ ನದಿ ಮೂಲಕ ನೀರು ಹರಿಸುವ ಸಾಂಪ್ರದಾಯಿಕ ಪದ್ಧತಿಗೆ ತಿಲಾಂಜಲಿ ನೀಡಿ, ನದಿ ಪಾತ್ರದ ಉದ್ದಕ್ಕೂ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಸಿಂಗಟಾಲೂರು ಬ್ಯಾರೇಜ್‌ವರೆಗೆ 222 ಕಿ.ಮೀ. ದೂರ ಪೈಪ್‌ಲೈನ್‌ ಅಳವಡಿಸಿ, ಆ ಮೂಲಕ ಗುರುತ್ವಾಕರ್ಷಣೆ ಶಕ್ತಿಯ ಆಧಾರದ ಮೇಲೆ ಕುಡಿಯುವ ನೀರಿನ ಯೋಜನೆಗಳಿಗೆ ಅಗತ್ಯವಾದ ನೀರು ಹರಿಸಲಾಗುತ್ತದೆ.
  • ಜಲಾಶಯದಿಂದ ಸಿಂಗಟಾಲೂರು ಮಧ್ಯೆ ಇರುವ ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ 200ಕ್ಕೂ ಹೆಚ್ಚು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೂ ಈ ಪೈಪ್‌ಲೈನ್‌ ಮೂಲಕವೇ ನೀರನ್ನು ಪೂರೈಸಲಾಗುತ್ತದೆ. ಮೈಲ್ಡ್‌ಸ್ಟೀಲ್‌ನ ಈ ಪೈಪ್‌ ಮಾರ್ಗ ಅಳವಡಿಕೆಗೆ ತಗಲುವ ಅಂದಾಜು ವೆಚ್ಚ ₹ ೭೦೦ ಕೋಟಿ.
  • ಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ೭೧.೫೩ ಟಿಎಂಸಿ ಅಡಿ. ಇದರಲ್ಲಿ ೧೩.೮೩೨ ಟಿಎಂಸಿ ಅಡಿ ಡೆಡ್‌ಸ್ಟೋರೇಜ್‌ ಹೊರತುಪಡಿಸಿ ಉಳಿದ ೫೭.೬೯೮ ಟಿಎಂಸಿ ಅಡಿ ನೀರು ಕೃಷಿ, ಕೈಗಾರಿಕೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಸರ್ಕಾರದ ಆದೇಶದಂತೆ ಕುಡಿಯುವ ನೀರಿಗಾಗಿ ಪ್ರತಿ ವರ್ಷವೂ ೭ ಟಿಎಂಸಿ ಅಡಿ ನೀರು ಮೀಸಲಿಡುವುದು ಕಡ್ಡಾಯ. ಅದರಲ್ಲಿ ೩.೩೬೭ ಟಿಎಂಸಿ ಅಡಿ ನೀರು ನದಿ ಮೂಲಕ ಹರಿಸಲಾಗುತ್ತದೆ.

ಮೂರು ಪಟ್ಟು ನೀರು ವ್ಯರ್ಥ[ಬದಲಾಯಿಸಿ]

  • ಜಲಾಶಯದಿಂದ ಸಿಂಗಟಾಲೂರು ಬ್ಯಾರೇಜ್‌ವರೆಗೆ ನದಿ ಮೂಲಕ ನಿಗದಿತ ಪ್ರಮಾಣದ ನೀರು ತಲುಪಿಸಲು ಪ್ರಾಧಿಕಾರ ಇದುವರೆಗೂ ಅದರ ಮೂರುಪಟ್ಟು ನೀರು ಖರ್ಚು ಮಾಡುತ್ತಿದೆ. ಇದಕ್ಕೆ ಕಾರಣ ನದಿ ಪಾತ್ರದ ಉದ್ದಕ್ಕೂ ಇರುವ ಜಲಗಳ್ಳರ ಹಾವಳಿ, ಮರಳು ಗಣಿಗಾರಿಕೆಗೆ ತೆಗೆದ ಬೃಹತ್‌ ಗುಂಡಿಗಳು. ಭದ್ರಾ ಹಾಗೂ ತುಂಗಭದ್ರಾ ನದಿ ತೀರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ ಅಳವಡಿಸಲಾಗಿದ್ದು, ಬೇಸಿಗೆಯಲ್ಲಿ ಅಪಾರ ಪ್ರಮಾಣದ ನೀರನ್ನು ಅಕ್ರಮವಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ಕುಡಿಯುವ ನೀರಿನ ಯೋಜನೆಗಳಿಗೆ ನಿಗದಿತ ಪ್ರಮಾಣದ ನೀರು ತಲುಪಿಸುವುದು ಪ್ರಾಧಿಕಾರಕ್ಕೆ ಸವಾಲಿನ ಕೆಲಸವಾಗಿದೆ. ಕಳೆದ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ನಡುವೆಯೂ ಗದಗ–ಬೆಟಗೇರಿಯವರಿಗೆ ಕುಡಿಯುವ ನೀರಿಗಾಗಿ ಅಗತ್ಯವಿದ್ದ ೧.೫ ಟಿಎಂಸಿ ಅಡಿಯಷ್ಟನ್ನು ತಲುಪಿಸಲು ಜಲಾಶಯದ 5 ಟಿಎಂಸಿ ಅಡಿ ಖಾಲಿ ಮಾಡಲಾಗಿತ್ತು. ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.
  • ಬೇಸಿಗೆ ಭತ್ತದ ಬೆಳೆ ತ್ಯಾಗ ಮಾಡಿದ್ದ ಅಚ್ಚುಕಟ್ಟು ರೈತರು ನದಿಗೆ ಅಷ್ಟೊಂದು ಪ್ರಮಾಣದ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣಗಳಿಂದ ಭವಿಷ್ಯದಲ್ಲಿ ಜಲ ಕಳವು ತಡೆದು ನೀರು ಪೋಲಾಗದಂತೆ ಪ್ರಾಧಿಕಾರ ಪೈಪ್‌ಲೈನ್‌ ಅಳವಡಿಸುವ ಯೋಜನೆ ರೂಪಿಸಿದೆ.[೫]

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  1. http://wikimapia.org/302970/Bhadra-River-Project-Dam
  2. "Bhadhra Reservoir Project".Water Resources Karnataka: National Informatics Center.
  3. S. Thiruvengadachari; R. Sakthivadivel. "Assessing Irrigation Performance of Rice-Based Bhadra Project in India". International Irrigation Management Institute, Sri Lanka.
  4. "ಆರ್ಕೈವ್ ನಕಲು". Archived from the original on 2021-05-15. Retrieved 2016-04-02.
  5. http://www.prajavani.net/news/article/2017/07/15/506259.html

ಉಲ್ಲೇಖ[ಬದಲಾಯಿಸಿ]