ವಿಷಯಕ್ಕೆ ಹೋಗು

ನೆಫಿಲಾ ಪಿಲಿಪ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಫಿಲಾ ಪಿಲಿಪ್ಸ್
ಡಾರ್ಸಲ್ ಸೈಡ್
ವೆಂಟ್ರಲ್ ಸೈಡ್
ಎರಡೂ ಮಧ್ಯಪ್ರದೇಶ, ಭಾರತ
Scientific classification e
Unrecognized taxon (fix): ನೆಫಿಲಾ
ಪ್ರಜಾತಿ:
ನ. ಪಿಲಿಪ್ಸ್
Binomial name
ನೆಫಿಲಾ ಪಿಲಿಪ್ಸ್
ಪ್ಯಾಬ್ರಿಷಿಯಸ್, ೧೭೯೩
Synonyms

ಅರೇನಿಯಾ ಲಾಂಗಿಪ್ಸ್
ಅರೇನಿಯಾ ಮ್ಯಾಕುಲಾಟಾ
ಅರೇನಿಯಾ ಪಿಲಿಪ್ಸ್
ಅರೇನಿಯಾ ಸೆಬಾ
ಎಪೈರಾ ಕ್ರಿಸೋಗಾಸ್ಟರ್
ನೆಫಿಲಾ ಮ್ಯಾಕುಲಾಟಾ
ನೆಫಿಲಾ ಫಸ್ಕಿಪ್ಸ್
ಎಪೈರಾ ಫಸ್ಸಿಪೆಸ್
ಎಪೈರಾ ದೊರೆಯಾನಾ
ಎಪೈರಾ ಕ್ಯಾಲಿಜಿನೋಸಾ
ನೆಫಿಲಾ ಆರ್ನಾಟಾ
ಎಪೈರಾ ಪೆನಿಸಿಲಮ್
ಎಪೈರಾ ಹಾರ್ಪಿಯಾ
ನೆಫಿಲಾ ಕ್ರಿಸೋಗಾಸ್ಟರ್
ಮೆಟಾ ಆರ್ನಾಟಾ
ನೆಫಿಲಾ ಪೆಕ್ಯುನಿಯೋಸಾ
ನೆಫಿಲಾ ಅರೋಸಾ
ನೆಫಿಲಾ ಪ್ರೊಸೆರಾ
ನೆಫಿಲಾ ಸಲ್ಫುರೋಸಾ
ನೆಫಿಲಾ ಟೆನ್ಯೂಪ್ಸ್
ನೆಫಿಲಾ ಸಬ್‌ಮ್ಯಾಕುಲಾಟಾ

ನೆಫಿಲಾ ಪಿಲಿಪ್ಸ್ (ಗೋಲ್ಡನ್ ಆರ್ಬ್ ವೀವರ್[] ) ಎಂಬುದು ನೆಫಿಲಾ ಜಾತಿಗೆ ಸೇರಿದ ಜೇಡವಾಗಿದೆ. ಇದು ಪೂರ್ವದ ಎಲ್ಲಾ ದೇಶಗಳಲ್ಲಿ ಮತ್ತು ಆಗ್ನೇಯ ಏಷ್ಯಾ ಮತ್ತು ಓಷಿಯಾನಿಯಾದಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಚಿಕ್ಕ ಮತ್ತು ಮಧ್ಯಮ ಗಾತ್ರದ ಕಾಡುಗಳಲ್ಲಿ ಮತ್ತು ಉದ್ಯಾನಗಳಲ್ಲಿ ಕಂಡುಬರುತ್ತದೆ. ಹೆಣ್ಣು ಜೇಡಗಳು ದೊಡ್ಡದಾಗಿರುತ್ತವೆ ಮತ್ತು ೩೦-೫೦ ಮಿಮೀ (ಒಟ್ಟಾರೆ ಗಾತ್ರ ೨೦ ಸೆಂ.ಮೀ ವರೆಗೆ) ದೇಹದ ಗಾತ್ರವನ್ನು ಹೊಂದಿರುತ್ತದೆ. ಗಂಡು ೫-೬ ಮಿಮೀ ವರೆಗೆ ಬೆಳೆಯುತ್ತದೆ. ಇತ್ತೀಚೆಗೆ ಪತ್ತೆಯಾದ ನೆಫಿಲಾ ಕೊಮಾಸಿಯ ಹೊರತಾಗಿ ಇದು ಗೋಳ-ನೇಯ್ಗೆ ಮಾಡುವ ಜೇಡಗಳಲ್ಲಿ ಎರಡನೆಯದು. ಹೆಣ್ಣು ಜೇಡಗಳ ಮೊದಲ, ಎರಡನೆಯ ಮತ್ತು ನಾಲ್ಕನೇ ಜೋಡಿ ಕಾಲುಗಳು ದಟ್ಟವಾದ ಕೂದಲುಳ್ಳ ಕುಂಚಗಳನ್ನು ಹೊಂದಿರುತ್ತವೆ, ಆದರೆ ಜೇಡವು ಬೆಳೆದಂತೆ ಈ ಕುಂಚಗಳು ಕಣ್ಮರೆಯಾಗುತ್ತವೆ.

ಎನ್. ಪಿಲಿಪ್ಸ್‌ಗಳ ಬಲೆಗಳು ಜಾಲರಿಯೊಂದಿಗೆ ಲಂಬವಾಗಿರುತ್ತದೆ. ಅವು ತಮ್ಮ ಮೊಟ್ಟೆಯ ಚೀಲಗಳನ್ನು ಬಲೆಯಲ್ಲಿ ನೇತುಹಾಕುವ ಬದಲು, ಒಂದು ಗುಂಡಿ ಅಗೆದು ನಂತರ ಸಸ್ಯದ ಅವಶೇಷಗಳು ಅಥವಾ ಮಣ್ಣಿನಿಂದ ಮುಚ್ಚುತ್ತವೆ.

ಉಪಜಾತಿಗಳು

[ಬದಲಾಯಿಸಿ]
  • ಎನ್.ಪಿ. ಆನುಲಿಪೆಸ್ ಥೋರೆಲ್, ೧೮೮೧ - (ಇಂಡೋನೇಷ್ಯಾ)
  • ಎನ್.ಪಿ. ಫ್ಲೋವರ್ನಾಟಾ ಮೆರಿಯನ್, ೧೯೧೧ - (ಸುಲವೆಸಿ)
  • ಎನ್.ಪಿ. ಹ್ಯಾಸೆಲ್ಟಿ (ಡೋಲೆಸ್ಚಾಲ್, ೧೮೫೯) – (ಜಾವಾ)
  • ಎನ್.ಪಿ. ಜಲೋರೆನ್ಸಿಸ್ (ಸೈಮನ್, ೧೯೦೧) – (ಭಾರತ, ಶ್ರೀಲಂಕಾ)
  • ಎನ್.ಪಿ. ಲಾಟರ್‌ಬಾಚಿ (ಡಾಲ್, ೧೯೧೨) - (ನ್ಯೂ ಗಿನಿಯಾ)
  • ಎನ್.ಪಿ. ಮಲಗಾಸ್ಸಾ (ಸ್ಟ್ರಾಂಡ್, ೧೯೦೭) - (ಮಡಗಾಸ್ಕರ್)
  • ಎನ್.ಪಿ. ನೊವಾಗಿನಿ (ಸ್ಟ್ರಾಂಡ್, ೧೯೦೬) - (ನ್ಯೂ ಗಿನಿಯಾ)
  • ಎನ್.ಪಿ. ಪಿಸ್ಕಟೋರಮ್ ವಿಸ್, ೧೯೧೧ - (ಕ್ವೀನ್ಸ್ಲ್ಯಾಂಡ್)
  • ಎನ್.ಪಿ. ವಾಲ್ಕೆನೇರಿ (ಡೋಲೆಸ್ಚಾಲ್, ೧೮೫೭) - (ಜಾವಾ)

ವಿವರಣೆ

[ಬದಲಾಯಿಸಿ]

ಎನ್. ಪಿಲಿಪ್ಸ್ ಸ್ತ್ರೀ ದೈತ್ಯತ್ವ ಮತ್ತು ಪುರುಷ ಕುಬ್ಜತೆಯನ್ನು ಪ್ರದರ್ಶಿಸುತ್ತದೆ..[] ಎನ್. ಪಿಲಿಪ್‌ಗಳು ಗಂಡು ಮತ್ತು ಹೆಣ್ಣುಗಳ ನಡುವೆ ಹೆಚ್ಚಿನ ಗಾತ್ರದ ವ್ಯತ್ಯಾಸಗಳನ್ನು ಹೊಂದಿವೆ. ಹೆಣ್ಣು ಎನ್. ಪಿಲಿಪ್‌ಗಳು ಮೊಟ್ಟೆ ಉತ್ಪಾದನೆ ಮತ್ತು ಬಲೆ ನಿರ್ಮಾಣ ಸೇರಿದಂತೆ ತಮ್ಮ ಸಂತತಿಗೆ ದೊಡ್ಡ ಕೊಡುಗೆ ನೀಡುತ್ತವೆ.

ಹೆಣ್ಣು

[ಬದಲಾಯಿಸಿ]

ಹೆಣ್ಣು ಜೇಡಗಳು ಸಾಮಾನ್ಯವಾಗಿ ೩೦-೫೦ ಮಿಮೀ ದೇಹದ ಗಾತ್ರವನ್ನು ಹೊಂದಿರುತ್ತದೆ. ಸೆಫಲೋಥೊರಾಕ್ಸ್ ಎಂಬ ಜೇಡ ಸುಮಾರು ೧೫ ಮಿಮೀ ಉದ್ದ, ೧೦ ಮಿಮೀ ಅಗಲವಿದೆ.[] ಅದರ ಹೊಟ್ಟೆಯು ಸುಮಾರು ೩೦ ಮಿಮೀ ಉದ್ದ, ೧೫ ಮಿಮೀ ಅಗಲ, ಹಳದಿ ಪಟ್ಟೆಗಳೊಂದಿಗೆ ಹೆಚ್ಚಾಗಿ ಗಾಢ ಹಳದಿ-ಕಂದು ಬಣ್ಣವನ್ನು ಹೊಂದಿರುತ್ತದೆ. ಟೆರ್ಗಮ್ ಎಂಬ ಜೇಡ ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತದೆ, ದಟ್ಟವಾದ ಕೂದಲಿನಿಂದ ಮುಚ್ಚಲ್ಪಟ್ಟಿರುತ್ತದೆ. ಕಣ್ಣುಗಳ ಎರಡೂ ಸಾಲುಗಳು ಹಿಂಭಾಗದ ಕಡೆಗೆ ಉಬ್ಬಿರುತ್ತವೆ. ಪ್ಲಾಸ್ಟ್ರಾನ್ ಹೆಚ್ಚಾಗಿ ಕಪ್ಪು ಮತ್ತು ಕಂದು ಬಣ್ಣದ್ದಾಗಿದೆ.[] ಅದರ ಕಾಲುಗಳು ತುಂಬಾ ಉದ್ದವಾಗಿರುತ್ತವೆ ಮತ್ತು ಅವು ಕಪ್ಪು ಮತ್ತು ಹಳದಿ ಬಣ್ಣದಲ್ಲಿರುತ್ತವೆ. ಅದರ ಎಲ್ಲಾ ಕಾಲುಗಳಲ್ಲಿ ದಟ್ಟವಾದ ಕೂದಲುಗಳಿರುವುದಿಲ್ಲ.

ಗಂಡು ಜೇಡದ ದೇಹದ ಗಾತ್ರವು ಸಾಮಾನ್ಯವಾಗಿ ೫ ಮಿ.ಮೀ ನಿಂದ ೬.೫ ಮಿ.ಮೀ. ಇರುತ್ತದೆ. ಸೆಫಲೋಥೊರಾಕ್ಸ್ ಸುಮಾರು ೨.೫ ಮಿಮೀ ಉದ್ದ, ೨ ಮಿಮೀ ಅಗಲವಿದೆ. ಹೊಟ್ಟೆಯು ಸುಮಾರು ೪ ಮಿಮೀ ಉದ್ದ, ೧.೫ ಮಿಮೀ ಅಗಲವಿದೆ. ಮುಂಭಾಗದ ಕಣ್ಣುಗಳು ಹಿಂದಿನ ಕಣ್ಣುಗಳಿಗಿಂತ ದೊಡ್ಡದಾಗಿದೆ. ಗಂಡು ಜೇಡಕ್ಕೆ ತಿಳಿ ಕಂದು ಕಾಲುಗಳಿವೆ, ಕೆಲವು ಕೂದಲುಗಳಿವೆ. ಕ್ಯಾರಪೇಸ್ ಜೇಡ ಹಳದಿ ಬಣ್ಣದ್ದಾಗಿದ್ದು ಕೆಲವೇ ಕೂದಲುಗಳಿವೆ.

ಲೈಂಗಿಕ ದ್ವಿರೂಪತೆ

[ಬದಲಾಯಿಸಿ]
ಅನೇಕ ಗಂಡು ಜೇಡಗಳೊಂದಿಗೆ ಹೆಣ್ಣು ಜೇಡದ ಗಾತ್ರದ ಹೋಲಿಕೆ

ಎನ್. ಪಿಲಿಪ್ಸ್‌ನಲ್ಲಿ, ಹೆಣ್ಣು ಜೇಡಗಳು ತಮ್ಮ ಗಂಡಿಗಿಂತ ಹೆಚ್ಚು ದೊಡ್ಡದಾಗಿರುತ್ತವೆ ಮತ್ತು ಗಂಡು ಹೆಣ್ಣುಗಳಿಗಿಂತ ೪-೧೦ ಪಟ್ಟು ಚಿಕ್ಕದಾಗಿರಬಹುದು.[]

ನೆಫಿಲಾ ಪಿಲಿಪ್ಸ್‌ನಲ್ಲಿ ಹೆಣ್ಣು ಫಲವತ್ತತೆಯನ್ನು ಹೊಂದಿರುವುದರಿಂದ ಅದು ನಿರಂತರವಾಗಿ ಕರಗುತ್ತದೆ. ಹೆಚ್ಚಿನ ಜೇಡಗಳು ಕರಗುವ ಸಮಯದಲ್ಲಿ ತಮ್ಮ ಎಲ್ಲಾ ಎಕ್ಸೋಸ್ಕೆಲಿಟನ್ ಅನ್ನು ಚೆಲ್ಲುತ್ತವೆಯಾದರೂ, ನೆಫಿಲಾ ಪಿಲಿಪ್ಸ್ ಮೊಲ್ಟಿಂಗ್ ಸಮಯದಲ್ಲಿ ಜನನಾಂಗಗಳನ್ನು ಚೆಲ್ಲುವುದಿಲ್ಲ, ಆದ್ದರಿಂದ ಅವರು ವೀರ್ಯವನ್ನು ಸಂಗ್ರಹಿಸುವುದನ್ನು ಮುಂದುವರಿಸಬಹುದು. ಸಂಯೋಗದಲ್ಲಿನ ವೀರ್ಯಾಣುಗಳ ಸಂಖ್ಯೆಯು ಪ್ರಬುದ್ಧವಾದ ನಂತರದ ಕರಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ವೀರ್ಯಾಣುಗಳು ಕಡಿಮೆಯಿದ್ದರೆ ಹೆಣ್ಣುಗಳು ಪ್ರಬುದ್ಧತೆಯ ನಂತರದ ಮೊಲ್ಟಿಂಗ್ ಅನ್ನು ಪ್ರದರ್ಶಿಸುವ ಸಾಧ್ಯತೆಯಿದೆ. ಒಂದು ಗಂಡಿನೊಂದಿಗೆ ಸಂಯೋಗದ ನಂತರ, ಹೆಣ್ಣು ನೆಫಿಲಾ ಪಿಲಿಪ್ಸ್ ವೀರ್ಯಾಣುಗಳನ್ನು ಸಾಕಷ್ಟು ಮಟ್ಟದಲ್ಲಿ ಸಂಗ್ರಹಿಸುತ್ತದೆ.[] ಸಂತಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಹೆಣ್ಣುಗಳು ಲೈಂಗಿಕ ಪಕ್ವತೆಯ ನಂತರ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಸಂಖ್ಯೆಯ ಫಲವತ್ತಾದ ಮೊಟ್ಟೆಗಳನ್ನು ಹೊಂದುವವರೆಗೆ ಅವುಗಳ ದೇಹವು ಬೆಳವಣಿಗೆ ಹೊಂದುತ್ತವೆ.[][][] ಹೆಣ್ಣು ಜೇಡ ಕರಗುವ ಸಮಯದಲ್ಲೂ ಹೆಚ್ಚು ಗಂಡು ಜೇಡಗಳನ್ನು ಆಕರ್ಷಿಸಲು ರಾಸಾಯನಿಕ ಸಿಗ್ನಲಿಂಗ್ ಅನ್ನು ಬಳಸುತ್ತದೆ.[೧೦]

ಆವಾಸಸ್ಥಾನ

[ಬದಲಾಯಿಸಿ]

ಎನ್ಲಿ. ಫಿಲಿಪ್ಸ್ ನೇರವಾದ ಸೂರ್ಯನ ಬೆಳಕು ಇಲ್ಲದ ತೇವಾಂಶವುಳ್ಳ ಆವಾಸಸ್ಥಾನಗಳಿಗೆ ಆದ್ಯತೆ ನೀಡುತ್ತದೆ. ಇದನ್ನು ಜಪಾನ್, ಚೀನಾ, ವಿಯೆಟ್ನಾಂ, ಕಾಂಬೋಡಿಯಾ, ತೈವಾನ್, ಮಲೇಷ್ಯಾ, ಸಿಂಗಾಪುರ್, ಮ್ಯಾನ್ಮಾರ್, ಇಂಡೋನೇಷಿಯಾ, ಥೈಲ್ಯಾಂಡ್, ಲಾವೋಸ್, ಫಿಲಿಪೈನ್ಸ್, ಶ್ರೀಲಂಕಾ, ಭಾರತ, ನೇಪಾಳ, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಾಣಬಹುದು. ಆಸ್ಟ್ರೇಲಿಯಾದಲ್ಲಿ, ಹೆಚ್ಚಿನ ಎನ್. ಫಿಲಿಪ್‌ಗಳು ಉತ್ತರ ಮತ್ತು ಪೂರ್ವ ಆಸ್ಟ್ರೇಲಿಯಾದಲ್ಲಿನ ಮಳೆಕಾಡು ಆವಾಸಸ್ಥಾನಗಳಲ್ಲಿ ಕಂಡುಬರುತ್ತವೆ, ಅಲ್ಲಿ ಹವಾಮಾನವು ಆರ್ದ್ರವಾಗಿರುತ್ತದೆ ಮತ್ತು ಸಸ್ಯವರ್ಗವು ನೇರ ಸೂರ್ಯನ ಬೆಳಕಿನ ವಿರುದ್ಧ ನೆರಳು ನೀಡುತ್ತದೆ. ಸಾಮಾನ್ಯವಾಗಿ, ಎನ್. ಫಿಲಿಪ್‌ಗಳನ್ನು ಕರಾವಳಿ ರೇಖೆಗಳ ಉದ್ದಕ್ಕೂ ಹರಡಿವೆ. ಅಲ್ಲಿ ಮಳೆಯು ಸಾಕಷ್ಟು ಇರುತ್ತದೆ. ಎನ್. ಪಿಲಿಪ್ಸ್ ಕರಾವಳಿಯಿಂದ ನೂರು ಮೈಲುಗಳಷ್ಟು ದೂರದಲ್ಲಿರುವ ಒಣ ಸ್ಕ್ಲೆರೋಫಿಲ್ ಮತ್ತು ಕಡಿಮೆ ಪೊದೆಸಸ್ಯಗಳಿರುವಲ್ಲಿ ಕಂಡುಬರುತ್ತದೆ ಎಂದು ವರದಿಗಳು ತೋರಿಸುತ್ತವೆ. ಎನ್. ಫಿಲಿಪ್‌ಗಳು ಸಮಶೀತೋಷ್ಣ ಕರಾವಳಿ, ಮೆಡಿಟರೇನಿಯನ್, ಉಪೋಷ್ಣವಲಯದ ಮತ್ತು ಉಷ್ಣವಲಯದ ಸವನ್ನಾ ಹವಾಮಾನಗಳನ್ನು ಒಳಗೊಂಡಂತೆ ಅನೇಕ ಹವಾಮಾನ ಪ್ರಕಾರಗಳಲ್ಲಿ ಬದುಕಬಲ್ಲವು.

ಅವು ನೀರಿನ ಬಳಿ ಇರುವ ಪೊದೆಗಳು ಮತ್ತು ಮರಗಳಲ್ಲಿ, ಕಟ್ಟಡಗಳಂತಹ ರಚನೆಗಳಲ್ಲಿ ಬಲೆಯನ್ನು ನಿರ್ಮಿಸುತ್ತವೆ. ಸೂರ್ಯನ ಶಾಖವನ್ನು ಕಡಿಮೆ ಮಾಡಲು, ಇತರ ಜೇಡಗಳಂತೆ, ನೆಫಿಲಾ ಎಸ್‌ಪಿಪಿ. ಥರ್ಮೋರ್ಗ್ಯುಲೇಟರಿ ಸ್ವಭಾವವನ್ನು ಹೊಂದಿದೆ. ತಾಪಮಾನವು ೩೨ °ಸಿ ತಲುಪಿದಾಗ, ನೆಫಿಲಾ ಎಸ್ಪಿಪಿ ಅದರ ದೇಹ ಮತ್ತು ಒಳಬರುವ ಸೂರ್ಯನ ಬೆಳಕಿನ ನಡುವಿನ ಕೋನವನ್ನು ಸರಿಹೊಂದಿಸುತ್ತದೆ ಮತ್ತು ಅದರ ಹೊಟ್ಟೆಯನ್ನು ಸೂರ್ಯನ ಕಡೆಗೆ ತಿರುಗಿಸುತ್ತದೆ ಆದರೆ ಸೆಫಲೋಥೊರಾಕ್ಸ್ ಅನ್ನು ಬಲೆಗೆ ಸಮಾನಾಂತರವಾಗಿ ಇರಿಸುತ್ತದೆ ಎಂದು ಪ್ರಯೋಗಗಳು ತೋರಿಸುತ್ತವೆ. ತಾಪಮಾನವು ಮತ್ತಷ್ಟು ಏರಿದಾಗ, ಅದು ಸೂರ್ಯನ ಬೆಳಕಿನ ದಿಕ್ಕಿನಲ್ಲಿ ಪೂರ್ಣ ದೇಹವನ್ನು ಜೋಡಿಸಿ ಸೂರ್ಯನಿಂದ ಶಾಖವನ್ನು ಪಡೆಯುವ ಪ್ರದೇಶವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ೪೦ °ಸಿ ಗಿಂತ ಹೆಚ್ಚಿನ ತಾಪಮಾನದಲ್ಲಿ, ನೆಫಿಲಾ ಎಸ್‌ಪಿಪಿ. ಬಲೆಯನ್ನು ತ್ಯಜಿಸುತ್ತದೆ. ವಯಸ್ಕ ಹೆಣ್ಣುಗಳು ನಾಲ್ಕು ಋತುಗಳಲ್ಲಿ ಸಕ್ರಿಯವಾಗಿರುತ್ತವೆ ಮತ್ತು ನಿರಂತರವಾಗಿ ಮೊಟ್ಟೆಗಳನ್ನು ಇಡುತ್ತವೆ. ವಯಸ್ಕ ಗಂಡು, ಹೆಣ್ಣಿಗಿಂತ ಹೆಚ್ಚು ಕಾಲ ಬದುಕುತ್ತದೆ.

ಆಹಾರ ಪದ್ಧತಿ

[ಬದಲಾಯಿಸಿ]

ನೆಫಿಲಾ ಎಸ್‌ಪಿಪಿ ಕೆಲವೇ ಜಾತಿಯ ಕೀಟಗಳನ್ನು ಮಾತ್ರ ಬೇಟೆಯಾಡುತ್ತವೆ. ನೆಫಿಲಾ ಎಸ್ಪಿಪಿ ತಮ್ಮ ಬಲೆಗಳಲ್ಲಿ ಕೆಲವು ಕೀಟಗಳಿಗೆ ಅವಕಾಶ ಕೊಡುವುದಿಲ್ಲ. ಅವೆಂದರೆ ವೆಸ್ಪಿಡ್ ಕಣಜಗಳು, ಅಲೇಟ್ ಇರುವೆಗಳು ಮತ್ತು ಅಸಹ್ಯಕರ ಸಂಯುಕ್ತಗಳನ್ನು ಸ್ರವಿಸುವ ಇತರ ಕೀಟಗಳು. ನೆಫಿಲಾದ ದೇಹದ ಗಾತ್ರದ ದೊಡ್ಡದಾಗಿರುವ ಕಾರಣ, ಇದು ವಿಶಾಲ ಗಾತ್ರದ ಕೀಟಗಳನ್ನು ಬೇಟೆಯಾಡಬಹುದು. ಅವು ತಮಗಿಂತ ೨ ಮಿಮೀ ದೊಡ್ಡದಿರುವ ಕೀಟಗಳನ್ನು ಬೇಟೆಯಾಡಬಹುದು.[೧೧] ಅವು ವಿಭಿನ್ನ ಗಾತ್ರದ ಬೇಟೆಗೆ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಳ್ಳುತ್ತವೆ. ಸಣ್ಣ ಬೇಟೆಯಾಗಿದ್ದಲ್ಲಿ ನೇರವಾಗಿ ಹಿಡಿಯುತ್ತವೆ ಮತ್ತು ಬಲೆಯಿಂದ ತೆಗೆದು ಹಾಕುತ್ತವೆ. ದೊಡ್ಡವುಗಳಿಗೆ, ಅವು ತಮ್ಮ ವಿಷವನ್ನು ಚುಚ್ಚುತ್ತವೆ ಮತ್ತು ಅದು ಮರಣ ಹೊಂದುವವರೆಗೆ ಕಾಯುತ್ತವೆ. ನೆಫಿಲಾ ಎಸ್‌ಪಿಪಿಗಳು ತಮ್ಮ ಸ್ಪೈಡರ್ಲಿಂಗ್‌ ಹಂತದಿಂದ ಪ್ರೌಢಾವಸ್ಥೆಗೆ ತಲುಪುವವರೆಗೆ ಪರಭಕ್ಷಣೆ ಮಾಡುವುದರಲ್ಲಿ ವಿವಿಧ ಬದಲಾವಣೆಗಳನ್ನು ಹೊಂದಿರುತ್ತವೆ. ಸ್ಪೈಡರ್ಲಿಂಗ್ ಹಂತದಲ್ಲಿ, ಅವು ತಮ್ಮ ಬಲೆಯಲ್ಲಿ ಸಾಮೂಹಿಕವಾಗಿ ಆಹಾರ ಪೂರೈಕೆ ಮಾಡುತ್ತವೆ. ಪ್ರೌಢಾವಸ್ಥೆಯನ್ನು ತಲುಪಿದ ನಂತರ, ಅವು ತಮ್ಮದೇ ಆದ ಬಲೆಗಳನ್ನು ನಿರ್ಮಿಸಿಕೊಳ್ಳುತ್ತವೆ. ನೆಫಿಲಾ ಎಸ್ಪಿಪಿಗಳು ಆಹಾರದ ಕೊರತೆಯ ಅವಧಿಯನ್ನು ನಿಭಾಯಿಸಲು ಮೊದಲು ಸಂಗ್ರಹವಾದ ಆಹಾರವನ್ನು ಶೇಖರಿಸಿಡುತ್ತವೆ. ಅವು ತಾವು ಮಾಡಿದ ಹೆಚ್ಚುವರಿ ಬೇಟೆಯನ್ನು ರೇಷ್ಮೆಯಲ್ಲಿ ಸುತ್ತಿ ಅವುಗಳನ್ನು ತಮ್ಮ ಬಲೆಯಲ್ಲಿ ಒಂದು ಗೂಡು ನಿರ್ಮಿಸಿ ಸಂಗ್ರಹಿಸುತ್ತವೆ. ರೇಷ್ಮೆ ಹೊದಿಕೆಯು ನೀರು ಆವಿಯಾಗುವುದನ್ನು ತಪ್ಪಿಸಿ ನೀರಿನ ಕೊರತೆಯನ್ನು ನೀಗಿಸುತ್ತದೆ. ಆಹಾರ ಸಂಗ್ರಹದಿಂದಾಗಿ ಹೆಚ್ಚಿನ ಬೇಟೆ ಸಿಗದ ಅವಧಿಯಲ್ಲಿ ಜೇಡಗಳ ತೂಕ ನಷ್ಟವಾಗುವುದಿಲ್ಲ.

ಜಾಲದ ರಚನೆ

[ಬದಲಾಯಿಸಿ]

ಜಾಲಗಳ ಪ್ರಕಾರ

[ಬದಲಾಯಿಸಿ]

ಸಾಮಾನ್ಯವಾಗಿ, ನೆಫಿಲಾ ಎಸ್‌ಪಿಪಿಯ ಜಾಲಗಳು ಸಮ್ಮಿತೀಯವಾಗಿರುವುದಿಲ್ಲ. ಅವುಗಳ ರೇಷ್ಮೆ ಹಳದಿಯಾಗಿ ಕಾಣುತ್ತದೆ, ಆದ್ದರಿಂದ ಇದನ್ನು ಗೋಲ್ಡನ್ ಆರ್ಬ್-ನೇವರ್ಸ್ ಎಂದು ಕರೆಯಲಾಗುತ್ತದೆ.[೧೨] ವಯಸ್ಕ ನೆಫಿಲಾ ಎಸ್‌ಪಿಪಿಗಳ ಜಾಲಗಳು ಸಾಮಾನ್ಯವಾಗಿ ೦.೫–೧.೦ ಮೀ ವ್ಯಾಸವನ್ನು ಹೊಂದಿರುತ್ತವೆ. ಹೆಣ್ಣು ಜೇಡಗಳು ಒಟ್ಟಾಗಿ ಜಾಲ ಮಾಡಿದಲ್ಲಿ, ಆ ಜಾಲಗಳು ಇನ್ನೂ ದೊಡ್ಡದಾಗಿರಬಹುದು. ಜಾಲದ ಕೇಂದ್ರವು ಸಾಮಾನ್ಯವಾಗಿ ಮೇಲ್ಭಾಗದಲ್ಲಿರುತ್ತದೆ. ಬೇಟೆಗಳು ಹೆಚ್ಚಾಗಿ ಜಾಲದ ಕೆಳಭಾಗದಲ್ಲಿ ಸಿಕ್ಕಿಬೀಳುತ್ತವೆ.

ನಿರ್ಮಾಣ

[ಬದಲಾಯಿಸಿ]

ಎನ್. ಪಿಲಿಪ್ಸ್ ನಿರ್ಮಿಸುವ ಬಲೆಯ ಕೇಂದ್ರದಲ್ಲಿ ಚಲಿಸುವ ಕೀಟಗಳ ಚಲನ ಶಕ್ತಿಯನ್ನು ಹೀರಿಕೊಳ್ಳಲು ಸ್ಥಿತಿಸ್ಥಾಪಕ ರೇಷ್ಮೆ ಇರುತ್ತದೆ. ಸ್ಥಿತಿಸ್ಥಾಪಕ ಭಾಗವು, ಬಲೆಯು ಕೆಲವು ಗಟ್ಟಿಯಾದ ರಚನೆಗಳು, ಮರಗಳು ಅಥವಾ ಇತರ ಕಟ್ಟಡಗಳಲ್ಲಿ ಬೀಳದೆ ನಿಲ್ಲುವಂತೆ ಮಾಡುತ್ತವೆ.[೧೩] ಎನ್. ಪಿಲಿಪ್‌ಗಳು ವಿಭಿನ್ನ ಆಹಾರ ಮತ್ತು ಪರಿಸರ ಬದಲಾವಣೆಗಳಿಗೆ ಸರಿಯಾಗಿ ತಮ್ಮ ರೇಷ್ಮೆಯ ಸಂಯೋಜನೆಯನ್ನು ಸರಿಹೊಂದಿಸಬಹುದು ವರದಿಯಾಗಿದೆ. ಒಂದು ಅಧ್ಯಯನವು ರೇಷ್ಮೆ ನಿರ್ಮಾಣ ಮತ್ತು ಬೇಟೆಯ ವಿಧಗಳ ನಡುವಿನ ಸಂಬಂಧವನ್ನು ತನಿಖೆ ಮಾಡಿದೆ. ಎನ್. ಪಿಲಿಪ್‌ಗಳಿಗೆ ನೊಣಗಳು, ಸಣ್ಣ ಮತ್ತು ಹಾರುವ ಬೇಟೆಯನ್ನು ನೀಡಿದಾಗ, ರೇಷ್ಮೆ ಹೆಚ್ಚು ಸ್ಥಿತಿಸ್ಥಾಪಕವಾಗುತ್ತದೆ ಮತ್ತು ಜಾಲರಿಯ ಗಾತ್ರವು ಚಿಕ್ಕದಾಗುತ್ತದೆ. ಎನ್. ಪಿಲಿಪ್‌ಗಳಿಗೆ ದೊಡ್ಡ ಗಾತ್ರದ ಮತ್ತು ಶಕ್ತಿಯುತ ಬೇಟೆಯನ್ನು ತಿನ್ನಿಸಿದಾಗ, ರೇಷ್ಮೆ ಗಟ್ಟಿಯಾಗುತ್ತದೆ.[೧೪] ಇದಲ್ಲದೆ, ಎನ್. ಪಿಲಿಪ್‌ಗಳು ತಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ರೇಷ್ಮೆಯಲ್ಲಿರುವ ಅಮೈನೋ ಆಮ್ಲ ಸಂಯೋಜನೆಯನ್ನು ಬದಲಾಯಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ರೇಷ್ಮೆ ಅತ್ಯುತ್ತಮ ಯಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ, ಹೆಚ್ಚಿನ ಮಾನವ ನಿರ್ಮಿತ ವಸ್ತುಗಳಿಗಿಂತ ಹೆಚ್ಚು ದೃಢವಾಗಿದೆ, ಆದ್ದರಿಂದ ನೆಫಿಲಾ ಎಸ್‌ಪಿಪಿಯ ರೇಷ್ಮೆ ವಸ್ತು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಪ್ರಯೋಗಾಲಯದಲ್ಲಿ ರೇಷ್ಮೆಗಳನ್ನು ಕೃತಕವಾಗಿ ತಯಾರಿಸಲು ಹೋದರೆ, ಅವುಗಳು ಸಾಮಾನ್ಯವಾಗಿ ಕೆಳಮಟ್ಟದ ಗುಣಮಟ್ಟವನ್ನು ಹೊಂದಿರುತ್ತವೆ.

ಹಾನಿಗೊಳಗಾದ ಜಾಲಗಳ ದುರಸ್ತಿ

[ಬದಲಾಯಿಸಿ]

ಎನ್.ಪಿಲಿಪ್‌ಗಳ ಜಾಲಗಳು, ಇತರ ಜೇಡಗಳ ಜಾಲಗಳಂತೆ, ಪಕ್ಷಿಗಳು ಮತ್ತು ಸಣ್ಣ ಸಸ್ತನಿಗಳಿಂದ ಸಂಭಾವ್ಯ ಹಾನಿಗೆ ಒಳಪಟ್ಟಿರುತ್ತದೆ. ಅವು ತಮ್ಮ ಜಾಲಗಳು ಭಾಗಶಃ ಹಾನಿಗೊಳಗಾದಾಗ, ಅದನ್ನು ಸರಿಪಡಿಸಲು ೧೦-೬೦ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಪೂರ್ತಿ ಹಾನಿಯಾಗಿದ್ದರೆ , ಜೇಡವು ಆ ಬಲೆಯನ್ನು ತಿನ್ನುತ್ತದೆ ಮತ್ತು ಹತ್ತಿರದ ಸ್ಥಳದಲ್ಲಿ ಇನ್ನೊಂದು ಹೊಸ ಬಲೆಯನ್ನು ನಿರ್ಮಿಸುತ್ತದೆ.

ಸಂಗಾತಿಗಾಗಿ ಹುಡುಕಾಟ

[ಬದಲಾಯಿಸಿ]

ಪ್ರೌಢಾವಸ್ಥೆಯನ್ನು ತಲುಪಿದ ನಂತರ, ಗಂಡು ಜೇಡಗಳು ತಮ್ಮ ಜಾಲಗಳನ್ನು ಬಿಟ್ಟು ಹೆಣ್ಣು ಜೇಡಗಳ ಹುಡುಕಾಟವನ್ನು ಪ್ರಾರಂಭಿಸುತ್ತವೆ. ಅವು ಸರಿಯಾದ ರಾಸಾಯನಿಕ ಸಂಯೋಜನೆಗಳಿರುವ ಜಾಲವನ್ನು ಹುಡುಕುತ್ತವೆ.[೧೫] ಎನ್. ಫಿಲಿಪ್ಸ್‌ಗಳು ಸಂಯೋಗ ಮಾಡಲು ಯಾವುದೇ ವಾಯುಗಾಮಿ ಫೆರೋಮೋನ್ ಆಧಾರಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ವರದಿಯಾಗಿದೆ.

ಸಂಯೋಗದ ಪರಸ್ಪರ ಕ್ರಿಯೆಗಳು

[ಬದಲಾಯಿಸಿ]

ಗಂಡು ಮತ್ತು ಹೆಣ್ಣು ಜೇಡದ ನಡುವಿನ ಲೈಂಗಿಕ ಆಕರ್ಷಣೆಗಳು ಆಗಾಗ್ಗೆ ಸಂಭವಿಸುತ್ತವೆ. ಗಂಡು ಮತ್ತು ಹೆಣ್ಣು ವಿಭಿನ್ನ ಸಂತಾನೋತ್ಪತ್ತಿ ಪ್ರಕ್ರಿಯೆಗಳನ್ನು ಹೊಂದಿರುತ್ತವೆ. ಗಂಡು ಜೇಡಗಳ ಗುರಿ ಸಾಧ್ಯವಾದಷ್ಟು ಹೆಚ್ಚಿನ ಹೆಣ್ಣು ಜೇಡಗಳನ್ನು ಫಲವತ್ತಾಗಿಸುವುದು. ಮತ್ತೊಂದೆಡೆ, ಹೆಣ್ಣು ಜೇಡಗಳು ಪದೇ ಪದೇ ಸಂಯೋಗ ಮಾಡಲು ಹಿಂಜರಿಯುತ್ತವೆ ಮತ್ತು ಉತ್ತಮ ಜೀನ್‌ಗಳನ್ನು ಹೊಂದಿರುವ ಗಂಡು ಜೇಡಗಳನ್ನು ಮಾತ್ರ ಆಯ್ಕೆಮಾಡುತ್ತವೆ. ಹೆಣ್ಣು ಜೇಡಗಳು ಆಕ್ರಮಣಶೀಲತೆಯನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸಬಹುದು: ಜಾಲವನ್ನು ಅಲ್ಲಾಡಿಸಿ ಗಂಡು ಸಮೀಪಿಸುವಾಗ ಅದನ್ನು ಬೆನ್ನಟ್ಟಬಹುದು, ಗಂಡು ಹೆಣ್ಣು ಜೇಡದ ಕಾಲಿನ ಸಂಪರ್ಕವನ್ನು ಮಾಡಿದಾಗ ಅದನ್ನು ಒದೆಯಬಹುದು, ಗಂಡು ಹೆಣ್ಣು ಜೇಡದ ಹಿಂಭಾಗವನ್ನು ಏರಿದಾಗ ದೇಹವನ್ನು ಹಿಂಸಾತ್ಮಕವಾಗಿ ಅಲ್ಲಾಡಿಸಿ ಗಂಡನ್ನು ಒದೆಯುವ ಮೂಲಕ ಥಟ್ಟನೆ ಸಂಯೋಗಕ್ಕೆ ಅಡ್ಡಿಪಡಿಸುವುದು. ಇತರ ಪ್ರಬೇಧಗಳಿಗೆ ಹೋಲಿಸಿದರೆ, ಎನ್. ಪಿಲಿಪ್ಸ್‌ಗಳು ಸಂಯೋಗ ಮಾಡುವಾಗ ಕಡಿಮೆ ಆಕ್ರಮಣಕಾರಿ ವ್ಯಕ್ತಿತ್ವವನ್ನು ಪ್ರಕಟಿಸುತ್ತವೆ ಮತ್ತು ಲೈಂಗಿಕ ಭಕ್ಷಕತೆಯು ಅವುಗಳಲ್ಲಿ ಬಹಳ ಅಪರೂಪವಾಗಿದೆ. ಗಂಡು ಹೆಣ್ಣುಗಳ ಪ್ರತಿರೋಧ ಮತ್ತು ನರಭಕ್ಷಕತೆಯನ್ನು ತಪ್ಪಿಸಲು ಸಂಗಾತಿಯನ್ನು ಬಂಧಿಸುವ ಕಾರ್ಯವಿಧಾನವನ್ನು ಅವು ತಿಳಿದುಕೊಂಡಿವೆ. ಸ್ಪರ್ಶ ಮತ್ತು ರಾಸಾಯನಿಕ ಗ್ರಾಹಕಗಳನ್ನು ಶಾಂತಗೊಳಿಸಲು ಗಂಡು ಲೈಂಗಿಕ ಹಾರ್ಮೋನುಗಳೊಂದಿಗೆ ನೆನೆಸಿದ ರೇಷ್ಮೆಯನ್ನು ಹೆಣ್ಣಿನ ದೇಹದ ಮೇಲೆ ಇಡಬಹುದು. ಈ ರೀತಿಯಾಗಿ ಗಂಡು, ಹೆಣ್ಣುಗಳನ್ನು ಫಲವತ್ತಾಗಿಸುವುದನ್ನು ಹೆಚ್ಚಿಸಬಹುದು.

ಪರಭಕ್ಷಕಗಳು

[ಬದಲಾಯಿಸಿ]

ಎನ್. ಪಿಲಿಪ್ಸ್‌ನ ಶತ್ರುಗಳನ್ನು ತನಿಖೆ ಮಾಡಲು ಕೆಲವು ಅಧ್ಯಯನಗಳನ್ನು ನಡೆಸಲಾಗಿದೆ. ಸಾಮಾನ್ಯವಾಗಿ ಎನ್. ಪಿಲಿಪ್ಸ್‌ನ ಪ್ರಾಥಮಿಕ ಶತ್ರು ಪಕ್ಷಿಗಳು. ಏಕೆಂದರೆ ಪಕ್ಷಿಗಳು ಜೇಡಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳದೆಯೇ ಬಲೆಯನ್ನು ಕೆಡವುತ್ತವೆ. ಹೈಮೆನೋಪ್ಟೆರಾದಂತಹ ಪರಾವಲಂಬಿಗಳಿಂದ ಎನ್. ಪಿಲಿಪ್ಸ್‌ಗಳು ದಾಳಿಗೊಳಗಾಗಿ ಸಾಯುತ್ತವೆ ಎಂದೂ ಅಲ್ಲಲ್ಲಿ ವರದಿಯಾಗಿದೆ. ಪಕ್ಷಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಹೆಣ್ಣು ನೆಫಿಲಾ ಸಾಮಾನ್ಯವಾಗಿ ಇತರ ಹೆಣ್ಣುಗಳೊಂದಿಗೆ ಸೇರಿ ಗೋಳಾಕಾರದ ಬಲೆಯ ವ್ಯವಸ್ಥೆಯನ್ನು ನಿರ್ಮಿಸುತ್ತದೆ, ಇದು ಅವುಗಳನ್ನು ಪಕ್ಷಿಗಳಿಂದ ರಕ್ಷಿಸುತ್ತದೆ.

ಮನುಷ್ಯರಿಗೆ ಕಚ್ಚುವಿಕೆ

[ಬದಲಾಯಿಸಿ]

ಎನ್. ಪಿಲಿಪ್ಸ್ ಮನುಷ್ಯರಿಗೆ ಕಚ್ಚುವುದು ವಿರಳವಾಗಿ ವರದಿಯಾಗಿದೆ. ಇದರ ಕಚ್ಚುವಿಕೆಯು ಇತರ ಗೋಳ-ನೇಯ್ಗೆ ಜೇಡಗಳಂತೆಯೇ ಇರುತ್ತದೆ, ಇದು ಸ್ನಾಯು ನೋವು, ಬಿಗಿತದ ಭಾವನೆ ಮತ್ತು ಪ್ರತಿವರ್ತನದ ಉತ್ಪ್ರೇಕ್ಷೆ ಸೇರಿದಂತೆ ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ವರದಿಯಾಗಿದೆ.[೧೬] ಕ್ಯಾಲ್ಸಿಯಂ ಗ್ಲುಕೋನೇಟ್‌ನ ಚಿಕಿತ್ಸೆಯು ತೀವ್ರವಾದ ನೋವನ್ನು ನಿವಾರಿಸುತ್ತದೆ. ಆಂಟಿಸೆರಮ್ ಚಿಕಿತ್ಸೆಯು ಕಚ್ಚಿಸಿಕೊಂಡವರು ಬೇಗ ಚೇತರಿಕೆಗೊಳ್ಳುವಂತೆ ಮಾಡುತ್ತದೆ.

ಹರಡುವಿಕೆ

[ಬದಲಾಯಿಸಿ]

ಜೇಡಗಳಲ್ಲಿ ಹರಡುವಿಕೆಯು ಸಾಮಾನ್ಯ ನಡವಳಿಕೆಯಾಗಿದೆ. ಜನನದ ನಂತರ ಜೇಡರ ಮರಿಗಳು ಗಾಳಿಯ ಮೂಲಕ ದೊಡ್ಡ ಪ್ರದೇಶಗಳಿಗೆ ಹರಡಿಕೊಳ್ಳುತ್ತವೆ.[೧೭] ಇದರಿಂದ ಒಂದೇ ಬಲೆಯಲ್ಲಿ ಎಲ್ಲಾ ಜೇಡಗಳಿರುವುದರಿಂದ ಆಗುವ ಸಂಪನ್ಮೂಲಗಳ ಕೊರತೆಯನ್ನು ತಪ್ಪಿಸಬಹುದು. ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಯು ಗಾಳಿಯ ವೇಗವು ೩.೧೭ ಮೀ/ಸೆ ಮಿತಿಯನ್ನು ತಲುಪಿದಾಗ ಎನ್. ಪಿಲಿಪ್ಸ್ ಹರಡುವಿಕೆಯ ನಡವಳಿಕೆಯನ್ನು ಪ್ರದರ್ಶಿಸುತ್ತದೆ ಎಂದು ಕಂಡುಹಿಡಿದಿದೆ. ಆದಾಗ್ಯೂ, ಕಾಡು ಆವಾಸಸ್ಥಾನಗಳಲ್ಲಿ ಗಾಳಿಯ ಕೋನಗಳು, ಆರ್ದ್ರತೆ, ತಾಪಮಾನ ಮತ್ತು ಒತ್ತಡದಂತಹ ಅನೇಕ ಪ್ರಭಾವಗಳಿಗೆ ಒಳಗಾಗಿ ಹರಡುವಿಕೆ ನಡೆಯುತ್ತದೆ.

ಮಾನವ ಬಳಕೆ

[ಬದಲಾಯಿಸಿ]

ವಿಯೆಟ್ನಾಮ್‌ನ ಬಿನ್ ತುಆನ್ (Bình Thuận) ಪ್ರಾಂತ್ಯದ ರಾಗ್ಲೈ ಜನರು ಎನ್. ಪಿಲಿಪ್‌ಗಳನ್ನು ಹುರಿದ ನಂತರ ಸೇವಿಸುತ್ತಾರೆ ಮತ್ತು ಅವುಗಳನ್ನು ಆರೋಗ್ಯಕರ ಆಹಾರದ ಮೂಲವೆಂದು ಪರಿಗಣಿಸುತ್ತಾರೆ.[೧೮]

ವಿಭಿನ್ನ ವೀಕ್ಷಣೆಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Nephila pilipes, Arachne.org.au
  2. Kuntner, Matjaž; Zhang, Shichang; Gregorič, Matjaž; Li, Daiqin (November 2012). "Nephila female gigantism attained through post-maturity molting". Journal of Arachnology. 40 (3): 345–347. doi:10.1636/b12-03.1. ISSN 0161-8202. S2CID 30430184.
  3. Tso, I-M. (2004-07-01). "Colourful orb-weaving spiders, Nephila pilipes, through a bee's eyes". Journal of Experimental Biology. 207 (15): 2631–2637. doi:10.1242/jeb.01068. ISSN 0022-0949. PMID 15201295.
  4. Kuntner, Matjaž; Zhang, Shichang; Gregorič, Matjaž; Li, Daiqin (2012). "Nephila Female Gigantism Attained through Post-maturity Molting". Journal of Arachnology. 40 (3): 345–347. doi:10.1636/b12-03.1. S2CID 30430184.
  5. Harvey, Mark S.; Austin, Andrew D.; Adams, Mark (2007). "The systematics and biology of the spider genus Nephila (Araneae : Nephilidae) in the Australasian region" (PDF). Invertebrate Systematics. 21 (5): 407–451. doi:10.1071/IS05016.
  6. Tso, I-Min; Shu-Ya, Chiang; Blackledge, Todd (2007). "Does The Giant Wood Spider Nephila pilipes Respond To Prey Variation By Altering Web Or Silk Properties?". Ethology. 113 (4): 324–333. doi:10.1111/j.1439-0310.2007.01318.x.
  7. Legrand, Rebecca S.; Morse, Douglass H. (2000). "Factors driving extreme sexual size dimorphism of a sit-and-wait predator under low density". Biological Journal of the Linnean Society. 71 (4): 643–664. doi:10.1006/bijl.2000.0466.
  8. Coddington, Jonathan A.; Hormiga, Gustavo; Scharff, Nikolaj (1997). "Giant female or dwarf male spiders?". Nature. 385 (6618): 687–688. Bibcode:1997Natur.385..687C. doi:10.1038/385687a0. S2CID 4308746.
  9. Kuntner, Matjaž.; Kralj-Fišer, S.; Schneider, Jutta; Li, Daiqin (2009). "Mate Plugging Via Genital Mutilation In Nephilid Spiders: An Evolutionary Hypothesis". Journal of Zoology. 277 (4): 257–266. doi:10.1111/j.1469-7998.2008.00533.x.
  10. Kuntner, Matjaž; Coddington, Jonathan; Schneider, Jutta (2009). "Intersexual Arms Race? Genital Coevolution In Nephilid Spiders (Araneae, Nephilidae)". Evolution. 63 (6): 1451–1463. doi:10.1111/j.1558-5646.2009.00634.x. PMID 19492993. S2CID 6321371.
  11. Chiao, C.-C.; Wu, W.-Y.; Chen, S.-H.; Yang, E.-C. (2009-06-26). "Visualization of the spatial and spectral signals of orb-weaving spiders, Nephila pilipes, through the eyes of a honeybee". Journal of Experimental Biology. 212 (14): 2269–2278. doi:10.1242/jeb.030734. ISSN 0022-0949. PMID 19561217.
  12. Tso, I-Min; Chiang, Shu-Ya; Blackledge, Todd A. (2007-03-27). "Does the Giant Wood Spider Nephila pilipes Respond to Prey Variation by Altering Web or Silk Properties?". Ethology. 113 (4): 324–333. doi:10.1111/j.1439-0310.2007.01318.x. ISSN 0179-1613.
  13. Tso, I-M. (2005-03-15). "Giant wood spider Nephila pilipes alters silk protein in response to prey variation". Journal of Experimental Biology. 208 (6): 1053–1061. doi:10.1242/jeb.01437. ISSN 0022-0949. PMID 15767307.
  14. Wang, Zuyuan; Cang, Yu; Kremer, Friedrich; Thomas, Edwin L.; Fytas, George (2020-01-14). "Determination of the Complete Elasticity of Nephila pilipes Spider Silk". Biomacromolecules. 21 (3): 1179–1185. doi:10.1021/acs.biomac.9b01607. ISSN 1525-7797. PMC 7307882. PMID 31935074.
  15. Zhang, Shichang; Kuntner, Matjaž; Li, Daiqin (December 2011). "Mate binding: male adaptation to sexual conflict in the golden orb-web spider (Nephilidae: Nephila pilipes)". Animal Behaviour. 82 (6): 1299–1304. doi:10.1016/j.anbehav.2011.09.010. ISSN 0003-3472. S2CID 53161438.
  16. Wise, David H. (March 1981). "Inter-and intraspecific effects of density manipulations upon females of two orb-weaving spiders (araneae: araneidae)". Oecologia. 48 (2): 252–256. Bibcode:1981Oecol..48..252W. doi:10.1007/bf00347972. ISSN 0029-8549. PMID 28309808. S2CID 8580350.
  17. Lee, Vanessa M. J.; Kuntner, Matjaž; Li, Daiqin (2015-01-21). "Ballooning behavior in the golden orbweb spider Nephila pilipes (Araneae: Nephilidae)". Frontiers in Ecology and Evolution. 3. doi:10.3389/fevo.2015.00002. ISSN 2296-701X.
  18. VnExpress. "Giant wood spider, a specialty food in forests of south central Vietnam - VnExpress International".

ಬಾಹ್ಯ ಕೊಂಡಿ

[ಬದಲಾಯಿಸಿ]