ವಿಷಯಕ್ಕೆ ಹೋಗು

ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇದುವರೆಗೆ ದಾಖಲಾದ ಅತೀದೊಡ್ಡ ಅಂಟಾರ್ಕಟಿಕ್ ಓಝೋನ್ ರಂಧ್ರದ ಛಾಯೆ (ಸೆಪ್ಟೆಂಬರ್ 2006).

ಓಝೋನ್ ಸವಕಳಿ ಯು ಎರಡು ಪ್ರತ್ಯೇಕ ಆದರೆ ಪರಸ್ಪರ ಸಂಬಂಧವಿರುವ ಹೇಳಿಕೆಗಳನ್ನು ವಿವರಿಸುತ್ತದೆ: ಓಝೋನ್ ಈ ಪೃಥ್ವಿಯ ಸಂರಕ್ಷಣಾ ಕವಚ. ವಿಷಾದದ ಸಂಗತಿಯೆಂದ್ರೆ ಇದು ಸದ್ಯ ಮಾನವ ನಿರ್ಮಿತ ತಪ್ಪುಗಳಿಂದಾಗಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ವಾಯು ಮಾಲಿನ್ಯ ಮತ್ತು ಪರಿಸರ ನಾಶದಿಂದಾಗಿ ರಕ್ಷಣಾ ಕವಚ ಕಳೆಗುಂದುತ್ತಿದೆ. 1970 ರಿಂದ ಇದರ ಪ್ರಮಾಣ ದಶಕಕ್ಕೆ 4% ರಷ್ಟಾಗುತ್ತಿದೆ. ಭೂಮಿಯ ಧೃವ ಪ್ರದೇಶಗಳಲ್ಲಿ ವಸಂತ ಋತುವಿನಲ್ಲಿ ಸವಕಳಿ ಪ್ರಮಾಣ ಹೆಚ್ಚಾಗಿರುತ್ತದೆ. ಓಝೋನ್ ಮೂಲದ ಕೆಲವು ಅನಿಲಗಳು ಸಹಾ ಭೂಮಿಯಲ್ಲಿ ವಾಸಿಸುವವರನ್ನು ತೊಂದರೆಗೀಡು ಮಾಡುತ್ತಿವೆ, 1970ರ ಉತ್ತರಾರ್ಧದಿಂದ ಭೂಮಿವಾಯುಮಂಡಲದಲ್ಲಿನ ಸಂಪೂರ್ಣ ಓಝೋನ್‌ ಪದರದಲ್ಲಿ ಸುಮಾರು ಪ್ರತಿ ದಶಕಕ್ಕೆ 4% ನಷ್ಟು ಆಗುತ್ತಿರುವ ನಿಧಾನಗತಿಯ ಸವಕಳಿಯೂ ಅಪಾಯಕಾರಿ. ಎರಡನೆಯ ಹೇಳಿಕೆಯು ಸಾಮಾನ್ಯವಾಗಿ ಓಝೋನ್ ರಂಧ್ರ ದೊಡ್ಡದಾಗುವುದನ್ನು ವಿವರಿಸುತ್ತದೆ. ತೂತಾಗುವುದೆಂದರೆ ಅದರ ಸಾಮರ್ಥ್ಯ ಕುಂದಿದಂತೆಯೇ. ವಾಯುಮಂಡಲದ ಓಝೋನ್ ಸವಕಳಿ ಜೊತೆಗೆ, ವಾಯುಗೋಳ ಸಮೀಪ ಇರುವ ಓಝೋನ್‌ನ ಒಂದು ಪದರಿನ ಭಾಗದ ತೆಳುವಾಗುವಿಕೆಯೂ ಹೌದು. ಇದು ಧ್ರುವ ಭಾಗಕ್ಕೆ ಹತ್ತಿರದ ಪ್ರದೇಶಗಳಲ್ಲಿ ವಸಂತ ಋತುವಿನ ವೇಳೆ ಕಂಡುಬರುತ್ತದೆ.

ಧ್ರುವ ಪ್ರದೇಶದಲ್ಲಿ ಓಝೋನ್ ರಂಧ್ರ ದೊಡ್ಡದಾಗುವ ಪ್ರಮಾಣವು ಮಧ್ಯ-ಅಕ್ಷಾಂಶದಲ್ಲಾಗುವ ಸವೆತಕ್ಕಿಂತ ಭಿನ್ನವಾಗಿರುತ್ತದೆ. ಆದರೆ ಎರಡು ರೀತಿಯಲ್ಲೂ ಆಗುವ ಪ್ರಮುಖ ಅಪಾಯವೆಂದರೆ ಕ್ಲೋರಿನ್ ಮತ್ತು ಬ್ರೋಮಿನ್‌ ಬಿಡುಗಡೆಯಿಂದ ವೇಗವಾಗಿ ಓಝೋನ್‌ ನಾಶಗೊಳ್ಳುವ ಆತಂಕ ವೃದ್ಧಿಸುತ್ತದೆ.[] ಸಾಮಾನ್ಯವಾಗಿ ಫ್ರಿಯೋನ್‌ಗಳೆನ್ನುವ ಕ್ಲೋರೊಫ್ಲೋರೊಕಾರ್ಬನ್ (CFC) ಸಂಯುಕ್ತಗಳ ಹಾಗೂ ಹ್ಯಾಲನ್‌ಗಳು ಎಂದು ಕರೆಯುವ ಬ್ರೋಮೊಫ್ಲೋರೊಕಾರ್ಬನ್ ಸಂಯುಕ್ತಗಳ ದ್ಯುತಿವಿಭಜನೆಯು ವಾಯುಮಂಡಲದಲ್ಲಿನ ಈ ಹ್ಯಾಲೋಜೆನ್ ಪರಮಾಣುಗಳಿಗೆ ಮುಖ್ಯ ಮೂಲ. ಈ ಹ್ಯಾಲೋಜೆನ್ ಎಂಬುದು ಐದು ಅನಿಲಗಳ ಒಂದು ಸಂಯುಕ್ತ ರಚನೆ. ಈ ಸಂಯುಕ್ತಗಳು ಭೂಮಿಯ ಮೇಲ್ಮೈಯಲ್ಲಿ ಬಿಡುಗಡೆಯಾದ ನಂತರ ವಾಯುಮಂಡಲಕ್ಕೆ ವರ್ಗಾವಣೆಯಾಗುತ್ತವೆ.[] CFC ಮತ್ತು ಹ್ಯಾಲನ್‌ಗಳ ಹೊರಸೂಸುವಿಕೆಯು ಹೆಚ್ಚಾದ ಹಾಗೆ ಎರಡು ರೀತಿಯ ಓಝೋನ್ ಸವೆತದ ಪ್ರಬಲತೆ ನಿಯಂತ್ರಿಸಲು ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತಿದೆ.

CFC ಮತ್ತು ಇತರ ಸಹಾಯಕ ಅಂಶಗಳನ್ನು ಸಾಮಾನ್ಯವಾಗಿ ಓಝೋನ್ ಡಿಪ್ಲೀಟಿಂಗ್ ಸಬ್ಸ್ಟಾನ್ಸಸ್ (ODS ) ಎನ್ನುತ್ತಾರೆ. CFC ಸಂಯುಕ್ತಗಳು ಹಾಗು ಅದಕ್ಕೆ ಪೂರಕ ರಾಸಾಯನಿಕಗಳು ಓಝೋನ್ ನಾಶಗೊಳಿಸುವ ಉಪ-ವಸ್ತುಗಳೆಂದು ಹೇಳಬಹುದು. ನೇರಳಾತೀತ ಬೆಳಕಿನಲ್ಲಿರುವ ಬಹಳ ಅಪಾಯಕಾರಿ UVB (ಅಲ್ಟ್ರಾವೈಲೆಟ್) ತೀಕ್ಷ್ಣ್ಗ ಕಿರಣಗಳು(270–315 nm) ಭೂಮಿಯ ವಾತಾವರಣವನ್ನು ಹಾದುಹೋಗದ ಹಾಗೆ ಓಝೋನ್ ಪದರ ತಡೆಯುತ್ತದೆ. ಆದ್ದರಿಂದ ಓಝೋನ್ ಪದರದ ಸವಕಳಿಯಿಂದಾಗಿ ಪ್ರಪಂಚದಾದ್ಯಂತ ಮೋಂಟ್ರಿಯಲ್ ಪ್ರೋಟೋಕಾಲ್‌ನ್ನು ಅಂಗೀಕರಿಸುವುದಕ್ಕೆ ಆಸಕ್ತಿ ತೋರಲಾಯಿತು. ಇದು CFC, ಹ್ಯಾಲನ್‌ಗಳು ಹಾಗೂ ಕಾರ್ಬನ್ ಟೆಟ್ರಾಕ್ಲೋರೈಡ್ ಮತ್ತು ಟ್ರೈಕ್ಲೋರೋಈಥೇನ್‌ನಂತಹ ಓಝೋನ್ ಸವಕಳಿಗೆ ಕಾರಣವಾಗುವ ರಾಸಾಯನಿಕಗಳ ಉತ್ಪತ್ತಿಯನ್ನು ತಡೆಯುತ್ತದೆ. ಮಾಂಟ್ರಿಯಲ್ ಶಿಷ್ಟಾಚಾರ ನಿಯಮವು ವಿಶ್ವದ ಓಝೋನ್ ಸಂರಕ್ಷಣಾ ಕಳಕಳಿಗೆ ಸಾಕ್ಷಿಯಾಗಿದೆ. ಓಝೋನ್ ಪದರದ ಸವೆತದಿಂದಾಗಿ ವಿವಿಧ ರೀತಿಯ ಪರಿಸರ ಜೀವಿಗಳು ಹಾಗು ವಾತಾವರಣದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. UVಗೆ (ಅಲ್ಟ್ರಾವೈಲೆಟ್ ಕಿರಣಗಳಿಗೆ) ಹೆಚ್ಚು ಒಡ್ಡುವುದರಿಂದ ಚರ್ಮ ಕ್ಯಾನ್ಸರ್, ಕಣ್ಣಿನ ಪೊರೆ[] ಸಮಸ್ಯೆ ಅಧಿಕವಾಗುತ್ತದೆ, ಆಹಾರ ಹಾಗು ಔಷಧಿ ಸಸ್ಯಗಳಿಗೆ ಹಾನಿಯಾಗುತ್ತದೆ ಮತ್ತು ಸಾಗರದಲ್ಲಿನ ಸೂರ್ಯನ ಬೆಳಕು ತಲುಪಬಹುದಾದ ವಲಯದಲ್ಲಿರುವ ಜೈವಿಕ ಸಂಕುಲದ ಸಂಖ್ಯೆಯೂ ಅಳಿಯುತ್ತದೆ. ಜಲಚರಗಳು ಮತ್ತು ಅತ್ಯಂತ ಸೂಕ್ಷ್ಮ ಜೀವಿಗಳಿಗೆ ಇದು ಪ್ರಾಣಾಂತಿಕವಾಗಿ ಪರಿಣಮಿಸಬಹುದು.

ಓಝೋನ್ ವಲಯದ ಅವಲೋಕನ (ಪರಿಧಿ)

[ಬದಲಾಯಿಸಿ]

ಓಝೋನ್-ಆಮ್ಲಜನಕ ಚಕ್ರದಲ್ಲಿ ಆಮ್ಲಜನಕದ ಮೂರು ರೂಪಗಳು (ಅಥವಾ ಅಲ್ಲೋಟ್ರೋಪ್‌ಗಳು) ಸೇರಿಕೊಂಡಿವೆ: ಆಮ್ಲಜನಕ ಪರಮಾಣುಗಳು (O ಅಥವಾ ಪರಮಾಣು ಆಮ್ಲಜನಕ), ಆಮ್ಲಜನಕ ಅನಿಲ (O2 ಅಥವಾ ಎರಡು ಪರಮಾಣುಗಳಿರುವ ಆಮ್ಲಜನಕ), ಮತ್ತು ಓಝೋನ್ ಅನಿಲ (O3 ಅಥವಾ ಮೂರು ಪರಮಾಣುಗಳಿರುವ ಆಮ್ಲಜನಕ)ಇತ್ಯಾದಿ. ಓಝೋನ್ ಸರಪಳಿಯು ಆಮ್ಲಜನಕದ ವಿವಿಧ ಪ್ರಕಾರಗಳಿಂದ ರೂಪುಗೊಂಡಿದೆ. ಆಮ್ಲಜನಕದ ಅಣುಗಳು 240 & nbsp;nm ಗಿಂತ ಕಡಿಮೆ ತರಂಗಾಂತರವಿರುವ ನೇರಳಾತೀತ ಫೋಟಾನ್‌ನ್ನು ಹೀರಿ ದ್ಯುತಿವಿಭಜನೆಗೊಂಡು ವಾಯುಮಂಡಲದಲ್ಲಿ ಓಝೋನ್‌ನ ರಚನೆಯಾಗುತ್ತದೆ. ಫೊಟಾನ್ ವಲಯದಲ್ಲಿ ಆಮ್ಲಜನಕದ ಪ್ರವೇಶದೊಂದಿಗೆ ಅದರ ಉಪಯುಕ್ತತೆ ಹೊರಹೊಮ್ಮುತ್ತದೆ. ಇದು ಎರಡು ಆಮ್ಲಜನಕ ಪರಮಾಣುಗಳನ್ನು ಬಿಡುಗಡೆ ಮಾಡುತ್ತದೆ. ನಂತರ ಆಮ್ಲಜನಕ ಪರಮಾಣು O2 ಒಂದಿಗೆ ಸೇರಿ 3ನ ರಚನೆಗೆ ಕಾರಣವಾಗುತ್ತದೆ. ಓಝೋನ್ ಅಣುಗಳು 310 ರಿಂದ 200 nm ವರೆಗಿನ ಮಧ್ಯದ UV(ಅಲ್ಟ್ರಾ ವೈಲೆಟ್) ಕಿರಣ ಹೀರಿಕೊಂಡು, ನಂತರ O2 ಮತ್ತು ಆಮ್ಲಜನಕ ಪರಮಾಣುವಿನ ಭಾಗಗಳಾಗಿ ವಿಭಜನೆಯಾಗುತ್ತವೆ. ಆಮ್ಲಜನಕ ಪರಮಾಣು ಮತ್ತೆ ಇನ್ನೊಂದು ಆಮ್ಲಜನಕ ಅಣುವಿನೊಂದಿಗೆ ಸೇರಿ ಓಝೋನ್ ಪುನಃರಚನೆಗೆ ಸಹಕಾರಿಯಾಗುತ್ತದೆ. ಆಮ್ಲಜನಕ ಪರಮಾಣು ಎರಡು O2 ಅಣುಗಳ ರಚನೆಗಾಗಿ ಓಝೋನ್ ಅಣುವಿನೊಂದಿಗೆ "ಪುನಃಸೇರುತ್ತದೆ" ಇದರೊಂದಿಗೆ ಕೊನೆಗೊಳ್ಳುವ ಇದು ಒಂದು ನಿರಂತರ ಪ್ರಕ್ರಿಯೆ. O + O3 → 2 O2

ಪೃಥ್ವಿಯ ಮಾಸಿಕ ಸರಾಸರಿ ಒಟ್ಟು ಓಝೋನ್ ಪ್ರಮಾಣ.

ವಾಯುಮಂಡಲದ ಓಝೋನ್‌ನ ಒಟ್ಟು ಮೊತ್ತವು ದ್ಯುತಿರಾಸಾಯನಿಕದ ಉತ್ಪತ್ತಿ ಮತ್ತು ಪುನರಾವರ್ತನೆಗಳ ಸಮತೋಲನದಿಂದ ದೃಢೀಕರಿಸಲಾಗುತ್ತದೆ.

ಓಝೋನ್‌ನ್ನು ಹಲವಾರು ಸ್ವತಂತ್ರ ರಾಡಿಕಲ್ ವೇಗ ವರ್ಧಕಗಳು ನಾಶಮಾಡುತ್ತವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಹೈಡ್ರೋಕ್ಸಿಲ್ ರಾಡಿಕಲ್ (OH·), ನೈಟ್ರಿಕ್ ಆಕ್ಸೈಡ್ ರಾಡಿಕಲ್ (NO·) ಮತ್ತು ಕ್ಲೋರಿನ್ (Cl·) ಮತ್ತು ಬ್ರೋಮಿನ್ (Br·) ಪರಮಾಣು. ಇವೆಲ್ಲವೂ ನೈಸರ್ಗಿಕ ಹಾಗೂ ಮಾನವ(ನಿರ್ಮಿತ) ಮೂಲಗಳಿಂದ ಬಂದವು. ವಾಯುಮಂಡಲದಲ್ಲಿರುವ ಹೆಚ್ಚಿನ OH· ಮತ್ತು NO· ನೈಸರ್ಗಿಕವಾಗಿ ಬಂದಂತವು. ಆದರೆ ಇತ್ತೀಚಿನ ದಿನಗಳಲ್ಲಿ ವಿಪರೀತ ಮತ್ತು ವಿಷಕಾರಕ ಎನ್ನುವ ಮಾನವನ ಚಟುವಟಿಕೆಗಳಿಂದಾಗಿ ಕ್ಲೋರಿನ್ ಮತ್ತು ಬ್ರೋಮಿನಂತಹ ವಿಷಗಳ ಬಿಡುಗಡೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಧಾತುಗಳು ಕೆಲವು ಸುಲಭವಾಗಿ ವಿಭಜಿಸಲಾಗದ ಕಾರ್ಬನ್‌ನ ಸಂಯುಕ್ತಗಳಲ್ಲಿ, ವಿಶೇಷವಾಗಿ ಕ್ಲೋರೊಫ್ಲೋರೊಕಾರ್ಬನ್ಗಳು (CFC), ಕಂಡುಬರುತ್ತವೆ. ಅವುಗಳ ಅಲ್ಪ ಪ್ರಮಾಣದ ಪ್ರತಿಕ್ರಿಯೆಯಿಂದಾಗಿ ಹವಾಗೋಲದಲ್ಲಿ ವಿಲೀನವಾಗದೆ ವಾಯುಮಂಡಲವನ್ನು ಸುಲಭವಾಗಿ ತಲುಪುತ್ತವೆ. ಒಮ್ಮೆ ವಾಯುಮಂಡಲವನ್ನು ಸೇರಿದ ನಂತರ, ನೇರಳಾತೀತ ಬೆಳಕಿನ ವಿಭಜನೆಯಿಂದಾಗಿ ಮೂಲ ಸಂಯಕ್ತಗಳಿಂದ Cl ಮತ್ತು Br ಪರಮಾಣುಗಳು ಮುಕ್ತಗೊಳ್ಳುತ್ತವೆ. ಉದಾ. ('h' ಎಂಬುದು ಪ್ಲಾಂಕ್ಸ್ ಕಾಂಸ್ಟೆಂಟ್, 'ν'ಯು ವಿದ್ಯುತ್ಕಾಂತೀಯ ಕಿರಣಗಳ ಕಂಪನ)

CFCl3 + hν → CFCl2 + Cl

Cl ಮತ್ತು Br ಪರಮಾಣುಗಳು ನಂತರ ವಿವಿಧ ರೀತಿಯ ವೇಗವರ್ಧಕ ಬಲಿಷ್ಠ ಪರಮಾಣು ಆವರ್ತಗಳ ಮೂಲಕ ಓಝೋನ್ ಪದರಿನ ಅಣುಗಳನ್ನು ಅಳಿವಿನಂಚಿಗೆ ತರುತ್ತದೆ. ಅಂತಹ ಆವರ್ತಗಳಿಗೆ[] ಒಂದು ಸರಳ ಉದಾಹರಣೆಯೆಂದರೆ ಒಂದು ಕ್ಲೋರಿನ್ ಪರಮಾಣು ಒಂದು ಓಝೋನ್ ಅಣುವಿನೊಂದಿಗೆ ಕ್ರಿಯೆಗೊಳಗಾಗಿ, ಒಂದು ಆಮ್ಲಜನಕ ಪರಮಾಣುವನ್ನು ತೆಗೆದುಕೊಳ್ಳುತ್ತದೆ (ClO ಬಿಡುಗಡೆಯಾಗುತ್ತದೆ) ಮತ್ತು ಒಂದು ಸಾಮಾನ್ಯ ಸ್ಥಿತಿಯ ಆಮ್ಲಜನಕ ಅಣುವನ್ನು ಬಿಡುಗಡೆಗೊಳಿಸುತ್ತದೆ. ಕ್ಲೋರಿನ್ ಮೋನಾಕ್ಸೈಡ್ (ಅಂದರೆ ClO) ಓಝೋನ್‌ನ ದ್ವಿತೀಯ ಕಣದೊಂದಿಗೆ (O3) ಸೇರಿ ಒಂದು ಕ್ಲೋರಿನ್ ಅಣು ಮತ್ತು ಎರಡು ಆಮ್ಲಜನಕ ಕಣಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ಅನಿಲ ಕ್ರಿಯೆಗಳನ್ನು ರಾಸಾಯನಿಕ ಶಾಸ್ತ್ರೀಯ ಸಂಕೇತವಾಗಿ ಹೀಗೆ ತೋರಿಸಬಹುದು:

Cl + O3 → ClO + O2

ClO + O3 → Cl + 2 O2

ಇವೆಲ್ಲದರ ಒಟ್ಟು ಪರಿಣಾಮ, ಓಝೋನ್ ಸಾಮರ್ಥ್ಯ ಕುಸಿತ. ಹೆಚ್ಚು ಸಂಕೀರ್ಣ ಯಾಂತ್ರಿಕ ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿದ್ದು ಕೂಡಾ ವಾಯುಮಂಡಲದ ಕೆಳಭಾಗದ ಓಝೋನ್‌ ಪದರು ನಾಶವಾಗುವಿಕೆಗೂ ಕಾರಣವಾಯಿತು.

ಒಂದು ಕ್ಲೋರಿನ್ ಪರಮಾಣು ಓಝೋನ್ ಪದರನ್ನು ಎರಡು ವರ್ಷಗಳವರೆಗೆ ನಾಶಮಾಡುವ ಶಕ್ತಿ ಹೊಂದಿದೆ. ಇದು ರಾಸಾಯನಿಕ ಕ್ರಿಯೆಯ ಸಂದರ್ಭದಲ್ಲಿ ವಿಷವಸ್ತುಗಳ ಬಿಡುಗಡೆಗೂ ಕಾರಣವಾಗುತ್ತದೆ. ಹೈಡ್ರೋಜನ್ ಕ್ಲೋರೈಡ್ (HCl) ಮತ್ತು ಕ್ಲೋರಿನ್ ನೈಟ್ರೇಟ್ (ClONO2) ಮೊದಲಾದವುಗಳನ್ನು ಉತ್ಪತ್ತಿಮಾಡುತ್ತವೆ. ಏಕ ಪರಮಾಣುವಿನ ಆಧಾರ ತೆಗೆದುಕೊಂಡರೆ ಓಝೋನ್ ಹಾಳುಮಾಡುವುದರಲ್ಲಿ ಕ್ಲೋರಿನ್‌ಗಿಂತ ಬ್ರೋಮಿನ್ ಪ್ರಮುಖ ಪಾತ್ರವಹಿಸುತ್ತದೆ. ಸಂತೋಷಕರ ಸಂಗತಿ ಎಂದರೆ ಪ್ರಸ್ತುತ ವಾತಾವರಣದಲ್ಲಿರುವ ಬ್ರೋಮಿನ್‌ನ ಮಟ್ಟ ತೀರಕಡಿಮೆ. ಹಾಗಾಗಿ ಸಂಪೂರ್ಣ ಓಝೋನ್‌ನ ನಿರಂತರ ಸವಕಳಿಯಲ್ಲಿ ಕ್ಲೋರಿನ್ ಮತ್ತು ಬ್ರೋಮಿನ್ ಎರಡೂ ಗಮನಾರ್ಹ ಪಾತ್ರವಹಿಸುತ್ತವೆ. ಹೋಲಿಕೆಯಿರುವ ವೇಗವರ್ಧಕ ಆವರ್ತಗಳಲ್ಲಿ ಫ್ಲೋರಿನ್ ಮತ್ತು ಐಯೋಡಿನ್ ಪರಮಾಣುಗಳು ಕ್ರಿಯಾಶೀಲಗೊಳ್ಳುತ್ತವೆ ಎಂದು ಪ್ರಾಯೋಗಿಕ ಅಧ್ಯಯನಗಳು ಸಾಬೀತುಪಡಿಸಿವೆ. ಭೂಮಿಯ ವಾಯುಮಂಡಲದಲ್ಲಿ, ಫ್ಲೋರಿನ್ ಪರಮಾಣುಗಳು ನೀರು ಮತ್ತು ಮೀಥೇನ್‌ನೊಂದಿಗೆ ಸೇರಿ ಗಟ್ಟಿಮುಟ್ಟಾದ HFಅನ್ನು ಉತ್ಪತ್ತಿ ಮಾಡುತ್ತವೆ.ಇಲ್ಲಿ ಐಯೋಡಿನ್ ಹೊಂದಿರುವ ಕಾರ್ಬನಿಕ ಅಣುಗಳು ಕೆಳಭಾಗದ ವಾತಾವರಣದಲ್ಲಿ ತೀವ್ರಗತಿಯ ರಾಸಾಯನಿಕ ಕ್ರಿಯೆಗೊಳಗಾಗುತ್ತವೆ. ಆದ್ದರಿಂದ ಅವು ಹೆಚ್ಚಿನ ಪ್ರಮಾಣದಲ್ಲಿ ವಾಯುಮಂಡಲ ತಲುಪುವುದಿಲ್ಲ. ಒಂದು ಕ್ಲೋರಿನ್ ಪರಮಾಣು 100,000 ಓಝೋನ್ ಅಣುಗಳೊಂದಿಗೆ ಪ್ರತಿಕ್ರಿಯೆಗೊಳಗಾಗುವ, ಸ್ಪರ್ಧೆಯೊಡ್ಡುವ ಸಾಮರ್ಥ್ಯ ಹೊಂದಿದೆ. ಈ ಸಂಗತಿ ಮತ್ತು ಕ್ಲೋರೊಫ್ಲೋರೊಕಾರ್ಬನ್ (CFC)ನಿಂದ ವರ್ಷಂಪ್ರತಿ ವಾತಾವರಣಕ್ಕೆ ಬಿಡುಗಡೆಯಾಗುವ ಕ್ಲೋರಿನ್‌ನ ಪ್ರಮಾಣ ನೋಡಿದರೆ CFCಯಂತಹ ವಸ್ತುಗಳು ನಿಸರ್ಗಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ತೋರಿಸುತ್ತವೆ.[]

ರಾಸಾಯನಿಕ ಓಝೋನ್ ಹಾನಿಯಾಗುವ ಕ್ರಿಯೆಯ ಪರಿಮಾಣಾತ್ಮಕ ಗ್ರಹಿಕೆ

[ಬದಲಾಯಿಸಿ]

ಡೈಕ್ಲೋರಿನ್ ಪೆರಾಕ್ಸೈಡ್ (Cl2O2)ನಂತಹ ಓಝೋನ್-ಸವಕಳಿಗೆ ಕಾರಣವಾಗುವ ರಾಸಾಯನಿಕಗಳ ಕೇಂದ್ರ ಅಂಶ ಭೇದಿಸಲು ನಡೆಯುತ್ತಿರುವ ಸಂಶೋಧನೆಗಳು ಪ್ರಸ್ತುತ ಧ್ರುವ ಓಝೋನ್ ಸವಕಳಿಯ ಸ್ಪಷ್ಟತೆಯನ್ನು ಹೇಳಿಲ್ಲ. 2007ರಲ್ಲಿ ಕ್ಯಾಲಿಫೋರ್ನಿಯಾದ ಪ್ಯಾಸಡೆನಾದ NASA ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ರಸಾಯನಶಾಸ್ತ್ರಜ್ಞರು, ವಿಶೇಷ ಅಧ್ಯಯನ ಕೈಗೆತ್ತಿಕೊಂಡರು. ತಾಪಮಾನ ಮತ್ತು ವಾಯುಮಂಡಲದ ಕಿರಣಗಳ ಸ್ಪೆಕ್ಟ್ರಮ್(ಗೋಚರತೆ) ಮತ್ತು ತೀವ್ರ ವಿಕಿರಣತೆಯ ರಾಸಾಯನಿಕಗಳನ್ನು ವಿಫಲಗೊಳಿಸದ ಸ್ಥಿತಿ ನಿರ್ಮಿಸುತ್ತವೆ ಎಂದು ಕಂಡುಕೊಂಡರು. ಇದು ಓಝೋನ್ ಸವಕಳಿ ಮಟ್ಟ ನಿರ್ಧರಿಸಲು ಬೇಕಾದ ಪ್ರಮಾಣದ ಕ್ಲೋರಿನ್ ವೇಗವರ್ಧಕಗಳ ಬಿಡುಗಡೆಗೆ ಅವಶ್ಯವಿರುತ್ತದೆ. ಇಂದಿನವರೆಗೆ ಪ್ರಯೋಗಾಲಯದ ಸಂಶೋಧನೆಗಳು ವಾಯುಮಂಡಲದ ಸ್ಥಿತಿಯ ನಿಖರ ಮಾಹಿತಿ ನೀಡಿವೆ. ಆದರೆ ಸಂಶೋಧನೆಗಳು ಕಡಿಮೆ ಪ್ರಮಾಣದಲ್ಲಿ ಕಠಿಣ(ಜಟಿಲ) ಅಣುವಿನ ಕ್ಷಯಿಸುವಿಕೆಯನ್ನು ತೋರಿಸಿದವು. ಇದರಿಂದಾಗಿ ಓಝೋನ್ ಅಸ್ತಿತ್ವಕ್ಕೆ ವಿಜ್ಞಾನಿಗಳು ಹೆಚ್ಚಿನ ಕ್ರಮಗಳಿಗೆ ಒತ್ತು ನೀಡಬೇಕಾಗಿದೆ.[][][]

ಹೊಸ ಸಂಶೋಧನೆಯ ಫಲಿತಾಂಶವು ಆಧುನಿಕ ವೈಜ್ಞಾನಿಕ ಮಾಪಕಗಳಿಗೆ ವಿವಿಧ ರೀತಿ ಪ್ರೇರಣೆ ನೀಡಿತು. ಇದರಿಂದಾಗಿ ಹಳೆಯ ತಲೆಮಾರಿನ ಅಳತೆಗೋಲು ಬಳಕೆಗೆ ಸಂಚಕಾರ ಬಂತು. ಹೊಸ ಫಲಿತಾಂಶಗಳು ಭಿನ್ನಾಭಿಪ್ರಾಯ ತೋರಿದರೆ ಅಲ್ಲಿ ಉಂಟಾಗುವ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.[]

ಓಝೋನ್ ಪದರ ಸವಕಳಿಯ ಅವಲೋಕನ

[ಬದಲಾಯಿಸಿ]

ಹೆಚ್ಚಿನ ಪ್ರಮಾಣದ ಓಝೋನ್‌ ಪದರಿನ ಸವಕಳಿಯು ವಾಯುಮಂಡಲದ ಕೆಳಭಾಗದಲ್ಲಿ ಕಂಡುಬರುತ್ತದೆ. ರಂಧ್ರದ ಪ್ರಮಾಣವನ್ನು ಈ ವಲಯದಲ್ಲಿನ ಓಝೋನ್ ಕೇಂದ್ರೀಕರಣದ ಆಧಾರದ ಮೇಲೆ ಅಳತೆ ಮಾಡಲಾಗುವದಿಲ್ಲ. ಭೂಮಿಯ ಮೇಲ್ಮೈಯ ಒಂದು ಹಂತದಿಂದ ಮೇಲಿನ ಒಟ್ಟು ತೆರೆ-ಪದರು ಓಝೋನ್‌ ನ ಇಳಿಕೆಯಿಂದ ಅಳೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ "DU" ಎಂಬ ಸಂಕ್ಷೇಪ ರೂಪದಲ್ಲಿ ಹೇಳುವ ಡೋಬ್ಸನ್ ಸೂತ್ರದಲ್ಲಿ ನಿರೂಪಿಸಲಾಗುತ್ತದೆ. 1970ರ ಆದಿ ಮತ್ತು ಅದಕ್ಕಿಂತ ಮೊದಲು ಅಂಟಾರ್ಕಟಿಕ್ನ ವಸಂತಕಾಲ ಮತ್ತು ಆರಂಭದ ಬೇಸಿಗೆಯಲ್ಲಿ ಓಝೋನ್‌ನ ಪದರುಗಳಲ್ಲಿ ಸ್ಪಷ್ಟ ಸವಕಳಿ ಗುರುತಿಸಲಾಯಿತು. ಇದನ್ನು ಟೋಟಲ್ ಓಝೋನ್ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್ (TOMS)ನಂತಹ ಸಾಧನ ಬಳಸಿ ವೀಕ್ಷಿಸಲಾಯಿತು.[೧೦]

TOMS ಅಳತೆ ಮಾಡಿದ ಓಝೋನ್ ರಂಧ್ರದಲ್ಲಿನ ಪ್ರತಿ ವರ್ಷದ ಓಝೋನ್‌ನ ಅತೀಕಡಿಮೆ ಮಟ್ಟ.

ಓಝೋನ್ ವ್ಯಾಪ್ತಿಯ 70%ರ ಕುಗ್ಗುವಿಕೆಯು ವಸಂತಕಾಲದಲ್ಲಿ ದಕ್ಷಿಣಭಾಗದ (ದಕ್ಷಿಣದ ಅರ್ಧಗೋಳ) ಅಂಟಾರ್ಕಟಿಕ್‌ನಾದ್ಯಂತ ಕಂಡುಬಂದಿದೆ. ಇದು ಇನ್ನೂ ಮುಂದುವರಿಯುತ್ತಲೇ ಇದೆ ಹಾಗೂ ಇದನ್ನು ಮೊದಲು 1985ರಲ್ಲಿ (ಫಾರ್ಮಾನ್ et al. 1985) ವರದಿಮಾಡಲಾಯಿತು.[೧೧] 1990ರ ಮಧ್ಯದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಒಟ್ಟು ಓಝೋನ್ ಪರಿಧಿಯ, ಪೂರ್ವ-ಓಝೋನ್-ತೂತಾಗುವಿಕೆಯು 40–50%ರಷ್ಟು ಕಡಿಮೆ ಪ್ರಮಾಣದಲ್ಲಿ ಮುಂದುವರಿಯಿತು. ಅಂಟಾರ್ಕಟಿಕ್‌ಗಿಂತ ಆರ್ಕಟಿಕ್‌ನಲ್ಲಿ ಹೆಚ್ಚಾಗಿ ಆಗುವ ಸವಕಳಿಯು ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಹೆಚ್ಚಿನ ಪ್ರಮಾಣದ ಸವಕಳಿ ಸುಮಾರು 30%ನಷ್ಟು ವಾಯುಮಂಡಲ ಶೀತವಾಗಿರುವ ಸಂದರ್ಭದಲ್ಲಿ, ಚಳಿಗಾಲ ಮತ್ತು ವಸಂತಕಾಲದಲ್ಲಾಗುತ್ತದೆ.

ಧ್ರುವಪ್ರದೇಶದ ವಾಯುಂಡಲದ ಮೋಡಗಳ (PSC) ಪ್ರತಿಕ್ರಿಯೆಗಳು ಓಝೋನ್ ಸವಕಳಿಯ ಹೆಚ್ಚಳದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.[೧೨] PSCಗಳು (ಧ್ರುವಪ್ರದೇಶದ ವಾಯುಂಡಲದ ಮೋಡಗಳು) ಅಂಟಾರ್ಕಟಿಕ್ ಹತ್ತಿರದ ವಾಯುಮಂಡಲದ ಶೀತ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ರೂಪುಗೊಳ್ಳುತ್ತವೆ. ಇದರಿಂದಾಗಿ ಅಂಟಾರ್ಕಟಿಕ್‌ನಲ್ಲಿ ಓಝೋನ್ ರಂಧ್ರಗಳು ಮೊದಲು ಕಂಡು ಬಂದವು ಹಾಗೂ ಬಹಳ ಆಳವಾಗಿ ಪರಿಣಾಮ ಬೀರಿದವು. ಆರಂಭಿಕ ಪರೀಕ್ಷಾ ಮಾದರಿಗಳು PSCಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ ನಿಧಾನ ಗತಿಯ ಸವಕಳಿಯಾಗುತ್ತದೆ ಎಂದು ಭವಿಷ್ಯ ನುಡಿದವು, ಆದ್ದರಿಂದ ದಿಢೀರ್ ಆದ ಅಂಟಾರ್ಕಟಿಕ್ ಓಝೋನ್ ರಂಧ್ರವು ಹಲವು ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟುಮಾಡಿತು.[ಸೂಕ್ತ ಉಲ್ಲೇಖನ ಬೇಕು]

ಮಧ್ಯ ಅಕ್ಷಾಂಶದಲ್ಲಿ ಓಝೋನ್ ರಂಧ್ರಕ್ಕಿಂತ ಸವಕಳಿಯ ಬಗ್ಗೆ ಹೇಳುವುದು ಹೆಚ್ಚು ಯೋಗ್ಯವಾದುದು. 1980ರ ಪೂರ್ವದಲ್ಲಿ ಸವಕಳಿಯು 35–60°Nನಲ್ಲಿ ಸುಮಾರು 3% ಮತ್ತು 35–60°Sನಲ್ಲಿ ಸುಮಾರು 6%ರಷ್ಟಿತ್ತು. ಆದರೆ ಸಮಭಾಜಕ ವೃತ್ತದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಓಝೋನ್ ಸವಕಳಿಯು ವಾಯುಮಂಡಲ ಮತ್ತು ವಾಯುಗೋಲದ ಮೇಲಿನ ಮಟ್ಟದ ತಾಪಮಾನ ಇಳಿಕೆಗೂ ಕಾರಣವಾಗುತ್ತದೆ.[೧೩][೧೪] ಓಝೋನ್ UV ಕಿರಣಗಳನ್ನು ಹೀರಿಕೊಳ್ಳುವುದರಿಂದ ವಾಯುಮಂಡಲವು ಬೆಚ್ಚಗಿರುತ್ತದೆ ಆದರೆ ಓಝೋನ್ ಸವಕಳಿ ಪರಿಣಾಮದಿಂದಾಗಿ ತಣ್ಣಗಾಗುತ್ತದೆ. CO2ನಂತಹ ಹಸಿರುಮನೆ ಅನಿಲಗಳ ಪ್ರಮಾಣ ಏರಿಕೆಯಿಂದಲೂ ವಾಯುಮಂಡಲ ಕೆಲವೊಮ್ಮೆ ಶೀತಲಗೊಳ್ಳುತ್ತದೆ; ಉದಾ: ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವು ಇದಕ್ಕೆ ಕಾರಣವಾಗುತ್ತದೆ ಆದರೂ ಓಝೋನ್-ಸವಕಳಿಯಿಂದಾಗಿ ಹೆಚ್ಚು ಶೀತ ಪ್ರಭಾವಕ್ಕೆ ಒಳಗಾಗುವುದು ಪ್ರಧಾನವಾಗಿ ಕಾಣುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಓಝೋನ್ ಮಟ್ಟದ ಬಗ್ಗೆ ಭವಿಷ್ಯ ನುಡಿಯುವುದು ತುಂಬಾ ಕಷ್ಟ. ಮಾಂಟ್ರಿಯಲ್ ಪ್ರೋಟೊಕಾಲ್‍‌ಗೆ ಮನ್ನಿಸಿ ವರ್ಲ್ಡ್ ಮೆಟಿರೊಲಾಜಿಕಲ್ ಆರ್ಗನೈಸೇಶನ್ ಗ್ಲೋಬಲ್ ಓಝೋನ್ ರಿಸರ್ಚ್ ಆಂಡ್ ಮಾನಿಟರಿಂಗ್ ಪ್ರಾಜೆಕ್ಟ್ - ರಿಪೋರ್ಟ್ ನಂ. 44 ಅಸ್ತಿತ್ವಕ್ಕೆ ಬಂತು, ಆದರೆ ಇದು 1994–1997 ಅವಧಿಯ ಓಝೋನ್ ನಷ್ಟದ ಬಗ್ಗೆ UNEP 1994ರಲ್ಲಿ ಮಾಡಿದ ಅಂದಾಜಿಗಿಂತ ಅಧಿಕವಾಗಿದ್ದನ್ನು ಗಮನಕ್ಕೆ ತಂದಿತು.

ವಾತಾವರಣದಲ್ಲಿರುವ ರಾಸಾಯನಿಕಗಳು

[ಬದಲಾಯಿಸಿ]

ವಾಯುಮಂಡಲದಲ್ಲಿರುವ CFC(ಕ್ಲೊರೊಫ್ಲೊರೊಕಾರ್ಬನ್)ಗಳು

[ಬದಲಾಯಿಸಿ]

ಥಾಮಸ್ ಮಿಗ್ಲೆಅವರು 1920ರಲ್ಲಿ ಕ್ಲೋರೊಫ್ಲೋರೊಕಾರ್ಬನ್‌ಗಳನ್ನು (CFC ಕಂಡುಹಿಡಿದರು. ಅವುಗಳನ್ನು 1980ರ ಹಿಂದೆ ಹವಾ ನಿಯಂತ್ರಣ/ಶೈತ್ಯಾಗಾರ ಘಟಕಗಳಲ್ಲಿ ವಾಯುದ್ರವ ಸಿಂಪರಣೆ ಸಾಧನವಾಗಿ ಉಪಯೋಗಿಸುತ್ತಿದ್ದರು ಹಾಗೂ ಸೂಕ್ಷ್ಮ ಇಲೆಕ್ಟ್ರಾನಿಕ್ ಉಪಕರಣಗಳನ್ನು ಶುಚಿಗೊಳಿಸಲೂ ಬಳಸುತ್ತಿದ್ದರು. ಅವು ಕೆಲವು ರಾಸಾಯನಿಕ ಕ್ರಿಯೆಗಳ ಉಪ-ಉತ್ಪನ್ನವಾಗಿಯೂ ಕಂಡುಬರುತ್ತವೆ. ಈ ಸಂಯುಕ್ತಗಳಿಗೆ ಯಾವುದೇ ಪ್ರಮುಖ ನೈಸರ್ಗಿಕ ಮೂಲಗಳು ಇದುವರೆಗೆ ಗುರುತಿಸಲ್ಪಟ್ಟಿಲ್ಲ, ಆದರೆ ವಾತಾವರಣದಲ್ಲಿ ಅವುಗಳ ಅಸ್ತಿತ್ವಕ್ಕೆ ಸಂಪೂರ್ಣವಾಗಿ ಮಾನವ ಕಾರಣನಾಗಿದ್ದಾನೆ. ಓಝೋನ್ ಚಕ್ರ ಅವಲೋಕನ ದಲ್ಲಿ ತಿಳಿದ ಹಾಗೆ ಓಝೋನ್-ಸವಕಳಿಗೆ ಕಾರಣವಾಗುವ ರಾಸಾಯನಿಕಗಳು ವಾಯುಮಂಡಲ ತಲುಪಿ ನೇರಳಾತೀತ ಬೆಳಕಿನಿಂದ ವಿಭಜಿಸಲ್ಪಟ್ಟು ಕ್ಲೋರಿನ್ ಪರಮಾಣುಗಳನ್ನು ಬಿಡುಗಡೆಗೊಳಿಸುತ್ತವೆ. ಕ್ಲೋರಿನ್ ಪರಮಾಣುಗಳು ವೇಗವರ್ಧಕದಂತೆ ಕೆಲಸಮಾಡುತ್ತವೆ. ವಾಯುಮಂಡಲದಿಂದ ಹೊರಹೋಗುವ ಮೊದಲು ಸಾವಿರಾರು ಓಝೋನ್ ಅಣುಗಳನ್ನು ಛಿದ್ರಗೊಳಿಸುತ್ತವೆ. CFC ಅಣುಗಳು ದೀರ್ಘಾಯುಸ್ಸನ್ನು ಹೊಂದಿರುವುದರಿಂದ ಅವು ಚೇತರಿಸಿಕೊಳ್ಳಲು ದಶಕಗಳಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತವೆ. ಒಂದು CFC ಅಣು, ಭೂಮಿಯಿಂದ ಮೇಲ್ಭಾಗದ ವಾಯುಮಂಡಲಕ್ಕೆ ತಲುಪಲು ಸುಮಾರು 15 ವರ್ಷ ತೆಗೆದುಕೊಳ್ಳುತ್ತದೆ. ನಂತರ ಅಲ್ಲಿ ಸುಮಾರು ಒಂದು ಸಾವಿರ ಓಝೋನ್ ಅಣುಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಶತಮಾನಗಳಷ್ಟು ಕಾಲ ಅದು ಅಲ್ಲಿಯೇ ಬಾಳಬಹುದು ಎಂದು ಅಂದಾಜಿಸಲಾಗಿದೆ.[೧೫]

ಅವಲೋಕನಗಳ ಪರಿಶೀಲನೆ

[ಬದಲಾಯಿಸಿ]

CFCಗಳು ಹೊರಸೂಸುವ ಮಾನವಜನ್ಯ ಹ್ಯಾಲೋಜೆನ್ ಸಂಯುಕ್ತಗಳ ಹೆಚ್ಚಳವೇ ಓಝೋನ್ ಸವಕಳಿಗೆ ಕಾರಣ ಎಂದು ನಿರೂಪಿಸಲು ವಿಜ್ಞಾನಿಗಳು ಸಂಕೀರ್ಣ ರಾಸಾಯನಿಕ ವರ್ಗಾವಣೆ ಮಾದರಿ ಬಳಸಿಕೊಂಡಿದ್ದಾರೆ. ಈ ಮಾದರಿಗಳು ವೈಜ್ಞಾನಿಕ ವೀಕ್ಷಣೆಯ ಅಂಕಿಅಂಶಗಳೊಂದಿಗೆ ತರ್ಕಬದ್ಧವಾಗಿವೆ (ಉದಾ. SLIMCAT Archived 2006-06-02 ವೇಬ್ಯಾಕ್ ಮೆಷಿನ್ ನಲ್ಲಿ., CLaMS). ಉಪಗ್ರಹಗಳ ಮೂಲಕ ಇವುಗಳ ಆಗುಹೋಗುಗಳನ್ನು ಅಳತೆ ಮಾಡಲಾಗುತ್ತದೆ. ರಾಸಾಯನಿಕಗಳ ಸಂಯುಕ್ತದ ಬಗ್ಗೆ ಅವುಗಳನ್ನು ಅಂದಾಜಿಸಲಾಗುತ್ತದೆ. ಹವಾಮಾನ ವಿಭಾಗದ ಪ್ರಯೋಗಾಲಯಗಳಲ್ಲಿ ರಾಸಾಯನಿಕ ಪರಿಣಾಮಗಳನ್ನು ಕಂಡುಹಿಡಿದು ಓಝೋನ್ ಪದರಿನ ಮೇಲಾಗುವ ಪ್ರಭಾವಗಳನ್ನು ಹಂತಹಂತವಾಗಿ ಸಂಗ್ರಹಿಸಲಾಗುತ್ತದೆ. ಇದೇ ಮಾದರಿಗಳನ್ನು ಮುಂದೆ ಇಡಲಾಗುತ್ತದೆ. ಅವು ಪ್ರಮುಖ ರಾಸಾಯನಿಕ ಕ್ರಿಯೆಗಳನ್ನಲ್ಲದೆ CFC ದ್ಯುತಿವಿಭಜನೆ ಉತ್ಪನ್ನಗಳನ್ನು ಓಝೋನ್‌ ಸಂಪರ್ಕಕ್ಕೆ ತರುವ ಕಾರ್ಯವನ್ನೂ ಗುರುತಿಸಲು ಸಮರ್ಥವಾಗಿರುತ್ತವೆ.

ಓಝೋನ್ ರಂಧ್ರ ಮತ್ತು ಕಾರಣಗಳು

[ಬದಲಾಯಿಸಿ]
ಉತ್ತರ ಅಮೇರಿಕಾದಲ್ಲಿ 1984ರಲ್ಲಿ (ಅತೀ ಹೆಚ್ಚಿನ ಬೆಚ್ಚಗಿನ ವಾತಾವರಣದಿಂದಾಗಿ ಓಝೋನ್ ಸವಕಳಿ ಕಡಿಮೆಯಾಯಿತು) ಮತ್ತು 1997ರಲ್ಲಿ (ವಿಪರೀತ ಶೀತದಿಂದಾಗಿ ಆ ಸಂದರ್ಭದಲಿ ಸವಕಳಿ ಹೆಚ್ಚಾಯಿತು) ಇದ್ದ ಓಝೋನ್ ರಂಧ್ರ. ಮೂಲ: NASA[೧೬]

ಅಂಟಾರ್ಕಟಿಕ್ ಓಝೋನ್ ರಂಧ್ರವು ಅಂಟಾರ್ಕಟಿಕ್ ವಾಯುಮಂಡಲದಲ್ಲಿನ ಒಂದು ಭಾಗ, ಅದರಲ್ಲಿ 1975ಕ್ಕಿಂತ ಮೊದಲಿದ್ದ ಓಝೋನ್‌ನ ಇತ್ತೀಚಿನ ಮಟ್ಟವು 33%ನಷ್ಟು ನಾಶವಾಗಿದೆ. ಓಝೋನ್ ರಂಧ್ರವು ಸಪ್ಟೆಂಬರ್‌ನಿಂದ ಆರಂಭಿಕ ಡಿಸೆಂಬರ್‌ನವರೆಗಿನ ವಸಂತಕಾಲದಲ್ಲಿ ಅಂಟಾರ್ಕಟಿಕ್‌‌ನಲ್ಲಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪಶ್ಚಿಮದಿಂದ ಬೀಸುವ ಪ್ರಬಲ ಮಾರುತ ಸುತ್ತುವರಿಯಲು ಪ್ರಾರಂಭಿಸಿ ವಾಯುಮಂಡಲದಲ್ಲಿ ಪ್ರತಿರೋಧವನ್ನು ಸೃಷ್ಟಿಸುತ್ತದೆ. ಈ ಧ್ರುವ ಸುಳಿಗಾಳಿಯಿಂದಾಗಿ ಅಂಟಾರ್ಕಟಿಕ್ ವಸಂತಕಾಲದಲ್ಲಿ ವಾಯುಮಂಡಲದ ಕೆಳಭಾಗದ ಓಝೋನ್‌ನ 50%ನಷ್ಟು ನಾಶವಾಗುತ್ತದೆ.[೧೭]

ಮೇಲಿನಂತೆ, ಓಝೋನ್ ಸವಕಳಿಗೆ ಕ್ಲೋರಿನ್-ಹೊಂದಿರುವ ಮೂಲ ಅನಿಲಗಳ ಅಸ್ತಿತ್ವವೇ ಪ್ರಾಥಮಿಕ ಕಾರಣ (ಪ್ರಾಥಮಿಕವಾಗಿ CFCಗಳು ಮತ್ತು ಸಂಬಂಧಿತ ಹಾರ್ಡೊಕಾರ್ಬನ್‌ಗಳು). UV ಬೆಳಕಿನ ಅಸ್ತಿತ್ವದಿಂದ ಈ ಅನಿಲಗಳು ವಿಭಜನೆಯಾಗಿ ಕ್ಲೋರಿನ್ ಪರಮಾಣುಗಳನ್ನು ಬಿಡುಗಡೆಗೊಳಿಸುತ್ತವೆ, ಅದು ನಂತರ ಓಝೋನ್ ನಾಶಕ್ಕೆ ವೇಗವರ್ಧಕವಾಗಿ ಕಾರ್ಯಮಾಡುತ್ತದೆ. Cl-ವೇಗವರ್ಧಕದಿಂದ ಓಝೋನ್ ಸವಕಳಿಯು ಅನಿಲ ರೂಪದಲ್ಲಿ ಆಗುತ್ತದೆ, ಆದರೆ ಧ್ರುವಪ್ರದೇಶ ವಾಯುಮಂಡಲದ ಮೋಡಗಳು (PSC) ಇದನ್ನು ಅಧಿಕಗೊಳಿಸಲು ಕಾರಣವಾಗುತ್ತವೆ.[೧೮]

ಈ ಧ್ರುವ ವಾಯುಮಂಡಲದ ಮೋಡಗಳು ಕೊರೆಯುವ ಚಳಿಗಾಲದ ತೀಕ್ಷ್ಣ ಶೀತದಲ್ಲಿ ಉಂಟಾಗುತ್ತವೆ. ಧ್ರುವ ಪ್ರದೇಶದ ಚಳಿಗಾಲವು 3 ತಿಂಗಳುಗಳ ಕಾಲ ಸೂರ್ಯನ ಬೆಳಕಿಲ್ಲದೆ ಗಾಢಕತ್ತಲು ಆವರಿಸುತ್ತದೆ. ಸೂರ್ಯನ ಬೆಳಕು-ಶಾಖದ ಕೊರತೆಯು ತಾಪಮಾನ ಮತ್ತು ಧ್ರುವ ಸುಳಿಗಾಳಿ ತಡೆಗಳಲ್ಲಿ ಕುಸಿತವನ್ನುಂಟುಮಾಡುತ್ತದೆ ಹಾಗೂ ವಾತಾವರಣವನ್ನು ತಣ್ಣಗೆ ಮಾಡುತ್ತದೆ. ಈ ಅನಿಶ್ಚಿತ ತಾಪಮಾನವು -80 °C ಸುತ್ತಮುತ್ತ ಅಥವಾ ಅದಕ್ಕಿಂತ ಕೆಳಗಿರುತ್ತದೆ. ಈ ಕಡಿಮೆ ತಾಪಮಾನದಿಂದಾಗಿ ನೈಟ್ರಿಕ್ ಆಮ್ಲ (ಆಸಿಡ್) (ಪ್ರಕಾರ I PSC) ಅಥವಾ ಮಂಜುಗಡ್ಡೆಯ (ಪ್ರಕಾರ II PSC) ಅಂಶಗಳು ಮೋಡದ ರೂಪದಲ್ಲಿ ರೂಪುಗೊಳ್ಳುತ್ತವೆ. ಎರಡೂ ಪ್ರಕಾರಗಳು ಓಝೋನ್ ನಾಶಮಾಡುವ ರಾಸಾಯನಿಕ ಕ್ರಿಯೆಗಳಿಗೆ ಸದಾವಕಾಶ(!) ಒದಗಿಸಿಕೊಡುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಇಲ್ಲಿ ನಡೆಯುವ ದ್ಯುತಿರಾಸಾಯನಿಕ ಪ್ರಕ್ರಿಯೆಗಳು ಸಂಕೀರ್ಣವಾಗಿರುತ್ತವೆ ಆದರೆ ಸುಲಭವಾಗಿ ತಿಳಿವಂತವು. ವಾಯುಮಂಡಲದಲ್ಲಿ ಅತಿ ಮುಖ್ಯವಾಗಿ ಗೋಚರಿಸುವ ವಿದ್ಯಮಾನವೆಂದರೆ ಹೆಚ್ಚಿನ ಕ್ಲೋರಿನ್ ಸ್ಥಿರ "ಅನಿಲ ಕೋಶ"ದ ಸಂಯುಕ್ತಗಳಲ್ಲಿರುತ್ತದೆ, ಪ್ರಧಾನವಾಗಿ ಹೈಡ್ರೊಕ್ಲೋರಿಕ್ ಆಸಿಡ್ (HCl) ಮತ್ತು ಕ್ಲೋರಿನ್ ನೈಟ್ರೇಟ್ (ClONO2). ಅಂಟಾರ್ಕಟಿಕ್ ಚಳಿಗಾಲ ಮತ್ತು ವಸಂತಕಾಲದಲ್ಲಿ, ಧ್ರುವ ಪ್ರದೇಶದ ವಾಯುಮಂಡಲದಲ್ಲಿನ ಮೋಡದ ಕಣಗಳೊಂದಿಗಿನ ಪರಿವರ್ತನೆಗಳು ಈ "ಅನಿಲ ಕೋಶ" ಸಂಯುಕ್ತಗಳನ್ನು ನಿಷ್ಕ್ರಿಯವನ್ನಾಗಿಸುತ್ತವೆ. (Cl ಮತ್ತು ClOನ್ನು) ಪರಿವರ್ತಿಸುತ್ತವೆ. ಮೋಡಗಳೂ ಸಹ ವಾತಾವರಣದಲ್ಲಿರುವ NO2 ಅನ್ನು ನೈಟ್ರಿಕ್ ಆಸಿಡ್ ಆಗಿ ಪರಿವರ್ತಿಸಬಹುದು, ಇದು ಹೊಸದಾಗಿ ಉಂಟಾದ ClO ಅನ್ನು ClONO2 ಆಗಿ ಬದಲಾಗುವುದರಿಂದ ತಡೆಯುತ್ತದೆ.

ಅಂಟಾರ್ಕಟಿಕನ ವಸಂತಕಾಲದಲ್ಲಿ ಓಝೋನ್ ಸವಕಳಿ ಹೆಚ್ಚಾಗಲು ಸೂರ್ಯನ ಬೆಳಕಿನ ಕೊರತೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದಲ್ಲಿ PSCಗಳು ಹೇರಳವಾಗಿದ್ದರೂ ರಾಸಾಯನಿಕ ಕ್ರಿಯೆ ನಡೆಯಲು ಧ್ರುವ ಪ್ರದೇಶದಲ್ಲಿ ಸೂರ್ಯನ ಬೆಳಕಿರುವುದಿಲ್ಲ. ಇದರಿಂದಾಗಿ ರಾಸಾಯನಿಕ ಪ್ರತಿಕ್ರಿಯೆಗಳನ್ನು ತಡೆಯಲಾಗುವುದಿಲ್ಲ. ವಸಂತಕಾಲದಲ್ಲಿ ಸೂರ್ಯ ಹೊರಗೆ ಬರುತ್ತಾನೆ. ಇದರಿಂದ ದ್ಯುತಿರಾಸಾಯನಿಕ ಪ್ರತಿಕ್ರಿಯೆಗೆ ಶಕ್ತಿ ಸಿಗುತ್ತದೆ ಹಾಗೂ ಧ್ರುವ ವಾಯುಮಂಡಲದ ಮೋಡಗಳು ಕರಗಿ, ಅಡಗಿಸಿಕೊಂಡಿದ್ದ ಸಂಯುಕ್ತಗಳು ಬಿಡುಗಡೆಗೊಳ್ಳುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಏಕರೂಪದ ಅನಿಲ ಹಂತದ ಪ್ರತಿಕ್ರಿಯೆಗಳಿಂದಾಗಿ ವಾಯುಮಂಡಲದ ಮೇಲ್ಭಾಗದ ಸಣ್ಣ ಪ್ರಮಾಣದ ಓಝೋನ್ ಸವಕಳಿ ಹೊರತುಪಡಿಸಿದರೆ, ಹೆಚ್ಚಿನ ಓಝೋನ್ ನಾಶವಾಗಿರುವುದು ಕೆಳಭಾಗದ ವಾಯುಮಂಡಲದಲ್ಲಿ.[ಸೂಕ್ತ ಉಲ್ಲೇಖನ ಬೇಕು]

ವಸಂತಕಾಲದ ಕೊನೆ, ಡಿಸೆಂಬರ್‌ ಮಧ್ಯದಲ್ಲಿ ಬೆಚ್ಚನೆಯ ತಾಪಮಾನವು ಸುಳಿಗಾಳಿಯು ಶಕ್ತಿಗುಂದುವಂತೆ ಮಾಡುತ್ತದೆ. ಓಝೋನ್ ಬೆಚ್ಚಗಾದಂತೆ ಸಮೃದ್ಧ ಗಾಳಿಯು ಕೆಳ ಅಕ್ಷಾಂಶದಿಂದ ಬೀಸುವುದರಿಂದ PSCಗಳು ನಾಶಗೊಳ್ಳುತ್ತವೆ, ಓಝೋನ್ ಸವಕಳಿ ಕ್ರಿಯೆ ಅಂತ್ಯವಾಗುತ್ತದೆ ಹಾಗೂ ಓಝೋನ್ ರಂಧ್ರವೂ ಮುಚ್ಚುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಓಝೋನ್ ಪದರ ಸವಕಳಿಯ ಬಗೆಗಿನ ಆಸಕ್ತಿ

[ಬದಲಾಯಿಸಿ]

ಅಂಟಾರ್ಕಟಿಕ್ ಓಝೋನ್ ರಂಧ್ರವನ್ನು ಜಾಗತಿಕ ಓಝೋನ್ ಸವಕಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಪ್ರತಿ ದಶಕಕ್ಕೆ ಸುಮಾರು 4%ನಷ್ಟು, ಆದರೆ ರಂಧ್ರವು ಹೆಚ್ಚಿನ ಆಸಕ್ತಿಯನ್ನು ಸೃಷ್ಟಿಸಿದೆ ಏಕೆಂದರೆ:

  • 60 ವರ್ಷಗಳ ಅವಧಿಯಲ್ಲಿ ಸರಿಸುಮಾರಾಗಿ 7%ನಷ್ಟು ಓಝೋನ್ ಪದರದ ಸವಕಳಿಯಾಗುತ್ತದೆ ಎಂದು 1980ರ ಆರಂಭದಲ್ಲಿ ಭವಿಷ್ಯ ನುಡಿಯಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
  • ಭಾರಿಗಾತ್ರದ "ರಂಧ್ರ"ವಿದೆ ಎಂಬುದು 1985ರಲ್ಲಿ ದಿಢೀರ್ ಗುರುತಿಸಿಕೊಂಡು, ಹೆಚ್ಚು ಸುದ್ದಿಯಾಯಿತು. ಅಂಟಾರ್ಕಟಿಕ್‌ನಲ್ಲಿನ ತೀವ್ರ ಓಝೋನ್ ಸವಕಳಿಯನ್ನು ಮೊದಲು ಮಾಪನ ದೋಷವೆಂದು ತಳ್ಳಿಹಾಕಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
  • ಅನೇಕರು[ಸೂಕ್ತ ಉಲ್ಲೇಖನ ಬೇಕು] ಓಝೋನ್ ರಂಧ್ರಗಳು ಪ್ರಪಂಚದ ಇತರ ಪ್ರದೇಶಗಳಲ್ಲೂ ಕಾಣಿಸಲು ಆರಂಭವಾಗಬಹುದು ಎಂದು ಚಿಂತೆಗೊಳಗಾಗಿದ್ದರು, ಆದರೆ ಇಂದಿನವರೆಗೆ ಬೇರೆ ದೊಡ್ಡ ಪ್ರಮಾಣದ ಸವಕಳಿ ಎಂದರೆ ಉತ್ತರ ಧ್ರುವದಲ್ಲಿ ಆರ್ಕಟಿಕ್ ವಸಂತಕಾಲದಲ್ಲಿ ಕಂಡುಬಂದ ಓಝೋನ್ "ಸಣ್ಣ ಕುಳಿ" ಮಾತ್ರ. ಮಧ್ಯ ಅಕ್ಷಾಂಶದಲ್ಲಿನ ಓಝೋನ್ ಕ್ಷೀಣಿಸಿದೆ ಆದರೆ ಅತೀ ಕಡಿಮೆ ಪ್ರಮಾಣದಲ್ಲಿ (ಸುಮಾರು 4–5%ನಷ್ಟು ಸವಕಳಿ).
  • ಪರಿಸ್ಥಿತಿಯು ಹೆಚ್ಚು ಗಂಭೀರವಾದರೆ (ವಾಯುಮಂಡಲ ತಾಪಮಾನದ ಇಳಿಕೆ, ವಾಯುಮಂಡಲ ಮೋಡಗಳ ಹೆಚ್ಚಳ, ಹೆಚ್ಚು ಕ್ರಿಯಾಶೀಲ ಕ್ಲೋರಿನ್), ಒಟ್ಟಾರೆ ಓಝೋನ್ ಬಹಳ ವೇಗದಲ್ಲಿ ಇಳಿಮುಖವಾಗಬಹುದು. ಪ್ರಮಾಣಿತ ಗುಣಮಟ್ಟ ಆಧಾರಿತ ಜಾಗತಿಕ ತಾಪಮಾನ ಏರಿಕೆ ಸಿದ್ಧಾಂತವು, ಮುಂಬರುವ ದಿನಗಳಲ್ಲಿ ವಾಯುಮಂಡಲ ತಣ್ಣಗಾಗುತ್ತದೆ ಎಂದು ಹೇಳುತ್ತದೆ.[೧೯]
  • ಅಂಟಾರ್ಕಟಿಕ್ ಓಝೋನ್ ರಂಧ್ರ ಭೇದಿಸಲ್ಪಟ್ಟರೆ ಓಝೋನ್ ಭಾಗದ ಸವಕಳಿಯಾದ ಗಾಳಿಯು ನಿಧಾನವಾಗಿ ಹತ್ತಿರದ ಪ್ರದೇಶಗಳಿಗೂ ವ್ಯಾಪಿಸುತ್ತದೆ. ಅಂಟಾರ್ಕಟಿಕ್‌ನ ಓಝೋನ್ ರಂಧ್ರವು ಛಿದ್ರಗೊಂಡ ತಿಂಗಳಲ್ಲಿ ಓಝೋನ್ ಸವಕಳಿ ಪ್ರಮಾಣ 10%ನಷ್ಟು ಎಂದು ನ್ಯೂಜಿಲ್ಯಾಂಡ್ ವರದಿ ಮಾಡಿದೆ.

ಓಝೋನ್ ಪದರ ಸವಕಳಿಯ ದುಷ್ಪರಿಣಾಮಗಳು

[ಬದಲಾಯಿಸಿ]

ಓಝೋನ್ ಪದರು ಸೂರ್ಯನಿಂದ ಬರುವ UVB ನೇರಳಾತೀತ ಬೆಳಕನ್ನು ಹೀರಿಕೊಳ್ಳುವುದರಿಂದ ಸವಕಳಿಯು UVB ಮಟ್ಟವನ್ನು ಹೆಚ್ಚಿಸುತ್ತದೆ. ಇದು ಚರ್ಮ(ಅರ್ಬುದ) ಕ್ಯಾನ್ಸರ್‌, ಕಣ್ಣು ಪೊರೆ ನಾಶ ಮೊದಲಾದ ಹಾನಿಗಳನ್ನುಂಟುಮಾಡಬಹುದು. ಇದು ಮಾಂಟ್ರಿಯಲ್ ಶಿಷ್ಟಾಚಾರ ನಿಯಮದ ಅಸ್ತಿತ್ವಕ್ಕೆ ಕಾರಣ. ವಾಯುಮಂಡಲದ ಓಝೋನ್ ಕ್ಷಯಿಸುವಿಕೆಗೆ ಮೂಲ ಕಾರಣ CFC ಸಂಯುಕ್ತಗಳು.ಈ ಓಝೋನ್ ಕುಂದುವಿಕೆಯು UVB ಮಟ್ಟವನ್ನು ಏರಿಸುತ್ತದೆ ಎಂದು ನಂಬಲು ಪರಿಣಾಮಕಾರಿ ಸೈದ್ಧಾಂತಿಕ ಕಾರಣಗಳಿವೆ. ಆದರೆ ಓಝೋನ್ ಸವಕಳಿಯಿಂದಾಗಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಚರ್ಮ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಯಾವುದೇ ನೇರ ವೈಜ್ಞಾನಿಕ ವೀಕ್ಷಣೆಯ ಆಧಾರಗಳಿಲ್ಲ. ಇದಕ್ಕೆ ಭಾಗಶಃ ಕಾರಣವೆಂದರೆ UVA, ಇದು ಕೆಲವು ರೀತಿಯಲ್ಲಿ ಚರ್ಮ ಕ್ಯಾನ್ಸರ್‌ಗೆ ಕಾರಣವಾಗಿದೆ, ಇದು ಓಝೋನ್‌ನಿಂದ ಹೀರಲ್ಪಡುವುದಿಲ್ಲ. ಜನಸಾಮಾನ್ಯರ ಜೀವನಶೈಲಿಯ ಅಂಕಿಅಂಶ ಸಂಗ್ರಹಣೆ ಮತ್ತು ನಿಯಂತ್ರಣ ಅಸಾಧ್ಯವಾದುದು.

ಹೆಚ್ಚಿದ UV(ನೇರಳಾತೀತ ಕಿರಣ)

[ಬದಲಾಯಿಸಿ]

ಭೂಮಿಯ ವಾತಾವರಣದಲ್ಲಿನ ಅಲ್ಪಭಾಗವಾದ ಓಝೋನ್ UVB ವಿಕಿರಣವನ್ನು ಹೆಚ್ಚಿನ ಪ್ರಮಾಣದ ಹೀರುವಿಕೆಗೆ ಕಾರಣವಾಗಿರುತ್ತದೆ. ಓಝೋನ್ ಮೂಲಕ ಹಾದುಬರುವ UVB ವಿಕಿರಣದ ಪ್ರಮಾಣವು ಪದರದ ದಪ್ಪ/ಸಾಂದ್ರತೆಯ ಆಧಾರದ ಮೇಲೆ ಕಡಿಮೆಯಾಗುತ್ತದೆ. ಹಾಗಾಗಿ, ವಾತಾವರಣದ ಓಝೋನ್ ಸವಕಳಿಯಿಂದಾಗಿ ಭೂಮಿಯಲ್ಲಿ UVB ಮಟ್ಟವು ಗಮನಾರ್ಹವಾಗಿ ಏರಿಕೆಯಾಗುತ್ತದೆ.

ಓಝೋನ್ ರಂಧ್ರದಿಂದಾಗಿರುವ UVB ಮಟ್ಟದಲ್ಲಿನ ಹೆಚ್ಚಳವನ್ನು ವಿಕಿರಣ ವರ್ಗಾವಣೆ ಮಾದರಿ ಲೆಕ್ಕಾಚಾರದಿಂದ ಭಾಗಶಃ ಊಹಿಸಬಹುದು. ಆದರೆ ತೀರ ಇತ್ತೀಚಿನ UV ಮಟ್ಟ ವೀಕ್ಷಣೆ ಅಳೆತೆಯ ಯೋಜನೆಗಳು ಅಸ್ತಿತ್ವದಲ್ಲಿದ್ದರೂ (ಉದಾ. ನ್ಯೂಜಿಲ್ಯಾಂಡ್‌ನಲ್ಲಿ) UV ಮಟ್ಟದ ಬಗೆಗಿನ ಖಾತರಿಯಿರುವ ಐತಿಹಾಸಿಕ (ಹಿಂದಿನ-ಓಝೋನ್-ರಂಧ್ರ) ದತ್ತಾಂಶದ ಕೊರತೆಯಿರುವುದರಿಂದ ನೇರ ಮಾಪನಗಳಿಂದ ನಿರ್ದಿಷ್ಟವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ.[೨೦]

ಇದಕ್ಕೆ ಕಾರಣ UV ವಿಕಿರಣವು ಓಝೋನ್ ಪದರದಲ್ಲಿ (ಆಮ್ಲಜನಕ) O2ನಿಂದ ಓಝೋನ್‌ ಅನ್ನು ರಚಿಸುವುದು. ವಾಯುಮಂಡಲದ ಓಝೋನ್ ಸವಕಳಿ ಕೆಳಮಟ್ಟದಲ್ಲಿ (ಹವಾಗೋಲದಲ್ಲಿ) ಓಝೋನ್‌ನ ದ್ಯುತಿರಾಸಾಯನಿಕ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಉತ್ಪತ್ತಿಯಾದ ಓಝೋನ್ ಸ್ವಾಭಾವಿಕವಾಗಿ ಕಡಿಮೆ ದ್ಯುತಿರಾಸಾಯನಿಕ ಕಾಲಾವಧಿ ಹೊಂದಿರುತ್ತದೆ ಆದ್ದರಿಂದ ಸಾಂದ್ರತೆಯು ಓಝೋನ್ ಸವಕಳಿಯ ಹೆಚ್ಚಳ ಸರಿದೂಗಿಸುವ ಹಂತ ತಲುಪುವ ಮೊದಲೇ ಇದು ನಾಶವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

UV ಏರಿಕೆಯಿಂದಾಗುವ ಜೈವಿಕ ಪರಿಣಾಮಗಳು ಮತ್ತು ಓಝೋನ್ ಪದರ ಸವಕಳಿಯಿಂದ ಮೈಕ್ರೋವೇವ್ ಕಿರಣಗಳು

[ಬದಲಾಯಿಸಿ]

UV ಕಿರಣಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದು ಓಝೋನ್ ರಂಧ್ರದ ಬಗ್ಗೆ ಇರುವ ಪ್ರಮುಖ ಸಾರ್ವಜನಿಕ ಕಳವಳ. ಹೆಚ್ಚಿನ ಪ್ರದೇಶಗಳಲ್ಲಿ ಇದುವರೆಗೆ ಆದ ಓಝೋನ್ ಸವಕಳಿಯು ಮೇಲೆ ಸೂಚಿಸಿದ ಅಂಕಿಅಂಶಗಳು ಕೆಲವು ಪ್ರತಿಶತ ಮಾತ್ರ. ಇಲ್ಲಿಯತನಕ ಅಕ್ಷಾಂಶ ಸಮೀಪದ ಪ್ರದೇಶದಲ್ಲಿ ಆರೋಗ್ಯ ಹಾನಿಯ ಯಾವುದೇ ನೇರ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ ಓಝೋನ್ ರಂಧ್ರದಲ್ಲಿ ಹೆಚ್ಚಿನ ಪ್ರಮಾಣದ ಸವಕಳಿಯು ಕಂಡುಬರುತ್ತಿದೆ, ಇದು ಇಂದಿಗೂ ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ. ಇದರ ಪ್ರಭಾವ ಹೆಚ್ಚು ವಿಸ್ತೃತ ರೂಪದಲ್ಲಿ ಪರಿಣಾಕಾರಿಯಾಗಿರುತ್ತದೆ. ಅಂಟಾರ್ಕಟಿಕಾದ ಓಝೋನ್ ರಂಧ್ರವು ಕೆಲವು ನಿದರ್ಶನಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ ದಕ್ಷಿಣ ಭಾಗಗಳನ್ನು ತಲಪುವಷ್ಟು ಬೆಳೆದುದುರಿಂದ, ಪರಿಸರತಜ್ಞರು UV ಮಟ್ಟವು ಭೂಮಿ ಮೇಲ್ಮೈಯಲ್ಲಿ ಗಮನಾರ್ಹವಾಗಿ ಏರಬಹುದು ಎಂದು ಆತಂಕಗೊಂಡರು.[ಸೂಕ್ತ ಉಲ್ಲೇಖನ ಬೇಕು]

ಓಝೋನ್ ಪದರ ಸವಕಳಿಯಿಂದ ಮಾನವನ ಮೇಲಾಗುವ ಪರಿಣಾಮಗಳು

[ಬದಲಾಯಿಸಿ]

UVB ಅನ್ನು (ಅಧಿಕ ಶಕ್ತಿಯ UV ವಿಕಿರಣವನ್ನು ಓಝೋನ್ ಹೀರಿಕೊಳ್ಳುತ್ತದೆ) ಚರ್ಮ ಕ್ಯಾನ್ಸರ್‌ಗೆ ಬಹುಪಾಲು ಕೊಡುಗೆ ನೀಡುವ ಅಥವಾ ಕಾರಣವಾದ ಅಂಶ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಅದಲ್ಲದೇ, UV ಹೆಚ್ಚಳ, ಹವಾಗೋಲದ ಓಝೋನ್ ಹೆಚ್ಚಳಕ್ಕೂ ಕಾರಣವಾಗುತ್ತದೆ, ಇದು ಮಾನವನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ.[ಸೂಕ್ತ ಉಲ್ಲೇಖನ ಬೇಕು] UV ಮಟ್ಟವು ಏರಿದಂತೆ ಸೂರ್ಯನ ಬೆಳಕಿನಲ್ಲಿನ ವಿಟಮಿನ್ D ಸಂಶ್ಲೇಷಣೆಯ ಸಾಮರ್ಥ್ಯವೂ ಹೆಚ್ಚುತ್ತದೆ.[೨೧]

D ವಿಟಮಿನ್‌ನ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯು ಓಝೋನ್ ಸವಕಳಿಯ ಲಾಭದಾಯಕ ಪರಿಣಾಮವಾಗಿದೆ.[೫][೬] UV ವಿಕಿರಣದ ಹೆಚ್ಚುವಿಕೆಯ ಪ್ರಯೋಜನಗಳು ಆರೋಗ್ಯದ ದೃಷ್ಟಿಯಿಂದ ಜವಾಬ್ದಾರಿ ಹೊರೆ ಹೆಚ್ಚಿಸಬಹುದು. [೭]

1. ಭೀಕರ ಚರ್ಮರೋಗದ ಕಾಯಿಲೆ (ಬೇಸಲ್ ಮತ್ತು ಸ್ಕ್ವಾಮಸ್ ಸೆಲ್ ಕಾರ್ಸಿನೋಮ) -- ಮಾನವನಲ್ಲಿ ಹೆಚ್ಚಾಗಿ ಕಂಡುಬರುವ ಚರ್ಮದ ಕ್ಯಾನ್ಸರ್. ಬೇಸಲ್ ಮತ್ತು ಸ್ಕ್ವಾಮಸ್ ಸೆಲ್ ಕಾರ್ಸಿನೋಮವು UVBಗೆ ಹೆಚ್ಚು ಒಡ್ಡುವುದರಿಂದ ಬರುತ್ತದೆ. ಈ ಕ್ಯಾನ್ಸರ್‌ಗಳನ್ನು UVB ಹೇಗೆ ತರುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು - DNA ಅಂಶಗಳು UVB ವಿಕಿರಣವನ್ನು ಹೀರಿಕೊಳ್ಳುವುದರಿಂದ ಡೈಮರ್‌ಗಳನ್ನು ಉತ್ಪತ್ತಿಮಾಡುವ ಪಿರಮಿಡೀನ್ ಮೂಲದ ಅಂಗಗಳ ರಚನೆಗೆ ಕಾರಣವಾಗುತ್ತದೆ. ಇದು DNA ನಕಲು ಮಾಡುವಾಗ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಕ್ಯಾನ್ಸರ್‌ಗಳು ಸೌಮ್ಯವಾಗಿರುತ್ತವೆ, ಹೆಚ್ಚು ಅಪಾಯಕಾರಿಯಲ್ಲ ಅಪರೂಪಕ್ಕೊಮ್ಮೆ ಮಾರಣಾಂತಿಕವಾಗಬಲ್ಲವು. ಆದರೂ ಕೆಲವೊಮ್ಮೆ ಸ್ಕ್ವಾಮಸ್ ಸೆಲ್ ಕಾರ್ಸಿನೋಮದ ಪುನರ್ರಚನಾ ಚಿಕಿತ್ಸೆಗೆ ಭಾರೀ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಈ ರೋಗದ ದತ್ತಾಂಶವನ್ನು ಪ್ರಾಣಿ ಅಧ್ಯಯನದ ಫಲಿತಾಂಶದೊಂದಿಗೆ ವಿಜ್ಞಾನಿಗಳು ತುಲನೆ ಮಾಡಿದ್ದಾರೆ. ವಾಯುಮಂಡಲದ ಓಝೋನ್‌ನಲ್ಲಿ ಒಂದು ಪ್ರತಿಶತ ಸವಕಳಿಯು ಈ ಕ್ಯಾನ್ಸರ್‌ಗಳ ಪ್ರಮಾಣವನ್ನು 2%ನಷ್ಟು ಹೆಚ್ಚಿಸುತ್ತದೆ ಎಂದು ಅಂದಾಜಿಸಿದ್ದಾರೆ. .[೨೨]

2 ಮಾರಣಾಂತಿಕ ಮೆಲನೋಮ -- ಮತ್ತೊಂದು ರೀತಿಯ ಚರ್ಮ ಕ್ಯಾನ್ಸರ್. ಇದು ಸಾಮಾನ್ಯವಾಗಿ ಅತಿ ವಿರಳವಾಗಿ ಕಂಡುಬರುತ್ತದೆ ಆದರೆ ಈ ರೋಗದ ಲಕ್ಷಣಗಳು ಕಂಡುಬಂದವರಲ್ಲಿ ಸುಮಾರು 15% - 20%ರಷ್ಟು ಸಾವಿಗೆ ಬಲಿಯಾಗಬಹುದು. ಮಾರಣಾಂತಿಕ ಮೆಲನೋಮ ಮತ್ತು ನೇರಳಾತೀತ ಕಿರಣಗಳಿಗೆ ಒಡ್ಡುವಿಕೆಯ ನಡುವಿನ ಸಂಬಂಧ ಇದುವರೆಗೆ ತಿಳಿದಿಲ್ಲ, ಆದರೆ ಈ ಕಾಯಿಲೆಗೆ UVB ಮತ್ತು UVA ಇವೆರಡೂ ಕಾರಣವಾಗಿವೆ ಎಂಬುದಂತೂ ನಿಜ. ಒಟ್ಟಿನಲ್ಲಿ 90ರಿಂದ 95%ನಷ್ಟು ಮಾರಣಾಂತಿಕ ಮೆಲನೋಮವು UVA ಮತ್ತು ಕಣ್ಣಿಗೆ ಕಾಣುವ ವಿಕಿರಣದಿಂದ ಬರುತ್ತದೆ ಎಂದು ಮೀನುಗಳ ಮೇಲೆ ಮಾಡಿದ ಪ್ರಯೋಗದಿಂದ ತಿಳಿದುಬಂದಿದೆ[೨೩] ಅಲ್ಲದೆ ಅಪಾಸಮ್ ಪ್ರಾಣಿಯ ಮೇಲೆ ಮಾಡಿದ ಪ್ರಯೋಗಗಳು UVBನ ಬಗ್ಗೆ ಹೆಚ್ಚಿನ ಪ್ರಮಾಣದ ಬೆಳಕು ಚೆಲ್ಲಿ[೨೨] ವಿವರಿಸುತ್ತವೆ.[೨೨] ಈ ಅನಿಶ್ಚಿತತೆಯಿಂದಾಗಿ,ಓಝೋನ್ ಸವಕಳಿಯ ಪರಿಣಾಮವೇ ಮೆಲನೋಮ ರೋಗಕ್ಕೆ ಕಾರಣ ಎಂದು ಅಂದಾಜು ಮಾಡುವುದು ಬಹಳ ಕಷ್ಟಕರ. ಕಿರಣ UVB ವಿಕಿರಣದಲ್ಲಿ 10%ಅಧಿಕತೆ ಕಂಡು ಬಂದರೆ ಪುರುಷರಲ್ಲಿ 19% ಹಾಗೂ ಮಹಿಳೆಯರಲ್ಲಿ 16%ನಷ್ಟು ಮೆಲನೋಮಸ್ ರೋಗದ ಪ್ರಮಾಣ ಹೆಚ್ಚಿಸುತ್ತದೆ ಎಂದು ಒಂದು ಅಧ್ಯಯನ ಹೇಳುತ್ತದೆ.[೨೪] ಚಿಲಿಯ ದಕ್ಷಿಣ ಭಾಗದಲ್ಲಿರುವ ಪುಂತ ಅರೆನಾಸ್‌ನ ಜನರ ಬಗೆಗಿನ ಏಳು ವರ್ಷಗಳ ಅಧ್ಯಯನವು ಓಝೋನ್ ಸವಕಳಿ ಹಾಗೂ UVB ಮಟ್ಟದಲ್ಲಿನ ಏರಿಕೆಯಿಂದಾಗಿ ಮೆಲನೋಮ ಸಹಿತ 56% ಮತ್ತು ಮೆಲನೋಮ-ರಹಿತ ಚರ್ಮ ಕ್ಯಾನ್ಸರ್‌ನಲ್ಲಿ 46%ನಷ್ಟು ಹೆಚ್ಚಳ ತೋರಿಸಿದೆ.[೨೫]

3 ಕಣ್ಣಿನ ಮಸೂರವು ಅಪಾರದರ್ಶಕವಾಗಿ ಕಣ್ಣು ಕಾಣದಂತಾಗುವುದು (ಕೋರ್ಟಿಕಲ್ ಕ್ಯಾಟರಾಕ್ಟ್ಸ್ ) -- ಕಣ್ಣಿನ ಕೋರ್ಟಿಕಲ್ ಕ್ಯಾಟರಾಕ್ಟ್ಸ್ಕೆಟರ್ಯಾಕ್ಟ್ ಮತ್ತು UV-B ನಡುವಿನ ಸಂಬಂಧವನ್ನು ಅದಕ್ಕೆ ಒಡ್ಡಿದ ಅಂದಾಜಿನ ಮೇಲೆ ಮತ್ತು ವಿವಿಧ ರೀತಿಯ ಕ್ಯಾಟರಾಕ್ಟ್ಸ್ ನಿರ್ಧರಿಸುವ ತಂತ್ರಗಳ ಸಹಾಯದಿಂದ ಮಾಡಿದ ಅಧ್ಯಯನವು ವಿವರಿಸುತ್ತದೆ. ಕಣ್ಣನ್ನು UV-Bಗೆ ಹೆಚ್ಚು ಒಡ್ಡಿರುವುದರಿಂದ ಆಗುವ ಪರಿಣಾಮಗಳ ಬಗ್ಗೆ ಚೆಸಪೀಕೆ ಬೇ ವಾಟರ್‌ಮ್ಯಾನ್‌ ತನ್ನ ಅಧ್ಯಯನದಲ್ಲಿ ವಿವರವಾಗಿ ಹೇಳಿದ್ದಾನೆ. ಈ ಕಿರಣಗಳಿಗೆ ಹೆಚ್ಚುಹೊತ್ತು ಕಣ್ಣನ್ನು ಒಡ್ಡುವುದರಿಂದ ಕೋರ್ಟಿಕಲ್ ಅಪಾರದರ್ಶಕದ(ಕಣ್ಣು ಮಸಕು)ಅಪಾಯ ಉಂಟಾಗುತ್ತದೆ[೨೬]. ಇಂದಿನವರೆಗೆ ಲಭ್ಯವಾದ ಸಾಕ್ಷ್ಯಗಳ ಪ್ರಕಾರ ಸೂರ್ಯನ ಬೆಳಕಿಗೆ ಹೆಚ್ಚಾಗಿ ದೇಹ ಒಡ್ಡುವ ಬಿಳಿ ಜನರಲ್ಲಿ ಕೋರ್ಟಿಕಲ್ ಅಪಾರದರ್ಶಕತೆಯು ಪ್ರಧಾನವಾಗಿ ಕಂಡುಬರುತ್ತದೆ. ಅಪಾಯವು ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ ಎಂದು ಬೀವರ್ ಡ್ಯಾಮ್ WIನ ಜನಸಂಖ್ಯಾ-ಆಧಾರಿತ ಅಧ್ಯಯನದ ನಂತರದ ಮಾಹಿತಿಯು ಈ ವಿಷಯವನ್ನು ಹೇಳುತ್ತದೆ. ಬೀವರ್ ಡ್ಯಾಮ್ ಪರಿಶೀಲನೆಯಲ್ಲಿ, ಪುರುಷರಿಗಿಂತ ಮಹಿಳೆಯರು ಕಡಿಮೆ ಮೈಯೊಡ್ಡುತ್ತಾರೆ ಹಾಗೂ ಯಾವುದೇ ಪ್ರತಿಕ್ರಿಯೆಗಳು ಕಂಡುಬಂದಿಲ್ಲ.[೨೭] ಆಫ್ರಿಕನ್ ಅಮೇರಿಕಾದ ಬೇರೆ ಬೇರೆ ಜನಾಂಗದಲ್ಲಿ ಇತರ ಕಣ್ಣಿನ ಕಾಯಿಲೆಗಳು ವಿವಿಧ ರೀತಿಯಲ್ಲಿ ಹಬ್ಬಿದರೂ, ಸೂರ್ಯನ ಬೆಳಕಿಗೆ ದೇಹ ಒಡ್ಡುವುದರಿಂದ ಕ್ಯಾಟರ್ಯಾಕ್ಟ್ ಬರುತ್ತದೆ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ಬಿಳಿಯರಿಗೆ ಹೋಲಿಸಿದರೆ ಕೋರ್ಟಿಕಲ್ ಅಪಾರದರ್ಶಕತೆಯು ಆಫ್ರಿಕನ್ ಅಮೇರಿಕಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.[೨೮][೨೯]

4. ಹವಾಗೋಲದ ಓಝೋನ್ ಏರಿಕೆ -- UV ಮಟ್ಟದ ಏರಿಕೆಯು ಹವಾಗೋಲದ ಓಝೋನ್‌ ಮಟ್ಟವನ್ನೂ ಹೆಚ್ಚಿಸುತ್ತದೆ. ಓಝೋನ್ ಅದರ ಪ್ರಬಲ ಕ್ಷಾರೀಯ ಆಕ್ಸಿಡೀಕಾರಕ ಗುಣಗಳಿಂದ ವಿಷಯುಕ್ತವಾಗಿರುವುದರಿಂದ ಭೂ-ಮಟ್ಟದ ಓಝೋನ್ ಸಾಮಾನ್ಯವಾಗಿ ಆರೋಗ್ಯಕ್ಕೆ ಅಪಾಯಕಾರಿ. ವಾಹನಗಳು ಹೊರಸೂಸುವ ದಹನಕಾರಿ ಅನಿಲಗಳ ಮೇಲೆ UV ವಿಕಿರಣದ ಕ್ರಿಯೆಯಿಂದಾಗಿ ಭೂಮಟ್ಟದ ಓಝೋನ್ ಉತ್ಪತ್ತಿಯಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಬೆಳೆಗಳ ಮೇಲಿನ ಪರಿಣಾಮಗಳು

[ಬದಲಾಯಿಸಿ]

UV ವಿಕಿರಣದ ಹೆಚ್ಚಳವು ಬೆಳೆಗಳ ಮೇಲೂ ಪ್ರಭಾವ ಬೀರುತ್ತದೆ. ಭತ್ತದಂತಹ ಆರ್ಥಿಕವಾಗಿ ಪ್ರಾಮುಖ್ಯತೆ ಹೊಂದಿರುವ ಹಲವಾರು ಸಸ್ಯಜಾತಿಗಳು ಸಾರಜನಕವನ್ನು ಹಿಡಿದಿಟ್ಟುಕೊಳ್ಳಲು ಅವುಗಳ ಬೇರಿನಲ್ಲಿರುವ ಸೈನೊಬ್ಯಾಕ್ಟೀರಿಯವನ್ನು ಅವಲಂಬಿಸಿರುತ್ತವೆ. ಸೈನೊಬ್ಯಾಕ್ಟೀರಿಯವು UV ಬೆಳಕಿಗೆ ಬಹಳ ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಹಾಗೂ ಅದರ ಏರಿಕೆಯು ಸಸ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.[೩೦]

ಓಝೋನ್ ರಂಧ್ರದ ವಿಷಯದಲ್ಲಿ ಸಾರ್ವಜನಿಕ ನೀತಿ-ನಿಯಮಗಳು

[ಬದಲಾಯಿಸಿ]
ಕ್ಲೋರೊಫ್ಲೋರೊಕಾರ್ಬನ್‌ಗಳು ನಿಷೇಧಿಸಲ್ಪಡದಿದ್ದರೆ ವಾಯುಮಂಡಲದ ಓಝೋನ್ ಸಾಂದ್ರತೆಯ ಬಗೆಗಿನ NASA ಯೋಜನೆಗಳು.

ಓಝೋನ್ ಪದರಕ್ಕೆ CFCಗಳು ಉಂಟುಮಾಡಿದ ಹಾನಿ ಬಗ್ಗೆ ಇದುವರೆಗೆ ಸಂಪೂರ್ಣ ತಿಳಿದಿಲ್ಲ ಹಾಗೂ ಮುಂದಿನ ದಶಕಗಳಲ್ಲೂ ತಿಳಿಯುವುದಿಲ್ಲ. ಆದರೂ ಓಝೋನ್ ಮಟ್ಟದಲ್ಲಿ ಸ್ಪಷ್ಟವಾಗಿ ಇಳಿಕೆಯಾಗುತ್ತಿರುವುದನ್ನು ಈಗಾಗಲೇ ಗಮನಿಸಲಾಗಿದೆ (ಮೇಲೆ ವಿವರಿಸಿದ ಹಾಗೆ).

ನಂತರ 1976ರಲ್ಲಿ, ಓಝೋನ್ ಸವಕಳಿಯನ್ನು ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯಧಾರಗಳು ಬೆಂಬಲಿಸುತ್ತವೆ ಎಂದು U.S. ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್ ವರದಿ ಮಾಡಿತು. ಆ ಸಮಯಕ್ಕೆ ಅಮೇರಿಕಾ ಸಂಯುಕ್ತ ಸಂಸ್ಥಾನ, ಕೆನಡಾ, ಸ್ವೀಡನ್ ಮತ್ತು ನಾರ್ವೆ ಮೊದಲಾದ ರಾಷ್ಟ್ರಗಳು ವಾಯುದ್ರವ ಸಿಂಪಡಿಸುವ ಕ್ಯಾನ್‌ಗಳಲ್ಲಿ CFCಗಳ ಬಳಕೆ ರದ್ದುಗೊಳಿಸಿದವು. ಇದು ಆರಂಭದಲ್ಲಿ ಹೆಚ್ಚು ವ್ಯಾಪಕ ನಿಯಂತ್ರಣವಿರುವ ನಿಯಮವಾಗಿತ್ತು, ಆದರೆ ರಾಜಕೀಯ ಪ್ರಭಾವ (ಹ್ಯಾಲೊಕಾರ್ಬನ್ ಉದ್ಯಮದಿಂದ ಮುಂದುವರಿದ ವಿರೋಧ ಮತ್ತು ರೀಗನ್ ಆಡಳಿತದ ಮೊದಲ ಎರಡು ವರ್ಷಗಳ ಸಂದರ್ಭದಲ್ಲಿ ಪರಿಸರ ನಿಮಯದ ಬಗೆಗೆ ಬದಲಾದ ಮನೋಭಾವನೆ) ಮತ್ತು ವೈಜ್ಞಾನಿಕ ಅಭಿವೃದ್ಧಿಗಳ (ಮೊದಲು ಅಂದಾಜು ಮಾಡಿದ ಓಝೋನ್ ಸವಕಳಿಯ ಪರಿಮಾಣವು ವಿಪರೀತವಾದುದು ಎಂದು ನ್ಯಾಶನಲ್ ಅಕಾಡೆಮಿ ಸೂಚಿಸಿತು) ಸಂಯೋಗದಿಂದಾಗಿ ನಂತರದ ವರ್ಷಗಳಲ್ಲಿ ಅದರ ಬೆಳವಣಿಗೆಯು ಕಡಿಮೆಯಾಗುತ್ತಾ ಹೋಯಿತು. ಅಮೇರಿಕಾ ಸಂಯುಕ್ತ ಸಂಸ್ಥಾನವು ವಾಯುದ್ರವ ಕ್ಯಾನ‌್‌ಗಳಲ್ಲಿ CFCಗಳ ಬಳಕೆಯನ್ನು 1978ರಲ್ಲಿ ನಿಷೇಧಿಸಿತು. ಯುರೋಪಿಯನ್ ಸಮುದಾಯವು ವಾಯುದ್ರವ ಸಿಂಪಡಿಸುವುದರಲ್ಲಿ CFCಗಳ ಬಳಕೆಯ ನಿಷೇಧವನ್ನು ನಿರಾಕರಿಸಿತು. U.S.ನಲ್ಲಿ CFCಗಳನ್ನು ತಂಪುಕಾರಿಯಾಗಿ ಮತ್ತು ಸ್ವಚ್ಛಗೊಳಿಸುವ ಸರ್ಕ್ಯುಟ್ ಬೋರ್ಡ್‌ಗಳಲ್ಲಿ ಬಳಸುವುದು ಮುಂದುವರಿಯಿತು. U.S. ವಾಯುದ್ರವ ನಿಷೇಧದ ನಂತರ ವಿಶ್ವವ್ಯಾಪಿ CFC ಉತ್ಪಾದನೆ ಕುಸಿಯಿತು, ಆದರೆ 1986ರಲ್ಲಿ ಅದು ಮತ್ತೆ 1976ರ ಮಟ್ಟಕ್ಕೆ ಹಿಂದಿರುಗಿತು. 1980ರಲ್ಲಿ DuPont ಹ್ಯಾಲೊಕಾರ್ಬನ್ ಪರ್ಯಾಯಗಳ ಸಂಶೋಧನೆ ಯೋಜನೆಗಳನ್ನು ಕೈಬಿಟ್ಟಿತು.

ಅಮೆರಿಕಾದ ಯುನೈಟೆಡ್ ಸ್ಟೇಟ್ಸ್ ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ನೈಸರ್ಗಿಕ ಸಂರಕ್ಷಣಾ ಏಜೆನ್ಸಿಯ ಆಡಳಿತಗಾರನಾಗಿ ವಿಲಿಯಮ್ ರುಕೆಲ್‌ಶೌಸ್‌ 1983ರಲ್ಲಿ ಅಧಿಕಾರ ವಹಿಸಿಕೊಂಡರು. ಆಗ US ಸರ್ಕಾರದ ಧೋರಣೆ ಬದಲಾಯಿತು. ಈ ಮೊದಲು ರುಕೆಲ್‌ಶೌಸ್‌ ಅನ್ನೆ M. ಬರ್ಫೋರ್ಡ್‌ ಈ ಏಜೆನ್ಸಿಯ ಆಡಳಿತಗಾರರಾಗಿದ್ದರು. ಈ ಬದಲಾದ ಸಂದರ್ಭದಲ್ಲಿ 1983ರಲ್ಲಿ U.S. ಸರಕಾರದ ಮನೋಭಾವನೆಯು ಮತ್ತೆ ಬದಲಾಗಲು ಆರಂಭವಾಯಿತು. ರುಕೆಲ್‌ಶೌಸ್ ಮತ್ತು ನಂತರ ಬಂದ ಲೀ ಥಾಮಸ್ ಇವರಿಬ್ಬರ ಆಡಳಿತದ ಸಂದರ್ಭದಲ್ಲಿ, EPA ಹ್ಯಾಲೊಕಾರ್ಬನ್ ನಿಯಂತ್ರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿತು. 1985ರಲ್ಲಿ ಹೆಚ್ಚಿನ ಪ್ರಮುಖ CFC ಉತ್ಪಾದಕರನ್ನೂ ಒಳಗೊಂಡಂತೆ 20 ರಾಷ್ಟ್ರಗಳು ಓಝೋನ್ ಪದರ ಸಂರಕ್ಷಣೆಯ ವಿಯೆನ್ನ ಒಪ್ಪಂದಕ್ಕೆ ಸಹಿಹಾಕಿದವು. ಇದು ಓಝೋನ್-ಸವಕಳಿ ಮಾಡುವ ಅಂಶಗಳ ಮೇಲೆ ಅಂತರಾಷ್ಟ್ರೀಯ ಮಟ್ಟದ ಚೌಕಟ್ಟಿನಲ್ಲಿ ನಿಯಂತ್ರಣ ತರುವ ಕಾರ್ಯ ಮಾಡಿತು. ಅದೇ ವರ್ಷದಲ್ಲಿ ಅಂಟಾರ್ಕಟಿಕ್ ಓಝೋನ್ ರಂಧ್ರದ ಗೋಚರತೆಯನ್ನೂ ಪತ್ತೆಹಚ್ಚಿ ಘೋಷಿಸಲಾಯಿತು. ಸಮಸ್ಯೆಯ ಬಗ್ಗೆ ಸಾರ್ವಜನಿಕರ ಜಾಗರೂಕತೆಯ ಮರುಹುಟ್ಟಿಗೆ ಇದು ಕಾರಣವಾಯಿತು. ಇದೇ ವೇಳೆಗೆ 1987ರಲ್ಲಿ 43 ರಾಷ್ಟ್ರಗಳ ಪ್ರತಿನಿಧಿಗಳು ಮೋಂಟ್ರಿಯಲ್ ಪ್ರೋಟೊಕಾಲ್‍‌ಗೆ ಸಹಿಹಾಕಿದರು. ಅದೇ ಸಮಯದಲ್ಲಿ, ಹ್ಯಾಲೊಕಾರ್ಬನ್ ಉದ್ಯಮವು ಅದರ ಸ್ಥಾನ ಬದಲಿಸಿ CFC ಉತ್ಪತ್ತಿಯನ್ನು ಮಿತಿಯಲ್ಲಿಡಲು ಪ್ರೋಟೊಕಾಲ್‌ಗೆ ಬೆಂಬಲ ನೀಡಲು ಆರಂಭಿಸಿತು. UN ಪರಿಸರ ಯೋಜನೆಯ ಮಾಜಿ ಅಧ್ಯಕ್ಷ ಡಾ. ಮೊಸ್ತಾಫ ತೋಲ್ಬ ಇದಕ್ಕೆ ಕಾರಣ ವಿವರಿಸಿದ್ದಾರೆ. ಅವರು ನ್ಯೂ ಸೈಂಟಿಸ್ಟ್‌ ಪತ್ರಿಕೆಯ 1990ರ ಜೂನ್ 30ರ ಆವೃತ್ತಿಯಲ್ಲಿ ಹೀಗೆಂದು ಉಲ್ಲೇಖಿಸಿದ್ದಾರೆ - "ಮೋಂಟ್ರಿಯಲ್ ಪ್ರೋಟೊಕಾಲ್‌ ಪೇಟೆಂಟ್ ಸ್ವಾಮ್ಯದ ರಕ್ಷಣೆಗೊಳಗಾಗದ CFCಗಳ ಬಳಕೆ ರದ್ದುಗೊಳಿಸುವ ವಿಶ್ವವ್ಯಾಪಿ ನಿಯಮ ತಂದುದರಿಂದ ರಾಸಾಯನಿಕ ಕೈಗಾರಿಕೆಯು 1987ರಲ್ಲಿ ಇದಕ್ಕೆ ಬೆಂಬಲ ನೀಡಿತು. ಇದು ಕಂಪೆನಿಗಳಿಗೆ ಹೊಸ ಮತ್ತು ಹೆಚ್ಚು ಲಾಭದಾಯಕ ಸಂಯುಕ್ತಗಳನ್ನು ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು."[೩೧][೩೧]

ಮೋಂಟ್ರಿಯಲ್‌ನಲ್ಲಿ, 1986ರಲ್ಲಿ CFCಗಳ ಉತ್ಪಾದನೆಯನ್ನು ನಿಷ್ಕ್ರಿಯೆಗೊಳಿಸಲು ಹಾಗೂ ಉತ್ಪತ್ತಿಯನ್ನು 1999ರೊಳಗೆ 50%ನಷ್ಟು ಕಡಿಮೆಗೊಳಿಸಲು ಪ್ರತಿನಿಧಿಗಳು ಒಪ್ಪಿದರು. ಓಝೋನ್ ರಂಧ್ರವು ಮಾನವನಿರ್ಮಿತ ಆರ್ಗನ್‌ಹ್ಯಾಲೋಜೆನ್‌ಗಳಿಂದ ಹೊರಬರುವ ಕ್ಲೋರಿನ್ ಮತ್ತು ಬ್ರೋಮಿನ್‌ನಿಂದ ಉಂಟಾಗುತ್ತದೆ ಎಂದು ಅಂಟಾರ್ಕಟಿಕ್ ನೀಡಿದ ಸಾಕ್ಷ್ಯಗಳಿಂದಾಗಿ ವೈಜ್ಞಾನಿಕ ಜಾಗ್ರತೆ ಹೆಚ್ಚಾಯಿತು. ಇದೇ ವೇಳೆಗೆ ಮೋಂಟ್ರಿಯಲ್ ಪ್ರೋಟೊಕಾಲ್ 1990ರಲ್ಲಿ ಲಂಡನ್‌ನಲ್ಲಿ ನಡೆದ ಸಭೆಯಲ್ಲಿ ತನ್ನ ಕಾರ್ಯವ್ಯಾಪ್ತಿ ಬಲಪಡಿಸಿತು. ಭಾಗವಹಿಸಿದ ರಾಷ್ಟ್ರಗಳು 2000ರೊಳಗೆ CFC ಮತ್ತು ಹ್ಯಾಲನ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದವು. ಆದರೆ (ಅಸ್ತಮ ಉಚ್ಛ್ವಾಸಕಗಳಂತಹ ಕೆಲವು ಅತೀಅವಶ್ಯಕ ಬಳಕೆಗಳಿಗಾಗಿ ಸ್ವಲ್ಪ ಪ್ರಮಾಣವನ್ನು ಹೊರತುಪಡಿಸಿ) ಉಳಿದ ಉತ್ಪಾದನೆಯನ್ನು ನಿಷ್ಕ್ರಿಯೆಗೊಳಿಸಲು ಒಪ್ಪಿದವು. 1992ರಲ್ಲಿ ಕೊಪೆನ್‌ಹ್ಯಾಗೆನ್‍‌ನಲ್ಲಿ ನಡೆದ ಸಭೆಯಲ್ಲಿ ನಿಷ್ಕ್ರಿಯೆಗೊಳಿಸುವ ಅವಧಿಯನ್ನು 1996ರವರೆಗೆ ವಿಸ್ತರಿಸಲಾಯಿತು.

ಕೆಲವು ಸಮಯದವೆರೆಗೆ CFCಗಳ ಬದಲಿಗೆ ಕಡಿಮೆ ಹಾನಿಕಾರಕ ಹೈಡ್ರೊ-ಕ್ಲೋರೊ-ಫ್ಲೋರೊ-ಕಾರ್ಬನ್ (HCFC) ಅನ್ನು ಬಳಸಲಾಯಿತು, ಆದರೆ HCFCಗಳ ಬಗ್ಗೆಯೂ ಕಳವಳ ಇತ್ತು. ಕೆಲವೆಡೆ CFCಗಳ ಬದಲಿಗೆ ಹೈಡ್ರೊ-ಫ್ಲೋರೊ-ಕಾರ್ಬನ್‌ಗಳನ್ನು (HFC) ಬಳಸಲಾಗುತ್ತದೆ. HFCಗಳು ಕ್ಲೋರಿನ್ ಅಥವಾ ಬ್ರೋಮಿನ್ ಹೊಂದಿರುವುದಿಲ್ಲ, ಅವು ಹಸಿರುಮನೆ ಅನಿಲಗಳನ್ನು ಹೊರಸೂಸಿದರೂ ಓಝೋನ್ ಸವಕಳಿಗೆ ಕಾರಣವಾಗುವುದಿಲ್ಲ. ಈ ಸಂಯುಕ್ತಗಳಲ್ಲಿ ಹೆಚ್ಚು ಪ್ರಮುಖ HFC-134a (R-134a)ಗಳಾಗಿವೆ. ಇದನ್ನು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೋಟಾರು ವಾಹನಗಳ ಹವಾನಿಯಂತ್ರಿತಗಳಲ್ಲಿ CFC-12 (R-12) ಬದಲಿ ಅನಿಲವಾಗಿ ಬಳಸಲಾಯಿತು. ಪ್ರಯೋಗಾಲಯದ ರಾಸಾಯನಿಕ ಪರೀಕ್ಷಕಗಳಲ್ಲಿ ಓಝೋನ್ ಸವಕಳಿ ಅಂಶಗಳ ಬದಲಿಗೆ ವಿವಿಧ ಇತರ ದ್ರಾವಕಗಳನ್ನು ಉಪಯೋಗಿಸಲಾಗುತ್ತದೆ.[೩೨]

ರಿಚಾರ್ಡ್ ಬೆನೆಡಿಕ್‌ನ (ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 1991) ಓಝೋನ್ ಡಿಪ್ಲೊಮೆಸಿ ಯು ಮೋಂಟ್ರಿಯಲ್ ಪ್ರೋಟೊಕಾಲ್ ರಚನೆಗೆ ಕಾರಣವಾದ ಸಮಾಲೋಚನೆ ಕಾರ್ಯಗಳ ಬಗ್ಗೆ ವಿವರ ನೀಡುತ್ತದೆ. ಪೈಲ್ಕೆ ಆಂಡ್ ಬೆಟ್ಸಿಲ್ - CFCಗಳಿಂದಾಗುವ ಓಝೋನ್ ಸವಕಳಿಯ ಬಗೆಗಿನ ಆರಂಭಿಕ U.S. ಸರಕಾರದ ಪ್ರತಿಕ್ರಿಯೆಗಳ ವಿಮರ್ಶೆಯನ್ನು ಇದು ಒದಗಿಸುತ್ತದೆ.

ಓಝೋನ್ ಸವಕಳಿ ಬಗ್ಗೆ ಕಳೆದ ಮತ್ತು ಪ್ರಸ್ತುತ ಘಟನೆಗಳು ಮತ್ತು ಭವಿಷ್ಯದ ನಿರೀಕ್ಷೆಗಳು

[ಬದಲಾಯಿಸಿ]
ಓಝೋನ್-ಸವಕಳಿ ಮಾಡುವ ಅನಿಲ ಪ್ರವೃತ್ತಿಗಳು

ಮೋಂಟ್ರಿಯಲ್ ಪ್ರೋಟೊಕಾಲ್‌ನ ಅಂಗೀಕಾರ ಮತ್ತು ಪ್ರಾಬಲ್ಯತೆಯಿಂದಾಗಿ, CFCಗಳ ಬಳಕೆ ಕಡಿಮೆಯಾಯಿತು ಹಾಗೂ ವಾತಾವರಣದಲ್ಲಿ ಪ್ರಮುಖ ಸಂಯುಕ್ತಗಳ ಸಾಂದ್ರತೆಯೂ ಕ್ಷೀಣಿಸುತ್ತಿದೆ. ಈ ಅಂಶಗಳು ಸ್ವಲ್ಪಸ್ವಲ್ಪವಾಗಿ ವಾತಾವರಣದಿಂದ ತೆಗೆದುಹಾಕಲ್ಪಡುತ್ತಿವೆ. 1994ರಲ್ಲಿ ವಾತಾವರಣದಲ್ಲಿ ಗರಿಷ್ಠ ಮಟ್ಟದಲ್ಲಿದ್ದ ಎಫೆಕ್ಟಿವ್ ಇಕ್ವಿವ್ಯಾಲೆಂಟ್ ಕ್ಲೋರಿನ್ (EECl) ಮಟ್ಟವು 2008ರೊಳಗೆ 10%ನಷ್ಟು ಕಡಿಮೆಯಾಯಿತು. ಮುಂಬರುವ 2015ರ ಒಳಗೆ ಅಂಟಾರ್ಕಟಿಕ್ ಓಝೋನ್ ರಂಧ್ರವು 25ರಲ್ಲಿ (ನ್ಯೂಮ್ಯಾನ್ et al. , 2004) 1 ದಶಲಕ್ಷ km²ನಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂಟಾರ್ಕಟಿಕ್ ಓಝೋನ್ ಪದರದ ಸಂಪೂರ್ಣ ಚೇತರಿಕೆಯು 2050 ಅಥವಾ ಅದಕ್ಕಿಂತ ನಂತರದ ಕೆಲವು ವರ್ಷಗಳವರೆಗೆ ಸಾಧ್ಯವಿಲ್ಲ ಎಂದು ನಿರೀಕ್ಷಿಸಲಾಗಿದೆ. ಓಝೋನ್ ಪದರದ ಗಮನಾರ್ಹ ನಷ್ಟ ಭರಿಸುವಿಕೆಯು 2024ರವರೆಗೆ ಸಾಧ್ಯವಿಲ್ಲ, ಓಝೋನ್ ಮಟ್ಟವು 1980ರ ಸಂದರ್ಭದ ಮಟ್ಟವನ್ನು 2068ರ ಸುಮಾರಿನಲ್ಲಿ ತಲುಪಬಹುದು.[೩೩] ಓಝೋನ್ ಸಾಮರ್ಥ್ಯ ಕುಂದಿಸುವ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದರಿಂದ ಬ್ರೋಮಿನ್ ಹೊಂದಿರುವ ರಾಸಾಯನಿಕಗಳ ಪ್ರಮಾಣದಲ್ಲೂ ಇಳಿಕೆಯಾಗುತ್ತದೆ. ಗಣನೀಯ ಪ್ರಮಾಣದ ನೈಸರ್ಗಿಕ ಮೂಲಗಳು ವಾತಾವರಣದಲ್ಲಿ [[ಮಿಥೈಲ್ ಬ್ರೋಮೈಡ್ (CH3Br) ರೂಪದಲ್ಲಿರುತ್ತವೆ ಎಂದು ಒಂದು ವಿವರ ಹೇಳುತ್ತದೆ.|ಮಿಥೈಲ್ ಬ್ರೋಮೈಡ್[[ (CH3Br) ರೂಪದಲ್ಲಿರುತ್ತವೆ ಎಂದು ಒಂದು ವಿವರ ಹೇಳುತ್ತದೆ.[೩೪]]]]]. CFCಗಳ ನಿಷ್ಕ್ರಿಯೆಗೊಳಿಸುವಿಕೆಯಿಂದಾಗಿ, ಮೋಂಟ್ರಿಯಲ್ ಪ್ರೋಟೊಕಾಲ್‌ನಿಂದ ನಿಯಂತ್ರಿಸಲ್ಪಡದ ನೈಟ್ರಸ್ ಆಕ್ಸೈಡ್ (N2O) ಓಝೋನ್ ಸವಕಳಿ ಹೆಚ್ಚಿಸುವ ಅಂಶ ಹೊರತಂದಿತು ಹಾಗೂ ಅದು 21ನೇ ಶತಮಾನದಲ್ಲೂ ಹಾಗೆಯೇ ಉಳಿಯುತ್ತದೆ ಎಂದುಕೊಳ್ಳಲಾಗಿದೆ.[೩೫]

2004ರ ಓಝೋನ್ ರಂಧ್ರವು 2004ರ ನವೆಂಬರ್‌ನಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಅಂಟಾರ್ಕಟಿಕ್ ನ ಕೆಳಭಾಗದ ವಾಯುಮಂಡಲದಲ್ಲಿ ಪ್ರತೀದಿನದ ಕನಿಷ್ಠ ತಾಪಮಾನವು ಧ್ರುವ ವಾಯುಮಂಡಲದ ಮೋಡಗಳ (PSC) ರಚನೆಗೆ ಪ್ರತಿಕೂಲವಾಗಿ ಸುಮಾರು 2ರಿಂದ 3 ವಾರಗಳವರೆಗೆ ಏರಿಕೆಯಾಯಿತು.[೩೬]

ಇದಕ್ಕನುಗುಣವಾಗಿ 2005ರ ಆರ್ಕಟಿಕ್ ಚಳಿಗಾಲದಲ್ಲಿ ವಾಯುಮಂಡಲ ಹೆಚ್ಚು ಶೀತವಾಗಿತ್ತು. PSCಗಳು ಅಧಿಕ ಬೆಚ್ಚಗಿನ ಕಾಲ ಬಂದು ಅವು ಚದುರಿ ಹೋಗುವವರೆಗೆ ಅಕ್ಷಾಂಶದ ಮೇಲಿನ ಪ್ರದೇಶಗಳಲ್ಲಿ ಹೇರಳವಾಗಿದ್ದವು. ಅವು ಫೆಬ್ರವರಿಯಲ್ಲಿ ಮೇಲಿನ ವಾಯುಮಂಡಲದಲ್ಲಿ ಆರಂಭವಾಗಿ, ಮಾರ್ಚ್‌ನಲ್ಲಿ ಆರ್ಕಟಿಕ್ ವಾಯುಮಂಡಲದಾದ್ಯಂತ ಹರಡುತ್ತವೆ. ಅಸಹಜವಾಗಿ ಓಝೋನ್ ಮಟ್ಟ ಕಡಿಮೆ ಇರುವ ಆರ್ಕಟಿಕ್ ಪ್ರದೇಶದ ವಿಸ್ತಾರವು 1997ರವರೆಗಿನ ಬೇರೆ ಯಾವುದೇ ವರ್ಷಗಳಿಗಿಂತ 2004-2005ರಲ್ಲಿ ವ್ಯತ್ಯಾಸವಿತ್ತು. 2004-2005ರ ಚಳಿಗಾಲದಲ್ಲಿ ಆರ್ಕಟಿಕ್ ವಲಯದಲ್ಲಿದ್ದ ಅಸಹಜ ಕಡಿಮೆ ಓಝೋನ್ ಮಟ್ಟವು ವಾಯುಮಂಡಲ ತಾಪಮಾನ ಮತ್ತು ವಾಯುಲಕ್ಷಣದ ಸ್ಥಿತಿ ಅತೀಕಡಿಮೆ ಮಟ್ಟಕ್ಕೆ ಇಳಿಯಲು ಕಾರಣವಾಯಿತು. ಇದರಿಂದ ವಾಯುಮಂಡಲದಲ್ಲಿ ಓಝೋನ್ ನಾಶಮಾಡುವ ರಾಸಾಯನಿಕಗಳ ಅಸ್ತಿತ್ವದೊಂದಿಗೆ, ಓಝೋನ್ ಸಾಮರ್ಥ್ಯ ಕುಂದುವಿಕೆ ಉಂಟಾಯಿತು.[೩೭]

ಪ್ರಪಂಚದಲ್ಲಿನ ಸರಾಸರಿ ಒಟ್ಟು ಓಝೋನ್ ಸವಕಳಿಯು ಈಗ ಸರಿಸುಮಾರಾಗಿ ಸ್ಥಿರವಾಗಿದೆ ಎಂದು ವೀಕ್ಷಣೆಗಳು ಮತ್ತು ಮಾದರಿ ಅಂದಾಜುಗಳು ಹೇಳುತ್ತವೆ ಎಂದು 2005 IPCC ಓಝೋನ್ ಸಮಸ್ಯೆಗಳ ಸಂಗ್ರಹ ಸೂಚಿಸುತ್ತದೆ. ಸವಕಳಿ ಹೆಚ್ಚಿರುವ ಧ್ರುವ ಪ್ರದೇಶಗಳನ್ನೂ ಒಳಗೊಂಡಂತೆ ಓಝೋನ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಏರಿಳಿಕೆಗಳು ಕಂಡುಬರುತ್ತಿದ್ದರೂ, ಓಝೋನ್ ಪದರವು ಮುಂದಿನ ದಶಕಗಳಲ್ಲಿ ಚೇತರಿಸಿಕೊಳ್ಳಲು ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಓಝೋನ್-ನಾಶಮಾಡುವ ಘಟಕಗಳ ಸಾಂದ್ರತೆ ಕಡಿಮೆಮಾಡುವ ಮೂಲಕ, ಸಂಪೂರ್ಣವಾಗಿ ಮೋಂಟ್ರಿಯಲ್ ಪ್ರೋಟೊಕಾಲ್‌ನ್ನು ಅನುಸರಿಸುವುದರಿಂದ ಇದು ಸಾಧ್ಯವಾಗಬಹುದು.[೩೮]

ಹಿಂದೆ 2006ರ ಆರ್ಕಟಿಕ್ ಚಳಿಗಾಲದ ತಾಪಮಾನವು ಜನವರಿ ಕೊನೆಯವರೆಗೆ ಕನಿಷ್ಠ ಸೂಚ್ಯಂಕವನ್ನು ತೋರಿಸುತ್ತಾ ದೀರ್ಘಕಾಲದವರೆಗಿತ್ತು. ಇದು PSCಗಳ ಬಿಡುಗಡೆಗೂ ಉತ್ತಮವಾಗಿತ್ತು. ಜನವರಿಯ ಕೊನೆಯ ವಾರದಲ್ಲಿ PSCಗಳ ರಚನೆಗೆ ಸಹಾಯಕವಾಗುವ ಬೆಚ್ಚಗಿನ ತಾಪಮಾನದವರೆಗೆ ಮುಂದುವರೆಯಿತು. ಮಾರ್ಚ್‌ನಲ್ಲಿ ತಾಪಮಾನ ಸಾಮಾನ್ಯ ಹಂತಕ್ಕೆ ಇಳಿಯುವಾಗ, ಆ ಸಮಯ PSC ರಚನೆಯಾಗುವ ಹಂತಕ್ಕಿಂತ ಮೇಲಿರುತ್ತದೆ.[೩೯] ಮೊದಲನೆಯ ಉಪಗ್ರಹ ಉಪಕರಣ-ರಚಿಸಿದ ಓಝೋನ್ ನಕ್ಷೆಗಳು, ಕೆಲವು ಓಝೋನ್ ಸವಕಳಿ ಘಟನೆಗಳನ್ನು ತೋರಿದ್ದರೂ, ಉತ್ತರಾರ್ಧ ಗೋಳದಲ್ಲಿ ಕಾಲೋಚಿತ ಓಝೋನ್ ಹೆಚ್ಚಳ ತೋರಿಸುತ್ತದೆ.[೪೦] ಮೊದಲು 2006ರ ಮಾರ್ಚ್‌ನಲ್ಲಿ 60 ಡಿಗ್ರಿ ಉತ್ತರ ಅಕ್ಷಾಂಶದಲ್ಲಿನ ಆರ್ಕಟಿಕ್ ವಾಯುಮಂಡಲ ಧ್ರುವದಲ್ಲಿ ಅಸಹಜ ರೀತಿಯ ಅತೀಕಡಿಮೆ ಓಝೋನ್ ಮಟ್ಟವಿತ್ತು. ಆದರೆ ಇದು ಉತ್ತರ ಅಟ್ಲಾಂಟಿಕ್ ವಲಯದ ಗ್ರೀನ್‌ಲ್ಯಾಂಡ್‌ನಿಂದ ಸ್ಕ್ಯಾಂಡಿನೇವಿಯಾದವರೆಗೆ ಒಟ್ಟು ಓಝೋನ್ ಮಟ್ಟವು 300 DUಗಿಂತ ಕಡಿಮೆಯಾಗಿತ್ತು. ಮಾರ್ಚ್ 17ರಿಂದ 19ರವರೆಗಿನ ಮೂರು ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಇದು ಕಂಡುಬಂದಿತ್ತು.[೪೧]

ಒಟ್ಟು ಓಝೋನ್ ಮಟ್ಟವು 220 DUಗಿಂತ (ಓಝೋನ್ ರಂಧ್ರದ ಅಳತೆ ತಿಳಿಸುವ ಅಧೀಕೃತ ಮಾಪನ) ಕಡಿಮೆ ಇರುವ ಪ್ರದೇಶ 2006ರ ಆಗಸ್ಟ್ 20ರವರೆಗೆ ಹೆಚ್ಚು ಕಡಿಮೆ ತುಂಬಾ ಚಿಕ್ಕದಾಗಿತ್ತು. ಅದರ ನಂತರ ಓಝೋನ್ ರಂಧ್ರ ಪ್ರದೇಶ ಹೆಚ್ಚಾಗುತ್ತಾ ಹೋಯಿತು, ಸೆಪ್ಟಂಬರ್ 24ರಲ್ಲಿದ್ದ ಗರಿಷ್ಠ ಮಿತಿ 29 ದಶಲಕ್ಷ km²ಗಳಾಗಿತ್ತು. 2006ರ ಅಕ್ಟೋಬರ್‌ನಲ್ಲಿ ನಾಸಾ ವರದಿಯಂತೆ - 2006ರ ಸೆಪ್ಟೆಂಬರ್ 7ರಿಂದ ಅಕ್ಟೋಬರ್ 13ರವರೆಗಿನ ಅವಧಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಓಝೋನ್ ರಂಧ್ರವಿತ್ತು. ಅದು ಪ್ರತಿದಿನಕ್ಕೆ ಸರಾಸರಿ 26 ದಶಲಕ್ಷ km².ಆಗಿ ಅಕ್ಟೋಬರ್ 8ರಲ್ಲಿ ಒಟ್ಟು ಓಝೋನ್ ದಟ್ಟತೆಯು 85 DUನ ಮಟ್ಟಕ್ಕೆ ಇಳಿಯಿತು. ಈ ಎರಡು ಅಂಶಗಳನ್ನು ಗಮನಿಸಿದರೆ, ದಾಖಲಾದ ಓಝೋನ್ ಸವೆತ ಇತಿಹಾಸದಲ್ಲೇ 2006ಕ್ಕೆ ಅತೀ ಕೆಳಮಟ್ಟದ ಸವಕಳಿ ತೋರಿಸುತ್ತದೆ. ಹೆಚ್ಚು ವ್ಯಾಪಕ ದಾಖಲೆಯು 1979ರಲ್ಲಿ ಆರಂಭವಾದುದರಿಂದ, ಸವಕಳಿಯು ಅಂಟಾರ್ಕಟಿಕ್ ಅತೀಕಡಿಮೆ ಮಟ್ಟದ ದಾಖಲೆಯನ್ನು ತಲುಪುವುದಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ. ಇಸವಿ 1979ರ ಸಮಗ್ರ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿತು. ಅಂಟಾರ್ಟಿಕ್ ಮೇಲಿನ ತಾಪಮಾನದ ಮೇಲೆ ಓಝೋನ್ ಸವಕಳಿಯ ದಾಖಲಾತಿ ಅದರ ಮಟ್ಟವನ್ನು ಸೂಚಿಸುತ್ತದೆ.[೪೨][೪೩]

ಈ ಮೊದಲು 2008ರ ಅಕ್ಟೋಬರ್‌ನಲ್ಲಿ ಇಕ್ವಡೋರಿಯನ್ ಸ್ಪೇಸ್ ಏಜೆನ್ಸಿಯು HIPERION ಎಂಬ ವರದಿ ಪ್ರಕಟಿಸಿತು. ಇದು 10 ಉಪಗ್ರಹಗಳಿಂದ ಮತ್ತು ಪ್ರಪಂಚದಾದ್ಯಂತ ಇರುವ ಭೂಸಾಧನಗಳಿಂದ ಕಳೆದ 28 ವರ್ಷಗಳ ವಿವರದ ಬಗೆಗಿನ ಪರಿಶೀಲನೆಯಾಗಿದೆ. ಭೂಮಧ್ಯ ರೇಖೆಯನ್ನು ತಲುಪುವ UV ವಿಕಿರಣದ ಪ್ರಮಾಣವು ನಿರೀಕ್ಷೆಗಿಂತ ಬಹಳ ಹೆಚ್ಚಿನ ಮಟ್ಟದಲ್ಲಿದೆ ಎಂದೂ ಇದು ತಿಳಿಸಿತು. ಅಧಿಕ ಜನಸಾಂದ್ರತೆಯ ನಗರಗಳಲ್ಲಿ 24 UVIನಷ್ಟಿದೆ, WHO UV ಸೂಚ್ಯಾಂಕ ಪ್ರಮಾಣಿತವು 11ರ ಪರಾಕಾಷ್ಟೆ ತಲುಪಿ ಹಾಗೂ ಅದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಗ್ರಹದ ಮೇಲಿನ ಮಧ್ಯ ಅಕ್ಷಾಂಶದಲ್ಲಿನ ಓಝೋನ್ ಸವಕಳಿಯು ಈ ಪ್ರದೇಶದಲ್ಲಿರುವ ಬೃಹತ್‌ಪ್ರಮಾಣದ ಜನರನ್ನು ಈಗಾಗಲೇ ವಿಪತ್ತಿಗೆ ಸಿಲುಕಿಸಿದೆ ಎಂದು ವರದಿ ಸೂಚಿಸುತ್ತದೆ. ನಂತರ ಪೆರುವಿಯನ್ ಸ್ಪೇಸ್ ಏಜೆನ್ಸಿ CONIDA ತನ್ನದೇ ಆದ ಪರಿಶೀಲನೆಯೊಂದನ್ನು ನಡೆಸಿತು. ಅದು ಹೆಚ್ಚುಕಡಿಮೆ ಇಕ್ವಡೋರಿಯನ್ ಪರಿಶೀಲನೆ ಶೋಧಿಸಿದ ಅಂಶಗಳನ್ನೇ ಕಂಡುಹಿಡಿಯಿತು.

ಅಂಟಾರ್ಕಟಿಕ್ ಓಝೋನ್ ರಂಧ್ರವು ದಶಕಗಳವರೆಗೂ ಮುಂದುವರಿಯಬಹುದು. ಅಂಟಾರ್ಕಟಿಕ್‌ನಾದ್ಯಂತ ಕೆಳ ವಾಯುಮಂಡಲದ ಓಝೋನ್ ಸಾಂದ್ರತೆಯು 2020ರ ವೇಳೆಗೆ 5%–10%ನಷ್ಟು ಹೆಚ್ಚಬಹುದು ಹಾಗೂ 1980ರ ಮಟ್ಟಕ್ಕೆ ಆರಂಭದ ನಿರ್ಣಯದಲ್ಲಿ ಅಂದಾಜು ಮಾಡಿದಕ್ಕಿಂತ 10–25 ವರ್ಷಗಳ ನಂತರ 2060–2075ರ ಹೊತ್ತಿಗೆ ಮರಳಬಹುದು. ವಾತಾವರಣದಲ್ಲಿ ಓಝೋನ್ ಸವಕಳಿ ಮಾಡುವ ಅಂಶಗಳ ಸಾಂದ್ರತೆಯ ಹೆಚ್ಚಳ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಭವಿಷ್ಯದಲ್ಲಿ ಮಾಡಬಹುದಾದ ಹೆಚ್ಚಿನ ಬಳಕೆಗಳು ಇದಕ್ಕೆ ಕಾರಣವಾಗಿವೆ. ಓಝೋನ್ ಸವಕಳಿ ತೀವ್ರಗೊಳಿಸುವ ಮತ್ತೊಂದು ಪ್ರಮುಖ ಅಂಶವೆಂದರೆ - ಗಾಳಿಯ ಕ್ರಮ-ಗತಿ ಬದಲಾಗುವುದರಿಂದ ವಾಯುಮಂಡಲದಲ್ಲಿ ನೈಟ್ರೋಜನ್ ಆಕ್ಸೈಡ್ ಪ್ರಮಾಣದ ಕುಸಿತ.[೪೪]

ಸಂಶೋಧನೆಯ ಇತಿಹಾಸ

[ಬದಲಾಯಿಸಿ]

ಭೂಮಿಯ ವಾಯುಮಂಡಲದಲ್ಲಿ ಓಝೋನ್ ಪದರದ ರಚನೆಗೆ ಕಾರಣವಾದ ಮೂಲ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳನ್ನು ಸಿಡ್ನಿ ಚ್ಯಾಪ್‌ಮ್ಯಾನ್ 1930ರಲ್ಲಿ ಕಂಡುಹಿಡಿದನು. ಇದನ್ನು ಓಝೋನ್-ಆಮ್ಲಜನಕ ಚಕ್ರ ಎಂಬ ಲೇಖನದಲ್ಲಿ ಚರ್ಚಿಸಲಾಗಿದೆ — ಕಡಿಮೆ ತರಂಗಾಂತರ UV ವಿಕಿರಣವು ಆಮ್ಲಜನಕದ (O2) ಅಣುವನ್ನು ಎರಡು ಆಮ್ಲಜನಕದ (O) ಪರಮಾಣುಗಳಾಗಿ ವಿಭಜಿಸುತ್ತದೆ, ಅದು ನಂತರ ಇತರ ಆಮ್ಲಜನಕ ಅಣುಗಳೊಂದಿಗೆ ಸೇರಿ ಓಝೋನ್ ರಚನೆಯಾಗುತ್ತದೆ. ಒಂದು ಆಮ್ಲಜನಕ ಪರಮಾಣು ಒಂದು ಓಝೋನ್ ಅಣುವಿನೊಂದಿಗೆ "ಪುನಃಸೇರಿದಾಗ" ಓಝೋನ್ ವಿಭಜಿಸಲ್ಪಟ್ಟು ಎರಡು ಆಮ್ಲಜನಕ ಅಣುಗಳು ಬಿಡುಗಡೆಯಾಗುತ್ತವೆ, i.e. O + O3 → 2O2. 1950ರಲ್ಲಿ ಡೇವಿಡ್ ಬೇಟ್ಸ್ ಮತ್ತು ಮಾರ್ಕೆಲ್ ನಿಕೋಲೆಟ್ ವಿವಿಧ ರೀತಿಯ ಸ್ವತಂತ್ರ ರಾಡಿಕಲ್‌ಗಳು, ನಿರ್ದಿಷ್ಟವಾಗಿ ಹೈಡ್ರೋಕ್ಸೈಲ್ (OH) ಮತ್ತು ನೈಟ್ರಿಕ್ ಆಕ್ಸೈಡ್ (NO), ಓಝೋನ್‌ನ ಸಂಪೂರ್ಣ ಮಟ್ಟ ಕಡಿಮೆಮಾಡುತ್ತಾ ಈ ಪುನಃಸೇರಿಸುವ ಕ್ರಿಯೆಯನ್ನು ತ್ವರಿತ ಮಾಡುತ್ತವೆ ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡಿದರು. ಈ ಸ್ವತಂತ್ರ ರಾಡಿಕಲ್‌ಗಳು ವಾಯುಮಂಡಲದಲ್ಲಿರುತ್ತವೆ ಆದ್ದರಿಂದ ಅವುಗಳು ನಿಸರ್ಗ ಸಮತೋಲನದ ಭಾಗವಾಗಿವೆ. ಅವುಗಳಿಲ್ಲದಿದ್ದರೆ ಓಝೋನ್ ಪದರವು ಈಗಿರುವ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚಿರುತ್ತಿತ್ತು ಎಂದು ಅಂದಾಜು ಮಾಡಲಾಗಿದೆ.

ಮಣ್ಣಿನ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಸ್ಥಿರ, ಹೆಚ್ಚುಕಾಲ ಇರುವ ಅನಿಲ ನೈಟ್ರಸ್ ಆಕ್ಸೈಡ್ (N2O) ಭೂಮಿಯ ಮೇಲ್ಮೈಯಿಂದ ಬಿಡುಗಡೆಯಾಗುವುದರಿಂದ ಇದು ವಾಯುಮಂಡಲದ ನೈಟ್ರಿಕ್ ಆಕ್ಸೈಡ್‌ನ (NO) ಮೇಲೆ ಪ್ರಭಾವ ಬೀರುತ್ತದೆ ಎಂದು 1970ರಲ್ಲಿ ಪ್ರೊಫೆಸರ್ ಪಾಲ್ ಕ್ರುಟ್ಜೆನ್ ಕಂಡುಹಿಡಿದರು. ನೈಟ್ರಸ್ ಆಕ್ಸೈಡ್ ಹೆಚ್ಚು ಕಾಲ ಇರುವುದರಿಂದ ಅದು ವಾಯುಮಂಡಲಕ್ಕೆ ತಲುಪಿ ಅಲ್ಲಿ NO ಆಗಿ ಬದಲಾಗುತ್ತದೆ ಎಂದು ಕ್ರುಟ್ಜೆನ್ ತೋರಿಸಿದರು. ಹೆಚ್ಚಿನ ಪ್ರಮಾಣದ ಪ್ರಚೋದಕಗಳ ಬಳಕೆಯಿಂದಾಗಿ ಪರಿಸರದಲ್ಲಿ ನೈಟ್ರಸ್ ಆಕ್ಸೈಡ್ ಬಿಡುಗಡೆಯು ಹೆಚ್ಚಬಹುದು, ಇದು ವಾಯುಮಂಡಲದಲ್ಲಿ NO ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬುದನ್ನೂ ಕ್ರುಟ್ಜೆನ್ ತಿಳಿಸಿದರು. ಹೀಗೆ ಮಾನವನ ಚಟುವಟಿಕೆಗಳು ವಾಯುಮಂಡಲದ ಓಝೋನ್ ಪದರದ ಮೇಲೆ ಪರಿಣಾಮ ಬೀರುತ್ತವೆ. ನಂತರದ ವರ್ಷಗಳಲ್ಲಿ, ಕೆಳ ವಾಯುಮಂಡಲದಲ್ಲಿ ಹಾರಾಡುವ ಸೂಪರ್‌ಸೋನಿಕ್ ವಿಮಾನದಿಂದ ಹೊರಹೊಮ್ಮುವ NO ಸಹ ಓಝೋನ್ ಪದರವನ್ನು ಸವಕಳಿಮಾಡುತ್ತದೆ ಎಂದು ಕ್ರುಟ್ಜೆನ್ ಮತ್ತು (ಸ್ವತಂತ್ರವಾಗಿ) ಹ್ಯರೋಲ್ಡ್ ಜೋನ್‌ಸ್ಟನ್ ತಿಳಿಸಿದ್ದಾರೆ.

ರೊಲ್ಯಾಂಡ್-ಮೋಲಿನಾ ವಿಚಾರಧಾರೆ

[ಬದಲಾಯಿಸಿ]

ಈ ಹಿಂದೆ 1974ರಲ್ಲಿ ಇರ್ವಿನ್‌ನ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ರಾಸಾಯನಿಕ ಶಾಸ್ತ್ರ ಪ್ರೊಫೆಸರ್ ಫ್ರಾಂಕ್ ಶರ್ವುಡ್ ರೊಲ್ಯಾಂಡ್ ಮತ್ತು ಅವರ ಪ್ರಯೋಗ ನಂತರದ ಸ್ನೇಹಿತ ಮರಿಯೊ J. ಮೋಲಿನ CFCಗಳಂತಹ ಅಧಿಕಾವಧಿ ಅಸ್ತಿತ್ವದಲ್ಲಿರುವ ಕಾರ್ಬನಿಕ ಹ್ಯಾಲೊಜೆನ್ ಸಂಯುಕ್ತಗಳು ಕ್ರುಟ್ಜೆನ್ ತಿಳಿಸಿದ ನೈಟ್ರಸ್ ಆಕ್ಸೈಡ್‌ ಮಾದರಿಯಲ್ಲಿಯೇ ವರ್ತಿಸುತ್ತವೆ ಎಂದು ಹೇಳಿದರು. ಜೇಮ್ಸ್ ಲವ್ಲಾಕ್ (ಗೈಯಾ ವಿಚಾರಧಾರೆಯ ಸೃಷ್ಟಿಕರ್ತ ಎಂದು ಹೆಸರುವಾಸಿಯಾದವನು) 1971ರ ದಕ್ಷಿಣ ಅಟ್ಲಾಂಟಿಕ್ ಪ್ರಯಾಣದ ಸಂದರ್ಭದಲ್ಲಿ, 1930ರಲ್ಲಿ ರಚನೆಯಾದಾಗಿನಿಂದ ಇಂದಿನವರೆಗೆ ಉತ್ಪತ್ತಿಯಾದ ಹೆಚ್ಚುಕಡಿಮೆ ಎಲ್ಲಾ CFC ಸಂಯುಕ್ತಗಳು ವಾತಾವರಣದಲ್ಲಿ ಹಾಗೇ ಉಳಿದುಕೊಂಡಿವೆ ಎಂದು ಕಂಡುಹಿಡಿದನು. N2Oನಂತೆ CFCಗಳು ವಾಯುಮಂಡಲ ತಲುಪುತ್ತವೆ ಹಾಗೂ ಅಲ್ಲಿ ಅವು UV ಬೆಳಕಿನಿಂದ ವಿಭಜಿಸಲ್ಪಟ್ಟು Cl ಪರಮಾಣುಗಳನ್ನು ಬಿಡುಗಡೆಗೊಳಿಸುತ್ತವೆ ಎಂದು ಮೋಲಿನ ಮತ್ತು ರೊಲ್ಯಾಂಡ್ ನಿರ್ಧರಿಸಿದರು. (ಓಝೋನ್ ನಾಶಪ್ರಮಾಣ ಹೆಚ್ಚಿಸುವಲ್ಲಿ NOಗಿಂತ Cl ಹೆಚ್ಚು ಅಪಾಯಕಾರಿ ಎಂದು ಮಿಚಿಗಾನ್ ವಿಶ್ವವಿದ್ಯಾನಿಲಯದಲ್ಲಿನ ರಿಚಾರ್ಡ್ ಸ್ಟೊಲಾರ್ಸ್ಕಿ ಮತ್ತು ರಾಲ್ಫ್ ಸಿಸೆರೋನ್ ತೋರಿಸಿದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮೈಕೆಲ್ ಮ್ಯಾಕ್‌ಎಲ್ರೋಯ್ ಮತ್ತು ಸ್ಟೀವನ್ ವೋಫ್ಸೈ ಅಂತಹುದೇ ಸಿದ್ಧಾಂತ ಮಂಡಿಸಿದರು. CFCಗಳು ವಾಯುಮಂಡಲದ ಕ್ಲೋರಿನ್‌ ಉತ್ಪತ್ತಿಮಾಡುವ ಅತೀ ಪ್ರಬಲ ಮೂಲಗಳು ಎಂಬುದನ್ನು ಯಾವುದೇ ತಂಡಗಳು ನಿರೂಪಿಸಲಿಲ್ಲ. ಬದಲಿಗೆ ಬಾಹ್ಯಾಕಾಶ ನೌಕೆಯಿಂದ ಬಿಡುಗಡೆಯಾಗುವ ಅತೀ ಕಡಿಮೆ ಪ್ರಮಾಣದ HCl ಪರಿಣಾಮಗಳ ಬಗ್ಗೆ ಸಂಶೋಧನೆ ಮಾಡುತ್ತಿವೆ.)

ರೊಲ್ಯಾಂಡ್-ಮೋಲಿನ ವಿಚಾರಧಾರೆಯು ವಾಯುದ್ರವ ಮತ್ತು ಹ್ಯಾಲೊಕಾರ್ಬನ್ ಉದ್ಯಮಗಳ ಪ್ರತಿನಿಧಿಗಳಿಂದ ಪ್ರಬಲವಾಗಿ ಅಲ್ಲಗಳೆಯಲ್ಪಟ್ಟಿತು. DuPont ಸಮಿತಿಯ ಅಧ್ಯಕ್ಷರು ಹೀಗೆಂದು ಉಲ್ಲೇಖಿಸಿದ್ದಾರೆ - "ಓಝೋನ್ ಸವಕಳಿ ಸಿದ್ಧಾಂತವು ಒಂದು ವಿಜ್ಞಾನ ಕಲ್ಪಿತ ಕಥೆ, ಅವಿವೇಕ ಹಾಗೂ ತೀರ ಅಸಂಬದ್ಧವಾದುದು".[೩೧] ಪ್ರಿಸಿಶನ್ ವಾಲ್ವ್ ಕೋರ್ಪೊರೇಶನ್‌ನ ಅಧ್ಯಕ್ಷರಾದ (ಹಾಗೂ ಮೊದಲ ಪ್ರಾಯೋಗಿಕ ವಾಯುದ್ರವ ಸಿಂಪಡಿಸುವ ಕ್ಯಾನ್‌ನ ಸೃಷ್ಟಿಕರ್ತ) ರಾಬರ್ಟ್ ಅಬ್‌ಪ್ಲನಾಲ್ಪ್, ರೊಲ್ಯಾಂಡ್‌ನ ಸಾರ್ವಜನಿಕ ಹೇಳಿಕೆಗಳನ್ನು (ರೋನ್, p 56) ಟೀಕಿಸಿ UC ಇರ್ವಿನ್‌ನ ಕುಲಪತಿಗಳಿಗೆ ಪತ್ರ ಬರೆದರು. ರೊಲ್ಯಾಂಡ್ ಮತ್ತು ಮೋಲಿನ ಮಾಡಿದ ಹೆಚ್ಚಿನ ಮೂಲಭೂತ ಊಹೆಗಳು ಮೂರು ವರ್ಷಗಳೊಳಗೆ ಪ್ರಯೋಗಾಲಯ ಮಾಪನಗಳಿಂದ ಮತ್ತು ವಾಯುಮಂಡಲದಲ್ಲಿ ನೇರ ವೀಕ್ಷಣೆಗಳಿಂದ ದೃಢೀಕರಿಸಲ್ಪಟ್ಟವು. ವಾಯುಮಂಡಲದಲ್ಲಿರುವ ಮೂಲ ಅನಿಲಗಳ (CFCಗಳು ಮತ್ತು ಸಂಬಂಧಿತ ಸಂಯುಕ್ತಗಳು) ಮತ್ತು ಕ್ಲೋರಿನ್ ಹೊಂದಿರುವ ಅಂಶಗಳ (HCl ಮತ್ತು ClONO2) ಸಾಂದ್ರತೆಯನ್ನು ಅಳೆಯಲಾಯಿತು. ವಾಯುಮಂಡಲದಲ್ಲಿರುವ ಕ್ಲೋರಿನ್ ಪ್ರಮಾಣಕ್ಕೆ CFCಗಳು ಪ್ರಮುಖ ಮೂಲಗಳು ಮತ್ತು CFCಗಳು ಬಿಡುಗಡೆಗೊಳಿಸುವ ಎಲ್ಲಾ ರೀತಿ ಅನಿಲಗಳೂ ವಾಯುಮಂಡಲ ತಲುಪುತ್ತವೆ ಎಂಬುದನ್ನು ಕಂಡುಹಿಡಿಯಲಾಯಿತು. ಜೇಮ್ಸ್ G. ಆಂಡರ್ಸನ್ ಮತ್ತು ಸಹಚರರು ಮಾಡಿದ ವಾಯುಮಂಡಲದಲ್ಲಿನ ಕ್ಲೋರಿನ್ ಮೋನಾಕ್ಸೈಡ್ (ClO) ಮಾಪನವು ದೃಢನಂಬಿಕೆ ಹುಟ್ಟಿಸುವಂತಹುದು. ಓಝೋನ್‌ನೊಂದಿಗೆ Cl ಕ್ರಿಯೆಗೊಳಗಾಗಿ ClO ಉತ್ಪತ್ತಿಯಾಗುತ್ತದೆ. Cl ರಾಡಿಕಲ್‌ಗಳು ವಾಯುಮಂಡಲದಲ್ಲಿ ಅಸ್ತಿತ್ವದಲ್ಲಿರುವುದಲ್ಲದೆ ಅವು ಓಝೋನ್ ಸವಕಳಿಯಲ್ಲೂ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಇದರ ವೀಕ್ಷಣೆಯು ತೋರಿಸುತ್ತದೆ. ರೊಲ್ಯಾಂಡ್ ಮತ್ತು ಮೋಲಿನ ಕೆಲಸವನ್ನು ಮ್ಯಾಕ್‌ಎಲ್ರೋಯ್ ಮತ್ತು ವೋಫ್ಸೈ ಮುಂದುವರಿಸಿ, ಓಝೋನ್ ನಾಶಮಾಡುವುದರಲ್ಲಿ ಕ್ಲೋರಿನ್ ಪರಮಾಣುಗಳಿಂದ ಬ್ರೋಮಿನ್ ಪರಮಾಣುಗಳು ಹೆಚ್ಚು ಪರಿಣಾಮಕಾರಿ ವೇಗವರ್ಧಕಗಳು ಎಂದು ತೋರಿಸಿಕೊಟ್ಟರು. ಬೆಂಕಿ ನಂದಿಸುವ ಸಾಧನಗಳಲ್ಲಿ ಹೆಚ್ಚಾಗಿ ಬಳಸುವ ಬ್ರೋಮಿನ್‌ಯುಕ್ತ ಕಾರ್ಬನಿಕ ಸಂಯುಕ್ತಗಳಾದ ಹ್ಯಾಲನ್‌ಗಳು ವಾಯುಮಂಡಲದ ಬ್ರೋಮಿನ್‌ಗೆ ಬಹುದೊಡ್ಡ ಮೂಲವಾಗಿವೆ ಎಂದು ಸಮರ್ಥಿಸಿದರು. ನಂತರ 1976ರಲ್ಲಿ U.S. ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್, ಓಝೋನ್ ಸವಕಳಿಯ ವಿಚಾರಧಾರೆಯು ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ಪ್ರಬಲವಾಗಿ ಬೆಂಬಲಿಸುತ್ತದೆ ಎಂದು ವರದಿ ಪ್ರಕಟಿಸಿತು. CFC ಉತ್ಪತ್ತಿ ಈಗಿರುವ ಪ್ರಮಾಣದಲ್ಲೇ ಪ್ರತಿ ವರ್ಷಕ್ಕೆ 10%ನಷ್ಟು ಹೆಚ್ಚಳವಾಗುವುದು 1990ರವರೆಗೆ ಮುಂದುವರಿದು ನಂತರ ನಿಂತರೆ, CFCಗಳು 1995ರೊಳಗೆ 5ರಿಂದ 7%ನಷ್ಟು ಹಾಗೂ 2050ರೊಳಗೆ 30ರಿಂದ 50%ನಷ್ಟು ಜಾಗತಿಕ ಓಝೋನ್ ನಾಶವನ್ನುಂಟುಮಾಡಬಹುದು. ಅದಕ್ಕಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನ, ಕೆನಡ ಮತ್ತು ನಾರ್ವೆ ರಾಷ್ಟ್ರಗಳು ವಾಯುದ್ರವ ಸಿಂಪಡಿಸುವ ಕ್ಯಾನ್‌ಗಳಲ್ಲಿ CFCಗಳ ಬಳಕೆಯನ್ನು 1978ರಲ್ಲಿ ನಿಷೇಧಿಸಿದವು. 1979ರಿಂದ 1984ರ ಸಂದರ್ಭದಲ್ಲಿ ಪ್ರಕಟಿಸಿದ ವರದಿಯಲ್ಲಿ ನ್ಯಾಶನಲ್ ಅಕಾಡೆಮಿಯು ಸಂಕ್ಷೇಪಿಸಿದ ಆನಂತರದ ಸಂಶೋಧನೆಗಳು ಜಾಗತಿಕ ಓಝೋನ್ ಸವಕಳಿಯ ಆರಂಭಿಕ ಅಂದಾಜು ಬಹುವಿಸ್ತಾರವಾಗಿತ್ತು ಎಂದು ತೋರಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಕ್ರುಟ್ಜೆನ್, ಮೋಲಿನ ಮತ್ತು ರೊಲ್ಯಾಂಡ್ ಮೊದಲಾದವರು ವಾಯುಮಂಡಲದ ಓಝೋನ್ ಬಗೆಗಿನ ಅವರ ಅಧ್ಯಯನ ಕಾರ್ಯಕ್ಕೆ 1995ರಲ್ಲಿ ರಾಸಾಯನಿಕ ಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದರು.

ಓಝೋನ್ ರಂಧ್ರ

[ಬದಲಾಯಿಸಿ]

ಬ್ರಿಟಿಷ್ ಅಂಟಾರ್ಕಟಿಕ್ ಸರ್ವೆ ವಿಜ್ಞಾನಿಗಳಾದ ಫಾರ್‌ಮ್ಯಾನ್, ಗಾರ್ಡಿನರ್ ಮತ್ತು ಶಾಂಕ್ಲಿನ್ ಕಂಡುಹಿಡಿದ ಅಂಟಾರ್ಕಟಿಕ್ "ಓಝೋನ್ ರಂಧ್ರ"ವು (1985ರ ಮೇ ಸಂಚಿಕೆ ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು) ವೈಜ್ಞಾನಿಕ ಸಮುದಾಯದಲ್ಲಿ ಆಘಾತವನ್ನುಂಟುಮಾಡಿತು. ಏಕೆಂದರೆ ಧ್ರುವ ಪ್ರದೇಶದ ಓಝೋನ್‌ನ ಕ್ಷೀಣಿಸುವಿಕೆ ನಿರೀಕ್ಷೆಯ ಮಟ್ಟಕ್ಕಿಂತ ಬಹುಪಾಲು ಹೆಚ್ಚಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ದಕ್ಷಿಣ ಧ್ರುವ ದಲ್ಲಿ ಬೃಹತ್‌ಪ್ರಮಾಣದ ಓಝೋನ್ ಸವಕಳಿ ತೋರಿಸುವ ಉಪಗ್ರಹ ಮಾಪನಗಳು ಅದೇ ಸಂದರ್ಭದಲ್ಲಿ ಲಭ್ಯವಿದ್ದವು. ಇವು ಆರಂಭದಲ್ಲಿ ಗುಣಮಟ್ಟ ನಿಯಂತ್ರಣ ಕ್ರಮಾವಳಿಗಳಿಂದ ತಿರಸ್ಕರಿಸಲ್ಪಟ್ಟಿತು (ಪರಿಮಾಣಗಳು ನಿರೀಕ್ಷೆಗಿಂತ ತುಂಬಾ ಕಡಿಮೆ ಇದ್ದುದರಿಂದ ಅವು ದೋಷಗಳಾಗಿ ಹೊರಬಂದವು); ಇನ್ ಸಿತು ವೀಕ್ಷಣೆಯಲ್ಲಿ ಓಝೋನ್ ಸವಕಳಿಯ ಆಧಾರ ಅನುಸರಿಸಿ ಮೂಲ ವಿವರ ಪುನಃಸಂಸ್ಕರಿಸಿದಾಗ, ಉಪಗ್ರಹ ವಿವರದಿಂದ ಓಝೋನ್ ರಂಧ್ರವನ್ನು ಕಂಡುಹಿಡಿಯಲಾಯಿತು. ಸಾಫ್ಟ್‌ವೇರ್ಅನ್ನು ಫ್ಲಾಗ್‌ಗಳಿಲ್ಲದೆ ಮತ್ತೆ (ಮರುಚಾಲನೆ) ರನ್‌ಮಾಡಿದಾಗ ಓಝೋನ್ ರಂಧ್ರವು ಬಹುಹಿಂದೆಯೇ 1976ರಲ್ಲಿ ಕಂಡುಬಂದಿತು.[೪೫]

ಅಂಟಾರ್ಕಟಿಕ್‌ನ ಶೀತ ವಾಯುಮಂಡಲದಲ್ಲಿನ ಧ್ರುವ ವಾಯುಮಂಡಲದ ಮೋಡಗಳಲ್ಲಿ (PSC) ನಡೆಯುವ ರಾಸಾಯನಿಕ ಕ್ರಿಯೆಗಳು ಸ್ಥಳೀಯ ಮತ್ತು ಕಾಲೋಚಿತ. ಆದರೂ ಸಹ ಓಝೋನ್ ನಾಶಮಾಡುವ ರೂಪದಲ್ಲಿ ಕ್ರಿಯಾತ್ಮಕವಾಗಿರುವ ಕ್ಲೋರಿನ್ ಪ್ರಮಾಣದಲ್ಲಿ ಮಿತಿಮೀರಿ ಹೆಚ್ಚಳವಾಗಲು ಕಾರಣವಾದವು ಎಂದು ನ್ಯಾಶನಲ್ ಓಶನಿಕ್ ಆಂಡ್ ಅಟ್ಮೋಸ್ಫೆರಿಕ್ ಅಡ್ಮಿನಿಸ್ಟ್ರೇಶನ್‌ನ (NOAA) ವಾಯುಮಂಡಲದ ರಾಸಾಯನ ಶಾಸ್ತ್ರಜ್ಞ ಸುಸಾನ್ ಸೊಲೊಮನ್ ಪ್ರಸ್ತಾಪಿಸಿದ್ದಾರೆ. ಅಂಟಾರ್ಕಟಿಕ್‌ನಲ್ಲಿ ಧ್ರುವ ವಾಯುಮಂಡಲದ ಮೋಡಗಳು ಅತೀಕಡಿಮೆ ಅಂದರೆ -80 ಡಿಗ್ರಿ C ತಾಪಮಾನ ಇರುವಾಗ ಮತ್ತು ವಸಂತ ಋತುವಿನ ಆರಂಭದಲ್ಲಿ ಮಾತ್ರ ರಚನೆಯಾಗುತ್ತವೆ. ಅಂತಹ ಸಂದರ್ಭದಲ್ಲಿ ಮೋಡದ ಮಂಜುಗಡ್ಡೆಯ ಹರಳುಗಳು, ಸಕ್ರಿಯವಾಗಿಲ್ಲದ ಕ್ಲೋರಿನ್ ಸಂಯುಕ್ತಗಳನ್ನು ಓಝೋನ್ಅನ್ನು ಸುಲಭವಾಗಿ ಸವಕಳಿ ಮಾಡುವ ಕ್ರಿಯಾತ್ಮಕ ಕ್ಲೋರಿನ್ ಸಂಯುಕ್ತಗಳಾಗಿ ಬದಲಾಯಿಸುವುದಕ್ಕೆ ಸೂಕ್ತ ಮೇಲ್ಮೈ ಒದಗಿಸಿ ಕೊಡುತ್ತವೆ.

ಅಂಟಾರ್ಕಟಿಕದಲ್ಲಿ ರಚನೆಯಾಗುವ ಧ್ರುವ ಸುಳಿಯು(ಸುಳಿಗಾಳಿ) ಬಹಳ ಪ್ರಬಲವಾಗಿರುತ್ತದೆ ಹಾಗೂ ಮೋಡದ ಕಣಗಳ ಮೇಲ್ಮೈಯಲ್ಲಿ ನಡೆಯುವ ಕ್ರಿಯೆಗಳು ವಾತಾವರಣದಲ್ಲಾಗುವುದಕ್ಕಿಂತ ತುಂಬಾ ಭಿನ್ನವಾಗಿರುತ್ತವೆ. ಈ ಪರಿಸ್ಥಿತಿಗಳು ಅಂಟಾರ್ಕಟಿಕದಲ್ಲಿ ಓಝೋನ್ ರಂಧ್ರವಾಗಲು ಕಾರಣವಾಯಿತು. ಇದನ್ನು ಮೊದಲು ಪ್ರಯೋಗಾಲಯದ ಪರಿಮಾಣಗಳಿಂದ ದೃಢೀಕರಿಸಲಾಯಿತು. ಆನಂತರ ಅಂಟಾರ್ಕಟಿಕ್ ವಾಯುಮಂಡಲದಲ್ಲಿರುವ ಕ್ಲೋರಿನ್ ಮೋನಾಕ್ಸೈಡ್‌ನ (ClO) ಅತೀಹೆಚ್ಚಿನ ಸಾಂದ್ರತೆಯನ್ನು ಭೂಮಿ ಮತ್ತು ಹೆಚ್ಚು ಎತ್ತರದ ವಿಮಾನಗಳ ಮೂಲಕ ನೇರ ಮಾಪನಗಳಿಂದ ಕಂಡುಹಿಡಿಯಲಾಯಿತು.[ಸೂಕ್ತ ಉಲ್ಲೇಖನ ಬೇಕು]

ಸೂರ್ಯನ UV ವಿಕಿರಣದಲ್ಲಿನ ಅಥವಾ ವಾತಾವರಣದ ಹರವಿನ ಸ್ವರೂಪದಲ್ಲಿನ ಬದಲಾವಣೆಗಳಿಂದ ಓಝೋನ್ ರಂಧ್ರವಾಗಿದೆ ಎಂದು ಹೇಳುವ ಪರ್ಯಾಯ ವಿಚಾರಧಾರೆಗಳನ್ನೂ ಪರಿಶೀಲಿಸಲಾಯಿತು. ಪೂರಕವಾಗಿ ಅವು ಸಮರ್ಥನೀಯವಾಗಿಲ್ಲವೆಂದು ತೋರಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಪ್ರಪಂಚದಾದ್ಯಂತ ಹರಡಿರುವ ಭೂಸಂಬಂಧಿ ಡೋಬ್ಸನ್ ಸ್ಪೆಕ್ಟ್ರೋಮೀಟರ್ ಜಾಲದಿಂದ ಮಾಡಿದ ಓಝೋನ್ ಪರಿಮಾಣದ ವಿಶ್ಲೇಷಣೆಯು ಓಝೋನ್ ಪದರವು ಸಂಕ್ರಾಂತಿ ವೃತ್ತದ ಹೊರಗೆ ಎಲ್ಲಾ ಅಕ್ಷಾಂಶಗಳಲ್ಲಿ ಸವಕಳಿಯಾಗುತ್ತಿದೆ ಎಂಬ ಅಂತಾರಾಷ್ಟ್ರೀಯ ದೋಷಾರೋಪಣೆಗೆ ಕಾರಣವಾಯಿತು.[ಸೂಕ್ತ ಉಲ್ಲೇಖನ ಬೇಕು] ಇದು ಉಪಗ್ರಹ ಮಾಪನಗಳಿಂದ ದೃಢೀಕರಿಸಲ್ಪಟ್ಟಿತು. ಅದರ ಪರಿಣಾಮವಾಗಿ ಹ್ಯಾಲೊಕಾರ್ಬನ್ ಉತ್ಪತ್ತಿ ಮಾಡುವ ಪ್ರಮುಖ ರಾಷ್ಟ್ರಗಳು CFCಗಳು, ಹ್ಯಾಲನ್‌ಗಳು ಮತ್ತು ಸಂಬಂಧಿತ ಸಂಯುಕ್ತಗಳ ಉತ್ಪಾದನೆಯನ್ನು ನಿಲ್ಲಿಸಲು ಒಪ್ಪಿದವು. ಅದಕ್ಕೆ ಸಂಬಂಧಿಸಿದ ಕ್ರಿಯೆಯು 1996ರಲ್ಲಿ ಪೂರ್ಣಗೊಂಡಿತು.

1981ರಲ್ಲಿ ಯುನೈಟೆಡ್ ನೇಶನ್ಸ್ ಎನ್ವೈರ್ನ್‌ಮೆಂಟ್ ಪ್ರೋಗ್ರಾಮ್ ಓಝೋನ್ ಸವಕಳಿಯ ವೈಜ್ಞಾನಿಕ ಅಂದಾಜಿನ ಬಗ್ಗೆ ಹಲವಾರು ವರದಿಗಳನ್ನು ನೀಡಿತು. ತೀರ ಇತ್ತೀಚಿನದು ಎಂದರೆ 2007ರಲ್ಲಿ ಕಂಡುಹಿಡಿದುದು, ಓಝೋನ್ ಪದರದ ರಂಧ್ರವು ಚೇರಿಸಿಕೊಳ್ಳುತ್ತಿದೆ ಹಾಗೂ ಇದು ಈಗ ಸಣ್ಣದಾಗಿದ್ದರೂ ಮುಂದಿನ ಒಂದು ದಶಕದ ತನಕ ಸವಕಳಿ ಇಲ್ಲದೇ ಇರಬಹುದು ಎಂದು ಉಪಗ್ರಹ ಮಾಪನಗಳು ತೋರಿಸಿಕೊಟ್ಟವು[೮].

ಓಝೋನ್ ಸವಕಳಿ ಮತ್ತು ಜಾಗತಿಕ ತಾಪಮಾನ ಏರಿಕೆ

[ಬದಲಾಯಿಸಿ]

ಸಮೂಹ ಮಾಧ್ಯಮದಲ್ಲಿ ಓಝೋನ್ ಸವಕಳಿ ಮತ್ತು ಜಾಗತಿಕ ತಾಪಮಾನ ಏರಿಕೆಯು ಸಂಬಂಧ ಹೊಂದಿದ್ದರೂ, ನಿಜವಾಗಿ ಅವುಗಳು ಪರಸ್ಪರ ಸಂಬಂಧಿಸಿಲ್ಲ. ಸಂಬಂಧವಿರುವ ಐದು ಅಂಶಗಳಿವೆ:

ವಿವಿಧ ಹಸಿರುಮನೆ ಅನಿಲಗಳು ಮತ್ತು ಇತರ ಮೂಲಗಳ ವಿಕಿರಣ ಶಕ್ತಿ.
  • CO2 ವಿಕಿರಣ ಶಕ್ತಿಯು ಮೇಲ್ಮೈಯಲ್ಲಿ ಉತ್ಪತ್ತಿಮಾಡುವ ಜಾಗತಿಕ ತಾಪಮಾನ ಏರಿಕೆ ವಾಯುಮಂಡಲವನ್ನು ತಂಪಾಗಿಸುತ್ತದೆ.[೪೬] ಈ ತಂಪಾಗಿಸುವಿಕೆಯು ಧ್ರುವ ಓಝೋನ್ (O3) ಸವಕಳಿಯಲ್ಲಿ ಮತ್ತು ಓಝೋನ್ ರಂಧ್ರ ನಿರ್ಮಿಸುವ ಪ್ರಮಾಣದಲ್ಲಿ ಹೆಚ್ಚಳ ತರುತ್ತದೆ.
  • ಅದಕ್ಕೆ ಪ್ರತಿಯಾಗಿ, ಓಝೋನ್ ಸವಕಳಿಯು ಹವಾಮಾನ ವ್ಯವಸ್ಥೆಯ ವಿಕಿರಣ ಶಕ್ತಿಯಾಗಿ ಪರಿಣಾಮ ಬೀರುತ್ತವೆ. ಎರಡು ಪ್ರತಿರೋಧಿಸುವ ಪರಿಣಾಮಗಳಿವೆ: ಓಝೋನ್ ಕ್ಷೀಣಿಸುವಿಕೆಯು ವಾಯುಮಂಡಲಕ್ಕೆ ಕಡಿಮೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವಂತೆ ಮಾಡುತ್ತದೆ, ಆದ್ದರಿಂದ ಹವಾಗೋಲ ಬಿಸಿಯಾಗುವಾಗ ವಾಯುಮಂಡಲವು ತಣ್ಣಗಾಗುತ್ತದೆ; ತಂಪಾದ ವಾಯುಮಂಡಲವು ದೀರ್ಘ-ತರಂಗಾಂತರ ವಿಕಿರಣವನ್ನು ಕಡಿಮೆ ಪ್ರಮಾಣದಲ್ಲಿ ಕೆಳಗೆ ಬಿಡುತ್ತದೆ ಹಾಗಾಗಿ ಹವಾಗೋಲ ತಣ್ಣಗಾಗುತ್ತದೆ. ಒಟ್ಟಿನಲ್ಲಿ ತಣ್ಣಗಾಗುವಿಕೆಯು ಮೇಲುಗೈ ಸಾಧಿಸುತ್ತದೆ; IPCC ಹೀಗೆಂದು ವ್ಯಾಖ್ಯಾನಿಸುತ್ತದೆ - "ಕಳೆದ ಎರಡು ದಶಕಗಳಲ್ಲಿ ವಾಯುಮಂಡಲದಲ್ಲಾದ O3 ನಾಶವು ಮೇಲ್ಮೈ-ಹವಾಗೋಲ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿದೆ "[೪೭] ಅಂದರೆ ಸುಮಾರು ಪ್ರತಿ ಚದರ ಮೀಟರ್‌ಗೆ −0.15 ± 0.10 ವ್ಯಾಟ್ (W/m²).[೪೮]
  • ಹಸಿರುಮನೆ ಪರಿಣಾಮದಿಂದ ಪ್ರಮುಖವಾಗಿ ಆಗುವ ಒಂದು ಬದಲಾವಣೆ ಎಂದರೆ ವಾಯುಮಂಡಲ ತಣ್ಣಗಾಗುವಿಕೆ.[೪೬] ಈ ರೀತಿಯ ತಣ್ಣಾಗುವಿಕೆ ಕಂಡುಬಂದರೂ, ಹಸಿರುಮನೆ ಅನಿಲಗಳ ಸಾಂದ್ರತೆಯಲ್ಲಿನ ಬದಲಾವಣೆಗಳ ಮತ್ತು ಓಝೋನ್ ಸವಕಳಿಯ ಪರಿಣಾಮಗಳೆರಡೂ ತಣ್ಣಾಗಾಗುವಿಕೆಯನ್ನು ಉಂಟುಮಾಡುವುದರಿಂದ ಅವನ್ನು ಬೇರ್ಪಡಿಸುವುದು ಸುಲಭವಿಲ್ಲ. ಆದರೂ ಇದನ್ನು ಸಂಖ್ಯಾಮೂಲಗಳ ವಾಯುಮಂಡಲ ಮಾದರಿಯಿಂದ ಮಾಡಬಹುದು. ನ್ಯಾಶನಲ್ ಓಶನಿಕ್ ಆಂಡ್ ಅಟ್ಮೋಸ್ಫೆರಿಕ್ ಅಡ್ಮಿನಿಸ್ಟ್ರೇಶನ್ಸ್ ಜಿಯೋಫಿಸಿಕಲ್ ಫ್ಲುಯಿಡ್ ಡೈನಮಿಕ್ಸ್ ಲ್ಯಾಬೊರೇಟರಿಯ ಫಲಿತಾಂಶಗಳು 20 km (12.4 ಮೈಲುಗಳು)ಗಿಂತ ಮೇಲೆ ಹಸಿರುಮನೆ ಅನಿಲಗಳು ತಂಪಾಗಿಸುವಿಕೆಯನ್ನುಂಟುಮಾಡುತ್ತವೆ ಎಂದು ತೋರಿಸುತ್ತವೆ.[೪೯]
  • ಓಝೋನ್ ಸವಕಳಿ ಮಾಡುವ ರಾಸಾಯನಿಕಗಳೂ ಹಸಿರುಮನೆ ಅನಿಲಗಳು. ಈ ರಾಸಾಯನಿಕಗಳ ಸಾಂದ್ರತೆಯಲ್ಲಿನ ಹೆಚ್ಚಳವು 0.34 ± 0.03 W/m² ವಿಕಿರಣ ಶಕ್ತಿಯನ್ನು ಅಂದರೆ ಹಸಿರುಮನೆ ಅನಿಲಗಳ ಸಾಂದ್ರತೆಯ ಹೆಚ್ಚಳದಿಂದ ಉಂಟಾಗುವ ಒಟ್ಟು ವಿಕಿರಣ ಪ್ರಾಬಲ್ಯತೆಗೆ ಹೋಲಿಸಿದರೆ 14%ನಷ್ಟು ಉತ್ಪತ್ತಿ ಮಾಡುತ್ತದೆ.[೪೮]
  • ದೀರ್ಘಕಾಲ ಸಂಸ್ಕರಣಕ್ರಿಯೆ, ಅದರ ಮಾಪನ, ಅಧ್ಯಯನ, ಸಿದ್ಧಾಂತ ಮತ್ತು ಪರಿಶೀಲನೆಯ ವಿನ್ಯಾಸಗಳು ದಾಖಲುಗೊಳ್ಳಲು ಮತ್ತು ಹೆಚ್ಚು ವ್ಯಾಪ್ತಿ ಪಡೆಯಲು ದಶಕಗಳನ್ನೇ ತೆಗೆದುಕೊಳ್ಳುತ್ತವೆ, ಹಾಗೂ ಅಂತಿಮವಾಗಿ ಅವು ಪ್ರಬಲ ನಿದರ್ಶನಗಳಾದವು. ಓಝೋನ್ ವಿನಾಶದ ಬಗೆಗಿನ ಅನೇಕ ಸಿದ್ಧಾಂತಗಳು 1980ರಲ್ಲಿ ರೂಪಿತಗೊಂಡವು, 1990ರ ಉತ್ತರಾರ್ಧದಲ್ಲಿ ಪ್ರಕಟಿತವಾದವು ಹಾಗೂ ಈಗಲೂ ಪ್ರಮಾಣೀಕರಿಸಲಾಗುತ್ತಿವೆ. NASA ಗೊಡ್ಡಾರ್ಡ್ ಡಾ. ಡ್ರಿವ್ ಸ್ಕಿಂಡೆಲ್ ಮತ್ತು ಡಾ. ಪಾಲ್ ನ್ಯೂಮ್ಯಾನ್ 1990ರ ಉತ್ತರಾರ್ಧದಲ್ಲಿ SGI ಒರಿಜಿನ್ 2000 ಸೂಪರ್‌ಕಂಪ್ಯೂಟರ್‌ಅನ್ನು ಬಳಸಿ ಒಂದು ಸಿದ್ಧಾಂತ ಮಂಡಿಸಿದರು. ಅದು ಓಝೋನ್ ಕ್ಷೀಣಿಸುವದರ ಬಗ್ಗೆಯಾಗಿತ್ತು ಹಾಗೂ ಓಝೋನ್ ಸವಕಳಿಯ ಬಗ್ಗೆ 78%ನಷ್ಟು ಕಾರಣ ವಿವರಿಸಿತು. ಆ ಮಾದರಿಯು ಓಝೋನ್ ಕುಂದುವಿಕೆಯ ಬಗ್ಗೆ 89%ನಷ್ಟು ಸಮಜಾಯಿಷಿ ವಿವರಗಳನ್ನು ನೀಡಿತು, ಆದರೆ 75 ವರ್ಷಗಳಿಂದ 150 ವರ್ಷಗಳವರೆಗೆ ಅಂದಾಜು ಮಾಡಿದ ಓಝೋನ್ ರಂಧ್ರದ ಪುನಃಶ್ಚೇತನವನ್ನು ತಳ್ಳಿಹಾಕಿತು. (ಈ ಮಾದರಿಯ ಪ್ರಮುಖ ಅಂಗವೆಂದರೆ ಪಳೆಯುಳಿಕೆ ಇಂಧನಗಳ ಕ್ಷೀಣಿಸುವಿಕೆಯಿಂದಾಗಿ ವಾಯುಮಂಡಲದ ಚಲನಶೀಲತೆ ಮತ್ತು ಗತಿ ವಿವರದ ಕೊರತೆ.)

ಓಝೋನ್ ಸವಕಳಿಯ ತಪ್ಪು ಗ್ರಹಿಕೆ

[ಬದಲಾಯಿಸಿ]

ಓಝೋನ್ ಸವಕಳಿ ಸಾಮಾನ್ಯ ತಪ್ಪು ಅಭಿಪ್ರಾಯಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ; ಹೆಚ್ಚಿನ ವಿವರಾತ್ಮಕ ಮಾಹಿತಿಗಳಿಗಾಗಿ ಓಝೋನ್-ಡಿಪ್ಲೀಶನ್ FAQ ಇಲ್ಲಿ ನೋಡಬಹುದು.

ವಾಯುಮಂಡಲ ತಲುಪಲು CFCಗಳು "ಹೆಚ್ಚು ಭಾರವಾದವುಗಳು"

[ಬದಲಾಯಿಸಿ]

CFC ಅಣುಗಳು ಸಾರಜನಕ ಅಥವಾ ಆಮ್ಲಜನಕಕಿಂತ ಹೆಚ್ಚು ಭಾರವಾದವು, ಹೆಚ್ಚಿನ ಪ್ರಮಾಣದಲ್ಲಿ ವಾಯುಮಂಡಲ ತಲುಪಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ.[೫೦] ವಾತಾವರಣದ ಅನಿಲಗಳನ್ನು ಅವುಗಳ ಭಾರದ ಆಧಾರದ ಮೇಲೆ ವಿಂಗಡಿಸಿಲ್ಲ, ಆದರೆ ಸಂಪೂರ್ಣವಾಗಿ ಪರಸ್ಪರ ಬೆರೆಸಲು ಸಾಕಾಗುವಷ್ಟು ಗಾಳಿಯ ಶಕ್ತಿಯು ಪ್ರಬಲವಾಗಿರುತ್ತವೆ. CFCಗಳು ಗಾಳಿಗಿಂತ ಭಾರವಾಗಿರುತ್ತವೆ, ಆದರೆ ದೀರ್ಘಕಾಲ ಇರಬಹುದಾದ ಆರ್ಗಾನ್, ಕ್ರಿಪ್ಟಾನ್ ಮತ್ತು ಇತರ ತೂಕದ ಅನಿಲಗಳಂತೆ ಇರುತ್ತವೆ. ಅವು ಪರಿಭ್ರಮಣ ಗೋಲದಲ್ಲಿ ಸಮಾನವಾಗಿ ಹಂಚಲ್ಪಟ್ಟು ಮೇಲಿನ ವಾತಾವರಣವನ್ನೂ ತಲುಪುತ್ತವೆ.[೫೧]

ಮಾನವ-ನಿರ್ಮಿತ ಕ್ಲೋರಿನ್ ನೈಸರ್ಗಿಕ ಮೂಲಕ್ಕೆ ಹೋಲಿಸಿದರೆ ಗಮನಾರ್ಹವಾದುದಲ್ಲ

[ಬದಲಾಯಿಸಿ]

ಸಾಂದರ್ಭಿಕವಾಗಿ ಧ್ವನಿ ಎತ್ತಿದ ಮತ್ತೊಂದು ವಿರೋಧ ಎಂದರೆ - ಹವಾಗೋಲದ ಕ್ಲೋರಿನ್‌ನ ನೈಸರ್ಗಿಕ ಮೂಲಗಳು (ಅಗ್ನಿಪರ್ವತ, ಓಶನ್ ಸ್ಪ್ರೇ, ಇತ್ಯಾದಿ) ಮಾನವ-ನಿರ್ಮಿತ ಮೂಲಗಳಿಗಿಂತ ಪರಿಮಾಣದಲ್ಲಿ ನಾಲ್ಕರಿಂದ ಐದು ಪಟ್ಟು ದೊಡ್ಡದಿರುತ್ತವೆ ಎಂದು ಸಾಮಾನ್ಯವಾಗಿ ಒಪ್ಪಲಾಗಿದೆ . ಹವಾಗೋಲ ದ ಕ್ಲೋರಿನ್ ಅಪ್ರಸ್ತುತ, ಆದರೆ ವಾಯುಮಂಡಲ ದ ಕ್ಲೋರಿನ್ ಓಝೋನ್ ಸವಕಳಿ ಮಾಡುತ್ತದೆ ಎಂಬುದು ನಿಜ ಸಂಗತಿ. ಓಶನ್ ಸ್ಪ್ರೇಯಿಂದ ಬರುವ ಕ್ಲೋರಿನ್ ಕರಗಬಲ್ಲ ದ್ರಾವ್ಯ, ಆದ್ದರಿಂದ ಅದು ವಾಯುಮಂಡಲ ತಲುಪುವ ಮೊದಲು ಮಳೆನೀರಿನಿಂದ ತೊಳೆದು ಹೋಗುತ್ತದೆ. ಅದಕ್ಕೆ ತದ್ವಿರುದ್ಧವಾಗಿ CFCಗಳು ಮಾತ್ರ ಸುಲಭವಾಗಿ ಕರಗುವಂತವಲ್ಲ ಹಾಗೂ ದೀರ್ಘಕಾಲ ಬಾಳುವಂತವು. ಆದ್ದರಿಂದ ಅವು ವಾಯುಮಂಡಲಕ್ಕೆ ತಲುಪುತ್ತವೆ. ಕೆಳಮಟ್ಟದ ವಾತಾವರಣದಲ್ಲೂ ಸಾಲ್ಟ್ ಸ್ಪ್ರೇಯಿಂದ HCl ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಕ್ಲೋರಿನ್, CFCಗಳು ಮತ್ತು ಸಂಬಂಧಿತ ಹ್ಯಾಲೊಆಲ್ಕೇನ್‌ಗಳ ರೂಪದಲ್ಲಿ ಇರುತ್ತದೆ. ಹಾಗೂ ವಾಯುಮಂಡಲದಲ್ಲಿ ಹ್ಯಾಲೊಕಾರ್ಬನ್‌ಗಳು ಅಗಾಧ ಪ್ರಮಾಣದಲ್ಲಿರುತ್ತವೆ.[೫೨] ಈ ಹ್ಯಾಲೊಕಾರ್ಬನ್‌ಗಳಲ್ಲಿ ಒಂದೇ ಒಂದು ಮೀಥೈಲ್ ಕ್ಲೋರೈಡ್ ಮಾತ್ರ ನೈಸರ್ಗಿಕ ಮೂಲವಾಗಿದೆ[೫೩] ಹಾಗೂ ಇದು ವಾಯುಮಂಡಲದಲ್ಲಿನ 20 ಪ್ರತಿಶತ ಕ್ಲೋರಿನ್ ಪ್ರಮಾಣಕ್ಕೆ ಕಾರಣವಾಗಿದೆ, ಉಳಿದ 80% ಮಾನವನು ಉತ್ಪಾದಿಸುವ ಸಂಯುಕ್ತಗಳಿಂದ ಬರುತ್ತದೆ.

ಬೃಹತ್‌ಪ್ರಮಾಣದ ಜ್ವಾಲಾಮುಖಿ ಸ್ಫೋಟಗಳು HClಅನ್ನು ನೇರವಾಗಿ ವಾಯುಮಂಡಲಕ್ಕೆ ಬಿಡುಗಡೆ ಮಾಡಬಹುದು,ಆದರೆ ಇದರ ಪ್ರಮಾಣವು CFCಗಳಿಂದ ಬರುವ ಕ್ಲೋರಿನ್‌ಗಿಂತ ಕಡಿಮೆ ಇರುತ್ತದೆ ಎಂದು ನೇರ ಮಾಪನಗಳು[೫೪] ತೋರಿಸುತ್ತವೆ. ಅಂಟಾರ್ಕಟಿಕಾದ ರೋಸ್ ಐಲ್ಯಾಂಡ್‌ನಲ್ಲಿರುವ ಮೌಂಟ್ ಎರೆಬಸ್ ಜ್ವಾಲಾಮುಖಿ ಶಿಖರದಿಂದ ಹೊರಹೊಮ್ಮುವ, ಕರಗಬಲ್ಲ ಹ್ಯಾಲೊಜೆನ್ ಸಂಯುಕ್ತಗಳು ಅಂಟಾರ್ಕಟಿಕ್ ಓಝೋನ್ ರಂಧ್ರಕ್ಕೆ ಪ್ರಮುಖ ಕಾರಣವಾಗಿವೆ.[ಸೂಕ್ತ ಉಲ್ಲೇಖನ ಬೇಕು]

ಮೊದಲು 1956ರಲ್ಲಿ ಓಝೋನ್ ರಂಧ್ರ ಪತ್ತೆಯಾಯಿತು.

[ಬದಲಾಯಿಸಿ]

G.M.B. ಡೋಬ್ಸನ್ (ಎಕ್ಸ್‌ಪ್ಲೋರಿಂಗ್ ದ ಅಟ್ಮೋಸ್ಫಿಯರ್, 2ನೇ ಆವೃತ್ತಿ, ಆಕ್ಸ್‌ಫರ್ಡ್, 1968) ಹ್ಯಾಲೆ ಬೆಯಲ್ಲಿನ ವಸಂತಕಾಲದ ಓಝೋನ್ ಪ್ರಮಾಣವನ್ನು ಮೊದಲು ಅಳೆದಾಗ ~320 DU ಇತ್ತು, ಇದು ವಸಂತಕಾಲಕ್ಕಿಂತ ಸುಮಾರು 150 DU ಕಡಿಮೆ ಇದ್ದದ್ದು ಕಂಡು ಆತ ಆಶ್ಚರ್ಯಗೊಂಡ. ಇದರ ಮಟ್ಟ ಆರ್ಕಟಿಕ್‌ನಲ್ಲಿ ~450 DU ಇತ್ತು ಎಂದೂ ಸೂಚಿಸಿದ್ದಾನೆ. ಇವು ಓಝೋನ್ ರಂಧ್ರವಾಗುವುದಕ್ಕಿಂತ ಮೊದಲಿದ್ದ ವಾಯುಗುಣದ ಲಕ್ಷಣಗಳು. ಇವು ಹವಾಗುಣದ ಸ್ವಾಭಾವಿಕತೆಯನ್ನೂ ತೋರಿಸುತ್ತವೆ ವಾಟ್ ಡೋಬ್ಸನ್ ವಿವರಣೆಗಳು ಮುಖ್ಯವಾಗಿ ಓಝೋನ್ ರಂಧ್ರ ಮಾಪನ ಮಾಡಲು ಬಳಸಿದ(ತಳ ಹದಿ) ಎಲ್ಲೆ ರೇಖೆ ಯಾಗಿದೆ: ನೈಜ ಓಝೋನ್ ರಂಧ್ರ ಮೌಲ್ಯಗಳು 150–100 DU ಶ್ರೇಣಿಯಲ್ಲಿರುತ್ತವೆ.

ಡೋಬ್ಸನ್ ಗುರುತಿಸಿದ ಆರ್ಕಟಿಕ್ ಮತ್ತು ಅಂಟಾರ್ಕಟಿಕ್ ನಡುವಿನ ವ್ಯತ್ಯಾಸ ಪ್ರಾಥಮಿಕವಾಗಿ ಕಾಲಮಾನ ಸಂಬಂಧಿಸಿದ ವಿಷಯವಾಗಿತ್ತು: ವಸಂತ ಋತುವಿನಲ್ಲಿ ಆರ್ಕಟಿಕ್‌ನ ಓಝೋನ್ ಮಟ್ಟ ನಿಧಾನವಾಗಿ ಏರಿ, ಎಪ್ರಿಲ್‌ನಲ್ಲಿ ಅತ್ಯಂತ ಗರಿಷ್ಠವಾಗಿರುತ್ತದೆ. ಅಂಟಾರ್ಕಟಿಕ್‌ನಲ್ಲಿ ಆರಂಭಿಕ ವಸಂತಕಾಲದಲ್ಲಿ ಸರಿಸುಮಾರು ಸ್ಥಿರವಾಗಿದ್ದು, ಧ್ರುವ ಸುಳಿಯು ಭೇದಿಸಲ್ಪಟ್ಟಾಗ ನವೆಂಬರ್‌ನಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ.

ಅಂಟಾರ್ಕಟಿಕ್ ಓಝೋನ್ ರಂಧ್ರದ ಕಾರ್ಯರೀತಿಯು ಸ್ಪಷ್ಟವಾಗಿ ಬೇರೆಯದೇ ಆಗಿರುತ್ತದೆ. ವಸಂತಕಾಲದ ಆರಂಭದಲ್ಲಿರುವ ಅಸ್ಥಿರ ಓಝೋನ್ ಮಟ್ಟವು ದಿಢೀರನೆ ಅತೀ ಕಡಿಮೆ ಚಳಿಗಾಲದಲ್ಲಿ 50%ನಷ್ಟು ಇಳಿಯುತ್ತದೆ ಮತ್ತೆ ಡಿಸೆಂಬರ್‌ವರೆಗೆ ಸಾಧಾರಣ ಮಟ್ಟಕ್ಕೆ ಬರುವುದಿಲ್ಲ.[೫೫]

ಈವರೆಗಿನ ಸಿದ್ಧಾಂತ ಸೂಕ್ತವಾಗಿದ್ದರೆ, ಓಝೋನ್ ರಂಧ್ರವು CFCಗಳ ಮೂಲಗಳಿಗಿಂತ ಹೆಚ್ಚಾಗಿರಬೇಕು

[ಬದಲಾಯಿಸಿ]

CFCಗಳು ಹವಾಗೋಲ ಮತ್ತು ವಾಯುಮಂಡಲದಲ್ಲಿ ಚೆನ್ನಾಗಿ ಮಿಶ್ರಣಗೊಂಡಿವೆ. ಅಂಟಾರ್ಕಟಿಕ್‌ನಲ್ಲಿ ಓಝೋನ್ ರಂಧ್ರ ಕಂಡುಬರಲು CFCಗಳು ಕಾರಣವಲ್ಲ ಬದಲಿಗೆ ಅಲ್ಲಿನ ಕಡಿಮೆ ತಾಪಮಾನವು ಧ್ರುವ ವಾಯುಮಂಡಲದ ಮೋಡಗಳ ರಚನೆಗೆ ಕಾರಣವಾಗಿರುವುದು.[೫೬] ಹಲವಾರು ಪ್ರಮುಖ, ಗಂಭೀರ, ಸ್ಥಳೀಯ "ರಂಧ್ರ"ಗಳು ಪೃಥ್ವಿ ಭಾಗದ ಇತರೆಡೆಯಲ್ಲೂ ಕಂಡುಬಂದಿವೆ.[೫೭]

"ಓಝೋನ್ ರಂಧ್ರ" ಎಂದರೆ ಓಝೋನ್ ಪದರದಲ್ಲುಂಟಾಗುವ ಕುಳಿ ಇಲ್ಲವೆ ಕುಸಿತ

[ಬದಲಾಯಿಸಿ]

"ಓಝೋನ್ ರಂಧ್ರ" ಗೋಚರಿಸಿದರೆ, ಮೂಲಭೂತವಾಗಿ ಕೆಳ ವಾಯುಮಂಡಲದ ಎಲ್ಲಾ ಓಝೋನ್ ನಾಶವಾಗುತ್ತದೆ. ಮೇಲ್ಭಾಗದ ವಾಯುಮಂಡಲ ಕಡಿಮೆ ಪ್ರಭಾವಕ್ಕೊಳಗಾಗುತ್ತದೆ, ಆದರೂ ಭೂಭಾಗದ ಒಟ್ಟು ಓಝೋನ್ ಮಟ್ಟದ 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಕುಸಿತವಾಗುತ್ತದೆ. ಓಝೋನ್ ರಂಧ್ರ, ಪದರದ ಎಲ್ಲಾ ಕಡೆ ಉಂಟಾಗುವುದಿಲ್ಲ ಹಾಗೂ ಅದು ಪದರವನ್ನು ಸಮಪ್ರಮಾಣದಲ್ಲಿ ತೆಳ್ಳಗೆ ಮಾಡುವುದೂ ಇಲ್ಲ. ಇದು ಗಾಳಿತಡೆಯಲ್ಲಿನ ತೂತಾಗಿರದೆ ಭೂಮಿಯ ಕೆಳಸ್ಥರದಲ್ಲಿರುವ ಒಂದು ರೀತಿಯ "ರಂಧ್ರ", ಅಂದರೆ ಕುಸಿತವಾಗಿದೆ.

ವಿಶ್ವ ಓಝೋನ್ ದಿನ

[ಬದಲಾಯಿಸಿ]

1994ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯು ಸೆಪ್ಟೆಂಬರ್ 16 ಅನ್ನು, 1987ರ ಅದೇ ದಿನ ಮೋಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿರುವುದನ್ನು ನೆನಪಿಸಲು, "ವಿಶ್ವ ಓಝೋನ್ ದಿನ" ಆಚರಿಸಲು ತೀರ್ಮಾನಿಸಿತು.

ಇದನ್ನೂ ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "Part III. The Science of the Ozone Hole". Retrieved 2007-03-05.
  2. "Chlorofluorocarbons (CFCs) are heavier than air, so how do scientists suppose that these chemicals reach the altitude of the ozone layer to adversely affect it?". Retrieved 2009-03-08.
  3. doi:10.1136/bmj.331.7528.1292-d
    This citation will be automatically completed in the next few minutes. You can jump the queue or expand by hand
  4. ಸ್ಟ್ರಾಟೊಸ್ಫೆರಿಕ್ ಓಝೋನ್: ಎಲೆಕ್ಟ್ರಾನಿಕ್ ಪಠ್ಯಪುಸ್ತಕ , ಅಧ್ಯಾಯ 5, ವಿಭಾಗ 4.2.8, [೧]
  5. ಸ್ಟ್ರಾಟೊಸ್ಫೆರಿಕ್ ಓಝೋನ್ ಡಿಪ್ಲೀಶನ್ ಬೈ ಕ್ಲೋರೊಫ್ಲೋರೊಕಾರ್ಬನ್ಸ್ (ನೋಬೆಲ್ ಲೆಕ್ಚರ್) - ಎನ್‌ಸೈಕ್ಲೊಪಿಡಿಯ ಆಫ್ ಅರ್ಥ್
  6. ನೇಚರ್
  7. "ಅಲ್ಟ್ರಾವೈಲೆಟ್ ಅಬ್ಸೋರ್ಪ್ಶನ್ ಸ್ಪೆಕ್ಟ್ರಮ್ ಆಫ್ ಕ್ಲೋರಿನ್ ಪೆರಾಕ್ಸೈಡ್ , ClOOCl". Archived from the original on 2008-10-05. Retrieved 2009-12-01.
  8. "ಬುಲೆಟಿನ್ - ದ ಜರ್ನಲ್ ಆಫ್ ದ ವರ್ಲ್ಡ್ ಮೀಟರೋಲಾಜಿಕಲ್ ಆರ್ಗನೈಸೇಶನ್". Archived from the original on 2008-10-07. Retrieved 2009-12-01.
  9. [೨]
  10. ದ ಓಝೋನ್ ಹೋಲ್ ಟವರ್: ಪಾರ್ಟ್ II. ರೀಸೆಂಟ್ ಓಝೋನ್ ಡಿಪ್ಲೀಶನ್
  11. "ವರ್ಲ್ಡ್ ಮೀಟರೋಲಾಜಿಕಲ್ ಆರ್ಗನೈಸೇಶನ್ (WMO)". Archived from the original on 2007-04-25. Retrieved 2009-12-01.
  12. "U.S. EPA: ಓಝೋನ್ ಡಿಪ್ಲೀಶನ್". Archived from the original on 2006-09-30. Retrieved 2009-12-01.
  13. "ಕ್ಲೈಮ್ಯಾಟ್ ಚೇಂಜ್ 2001: ದ ಸೈಂಟಿಫಿಕ್ ಬೇಸಿಸ್". Archived from the original on 2016-06-03. Retrieved 2009-12-01.
  14. "ಆರ್ಕೈವ್ ನಕಲು". Archived from the original on 2008-10-07. Retrieved 2009-12-01.
  15. ಕ್ಲೋರೊಫ್ಲೋರೊಕಾರ್ಬನ್ಸ್ – FREE ಕ್ಲೋರೊಫ್ಲೋರೊಕಾರ್ಬನ್ಸ್ ಇನ್‌ಫೋರ್ಮೇಶನ್| Encyclopedia.com: ಫ್ಯಾಕ್ಟ್ಸ್, ಪಿಕ್ಚರ್ಸ್, ಇನ್‌ಫೋರ್ಮೇಶನ್!
  16. http://earthobservatory.nasa.gov/IOTD/view.php?id=1771
  17. ಅಂಟಾರ್ಕಟಿಕ್ ಓಝೋನ್ ಹೋಲ್ Archived 2009-02-15 ವೇಬ್ಯಾಕ್ ಮೆಷಿನ್ ನಲ್ಲಿ.
  18. ಅಂಟಾರ್ಕಟಿಕ್ ಓಝೋನ್-ಡಿಪ್ಲೀಶನ್ FAQ, ಸೆಕ್ಷನ್ 7
  19. [34] ^ [33].
  20. [36] ^ [35]
  21. ಓಝೋನ್ ಆಂಡ್ ಸೋಲಾರ್ UV-B ರೇಡಿಯೇಶನ್: ಕಿವ್ ಮತ್ತು ಅಂಟಾರ್ಕಟಿಕಾದಲ್ಲಿ ಸೂರ್ಯನ ಬೆಳಕಿನಿಂದ ವಿಟಮಿನ್ D ಉತ್ಪತ್ತಿಯ ಸಾಮರ್ಥ್ಯವನ್ನು ನಿಯಂತ್ರಿಸುತ್ತದೆ - Iಇಂಟರ್‌ನ್ಯಾಶನಲ್ ಜರ್ನಲ್ ಆಫ್ ರಿಮೋಟ್ ಸೆಂಸಿಂಗ್
  22. ೨೨.೦ ೨೨.೧ ೨೨.೨ http://www.gcrio.org/CONSEQUENCES/summer95/impacts.html Archived 2010-07-10 ವೇಬ್ಯಾಕ್ ಮೆಷಿನ್ ನಲ್ಲಿ. Consequences (vol. 1, No. 2) - ಇಂಪಾಕ್ಟ್ಸ್ ಆಫ್ ಎ ಪ್ರೊಜೆಕ್ಟೆಡ್ ಡಿಪ್ಲೀಶನ್ ಆಫ್ ದ ಓಝೋನ್ ಲೇಯರ್
  23. ವೇವ್‌ಲೆಂತ್ಸ್ ಇಫೆಕ್ಟಿವ್ ಇನ್ ಇಂಡಕ್ಷನ್ ಆಫ್ ಮೆಲಿಗ್ನಾಂಟ್ ಮಿ ...[ಪ್ರೊಕ್ ನಾಟ್ಲ್ ಅಕಾಡ್ ಸ್ಕಿ U S A. 1993] - PubMed ರಿಸಲ್ಟ್
  24. ಪಿಯರ್ಸ್ et al, ಕ್ಯಾನ್ಸರ್ ರೆಸಿ. 2002, 62(14):3992–6
  25. ಅಬರ್ಕ, ಜೈಮ್ F. & ಕ್ಯಾಸಿಕಿಯ, ಕ್ಲಾಡಿಯೊ C. (2002)ಅಂಟಾರ್ಕಟಿಕ್ ಓಝೋನ್ ರಂಧ್ರದಿಂದ ಚರ್ಮ ಕ್ಯಾನ್ಸರ್ ಮತ್ತು ನೇರಳಾತೀತ-B ವಿಕಿರಣ: ದಕ್ಷಿಣ ಚಿಲಿ, 1987-2000. ಫೋಟೊಡರ್ಮಟಾಲಜಿ, ಫೋಟೊಇಮ್ಯುನೋಲಜಿ & ಫೋಟೊಮೆಡಿಸಿನ್ 18 (6), 294–302 [೩]
  26. JAMA - ಜನಸಂಖ್ಯಾ-ಆಧಾರಿತ ಅಧ್ಯಯನದಲ್ಲಿನ ಸೂರ್ಯನ ಬೆಳಕಿಗೆ ಮೈಯೊಡ್ಡುವಿಕೆ ಮತ್ತು ಮಸೂರ ಅಪಾರದರ್ಶಕತೆಯ ಅಪಾಯ: ದ ಸಲಿಸ್ಬರಿ ಐ ಇವಾಲ್ವೇಶನ್ ಪ್ರಾಜೆಕ್ಟ್, 26 ಆಗಸ್ಟ್ 1998, ವೆಸ್ಟ್ et al. 280 (8): 714
  27. ಅಲ್ಟ್ರಾವೈಲೆಟ್ ಲೈಟ್ ಎಕ್ಸ್‌ಪೋಸರ್ ಆಂಡ್ ಲೆನ್ಸ್ ಒಪಾಸಿಟೀಸ್: ದ ಬೀವರ್ ಡ್ಯಾಮ್ ಐ ಸ್ಟಡಿ. - ಕ್ರುಕ್‌ಶಾಂಕ್ಸ್ et al. 82 (12): 1658 - ಅಮೇರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್
  28. ರೇಸಿಯಲ್ ಡಿಫರೆನ್ಸಸ್ ಇನ್ ಲೆನ್ಸ್ ಒಪಾಸಿಟೀಸ್: ದ ಸಲಿಸ್ಬರಿ ಐ ಇವಾಲ್ವೇಶನ್ (SEE) ಪ್ರಾಜೆಕ್ಟ್
  29. ಪ್ಲಸ್ ಪ್ರಿವ್ಯಾಲೆನ್ಸ್ ಆಫ್ ಲೆನ್ಸ್ ಒಪಾಸಿಟೀಸ್ ಇನ್ ದ ಬಾರ್ಬಡೋನ್ ಐ S...[ಆರ್ಕ್ ಒಫ್ಥಾಲ್ಮೋಲ್. 1997] - PubMed ರಿಸಲ್ಟ್
  30. R. P. Sinha (1999). "Photoecophysiology of cyanobacteria". Journal of Photochemistry and Photobiology. 3: 91–101. {{cite journal}}: Unknown parameter |coauthors= ignored (|author= suggested) (help)
  31. ೩೧.೦ ೩೧.೧ ೩೧.೨ "ಆರ್ಕೈವ್ ನಕಲು". Archived from the original on 2012-04-06. Retrieved 2009-12-01.
  32. ಯೂಸ್ ಆಫ್ ಓಝೋನ್ ಡಿಪ್ಲೀಟಿಂಗ್ ಸಬ್ಸ್ಟಾಂಸಸ್ ಇನ್ ಲ್ಯಾಬೊರೇಟರೀಸ್. Archived 2008-02-27 ವೇಬ್ಯಾಕ್ ಮೆಷಿನ್ ನಲ್ಲಿ.TemaNord 516/2003 Archived 2008-02-27 ವೇಬ್ಯಾಕ್ ಮೆಷಿನ್ ನಲ್ಲಿ.
  33. Newman, P. A., Nash, E. R., Kawa, S. R., Montzka, S. A. and Schauffler, S. M (2006). "When will the Antarctic ozone hole recover?". Geophysical Research Letters. 33: L12814. doi:10.1029/2005GL025232.{{cite journal}}: CS1 maint: multiple names: authors list (link)
  34. "ವರ್ಲ್ಡ್ ಮೀಟರೊಲಾಜಿಕಲ್ ಆರ್ಗನೈಸೇಶನ್ (WMO)" (PDF). Archived from the original (PDF) on 2007-01-24. Retrieved 2009-12-01.
  35. NOAA ಸ್ಟಡಿ ಶೋಸ್ ನೈಟ್ರಸ್ ಆಕ್ಸೈಡ್ ನೌ ಟಾಪ್ ಓಝೋನ್-ಡಿಪ್ಲೀಟಿಂಗ್ ಎಮಿಶನ್, NOAA, ಆಗಸ್ಟ್ 27, 2009
  36. "ವರ್ಲ್ಡ್ ಮೀಟರೊಲಾಜಿಕಲ್ ಆರ್ಗನೈಸೇಶನ್ (WMO)" (PDF). Archived from the original (PDF) on 2007-01-24. Retrieved 2009-12-01.
  37. CPC - ಸ್ಟ್ರಾಟೊಸ್ಫಿಯರ್: ವಿಂಟರ್ ಬುಲೆಟಿನ್ಸ್
  38. [೪]
  39. "ಅವೈಲೇಬಲ್ ಆನ್ವಲ್ NCEP ಡೇಟಾ". Archived from the original on 2009-03-27. Retrieved 2009-12-01.
  40. "ಸೆಲೆಕ್ಟ್ ಓಝೋನ್ ಮ್ಯಾಪ್ಸ್, ಇಂಡಿವಿಸ್ವಲ್ ಸೋರ್ಸಸ್". Archived from the original on 2007-06-30. Retrieved 2009-12-01.
  41. ಇಂಡೆಕ್ಸ್ ಆಫ್/ಪ್ರೋಡಕ್ಟ್ಸ್/ಸ್ಟ್ರಾಟೊಸ್ಫಿಯರ್/sbuv2to/ಆರ್ಕಿವ್/nh
  42. ಓಝೋನ್ ಹೋಲ್ ವಾಚ್
  43. http://www.theregister.co.uk/2006/10/03/ozone_depletion
  44. "CNW Group | CANADIAN SPACE AGENCY | ಕೆನಡಾದ SCISAT ಉಪಗ್ರಹವು 2006 ಓಝೋನ್-ಪದರ ಸವಕಳಿಯನ್ನು ವಿವರಿಸುತ್ತದೆ". Archived from the original on 2008-01-11. Retrieved 2009-12-01.
  45. ಓಝೋನ್ ಡಿಪ್ಲೀಶನ್, ಹಿಸ್ಟರಿ ಆಂಡ್ ಪಾಲಿಟಿಕ್ಸ್ Archived 2009-03-06 ವೇಬ್ಯಾಕ್ ಮೆಷಿನ್ ನಲ್ಲಿ. ಸ್ವೀಕರಿಸಿರುವುದು 18 ನವೆಂಬರ್ 2007.
  46. ೪೬.೦ ೪೬.೧ Hegerl, Gabriele C. "Understanding and Attributing Climate Change" (PDF). Climate Change 2007: The Physical Science Basis. Contribution of Working Group I to the Fourth Assessment Report of the Intergovernmental Panel on Climate Change. Intergovernmental Panel on Climate Change. p. 675. Archived from the original (PDF) on 2018-05-08. Retrieved 2008-02-01. {{cite web}}: Unknown parameter |coauthors= ignored (|author= suggested) (help)
  47. "Climate Change 2001: Working Group I: The Scientific Basis". Intergovernmental Panel on Climate Change Work Group I. 2001. pp. Chapter 6.4. Archived from the original on 2016-06-03. Retrieved 2007-03-04.
  48. ೪೮.೦ ೪೮.೧ "IPCC/TEAP Special Report on Safeguarding the Ozone Layer and the Global Climate System: Issues Related to Hydrofluorocarbons and Perfluorocarbons (summary for policy makers)" (PDF). International Panel on Climate Change and Technology and Economic Assessment Panel. 2005. Archived from the original (PDF) on 2005-05-19. Retrieved 2007-03-04. {{cite journal}}: Cite journal requires |journal= (help)
  49. "The Relative Roles of Ozone and Other Greenhouse Gases in Climate Change in the Stratosphere". Geophysical Fluid Dynamics Laboratory. 2007-02-29. Retrieved 2007-03-04. {{cite web}}: Check date values in: |date= (help)
  50. "ಫೊಯನಿಕ್ಸ್ - ನ್ಯೂಸ್ - FREON EASY". Archived from the original on 2007-10-11. Retrieved 2009-12-01.
  51. FAQ, ಪಾರ್ಟ್ I, ವಿಭಾಗ 1.3.
  52. ಓಝೋನ್-ಡಿಪ್ಲೀಶನ್ FAQ, ಪಾರ್ಟ್ II, ವಿಭಾಗ 4.3
  53. http://www.nature.com/nature/journal/v403/n6767/full/403295a0.html
  54. ಓಝೋನ್-ಡಿಪ್ಲೀಶನ್ FAQ, ಪಾರ್ಟ್ II, ವಿಭಾಗ 4.4
  55. ಓಝೋನ್-ಡಿಪ್ಲೀಶನ್ FAQ, ಪಾರ್ಟ್ III, ವಿಭಾಗ6
  56. ಓಝೋನ್-ಡಿಪ್ಲೀಶನ್ FAQ, ಅಂಟಾರ್ಕಟಿಕ್
  57. ಓಝೋನ್ ಹೋಲ್: ಡೆಫಿನಿಶನ್ ಆಂಡ್ ಮಚ್ ಮೋರ್ ಫ್ರಮ್ Answers.com

ತಂತ್ರಜ್ಞಾನರಹಿತ ಪುಸ್ತಕಗಳು

[ಬದಲಾಯಿಸಿ]
  • ಡೊಟ್ಟೊ, ಲಿಡಿಯ ಮತ್ತು ಸ್ಕಿಫ್, ಹ್ಯರೋಲ್ಡ್ (1978). ದ ಓಝೋನ್ ವಾರ್. ಡಬಲ್‌ಡೇ. ISBN 0-385-49062-3
  • ರೋನ್ ಶರೋನ್ (1990). ಓಝೋನ್ ಕ್ರೈಸಿಸ್, 15 ಯಿಯರ್ ಎವಲ್ಯೂಶನ್ ಆಫ್ ಎ ಸಡೆನ್ ಗ್ಲೋಬಲ್ ಎರ್ಜೆನ್ಸಿ. ವಿಲೆ, 2001. ISBN 0-471-52823-4
  • ಕ್ಯಾಗಿನ್, ಸೇಥ್ ಮತ್ತು ಡ್ರೇ, ಫಿಲಿಪ್ (1993). ಬಿಟ್ವೀನ್ ಅರ್ಥ್ ಆಂಡ್ ಸ್ಕೈ: ಹೌ CFCs ಚೇಂಜ್ಡ್ ಅವರ್ ವರ್ಲ್ಡ್ ಆಂಡ್ ಎಂಡೇಂಜರ್ಡ್ ದ ಓಝೋನ್ ಲೇಯರ್. ಪ್ಯಾಂಥಿಯೋನ್. ISBN 0-679-42052-5

ಸಾರ್ವಜನಿಕ ನೀತಿ-ಸೂತ್ರ ಸಮಸ್ಯೆಗಳ ಬಗೆಗಿನ ಪುಸ್ತಕಗಳು

[ಬದಲಾಯಿಸಿ]
  • ಬೆನೆಡಿಕ್, ರಿಚಾರ್ಡ್ E. 1991). ಓಝೋನ್ ಡಿಪ್ಲೊಮೆಸಿ. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್‌. ISBN 0-674-65001-8 (ರಾಯಭಾರಿ ಬೆನೆಡಿಕ್‌ ಮೋಂಟ್ರಿಯಲ್ ಪ್ರೋಟೊಕಾಲ್‌ನಲ್ಲಿ ನಡೆದ ಸಭೆಯ ಮುಖ್ಯ U.S. ಸಂಧಾನಕಾರರಾಗಿದ್ದರು.)
  • ಲಿಟ್ಫಿನ್, ಕರೆಣ್ T. (1994). ಓಝೋನ್ ಪ್ರವಚನ-ಪಾಠಗಳು. ಕೋಲಂಬಿಯ ಯುನಿವರ್ಸಿಟಿ ಪ್ರೆಸ್. ISBN 0-231-08137-5

ಸಂಶೋಧನಾ ಲೇಖನಗಳು

[ಬದಲಾಯಿಸಿ]
  • Newman, P. A., Kawa, S. R. and Nash, E. R. (2004). "On the size of the Antarctic ozone hole?". Geophysical Research Letters. 31: L12814. doi:10.1029/2004GL020596.{{cite journal}}: CS1 maint: multiple names: authors list (link)
  • E. C. Weatherhead, S. B. Andersen (2006). "The search for signs of recovery of the ozone layer". Nature. 441: 39–45. doi:10.1038/nature04746.

ಹೊರಗಿನ ಕೊಂಡಿಗಳು

[ಬದಲಾಯಿಸಿ]
  • Ozone layer ಓಪನ್ ಡೈರೆಕ್ಟರಿ ಪ್ರಾಜೆಕ್ಟ್