ಸ್ತನಗ್ರಂಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ಸ್ತನಗ್ರಂಥಿಯ ಅಡ್ಡಕೊಯ್ತ1. ಎದೆ ಗೋಡೆ 2. ಪೆಕ್ಟೋರಾಲಿಸ್ ಸ್ನಾಯುಗಳು 3. ಕಿರುಹಾಲೆಗಳು 4. ಚೂಚುಕ 5. ವರ್ಣವಲಯ 6. ದುಗ್ಧನಾಳ 7. ಕೊಬ್ಬಿನ ಅಂಗಾಂಶ 8. ಚರ್ಮ

ಸ್ತನಗ್ರಂಥಿ ಎಂದರೆ ಸ್ತನಿಗಳ ದೇಹದಲ್ಲಿ ಹಾಲನ್ನು (ಸ್ತನ್ಯ) ಉತ್ಪಾದಿಸುವ ಅಥವಾ ಸ್ರವಿಸುವ ವಿಶೇಷ ಅಂಗ (ಮ್ಯಾಮ್ಮರಿ ಗ್ಲ್ಯಾಂಡ್). ಇದರಿಂದ ಹಾಲು ಹೊರಬರುವ ದೇಹಭಾಗಕ್ಕೆ ಮೊಲೆ (ಮನುಷ್ಯರಲ್ಲಿ) ಅಥವಾ ಕೆಚ್ಚಲು (ಪ್ರಾಣಿಗಳಲ್ಲಿ) ಎಂದು ಹೆಸರು. ಸ್ತನಗಳು ಪುರುಷರಿಗೂ ಸ್ತ್ರೀಯರಿಗೂ ಇರುವುವು. ಆದರೆ ಸ್ತನಗ್ರಂಥಿಗಳಿರುವುದು ಸ್ತ್ರೀಯರಲ್ಲಿ ಮಾತ್ರ. ಅವರು ಪ್ರಾಯಕ್ಕೆ ಬಂದಾಗ ಪೂರ್ಣಪ್ರಮಾಣದ ಬೆಳೆವಣಿಗೆ ಕಾಣುತ್ತದೆ. ಮುಂದೆ ಋತುಬಂಧವಾದಾಗ (ಮೆನೊಪಾಸ್) ಅವು ಕುಗ್ಗುತ್ತವೆ. ಮಗುವಿನ ಅಥವಾ ಶಿಶುಪ್ರಾಣಿಯ ಮೊದಲ ಆಹಾರವೇ ತಾಯಿಯ ಮೊಲೆಹಾಲು — ಇದು ನಿಸರ್ಗವಿತ್ತಿರುವ ಒಂದು ವರ.

ಮುಖ್ಯವಾಗಿ ಹಸು ಮತ್ತು ಎಮ್ಮೆಗಳಲ್ಲಿ ಅಧಿಕ ಪ್ರಮಾಣದ ಮೊಲೆಹಾಲು ಉತ್ಪನ್ನವಾಗುವುದು. ಆದಿಕಾಲದಿಂದಲೂ ಮಾನವ ಈ ಹಾಲನ್ನು ಕರೆದು (ಹಿಂಡಿ) ತನ್ನ ಆಹಾರವಾಗಿ ಬಳಸುತ್ತಿದ್ದಾನೆ. ಹೈನುಗಾರಿಕೆ ಒಂದು ಉದ್ಯಮವೇ ಆಗಿದೆ. ದೇಹದ ಇತರ ಭಾಗಗಳಂತೆ ಸ್ತನಗ್ರಂಥಿಯೂ ಬಳಲುವುದುಂಟು. ಅದನ್ನು ಕೀವು, ಉರಿಯೂತ, ಕುರು, ಕ್ಷಯ, ಕ್ಯಾನ್ಸರ್ ಮುಂತಾದವು ಬಾಧಿಸುವುದು ವಿರಳವಲ್ಲ.

ಗ್ರಂಥಸೂಚಿ[ಬದಲಾಯಿಸಿ]

  • Ackerman, A. Bernard; Almut Böer; Bruce Bennin; Geoffrey J. Gottlieb (2005). Histologic Diagnosis of Inflammatory Skin Diseases An Algorithmic Method Based on Pattern Analysis. Ardor Scribendi. ISBN 978-1-893357-25-9. Archived from the original on 21 April 2011. Retrieved 5 ಮಾರ್ಚ್ 2024. {{cite book}}: More than one of |archivedate= and |archive-date= specified (help); More than one of |archiveurl= and |archive-url= specified (help)
  • Moore, Keith L. et al. (2010) Clinically Oriented Anatomy 6th Ed

ಹೊರಗಿನ ಕೊಂಡಿಗಳು[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: