ಸಿಹಿ ಕಹಿ ಚಂದ್ರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಶೇಖರ್ (ಜನನ 1962 ಜುಲೈ 23), (ಅವರ ತೆರೆಯ ಮೇಲಿನ ಹೆಸರು ಸಿಹಿ ಕಹಿ ಚಂದ್ರು, [೧]) ಕನ್ನಡ ಚಲನಚಿತ್ರ ಮತ್ತು ದೂರದರ್ಶನ ನಟರು.

ವೃತ್ತಿಜೀವನ[ಬದಲಾಯಿಸಿ]

ಅವರು ಮತ್ತು ಅವರ ಪತ್ನಿ ಸಿಹಿ ಕಹಿ ಗೀತಾ 1986-87ರ ನಡುವೆ ಪ್ರತಿ ಶುಕ್ರವಾರ ಸಂಜೆಯ 7.00-7.30 ಸಮಯದಲ್ಲಿ ದೂರದರ್ಶನದ ಸಿಹಿ ಕಹಿ [೨] ಎಂಬ ಹೆಸರಿನ ದೂರದರ್ಶನ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರು. ಅವು ದೂರದರ್ಶನದ ಆರಂಭಿಕ ದಿನಗಳಾದ್ದರಿಂದ , ಕಾರ್ಯಕ್ರಮವು ಹೆಚ್ಚಿನ ವೀಕ್ಷಕರನ್ನು ಹೊಂದಿ ಕನ್ನಡ ಪ್ರೇಕ್ಷಕರಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿತ್ತು. ಇದು ಸನ್ನಿವೇಶ-ಹಾಸ್ಯ (ಸಿಟ್‌ಕಾಮ್) ಧಾರಾವಾಹಿಯಾಗಿದ್ದು, ಇದರಲ್ಲಿ ಚಂದ್ರು ಮತ್ತು ಗೀತಾ ಗಂಡ ಮತ್ತು ಹೆಂಡತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಸ್ನೇಹ ಪ್ರೀತಿಯಾಗಿ ಅರಳಿ ಅವರು 9 ನವೆಂಬರ್ 1990 ರಂದು ನಿಜ ಜೀವನದಲ್ಲಿಯೂ ಸಹ ಗಂಡಹೆಂಡಿರಾದರು. ಧಾರಾವಾಹಿಯಲ್ಲಿನ ಅವರುಗಳ ಯಶಸ್ಸು ಚಂದ್ರುಗೆ "ಸಿಹಿ ಕಹಿ ಚಂದ್ರು" ಮತ್ತು ಗೀತಾಗೆ "ಸಿಹಿ ಕಹಿ ಗೀತಾ" ಎಂಬ ಹೆಸರನ್ನು ನೀಡಿತು. ಅವರು ಹೆಸರಾಂತ ರಂಗಕರ್ಮಿಯೂ ಆಗಿದ್ದಾರೆ, ಅವರ ಪ್ರಸಿದ್ಧ ಹಾಸ್ಯ ನಾಟಕ ನೀನಾನಾದ್ರೆ ನಾನೇನಾ? [೩] ಶೇಕ್ಸ್‌ಪಿಯರ್‌ನ ನಾಟಕವಾದ ದಿ ಕಾಮಿಡಿ ಆಫ್ ಎರರ್ಸ್‌ನ ರೂಪಾಂತರವಾಗಿದೆ.

ಸುವರ್ಣ ಕನ್ನಡ ಟಿವಿ ಚಾನೆಲ್ ದಲ್ಲಿ ಅವರ ಅಡುಗೆ ಟಿವಿ ಶೋ ಬೊಂಬಾಟ್ ಭೋಜನ ದೊಡ್ಡ ಯಶಸ್ಸನ್ನು ಹೊಂದಿದೆ. ಅವರ ಅಡುಗೆ ಶೈಲಿ ಮತ್ತು ಅಡುಗೆಯ ಪರಿಕಲ್ಪನೆಯು ಅಡುಗೆಯನ್ನು ಸುಲಭದ ಕೆಲಸವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದು ಹೆಚ್ಚು ಸ್ತ್ರೀ ಪ್ರಾಬಲ್ಯದ ಮನೆಅಡುಗೆಯನ್ನು ಪ್ರಯತ್ನಿಸಲು ಪುರುಷರನ್ನು ಪ್ರೋತ್ಸಾಹಿಸುತ್ತದೆ.

ಅವರು ಹಾಸ್ಯನಟ ಮತ್ತು ಪೋಷಕ ನಟರಾಗಿ ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬ್ಯಾಂಕ್ ಜನಾರ್ದನ್ ಮತ್ತು ಉಮಾಶ್ರೀ ಅವರ ಹಾಸ್ಯ ದೃಶ್ಯಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು 1990 ರ ಚಲನಚಿತ್ರ ಗಣೇಶನ ಮದುವೆಯಲ್ಲಿ (ಫಣಿ ರಾಮಚಂದ್ರರಿಂದ) ತೆರಿಗೆ ನಿರೀಕ್ಷಕರಾಗಿ ನಿರ್ಣಾಯಕ ಪಾತ್ರವನ್ನು ಹೊಂದಿದ್ದರು. ಅವರ ಅಭಿನಯವನ್ನು ಗೆಳೆಯರು ಮತ್ತು ಪ್ರೇಕ್ಷಕರು ಹೆಚ್ಚು ಮೆಚ್ಚುತ್ತಾರೆ. "ಸಿಹಿ ಕಹಿ" ಎಂಬ ಅಡ್ಡಹೆಸರು, ಕನ್ನಡದಲ್ಲಿ ಕಹಿ ಸಿಹಿಯ ಸಂಯೋಜನೆಯನ್ನು ಉಲ್ಲೇಖಿಸುವ ನುಡಿಗಟ್ಟು, ಹಾಸ್ಯದಿಂದ ನಕಾರಾತ್ಮಕ ಪಾತ್ರಗಳವರೆಗೆ ಅವರು ನಿರೂಪಿಸಿದ ಪಾತ್ರಗಳ ವೈವಿಧ್ಯತೆಗೆ ಕಾರಣವಾಗಿದೆ. ಗೌರಿ ಗಣೇಶ, ಪುಟಕ್ಕನ ಹೈವೇ ಮತ್ತು ತೆನಾಲಿ ರಾಮ ಅವರ ಜನಪ್ರಿಯ ಕೃತಿಗಳು . ನಿರ್ದೇಶಕರಾಗಿ, ಚಂದ್ರು ಕಿರುತೆರೆಯ ಸಿಲ್ಲಿ ಲಲ್ಲಿ ಮತ್ತು ಪಾಪ ಪಾಂಡು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

2017 ರಲ್ಲಿ, ಅವರು ಬಿಗ್ ಬಾಸ್ ಕನ್ನಡ 5 ರಲ್ಲಿ ಭಾಗವಹಿಸಿದರು ಮತ್ತು 49 ನೇ ದಿನಕ್ಕೆ ಹೊರಹಾಕಲ್ಪಟ್ಟರು.

2021 ರಲ್ಲಿ, ಅವರು ಬಾಣಸಿಗ ವೆಂಕಟೇಶ್ ಭಟ್ ಅವರೊಂದಿಗೆ ಕುಕ್ಕು ವಿಥ್ ಜೊತೆ ಕಿರಿಕ್ಕು ಎಂಬ ಅಡುಗೆ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದರು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. "Recipe for success". Deccan Herald. 23 December 2012. Archived from the original on 3 April 2018. Retrieved 2 April 2018.
  2. "Archived copy". Archived from the original on 29 November 2014. Retrieved 2013-01-22.{{cite web}}: CS1 maint: archived copy as title (link)
  3. "ಆರ್ಕೈವ್ ನಕಲು". Archived from the original on 2011-12-29. Retrieved 2021-11-12.