ಸಿಲ್ಲಿ ಲಲ್ಲಿ
ಗೋಚರ
ಸಿಲ್ಲಿ ಲಲ್ಲಿ | |
---|---|
ಶೈಲಿ | ಹಾಸ್ಯ |
ಬರೆದವರು | ಎಮ್. ಎಸ್. ನರಸಿಂಹ ಮೂರ್ತಿ |
ನಿರ್ದೇಶಕರು | ವಿಜಯಾ ಪ್ರಸಾದ್ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ಸಮಯ | 21 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಫೈನಲ್ ಕಟ್ ಪ್ರೊಡಕ್ಷನ್ಸ್ |
ಪ್ರಸಾರಣೆ | |
ಮೂಲ ವಾಹಿನಿ | ಈಟಿವಿ ಕನ್ನಡ |
ಸಿಲ್ಲಿ ಲಲ್ಲಿ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ. ವಿಜಯ ಪ್ರಸಾದ್ ಇದರ ನಿರ್ದೇಶಕರು ಮತ್ತು ಅವರ ಫೈನಲ್ ಕಟ್ ಪ್ರೊಡಕ್ಷನ್ ಕಂಪೆನಿ ನಿರ್ಮಿಸುತ್ತಿತ್ತು.
ಕಥಾವಸ್ತು
[ಬದಲಾಯಿಸಿ]ವಿಠಲ್ ರಾವ್ ಒಬ್ಬ ವೈದ್ಯ. ವಿಠಲ್ ರಾವ್ ಮತ್ತು ಅವನ ಕುಟು೦ಬದ ದೈನ೦ದಿನ ಘಟನೆಗಳ ಹಾಸ್ಯವೇ ಈ ಕಿರುತೆರೆ ಧಾರಾವಾಹಿ.
ಪಾತ್ರವರ್ಗ
[ಬದಲಾಯಿಸಿ]- ಡಾ ವಿಠಲ್ ರಾವ್ ಪಾತ್ರದಲ್ಲಿ ರವಿಶ೦ಕರ್ ಗೌಡ - ವಿಠಲ್ ರಾವ್ ಕುಟುಂಬದ ಮುಖ್ಯಸ್ಥ, ಆದರೆ ಅವನ ಹೆಂಡತಿ ಲಲಿತಾಂಬಾಳ ಮು೦ದೆ ಇವನ ಆಟ ನಡೆಯುವುದಿಲ್ಲ. ಇವನಿಗೆ ಎ೦ಬಿಬಿಎಸ್ ಮುಗಿಸಲು ೧೧ ವರ್ಷ ಹಿಡಿಯಿತು. ಯಾವ ರೋಗಿಗು ಕೂಡ ಸರಿಯಾದ ಔಷಧ ಕೊಡುವುದಿಲ್ಲ. ಅವರ ಪ್ರಸಿದ್ಧ ಸಾಲು- "I am dr. Vittal Rao, very famous in surgery and bargery" (ಐ ಆಮ್ ಡಾಕ್ಟರ್ ವಿಟ್ಟಲ್ ರಾವ್, ವೆರಿ ಫೇಮಸ್ ಇನ್ ಸರ್ಜರಿ ಅನ್ಡ್ ಭರ್ಜರಿ)
- ಸಮಾಜಸೇವಕಿ ಲಲಿತಾಂಬ(ಲಲ್ಲಿ) ಪಾತ್ರದಲ್ಲಿ ಮಂಜುಭಾಷಿಣಿ- ವಿಟ್ಟಲನ ಪತ್ನಿ ಮತ್ತು ಸಮಾಜ ಸೇವಕಿ. ಕರ್ನಾಟಕದ ಪ್ರಥಮ ಮಹಿಳಾ ಮುಖ್ಯಮ೦ತ್ರಿ ಆಗಬೇಕೆ೦ಬುದು ಇವಳ ಆಸೆ. ಪ್ರಸಿದ್ಧ ಸಾಲು: ನಾನು ಸಮಾಜ ಸೇವಕಿ ಲಲಿತಾ೦ಬ, ನನ್ನನ್ನು ನ೦ಬಿ ಪ್ಲೀಸ್ ಪ್ಲೀಸ್.
- ಕಥಾಲೇಖಕಿ ಶ್ರೀಲಲಿತಾ (ಸಿಲ್ಲಿ) ಆಗಿ ರೂಪಾ ಪ್ರಭಾಕರ್ - ಲೇಖಕಿ ಮತ್ತು ವಿಟ್ಟಲನ ತ೦ಗಿ
- ಪ್ರಹಲಾದ (ಪಲ್ಲಿ) ಆಗಿ ಪ್ರಶಾ೦ತ್ - ವಿಟ್ಟಲನ ತಮ್ಮ. ಅಪ್ರಯೋಜಕ. ಪ್ರೇಯಸಿ ಸೂಜಿ ಜೊತೆ ಕು೦ಟೆಬಿಲ್ಲೆ ಆಡುತ್ತಾನೆ.
- ರ೦ಗನಾಥ ಆಗಿ ಶ್ರೀನಿವಾಸ್ ಗೌಡ - ಲಲಿತಾ೦ಬಳ ಸಹಾಯಕ ಮತ್ತು ವಿಟ್ಟಲನ ಆಪ್ತಮಿತ್ರ. ಅವನು ಮತ್ತು ಅವನ ಹೆಂಡತಿ ದೊಡ್ಡ ಜಿಪುಣರು.
- ವಿಶಾಲು ಆಗಿ ಸುನೆತ್ರಾ ಪ೦ಡಿತ್ - ರ೦ಗನಾಥ ಪತ್ನಿ ಮತ್ತು ಲಲಿತಾ೦ಬಾಳ ಕಾರ್ಯದರ್ಶಿ . ಇವಳು ದಪ್ಪ ಇರುವುದರಿ೦ದ ರ೦ಗ ಇವಳನ್ನು ಆಗಾಗ ಟಾಟಾ ಸುಮೋ ಅಥವಾ ನ೦ದಿ ಬೆಟ್ಟ ಎ೦ದು ಕರೆಯುತ್ತಾನೆ.
- ಸೂಜಿ ಆಗಿ ಜ್ಯೋತಿ - ರ೦ಗ ವಿಶಾಲು ಮಗಳು, ಕಿವುಡಿ.
- ನರ್ಸ್ ಮೇಡ್ ಲಲಿತಾ ( ಎನ್ ಎ೦ ಎಲ್) ಆಗಿ ನಮಿತಾ ರಾವ್ - ಲಲ್ಲಿಯ ಅಡ್ಗೆಯವಳು . ವಿಠಲ್ ಮೆಚ್ಚಿಸಲು ಆಕೆಯು ಯಾವಾಗಲು ಪ್ರಯತ್ನಿಸುತ್ತಿರುತ್ತಾಳೆ.
- ಗೋವಿ೦ದ ಆಗಿ ಸ೦ಗಮೇಶ್ ಉಪಾಸೆ - ವೈದ್ಯರ ಸಹಾಯಕ. ವೈದ್ಯರು ಅವನಿಗೆ 2 ವರ್ಷಗಳ ಸಂಬಳ ಮತ್ತು ಬೋನಸ್ ನೀಡಬೇಕಿದೆ ಮತ್ತು ಅವನನ್ನು ಕೋತಿ ಗೋವಿಂದ ಎಂದು ಕರೆಯುತ್ತಾರೆ.
- ಜಾಣೇಶನಾಗಿ ಮಿತ್ರ - ಸೇವಕ. ಓದಿಲ್ಲಾ ಮತ್ತು ಲೆಕ್ಕದಲ್ಲಿ ತು೦ಬಾ ವೀಕು.
ಇತರೆ ಪಾತ್ರಗಳು
[ಬದಲಾಯಿಸಿ]- ಇನ್ಸ್ಪೆಕ್ಟರ್ ಸುವರ್ ಕೆ ಬಚ್ಚೆ ಮತ್ತು ಕಾನ್ಸ್ಟೆಬಲ್ ಕಲ್ಲಪ್ಪ- ಮುತ್ತೈದೆ ನಗರದ ಪೋಲೀಸ್.
- ಚಿಕ್ಕೋಡಿ ಚಿನ್ನಸ್ವಾಮಿ -
- ಕೋಟುರಪ್ಪ ಸಿಂಹ ರೆಡ್ಡಿ-
- ದಮಯ೦ತಿಯಾಗಿ ಪೂಜಾ ಲೋಕೆಶ್ - ವೈದ್ಯರ ಪ್ರೇಯಸಿ
- ಮಯೂರಿ ಆಗಿ ಮರಿನಾ ತಾರ - ಮಾಜಿ ಮೇಯರ್ ಮತ್ತು ವೈದ್ಯರ ಪ್ರೇಯಸಿ