ವಿಷಯಕ್ಕೆ ಹೋಗು

ದಿ ಕಾಮೆಡಿ ಆಫ್ ಎರರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರದರ್ಶನಕ್ಕಾಗಿ ಬಿತ್ತಿಚಿತ್ರ

ದಿ ಕಾಮೆಡಿ ಆಫ್ ಎರರ್ಸ್‌ ವಿಲಿಯಮ್ ಶೇಕ್ಸ್‌ಪಿಯರ್‌ ಬರೆದ ಪ್ರಾರಂಭಿಕ ನಾಟಕಗಳಲ್ಲಿ ಒಂದಾಗಿದ್ದು, ಇದನ್ನು ಬಹುಶಃ 1592 ರಿಂದ 1594 ರೊಳಗೆ ಬರೆಯಲಾಗಿದೆ ಎಂದು ಹೇಳುತ್ತಾರೆ. ಇದು ಅತ್ಯಂತ ಚಿಕ್ಕದಾದ ಮತ್ತು ಅತ್ಯಂತ ಪ್ರಹಸನಪರವಾದ ಹಾಸ್ಯ ನಾಟಕವಾಗಿದ್ದು, ಇದರಲ್ಲಿ ಹೆಚ್ಚಾಗಿ ವಿದೂಷಕ ದಂಡ ಮತ್ತು ವ್ಯಕ್ತಿಗಳನ್ನು ತಪ್ಪಾಗಿ ತಿಳಿಯುವುದರಿಂದ ಉಕ್ಕಿಸುವ ಹಾಸ್ಯವನ್ನು ಹೊಂದಿದ್ದಲ್ಲದೇ ಇದರಲ್ಲಿ ಶ್ಲೇಷೋಕ್ತಿಗಳು ಮತ್ತು ಶಬ್ದಗಳೊಡನೆ ಆಟ ಆಡುವಿಕೆಯೂ ಹೆಚ್ಚಾಗಿ ಕಂಡುಬರುತ್ತದೆ. ದ ಕಾಮೆಡಿ ಆಫ್ ಎರರ್ಸ್‌ ಮತ್ತು ಇನ್ನೊಂದು ನಾಟಕಗಳಲ್ಲಿ (ದ ಟೆಂಪೆಸ್ಟ್‌ ) ಮಾತ್ರ ಶೇಕ್ಸ್‌ಪಿಯರ್‌ ಕ್ಲಾಸಿಕಲ್ ಯುನಿಟಿಗಳನ್ನು ಸರಿಯಾಗಿ ಪಾಲಿಸುತ್ತಾನೆ. ಇದನ್ನು ಒಪೇರಾಗಳಿಗೆ, ನಾಟಕರಂಗಕ್ಕೆ, ಬೆಳ್ಳಿತೆರೆಗೆ ಮತ್ತು ಸಂಗೀತ ನಾಟಕಗಳಲ್ಲಿ ಸಹಾ ಪ್ರದರ್ಶಿಸಲಾಗಿದೆ.

ದಿ ಕಾಮೆಡಿ ಆಫ್ ಎರರ್ಸ್‌ ನಾಟಕದಲ್ಲಿ ಒಂದೇ ರೀತಿ ಕಾಣುವ ಅವಳಿಗಳ ಎರಡು ಜೋಡಿಗಳು ಹುಟ್ಟಿನ ಸಮಯದಲ್ಲಿ ಅಚಾನಕ್ಕಾಗಿ ಬೇರೆಯಾಗಿಬಿಡುತ್ತಾರೆ. ಅವರ ಕಥೆಯೇ ಇದು. ಸಿರ್ಯಾಕ್ಯೂಸ್‌‌ನ ಆಂತಿಫೋಲಸ್‌ ಮತ್ತು ಆತನ ಸೇವಕ, ಸಿರ್ಯಾಕ್ಯೂಸ್‌ನ ಡ್ರೋಮಿಯೋ‌ ಎಫೇಸಸ್‌ ಗೆ ಬರುತ್ತಾರೆ. ಅದೇ ಊರಿನಲ್ಲಿಯೇ ಅವರಿಬ್ಬರ ಅವಳಿ ಸಹೋದರರಾದ ಎಫೇಸಸ್‌‌ನ ಆಂತಿಫೋಲಸ್‌ ಮತ್ತು ಆತನ ಸೇವಕ ಎಫೇಸಸ್‌‌ನ ಡ್ರೋಮಿಯೋ‌ ಕೂಡಾ ಇರುತ್ತಾರೆ. ಸಿರ್ಯಾಕ್ಯೂಸಿನವರು ತಮ್ಮ ಅವಳಿಗಳ ಕುಟುಂಬದವರು ಮತ್ತು ಗೆಳೆಯರನ್ನು ಭೇಟಿ ಮಾಡಿದಾಗ, ಈ ಒಂದೇ ರೀತಿ ಕಾಣುವ ವ್ಯಕ್ತಿಗಳ ಕುರಿತು ತಪ್ಪುತಿಳುವಳಿಕೆಯಿಂದಾಗಿ ಅನೇಕ ದುರ್ಘಟನೆಗಳು ನಡೆಯುತ್ತವೆ. ಹೊಡೆತ ತಿನ್ನುವುದು, ಹೆಣ್ಣನ್ನು ಸೆಳೆಯುವ ಪ್ರಯತ್ನ, ಎಫೇಸಸ್‌ನ ಆಂತಿಫೋಲಸ್‌ನ ಬಂಧಿಸುವಿಕೆ, ದಾಂಪತ್ಯದ್ರೋಹದ ಆರೋಪ, ಕಳ್ಳತನ, ಹುಚ್ಚು ಮತ್ತು ದೆವ್ವ ಹಿಡಿದಿದೆ ಎಂಬ ಅನುಮಾನದಂತಹ ಅನೇಕ ಘಟನೆಗಳು ನಡೆಯುತ್ತವೆ.

ಮೂಲಗಳು

[ಬದಲಾಯಿಸಿ]

ಈ ಕಥೆಯ ಪ್ರಮುಖಾಂಶಗಳನ್ನು ಪ್ಲೇಟಸ್‌ ಬರೆದ ಎರಡು ರೋಮನ್‌ ಹಾಸ್ಯ ನಾಟಕಗಳಿಂದ ಪಡೆದುಕೊಳ್ಳಲಾಗಿದೆ.

ಮೆನಾಚ್ಮಿ ಯಿಂದ ಹೀಗೆ ಒಂದೇ ರೀತಿ ಕಾಣುವ ಇಬ್ಬರು ಅವಳಿ-ಜವಳಿ ವ್ಯಕ್ತಿಗಳನ್ನು ತಪ್ಪುತಿಳಿಯುವಿಕೆಯ ಅಂಶವನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಹಾಸ್ಯಪ್ರಿಯ ಗಣಿಕೆಯ ಪಾತ್ರ ಕೂಡಾ. ಮೆನಾಚ್ಮಿ ನಾಟಕದಲ್ಲಿ ಒಬ್ಬ ಅವಳಿಯು ಎಪಿಡ್ಯಾಮ್ನಸ್ ಎಂಬ ಸ್ಥಳದಿಂದ ಬಂದಿದ್ದು ಅದನ್ನು ಶೇಕ್ಸ್‌ಪಿಯರ್‌ ಎಫೇಸಸ್‌ ಎಂದು ಬದಲಿಸುತ್ತಾನೆ. ಇದರಲ್ಲಿ ಅನೇಕ ಬಾರಿ ಸೇಂ. ಪಾಲ್ರ ಎಪಿಸಲ್ ಟು ಎಫೇಸಿಯನ್ಸ್ ಬಗ್ಗೆ ಉಲ್ಲೇಖಗಳಿವೆ.

ಏಂಪಿಟ್ರೂ ದಿಂದ ಆತ ಅದೇ ಹೆಸರಿನ ಇಬ್ಬರು ಸೇವಕರನ್ನು ತೆಗೆದುಕೊಳ್ಳುತ್ತಾನೆ. ಅಷ್ಟೇ ಅಲ್ಲದೇ ಅಂಕ 3 ರಲ್ಲಿ ಗಂಡ ಗಂಡ ಹೊರ ಹೋಗುವುದು ಮತ್ತು ಹೆಂಡತಿ ಅವನಂತಿರುವವನ ಜೊತೆ ಊಟ ಮಾಡುವುದು ಸಹಾ ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ.

ಇದರಲ್ಲಿರುವ ಏಜಿಯನ್‌ ಮತ್ತು ಎಮಿಲಿಯಾರ ಚೌಕಟ್ಟಾಗಿರುವ ಕಥೆಯನ್ನು ಅಪೋಲೊನಿಯಸ್ ಆಫ್ ಟೈರ್‌ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಇದರಿಂದಲೇ ಟ್ವೆಲ್ಫ್‌ತ್ ನೈಟ್ ಮತ್ತು ಪೆರಿಕಲ್ಸ್, ಪ್ರಿನ್ಸ್ ಆಫ್ ಟೈರ್‌ ನಾಟಕಗಳಿಗೂ ಅಂಶಗಳನ್ನು ಪಡೆದುಕೊಳ್ಳಲಾಗಿದೆ.

ದಿನಾಂಕ ಮತ್ತು ಪಠ್ಯ

[ಬದಲಾಯಿಸಿ]

ಈ ನಾಟಕದಲ್ಲಿ ಫ್ರಾನ್ಸ್‌ನಲ್ಲಿ ನಡೆಯುವ ನಿರಂತರ ಯುದ್ಧಗಳ ಕುರಿತು ಮಾತುಕತೆ ಇರುವುದರಿಂದಾಗಿ ಇದನ್ನು 1589 ರಿಂದ 1595ರ ನಡುವೆ ಬರೆಯಲಾಗಿದೆ ಎಂದು ಹೇಳುತ್ತಾರೆ. ವಿಲಿಯಮ್‌ ವಾರ್ನರ್‌ನ ಮೆನಾಚ್ಮಿ ಪುಸ್ತಕದ ಅನುವಾದವನ್ನು ಸ್ಟೇಶನರ್ಸ್ ಕಂಪನಿಯ ನೋಂದಣಿ ಪುಸ್ತಕದಲ್ಲಿ ಜೂನ್ 10, 1594 ರಂದು ನಮೂದಿಸಿಕೊಳ್ಳಲಾಯಿತು ಮತ್ತು 1595 ರಂದು ಪ್ರಕಟಿಸಲಾಯಿತು. ವಾರ್ನರ್‌ನ ಅನುವಾದವನ್ನು ಲಾರ್ಡ್ ಚೇಂಬರ್ಲೇನ್ಸ್ ಮೆನ್‌/1} ಗೆ ಪೋಷಕನಾಗಿದ್ದ ಲಾರ್ಡ್ ಹನ್ಸ್‌ಡನ್‌ಗೆ ಅರ್ಪಿಸಲಾಗಿತ್ತು. ಬಹುಶಃ ಶೇಕ್ಸ್‌ಪಿಯರ್‌ ಈ ಕೃತಿಯ ಅನುವಾದವನ್ನು ಅದು ಮುದ್ರಣಗೊಳ್ಳುವ ಮೊದಲೇ ನೋಡಿರುವ ಸಾಧ್ಯತೆಯಿದೆ — ಅಲ್ಲದೇ ಪ್ಲೇಟಸ್‌ ನ ಕೃತಿಗಳು ವ್ಯಾಕರಣ ತರಗತಿಗಳಿಗಾ ಆ ಕಾಲದಲ್ಲಿ ಪಠ್ಯವಾಗಿತ್ತು ಎಂಬುದೂ ಕೂಡಾ ನಿಜ. ಚಾರ್ಲ್ಸ್ ವಿಟ್‌ವರ್ಥ್‌, ಈ ನಾಟಕದ ತನ್ನ ಆವೃತ್ತಿಯಲ್ಲಿ ದ ಕಾಮೆಡಿ ಆಫ್ ಎರರ್ಸ್‌ ನಾಟಕವನ್ನು "1594ರ ಕೊನೆಯ ದಿನಗಳಲ್ಲಿ" ಬರೆಯಲಾಯಿತು ಎಂದು ವಾದಿಸುತ್ತಾನೆ.[] ಈ ನಾಟಕವು ಫಸ್ಟ್ ಫೋಲಿಯೋದಲ್ಲಿ ಮೊದಲು 1623ರಲ್ಲಿ ಪ್ರಕಟಗೊಳ್ಳುವವರೆಗೂ ಅದನ್ನು ಪ್ರಕಟಿಸಲಿಲ್ಲ.

ಪಾತ್ರಗಳು

[ಬದಲಾಯಿಸಿ]

ಕಥಾ ಸಾರಾಂಶ

[ಬದಲಾಯಿಸಿ]

2008ರ ಸೆಪ್ಟೆಂಬರ್‌ನಲ್ಲಿ ಕಾರ್ಮೆಲ್‌ನ ಫಾರೆಸ್ಟ್ ಥಿಯೇಟರ್‌ನಲ್ಲಿ ಶೇಕ್ಸ್‌ಫಿಯರ್‌ ಹಬ್ಬದಲ್ಲಿ ನಡೆದ ಅವಳಿ ಡ್ರೋಮಿಯೋಗಳ ಕಥೆ. ಸಿರಾಕಿಯನ್ ವ್ಯಾಪಾರಿಗಳ ಅಸ್ತಿತ್ವವನ್ನು ವಿರೋಧಿಸುವ ಕಾನೂನಿನಿಂದಾಗಿ, ಹಿರಿಯ ಸಿರಾಕ್ ವ್ಯಾಪಾರಿ ಈಗನ್‌ ಅವರು ನಗರದಲ್ಲಿ ಕಂಡುಬಂದ್ದಿದ್ದರಿಂದಾಗಿ ಬಂಧನ ಶಿಕ್ಷೆ ಎದುರಿಸಬೇಕಾಯಿತು. ಅವರು ಒಂದು ಸಾವಿರ ಮಾರ್ಕ್‌‌ಗಳ ದಂಡ ಪಾವತಿಸುವುದರ ಮೂಲಕ ಮಾತ್ರವೇ ಈ ಶಿಕ್ಷೆಯಿಂದ ಪಾರಾಗಬಹುದಾಗಿತ್ತು. ಅವರು ತಮ್ಮ ದುಖಃತಪ್ತ ಕತೆಯನ್ನು ಪ್ರಾಂತ ದಂಢಾದಿಕಾರಿಯಲ್ಲಿ ಹೇಳಿಕೊಂಡರು. ತಮ್ಮ ಯೌವ್ವನದಲ್ಲಿ ಅವರು ಮದುವೆಯಾದರು ಮತ್ತು ಅವಳಿ ಗಂಡು ಮಕ್ಕಳನ್ನು ಪಡೆದರು. ಅದೇ ದಿನ ಒಬ್ಬಳು ಮಹಿಳೆಯು ಕೂಡಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಆ ಮ್ಕಕಳನ್ನು ಇವರು ತಮ್ಮ ಮಕ್ಕಳ ಜೀತ ಸೇವೆಗಾಗಿ ಖರೀದಿಸಿದರು. ಕೆಲವು ದಿನಗಳ ನಂತರ ತಮ್ಮ ಕುಟುಂಬದೊಂದಿಗೆ ಸಮುದ್ರಯಾತ್ರೆಗೆ ಹೊರಟರು ಮತ್ತು ಸಮುದ್ರದಲ್ಲಿ ಬಿರುಗಾಳಿಯಿಂದ ಅಪ್ಪಳಿಸಲ್ಪಟ್ಟರು. ಏಜಿಯನ್ ಅವರು ತಮ್ಮ ಒಬ್ಬ ಮಗ ಮತ್ತು ಒಬ್ಬ ಜೀತ ಮಗನೊಂದಿಗೆ ಹಡಗಿನ ಕ್ಯಾಪ್ಟನ್‌ನನ್ನು ಬಲವಾಗಿ ಹಗ್ಗದಿಂದ ಬಿಗಿದು ಕಟ್ಟಿದರು. ಆದರೆ ಅವರ ಹೆಂಡತಿಯು ಒಂದು ಬೋಟ್ ಮೂಲಕ ಪಾರಾದರೆ ಏಜಿಯನ್‌ ಅವರು ಇನ್ನೊಂದು ಬೋಟ್ ಮೂಲಕ ಪಾರಾದರು. ನಂತರ ಏಜಿಯನ್‌ ಅವರು ಎಂದೂ ತಮ್ಮ ಪತ್ನಿ ಮತ್ತು ಅವಳೊಂದಿಗೆ ಪಾರಾಗಿದ್ದ ಮಕ್ಕಳನ್ನು ಕಾಣಲಿಲ್ಲ. ಇತ್ತೀಚೆಗೆ ಅವರ ಮಗ ಸಿರ್ಯಾಕ್ಯೂಸ್ನ ಆಂತಿಫೋಲಸ್‌ ಅವರು ಬೆಳೆದು ಯುವಕರಾಗಿದ್ದಾರೆ ಮತ್ತು ಜೀತ ಮಗ ಸಿರ್ಯಾಕ್ಯೂಸ್‌, ಡ್ರೋಮಿಯೋ ಅವರು ತಮ್ಮ ಉಳಿದ ಸಹೋದರರನ್ನು ಶೋಧಿಸಲು ನಿಯೋಜನೆಗೊಂಡಿದ್ದಾನೆ. ಯಾವಾಗ ಸಿರ್ಯಾಕ್ಯೂಸ್, ಆಂತಿಫೋಲಸ್‌ ವಾಪಸ್ಸಾಗಲಿಲ್ಲವೋ ಆಗ ಏಜಿಯನ್‌ ಅವರೇ ಅವನನ್ನು ಹುಡುಕುತ್ತಾ ಪ್ರಯಾಣ ಹೊರಟರು.

ಎಫೇಸಸ್‌ನ ಪ್ರಾಂತಾಧಿಕಾರಿ ಸೋಲಿನಸ್ ಅವರು ಈ ಕಥೆ ಕೇಳಿ ಮರುಗಿದರು ಮತ್ತು ಒಂದು ದಿನ ದಂಡ ಪಾವತಿಸಲು ಅನುಮತಿ ನೀಡಿದರು.

ಅದೇ ದಿನದಂದು ಸಿರ್ಯಾಕ್ಯೂಸ್ನ ಆಂತಿಫೋಲಸ್‌‌ ಅವರು ತಮ್ಮ ಸಹೋದರನನ್ನು ಹುಡುಕುತ್ತಾ ಎಫೆಸಸ್‌ ಗೆ ಪ್ರವೇಶಿಸಿದರು. ಅವರು ಸೆಂಚ್ಯುವರ್‌ ನಲ್ಲಿ ಠೇವಣಿ ಮಾಡಿ ಬರಲು ಡ್ರೋಮಿಯೋ ಅವರಿಗೆ ಸ್ವಲ್ಪ ಹಣ ಕೊಟ್ಟು ಕಳುಹಿಸಿದರು. ಅಲ್ಲಿ ಎಫೆನಸ್‌ನಲ್ಲಿರುವ ಡ್ರೋಮಿಯೋರನ್ನೇ ಹೋಲುವ ವ್ಯಕ್ತಿ ಕಂಡುಬಂದಾಗ ಅವರು ದಿಗ್ಭೃಮೆಗೊಂಡರು ಮತ್ತು ತತ್‌ಕ್ಷಣದಲ್ಲಿ ಹಣದ ತುಂಬಲು ಬಂದ ಕೆಲಸದ ಪರಿಜ್ನಾನವಿಲ್ಲದೇ, ಪತ್ನಿ ಕಾಯುತ್ತಿದ್ದಾಳೆ ತಮ್ಮ ಮನೆಗೆ ರಾತ್ರಿ ಊಟಕ್ಕೆ ಬರುತ್ತೀರಾ ಎಂದು ಕೇಳಿದರು. ಆಂತಿಫೋಲಸ್‌‌ ಅವರು ಈ ವ್ಯಕ್ತಿಯು ಉದ್ಧಟತನದ ತಮಾಷೆ ಮಾಡುತ್ತಿದ್ದಾನೆಂದು ಭಾವಿಸಿ ಡ್ರೋಮಿಯೋ ಅವರಿಗೆ ಹೊಡೆದರು.

ಎಫೆಸಸ್‌ನ ಡ್ರೋಮಿಯೋ ಅವರು ಮನೆಯೊಡತಿ ಆಡ್ರಿಯಾನಾ ಅವರಲ್ಲಿಗೆ ಬಂದರು ಮತ್ತು, ನಿಮ್ಮ ಪತಿಯು ಮನೆಗೆ ಬರಲು ನಿರಾಕರಿಸಿದರು ಮತ್ತು ನೀವ್ಯಾರೆಂದು ಗೊತ್ತಿಲ್ಲವೆಂದು ನಾಟಕವಾಡಿದರು ಎಂದು ಹೇಳಿದರು. ಆಡ್ರಿಯಾನಾ ಅವರು ತಮ್ಮ ಪತಿಯನ್ನು ವಿವರಿಸುತ್ತಾ, ತಮ್ಮ ಪತಿಯ ಕಣ್ಣುಗಳು ಬಲಗಡೆಗೆ ಓರೆಯಾಗಿದೆ ಎಂಬ ಗುರುತು ನೀಡಿ ತಮ್ಮ ಅನುಮಾನದ ಬಗ್ಗೆ ಖಾತರಿಪಡಿಸಿಕೊಳ್ಳಲು ತಿಳಿಸಿದಳು.

ಸಿರ್ಯಾಕ್ಯೂಸ್ ಆಂತಿಫೋಲಸ್‌ ಅವರು "ನಾನು ಡ್ರೋಮಿಯೋ ಅವರನ್ನು ಮಾರ್ಟ್‌ನಿಂದ ಕಳುಹಿಸಿದ ನಂತರ ಅವರೊಂದಿಗೆ ಮಾತನಾಡಲು ಸಾಧ್ಯವಿಲ್ಲ" ಎಂದು ದೂರಿದ ನಂತರ, ಆಂತಿಫೋಲಸ್‌ ಅವರು ಪತ್ನಿಯನ್ನು ಹೊಂದಿದ್ದಾರೆ, ಎಂದು ಜೋಕ್ ಮಾಡುತ್ತಿದ್ದ ಡ್ರೋಮಿಯೋ ಅವರನ್ನು ಭೇಟಿ ಮಾಡಿದರು. ಆಂತಿಫೋಲಸ್‌ ಅವರನ್ನು ಹೊಡೆಯಲು ಪ್ರಾರಂಭಿಸಿದರು. ತತ್‌ಕ್ಷಣದಲ್ಲಿ ಆಡ್ರಿಯಾನಾ ಅವರು ಆಂತಿಫೋಲಸ್‌ ಕಡೆಗೆ ನುಗ್ಗಿಬಂದರು ಮತ್ತು ತಮ್ಮನ್ನು ಕೈಬಿಡದಂತೆ ಬೇಡಿಕೊಂಡರು. ಸಿರ್ಯಾಕ್ಯೂಸ್‌ ಆಂತಿಫೋಲಸ್‌ ಅವರು ಎಫೆನಸ್‌ ನಗರವು ಮಾಟಗಾತಿಯರ ದೊಡ್ಡ ತಾಣ ಎಂಬುದನ್ನು ಉಲ್ಲೇಖಿಸುತ್ತಾ ಈ ವಿಚಿತ್ರ ಘಟನೆಗೆ ಮಾಟಮಂತ್ರವು ಕಾರಣವಾಗಿರಬಹುದೆಂದು ಶಂಕಿಸಿದರು. ಆಂತಿಫೋಲಸ್ ಮತ್ತು ಡ್ರೋಮಿಯೋ ಅವರು ಈ ವಿಚಿತ್ರ ಹೆಂಗಸಿನ ಜೊತೆಗೆ ರಾತ್ರಿ ಉಪಹಾರಕ್ಕೆ ಹೊರಟರು ಮತ್ತು ಪರಸ್ಪರ ಅಂತರವನ್ನು ಕಾಯ್ದುಕೊಂಡರು.

ಎಫೆನಸ್‌ನ ಆಂಟಿಪೋಲಸ್ ಅವರು ಭೋಜನಕ್ಕೆ ಮನೆಗೆ ಮರಳಿದರು. ಅಲ್ಲಿ ಬಾಗಿಲು ಕಾಯುತ್ತಿದ್ದ ಸಿರ್ಯಾಕ್ಯೂಸ್ ಡ್ರೋಮಿಯೋ ಅವರು ತಮ್ಮ ಸ್ವಂತ ಮನೆಗೆ ಪ್ರವೇಶಿಸಲು ತಿರಸ್ಕರಿಸಿ ಒರಟಾಗಿ ನಡೆದುಕೊಂಡಿದ್ದರಿಂದ ಕೆರಳಿಹೋದರು. ಅಲ್ಲಿಯೇ ಬಾಗಿಲನ್ನು ಮುರಿದುಬಿಡಲು ತಯಾರಾದರು. ಆದರೆ ಹಾಗೆ ಮಾಡದಂತೆ ಸ್ನೇಹಿತರು ಮನವೊಲಿಸಿದರು. ಆದರೂ ಅವರು ವೇಶ್ಯೆಯ ಜೊತೆಯಲ್ಲಿ ಊಟಕ್ಕೆ ತೆರಳಲು ನಿರ್ಧರಿಸಿದರು.

ಮನೆಯ ಒಳಭಾಗದಲ್ಲಿ, ಸಿರ್ಯಾಕ್ಯೂಸ್‌ನ ಆಂತಿಫೋಲಸ್‌ ತನ್ನ ಹೆಂಡತಿಯ ತಂಗಿಗೆ "train me not, sweet mermaid, with thy note / To drown me in thy sister's flood of tears." ಎಂದು ಹೇಳುತ್ತಿರುತ್ತಾನೆ. ಅವಳು ಆತ ತನ್ನೆಡೆಗೆ ಆಕರ್ಶಿತನಾಗಿದ್ದಾನೆ ಎಂಬುದನ್ನು ತಿಳಿದು ಪುಳಕಿತಳಾಗಿರುತ್ತಾಳೆ. ಅವಳು ಅಲ್ಲಿಂದ ಹೊರಟ ನಂತರ ಸಿರ್ಯಾಕ್ಯೂಸ್‌ನ ಡ್ರೋಮಿಯೋ‌ ಅವನಿಗೆ ಹೆಂಡತಿಯಾಗಿ ನೆಲ್‌ ಎಂಬ ಅಡಿಗೆಯವಳು ಹೆಂಡತಿಯಾಗಿ ಇರುವುದಾಗಿ ತಿಳಿಯಿತು ಎಂದು ತನ್ನಷ್ಟಕ್ಕೆ ಮಾತನಾಡಿಕೊಳ್ಳುತ್ತಾನೆ. ಅವನು ಅವಳನ್ನು "spherical, like a globe; I could find out countries in her...buttocks: I found it out by the bogs" ಎಂದು ವರ್ಣಿಸುತ್ತಾನೆ. ಅಲ್ಲದೆ ಅವನು ಹೇಳುವ ಪ್ರಕಾರ ಅವನು ಅವಳಲ್ಲಿ ಅಮೇರಿಕಾ ಮತ್ತು ಇಂಡೀಸ್ ಅನ್ನು ಕಂಡುಕೊಂಡನು "upon her nose all o'er embellished with rubies, carbuncles, sapphires, declining their rich aspect to the hot breath of Spain; who sent whole armadoes of caracks to be ballast at her nose." ಎಂದು ಹೇಳುತ್ತಾನೆ. ಇದು ಅಮೇರಿಕಾದ ಬಗ್ಗೆ ಶೇಕ್ಸ್‌ಪಿಯರ್‌ನ ಕೆಲವು ಉಲ್ಲೇಖಗಳಲ್ಲಿ ಒಂದು. ಸಿರ್ಯಾಕ್ಯೂಸ್‌ನವರು ಇಲ್ಲಿಂದ ಆದಷ್ಟು ಬೇಗನೆ ಹೊರಹೋಗುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಡ್ರೋಮಿಯೋ ಪ್ರಯಾಣದ ಯೋಜನೆಯನ್ನು ಮಾಡಲು ಅಲ್ಲಿಂದ ಓಡುತ್ತಾನೆ. ಆಂತಿಫೋಲಸ್‌ ಬಂಗಾರ ಕೆಲಸಮಾಡುವವನೊಬ್ಬನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಬಹಳ ಹಿಂದೆ ಒಂದು ಸರವನ್ನು ಮಾಡಲು ಅವನು ಹೇಳಿದ್ದಾಗಿ ತಗಾದೆ ತೆಗೆಯುತ್ತಾನೆ. ಆಂತಿಫೋಲಸ್‌ ಸರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾನೆ. ಅಲ್ಲದೆ ಏಂಜೆಲೊ ತಾನು ಹಣ ತೆಗೆದುಕೊಳ್ಳಲು ಬರುವುದಾಗಿ ಹೇಳುತ್ತಾನೆ.

ಎಫೇಸಸ್‌‌ನ ಆಂತಿಫೋಲಸ್‌ ತಾನು ನೇಣು ಬಿಗಿದುಕೊಂಡು ಸಾಯುತ್ತೇನೆ ಹೋಗಿ ಹಗ್ಗ ತೆಗೆದುಕೊಂಡು ಬಾ ಎಂದು ಎಫೇಸಸ್‌‌ನ ಡ್ರೋಮಿಯೋ‌ನನ್ನು ಕಳುಹಿಸುತ್ತಾನೆ. ಅಲ್ಲದೆ ಆತ ಅತ್ತ ಹೋದ ನಂತರ ತನ್ನನ್ನು ಕೋಣೆಯಲ್ಲಿ ಕೂಡಿಹಾಕಿದ್ದಕ್ಕಾಗಿ ಆಡ್ರಿಯಾನಾಳನ್ನು ಹೊಡೆಯುವ ಯೋಚನೆ ಕೂಡಾ ಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಎಂಜೆಲೋ ತನ್ನಿಂದ ತೆಗೆದುಕೊಂಡು ಹೋದ ಬಂಗಾರದ ಸರದ ಹಣ ಕೊಡುವಂತೆ ಕೇಳುತ್ತಾನೆ. ಆಂತಿಫೋಲಸ್ ತಾನು ತೆಗೆದುಕೊಂಡು ಹೋಗಿಲ್ಲ ಎಂಬುದನ್ನು ಹೇಳಿದಾಗ. ಹಣ ಕೊಡಲು ಆತ ನಿರಾಕರಿಸಿದಾಗ ಅವನನ್ನು ಬಂಧಿಸಲಾಗುತ್ತದೆ. ನಂತರ ಸಿರ್ಯಾಕ್ಯೂಸ್‌‌ನ ಡ್ರೋಮಿಯೋ‌ ಅಲ್ಲಿಗೆ ಬರುತ್ತಾನೆ. ಆಂತಿಫೋಲಸ್‌ ಅವನನ್ನು ತನ್ನ ಬೇಲ್‌ಗಾಗಿ ಹಣ ತರಲು ಆಡ್ರಿಯಾನಾ ಮನೆಗೆ ಹೋಗುವಂತೆ ಕಳುಹಿಸುತ್ತಾನೆ.

ಈ ಉದ್ದೇಶಿತ ಕೆಲಸವನ್ನು ಪೂರೈಸಿದ ಮೇಲೆ ಸಿರ್ಯಾಕ್ಯೂಸ್ ಡ್ರೋಮಿಯೋ ಅವರು ತಪ್ಪುಗ್ರಹಿಕೆಯಿಂದಾಗಿ ಹಣವನ್ನು ಸಿರ್ಯಾಕ್ಯೂಸ್ ಆಂತಿಫೋಲಸ್ ಅವರಿಗೆ ತಲುಪಿಸಿದರು. ಕೋರ್ಟಿಸನ್ ಅವರು, ಆಂಟಿಪೋಲಸ್ ಅವರು ಚಿನ್ನದ ಸರವನ್ನು ಧರಿಸಿದ್ದರು ಮತ್ತು ಅದನ್ನು ತಮಗೆ ಕೊಡುವುದಾಗಿ ಭಾಷೆ ನೀಡಿದ್ದಾರೆ ಎಂದು ತಿಳಿಸಿದರು. ಸಿರ್ಯಾಕ್ಯೂಸ್ ನವರು ಇದನ್ನು ಅಲ್ಲಗಳೆದು ಓಡಿಹೋದರು. ನಂತರ ಅವರು, ಆಡ್ರಿಯಾನಾ ಅವಳಿಗೆ ತಮ್ಮ ಪತಿಯು ಮತಿವಿಕಲ ಎಂಬುದನ್ನು ತಿಳಿಸಲು ನಿರ್ಧರಿಸಿದಳು. ಎಫೇಸಸ್‌ ಡ್ರೋಮಿಯೋ ಅವರು ಬಂಧಿತ ಎಫೆಸಸ್‌ ಆಂತಿಫೋಲಸ್‌ ಅವರಿದ್ದಲ್ಲಿಗೆ ಹಗ್ಗ ಸಮೇತ ವಾಪಸ್ ಬಂದರು. ಆಂತಿಫೋಲಸ್‌ ಅವರು ಕೋಪೋದ್ರಿಕ್ತರಾದರು. ಆಡ್ರಿಯಾನಾ, ಲ್ಯೂಸಿಯಾನಾ ಮತ್ತು ಕೋರ್ಟಿಸನ್ ಅವರುಗಳು ಪಿಂಚ್ ಎನ್ನುವ ಮಾಂತ್ರಿಕನೊಂದಿಗೆ ಆಗಮಿಸಿದರು ಮತ್ತು ಅವರು ಎಫೆಸಸ್‌ ಅವರಿಗಂಟಿದ್ದ ಗಾಳಿ ಬಿಡಿಸಿ ಆಡ್ರಿಯಾನಾ ಅವರ ಮನೆಗೆ ಕರೆದೊಯ್ಯಲೇಬೇಕೆಂದು ಪ್ರಯತ್ನಿಸಿದರು. ಅಷ್ಟರಲ್ಲಿ ಸಿರ್ಯಾಕ್ಯೂಸ್‌ನವರು ಖಡ್ಗ ಹಿಡಿದು ಬಂದಿದ್ದರಿಂದ, ಅವರು ಎಫೆಸಿಯನ್‌ಗಳು ಇರಬಹುದು ಮತ್ತು ಬಂಧನದಿಂದ ಬಿಡಿಸಿಕೊಂಡ ನಂತರ ಪ್ರತೀಕಾರ ತೀರಿಸಿಕೊಳ್ಳಲು ಬಂದಿರಬಹುದು ಎಂದು ತಿಳಿದು ಎಲ್ಲರೂ ಭಯದಿಂದ ಓಡತೊಡಗಿದರು. ಆಡ್ರಿಯಾನಾ ಅವರು, ಸಿರ್ಯಾಕ್ಯೂಸ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದ ತಮ್ಮ ಅನುಯಾಯಿಯೊಂದಿಗೆ ಪುನಃ ಕಾಣಿಸಿಕೊಂಡಳು. ಅವರು ಧರ್ಮಗುರುಗಳು (ಅಬ್ಬೆಸ್) ತಮ್ಮನ್ನು ರಕ್ಷಿಸುತ್ತಾರೆಂಬ ಖಾತರಿ ಮೇರೆಗೆ ಹತ್ತಿರದ ದೇವಾಲಯವನ್ನು ಸುರಕ್ಷಿತ ಸ್ಥಳವಾಗಿ ಆಯ್ಕೆ ಮಾಡಿಕೊಂಡರು.

ಪ್ರಾಂತ ದಂಡಾಧಿಕಾರಿ ಮತ್ತು ಈಗನ್ ಅವರು, ಈಗನ್ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಜಾರಿಗೊಳಿಸುವ ಕ್ರಮದಲ್ಲಿ ಪ್ರವೇಶಿಸಿದರು. ಆಡ್ರಿಯಾನಾ ಅವರು ಪ್ರಾಂತ ದಂಡಾಧಿಕಾರಿಗಳಲ್ಲಿ ತಮ್ಮ ಪತಿಯನ್ನು ಬಿಡುಗಡೆ ಮಾಡುವಂತೆ ಧರ್ಮಗುರುಗಳನ್ನು ಒತ್ತಾಯಿಸಬೇಕೆಂದು ಬೇಡಿಕೊಂಡಳು. ಅಷ್ಟರಲ್ಲಿ ಆಡ್ರಿಯಾನಾ ಅವರ ಮನೆಯಿಂದ ವ್ಯಕ್ತಿಯೊಬ್ಬ ಓಡಿಬಂದು ಎಫೆಸಿಯನ್‌ಗಳು ತಮ್ಮ ಬಂದನದ ಕಟ್ಟನ್ನು ಬಿಚ್ಚಿಕೊಂಡಿದ್ದಾರೆ ಮತ್ತು ವೈದ್ಯರು ಚಿವುಟಿದ್ದರಿಂದ ಅತೀವ ಯಾತನೆ ಪಡುತ್ತಿದ್ದಾರೆಂಬ ಸಂದೇಶ ಪ್ರಕಟಿಸಿದನು. ಎಫೆಸಿಯನ್‌ಗಳು ಪ್ರವೇಶಿಸಿದರು ಮತ್ತು ಪ್ರಾಂತಾಧಿಕಾರಿಯಲ್ಲಿ ಆಡ್ರಿಯಾನಾ ಅವರ ವಿರುದ್ದ ನ್ಯಾಯ ಕೇಳಿದರು. ಏಜಿಯನ್‌ ಅವರು ತಾವು ಸ್ವಂತ ಮಗನಾದ ಆಂತಿಫೋಲಸ್‌ ಅವನನ್ನು ಹುಡುಕಿದ್ದೇನೆ ಮತ್ತು ಅವನು ತಮಗೆ ಜಾಮೀನು ನೀಡಬಹುದು ಎಂದುಕೊಂಡಿದ್ದರು. ಆದರೆ ಇಬ್ಬರೂ ಎಫೆಸಿಯನ್‌ಗಳು ತಾವು ಹಿಂದೆಂದೂ ಇವರನ್ನು ನೋಡಿಲ್ಲವೆಂದು ಹೇಳಿ ನಿರಾಕರಿಸಿದರು.

ಹಠಾತ್ತನೆ ಧರ್ಮಗುರುಗಳು (ಅಬ್ಬೆಸ್) ಸಿರಾಕಿಯನ್ ಅವಳಿ ಸಹೋದರರೊಂದಿಗೆ ಪ್ರವೇಶಿಸಿದಾಗ ಪ್ರತಿಯೊಬ್ಬರೂ ಈ ದಿನದ ಗೊಂದಲಮಯ ಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಎರಡೂ ಅವಳಿ ಸಹೋದರರ ಜೋಡಿಯು ಒಟ್ಟಿಗೇ ಬಂದ್ದಿದ್ದರ ಹೊರತಾಗಿ ಧರ್ಮಗುರುಗಳು (ಅಬ್ಬೆಸ್), ತಾವು ಈಗನ್ ಅವರ ಪತ್ನಿ ಎಮಿಲಿಯಾ, ಎಂಬುದನ್ನೂ ಬಹಿರಂಗಪಡಿಸಿದರು. ಡ್ಯೂಕ್‌ ಏಜಿಯನ್‌‌ ಅವರ ಅಪರಾಧವನ್ನು ಮನ್ನಿಸಿದರು. ಮತ್ತು ಎಲ್ಲರೂ ಕುಟುಂಬದ ಪುನರ್‌ ಒಂದುಗೂಡುವಿಕೆಯ ಸಂಭ್ರಮವನ್ನು ಆಚರಿಸಲು ಕ್ರಿಸ್ತ ದೇವಾಲಯಕ್ಕೆ ತೆರಳಿದರು.

ವಿಶ್ಲೇಷಣೆ

[ಬದಲಾಯಿಸಿ]

ಅನೇಕ ಶತಮಾನಗಳವರೆಗೆ, ಪರಿಣಿತರು ದಿ ಕಾಮಿಡಿ ಆಫ್‌ ಎರರ್ಸ್ ‌ನ ವಿಷಯದ ಆಳದ ಬಗ್ಗೆ ಸ್ವಲ್ಪ ಮಾತ್ರ ತಿಳಿದಿದ್ದರು. ದ ಮೆನಾಚ್ಮಿ ಯಿಂದ ಇದು ಹುಟ್ಟಿದ ಕಾರಣದಿಂದಾಗಿ ತು೦ಬಾ ಜನರು ಈ ನಾಟಕವನ್ನು ಸರಳ, ವಿನೋದಮಯ ನಾಟಕವೆಂದು ಮಾತ್ರ ನೋಡುವ೦ತೆ ಮಾಡಿತ್ತು. ಕೆಲವೊಮ್ಮೆ ಇದನ್ನು ನೋಡಿದ ಮೇಲೆ ಅವರಿಗೆ ಶೇಕ್ಸ್‌ಪಿಯರ್‌ ಉದ್ದೇಶಪೂರ್ವಕವಾಗಿ ತನ್ನ ಇತಿಹಾಸ, ದುರ೦ತ ಅಥವಾ ಹಾಸ್ಯವನ್ನು ಮುಚ್ಚಿಡುತ್ತಿರಬಹುದು ಅನಿಸುತಿತ್ತು.

ಆದಾಗ್ಯೂ, ಈಗಿನ ಅಧ್ಯಯನಗಳು, ಬೇರೆಯದನ್ನೇ ಹೇಳುತ್ತವೆ. ಪ್ರತ್ಯೇಕವಾಗಿ ಈ ನಾಟಕದಲ್ಲಿ ಗಮನಿಸಬೆಕಾದುದ್ದು ಸಾಮಾಜಿಕ ಸ೦ಬ೦ಧಗಳನ್ನು ಶೇಕ್ಸ್‌ಪಿಯರ್ ರೂಪಿಸುವ ರೀತಿ. ಅಂತಹ ಸಂಬಂಧಗಳು ಹಳೆಯ ರೋಮನ್‌ನಿಂದ ಬಂದವುಗಳಾಗಿದ್ದರೆ, ಶೇಕ್ಸ್‌ಪಿಯರ್‌‌ ನಾಟಕವು ನಿರ೦ತರವಾಗಿ ಅ೦ದಿನ ಆಧುನಿಕತೆಯ ಕಡೆಗೆ ತಿರುಗುತ್ತಿರುವುದರ ಬಗ್ಗೆ ವಿಶೇಷ ಗಮನವನ್ನು ನೀಡುತ್ತದೆ. ಎರಿಚ್ ಹೆ೦ಜೆ ಬರೆದಿರುವ೦ತೆ, ಇವುಗಳಲ್ಲಿ ಹೆಚ್ಚಿನ ಸಂಬಂಧಗಳು ಮಾಲಿಕ-ಕೆಲಸಗಾರ, ಗ೦ಡ-ಹೆ೦ಡತಿ, ಹೆತ್ತವರು-ಮಕ್ಕಳು, ಸ್ವ೦ತ-ಪರಕೀಯ, ಗಿರಾಕಿ-ವ್ಯಾಪರಸ್ತ, ಮತ್ತು ರಾಜ-ಸಭೆ ಇಂಥ ದ್ವಂದ್ವದ ಸಂಬಂಧಗಳನ್ನು ಹೊಂದಿರುತ್ತವೆ. ಉಳಿಗಮಾನ್ಯ ಪದ್ದತಿಯನ್ನು ಕಳಚಿಕೊಳ್ಳುವ ಈ ಸಂದರ್ಭದಲ್ಲಿ ಪ್ರತಿಯೊ೦ದು ಸಂಬಂಧವೂ ಬಿಕ್ಕಟ್ಟಿನಲ್ಲಿತ್ತು ಮತ್ತು ಆಗಿನ ಯುರೋಪ್‌‌ನ ಆಧುನಿಕ ಸಾಮಾಜದ ವ್ಯಾಪಾರಿಕ ಶಕ್ತಿಯನ್ನು ಅಭಿಮುಖವಾಗಿ ತೋರಿಸುತಿತ್ತು.[]

ಪ್ರದರ್ಶನ

[ಬದಲಾಯಿಸಿ]

ದಿ ಕಾಮಿಡಿ ಆಫ್‌ ಎರರ್ಸ್‌ ನ ಹಿ೦ದೆ ನೆಡೆದ ಎರಡು ಪ್ರದರ್ಶನಗಳನ್ನು ದಾಖಲಿಸಲಾಗಿದೆ. ಒಂದು, ಗೆಸ್ಟಾ ಗ್ರಯೊರುಮ್ ("ದಿ ಡಿಡ್ಸ್ ಆಫ್‌ ಗ್ರೆಯ್") ನಲ್ಲಿ ಹೇಳಿರುವ೦ತೆ ಡಿಸೆ೦ಬರ್.28, 1954 ರಲ್ಲಿ ಗ್ರೇಸ್ ಇನ್ ಹಾಲ್‌ನಲ್ಲಿ ನಡೆಯಿತು. ಎರಡನೆಯದು ಕೂಡ ಹತ್ತು ವರ್ಷಗಳ ನಂತರ ಡಿಸೆ೦ಬರ್ 28,1604 ಮುಗ್ಧರ ದಿನದ೦ದು ನ್ಯಾಯಲಯದಲ್ಲಿ ನೆಡೆಯಿತು.[]

ಕಲಾತ್ಮಕ ವೈಶಿಷ್ಟ್ಯಗಳು

[ಬದಲಾಯಿಸಿ]

ನಾಟಕ ತೆರೆದುಕೊಳ್ಳುವ ದೃಶ್ಯದಲ್ಲಿ ಏಜಿಯನ್‌ ನಾಟಕದ ಅತಿ ಉದ್ದವಾದ ಭಾಷಣವನ್ನು ಮಾಡುತ್ತಾನೆ("A heavier task could not have been imposed"), ಇದರಲ್ಲಿ ಹೇಗೆ ಇಬ್ಬರು ಅವಳಿಗಳು ಚಿಕ್ಕ ವಯಸ್ಸಿನಲ್ಲೆ ಬೇರೆ ಅಗುತ್ತಾರೆ ಎ೦ಬುದನ್ನು ವಿವರಿಸುತ್ತಾನೆ. ಇದು ಕಲೆಯ ಮಾನದ೦ಡದಲ್ಲಿ 421 ಪದಗಳಲ್ಲಿ ಅತಿ ಶುದ್ದವಾಗಿ ವರ್ಣಿಸಿರುವ ಉದ್ದವಾದ ತು೦ಡು. ಏಜಿಯನ್‌ (ಮತ್ತು ಡ್ಯೂಕ್‌‌ ಸಹ) ಆಮೇಲೆ ಕೊನೆಯ ದೃಶ್ಯದವರೆಗೆ ಮತ್ತೆ ಬರುವುದಿಲ್ಲ.

ರೂಪಾಂತರಗಳು(ಅಳವಡಿಕೆಗಳು)

[ಬದಲಾಯಿಸಿ]

ನಾಟಕಗಳು

[ಬದಲಾಯಿಸಿ]

1734ರಲ್ಲಿ, ಸೀ ಇಫ್ ಯು ಲೈಕ್ ಇಟ್ ಎಂಬ ಇದರ ರೂಪಾಂತರವು ಕೊವೆ೦ಟ್ ಗಾರ್ಡೆನ್‌ನಲ್ಲಿ ಪ್ರದರ್ಶನಗೊ೦ಡಿತ್ತು. 1741ರಲ್ಲಿ ಡ್ರೂರಿ ಲೇನ್ ಇದನ್ನು ಆಯೋಜಿಸಿ ನಿರ್ಮಿಸಿದ್ದ. ಇದರಲ್ಲಿ ಚಾರ್ಲ್ಸ್ ಮಾಕ್‌ಲಿನ್ ಡ್ರೋಮಿಯೋ‌ ಆಫ್‌ ಸಿರಾಕ್ಯೂಸ್‌ ಪಾತ್ರ ಮಾಡಿದ್ದ- ಅದೆ ವರ್ಷದಲ್ಲಿ ಅವನ ಶೈಲಾಕ್ ಪಾತ್ರ ದೊಡ್ಡ ಹೆಸರನ್ನು ತ೦ದುಕೊಟ್ಟಿತ್ತು. 1980ರಲ್ಲಿ, ದಿ ಫ್ಲೈಯಂಗ್‌ ಕರಮಜೊವ್ ಬ್ರದರ್ಸ್ ಅಸಾಮಾನ್ಯ ರೀತಿಯಲ್ಲಿ ಮಾರ್ಪಾಡುಗೊಳಿಸಿ ಲಿ೦ಕೊಲ್‌ನ್ ಹಾಲ್‌ನಲ್ಲಿ ಪ್ರದರ್ಶಿಸಿದರು, ಇದು ಎಂಟಿವಿ ಮತ್ತು ಪಿಬಿಸ್‌ಗಳಲ್ಲೂ ಬಿತ್ತರಿಸಲಾಗಿತ್ತು. 2010ರಲ್ಲಿ ಬೆಸಿಗೆಯ ಸಮಯದಲ್ಲಿ ಹೊಸದಾಗಿ ಮಾರ್ಪಡಿಸಿ ರೆಜೆ೦ತ್ ಉದ್ಯಾನವನದ ಹೊರ ಬಯಲಿನಲ್ಲಿ ಹೊಸದಾಗಿ ರ೦ಗ ಮ೦ಟಪವನ್ನು ನಿರ್ಮಿಸಿ ಪ್ರದರ್ಶಿಸಲಾಯಿತು. ಇದನ್ನು ಫಿಲಿಪ್ ಫ್ರ್ಯಾಂಕ್ಸ್ ನಿರ್ಮಿಸಿದ್ದರು.

ಡಿಸೆ೦ಬರ್ 27,1786ರಲ್ಲಿ ಸ್ಟಿಫನ್ ಸ್ಟೊರೇಸ್‌ರ ಗೀತ ನಾಟಕ ಗ್ಲೀ ಇಕ್ವಿವೋಸಿ ಯನ್ನು ವಿಯನ್ನಾದ ಬರ್ಗ್‌ಥಿಯೇಟರ್ ಚಿತ್ರ ಮ೦ದಿರದಲ್ಲಿ ತನ್ನ ಪ್ರಥಮ ಪ್ರದರ್ಶನ ಕ೦ಡಿತು. ಇದರಲ್ಲಿನ ವ್ಯಕ್ತಿಗಳ ಹೆಸರುಗಳನ್ನು ಬದಲಿಸಿ ಅಷ್ಟೆ ಸು೦ದರವಾಗಿ ಲೊರೆ೦ಜೊ ಡ ಪೊ೦ಟೆ, ದಿ ಲಿಬರ್ಟೊ ಅನ್ನು ಪ್ರದರ್ಶಿಸಿದರು.[]

ಇದರ ಮತ್ತೊ೦ದು ಅವತರಣಿಕೆಯಲ್ಲಿ 1819ರಲ್ಲಿ ಫ್ರೆಡ್ರಿಕ್ ರೆನಾಲ್ಡ್ಸ್ ಅಭಿನಯಿಸಿದ್ದರು. ಇದರ ಜೊತೆಗೆ ಇದಕ್ಕೆ ಸ೦ಗೀತ ಹೆನ್ರಿ ಬಿಷಪ್ ಮತ್ತು ಹಾಡುಗಳನ್ನು ಮೊಜಾರ್ಟ್ ಮತ್ತು ಆರ್ನೆ ಅಳವಡಿಸಿದ್ದರು. ಸಾಮುಯೆಲ್ ಫೆಲ್ಪ್ಸ್ ಸಡ್‌ಲರ್ ನ ವೆಲ್ ಚಿತ್ರಮ೦ದಿರದಲ್ಲಿ ಶೇಕ್ಸ್‌ಪಿಯರ್‌‌ನ ಮುಖ್ಯ ಅವತರಣಿಕೆಗೆ ಮರು ಜೀವ ಕೊಡುವಷ್ಟರಲ್ಲಿ 1855ರ ಸುಮಾರಿಗೆ ತು೦ಬಾ ಮಾರ್ಪಾಡುಗಳಾಗಿದ್ದವು.[]

ಸಂಗೀತ ಗೋಷ್ಠಿ

[ಬದಲಾಯಿಸಿ]

ಈ ನಾಟಕಕ್ಕೆ ಕಡಿಮೆ ಅ೦ದರೂ 3 ಬಾರಿ ಸ೦ಗೀತ ನಾಟಕವಾಗಿ ಪ್ರದರ್ಶನಗೊಂಡಿದೆ. ಅದರಲ್ಲಿ ಮೊದಲನೆಯದು ದಿ ಬಾಯ್ಸ್ ಪ್ರಮ್ ಸಿರಾಕ್ಯೂಸ್‌ ಇದಕ್ಕೆ ಸ೦ಗೀತ ರಿಚರ್ಡ್ ರೋಡ್ಜರ್ಸ್ ಮತ್ತು ಲೊರೆ೦ಜೋ ಹಾರ್ಟ್ ನೀಡಿದ್ದರು. ನಂತರ 1977ರಲ್ಲಿ ವೆಸ್ಟ್ ಎ೦ಡ್ ಸ೦ಗೀತ ತ೦ಡ ಇದರ ಉತ್ತಮ ಸ೦ಗೀತಕ್ಕಾಗಿ ಲಾರೆನ್ಸ್ ಒಲಿವಿಯರ್ ಪ್ರಶಸ್ತಿಯನ್ನು ಗೆದ್ದುಕೊ೦ಡಿತು, ಮತ್ತು ಓ ಬ್ರದರ್ ! ಎಂಬ ಮೈಕೆಲ್ ವ್ಯಾಲ೦ಟಿ ಮತ್ತು ಡೋನಾಲ್ಡ್ ಡ್ರೈವರ್ ಹಿಪ್ ಹಾಪ್ ಸ೦ಗೀತದ ದಿ ಬಾ೦ಬ್-ಇಟ್ಟಿ ಆಫ್‌ ಎರರ್ಸ್ ‌ ಹೆಚ್‌ಬಿಒನ ಹಾಸ್ಯೋತ್ಸವದಲ್ಲಿ ಮೊದಲನೆ ಬಹುಮಾನ ಗಳಿಸಿತು ಮತ್ತು 2001ರ ಡ್ರಾಮಾ ಡೆಸ್ಕ್ ಆವಾರ್ಡ್‌ಗೆ ಸ್ಟೀಫನ್ ಸೊ೦ಡೀಮ್‌ರವರ ವಿರುದ್ಧವಾಗಿ ಉತ್ತಮ ಗೀತನಾಟಕಕ್ಕಾಗಿ ಆಯ್ಕೆಗೊ೦ಡಿತ್ತು.

ಚಿತ್ರೀಕರಣ

[ಬದಲಾಯಿಸಿ]

ಬಿಗ್ ಬಿಸ್‌ನೆಸ್ ಸಿನಿಮಾವು ಎ ಕಾಮಿಡಿ ಆಫ್‌ ಎರರ್ಸ್ ‌ಗೆ ಹೊಸ ಅವತಾರವನ್ನೆ ಕೊಟ್ಟಿತು. ಅವಳಿಗಳು ಹುಟ್ಟಿದ ನಂತರ ಬೇರೆ ಆಗುವ ಪಾತ್ರವನ್ನು ಬೆಟ್ಟೆ ಮಿಡ್ಲ್‌ರ್ ಮತ್ತು ಲಿಲ್ಲಿ ಟಾಮ್ಲಿನ್ ಶೇಕ್ಸ್‌ಪಿಯರ್‌‌ನ ನಾಟಕದಲ್ಲಿನ ಪಾತ್ರದ೦ತೆಯೆ ಅಭಿನಯಿಸಿದ್ದರು. ಭಾರತೀಯ ಸಿನಿಮಾಗಳು ಕೂಡಾ ಬ೦ದವು. 1. ಕಿಶೋರ್‌ಕುಮಾರ್ ಅಭಿನಯದ ದೊ ದೂನಿ ಚಾರ್. 2.ಸ೦ಜೀವ್‌ಕುಮಾರ್ ಅಭಿನಯದ ಅ೦ಗೂರ್

ದೂರದರ್ಶನ

[ಬದಲಾಯಿಸಿ]

ಅನೇಕ ಜನಪ್ರಿಯ ಕಾರ್ಯಕ್ರಮ ದ ಎಕ್ಸ್-ಫೈಲ್ಸ್ "ಪೈಟ್ ಕ್ಲಬ್"ಎ೦ಬ ಕ೦ತನ್ನು ಪ್ರಸಾರ ಮಾಡಿತ್ತು. ಅದರ ಕಥಾ ಸಾರಾಂಶ ಈ ನಾಟಕವನ್ನು ಅನೇಕ ರೀತಿಯಲ್ಲಿ ಹೋಲುತ್ತಿತ್ತು.

  • ಯೆಸ್ ಪ್ರೈಮ್ ಮಿನಿಸ್ಟರ್ ಎಪಿಸೋಡಿನಲ್ಲಿ "ಕಲಾ ಪೋಷಕ" ಪ್ರಧಾನ ಮಂತ್ರಿ ಜೇಮ್ಸ್ ಹ್ಯಾಕರ್ ಹೀಗೆ ದೂರುತ್ತಾನೆ, "ಅವರು (ದ ನ್ಯಾಷನಲ್ ಥಿಯೇಟರ್) ದ ಕಾಮೆಡಿ ಆಫ್ ಎರರ್ಸ್‌ ನಾಟಕವನ್ನು ನಂಬರ್ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಮಾಡಿದ್ದಾರೆ".

ಚಿತ್ರಸಂಪುಟ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. ಚಾರ್ಲ್ಸ್ ವಾಲ್ಟರ್ಸ್ ವಿಟ್‌ವರ್ಥ್, ಸಂ., ದ ಕಾಮೆಡಿ ಆಫ್ ಎರರ್ಸ್‌, ಆಕ್ಸ್‌ಫರ್ಡ್‌, ಆಕ್ಸ್‌ಫರ್ಡ್‌ University press, 2003; pp. 1-10.
  2. ಎರಿಕ್ ಹೆನ್ಸ್, '"Were it not against our laws": Oppression and Resistance in Shakespeare‌'s Comedy of Errors , 29 ಅಧ್ಯಯನಗಳು (2009), ಪು. 230 – 63
  3. ಸಮಾನ ದಿನಾಂಕಗಳು ಕಾಕತಾಳೀಯವಲ್ಲ; ಮೂಲಗಳಲ್ಲಿ ಉಲ್ಲೇಖಿಸಲಾದ, ನಾಟಕದಲ್ಲಿನ ಪೌಲಿನ್ ಮತ್ತು ಎಫೇಸಿಯನ್ ಅಂಶಗಳು ದ ಕಾಮೆಡಿ ಆಫ್ ಎರರ್ಸ್‌ ನಾಟಕವನ್ನು — ಕ್ರಿಸ್‌ಮಸ್ ರಜಾದಿನಗಳಿಗೆ ಸಂಬಂಧಿಸಿದ ಇನ್ನೊಂದು ನಾಟಕವಾದ ಟ್ವೆಲ್ಫ್‌ತ್ ನೈಟ್ ನಾಟಕದ ಹಾಗೆ- ರಜಾ ಕಾಲದಲ್ಲಿ ಆಗಿರಬೇಕೆಂದುಕೊಳ್ಳುವುದಕ್ಕೆ ಬೆಂಬಲ ನೀಡುವ ಅಂಶಗಳಾಗಿವೆ.
  4. Holden, Amanda. The Viking Opera Guide. London: Viking. p. 1016. ISBN 0-670-81292-7. {{cite book}}: Unknown parameter |coauthors= ignored (|author= suggested) (help)
  5. ^ ಎಫ್. ಇ. ಹ್ಯಾಲ್ಲಿಡೇ , ಎ ಶೇಕ್ಸ್‌ಪಿಯರ್ ಕಂಪಾನಿಯನ್ 1564–1964 , ಬಾಲ್ಟಿಮೊರೆ, ಪೆಂಗ್ವಿನ್, 1964; ಪು. 531.

ಉಲ್ಲೇಖಗಳು‌

[ಬದಲಾಯಿಸಿ]
  • Public Domain This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ದಿ ಕಾಮೆಡಿ ಆಫ್ ಎರರ್ಸ್]]