ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search

ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ
Sai Vidya Institute of Technology Logo.jpg
ಸ್ಥಾಪನೆ2008
ಪ್ರಕಾರPrivate Un-aided
ಪದವಿ ಶಿಕ್ಷಣ~2000
ಸ್ಥಳBangalore, Karnataka
13°9′27″N 77°33′39″E / 13.15750°N 77.56083°E / 13.15750; 77.56083ನಿರ್ದೇಶಾಂಕಗಳು: 13°9′27″N 77°33′39″E / 13.15750°N 77.56083°E / 13.15750; 77.56083
ಆವರಣUrban
ರಾಜಾನುಕುಂಟೆ, ದೊಡ್ಡ ಬಳ್ಳಾಪುರ ರಸ್ತೆ, ಬೆಂಗಳೂರು
ಅಂತರ್ಜಾಲ ತಾಣsaividya.ac.in/


ದಶಮಾನೋತ್ಸವ ಸಂಭ್ರಮಾಚರಣೆ (2008-2018)[ಬದಲಾಯಿಸಿ]

ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯವು ಬೆಂಗಳೂರಿನಲ್ಲಿರುವ ಒಂದು ಖಾಸಗಿ ತಾಂತ್ರಿಕ ಮಹಾವಿದ್ಯಾಲಯ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಅಧೀನಕೊಳಪಟ್ಟಿದ್ದು, ಎಐಸಿಟಿಇ (ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ) ಯಿಂದ ಅನುಮೋದನೆಗೊಳಪಟ್ಟು ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟಿದೆ.

ಇತಿಹಾಸ[ಬದಲಾಯಿಸಿ]

ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯವು 2008ರಲ್ಲಿ ಸ್ಥಾಪಿತವಾಯಿತು. ಶ್ರೀ ಸಾಯಿ ವಿದ್ಯಾ ವಿಕಾಸ ಶಿಕ್ಷಣ ಸಮಿತಿಯು ಈ ವಿದ್ಯಾ ಸಂಸ್ಥೆಯ ಎಲ್ಲಾ ಬೆಳವಣಿಗೆ ಮತ್ತು ಸಾಧನಗಳಿಗೆ ಪ್ರೇರಕ ಶಕ್ತಿಯಾಗಿದೆ. ತಾಂತ್ರಿಕ ಶಿಕ್ಷಣ ಅರಸಿ ಬಂದ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಶಿಕ್ಷಣದ ಸರ್ವ ದಿಕ್ಕುಗಳಲ್ಲೂ ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಸಮಗ್ರವಾದ ತಾಂತ್ರಿಕ ಶಿಕ್ಷಣ ತರಬೇತಿ ಹಾಗು ಅತ್ಯುತ್ತಮ ಶಿಕ್ಷಣದ ಬಗ್ಗೆ ಈ ವಿದ್ಯಾ ಸಂಸ್ಥೆಯು ಗಮನವಹಿಸುತ್ತಿದೆ. ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯವು ತಾಂತ್ರಿಕ ಶಿಕ್ಷಣದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರುಗಳ ಒಂದು ತಂಡದಿಂದ ರಚಿತವಾಗಿದ್ದು, 56 ವರ್ಷಗಳಿಂದ ಸೇವೆಯನ್ನು ತಾಂತ್ರಿಕ ಶಿಕ್ಷಣಕ್ಕೆ ನೀಡುತ್ತಿರುವ ಹಾಗು ಈ ಸಾಧನೆಗೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ[೧] ಭಾಜನರಾದ ಪ್ರೊ. ಎಂ. ಆರ್. ಹೊಳ್ಳ ರವರ ಅಧ್ಯಕ್ಷತೆಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ತಾಂತ್ರಿಕ ಶಿಕ್ಷಣದ ನುರಿತ ಪ್ರಾಧ್ಯಾಪಕರುಗಳಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಪ್ರೊ. ಪದ್ಮಾರೆಡ್ಡಿ, ಶ್ರೀ ಆರ್. ಶ್ರೀನಿವಾಸರಾಜು, ಪ್ರೊ. ಆರ್.ಸಿ. ಷಣ್ಮುಖ ಸ್ವಾಮಿ, ಪ್ರೊ. ವೈ. ಜಯಸಿಂಹ, ಶ್ರೀ ಎಮ್.ಕೆ. ಮನೋಹರ್ ಶ್ರೀ ಎನ್. ನಾರಾಯಣರಾಜು ರವರುಗಳು ಸಾಯಿ ವಿದ್ಯಾ ಸಂಸ್ಥೆಯ ರೂವಾರಿಗಳಾಗಿದ್ದಾರೆ.

ಲಭ್ಯವಿರುವ ವಿಷಯಗಳು[ಬದಲಾಯಿಸಿ]

ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಕೆಳಕಂಡ ವಿಷಯಗಳಲ್ಲಿ ೪ ವರ್ಷಗಳ ಅವಧಿಯ ಬಿ.ಇ ಪದವಿಗೆ ಸೀಟುಗಳು ಲಭ್ಯವಿರುತ್ತವೆ.

ವಿಷಯ ಲಭ್ಯವಿರುವ ಸೀಟುಗಳು ಅವಧಿ
ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ ೧೨೦ ೪ ವರ್ಷ
ಗಣಕ ವಿಜ್ಞಾನ ಇಂಜಿನಿಯರಿಂಗ್ ೬೦ ೪ ವರ್ಷ
ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ೬೦ ೪ ವರ್ಷ
ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ೬೦ ೪ ವರ್ಷ
ಮೆಕ್ಯಾನಿಕಲ್ ಇಂಜಿನಿಯರಿಂಗ್ ೬೦ ೪ ವರ್ಷ
ಸಿವಿಲ್ ಇಂಜಿನಿಯರಿಂಗ್ ೬೦ ೪ ವರ್ಷ

ವಿಭಾಗಗಳು[ಬದಲಾಯಿಸಿ]

ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಕೆಳಗೆ ಕಾಣಿಸಿದ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಿದ್ದು ಅತ್ಯುತ್ತಮ ತಾಂತ್ರಿಕ ಶಿಕ್ಷಣ ಕೊಡುವಲ್ಲಿ ನಿರಂತರ ಕಾರ್ಯಪ್ರವೃತ್ತವಾಗಿವೆ.

ಪದವಿ[ಬದಲಾಯಿಸಿ]

 1. ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ (Electronics and Communication Engineering)
 2. ಗಣಕ ವಿಜ್ಞಾನ ಇಂಜಿನಿಯರಿಂಗ್ (Computer Science and Engineering)
 3. ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ (Information Science and Engineering)
 4. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ (Electrical and Electronics Engineering)
 5. ಮೆಕ್ಯಾನಿಕಲ್ ಇಂಜಿನಿಯರಿಂಗ್ (Mechanical Engineering)
 6. ಸಿವಿಲ್ ಇಂಜಿನಿಯರಿಂಗ್ (Civil Engineering)

ಸ್ನಾತಕೋತ್ತರ ಪದವಿ[ಬದಲಾಯಿಸಿ]

 1. ಎಂ.ಬಿ.ಎ

ಸಂಶೋಧನೆ ಮತ್ತು ಅಭಿವೃದ್ದಿ[ಬದಲಾಯಿಸಿ]

ಈ ಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ದಿಯ ಕಡೆ ಹೆಚ್ಚು, ಹೆಚ್ಚು ಗಮನವಹಿಸುತ್ತಿದ್ದು, ಇಚ್ಚೆಯುಳ್ಳ ವಿದ್ಯಾರ್ಥಿಗಳು ಪಿ.ಹೆಚ್.ಡಿ ಕೋರ್ಸಿಗೆ ಕೆಳಗೆ ತಿಳಿಸಿದ ವಿಷಯಗಳಲ್ಲಿ ಆಯ್ಕೆ ಬಯಸಬಹುದು.

 1. ವಿದ್ಯುನ್ಮಾನ ಇಂಜಿನಿಯರಿಂಗ್ ನಲ್ಲಿ ಪಿ.ಹೆಚ್.ಡಿ
 2. ಗಣಕ ವಿಜ್ಞಾನದಲ್ಲಿ ಇಂಜಿನಿಯರಿಂಗ್ ನಲ್ಲಿ ಪಿ.ಹೆಚ್.ಡಿ
 3. ಗಣಿತ ಶಾಸ್ತ್ರದಲ್ಲಿ ಪಿ.ಹೆಚ್.ಡಿ
 4. ಮೆಕ್ಯಾನಿಕಲ್ ಇಂಜಿನಿಯರಿಂಗ್
 5. ಸಿವಿಲ್ ಇಂಜಿನಿಯರಿಂಗ್

ಕರ್ನಾಟಕ ರಾಜ್ಯ ಸರ್ಕಾರದ VGST SMYSR ಮತ್ತು CISEE ಯೋಜನೆಯಿಂದ, ಭಾರತ ಸರ್ಕಾರದ SERB-DST ಯೋಜನೆಯಿಂದ ಹಾಗು ರಾಜ್ಯ ಸರ್ಕಾರದ KSCST ಯಿಂದ ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಅನುದಾನ ನೀಡಲಾಗಿದೆ.

ಸೌಲಭ್ಯಗಳು[ಬದಲಾಯಿಸಿ]

ಗ್ರಂಥಾಲಯ[ಬದಲಾಯಿಸಿ]

ಗ್ರಂಥಾಲಯವು ಪ್ರಮುಖ ಸಂಪನ್ಮೂಲ ಕೇಂದ್ರವಾಗಿದ್ದು ಸಂಪೂರ್ಣ ಗಣಕೀಕೃತವಾಗಿದೆ. ವಿದ್ಯಾರ್ಥಿಗಳ ಮತ್ತು ಭೋದಕರ ಸಮಗ್ರ ಅಭಿವೃದ್ದಿಗೆ ಪೂರಕವಾಗಿದೆ.ವಿವಿಧ ವಿಷಯಗಳಲ್ಲಿನ ಒಟ್ಟು ಪುಸ್ತಕಗಳ ಸಂಖ್ಯೆಯನ್ನು ಈ ಕೆಳಕಂಡ ಕೋಷ್ಟಕದಲ್ಲಿ ನೀಡಲಾಗಿದೆ.

ಒಟ್ಟು ಶೀರ್ಷಿಕೆಗಳು ಒಟ್ಟು ಸಂಪುಟಗಳು ನಿಯತಕಾಲಿಕೆಗಳು
೩೫೮೩ ೧೫೩೨೧

ಕ್ರೀಡೆ[ಬದಲಾಯಿಸಿ]

ಕ್ರೀಡೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಈ ಸಂಸ್ಥೆಯು ನೀಡುತ್ತದೆ. ಕಾಲೇಜು ವಾಲಿಬಾಲ್, ಫೂಟ್‍ಬಾಲ್, ಟೆನ್ನಿಸ್, ಬಾಸ್ಕೆಟ್‍ಬಾಲ್, ಕಬಡ್ಡಿ, ಕ್ರಿಕೆಟ್, ಬ್ಯಾಡ್ಮಿಂಟನ್ ಮುಂತಾದ ಹೊರಾಂಗಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಒಳಾಂಗಣ ಕ್ರೀಡಾಂಗಣವನ್ನೂ ಹೊಂದಿದೆ. ಈಗಾಗಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಕ್ರೀಡಾ ಸ್ಪರ್ದೆಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಪ್ರತಿವರ್ಷ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕೊಡಲ್ಪಡುವ ವಿಟಿಯು ಸಾಂಸ್ಥಿಕ ನಗದು ಬಹುಮಾನವನ್ನು ೨೦೧೪-೧೫ರಲ್ಲಿ ಈ ಸಂಸ್ಥೆಯು ಪಡೆದಿದೆ.

ಉದ್ಯೋಗ ಅವಕಾಶ[ಬದಲಾಯಿಸಿ]

ಪ್ರತಿ ವರ್ಷವೂ ಅ‍ರ್ಹತೆಯುಳ್ಳ ವಿದ್ಯಾರ್ಥಿಗಳಿಗೆ ಶೇಖಡ ೯೮ ರಷ್ಟು ಉದ್ಯೋಗವನ್ನು ಪ್ಲೇಸ್ಮೆಂಟ್ ಸೆಲ್ಲ್ ಕಡೆಯಿಂದ ಒದಗಿಸಲಾಗುತ್ತಿದೆ. ಇದಕ್ಕಾಗಿಯೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಸಂಸ್ಥೆಯಲ್ಲಿಯೇ ನೀಡಲಾಗುತ್ತಿದೆ. HCL, Tech Mahindra, HP, IBM, iGATE, CGI Group, OnMobile, Siemens, Syntel, Wipro, Indian Air Force, TCS, Cognizant, Mphasis, NTT DATA, EMC Corporation, Mindtree, Amazon, Microland, Raymond Group ಮುಂತಾದ ಕಂಪೆನಿಗಳು ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿವೆ.

ವಿದ್ಯಾರ್ಥಿ ನಿಲಯಗಳು[ಬದಲಾಯಿಸಿ]

ವಿಶಾಲವಾದ, ಸುಸಜ್ಜಿತವಾದ Wi-Fi ಅನುಕೂಲವುಳ್ಳ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳು ಕಾಲೇಜಿನ ಆವರಣದಲ್ಲಿವೆ. ಭಾರತದ ಬೇರೆ ಬೇರೆ ರಾಜ್ಯದ ಹಾಗು ಹೊರದೇಶದ ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಉಪಹಾರ ಗೃಹ[ಬದಲಾಯಿಸಿ]

ಕಾಲೇಜು ಪರಿಶುದ್ದ ಸಸ್ಯಹಾರಿ ಉಪಹಾರ ಗೃಹವನ್ನು ಹೊಂದಿದ್ದು ದಕ್ಷಿಣ ಮತ್ತು ಉತ್ತರ ಭಾರತೀಯ ಎಲ್ಲಾ ರುಚಿಯಾದ,ಶುಚಿಯಾದ ಆಹಾರಗಳು ಲಭ್ಯವಿರುತ್ತವೆ.

ವಾಹನ ವ್ಯವಸ್ಥೆ[ಬದಲಾಯಿಸಿ]

ಬೆಂಗಳೂರು ನಗರದ ವಿವಿಧ ಭಾಗಗಳಿಂದ ವಾಹನ ವ್ಯವಸ್ಥೆ ನೀಡುತ್ತಿದೆ.

ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್[ಬದಲಾಯಿಸಿ]

ರಾಷ್ಟ್ರೀಯ ಸೇವಾ ಯೋಜನೆ (National Service Scheme) ಘಟಕವು ಸಂಸ್ಥೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು ವಾರ್ಷಿಕ ೫-೬ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗುತ್ತಾ ಬಂದಿದೆ. ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಘಟಕಗಳು ಜೊತೆಗೂಡಿ ಸ್ವಚ್ ಭಾರತ್, ರಕ್ತದಾನ ಶಿಬಿರದಂತ ಸಮಾಜಮುಖಿ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಂಡಿವೆ. ರಾಷ್ಟೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಯೊಬ್ಬರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಿದ್ದು NSS ಕಾರ್ಯಚಟುವಟಿಕೆಗಳಿಗೆ ಇನ್ನಷ್ಟು ಸ್ಪೂರ್ತಿಯಾಗಿದೆ.

ವಿದ್ಯಾರ್ಥಿ ಚಟುವಟಿಕೆಗಳು[ಬದಲಾಯಿಸಿ]

ಸಂಚಲನ[ಬದಲಾಯಿಸಿ]

ಸಂಚಲನವು ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಹಬ್ಬವಾಗಿದ್ದು, ಕಾಲೇಜಿನಲ್ಲಿರುವ ಹಲವು ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಯನ್ನು ಸಂಸ್ಕೃತಿಯನ್ನು ಬಿಂಬಿಸಲು ವೇದಿಕೆಯಾಗಿದೆ.

ಟೆಕ್ ವಿದ್ಯಾ[ಬದಲಾಯಿಸಿ]

ಟೆಕ್ ವಿದ್ಯಾ ಎಂಬುದು ಕಾಲೇಜಿನ ತಾಂತ್ರಿಕ ಹಬ್ಬವಾಗಿದ್ದು ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯವನ್ನು ತೋರಿಸಲು ವೇದಿಕೆಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 1. "Rajyotsava Award for Srinath, Baragur, 54 others". The Hindu.