ರಾಷ್ಟ್ರೀಯ ಸೇವಾ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರೀಯ ಸೇವಾ ಯೋಜನೆ ಚಿಹ್ನೆ

ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ (Department of Youth Affairs and Sports). ಗಾಂಧೀಜಿಯವರ ಶತವರ್ಷವಾದ ೧೯೬೯ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ.

ಎನ್.ಎಸ್.ಎಸ್. ಚಿಹ್ನೆ

ರಾಷ್ಟ್ರೀಯ ಸೇವಾ ಯೋಜನೆ ಈ ಸಂಘಟನೆಯನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಬಗೆಯಲ್ಲಿ ತಿಳಿಯಲು ಇರುವು ಒಂದು ಸರಕಾರದ ಯೋಜನೆ. ಗಾಂಧೀಜಿ ಯವರ ಸರ್ವೋದಯ ತತ್ವದ ನೆಲೆಯಲ್ಲಿ ಯೋಚನೆ ಮಾಡುವಾಗ, ಇಂತಹ ಒಂದು ವಿಚಾವರನ್ನು ಅನುಷ್ಠಾನಕ್ಕೆ ತಂದರು.[೧] ಹೀಗೆ ಎನ್.ಎಸ್.ಎಸ್. ಎಂಬ ಪರಿಕಲ್ಪನೆ ಬಂತು. ಮೊದಲು ಪದವಿ ಕಾಲೇಜುಗಳಲ್ಲಿ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಇದ್ದ ಎನ್.ಎಸ್.ಎಸ್.ನಂತರ ಪಿ.ಯು.ಸಿ ಹಾಗೂ ಈಗ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಣೆಯಾಗಿದೆ.[೨]

ಎನ್.ಎಸ್.ಎಸ್. ಧ್ಯೇಯ ವಾಕ್ಯ[ಬದಲಾಯಿಸಿ]

“ಅನುಭವವು ಸವಿಯಲ್ಲ ಅದರ ನೆನಪೇ ಸವಿಯು, ಅದ ಕದ್ದು ಮೇಯದೆ ಮನವು” ಹೀಗೆ ಹೇಳಿದವರು ಕವಿ ಕಡೆಂಗೋಡ್ಲು ಶಂಕರಭಟ್ಟ. ಎನ್.ಎಸ್.ಎಸ್. ಒಂದು ಅನುಭವ. ಎನ್. ಎಸ್. ಎಸ್. ಧ್ಯೇಯವಾಕ್ಯ - ನನಗಲ್ಲ, ನಿನಗೆ - Not me, but you ಆಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಬದುಕುನ ಹಾಗೇನೆ ನಿಸ್ವಾರ್ಥ ಸೇವೆಯಲ್ಲಿ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಮೆಚ್ಚಿಕೆಯಾಗಿ ಗುರುತಿಸಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಎನ್.ಎಸ್.ಎಸ್. ದ್ಯೇಯ ವಾಕ್ಯ ಪ್ರತಿಬಿಂಬಿಸುತ್ತದೆ.[೩]

1968ಡ್ ಆರ್ಮ್‌ಡ್ ಫೋರ್ಸ್ ದಿನಾಚರಣೆಯಂದು ಎನ್.ಎಸ್.ಎಸ್.
ಎನ್.ಎಸ್.ಎಸ್. ಶಿಬಿರದಲ್ಲಿ ಭೂತ ನಲಿಕೆ

ಇತಿಹಾಸ[ಬದಲಾಯಿಸಿ]

ಆರ್ಮ್‌ಡ್ ಫೋರ್ಸ್ ದಿನಾಚರಣೆ ಮೇ ೧೭,1969
ಎನ್.ಎಸ್.ಎಸ್. ಶಿಬಿರ ಜ್ಯೋತಿ

ಎನ್.ಎಸ್.ಎಸ್.ನ ಅಗತ್ಯ[ಬದಲಾಯಿಸಿ]

  • ಬಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಯು.ಜಿ.ಸಿ.(University Grants Commission) ಸರ್ವೆಪಲ್ಲಿ ರಾಧಾಕೃಷ್ಣನ್ರನ್ನು ಅಧ್ಯಕ್ಷರನ್ನಾಗಿ ಮಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಯಂಸೇವಕರನ್ನು ರಾಷ್ಟ್ರದ ಸೇವೆಗಾಗಿ ತಯಾರು ಮಾಡಬೇಕುಂದು ಹೇಳುವ ಒಂದು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟರು.[೪] ಈ ಆಲೋಚನೆಯನ್ನು ಜನವರಿ ೧೯೫೦ನೆಯ ಇಸವಿಯಲ್ಲಿ ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಡ್ಯುಕೇಶನ್(CABE)ಸಭೆಯಲ್ಲಿ ಮತ್ತೊಮ್ಮೆ ಪ್ರಸ್ತಾಪ ಮಾಡದರು. ಈ ನೆಲೆಯಲ್ಲಿ ಉಂಟಾದ ಆಲೋಚನೆಯನ್ನು ಪರೀಕ್ಷೆ ಮಾಡಿ, ದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶ ಭಕ್ತಿಯಲ್ಲಿ ಸ್ವಯಂ ಸೇವಕರಾಗಿ ಸ್ವಸಹಾಯದೊಂದಿಗೆ ಕೆಲಸ ಮಡಬೇಕೆಂದು ತೀರ್ಮಾನ ಆಯಿತು. ಇದನ್ನು ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ೧೯೫೨ರಲ್ಲಿ ಸರಕಾರ ಬಳಕೆಗೆ ತಂದರು. ಸೇವಾ ಮನೋಭಾವದ ಅಗತ್ಯದಲ್ಲಿ ಸಮಾಜ ಮತ್ತು ಸಾಮಾನ್ಯರ ಸೇವೆಯ ನೆಲೆಯಲ್ಲಿ ಭಾರತದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಒಂದು ವರ್ಷ ಸ್ವಯಂ ಸೇವಕರಾಗಿರಬೇಕೆಂಬ ಒತ್ತಡ ತಂದರು.[೫]
  • ೧೯೫೮ರಲ್ಲಿ ಜವಾಹರಲಾಲ್ ನೆಹರು ಅವರು ಸಮಾಜ ಸೇವೆ ಎಂದು ಕರೆಸಿಕೊಳ್ಳುವ ಆಲೋಚನೆಯನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮೊದಲು ಆರಂಭಿಸಬೇಕೆಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ಇದೊಂದು ಸಕ್ರೀಯ ಯೋಜನೆಯಾಗಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸೇವೆಯೆಂದು ಶೈಕ್ಷಣಿಕ ಅಗತ್ಯ ಪಡೆದ ಯೋಜನೆ ರೂಪುಗೊಂಡಿತು.
  • ೧೯೫೨ರಲ್ಲಿ ಇದೊಂದು ಯೋಜನೆ ಆಗಿ ರಚನೆ ಆಯಿತು. ಈ ಯೋಜನೆ ಕಾಲೇಜುಗಳಲ್ಲಿ ಆರಂಭಿಸುವ ಮೊದಲು ರಾಜ್ಯಗಳ ಶಿಕ್ಷಣ ಮಂತ್ರಿಗಳಿಗೆ ಒಂದು ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಒಪ್ಪಿಗೆ ಪಡೆದುಕೊಂಡು ಯೋಜನೆಯು ರಾಷ್ಟ್ರೀಯ ಸೇವೆಗಾಗಿ ಕೂಡಲೇ ಆರಂಭ ಆಗಬೇಕು. ಹಾಗೆ ಇದಕ್ಕಾಗಿ ಒಂದು ಕಮಿಟಿ ರಚನೆ ಮಾಡಬೇಕು. ಇದನ್ನು ಕೂಡಲೇ ಚಾಲನೆಗೆ ತರಬೇಕೆಂದು ಸರ್ವಾನುಮತದ ಅನುಮೋದನೆ ಮಾಡಿದರು. ಹೀಗೆ ಸಿ.ಡಿ.ದೇಶ್‍ಮುಖ ಇವರ ಅಧ‍್ಯಕ್ಷತೆಯಲ್ಲಿ ಆಗಸ್ಟ್ ೨೮, ೧೯೫೯ರಲ್ಲಿ ರಾಷ್ಟ್ರೀಯ ಸೇವೆಯ ಕಮಿಟಿಯನ್ನು ಮಾಡಬೇಕೆಂದು ಸಲಹೆ ಕೊಟ್ಟರು. ಈ ಸಮಿತಿ ಒಂಬತ್ತು ತಿಂಗಳು ಅಥವಾ ಒಂದು ವರ್ಷಕ್ಕೆ ರಾಷ್ಟ್ರೀಯ ಸೇವೆಯನ್ನು ಪರಿಚಯ ಮಾಡಬೆಕೆಂದು ಶಿಫಾರಸ್ ಮಾಡಿತು. ಹಾಗೆ ಶಿಫಾರಸ್ ಯಾಕೆಂದರೆ ಇದರ ಅನುಷ್ಠಾನದಲ್ಲಿ ಆ ವರ್ಷದ ಆರ್ಥಿಕ ಪರಿಣಾಮಗಳು ಮತ್ತು ತೊಂದರೆಗಳನ್ನು ಸ್ವೀಕರಿಸುತ್ತಿದ್ದರು.
  • 1960ನೆ ಇಸವಿಯಲ್ಲಿ ಬೇರೆ ದೇಶದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವೆ ಹೇಗೆ ಜಾರಿ ಆಗಿದೆ ಎನ್ನುವ ಅಧ್ಯಯನಕ್ಕೆ ಸರ್ಕಾರ ಕೆ.ಜಿ.ಸೈಯ್ಯಿದೈನ್‍ ಎಂಬರನ್ನು ನೇಮಕ ಮಾಡಿತು. ಇವರು ಅಧ್ಯಯನ ಮಾಡಿ ಯುವ ರಾಷ್ಟ್ರೀಯ ಸೇವೆ ಹೇಳುವ ನೆಲೆಯಲ್ಲಿ ಭಾರತದ ವಿದ್ಯಾರ್ಥಿಗಳ ಸಾಮಾಜಿಕ ಸೇವೆಯನ್ನು ಒಂದು ಅಭಿವೃದ್ಧಿ ಕಾರ್ಯಸಾಧ್ಯ ಯೋಜನೆಯೆಂದು ತೆಗೆದುಕೊಂಡು ಸರಕಾರಕ್ಕೆ ವರದಿ ಸಲ್ಲಿಸಿದರು.[೬]
ಎನ್.ಎಸ್.ಎಸ್. ಶಿಬಿರದ ಒಂದು ನೋಟ

ಸಂಸ್ಥೆಗಳು[ಬದಲಾಯಿಸಿ]

  • ಡಿ.ಎಸ್.ಕೊಠಾರಿ ಇವರ ನೇತೃತ್ವದಲ್ಲಿ ೧೯೬೪-೧೯೬೬ರಲ್ಲಿ ಶಿಕ್ಷಣದ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳು ಸಮಾಜ ಸೇವೆಯನ್ನು ಸಂಘಟಿತವಾಗಿ ಮಾಡಬಹುದೆಂದು ಶಿಕ್ಷಣ ಆಯೋಗಕ್ಕೆ ಶಿಫಾರಸ್ ಮಾಡಿದರು. ಈ ಅಭಿಪ್ರಾಯವನ್ನು ಏಪ್ರಿಲ್ 1967ನೆಯ ಸಮಾವೇಶದ ಸಂದರ್ಭದಲ್ಲಿ ರಾಜ್ಯದ ಶಿಕ್ಷಣ ಸಚಿವರು ಗಮನಕ್ಕೆ ತೆಗೆದುಕೊಂಡರು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(NCC) (ಇದೊಂದು ಸ್ವಯಂಪ್ರೇರಿತ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಸಂಘಟನೆ) ಅಲ್ಲದೆ ಹೊಸ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್.) ಸೇರಬೇಕೆಂದು ಶಿಫಾರಸು ಮಾಡಿದರು.
  • ಸೆಪ್ಟೆಂಬರ್ 1969ರಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಅಧಿವೇಶನದ ಒಂದು ವಿಶೇಷ ಸಮಿತಿಯಲ್ಲಿ ಈ ಶಫಾರಸುಗಳನ್ನು ಪರೀಕ್ಷಿಸಲು ಸಲಹೆ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ರಾಷ್ಟ್ರೀಯ ಸೇವೆ ಶಿಕ್ಷಣದ ಒಂದು ಅವಿಬಾಜ್ಯ ಅಂಗ ಆಗಿರಬೇಕೆಂದು ಅವರ ಅನುಭವವನ್ನು ಹೇಳಿದರು.[೭]
ಎನ್.ಎಸ್.ಎಸ್. ಸಹಭೋಜನ
ಎನ್.ಎಸ್.ಎಸ್. ರಕ್ತದಾನ ಶಿಬಿರ

ಎನ್.ಎಸ್.ಎಸ್. ಆರಂಭ[ಬದಲಾಯಿಸಿ]

  • ಮೇ 1969ರಂದು ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯು.ಜಿ.ಸಿ)ವಿದ್ಯಾರ್ಥಿ ಪ್ರತಿನಿಧಿಗಳ ಸಮ್ಮೇಲನ ಕರೆಯಿತು. ರಾಷ್ಟ್ರೀಯ ಏಕೀಕರಣಕ್ಕೆ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್.) ಎಂಬ ಸ್ವಯಂಸೇವಕರ ಸಂಘಟನೆ ಬೇಕೆಂದು ಸರ್ವಾನುಮತದ ಒಪ್ಪಿಗೆ ಸಿಕ್ಕಿತು.
  • ೪ನೆಯ ಪಂಚ ವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ೫ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿತು. ಇದೊಂದು ವಿಶೇಷ ಯೋಜನೆಯಾಗಿ ವಿಶ್ವವಿದ್ಯಾನಿಲಯ ಮತ್ತು ಆಯ್ಕೆಯಾದ ಸಂಸ್ಥಗಳಲ್ಲಿ ಬರಬೇಕೆಂದು ಷರತ್ತು ಬದ್ಧ ತೀರ್ಮಾನ ಆಯಿತು.
  • ಸೆಪ್ಟೆಂಬರ್ 24, 1969ರಂದು ಆಗ ಕೇಂದ್ರ ಶಿಕ್ಷಣ ಮಂತ್ರಿ ಆಗಿದ್ದ ವಿ.ಕೆ.ಆರ್.ವಿ.ರಾವ್ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತು ದೇಶದ 37 ವಿಶ್ವವಿದ್ಯಾಲಯಗಳಲ್ಲಿ ಎನ್.ಎಸ್.ಎಸ್. ಸಂಘಟನೆಯನ್ನು ಬಿಡುಗಡೆ ಮಾಡಿದರು. ರಾಜ್ಯಗಳ ಸ್ನಾತಕೋತ್ತರ ಪದವಿ, ಪದವಿ ಮತ್ತು +2 ಮಟ್ಟದ ತರಬೇತಿ ಸಂಸ್ಥೆಗಳಿಗೆ ವಿಸ್ತಾರ ಮಾಡಿದರು.
  • ೧೮೬೯ನೆಯ ಇಸವಿ ಅಕ್ಟೋಬರ್ ೨ ಗಾಂಧೀಜಿಯವರು ಹುಟ್ಟಿದಿನ. ಗಾಂಧೀಜಯವರ ವಿಚಾರಧಅರೆಯನ್ನು ಇಟ್ಟುಕೊಂಡು ಅವರ ಜನ್ಮ ವರ್ಷದಲ್ಲಿ ಎನ್.ಎಸ್.ಎಸ್. ಹೇಳುವ ಯೋಜನೆ ಬಳಕೆಗೆ ಬಂತು.
  • ೧೮೬೯ರಿಂದ ೧೯೬೯ನೆಯ ವರ್ಷಕ್ಕೆ ಗಾಂಧೀಜಿಯವರು ಹುಟ್ಟಿ ೧೦೦ ವರ್ಷ ಆಗುವ ನೆನಪಿಗಾಗಿ ಪ್ರತಿ ವರ್ಷದ ಸೆಪ್ಟೆಂಬರ್ ೨೪ನೆ ದಿನದಂದು ಎನ್.ಎಸ್.ಎಸ್. ದಿನಾಚರಣೆ ಮಾಡುತ್ತಾರೆ. ಎನ್.ಎಸ್.ಎಸ್. ಒಂದು ವಿದ್ಯಾರ್ಥಿ ಸ್ವಯಂ ಸೇವಕರ ಸಂಘಟನೆ. ಹಾಗಾಗಿ ಎನ್.ಎಸ್.ಎಸ್. ಸಂಘಟನೆಯಲ್ಲಿ ಯುವಕರಾದ ಕಾಲೇಜು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಇರುತ್ತಾರೆ. ಇದೊಂದು ಸಮುದಾಯ ಸೇವೆಗಾಗಿ ಹುಟ್ಟಿದ ಸಂಘಟನೆ ಆಗಿರುವುದರಿಂದ ಪಿ.ಯು.ಸಿ.ಯಲ್ಲಿ ೨ ವರ್ಷ, ಪದವಿಯಲ್ಲಿ ೨ ವರ್ಷ, ಸ್ನಾತಕೋತ್ತರ ಪದವಿಯಲ್ಲಿ ೨ ವರ್ಷ ಹೀಗೆ ಎನ್.ಎಸ್.ಎಸ್.ನಲ್ಲಿ ಸ್ವಯಂಸೇವಕಗಾಗಿ ಇರಬಹುದು.

ಎನ್.ಎಸ್.ಎಸ್.ನ ಆರಂಭ[ಬದಲಾಯಿಸಿ]

1969 ಸೆಪ್ಟೆಂಬರ್ 24ರಂದು ನಮ್ಮ ರಾಷ್ಟ್ರದಲ್ಲಿ ಎನ್.ಎಸ್.ಎಸ್. ಆರಂಭವಾಯಿತು. ಮಹಾತ್ಮಾಗಾಂಧಿಯವರು ಭಾರತ ದೇಶದಲ್ಲಿ ಗ್ರಾಮ ಸ್ವ-ರಾಜ್ಯದ ಕನಸನ್ನು ಕಂಡರು. ಅದರ ಪ್ರತಿಫಲವೇ ರಾಷ್ಟ್ರೀಯ ಸೇವಾ ಯೋಜನೆಯಾಗಿ ರೂಪುಗೊಂಡಿತು. ಆರಂಭದಲ್ಲಿ 40,000 ವಿದ್ಯಾರ್ಥಿಗಳಿದ್ದ ಈ ಯೋಜನೆ ಪ್ರಸ್ತುತ ಒಂದೊಂದು ವಿಶ್ವವಿದ್ಯಾನಿಲಯಗಳಲ್ಲಿ 10,000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

  • ಎನ್ ಎಸ್ ಎಸ್ ಘಟಕ ಎಲ್ಲಾ ಕಾಲೇಜುಗಳಲ್ಲೂ ಇರುತ್ತದೆ. ಒಂದು ಘಟಕ ಎಂದರೆ ೧೦೦ ವಿದ್ಯಾರ್ಥಿ ಸ್ವಯಂ ಸೇವಕರು ಇರುತ್ತಾರೆ. ಇವರಿಗೆ ಒಬ್ಬರು ಯೋಜನಾಧಿಕಾರಿ ಇರುತ್ತಾರೆ. ಊರುಲ್ಲಿ ಬೇರೆ ಬೇರೆ ಕಡೆ ಸ್ವಚ್ಚತೆ, ಶ್ರಮದಾನ, ಉಪನ್ಯಾಸಗಳು, ರಾಷ್ಟ್ರಿಯ ಹಬ್ಬದ ಆಚರಣೆಲಗಳು ಸಂಘಟನೆಯ ಮೂಲಕ ನಡೆಯುತ್ತದೆ.[೮]

ಎನ್.ಎಸ್.ಎಸ್. ಎಂದರೇನು ?[ಬದಲಾಯಿಸಿ]

ಎನ್.ಎಸ್.ಎಸ್. ಎಂದರೆ ‘ನಾನು ಸದಾ ಸಿದ್ಧ’ ಅಥವಾ ‘ನಾನು ಶಿಸ್ತಿನ ಸಿಪಾಯಿ’ ಎಂದು ಅರ್ಥೈಸಬಹುದು. ‘ಎನ್.ಎಸ್.ಎಸ್.ನವರು ದೇಶ ಕಟ್ಟುತ್ತಾರೆ’. ‘ಎನ್.ಸಿ.ಸಿ.ಯವರು ದೇಶವನ್ನು ರಕ್ಷಿಸುತ್ತಾರೆ. ಎನ್.ಎಸ್.ಎಸ್.ನವರದದು ‘ಕಟ್ಟುವ ಮತ್ತು ಮೆತ್ತುವ ಕೆಲಸ’. ಇದರಿಂದ ಶ್ರಮದ ಮಹತ್ವ [Dignity of Labor] ವಿದ್ಯಾರ್ಥಿಗಳಿಗೆ ತಿಳಿಯುತ್ತದೆ.ಸೇವೆಗೆ ಸದಾ ಸಿದ್ದ ಎಂದರ್ಥ.

ಎನ್.ಎಸ್.ಎಸ್. ಚಿಹ್ನೆ ಮತ್ತು ಘೋಷವಾಕ್ಯ[ಬದಲಾಯಿಸಿ]

  • ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆ ಚಕ್ರದ ಗುರುತು ಚಕ್ರ ಯಾವತ್ತೂ ಚಲನಶೀಲವಾಗಿದ್ದು ಚಲಿಸುತ್ತಾ ಬೆಳವಣಿಗೆ ಹೊಂದುವುದನ್ನು ತಿಳಿಸುತ್ತದೆ. ಈ ಚಲನಶೀಲತೆ ವಿದ್ಯಾರ್ಥಿ ಬದುಕಿನಲ್ಲೂ ಕಾಣಬೇಕೆಂಬುದು ಇದರ ಉದ್ದೇಶ. ಒಡಿಶಾ ರಾಜ್ಯದ ಕೊನಾರ್ಕ್ ಸೂರ್ಯ ದೇವಾಲಯದ ರಥದ ಚಕ್ರವನ್ನು ಆಧಾರವಾಗಿರಿಸಿ ಎನ್.ಎಸ್.ಎಸ್. ಚಿಹ್ನೆಯನ್ನು ನಿರ್ಮಿಸಲಾಗಿದೆ.
  • ರಥದ ಚಕ್ರದಲ್ಲಿ 8 ಅಡ್ಡಪಟ್ಟಿಗಳಿದ್ದು, ಪ್ರತಿಯೊಂದು ಕಾಲದ ಸಂಕೇತವಾಗಿದ್ದು, 3 ಗಂಟೆಗಳ ಒಂದೊಂದು ಹಂತವನ್ನು ತಿಳಿಸುತ್ತದೆ. ಸ್ವಯಂ ಸೇವಕ 24 ಗಂಟೆಗಳೂ ಸೇವೆಗೆ ಲಭ್ಯನಿದ್ದಾನೆ ಎಂದು ತಿಳಿಸುತ್ತದೆ. ಚಿಹ್ನೆಯಲ್ಲಿ ಕೆಂಪು-ಬಿಳಿ-ನೀಳಿ ಬಣ್ಣಗಳಿವೆ. ಕೆಂಪು ಬಣ್ಣವು ಉತ್ಸಾಹ ಮತ್ತು ತ್ಯಾಗವನ್ನು, ಬಿಳಿ ಬಣ್ಣವು ಶಾಂತಿ ಮತ್ತು ಸಹಬಾಳ್ವೆಯನ್ನು, ಅಕಾಶ ನೀಲಿ ಬಣ್ಣವು ಸಮೃದ್ಧಿ ಮತ್ತು ಮನುಷ್ಯನ ಅಭಿವೃದ್ಧಿಯನ್ನು ಧ್ವನಿಸುತ್ತದೆ.

ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ[ಬದಲಾಯಿಸಿ]

  1. ಪರಿಸರ ಸಂರಕ್ಷಣೆ
  2. ಆರೋಗ್ಯ ಜಾಗೃತಿ
  3. ಶ್ರಮದಾನ
  4. ಪ್ರಗತಿಪರ ಚಿಂತನೆ
  5. ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ
  6. ಶೈಕ್ಷಣಿಕಮತ್ತು ಸಾಂಸ್ಕೃತಿಕ ಚಟುವಟಿಕೆಗಳು
  7. ಮಕ್ಕಳು ಮತ್ತು ಮಹಿಳಾ ಜಾಗೃತಿ
  8. ಪ್ರಾಚ್ಯವಸ್ತುಗಳ ಸಂರಕ್ಷಣೆ
  9. ರಾಷ್ಟ್ರೀಯ ಜಾಗೃತಿ ಮೂಡಿಸುವುದು-
    1. ನಾಡಗೀತೆ
    2. ದೇಶಭಕ್ತಿಗೀತೆ
    3. ರಾಷ್ಟ್ರಗೀತೆ
    4. ಎನ್.ಎಸ್.ಎಸ್. ಗೀತೆ

ಎನ್.ಎಸ್.ಎಸ್.ನಿಂದ ಏನು ಲಾಭ ?[ಬದಲಾಯಿಸಿ]

ಎನ್.ಎಸ್.ಎಸ್.ಗೆ ಸೇರಿದವರಿಗೆ ಸೇರುವ ಮೊದಲು ಉಂಟಾಗುವ ಪ್ರಶ್ನೆಯಿದು. ಸಮಾಜ ಸೇವೆಯಿಂದ ನಮಗೇನು ಲಾಭವೆಂದು ಅದರಲ್ಲಿ ತೊಡಗಿದ ಮೇಲೆ ಗೊತ್ತಾಗುವುದು. ತೊಡಗಿಕೊಂಡವರಿಗಾಗುವ ಲಾಭಗಳು ಹೀಗಿವೆ.

  1. ಶಿಸ್ತು - Discipline
  2. ಸಮಯ - Timing Sense
  3. ಸಹಬಾಳ್ವೆ/ಸಹಭೋಜನ/ಹೊಂದಾಣಿಕೆ - Living Together
  4. ಶ್ರಮದ ಮಹತ್ವ – Dignity of labor
  5. ಪರಿಣಾಮಕಾರಿ ಭಾಷಣ ಕಲೆ - Effective public specking
  6. ಸಭಾ ಕಂಪನ ನಿವಾರಣೆ - Stage Fear
  7. ಪ್ರತಿಭಾ ಪ್ರದರ್ಶನ/ಪ್ರತಿಭಾ ಕಾರಂಜಿ - Talent Show
  8. ವ್ಯಕ್ತಿತ್ವ ವಿಕಸನ - Personality development
  9. ಆತ್ಮ ವಿಶ್ವಾಸ/ಮಾನಸಿಕ ಸ್ಥೈರ್ಯ - Self Confidence
  10. ರಾಷ್ಟ್ರೀಯ ಭಾವೈಕ್ಯ/ರಾಷ್ಟ್ರಭಕ್ತಿ – National Integration
  11. ಜೀವನ ರೀತಿ/ಜೀವನ ಶೈಲಿ - Life Style

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳ ವಿಧಗಳು:[ಬದಲಾಯಿಸಿ]

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ಎರಡು ವಿಧ.

  1. ದೈನಂದಿನ ಶಿಬಿರ
  2. ವಿಶೇಷ ಶಿಬಿರ

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳ ವಿಧಗಳು[ಬದಲಾಯಿಸಿ]

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ಎರಡು ವಿಧ.

ದೈನಂದಿನ ಶಿಬಿರ - Regular Activities[ಬದಲಾಯಿಸಿ]

  • 20 ಗಂಟೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಬಗೆಗೆ ಪ್ರ-ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ನೀಡಬಹುದು.
  • 20 ಗಂಟೆ ಸಸಿ ನೆಡುವುದು, ಸಾರ್ವಜನಿಕ ಅರಣ್ಯ, ಕಾಲೇಜು ಪರಿಸರ ಸ್ವಚ್ಛತೆ ಮಾಡುವ ಕಾರ್ಯಕ್ರಮ ನಡೆಸುವುದು.
  • ದತ್ತು ಗ್ರಾಮವೊಂದನ್ನು ಆಯ್ದುಕೊಂಡು ದತ್ತುಗ್ರಾಮದಲ್ಲಿ ಸಾಕ್ಷರತೆ, ಸಂಪೂರ್ಣ ಸ್ವಚ್ಛತಾ ಆಂದೋಲನ, ವೈದ್ಯಕೀಯ ಶಿಬಿರ, ಏಡ್ಸ್ ಜಾಗೃತಿ ಶಿಬಿರ, ಪ್ಲಾಸ್ಟಿಕ್ ಜಾಗೃತಿ ಶಿಬಿರ, ಅಂತರ್ ಜಲ ಸಂರಕ್ಷಣೆ, ಭೂ ಸವಕಳಿ ತಡೆಗಟ್ಟುವುದು, ಚೆಕ್ ಡ್ಯಾಮ್ ನಿರ್ಮಾಣ, ವಿವಿಧ ಜಾಗೃತಿ ಕುರಿತಂತೆ ಬೀದಿ ನಾಟಕ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  • 20 ಗಂಟೆಗಳಲ್ಲಿ ರಾಷ್ಟ್ರೀಯ ಹಬ್ಬ, ದಿನಾಚರಣೆ, ಉತ್ಷವ, ಜಯಂತಿಗಳನ್ನು ಆಚರಿಸುವುದು. ಉದಾ: ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ, ಗಣರಾಜ್ಯೋತ್ಸವ, ಕೋಮುಸೌಹಾರ್ಧತಾ ದಿನ, ಏಡ್ಸ್ ಜಾಗೃತಿ ದಿನ, ಶಿಕ್ಷಕರ ದಿನ, ಬೀಚ್ ಸ್ವಚ್ಛತೆ ದಿನ ಇತ್ಯಾದಿ.
  • 12 ಗಂಟೆಗಳಲ್ಲಿ ಕಾಲೇಜಿನಲ್ಲಿ ರಕ್ತದಾನ, ಮಲೇರಿಯಾ ಜಾಗೃತಿ, ರಾಜೀವ ಗಾಂಧಿ ಊರ್ಜಾ ದಿವಸ, ಎನರ್ಜಿ ಕ್ಲಬ್, ಎರೆಗೊಬ್ಬರ ತಯಾರಿ, ಸಾವಯವ ಕೃಷಿ, ಸ್ವದೇಶಿ ಚಿಂತನೆ, ವಯಸ್ಕರ ಶಿಕ್ಷಣ, ಸ್ತ್ರೀ ಸಬಲೀಕರಣ, ಹದಿಹರೆಯದ ಸಮಸ್ಯೆಗಳು, ಜೀವನ ಶೈಲಿ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದು

ವಿಶೇಷ ಶಿಬಿರ - Special Activities[ಬದಲಾಯಿಸಿ]

  • ಹತ್ತು ದಿನಗಳ ವಾರ್ಷಿಕ ವಿಶೇಷ ಶಿಬಿರವು ರಾಷ್ಟ್ರೀಯ ಸೇವಾ ಯೋಜನೆಯ ಇನ್ನೊಂದು ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಪ್ರತಿಯೊಂದು ಕಡ್ಡಾಯವಾಗಿ ಹಮ್ಮಿಕೊಳ್ಳುವುದು. ಶಿಬಿರವನ್ನು ನಿಗದಿತ ರಜಾ ದಿನಗಳಲ್ಲಿ ಯಾವುದಾದರೂ ಒಂದು ಹಳ್ಳಿಯಲ್ಲಿ ಸಕಲ ತಯಾರಿಯೊಂದಿಗೆ ಆಯೋಜಿಸಬೇಕು. ಶಿಬಿರವನ್ನು ದತ್ತು ಗ್ರಾಮದಲ್ಲೇ ಹಮ್ಮಿಕೊಳ್ಳುವುದು ಅಪೇಕ್ಷಣೀಯ. ಒಂದೇ ಸ್ಥಳದಲ್ಲಿ ಹಲವು ವರ್ಷಗಳ ಕಾಲ ಶಿಬಿರ ಹಮ್ಮಿಕೊಂಡು ಶಾಶ್ವತ ಯೋಜನೆಯನ್ನು ನಿರ್ದಿಷ್ಟವಾಗಿ ಮುಗಿಸುವುದು. ವಾರ್ಷಿಕ ವಿಶೇಷ ಶಿಬಿರದಲ್ಲಿ ಒಂದು ಘಟಕದಿಂದ 50 ವಿದ್ಯಾರ್ಥಿ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಶಿಬಿರದಲ್ಲಿ ಪಾಲ್ಗೊಲ್ಲುವಂತೆ ಮಾಡುವುದು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನ ಕರ್ತವ್ಯಗಳು[ಬದಲಾಯಿಸಿ]

  • ಸ್ವಯಂ ಸೇವಕನು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಉತ್ತಮ ಅಭಿಪ್ರಾಯವನ್ನು ಜನರಲ್ಲಿ ಬಿಂಬಿಸುವುದು.
  • ಸಮುದಾಯದ ಆವಶ್ಯಕತೆಗಳು, ಸಮಸ್ಯೆಗಳು ಮತ್ತು ಸಂಪನ್ಮೂಲಗಳನ್ನು ಗುರುತಿಸುವುದು.
  • ತಾನು ಕಲಿತ ಅನುಭವದ ಸಹಾಯದಿಂದ ಸಮುದಾಯದ ಆವಶ್ಯಕತೆಗಳಿಗೆ ಸ್ಪಂದಿಸುವುದು.
  • ಪ್ರತಿಯೊಂದು ಕಾರ್ಯಕ್ರಮವನ್ನು ಡೈರಿ ಪುಸ್ತಕದಲ್ಲಿ ವ್ಯವಸ್ಥಿತವಾಗಿ ಬರೆದು ಕಾಲಕಾಲಕ್ಕೆ ಆದ ಬೆಳವಣಿಗೆಗಳನ್ನು ಗಮನಿಸುವುದು.
  • ವರ್ಷಕ್ಕೊಮ್ಮೆ ರಕ್ತದಾನ ಮಾಡುವುದು. (ಆರೋಗ್ಯವಂತ ಪುರುಷರು ಪ್ರತೀ ಮೂರು ತಿಂಗಳಿಗೊಮ್ಮೆ ಮತ್ತು ಸ್ತ್ರೀಯರು ಪ್ರತೀ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು)
  • ಯೋಜನಾಧಿಕಾರಿ ಅಥವಾ ತಂಡದ ನಾಯಕನ ಅಡಿಯಲ್ಲಿ ಅವರ ಮಾರ್ಗದರ್ಶನದಂತೆ ಕೆಲಸ ಮಾಡುವುದು.
  • ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮತ್ತು ಕೆಲಸಕಾರ್ಯಗಳನ್ನು ಸ್ವತಃ ನಿರ್ವಹಿಸುವುದು.
  • 24 ಗಂಟೆಗಳೂ ಸೇವೆಗೆ ಲಭ್ಯರಾಗಿರುವುದು.
  • ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುವುದು.
  • ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಶ್ರಮದಾನ ಇತ್ಯಾದಿಗಳನ್ನು ಚಾಚೂ ತಪ್ಪದೆ ಪಾಲಿಸುವುದು.
  • ಕೆಲಸ ಮಾಡುವಾಗ ಕಡ್ಡಾಯವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಬ್ಯಾಡ್ಜನ್ನು ಧರಿಸುವುದು.
  • ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತನ್ನ ಸ್ನೇಹಿತರನ್ನು ಪ್ರೇರೇಪಿಸುವುದು.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2015-09-21. Retrieved 2015-09-24.
  2. "ಆರ್ಕೈವ್ ನಕಲು". Archived from the original on 2015-10-25. Retrieved 2015-09-24.
  3. http://www.nsskerala.org/
  4. "ಆರ್ಕೈವ್ ನಕಲು". Archived from the original on 2018-03-02. Retrieved 2015-09-24.
  5. "ಆರ್ಕೈವ್ ನಕಲು". Archived from the original on 2015-09-17. Retrieved 2015-09-24.
  6. http://www.jnu.ac.in/Students/NSS%20Manual%202006.pdf
  7. http://socialworknss.org/history.html
  8. "ಆರ್ಕೈವ್ ನಕಲು". Archived from the original on 2014-02-23. Retrieved 2015-09-24.

ಹೆಚ್ಚಿದ ಓದಿಗಾಗಿ[ಬದಲಾಯಿಸಿ]

  • National Service Scheme: A Report, by Khwaja Ghulam Saiyidain. Published by Ministry of Education, Govt. of India, 1961.
  • Training and consultancy needs in national service scheme, by N. F. Kaikobad, Krishan K. Kapil. Published by Tata Institute of Social Sciences, 1971.
  • National Service Scheme: guide-lines to project-masters, by Andhra University, Dept. of Sociology & Social Work. Published by Dept. of Sociology & Social Work, Andhra University, 1971.
  • National Service Scheme in Gujarat: An Evaluation Report for the Year 1986-87, by Tata Institute of Social Sciences Training Orientation & Research Centre (NSS), India, India. Dept. of Youth Affairs and Sports. Published by The Centre, 1987.
  • National Service Scheme in Maharashtra: An Evaluation Report for the Year 1986-87, by Tata Institute of Social Sciences Training Orientation & Research Centre (NSS), India, India Dept. of Youth Affairs and Sports. Published by The Centre, 1988.
  • National Service Scheme in India: A Case Study of Karnataka, by M. B. Dilshad. Published by Trust Publications, 2001.

ಬಾಹ್ಯ ಕೊಂಡಿಗಳು[ಬದಲಾಯಿಸಿ]