ವಿಷಯಕ್ಕೆ ಹೋಗು

ಸಹಜೀವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಹಜೀವನದ ಪರಸ್ಪರಾವಲಂಬನೆಯಲ್ಲಿ, ಕ್ಲೌನ್ ಮೀನು ಸಣ್ಣ ಅಕಶೇರುಕಗಳನ್ನು ತಿನ್ನುತ್ತದೆ, ಇಲ್ಲದಿದ್ದರೆ ಇವುಗಳು ಕಡಲ ಹೂಗಳಿಗೆ ಹಾನಿಯುಂಟುಮಾಡುವ ಸಂಭವವಿರುತ್ತದೆ, ಹಾಗು ಕ್ಲೌನ್ ಮೀನಿನ ಅಮೇಧ್ಯವು ಕಡಲ ಹೂಗಳಿಗೆ ಪೌಷ್ಟಿಕವನ್ನು ಒದಗಿಸುತ್ತದೆ.

ಸಹಜೀವನ ವೆಂಬುದು (ಗ್ರೀಕ್ ನಿಂದ ವ್ಯುತ್ಪತ್ತಿ: σύν ಸಿನ್ "ಜೊತೆಗೆ" ಹಾಗು βίωσις ಬಿಯೋಸಿಸ್ "ಜೀವಿಸುವುದು") ವಿವಿಧ ಜೀವವಿಜ್ಞಾನದ ಜೀವಿಗಳ ನಡುವೆ ಇರುವ ನಿಕಟ ಹಾಗು ಸಾಮಾನ್ಯವಾಗಿ ದೀರ್ಘಕಾಲಿಕ ಪರಸ್ಪರ ಕ್ರಿಯೆ. 1877ರಲ್ಲಿ, ಬೆನೆಟ್, ಸಹಜೀವನ ಎಂಬ ಪದವನ್ನು (ಈ ಪದವನ್ನು ಇದಕ್ಕೆ ಹಿಂದೆ ಸಮುದಾಯದಲ್ಲಿ ಒಟ್ಟಾಗಿ ಜೀವಿಸುವ ಜನರಿಗೆ ಬಳಸಲಾಗುತ್ತಿತ್ತು.) ಕಲ್ಲು ಹೂಗಳಲ್ಲಿರುವ(ಶೀಲೀಂಧ್ರಗಳ) ಪಾರಸ್ಪರಿಕ ಸಂಬಂಧವನ್ನು ವರ್ಣಿಸಲು ಬಳಸಿದರು[]. 1879ರಲ್ಲಿ, ಜರ್ಮನ್ ಶಿಲೀಂಧ್ರಶಾಸ್ತ್ರಜ್ಞ ಹೆಯಿನ್ರಿಚ್ ಆಂಟನ್ ಡೆ ಬಾರಿ, ಇದನ್ನು "ಜೀವಿಗಳಿಗಿಂತ ಭಿನ್ನವಾಗಿ ಒಟ್ಟಾಗಿ ಬದುಕುವುದು" ಎಂದು ಅರ್ಥನಿರೂಪಿಸಿದ್ದಾರೆ.[][] ಸಹಜೀವನದ ಅರ್ಥನಿರೂಪಣೆಯು ಬದಲಾಗುತ್ತಿರುತ್ತದೆ, ಅಲ್ಲದೇ ಈ ಪದವನ್ನು ವ್ಯಾಪಕವಾದ ಜೀವವಿಜ್ಞಾನದ ಪರಸ್ಪರ ಕ್ರಿಯೆಗಳಿಗೆ ಅನ್ವಯಿಸಲಾಗುತ್ತದೆ. ಸಹಜೀವನದ ಸಂಬಂಧವನ್ನು, ಪರಸ್ಪರ ಪ್ರಯೋಜಕವಾದ ಸಹಜೀವನ, ಸಹಜೀವಿ, ಅಥವಾ ಸ್ವಭಾವತಃ ಪರಾವಲಂಬಿ ಎಂದು ವರ್ಗಾವಣೆ ಮಾಡಬಹುದು.[][] ಸಹಜೀವನದ ಕೆಲವು ಸಂಬಂಧಗಳು ನಿರ್ಬಂಧಕವಾಗಿರುತ್ತವೆ, ಅಂದರೆ ಇಬ್ಬರೂ ಸಹಜೀವಿಗಳು ತಮ್ಮ ಉಳಿವಿಗಾಗಿ ಸಂಪೂರ್ಣವಾಗಿ ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರುತ್ತಾರೆ. ಉದಾಹರಣೆಗೆ, ಹಲವು ಕಲ್ಲುಹೂಗಳು ಶಿಲೀಂಧ್ರದ ಹಾಗು ದ್ಯುತಿಸಂಶ್ಲೇಷಿತ ಸಹಜೀವಿಗಳನ್ನು ಒಳಗೊಂಡಿರುತ್ತವೆ, ಇವುಗಳು ತಮ್ಮಷ್ಟಕ್ಕೆ ತಾವು ಬದುಕಲಾರವು.[][][][]

ಇತರವುಗಳು ಐಚ್ಚಿಕವಾಗಿರುತ್ತವೆ, ಅಂದರೆ ಅವುಗಳಿಗೆ ಸಾಧ್ಯವಾದರೂ ಇತರ ಜೀವಿಗಳೊಂದಿಗೆ ಬದುಕುವ ಅವಶ್ಯಕತೆ ಇರುವುದಿಲ್ಲ.

ಸಹಜೀವನದ ಸಂಬಂಧಗಳಲ್ಲಿ, ಒಂದು ಜೀವಿಯು ಮತ್ತೊಂದರ ಮೇಲೆ ಅವಲಂಬಿತವಾಗುವ ಸಂಬಂಧವೂ ಸೇರಿದೆ. (ಎಕ್ಟೋಸಿಂಬಿಯೋಸಿಸ್, ಉದಾಹರಣೆಗೆ ಮಿಸಲ್ಟೋ(ಸೇಬು ಮೊದಲಾದ ಮರಗಳ ಮೇಲೆ ಬದನಿಕೆಯಾಗಿ ಬೆಳೆಯುವ, ಪುಟ್ಟ ಪುಟ್ಟ ಹಣ್ಣುಗಳನ್ನು ಬಿಡುವ, ಒಂದು ಬಗೆಯ ಸಸ್ಯ), ಅಥವಾ ಒಬ್ಬ ಸಹಭಾಗಿಯು ಮತ್ತೊಂದರೊಳಗೆ ಜೀವಿಸುವುದು. ಎನ್ಡೋಸಿಂಬಿಯೋಸಿಸ್, ಉದಾಹರಣೆಗೆ ಲ್ಯಾಕ್ಟೋಬಸಿಲ್ಲಿ ಹಾಗು ಮನುಷ್ಯರಲ್ಲಿರುವ ಇತರ ಬ್ಯಾಕ್ಟೀರಿಯಗಳು ಅಥವಾ ಹವಳಗಳಲ್ಲಿರುವ ಜೂಕ್ಸಾನ್ತೆಲ್ಲೆಸ್ ಇತ್ಯಾದಿ. ಸಹಜೀವನದ ಸಂಬಂಧಗಳು ನಿರ್ಬಂಧಕವಾಗಿರಬಹುದು, ಅದೆಂದರೆ, ಸಂಬಂಧದಲ್ಲಿ ಸೇರಿರುವ ಜೀವಿಗಳಲ್ಲಿ ಕಡೇಪಕ್ಷ ಒಂದರ ಉಳಿವು ಅವಶ್ಯಕ, ಅಥವಾ ಐಚ್ಚಿಕವಾಗಿರಬಹುದು, ಈ ಸಂದರ್ಭದಲ್ಲಿ ಸಂಬಂಧವು ಪ್ರಯೋಜನಕಾರಿಯಾಗಿರಬಹುದು; ಆದರೆ ಜೀವಿಗಳ ಉಳಿವಿಗೆ ಅತ್ಯಗತ್ಯವಾಗಿರುವುದಿಲ್ಲ.[][೧೦]

ನೈಸರ್ಗಿಕವಾದ ಭೌತಿಕ ಪರಸ್ಪರ ಕ್ರಿಯೆ

[ಬದಲಾಯಿಸಿ]
ಆಲ್ಡರ್ ಮರದ ಬೇರಿನ ಗಂಟು

ಎನ್ಡೋಸಿಂಬಿಯೋಸಿಸ್ ಎಂಬುದು ಸಹಜೀವನದ ಯಾವುದೇ ಸಂಬಂಧದಲ್ಲಿ ಒಂದು ಸಹಜೀವಿಯು ಮತ್ತೊಂದರ ಕೋಶದೊಳಗೆ ಜೀವಿಸುತ್ತದೆ, ಇದು ಅಂತರ್ಜೀವಕೋಶದಲ್ಲಾಗಿರಬಹುದು ಅಥವಾ ಹೆಚ್ಚುವರಿ ಜೀವಕೋಶದಲ್ಲಾಗಿರಬಹುದು.[೧೦][೧೧] ಉದಾಹರಣೆಗಳೆಂದರೆ ರೈಜೋಬಿಯ, ಸಾರಜನಕವನ್ನು ಒದಗಿಸುವ ಬ್ಯಾಕ್ಟೀರಿಯಗಳು ದ್ವಿದಳಧಾನ್ಯದ ಬೇರುಗಳ ಗಂಟಿನಲ್ಲಿ ಜೀವಿಸುತ್ತವೆ;ಆಕ್ಟಿನೋಮೈಸೇಟ್ ಸಾರಜನಕವನ್ನು ಒದಗಿಸುವ ಫ್ರಾಂಕಿಯ ಎಂಬ ಬ್ಯಾಕ್ಟೀರಿಯ, ಇವುಗಳು ಆಲ್ಡರ್ ಮರದ ಬೇರು ಗಂಟುಗಳಲ್ಲಿ ಜೀವಿಸುತ್ತವೆ; ಬಂಡೆಗಳನ್ನು ನಿರ್ಮಿಸುವ ಹವಳಗಳ ಒಳಗೆ ಏಕಕೋಶಗಳಾದ ಪಾಚಿ; ಹಾಗು ಬ್ಯಾಕ್ಟೀರಿಯಾದ ಎನ್ಡೋಸಿಂಬಿಯೋಸಿಸ್ 10%–15%ನಷ್ಟು ಅಗತ್ಯ ಪೌಷ್ಟಿಕಗಳನ್ನು ಕ್ರಿಮಿಕೀಟಗಳಿಗೆ ಒದಗಿಸುತ್ತದೆ.

ಎಕ್ಟೋಸಿಂಬಿಯೋಸಿಸ್ ಅನ್ನು ಎಕ್ಸೋಸಿಂಬಿಯೋಸಿಸ್ ಎಂದೂ ಸಹ ಕರೆಯಲಾಗುತ್ತದೆ, ಇದು ಯಾವುದೇ ಸಹಜೀವನದ ಸಂಬಂಧದಲ್ಲಿ, ಸಹಜೀವಿಯು ಸಮೂಹದ ದೇಹದ ಮೇಲ್ಮೈಯಲ್ಲಿ ಜೀವಿಸುತ್ತದೆ, ಇದರಲ್ಲಿ ಜೀರ್ಣಕಾರಿ ಅಂಗದ ಒಳಭಾಗ ಅಥವಾ ಬಹಿಸ್ಸ್ರಾವ ಗ್ರಂಥಿ ನಾಳವೂ ಸೇರಿದೆ.[೧೦][೧೨] ಇದರ ಉದಾಹರಣೆಗಳಲ್ಲಿ ಬಾಹ್ಯಪರೋಪಜೀವಿಗಳಾದ ಹೇನು, ಸಹಜೀವಿ ಎಕ್ಟೋಸಿಂಬಿಯೋಸಿಸ್ ಗಳಾದ ಚಿಪ್ಪುಜಂತುಗಳು ಬಲೀನ್ ತಿಮಿಂಗಲದ ದವಡೆಗೆ ಅಂಟಿಕೊಂಡಿರುತ್ತವೆ, ಜೊತೆಗೆ ಪರಸ್ಪರ ಪ್ರಯೋಜಕ ಸಹಜೀವಿಗಳಾದ ಎಕ್ಟೋಸಿಂಬಿಯೋಸಿಸ್ ಉದಾಹರಣೆಗೆ ತಿನ್ನುವ ಮೀನುಗಳು ಸೇರಿವೆ.

ಪರಸ್ಪರಾವಲಂಬನೆ

[ಬದಲಾಯಿಸಿ]
ಹರ್ಮಿಟ್ ಏಡಿ, ಕ್ಯಾಲ್ಸಿನಸ್ ಲಯೇವಿಮನುಸ್ ಕಡಲ ಹೂವಿನೊಂದಿಗೆ.

ಪರಸ್ಪರಾವಲಂಬನೆ ಎಂದರೆ ವಿವಿಧ ಜಾತಿಗಳ ಜೀವಿಗಳ ನಡುವಿರುವ ಸಂಬಂಧ, ಈ ಸಂಬಂಧದಲ್ಲಿ ಎರಡೂ ಜೀವಿಗಳು ಪರಸ್ಪರ ಅನುಕೂಲವನ್ನು ಪಡೆಯುತ್ತವೆ.[೧೩] ಸಾಧಾರಣವಾಗಿ, ನಿಕಟ ಶಾರೀರಿಕ ಹಾಗು ಜೀವ ರಾಸಾಯನಿಕ ಸಂಪರ್ಕವನ್ನು ಒಳಗೊಂಡಿರುವ ದೀರ್ಘಕಾಲಿಕ ಪರಸ್ಪರಕ್ರಿಯೆಗಳನ್ನು ಸಹಜೀವನವೆಂದು ಸರಿಯಾಗಿ ಪರಿಗಣಿಸಬಹುದು. ಪರಸ್ಪರ ಪ್ರಯೋಜಕವಾದ ಸಹಜೀವನದ ಸಂಬಂಧಗಳು ಎರಡೂ ಜಾತಿಗಳಿಗೆ ನಿರ್ಬಂಧಕವಾಗಬಹುದು, ಒಬ್ಬರಿಗೆ ಹೊರೆಯಾಗಿ ಮತ್ತೊಬ್ಬರಿಗೆ ಐಚ್ಚಿಕವಾಗಿರಬಹುದು, ಅಥವಾ ಇಬ್ಬರಿಗೂ ಐಚ್ಚಿಕವಾಗಿರಬಹುದು. ಹಲವು ಜೀವವಿಜ್ಞಾನಿಗಳು, ಸಹಜೀವನದ ಅರ್ಥನಿರೂಪಣೆಯನ್ನು ನಿಕಟ ಪಾರಸ್ಪರಿಕ ಸಂಬಂಧಗಳಿಗೆ ಸೀಮಿತಗೊಳಿಸಿದ್ದಾರೆ.

ಒಂದು ಈಜಿಪ್ಷಿಯನ್ ಪ್ಲವರ್(ಸಾಮಾನ್ಯವಾಗಿ ಕಡಲ ದಡದಲ್ಲಿ ಗುಂಪು ಗುಂಪಾಗಿರುವ, ವಲಸೆ ಹೋಗುವ ಸ್ವಭಾವದ ನೀಳುಗಾಲು ಪಕ್ಷಿ) ನೈಲ್ ನದಿಯ ಮೊಸಳೆಯ ಹಲ್ಲನ್ನು ಕೀಳುತ್ತಿರುವುದು

ಒಂದು ದೊಡ್ಡ ಸಂಖ್ಯೆಯ ಸಸ್ಯಾಹಾರಿ ಪ್ರಾಣಿಗಳು ಪರಸ್ಪರ ಪ್ರಯೋಜನವಾದ ಸ್ವಾಭಾವಿಕ (ಚಯಾಪಚಯ ಪಚನಾಂಗ)ಅಂತ್ರವನ್ನು ಹೊಂದಿರುತ್ತವೆ, ಇದು ಅವುಗಳಿಗೆ ಸಸ್ಯ ಪದಾರ್ಥಗಳನ್ನು ಜೀರ್ಣಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ, ಇದು ಪ್ರಾಣಿ ಬೇಟೆಯನ್ನು ಜೀರ್ಣಿಸಿಕೊಳ್ಳುವುದಕ್ಕಿಂತ ಹೆಚ್ಚು ಕಷ್ಟಕರವಾಗಿದೆ.[] ಹವಳದ ಬಂಡೆಗಳು ಹವಳವನ್ನು ಉಂಟುಮಾಡುವ ಜೀವಿಗಳು ಹಾಗು ಅವುಗಳ ಒಳಗೆ ಜೀವಿಸುವ ಪಾಚಿಯ ವಿವಿಧ ಮಾದರಿಗಳ ನಡುವೆ ಇರುವ ಪರಸ್ಪರಾವಲಂಬನೆಯ ಪರಿಣಾಮವಾಗಿದೆ.[೧೪] ಭೂಮಿಯ ಮೇಲೆ ಬೆಳೆಯುವ ಹಲವು ಸಸ್ಯಗಳು ಹಾಗು ಭೂಮಿಯ ಪರಿಸರ ವ್ಯವಸ್ಥೆಯು ಸಸ್ಯಗಳ ನಡುವಿನ ಪರಸ್ಪರಾವಲಂಬನೆಯ ಮೇಲೆ ಅವಲಂಬಿತವಾಗಿದೆ, ಇದು ಅವುಗಳಿಗೆ ಗಾಳಿಯಿಂದ ಇಂಗಾಲನ್ನು ಒದಗಿಸುತ್ತವೆ, ಅಲ್ಲದೇ ಮೈಕಾರ್ರೈಜಲ್ ಶಿಲೀಂಧ್ರವು, ಭೂಮಿಯಿಂದ ಖನಿಜಗಳನ್ನು ಆಹಾರವಾಗಿಸುವಲ್ಲಿ ಸಹಾಯಕವಾಗಿದೆ.[೧೫]

ಪರಸ್ಪರ ಸಹಜೀವನದ ಒಂದು ಉದಾಹರಣೆಯೆಂದರೆ ರಿಟ್ಟೆರಿ ಕಡಲ ಹೂಗಳ ಗ್ರಾಹ್ಯ ತಂತುಗಳಲ್ಲಿ ವಾಸಿಸುವ ಆಸೆಲ್ಲರೀಸ್ ಕ್ಲೌನ್ ಮೀನು. ಪ್ರದೇಶ ರಕ್ಷಕ ಮೀನು ಕಡಲಹೂಗಳನ್ನು ತಿನ್ನುವ ಮೀನುಗಳಿಂದ ಕಡಲಹೂಗಳನ್ನೂ ರಕ್ಷಿಸುತ್ತದೆ;ಅಲ್ಲದೇ ಇದಕ್ಕೆ ಬದಲಾಗಿ ಕಡಲ ಹೂವಿನ ತೀಕ್ಷ್ಣವಾದ ಗ್ರಾಹ್ಯ ತಂತುಗಳು ಅವುಗಳ ಪರಭಕ್ಷಕಗಳಿಂದ ಕ್ಲೌನ್ ಮೀನನ್ನು ರಕ್ಷಿಸುತ್ತದೆ. ಕ್ಲೌನ್ ಮೀನನಲ್ಲಿರುವ ಒಂದು ವಿಶೇಷವಾದ ಲೋಳೆಯು ಅದನ್ನು ತೀಕ್ಷ್ಣವಾದ ಗ್ರಾಹಕ ತಂತುಗಳಿಂದ ರಕ್ಷಿಸುತ್ತದೆ.[೧೬]

ಮತ್ತೊಂದು ಉದಾಹರಣೆಯೆಂದರೆ ಗೋಬಿ ಮೀನು, ಇದು ಕೆಲವೊಂದು ಬಾರಿ ಚಿಪ್ಪುಜೀವಿಗಳೊಂದಿಗೆ ಒಟ್ಟಾಗಿ ಜೀವಿಸುತ್ತದೆ. ಚಿಪ್ಪುಜೀವಿಯು ಮರಳನ್ನು ಅಗೆದು ಬಿಲ ತೋಡುತ್ತದೆ, ಇದರಲ್ಲಿ ಚಿಪ್ಪುಜೀವಿ ಹಾಗು ಗೋಬಿ ಮೀನು ಎರಡೂ ವಾಸಿಸುತ್ತವೆ. ಚಿಪ್ಪುಜೀವಿಯು ಬಹುತೇಕವಾಗಿ ಕುರುಡಾಗಿರುತ್ತವೆ, ಇದು ಭೂಮಿಯ ಮೇಲೆ ಬಂದಾಗ ಪರಭಕ್ಷಕಗಳಿಗೆ ಆಹಾರವಾಗಬಹುದು. ಅಪಾಯ ಎದುರಾದಾಗ ಗೋಬಿ ಮೀನು ಚಿಪ್ಪುಜೀವಿಗೆ ತನ್ನ ಬಾಲದಿಂದ ಎಚ್ಚರಿಸುತ್ತದೆ. ಈ ರೀತಿಯಾದ ಪರಿಸ್ಥಿತಿ ಒದಗಿದಾಗ ಚಿಪ್ಪುಜೀವಿ ಹಾಗು ಗೋಬಿ ಮೀನು ತಕ್ಷಣವೇ ಬಿಲದೊಳಗೆ ಮುದುರಿಕೊಳ್ಳುತ್ತದೆ.[೧೭]

ನಿರ್ಬಂಧಕ ಪರಸ್ಪರಾವಲಂಬನೆಯ ಅತ್ಯದ್ಭುತ ಉದಾಹರಣೆಯೆಂದರೆ ಸಿಬೋಗ್ಲಿನಿಡ್ ನಾಳ ಜಂತುಗಳು ಹಾಗು ಜಲೋಷ್ಣೀಯ ದ್ವಾರಗಳು ಹಾಗು ತಂಪಾದ ಒಸರು ಭೂಮಿಗಳಲ್ಲಿ ಸಹಜೀವನ ನಡೆಸುವ ಬ್ಯಾಕ್ಟೀರಿಯಗಳ ನಡುವಿನ ಸಂಬಂಧ. ಜಂತುವಿಗೆ ಯಾವುದೇ ಜೀರ್ಣಾಂಗ ಭಾಗವಿರುವುದಿಲ್ಲ. ಜೊತೆಗೆ ಇದು ತನ್ನ ಪೋಷಣೆಗಾಗಿ ತನ್ನ ಆಂತರಿಕ ಸಹಜೀವಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಬ್ಯಾಕ್ಟೀರಿಯ ಹೈಡ್ರೋಜನ್ ಸಲ್ಫೈಡ್ ಅಥವಾ ಮೀಥೇನ್ ನನ್ನು ಆಕ್ಸಿಡೀಕರಣಗೊಳಿಸುತ್ತದೆ, ಇದನ್ನು ಅವುಗಳಿಗೆ ಪರಪೋಷಿಯು ಒದಗಿಸುತ್ತದೆ. ಈ ಜಂತುಗಳನ್ನು 1980ರ ನಂತರದ ಭಾಗದಲ್ಲಿ ಗಾಲಪಗೋಸ್ ದ್ವೀಪಗಳ ಸಮೀಪದ ಜಲೋಷ್ಣೀಯ ದ್ವಾರಗಳಲ್ಲಿ ಪತ್ತೆಮಾಡಲಾಯಿತು. ಜೊತೆಗೆ ಅಲ್ಲಿಂದೀಚೆಗೆ ವಿಶ್ವದ ಎಲ್ಲ ಸಮುದ್ರಗಳ ಆಳ ಕಡಲಿನ ಜಲೋಷ್ಣೀಯ ದ್ವಾರಗಳು ಹಾಗು ತಂಪಾದ ಒಸರು ಭೂಮಿಗಳಲ್ಲಿ ಕಂಡುಬರುತ್ತವೆ.[೧೮]

ಹಲವಾರು ಬಗೆಯ ಉಷ್ಣವಲಯದ ಹಾಗು ಉಪೋಷ್ಣವಲಯದ ಇರುವೆಗಳೂ ಸಹ ಕೆಲ ನಿರ್ದಿಷ್ಟ ಜಾತಿಯ ಮರಗಳೊಂದಿಗೆ ಬಹು ಸಂಕೀರ್ಣ ಸಂಬಂಧಗಳನ್ನು ಬೆಳೆಸಿಕೊಂಡಿವೆ.[೧೯]

ಸಹಜೀವಿತ್ವ

[ಬದಲಾಯಿಸಿ]
ಭರಣೆಯ ಹುಳಗಳು ಒಂದು ನೊಣದ ಮೇಲೆ( ಸ್ಯೂಡೋಲಿಂಚಿಯ ಕ್ಯಾನರಿಯೇನ್ಸಿಸ್).

ಸಹಜೀವಿತ್ವವೆಂದರೆ, ಎರಡು ಜೀವಿಗಳ ನಡುವಿನ ಸಂಬಂಧ, ಇದರಲ್ಲಿ ಒಂದು ಜೀವಿಯು ಅನುಕೂಲವನ್ನು ಹೊಂದಿದರೆ ಮತ್ತೊಂದಕ್ಕೆ ಪೂರಕವಾದ ಸಹಾಯವಾಗುವುದಿಲ್ಲ ಅಥವಾ ಹಾನಿಯೂ ಸಹ ಆಗುವುದಿಲ್ಲ. ಇದು ಆಂಗ್ಲ ಪದ ಕಮೆನ್ಸಲ್ ನಿಂದ ವ್ಯುತ್ಪತ್ತಿ ಹೊಂದಿದೆ, ಇದು "ಆಹಾರದ ಹಂಚಿಕೆ" ಎಂಬ ಅರ್ಥವನ್ನು ನೀಡುತ್ತದೆ. ಜೊತೆಗೆ ಇದನ್ನು ಮಾನವನ ಸಾಮಾಜಿಕ ಪಾರಸ್ಪರಿಕ ಕ್ರಿಯೆಗೆ ಹೋಲಿಸಲಾಗುತ್ತದೆ. ಈ ಪದವು ಮಧ್ಯಕಾಲೀನ ಲ್ಯಾಟಿನ್ ಪದಗಳಾದ ಕಾಂ- ಹಾಗು ಮೆನ್ಸಾ , ಇದರರ್ಥ "ಮೇಜಿನ ಮೇಲೆ ಊಟವನ್ನು ಹಂಚಿಕೊಳ್ಳುವುದು".[೧೩][೨೦]

ಸಹಜೀವಿಗಳ ಸಂಬಂಧಗಳಲ್ಲಿ ಒಂದು ಜೀವಿಯು ತನ್ನ ಸಾಗಣೆಗಾಗಿ(ಧಾರಣೆ) ಅಥವಾ ವಸತಿಗಾಗಿ (ಇನ್ಕ್ವಿಲಿನಿಸಂ) ಮತ್ತೊಂದನ್ನು ಬಳಸಿಕೊಳ್ಳುವುದು, ಅಥವಾ ಒಂದು ಜೀವಿಯು ಸೃಷ್ಟಿಯಾದ ಮತ್ತೊಂದನ್ನು ಅದು ಸತ್ತ ನಂತರ ಬಳಸಿಕೊಳ್ಳುವುದನ್ನು (ಮೆಟಾಬಯೋಸಿಸ್)ಎನ್ನಲಾಗುತ್ತದೆ. ಮೆಟಾಬಯೋಸಿಸ್ ನ ಉದಾಹರಣೆಗಳೆಂದರೆ ಹರ್ಮಿಟ್ ಏಡಿಗಳು ತಮ್ಮ ದೇಹಗಳನ್ನು ರಕ್ಷಿಸಿಕೊಳ್ಳಲು ಮೃದ್ವಂಗಿ ಚಿಪ್ಪುಗಳನ್ನು ಬಳಸಿಕೊಳ್ಳುತ್ತವೆ. ಹಾಗೆಯೇ ಜೇಡಗಳು ತಮ್ಮ ಬಲೆಗಳನ್ನು ಸಸ್ಯಗಳ ಮೇಲೆ ನೇಯುತ್ತವೆ.

ಪರಾವಲಂಬಿಕೆ

[ಬದಲಾಯಿಸಿ]
ಮನುಷ್ಯರಿಗೆ ಚಿಗಟದ ಕಡಿತವು ಪರಾವಲಂಬನೆಯ ಒಂದು ಉದಾಹರಣೆಯಾಗಿದೆ. (ಈ ಸನ್ನಿವೇಶದಲ್ಲಿ ಮಾನವ ಸಮೂಹಕ್ಕೆ ಚಿಗಟವು ಪರಾವಲಂಬಿ ಎನಿಸಿದೆ).

ಒಂದು ಪರಾವಲಂಬಿ ಸಂಬಂಧವೆಂದರೆ ಸಹಭಾಗಿತ್ವದಲ್ಲಿ ಓರ್ವ ಜೀವಿ ಸದಸ್ಯನಿಗೆ ಪ್ರಯೋಜನ ಉಂಟಾದರೆ ಮತ್ತೊಂದಕ್ಕೆ ಹಾನಿ ಉಂಟಾಗುತ್ತದೆ.[೨೧] ಪರಾವಲಂಬಿ ಸಹಜೀವನವು ಹಲವು ರೂಪಗಳನ್ನು ಪಡೆಯುತ್ತದೆ, ಇದರಲ್ಲಿ ಪರಪೋಷಿಯ ದೇಹದೊಳಗೆ ಜೀವಿಸುವ ಅಂತಃಪರೋಪಜೀವಿಗಳಿಂದ ಹಿಡಿದು ಅದರ ಮೇಲ್ಮೈಯಲ್ಲಿ ಜೀವಿಸುವ ಬಾಹ್ಯಪರೋಪಜೀವಿಯವರೆಗೂ ಸೇರಿದೆ. ಇದರ ಜೊತೆಯಲ್ಲಿ, ಪರಾವಲಂಬಿಗಳು ನೆಕ್ರೋಟ್ರೋಫಿಕ್ ಗಳಾಗಿರುತ್ತವೆ, ಅಂದರೆ ಇವುಗಳು ತಮ್ಮ ಪರಪೋಷಿಗಳನ್ನು ಸಾಯಿಸುತ್ತವೆ, ಅಥವಾ ಬಯೋಟ್ರೋಫಿಕ್ ಗಳಾಗಿರುತ್ತವೆ, ಅಂದರೆ ಇವುಗಳು ತಮ್ಮ ಪರಪೋಷಿಗಳ ಉಳಿವನ್ನು ನಂಬಿರುತ್ತವೆ. ಬಯೋಟ್ರೋಫಿಕ್ ಪರಾವಲಂಬಿಕೆಯು ಜೀವನದ ಅತ್ಯಂತ ಯಶಸ್ವಿ ಘಟ್ಟವಾಗಿದೆ. ಬಳಕೆಯಾದ ಅರ್ಥನಿರೂಪಣೆಯನ್ನು ಅವಲಂಬಿಸಿ, ಎಲ್ಲ ಪ್ರಾಣಿಗಳಲ್ಲಿ ಅರ್ಧದಷ್ಟು ಕಡೆಪಕ್ಷ ತಮ್ಮ ಜೀವನಚಕ್ರದಲ್ಲಿ ಒಂದು ಪರಾವಲಂಬಿ ಘಟ್ಟವನ್ನು ಹೊಂದಿರುತ್ತವೆ, ಜೊತೆಗೆ ಇದು ಸಸ್ಯಗಳು ಹಾಗು ಶಿಲೀಂಧ್ರಗಳಲ್ಲೂ ನಿರಂತರವಾಗಿದೆ. ಇದಕ್ಕಿಂತ ಹೆಚ್ಚಾಗಿ, ಬಹುತೇಕ ಸ್ವತಂತ್ರವಾಗಿ ಜೀವಿಸುವ ಎಲ್ಲ ಪ್ರಾಣಿಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪರಾವಲಂಬಿ ಗುಂಪಿಗೆ ಪರಪೋಷಿಯಾಗಿರುತ್ತವೆ. ಬಯೋಟ್ರೋಫಿಕ್ ಸಂಬಂಧದ ಒಂದು ಉದಾಹರಣೆಯೆಂದರೆ ತನ್ನ ಪರಪೋಷಿಯಿಂದ ರಕ್ತವನ್ನು ಹೀರುವ ತೊಣಚಿ(ಪರೋಪಕಾರಿ ಹುಳ, ಕ್ರಿಮಿ).

ಅಮೆನ್ಸಲಿಸಮ್

[ಬದಲಾಯಿಸಿ]

ಅಮೆನ್ಸಲಿಸಮ್ ಎಂಬುದು ಸಹಜೀವನ ಸಂಬಂಧದ ಒಂದು ಮಾದರಿಯಾಗಿದೆ, ಇದರಲ್ಲಿ ಒಂದು ಜಾತಿಯ ಜೀವಿಯು ಪ್ರತಿಬಂಧಿಸುತ್ತದೆ ಅಥವಾ ಸಂಪೂರ್ಣವಾಗಿ ನಾಶಮಾಡುತ್ತದೆ. ಹಾಗೆಯೇ ಮತ್ತೊಂದು ತಟಸ್ಥವಾಗಿ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ. ಮೂಲತತ್ತ್ವಗಳಿಗೆ ಸಂಬಂಧಿಸಿದಂತೆ ಈ ಮಾದರಿಯ ಸಹಜೀವನವು ತುಲನಾತ್ಮಕವಾಗಿ ಅಸಾಧಾರಣವಾಗಿದೆ, ಆದರೆ ಇದು ನೈಸರ್ಗಿಕ ಜಗತ್ತಿನಲ್ಲಿ ಬಹು ಸರ್ವತ್ರವಾಗಿ ಗೋಚರವಾಗುತ್ತದೆ. ಒಂದು ಉದಾಹರಣೆ ಎಂದರೆ ಒಂದು ಪರಿಪಕ್ವವಾಗಿ ಬೆಳೆದ ಮರದ ನೆರಳಿನಲ್ಲಿ ಬೆಳೆಯುವ ಸಸಿ, ಈ ರೀತಿಯಾಗಿ ಅಗತ್ಯ ಸೂರ್ಯನ ಬೆಳಕಿನಿಂದ ಸಸಿಯು ವಂಚಿತವಾಗುತ್ತದೆ. ಜೊತೆಗೆ, ಪರಿಪೂರ್ಣವಾಗಿ ಬೆಳೆದ ಮರವು ಬಹಳ ದೊಡ್ಡದಿದ್ದರೆ, ಇದು ಮಳೆ ನೀರನ್ನು ಅಗಾಧ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ, ಜೊತೆಗೆ ತನ್ನ ದೊಡ್ಡದಾಗ ಬೇರಿನ ಜಾಗದಿಂದ ಬಹಳ ಬೇಗನೆ ಪೌಷ್ಟಿಕತೆಯ ಮಣ್ಣನ್ನು ಖಾಲಿಗೊಳಿಸುತ್ತದೆ. ಇದು ಸಸಿಯ ಉಳಿಯುವ ಸಾಮರ್ಥ್ಯವನ್ನು ಕಸಿದುಕೊಳ್ಳಬಹುದು. ಜೊತೆಗೆ ಇದು ದ್ಯುತಿಸಂಶ್ಲೇಷಕ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುತ್ತದೆ. ಪ್ರಕ್ರಿಯೆಯುದ್ದಕ್ಕೂ ಸಂಪೂರ್ಣವಾಗಿ ಬೆಳೆದ ಮರಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಆದಾಗ್ಯೂ, ಸಂಪೂರ್ಣವಾಗಿ ಬೆಳೆದ ಮರಕ್ಕೆ ಕೊಳೆತ ಸಸಿಯಿಂದ ಪೋಷಣೆ ದೊರಕಬಹುದೆಂದು ತಾತ್ತ್ವಿಕವಾಗಿ ಚರ್ಚಿಸಬಹುದು, ಆದಾಗ್ಯೂ ಈ ವಾದವು ಸತ್ಯಕ್ಕೆ ದೂರವಾಗಿದೆ; ಏಕೆಂದರೆ ಪೌಷ್ಟಿಕಾಂಶಗಳು ವಿಘಟನಾ ಪ್ರಕ್ರಿಯೆಯ ಮೂಲಕ ಒದಗುತ್ತವೆ, ವಾಸ್ತವವಾಗಿ ಸ್ವತಃ ಸಸಿಯಿಂದಲ್ಲ.

ಸಹಜೀವನ ಹಾಗು ವಿಕಸನ

[ಬದಲಾಯಿಸಿ]
ಲೀಫ್ ಹಾಪರ್ ಗಳನ್ನು ಮಾಂಸಾಹಾರಿ ಇರುವೆಗಳು ರಕ್ಷಿಸುತ್ತಿರುವುದು

ಐತಿಹಾಸಿಕವಾಗಿ, ಸಹಜೀವನವು ಇತರ ಪಾರಸ್ಪರಿಕ ಕ್ರಿಯೆಗಳಾದ ಪರಭಕ್ಷಣ ಅಥವಾ ಪೈಪೋಟಿಗಿಂದ ಕಡಿಮೆ ಗಮನ ಗಳಿಸಿದೆ,[೨೨] ಇದನ್ನು ವಿಕಸನದ ಹಿಂದಿನ ಒಂದು ಏಕೈಕ ಶಕ್ತಿಯಾಗಿ ಹೆಚ್ಚಿನ ಮನ್ನಣೆಯನ್ನು ಗಳಿಸಿದೆ,[][೨೩] ಜೊತೆಗೆ ಹಲವು ಜೀವಿಗಳು ಪರಸ್ಪರ ಅವಲಂಬನೆಯ ಒಂದು ದೀರ್ಘಕಾಲಿಕ ಇತಿಹಾಸವನ್ನು ಹೊಂದಿದೆ ಸಹ-ವಿಕಸನ.[೨೪] ವಾಸ್ತವವಾಗಿ, ಎಲ್ಲ ಯುಕರ್ಯೋಟ್ಸ್ ಗಳ ವಿಕಸನವು (ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರ ಹಾಗು ಪ್ರಾಟಿಸ್ಟ್ ಗಳು) ಎನ್ಡೋಸಿಂಬಿಯೋಟಿಕ್ ತತ್ತ್ವದ ಆಧಾರದಲ್ಲಿ ವಿಕಸನಗೊಂಡಿದೆ ಎಂದು ನಂಬಲಾಗಿದೆ, ಇವುಗಳು ಹಲವಾರು ವಿಧದ ಬ್ಯಾಕ್ಟೀರಿಯಗಳ ನಡುವಿನ ಸಹಜೀವನದ ಪರಿಣಾಮವಾಗಿದೆ.[][೨೫][೨೬]

ಸಹಜನ್ಯತೆ

[ಬದಲಾಯಿಸಿ]

ಎನ್ಡೋಸಿಂಬಿಯೋಸಿಸ್ ನ ಮೇಲೆ ತನ್ನ ಅಧ್ಯಯನಕ್ಕೆ ಪ್ರಸಿದ್ಧಳಾದ ಜೀವವಿಜ್ಞಾನಿ ಲಿನ್ನ್ ಮಾರ್ಗುಲಿಸ್, ವಿಕಸನಕ್ಕೆ ಹಿಂದೆ ಸಹಜೀವನವು ಒಂದು ಬಲಯುತ ಶಕ್ತಿಯೆಂದು ವಾದಿಸುತ್ತಾಳೆ. ಡಾರ್ವಿನ್ ರ ವಿಕಸನದ ಕಲ್ಪನೆಯು ಪೈಪೋಟಿಯಿಂದ, ಅಪೂರ್ಣವಾಗಿ ಪ್ರೆರೇಪಿತವಾಗಿದೆಯೆಂದು ಪರಿಗಣಿಸುತ್ತಾಳೆ. ಜೊತೆಗೆ ವಿಕಸನವು, ಜೀವಿಗಳ ನಡುವೆ ಸಹಕಾರ, ಪಾರಸ್ಪರಿಕ ಕ್ರಿಯೆ, ಹಾಗು ಪರಸ್ಪರ ಅವಲಂಬನೆಯ ಮೇಲೆ ಬಲವಾಗಿ ಆಧರಿಸಿದೆಯೆಂದು ವಾದಿಸುತ್ತಾಳೆ. ಮಾರ್ಗುಲಿಸ್ ಹಾಗು ಡೋರಿಯನ್ ಸಗನ್ ರ ಪ್ರಕಾರ, "ಭೂಮಿಯ ಮೇಲೆ ಜೀವನವು ಪೈಪೋಟಿಯಿಂದ ನಡೆಯುತ್ತಿಲ್ಲ; ಆದರೆ ಜಾಲಬಂಧದಿಂದ ನಡೆಯುತ್ತಿದೆ."[೨೭]

ಸಹ-ವಿಕಾಸ

[ಬದಲಾಯಿಸಿ]

ಸಹಜೀವನವು ಅರಳುತ್ತಿರುವ ಸಸ್ಯಗಳು ಹಾಗು ಪ್ರಾಣಿಗಳಿಗೆ ಪರಾಗಸ್ಪರ್ಶ ಮಾಡುವ ಮೂಲಕ ಸಹವಿಕಸನದಲ್ಲಿ ಮಹತ್ವದ ಪ್ರಭಾವ ಬೀರಿದೆ. ಹಲವು ಸಸ್ಯಗಳು, ಕ್ರಿಮಿಗಳು, ಬಾವುಲಿಗಳು, ಅಥವಾ ಹಕ್ಕಿಗಳಿಂದ ಪರಾಗಸ್ಪರ್ಶವನ್ನು ಹೊಂದುತ್ತವೆ. ಇವುಗಳಿಗೆ ಅನುಗುಣವಾಗಿ ಹೊಂದಿಸಲಾದ ನಿರ್ದಿಷ್ಟವಾದ ಪರಾಗಸ್ಪರ್ಶಕಗಳಿಂದ ವಿಶೇಷವಾಗಿ ಹೆಚ್ಚಿನ ಹೂಗಳು ಮಾರ್ಪಾಡುಗೊಂಡು ಪರಾಗಸ್ಪರ್ಶವನ್ನು ಉತ್ತೇಜಿಸುತ್ತವೆ. ಪಳೆಯುಳಿಕೆಯ ದಾಖಲೆಯಲ್ಲಿ ಮೊದಲ ವಿಕಸನಗೊಂಡ ಸಸ್ಯಗಳು ತುಲನಾತ್ಮಕವಾಗಿ ಸರಳವಾದ ಹೂಗಳನ್ನು ಹೊಂದಿದ್ದವು. ಹೊಂದಿಸಬಲ್ಲ ಜಾತಿನಿರೂಪಣೆಯು ಶೀಘ್ರದಲ್ಲೇ ಹಲವು ವಿವಿಧ ಸಸ್ಯಗಳ ಗುಂಪಿನ ಉದ್ಭವಕ್ಕೆ ಕಾರಣವಾಯಿತು, ಇದರ ಜೊತೆಯಲ್ಲಿ, ಇದಕ್ಕೆ ಅನುಗುಣವಾಗಿ ನಿರ್ದಿಷ್ಟ ಜಾತಿನಿರೂಪಣೆಯ ಕೀಟಗಳ ಗುಂಪು ಸಹ ಉದ್ಭವವಾದವು. ಕೆಲವು ಗುಂಪಿನ ಸಸ್ಯಗಳು ಮಕರಂದವನ್ನು ಜೊತೆಗೆ ದೊಡ್ಡ ಅಂಟಾದ ಪುಷ್ಪಧೂಳಿಯನ್ನು ಉಂಟುಮಾಡಿದವು. ಹೀಗೆ ಕೀಟಗಳು ಹೆಚ್ಚು ವಿಶೇಷವಾದ ಜೀವವಿಜ್ಞಾನದ ಲಭ್ಯತೆಯನ್ನು ಹುಟ್ಟುಹಾಕಿದವು. ಜೊತೆಗೆ ಸಮೃದ್ಧವಾದ ಆಹಾರ ಮೂಲಗಳನ್ನು ಸಂಗ್ರಹಿಸಿದವು. ಸಸ್ಯಗಳು ಹಾಗು ಕೀಟಗಳ ಕೆಲವು ವರ್ಗಗಳಲ್ಲಿ, ಸಂಬಂಧವು ಅವಲಂಬನೆಯನ್ನು ಹೊಂದಿದೆ,[೨೮] ಇದರಲ್ಲಿ ಕೆಲವು ಸಸ್ಯದ ಜಾತಿಗಳಿಗೆ ಕೇವಲ ಒಂದು ಬಗೆಯ ಕೀಟವು ಪರಾಗಸ್ಪರ್ಶ ಮಾಡಬಹುದು.[೨೯]

ಟಿಪ್ಪಣಿಗಳು

[ಬದಲಾಯಿಸಿ]
  1. ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ, ಸಹಜೀವನ.
  2. ೨.೦ ೨.೧ Wilkinson 2001
  3. Douglas 1994, p. 1
  4. Dethlefsen L, McFall-Ngai M, Relman DA (2007), "An ecological and evolutionary perspective on human-microbe mutualism and disease", Nature, 449 (7164): 811–808, doi:10.1038/nature06245, PMID 17943117.{{citation}}: CS1 maint: multiple names: authors list (link)
  5. Paszkowski U. (2006), "Mutualism and parasitism: the yin and yang of plant symbioses", Curr Opin Plant Biol, 9 (4): 364–370, doi:10.1016/j.pbi.2006.05.008, PMID 16713732.
  6. Isaac 1992, p. 266
  7. Saffo 1993
  8. Douglas, Angela E. (2010), The symbiotic habit, New Jersey: Princeton University Press, p. 4, ISBN 978-0-691-11341-8
  9. ೯.೦ ೯.೧ ೯.೨ ೯.೩ Moran 2006
  10. ೧೦.೦ ೧೦.೧ ೧೦.೨ Ahmadjian & Paracer 2000, p. 12
  11. Sapp 1994, p. 142
  12. Nardon & Charles 2002
  13. ೧೩.೦ ೧೩.೧ Ahmadjian & Paracer 2000, p. 6
  14. Toller, Rowan & Knowlton 2001
  15. Harrison 2005
  16. Lee 2003
  17. Facey, Helfman & Collette 1997
  18. Cordes 2005
  19. ಪೈಪರ್‌, ರಾಸ್‌(2007), ಎಕ್ಸ್‌‌ಟ್ರಾಆರ್ಡಿನರಿ ಅನಿಮಲ್ಸ್‌ : ಆನ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಕ್ಯೂರಿಯಸ್‌ ಅಂಡ್‌ ಅನ್‌ಯೂಷುಯಲ್‌ ಅನಿಮಲ್ಸ್‌, ಗ್ರೀನ್‌ವುಡ್‌ ಪ್ರೆಸ್‌.
  20. Nair 2005
  21. Ahmadjian & Paracer 2000, p. 7
  22. Townsend, Begon & Harper 1996
  23. Wernegreen 2004
  24. Ahmadjian & Paracer 2000, p. 3-4
  25. Brinkman 2002
  26. Golding & Gupta 1995
  27. Sagan & Margulis 1986
  28. Harrison 2002
  29. Danforth & Ascher 1997

ಇವನ್ನೂ ಗಮನಿಸಿ

[ಬದಲಾಯಿಸಿ]
  • ಅಪೋಸಿಂಬಿಯೋಟಿಕ್
  • ಆಕ್ವಾಪೋನಿಕ್ಸ್
  • ಡಿಕಾಂಪಿಕಲ್ಚರ್
  • ಸಹಜೀವನವನ್ನು ನಡೆಸುವ ಜೀವಿಗಳ ಪಟ್ಟಿ
  • ಸಹಜೀವನದ ಸಂಬಂಧಗಳ ಪಟ್ಟಿ
  • ಬಹುಜಿನೊಮೀಯ ಜೀವಿ
  • ಸಹಜನ್ಯತೆ
  • ಸಹಜೀವನ(ರಾಸಾಯನಿಕ )

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Biological interaction-footer

"https://kn.wikipedia.org/w/index.php?title=ಸಹಜೀವನ&oldid=1058754" ಇಂದ ಪಡೆಯಲ್ಪಟ್ಟಿದೆ