ಸದಸ್ಯ:Pruthviraj pruthvi/ಗೀತಾಂಜಲಿ ಶರ್ಮಾ
ಗೀತಾಂಜಲಿ ಶರ್ಮಾ | |
---|---|
ಜನನ | ಮಥುರಾ, ಉತ್ತರ ಪ್ರದೇಶ ಭಾರತ | ೩ ಸೆಪ್ಟೆಂಬರ್ ೧೯೮೪
ಸಂಗೀತ ಶೈಲಿ | ಭಾರತೀಯ ಶಾಸ್ತ್ರೀಯ ನೃತ್ಯ |
ವೃತ್ತಿ | ಕಥಕ್ ನೃತ್ಯಗಾರ್ತಿ, ಕೃಷ್ಣ ರಾಸಲೀಲ, ನೃತ್ಯ ಸಂಯೋಜಕಿ, ಶಿಕ್ಷಕಿ, ಉತ್ತೇಜಕಿ, ಸಂಘಟಕಿ |
ಸಕ್ರಿಯ ವರ್ಷಗಳು | ೧೯೯೮ |
Associated acts | ಉಮಾ ಡೋಗ್ರಾ, ಹೇಮ ಮಾಲಿನಿ, ಪಂ. ಶಿವಕುಮಾರ ಶರ್ಮ |
ಅಧೀಕೃತ ಜಾಲತಾಣ | geetanjalisharma.in |
ಗೀತಾಂಜಲಿ ಶರ್ಮಾ (ಜನನ ೩ ಸೆಪ್ಟೆಂಬರ್ ೧೯೮೪) ಭಾರತೀಯ ಜಾನಪದ ಮತ್ತು ಕಥಕ್ ನೃತ್ಯಗಾರ್ತಿ. [೧] ಇವರು ಉಮಾ ಡೋಗ್ರಾ ಅವರ ಶಿಷ್ಯೆ, [೨] ಜೈಪುರ ಘರಾನಾದಿಂದ ಕಥಕ್ ಮಾಂತ್ರಿಕರಾಗಿದ್ದ ಪಂ. ದುರ್ಗಾ ಲಾಲ್ ರ ಹಿರಿಯ ಶಿಷ್ಯೆಯಾಗಿದ್ದಾರೆ. ಇವರು 24 ವರ್ಷಗಳಿಂದ ಭಾರತ ಮತ್ತು ವಿದೇಶಗಳಲ್ಲಿ ನೃತ್ಯ ಪ್ರದರ್ಶಿಸುತ್ತಿದ್ದಾರೆ.
ಅವರು ರಾಷ್ಟ್ರೀಯ ಯುವ ಪ್ರಶಸ್ತಿ (೨೦೧೦), ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ (೨೦೧೧), [೩] ಯಶ್ ಭಾರತಿ ಪ್ರಶಸ್ತಿ, ಉತ್ತರ ಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿ (೨೦೧೫) [೪] [೫] ಮತ್ತು ಹಲವಾರು ಇತರ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಗೀತಾಂಜಲಿ ಅವರು 3 ಸೆಪ್ಟೆಂಬರ್ ೧೯೮೪ ರಂದು ಉತ್ತರ ಪ್ರದೇಶದ ಮಥುರಾದಲ್ಲಿ ನಿರ್ಮಲ್ ಆಚಾರ್ಯ ಮತ್ತು ಡಾ ಪಿ.ಆರ್. ಶರ್ಮಾ ದಂಪತಿಗೆ ಜನಿಸಿದರು. ಗೋವರ್ಧನದಲ್ಲಿರುವ ಸರಸ್ವತಿ ವಿದ್ಯಾ ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. [೬] ಇವರ ಕುಟುಂಬದಿಂದ ಯಾರೂ ಕಲೆಯ ಹಿನ್ನೆಲೆಯನ್ನು ಹೊಂದಿರಲಿಲ್ಲ, ಹಾಗಾಗಿ ಇವರಿಗೆ ಕುಟುಂಬದಿಂದ ಹೆಚ್ಚಿನ ಮಾರ್ಗದರ್ಶನ ಮತ್ತು ಬೆಂಬಲ ದೊರೆಯಲಿಲ್ಲ. ತನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರು ಯಾವುದೇ ಔಪಚಾರಿಕ ತರಬೇತಿಯಿಲ್ಲದೆ ಶಾಲಾ ಮಟ್ಟದಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಇವರ ಮೊದಲ ವಿದೇಶ ಪ್ರದರ್ಶನ ಸಿಂಗಾಪುರದಲ್ಲಿ. ನಂತರ, ಚೀನಾ, ಮೆಕ್ಸಿಕೋ, ಲಂಡನ್, ಅಮೇರಿಕಾ ಸೇರಿದಂತೆ ಇತರ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. [೭]
ವೃತ್ತಿ
[ಬದಲಾಯಿಸಿ]ಗೀತಾಂಜಲಿ ಶರ್ಮಾ ಅವರು ತಮ್ಮ ನೃತ್ಯ ವೃತ್ತಿಜೀವನವನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭಿಸಿದರು. ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪ್ರದರ್ಶನ ನೀಡುವ ಮೂಲಕ ಅವರು ಸ್ವತಃ ಬ್ರಿಜ್ ಜಾನಪದ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡರು. ೧೯೯೭ ರಲ್ಲಿ, ಅವರು ಬ್ರಿಜ್ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಉತ್ತೇಜಿಸುವ ಸಲುವಾಗಿ GIFT "ಗೀತಾಂಜಲಿ ಇಂಟರ್ನ್ಯಾಷನಲ್ ಫೋಕ್ ಟ್ಯಾಂಗ್" ಎಂಬ ಅಕಾಡೆಮಿಯನ್ನು ಸ್ಥಾಪಿಸಿದರು. ೨೦೦೮ ರಲ್ಲಿ, ಅವರು ನವದೆಹಲಿಯ ಕಥಕ್ ಕೇಂದ್ರದಲ್ಲಿ ರಾಜೇಂದ್ರ ಗಂಗಣಿಯವರ ಮಾರ್ಗದರ್ಶನದಲ್ಲಿ ಕಥಕ್ ಕಲಿಯಲು ಪ್ರಾರಂಭಿಸುತ್ತಾರೆ. ನಂತರ ಅವರು ೨೦೧೦ ರಲ್ಲಿ ಉಮಾ ಡೋಗ್ರಾವನ್ನು ಸೇರುತ್ತಾರೆ. ಇವರು ಅಲಹಾಬಾದ್‌ನ ಪ್ರಯಾಗ್ ಸಂಗೀತ ಸಮಿತಿಯಿಂದ ಪ್ರಭಾಕರ್ ಪದವಿಯನ್ನು ಪಡೆದುಕೊಳ್ಳುತ್ತಾರೆ. [೮] ಗೀತಾಂಜಲಿ ಉತ್ತರ ಪ್ರದೇಶದ ಮಥುರಾದಿಂದ ತರಬೇತಿ ಪಡೆದ ಮೊದಲ ಕಥಕ್ ಕಲಾವಿದೆಯಾಗಿದ್ದಾರೆ.
ಇವರು ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ಮತ್ತು ಶ್ರೀಕೃಷ್ಣ ತನ್ನ ಬಾಲ್ಯವನ್ನು ಕಳೆದ ಸ್ಥಳವಾದ ವೃಂದಾವನದ ಪರಂಪರೆಯನ್ನು ರಾಧೆಯ ಪಾತ್ರವನ್ನು ತಮ್ಮ ನೃತ್ಯದ ಮೂಲಕ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ . ಮಯೂರ್ ನೃತ್ಯ, ಲಾತ್ ಮಾರ್ ಹೋಳಿ, ಬರ್ಸಾನಾದ ಹೂಗಳ ಹೋಳಿ ಮತ್ತು ಉತ್ತರ ಪ್ರದೇಶದ ಬ್ರಜ್ ಪ್ರದೇಶದ ವಿಶೇಷ ನೃತ್ಯದ ಚಾರುಕಲಾ ಅವರ ರಾಸ ಲೀಲೆಯ ಪ್ರದರ್ಶನಗಳನ್ನುನೀಡಿದ್ದಾರೆ.
ಇವರು ಹಿರಿಯ ಕಲಾವಿದರಾದ ಬಾಲಿವುಡ್ ನಟಿ ಹೇಮಾ ಮಾಲಿನಿ, ಜಾನಪದ ಗಾಯಕಿ ಮಾಲಿನಿ ಅವಸ್ತಿ, ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಮತ್ತು ಇತರ ಅನೇಕ ಪ್ರಸಿದ್ಧ ಕಲಾವಿದರೊಂದಿಗೆ ಕಥಕ್ ಪ್ರದರ್ಶನಗಳನ್ನು ನೀಡಿದ್ದಾರೆ.
ನವೆಂಬರ್ ೧೯೪೬ ರ ಮೊದಲ ವಾರದಲ್ಲಿ ಭಾರತೀಯ ವಾರಪತ್ರಿಕೆ ಪಾಂಚಜನ್ಯದ ಕವರ್ ಪೇಜ್‌ನಲ್ಲಿ ಇವರ ಛಾಯಾಚಿತ್ರವನ್ನು ಪ್ರಕಟಿಸಲಾಯಿತು. [೯] ಡಿಸೆಂಬರ್ ೨೦೧೬ ರಲ್ಲಿ ಉತ್ತರ ಪ್ರದೇಶದ ಬ್ರಿಜ್ ಪ್ರದೇಶದ ಅತ್ಯುನ್ನತ ಪ್ರಶಸ್ತಿಯಾದ ಬ್ರಿಜ್ ರತ್ನ ಪ್ರಶಸ್ತಿಯನ್ನು ಪಡೆದರು. [೧೦]
೧೮ ಡಿಸೆಂಬರ್ ೨೦೧೭ ರಂದು, ಭಾರತ ಸರ್ಕಾರವು ನಡೆಸುತ್ತಿರುವ ಅಭಿಯಾನವಾದ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಗೀತಾಂಜಲಿಯನ್ನು ಮಥುರಾ - ವೃಂದಾವನದ ಪ್ರಚಾರ ರಾಯಬಾರಿಯನ್ನಾಗಿ ಘೋಷಿಸಲಾಯಿತು. [೧೧] [೧೨]
ಸಾಂಸ್ಕೃತಿಕ ಪ್ರದರ್ಶನಗಳು
[ಬದಲಾಯಿಸಿ]ರಾಷ್ಟ್ರೀಯ
[ಬದಲಾಯಿಸಿ]- ಖಜುರಾಹೊ ನೃತ್ಯ ಉತ್ಸವ, ತಾಜ್ ಮಹೋತ್ಸವ, ಗಂಗಾ ಮಹೋತ್ಸವ, ಪಂ. ದುರ್ಗಾಲಾಲ್ ಮಹೋತ್ಸವ,
- ರೇನ್‌ಡ್ರಾಪ್ ಫೆಸ್ಟಿವಲ್ ಮತ್ತು ಇವರ ಗುರು ಉಮಾ ಡೋಗ್ರಾ ಜೊತೆಗೆ ಅನೇಕ ಇತರ ಹಬ್ಬಗಳಲ್ಲಿ ಪ್ರದರ್ಶನ ನೀಡಿದ್ದಾರೆ. [೭]
- ಉತ್ತರ ಪ್ರದೇಶದ ಕನೌಜ್ ಮಹೋತ್ಸವ. [೧೩]
- G20 ಶೃಂಗಸಭೆಯಲ್ಲಿ ಸಾಂಸ್ಕೃತಿಕ ಪ್ರದರ್ಶನ [೧೪]
ಅಂತಾರಾಷ್ಟ್ರೀಯ
[ಬದಲಾಯಿಸಿ]- ದುಬೈ ಎಕ್ಸ್‌ಪೋ ೨೦೨೦ [೧೫] ರಲ್ಲಿ ಸಾಂಸ್ಕೃತಿಕ ಪ್ರದರ್ಶನ
- ಫಿಜಿಯಲ್ಲಿ ಫೆಸ್ಟಿವಲ್ ಆಫ್ ಇಂಡಿಯಾ ಸಾಂಸ್ಕೃತಿಕ ಪ್ರದರ್ಶನ [೧೬]
ಉಲ್ಲೇಖಗಳು
[ಬದಲಾಯಿಸಿ]- ↑ "Sangeet Natak Akademy awards conferred". The Hindu (in ಇಂಗ್ಲಿಷ್).
- ↑ Denishua, HPA. "School of Kathak | Uma Dogra". www.umadogra.com.
- ↑ name="article5104424">"Sangeet Natak Akademy awards conferred". The Hindu (in ಇಂಗ್ಲಿಷ್)."Sangeet Natak Akademy awards conferred". The Hindu.
- ↑ "देश-विदेश में यूपी का नाम रोशन करने वाली हस्तियों को मिलता है यश भारती सम्मान". dainikbhaskar (in ಇಂಗ್ಲಿಷ್). Dainik Bhaskar. 10 ಫೆಬ್ರವರಿ 2015.
- ↑ "यश भारती सम्मान से 56 हस्तियां अलंकृत 12063610". jagran. Dainik Jagran.
- ↑ name="EarlyLife_03091984">"ब्रज की माटी से सुगंधित हुआ 'यश भारती'- Amarujala". Amar Ujala (in ಇಂಗ್ಲಿಷ್).
- ↑ ೭.೦ ೭.೧ "ब्रज की माटी से सुगंधित हुआ 'यश भारती'- Amarujala". Amar Ujala (in ಇಂಗ್ಲಿಷ್)."ब्रज की माटी से सुगंधित हुआ 'यश भारती'- Amarujala". Amar Ujala.
- ↑ "Geetanjali Sharma". geetanjalisharma.in.
- ↑ "पाञ्चजन्य". Epaper.panchjanya.com.[ಮಡಿದ ಕೊಂಡಿ]
- ↑ "17 हस्तियों को सबसे बड़ा ब्रज रत्न अवॉर्ड, देखें तस्वीरें - 17 Celebrities honored braj ratan award in hotel ramada plaza". patrika.com (in ಇಂಗ್ಲಿಷ್).
- ↑ "स्वच्छ भारत की ब्रांड एंबेसडर बनीं गीतांजलि". jagran. Dainik Jagran.
- ↑ "नृत्यांगना गीताजंलि बनीं स्वच्छता मिशन की ब्रांड एंबेसडर- Amarujala" (in ಇಂಗ್ಲಿಷ್). Amar Ujala.
- ↑ "Kannauj Mahotsav witnesses a heavy footfall on concluding day". The Times of India. The Times Of India. 5 ಡಿಸೆಂಬರ್ 2022.
- ↑ "Uttar Pradesh to regale G20 guests with its cultural heritage". Hindustan Times (in ಇಂಗ್ಲಿಷ್). Hindustan Times. 15 ಜನವರಿ 2023.
- ↑ "Performance by Geetanjali Sharma in Dubai Expo". Dainik Bhaskar.
- ↑ "Festival of India Cultural Show: Mesmerizing performances". Desi Australia. 26 ಫೆಬ್ರವರಿ 2023.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official Website
- List of Yuva Puraskar Awardees Archived ೧೩ ಡಿಸೆಂಬರ್ ೨೦೧೯, ವೇಬ್ಯಾಕ್ ಮೆಷಿನ್ ನಲ್ಲಿ.
[[ವರ್ಗ:೧೯೮೪ ಜನನ]] [[ವರ್ಗ:ಜೀವಂತ ವ್ಯಕ್ತಿಗಳು]]