ವಿಷಯಕ್ಕೆ ಹೋಗು

ಸ್ವಚ್ಛ ಭಾರತ ಅಭಿಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ವಚ್ಛ ಭಾರತ ಅಭಿಯಾನ
ಸ್ವಚ್ಛ ಭಾರತ ಅಭಿಯಾನವನ್ನು ಉದ್ಘಾಟಿಸುತ್ತಿರುವ ಪ್ರಧಾನಿ ಮೋದಿ
ಅಭಿಯಾನದ ಅಧೀಕೃತ ಚಿಹ್ನೆ (ಮೇಲಿನ ಚಿತ್ರ)
ಘೋಷವಾಕ್ಯಒಂದು ಹೆಜ್ಜೆ ಸ್ವಚ್ಚತೆಯ ಕಡೆಗೆ
ದೇಶಭಾರತ
ಮುಖ್ಯ ವ್ಯಕ್ತಿಗಳುಪರಮೇಶ್ವರನ್ ಅಯ್ಯರ್
ಜಾರಿಯಗಿದ್ದುರಾಜ್ ಘಾಟ್ and
2 ಅಕ್ಟೋಬರ್ 2014; 3628 ದಿನ ಗಳ ಹಿಂದೆ (2014-೧೦-02)
ಸಧ್ಯದ ಸ್ಥಿತಿಮೊದಲ ಹಂತ ಪೂರ್ಣ,
ಎರಡನೇ ಹಂತದ ಪ್ರಾರಂಭ[]
ಅಧೀಕೃತ ಜಾಲತಾಣswachhbharat.mygov.in

ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ ಪ್ರಾರಂಭವಾಗಿತ್ತು. ಈ ಅಭಿಯಾನವು ಅಧಿಕೃತವಾಗಿ ೨ ಅಕ್ಟೋಬರ್ ೨೦೧೪ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭಮಾಡಿದರು.

ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ Archived 2021-11-12 ವೇಬ್ಯಾಕ್ ಮೆಷಿನ್ ನಲ್ಲಿ.­ಕ್ಕೆ ಚಾಲನೆ­ ನೀಡುವ ಮೂಲಕ ದೇಶದ ಜನ­ರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿವೆ.

  • ಮೋದಿಯವರು ಸಾರ್ವ­ಜನಿಕರಿಗೆ ತಮ್ಮ ಪ್ರದೇಶ­­ಗಳನ್ನು ಸ್ವಚ್ಛವಾಗಿ­ಟ್ಟುಕೊಳ್ಳಲು ಕರೆ ಜೊತೆ ಅಂಬಾನಿ, ಸಚಿನ್‌ ತೆಂಡೂಲ್ಕರ್‌­ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶ­ವನ್ನು ಸ್ವಚ್ಛ­ಗೊಳಿ­ಸುವುದು ಹಾಗೂ ಇನ್ನಿತ­ರ­ರಿಗೂ ಅದೇ ರೀತಿ ಮಾಡು­ವಂತೆ ಕರೆ ನೀಡುವ ಮೂಲಕ ಅಭಿ­ಯಾನಕ್ಕೆ ಕೈಜೋಡಿಸಲು ಆಹ್ವಾನಿ­ಸಿದ್ದು, ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.
  • ಹೆಚ್ಚಿನವರು ಸಾರ್ವ­ಜನಿಕ­­ವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತ­ಪಡಿ­ಸುತ್ತಿದ್ದಾರೆ. ಸ್ವತಃ ಪ್ರಧಾನಿ­ಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾ­ರೇತರ ಸಂಸ್ಥೆ­ಗಳ ಬೆಂಬಲ, ಸಾರ್ವಜನಿಕರ ಸಹ­ಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛ­ತೆಯ ವಿಷಯದ ಕುರಿತ ಪ್ರಚಾರ.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಿಶನ್ ಸ್ವಚ್ಛ ಭಾರತ ಚರ್ಚೆಯಲ್ಲಿ.

ಈ ಅಭಿಯಾನವು  ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಗೆ ಮುನ್ನ ತನ್ನ ಗುರಿ ತಲುಪುವ ಧ್ಯೇಯ ಹೊಂದಿದೆ. ಮೂಲ ಉದ್ದೇಶ :[citation needed]

  1. ಬಯಲು ಶೌಚ ನಿರ್ಮೂಲನೆ
  2. ಮಲ ಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ.
  3. 100% ಘನತ್ಯಾಜ್ಯಗಳ ನಿರ್ವಹಣೆ/ಮರುಬಳಕೆ/ಸಂಸ್ಕರಣೆ 
  4. ಸಾರ್ವಜನಿಕರಲ್ಲಿ ನಿರ್ಮಲೀಕರಣಕ್ಕಾಗಿ ಮಾನಸಿಕ  ಬದಲಾವಣೆ
  5. ಸಂಪೂರ್ಣ ಕೊಳಗೇರಿ ನಿರ್ಮೂಲನೆ.[]
  6. ಸಾರ್ವಜನಿಕರಲ್ಲಿ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ನಡುವಿರುವ ಸಂಬಂಧದ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಇತರೆ....
  1. "Swachh Bharat Mission (Grameen) Phase 2 launched with an outlay of Rs 1.4 lakh crore". cnbctv18.com (in ಅಮೆರಿಕನ್ ಇಂಗ್ಲಿಷ್). 4 March 2020. Retrieved 2020-12-21.
  2. swchaa barath abiyan