ಉಮಾ ಡೋಗ್ರಾ
ಉಮಾ ಡೋಗ್ರಾ | |
---|---|
ಹಿನ್ನೆಲೆ ಮಾಹಿತಿ | |
ಜನನ | ನವದೆಹಲಿ, ಭಾರತ | ೨೩ ಏಪ್ರಿಲ್ ೧೯೫೭
ಸಂಗೀತ ಶೈಲಿ | ಭಾರತೀಯ ಶಾಸ್ತ್ರೀಯ ನೃತ್ಯ |
ವೃತ್ತಿ | ಕಥಕ್ ನರ್ತಕಿ, ಶಿಕ್ಷಕಿ, ಸಂಯೋಜಕಿ, ಪ್ರಚಾರಕರು, ಆಯೋಜಕರು |
ಸಕ್ರಿಯ ವರ್ಷಗಳು | ೧೯೭೨ |
Associated acts | ದುರ್ಗಾ ಲಾಲ್, ರಾಘವನ್ ನಾಯರ್, ಅಮ್ಜದ್ ಅಲಿ ಖಾನ್, ಹೇಮ ಮಾಲಿನಿ, ಆಶಾ ಪಾರಿಖ್, ಸರೋಜಾ ವಿದ್ಯಾನಾಥನ್, ರಂಜನಾ ಗೌಹರ್, ದಕ್ಷ ಮಶ್ರುವಾಲ್, ವೈಭವ್ ಅರೆಕರ್ |
ಅಧೀಕೃತ ಜಾಲತಾಣ | umadogra.com |
ಉಮಾ ಡೋಗ್ರಾ (ಜನನ ೨೩ ಏಪ್ರಿಲ್ ೧೯೫೭) ಭಾರತೀಯ ಶಾಸ್ತ್ರೀಯ ನೃತ್ಯ ರೂಪಕವಾದ ಕಥಕ್ ನೃತ್ಯಗಾರ್ತಿ. [೧] ಅವರು ಜೈಪುರ ಘರಾನಾದ ಕಥಕ್ ಮೆಸ್ಟ್ರೋ ಆದ ಪಂ.ದುರ್ಗಾ ಲಾಲ್ ಅವರ ಹಿರಿಯ ಶಿಷ್ಯೆ. [೨]ಅವರು ಕಥಕ್ ಏಕವ್ಯಕ್ತಿ ವಾದಕಿ, ನೃತ್ಯ ಸಂಯೋಜಕಿ ಮತ್ತು ಶಿಕ್ಷಕಿ. [೧] [೩] ಅವರು ೪೦ ವರ್ಷಗಳಿಗೂ ಹೆಚ್ಚು ಕಾಲ ಭಾರತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಇವರು ಮೋತಿರಾಮ್ ಮತ್ತು ಶಕುಂತಲಾ ಶರ್ಮಾ ದಂಪತಿಗಳಿಗೆ ನವದೆಹಲಿಯ ಮಾಳವೀಯಾ ನಗರದಲ್ಲಿ ಜನಿಸಿದರು. ಉಮಾ ಅವರು ೭ ನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಇವರು ಆರಂಭದಲ್ಲಿ ಗುರು ಬನ್ಸಿಲಾಲ್ ಮತ್ತು ನಂತರ ಕಥಕ್ ಕೇಂದ್ರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಥಕ್ ಡ್ಯಾನ್ಸ್ ನವದೆಹಲಿಯಲ್ಲಿ ರೆಬಾ ವಿದ್ಯಾರ್ಥಿಯ ಬಳಿ ತರಬೇತಿ ಪಡೆದರು. ನಂತರ ಅವರು ಪಂ. ದುರ್ಗಾ ಲಾಲ್ ಅವರ ಜೈಪುರ ಘರಾನಾ ಸೇರಿದರು [೪] ಅವರು ಸಿತಾರ್ ವಾದಕರಾಗಿದ್ದ ಪಂ.ರವಿ ಶಂಕರ್ ಅವರ ಶಿಷ್ಯರಾದ ಅವರ ತಂದೆ ಮೋತಿರಾಮ್ ಶರ್ಮಾ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ತರಬೇತಿ ಪಡೆದರು.
ವೃತ್ತಿ
[ಬದಲಾಯಿಸಿ]ಉಮಾ ಡೋಗ್ರಾ ಪಂ.ದುರ್ಗಾ ಲಾಲ್‌ನ ಗಂಡಾ ಬಂದ್ ಶಾಗೀರ್ದ್ ಆಗಿದ್ದರು. [೫] ರೆಬಾ ವಿದ್ಯಾರ್ಥಿ ಮತ್ತು ಪಂ.ಬಿರ್ಜು ಮಹಾರಾಜ್ ನಲ್ಲಿ ೧೯೬೯ ರಿಂದ ೧೯೭೨ ರವರೆಗೆ ಕಥಕ್ ಕಲಿತರು. ೧೯೭೨ ರಿಂದ ೧೯೮೪ ರವರೆಗೆ ಅವರು ಗುರು ಪಂ.ದುರ್ಗಾ ಲಾಲ್ ಅವರಲ್ಲಿ ಕಥಕ್ ಕಲಿತರು [೪] ಮತ್ತು ಎಸ್ ಬಿ ಕೆ ಕೆ, ರಾಮಲೀಲಾ, ಸೂರದಾಸ್, ಶಾ-ನೆ-ಮೊಘಲ್ ನಿರ್ಮಾಣಗಳಲ್ಲಿ ನೃತ್ಯ ಮಾಡಿದರು. ಅವರು ೧೬೮೪ ರಲ್ಲಿ ಬಾಂಬೆಗೆ ತೆರಳಿದರು ಮತ್ತು ನೃತ್ಯ ಭಾರತಿ, ನೂಪುರ್ ಧಾರಾವಾಹಿ ಮತ್ತು ಬ್ಯಾಲೆಟ್ ಮೀರಾದಲ್ಲಿ ಹೇಮಾ ಮಾಲಿನಿಯೊಂದಿಗೆ ಕೆಲಸ ಮಾಡಿದರು. ಅವರು ಝಂಕಾರ್ ಧಾರಾವಾಹಿಯಲ್ಲಿ ಆಶಾ ಪರೇಖ್ ಅವರೊಂದಿಗೆ ಕೆಲಸ ಮಾಡಿದರು.
ಉಮಾ ಡೋಗ್ರಾ ಅವರು ಭಾರತೀಯ ಪ್ರದರ್ಶನ ಕಲೆಗಳನ್ನು ಉತ್ತೇಜಿಸಲು ೧೯೯೦ ರಲ್ಲಿ ಸಾಮ್ ವೇದ್ ಸೊಸೈಟಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅನ್ನು ಸ್ಥಾಪಿಸಿದರು. [೩] ಅದರ ಬ್ಯಾನರ್ ಅಡಿಯಲ್ಲಿ ಕಳೆದ ೨೫ ವರ್ಷಗಳಿಂದ [೫] [೬] [೭] ಅವರು ಮುಂಬೈನ ಸಾಂಸ್ಕೃತಿಕ ಕ್ಯಾಲೆಂಡರ್‌ನಲ್ಲಿ ಎರಡು ಉತ್ಸವಗಳನ್ನು ಆಯೋಜಿಸುತ್ತಿದ್ದಾರೆ. [೬] ಮೊದಲನೇಯ ಪಂ. ದುರ್ಗಾ ಲಾಲ್ ಉತ್ಸವವು ವರ್ಷದ ಮೊದಲಾರ್ಧದಲ್ಲಿ ನಡೆಯುತ್ತದೆ. [೫] ಸಂಗೀತ, ನೃತ್ಯ ಮತ್ತು ರಂಗಭೂಮಿಯ ಕ್ಷೇತ್ರದಿಂದ ಯಾರು ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಇದು ನೋಡಿದೆ. [೩] ೨೦೨೦ ರಲ್ಲಿ, ಉತ್ಸವವು ೩೦ ವರ್ಷ ಪೂರೈಸಿತು. [೮] ಎರಡನೇಯ ರೈನ್‌ಡ್ರಾಪ್ಸ್ ಫೆಸ್ಟಿವಲ್ ಆಫ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್ [೫] ಮುಂಬರುವ ಏಕವ್ಯಕ್ತಿ ವಾದಕರಿಗೆ ವೇದಿಕೆಯನ್ನು ನೀಡುವ ಉದ್ದೇಶದಿಂದ ಜುಲೈನಲ್ಲಿ ನಡೆಸಲಾಗುತಿತ್ತು. ಅವರು ಖಜುರಾಹೊ ನೃತ್ಯ ಉತ್ಸವ, ಮಾರ್ಗಜಿ ಉತ್ಸವದಂತಹ ಅನೇಕ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. [೯] ಅವರು ಮುಂಬೈನ ಉಮಾ ಡೋಗ್ರಾ ಸ್ಕೂಲ್ ಆಫ್ ಕಥಕ್‌ನಲ್ಲಿ ತರಗತಿಗಳನ್ನು ನಡೆಸುತ್ತಾರೆ. ಅವರು ಕಥಕ್ ಏಕವ್ಯಕ್ತಿ ವಾದಕ [೧೦] ಟೀನಾ ತಾಂಬೆ, [೧೧] ಬಾಲಿವುಡ್ ನಟಿ ಸೋನಮ್ ಕಪೂರ್, [೧೨] ಮತ್ತು ದೂರದರ್ಶನ ನಟಿ ರಚನಾ ಪರುಲ್ಕರ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಇವರು ೨೦೧೪ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. [೧೩] [೧೪] [೧೫]
೧೮ ಮೇ ೨೦೧೬ ರಂದು ಉಮಾ ಅವರು ಭಾರತೀಯ ಜಾನಪದ ಪ್ರತಿಪಾದಕಿ ಗೀತಾಂಜಲಿ ಶರ್ಮಾ [೧೬] ಅವರೊಂದಿಗೆ ಒಂದು ತಿಂಗಳ ಸಾಂಸ್ಕೃತಿಕ ಉತ್ಸವ ಉಜ್ಜಯಿನಿ ಸಿಂಹಸ್ಥದಲ್ಲಿ ಪ್ರದರ್ಶನ ನೀಡಿದರು. [೧೭]
ವೈಯಕ್ತಿಕ ಜೀವನ
[ಬದಲಾಯಿಸಿ]ಉಮಾ ಡೋಗ್ರಾ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಾರ್ಥ ಸಿಂಗ್ ನಿರ್ದೇಶಕರನ್ನು ವಿವಾಹವಾದರು . ಅವರಿಗೆ ಒಬ್ಬ ಮಗಳು ಸುಹಾನಿ ಸಿಂಗ್ ಬರಹಗಾರ ಮತ್ತು ಇಂಡಿಯಾ ಟುಡೇ ಪತ್ರಕರ್ತೆ ಮತ್ತು ಮಗ ಮಾನಸ್ ಸಿಂಗ್ ನಟ. ಉಮಾ ಮುಂಬೈನಲ್ಲಿ ನೆಲೆಸಿದ್ದಾರೆ ಅಲ್ಲಿ ಸಮಾಜದ ಅನುಮತಿಯಿಲ್ಲದೆ ತನ್ನ ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಬಳಸಿಕೊಂಡ ಆರೋಪದ ಮೇಲೆ ಸಮಾಜದೊಂದಿಗೆ ವಿವಾದವನ್ನು ಹೊಂದಿದ್ದರು. ಗದ್ದಲದಿಂದ ಅಕ್ಕಪಕ್ಕದ ಮನೆಯವರು ತೊಂದರೆಗೀಡಾಗಿದ್ದು ಲಿಖಿತ ದೂರು ನೀಡಿದ್ದಾರೆ’ ಎಂದು ಸೊಸೈಟಿ ಅಧ್ಯಕ್ಷರು ತಿಳಿಸಿದರು. [೧೮]
ಪುಸ್ತಕಗಳು
[ಬದಲಾಯಿಸಿ]ನರ್ತಕಿಯಾಗಿ ತನ್ನ ಪಯಣ ಮತ್ತು ಕಥಕ್‌ನ ತಂತ್ರಗಳ ಕುರಿತು "ಇನ್ ಪ್ರೈಸ್ ಆಫ್ ಕಥಕ್" ಎಂಬ ಪುಸ್ತಕವನ್ನು ಅವರು ಬರೆದಿದ್ದಾರೆ. [೧೯] ಈ ಪುಸ್ತಕವನ್ನು ಸಂಸತ್ ಸದಸ್ಯೆ ಹೇಮಾ ಮಾಲಿನಿ ಅವರು ೩೦ ಜನವರಿ ೨೦೧೫ ರಂದು ಸಂವೇದ ರಜತ್ ಜಯಂತಿ ಮಹೋತ್ಸವದಲ್ಲಿ ಬಿಡುಗಡೆ ಮಾಡಿದರು. [೨೦]
ಧ್ವನಿಮುದ್ರಿಕೆ
[ಬದಲಾಯಿಸಿ]ನೃತ್ಯದ ಮೂಲಕ ನಿರ್ವಾಣ - ಉಮಾ ಅವರ ಗುರು ಪಂ.ದುರ್ಗಾ ಲಾಲ್ ಅವರ ಜೀವನ ಮತ್ತು ಸಾಧನೆಗಳನ್ನು ಆಚರಿಸಲು ನಿರ್ಮಿಸಲಾದ ಚಲನಚಿತ್ರ.[೨೧]
ಕಥಕ್ ಶಾಲೆ
[ಬದಲಾಯಿಸಿ]ಉಮಾ ಡೋಗ್ರಾ ಅವರ ಕಥಕ್ ಶಾಲೆಯನ್ನು ಉಮಾ ಡೋಗ್ರಾ ಅವರು ಮುಂಬೈನಲ್ಲಿ ನಡೆಸುತ್ತಿದ್ದಾರೆ. [೨೨] ಇದರ ಚಟುವಟಿಕೆಗಳಲ್ಲಿ ತರಗತಿಯ ಬೋಧನೆ, ಕಾರ್ಯಾಗಾರಗಳು, ಮಾಸ್ಟರ್ ತರಗತಿಗಳು, ಪ್ರದರ್ಶನಗಳು, ಸೆಮಿನಾರ್‌ಗಳು ಮತ್ತು ಉತ್ಸವಗಳು ಸೇರಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Sridharan, Divya (28 ಮೇ 2009). "A Katha on Kathak". The Hindu (in Indian English).
- ↑ "Remembering the Legend". The Times of India (in Indian English). 8 ಫೆಬ್ರವರಿ 2008.
- ↑ ೩.೦ ೩.೧ ೩.೨ Modi, Chintan Girish (5 ಮಾರ್ಚ್ 2016). "Remembering a maestro". The Hindu (in Indian English).
- ↑ ೪.೦ ೪.೧ "Repose in rhythm". The Hindu (in Indian English). 11 ಫೆಬ್ರವರಿ 2011.
- ↑ ೫.೦ ೫.೧ ೫.೨ ೫.೩ Kothari, Sunil (6 ಆಗಸ್ಟ್ 2015). "Young, able and willing". The Hindu (in Indian English).
- ↑ ೬.೦ ೬.೧ Kothari, Sunil (8 ಅಕ್ಟೋಬರ್ 2015). "In memory of a dance guru". The Hindu (in Indian English).
- ↑ Ghosh, Tanushree (6 ಫೆಬ್ರವರಿ 2014). "A dance tribute". Mint (newspaper).
- ↑ "Prominent dancers perform at the 30th Pandit Durgalal Festival". 31 ಮಾರ್ಚ್ 2020. Archived from the original on 17 ಸೆಪ್ಟೆಂಬರ್ 2023. Retrieved 17 ಸೆಪ್ಟೆಂಬರ್ 2023.
- ↑ Subramanian, Mahalakshmi. "Dancers like Uma Dogra and Vaibhav Arekar, drew an overwhelming crowd". DNA. Retrieved 31 ಡಿಸೆಂಬರ್ 2013.
- ↑ Dave, Ranjana (12 ಏಪ್ರಿಲ್ 2018). "Joining the dots with dance". The Hindu.
- ↑ "Opening minds to classical arts". 19 ಮೇ 2009.
- ↑ "The restless actor". The Hindu (in Indian English). 19 ಫೆಬ್ರವರಿ 2016.
- ↑ Sarkar, Gaurav (12 ಜೂನ್ 2015). "Danseuse Uma Dogra to get National Award for Kathak". dna (in ಅಮೆರಿಕನ್ ಇಂಗ್ಲಿಷ್). Retrieved 12 ಜೂನ್ 2015.
- ↑ "Prez Confers Sangeet Natak Akademi Awards". 23 ಅಕ್ಟೋಬರ್ 2015. Archived from the original on 11 ಸೆಪ್ಟೆಂಬರ್ 2016.
- ↑ "Sangeet Natak Akademi delegation meets PM Modi". HT. 24 ಅಕ್ಟೋಬರ್ 2015.
- ↑ Denishua, HPA. "School of Kathak | Uma Dogra". umadogra.com. Archived from the original on 15 ಏಪ್ರಿಲ್ 2019. Retrieved 17 ಸೆಪ್ಟೆಂಬರ್ 2023.
- ↑ Sinha, Manjari (26 ಮೇ 2016). "Joy sheer joy…". The Hindu (in Indian English).
- ↑ "Mumbai: Kathak dancer takes on Goregaon society over feeding stray dogs". mid-day. 24 ಮಾರ್ಚ್ 2019.
- ↑ Denishua, HPA. "Book | Uma Dogra". umadogra.com. Archived from the original on 25 ಏಪ್ರಿಲ್ 2020. Retrieved 17 ಸೆಪ್ಟೆಂಬರ್ 2023.
- ↑ "Book Review – In praise of Kathak – Shyamhari Chakra". narthaki.com. Samved Society.
- ↑ "Moving Stories – Indian Express". archive.indianexpress.com. 26 ಏಪ್ರಿಲ್ 2012.
- ↑ Denishua, HPA. "School of Kathak | Uma Dogra". umadogra.com. Archived from the original on 15 ಏಪ್ರಿಲ್ 2019. Retrieved 17 ಸೆಪ್ಟೆಂಬರ್ 2023.Denishua, HPA. "School of Kathak | Uma Dogra" Archived 15 April 2019[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. umadogra.com.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಜಾಲತಾಣ Archived 29 June 2020[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ
- Pages using the JsonConfig extension
- CS1 Indian English-language sources (en-in)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Use dmy dates from March 2022
- Articles with invalid date parameter in template
- Articles with hCards
- Infobox musical artist with missing or invalid Background field
- Articles with short description
- Short description is different from Wikidata
- Pages using infobox musical artist with associated acts
- ಜೀವಂತ ವ್ಯಕ್ತಿಗಳು
- ವಿಕಿಪೀಡಿಯ ಅನುವಾದ ಶಿಬಿರ ಲೇಖನ
- ನೃತ್ಯ ಕಲಾವಿದರು