ಸೋನಮ್ ಕಪೂರ್

ವಿಕಿಪೀಡಿಯ ಇಂದ
Jump to navigation Jump to search
Sonam Kapoor at Loreal Paris Femina Women Awards 2014
ಸೋನಮ್ ಕಪೂರ್
Sonam Kapoor at Jio Mami Mumbai film festival’s word to screen market (06) (cropped).jpg
೨೦೧೭ ರಲ್ಲಿ ಸೋನಮ್
ಜನನ (1985-06-09) 9 June 1985 (age 33)
ಮುಂಬೈ, ಮಹರಾಷ್ರ, ಭಾರತ
ವೃತ್ತಿನಟಿ
Years active೨೦೦೫–ರಿಂದ
Parent(s)ಸುನಿತ
ಅನಿಲ್ ಕಪೂರ್
Relativesಕಪೂರ್ ಕುಟುಂಬ

ಸೋನಮ್ ಕಪೂರ್ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ. ಇವರು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.[೧] ಫಿಲ್ಮ್ಫೇರ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇವರ ಆದಾಯ ಮತ್ತು ಜನಪ್ರಿಯತೆಯ ಆಧಾರದ ಮೇಲೆ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ.[೨]

ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಸಿಂಗಪುರದ ಯುನೈಟೆಡ್ ವರ್ಲ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷಿಯಾದಲ್ಲಿ ರಂಗಭೂಮಿ ಮತ್ತು ಕಲೆಗಳನ್ನು ಅಧ್ಯಯನ ಮಾಡಿದರು.[೩][೪] 2005 ರ ಬ್ಲ್ಯಾಕ್ ಚಲನಚಿತ್ರದಲ್ಲಿ ಸಂಜಯ್ ಲೀಲಾ ಭಾನ್ಸಾಲಿ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು. ಭನ್ಸಾಲಿಯ ಪ್ರಣಯ ಚಲನಚಿತ್ರ ಸಾವರಿಯ (2007)ದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು, ಇದಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಪಾದಾರ್ಪಣೆಗೆ ನಾಮನಿರ್ದೇಶನಗೊಂಡರು. ಮೂರು ವರ್ಷಗಳ ನಂತರ ಐ ಹ್ಯಾಟ್ ಲವ್ ಸ್ಟೋರೋಸ್ (2010) ಎಂಬ ರೊಮ್ಯಾಂಟಿಕ್ ಹಾಸ್ಯ ಚಿತ್ರದ ಮೂಲಕ್ ಮೊದಲ ಯಶಸ್ಸನ್ನು ಕಂಡರು.[೫]

ಹಲವು ವೈಫಲ್ಯಗಳ ನಂತರ, ರಾಂಝಣಾ (2013) ಸಿನೆಮಾ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ದೊರಕಿಸಿತು ಹಾಗೂ ಅತ್ಯುತ್ತಮ ನಟಿ ನಾಮನಿರ್ದೇಶನಗಳನ್ನು ಗಳಿಸಿತು.[೬] ನಂತರ ಅವರು 2014 ರೊಮ್ಯಾಂಟಿಕ್ ಹಾಸ್ಯ ಚಿತ್ರ ಖೂಬ್ಸುರಾತ್ ಮತ್ತು 2015 ರ ಹಾಸ್ಯ ಚಿತ್ರ ಡಾಲಿ ಕಿ ದೋಲಿಯಲ್ಲಿ ಕಾಣಿಸಿಕೊಂಡರು.[೭][೮] ಇವೆರಡೂ ಅವರ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. ಸೋನಮ್ ಪ್ರಖ್ಯಾತ ಬಾಲಿವುಡ್ ಚಲನಚಿತ್ರಗಳಲ್ಲಿ ಒಂದಾದ ಭಾವಾತಿರೇಕ ಪ್ರೇಮ್ ರತನ್ ಧನ್ ಪಯೋ (2015) ನಲ್ಲಿ ರಾಜಕುಮಾರಿಯಾಗಿ ನಟಿಸಿದರು. ಜೀವನಚರಿತ್ರೆಯ ಆಧಾರಿತ ನೀರ್ಜಾ (2016) ಸಿನೆಮಾಕ್ಕೆ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ ಮತ್ತು ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿಯನ್ನು ಪಡೆದರು.[೯][೧೦] ಇದು ಮಹಿಳಾ ಆಧಾರಿತ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಿತ್ರಗಳಲ್ಲಿ ಒಂದಾಗಿದೆ.[೧೧]

ಆರಂಭಿಕ ಜೀವನ[ಬದಲಾಯಿಸಿ]

ಸೋನಮ್ ಕಪೂರ್ ಜೂನ್ ೯, ೧೯೮೫ ರಲ್ಲಿ ಚೆಮ್ಬುರ್, ಮುಂಬೈಯಲ್ಲಿ ಜನಿಸಿದರು. ಆಕೆಯ ತಂದೆ, ನಟ ಮತ್ತು ನಿರ್ಮಾಪಕ ಅನಿಲ್ ಕಪೂರ್, ದಿವಂಗತ ಚಲನಚಿತ್ರ ನಿರ್ಮಾಪಕ ಸುರೀಂದರ್ ಕಪೂರ್ ಅವರ ಮಗ ಹಾಗೂ ಅನಿಲ್ ಕಪೂರ್ ಫಿಲ್ಮ್ಸ್ ಕಂಪೆನಿಯ ಸ್ಥಾಪಕ. ಅವರ ತಾಯಿ ಸುನೀತಾ, ವಸ್ತ್ರ ವಿನ್ಯಾಸಕಾರತಿ.[೧೨] ಸೋನಮ್ ಎರಡು ಕಿರಿಯ ಸಹೋದರರನ್ನು ಹೊಂದಿದ್ದಾರೆ:ಸಹೋದರಿ ಚಲನಚಿತ್ರ ನಿರ್ಮಾಪಕಿ ರಿಯಾ ಮತ್ತು ಸಹೋದರ ಹರ್ಷವರ್ಧನ್. ಅವರು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ನಟ ಸಂಜಯ್ ಕಪೂರ್ ಅವರ ಸೋದರ ಸೊಸೆ; ನಟಿ ಶ್ರೀದೇವಿ ಮತ್ತು ನಿರ್ಮಾಪಕ ಮೊನಾ ಶೌರಿ (ಬೋನಿ ಪತ್ನಿಯರು) ಅವರ ಅತ್ತೆ.[೧೩] ಅವರ ತಂದೆಯ ಸೋದರಸಂಬಂಧಿ ನಟರಾದ ಅರ್ಜುನ್ ಕಪೂರ್ ಮತ್ತು ಮೋಹಿತ್ ಮರ್ವಾ ಮತ್ತು ತಾಯಿಯ ಎರಡನೇ ಸೋದರಸಂಬಂಧಿ ನಟ ರಣವೀರ್ ಸಿಂಗ್. [೧೪]

ಸೋನಮ್ ಮತ್ತು ಅನಿಲ್ ಕಪೂರ್
ಮುಂಬೈಯಲ್ಲಿ ಸೋನಮ್ ಮತ್ತು ಅನಿಲ್ ಕಪೂರ್ ೨೦೧೧

ಸೋನಮ್ ಒಂದು ತಿಂಗಳ ಮಗು ಆಗಿದ್ದಾಗ ಕುಟುಂಬ ಜುಹುವಿಗೆ ಸ್ಥಳಾಂತರಗೊಂಡಿತು.[೧೫] ಅವರು ಜುಹುದಲ್ಲಿನ ಆರ್ಯ ವಿದ್ಯಾ ಮಂದಿರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.[೧೬] ಅಲ್ಲಿ ಅವಳು "ಹಠಮಾರಿ" ಮತ್ತು "ನಿರಾತಂಕದ" ಮಗುವಾಗಿದ್ದು ಹುಡುಗರನ್ನು ಪೀಡಿಸುತ್ತಿದ್ದಳು ಎಂದು ಒಮ್ಮೆ ಹೇಳಿದ್ದಾರೆ.[೧೭] ಅವರು ರಗ್ಬಿ ಮತ್ತು ಬ್ಯಾಸ್ಕೆಟ್ಬಾಲ್ ನಂತಹ ಕ್ರೀಡೆಗಳಲ್ಲಿ ನಿಪುಣತೆಯನ್ನುಗಳಿಸಿದ್ದರು.[೧೮] ಕಥಕ್, ಶಾಸ್ತ್ರೀಯ ಸಂಗೀತಾ ಮತ್ತು ಲ್ಯಾಟಿನ್ ನೃತ್ಯದಲ್ಲಿ ತರಬೇತಿ ಪಡೆದರು.[೧೯] ಹಿಂದೂ ಧರ್ಮವನ್ನು ಅಭ್ಯಸಿಸುತ್ತಿರುವ ಸೋನಮ್, "ಸಾಕಷ್ಟು ಧಾರ್ಮಿಕ" ಎಂದು ಹೇಳುತ್ತಾರೆ.[೨೦] ೧೫ ನೆ ವಯಸ್ಸಿಗೆ ವೈಟರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು, ಆದರೂ ಇದು ಒಂದು ವಾರದೊಳಗೆ ಕೊನೆಗೊಂಡಿತು.[೨೧]

ಪ್ರಶಸ್ತಿಗಳು[ಬದಲಾಯಿಸಿ]

 • ಸುಪರ್ ಸ್ಟಾರ್ ಆಫ್ ಟುಮಾರೊ ಮಹಿಳೆ - ಸಾವರಿಯ(೨೦೦೮)[೨೨]
 • ಅತ್ಯುತ್ತಮ ಹಾಸ್ಯ ನಟಿ - ಖೂಬ್ಸೂರತ್(೨೦೧೫)
 • ರೋಮ್ಯಾಂಟಿಕ್ ಪಾತ್ರದಲ್ಲಿ ಅತ್ಯುತ್ತಮ ಮನರಂಜನಾ ನಟಿ - ಪ್ರೆಮ್ ರತನ್ ಧನ್ ಪಾಯೊ(೨೦೧೫)[೨೩]
 • ಅತ್ಯುತ್ತಮ ನಟಿ (ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ) - ನೀರ್ಜಾ[೨೪]
 • ಅತ್ಯುತ್ತಮ ನಟಿ (ಏಷಿಯಾವಿಶನ್ ಪ್ರಶಸ್ತಿ) - ನೀರ್ಜಾ[೨೫]
 • ವರ್ಷದ ಐಕಾನ್ (ಏಷಿಯಾವಿಶನ್ ಪ್ರಶಸ್ತಿ) - ನೀರ್ಜಾ[೨೬]
 • ಸಂಪಾದಕರ ಆಯ್ಕೆ ವರ್ಷದ ಅತ್ಯುತ್ತಮ ನಟಿ (ಸ್ಟಾರ್ ಡಸ್ಟ್) - ನೀರ್ಜಾ[೨೭]
 • ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿ - ನೀರ್ಜಾ[೨೮]
 • ಲೊಕ್ಮಾತ್ ಮಹರಾಷ್ಟ್ರ ಪ್ರಶಸ್ತಿ - ನೀರ್ಜಾ[೨೯]
 • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ - ನೀರ್ಜಾ[೩೦]

ಉಲ್ಲೇಖಗಳು[ಬದಲಾಯಿಸಿ]

 1. https://finapp.co.in/sonam-kapoor-net-worth/
 2. http://www.forbesindia.com/celebprofile/sonam-kapoor/1439/90
 3. http://www.forbesindia.com/celebprofile2016/sonam-kapoor/1587/35
 4. https://web.archive.org/web/20141211031321/http://www.hindustantimes.com/Entertainment/Celebrity/Sonam-Kapoor/894295-Profile.aspx
 5. https://www.imdb.com/title/tt1667838/fullcredits
 6. https://timesofindia.indiatimes.com/entertainment/hindi/bollywood/news/Never-thought-Raanjhanna-would-become-so-big-Zeeshan-Ayyub/articleshow/21067212.cms
 7. https://timesofindia.indiatimes.com/entertainment/hindi/bollywood/news/Dolly-Ki-Doli-Sonam-Kapoor-shoots-in-real-locations-for-the-film/articleshow/45809242.cms
 8. https://www.imdb.com/title/tt3554418/fullcredits
 9. https://timesofindia.indiatimes.com/entertainment/hindi/bollywood/news/64th-national-awards-sonam-kapoor-starrer-neerja-wins-best-hindi-feature-film-akshay-kumar-declared-best-actor/articleshow/58062574.cms
 10. https://timesofindia.indiatimes.com/entertainment/hindi/bollywood/news/62nd-filmfare-awards-2017-winners-list/articleshow/56541241.cms
 11. http://indianexpress.com/article/entertainment/bollywood/neerja-box-office-collections-sonam-kapoor-starrer-emerges-a-winner/
 12. https://gulfnews.com/life-style/celebrity/sonam-kapoor-my-love-life-has-been-unsuccessful-1.1198577
 13. https://web.archive.org/web/20160116120804/http://www.ibnlive.com/photogallery/movies/in-pics-the-boney-anil-sanjay-kapoor-family-tree-824669.html
 14. http://indianexpress.com/photos/entertainment-gallery/cousins-sonam-jhanvi-and-aunt-sridevi-watch-mohit-marwahs-fugly/2/
 15. https://timesofindia.indiatimes.com/entertainment/bollywood/news-interviews/I-dont-need-a-tall-dark-and-handsome-man-Sonam-Kapoor/articleshow/20224461.cms?referral=PM
 16. http://www.dnaindia.com/entertainment/report-guddi-inspired-sonam-kapoor-s-school-girl-act-in-raanjhnaa-1839019
 17. http://indianexpress.com/article/entertainment/bollywood/naughty-sonam-kapoor-loved-to-bully-boys/
 18. https://web.archive.org/web/20150423175751/http://indiatoday.intoday.in/story/star-kid-sonam-kapoor-is-a-working-girl-since-15/1/144931.html
 19. https://web.archive.org/web/20150925062554/http://www.filmfare.com/photos/the-sonam-kapoor-we-know-6358.html
 20. https://timesofindia.indiatimes.com/entertainment/hindi/bollywood/news/Sonam-Kapoor-My-mom-has-brought-all-these-religious-things-in-our-lives/articleshow/41430552.cms
 21. https://web.archive.org/web/20150423175751/http://indiatoday.intoday.in/story/star-kid-sonam-kapoor-is-a-working-girl-since-15/1/144931.html
 22. https://www.revolvy.com/main/index.php?s=Stardust%20Award%20for%20Superstar%20of%20Tomorrow%20%E2%80%93%20Female&item_type=topic
 23. https://www.firstpost.com/entertainment/big-star-entertainment-awards-salman-khan-nawazuddin-nominated-in-the-same-category-2538690.html
 24. http://www.dnaindia.com/entertainment/report-sonam-kapoor-awarded-best-actress-at-the-indian-film-festival-melbourn-2244576
 25. http://indianexpress.com/article/entertainment/bollywood/sonam-kapoor-to-win-best-actress-for-neerja-at-asia-vision-movie-awards-4378870/
 26. http://www.bollywoodhungama.com/news/bollywood/sonam-kapoor-honoured-icon-award-asiavision-movie-awards-2016/
 27. https://www.indiatoday.in/movies/bollywood/story/stardust-awards-2016-shah-rukh-khan-anushka-sharma-amitabh-bachchan-358491-2016-12-20
 28. https://timesofindia.indiatimes.com/entertainment/hindi/bollywood/news/62nd-filmfare-awards-2017-winners-list/articleshow/56541241.cms
 29. http://www.dnaindia.com/entertainment/report-sonam-kapoor-wins-again-2308445
 30. https://timesofindia.indiatimes.com/entertainment/hindi/bollywood/news/64th-national-awards-sonam-kapoor-starrer-neerja-wins-best-hindi-feature-film-akshay-kumar-declared-best-actor/articleshow/58062574.cms