ಸದಸ್ಯ:Prajna gopal/ಕಕುದ್ಮಿ
ಕಕುದ್ಮಿ | |
---|---|
ಮಕ್ಕಳು | ರೇವತಿ |
ಗ್ರಂಥಗಳು | ಪುರಾಣ |
ತಂದೆತಾಯಿಯರು |
|
ಕಕುದ್ಮಿ, ಇವನನ್ನು ರೈವತ ( ರೇವತನ ಪುತ್ರ ) ಎಂದೂ ಕರೆಯುತ್ತಾರೆ. ಇವನು ಹಿಂದೂ ಸಾಹಿತ್ಯದಲ್ಲಿ ಕಾಣಿಸಿಕೊಂಡಿರುವ ರಾಜ. ಕಕುದ್ಮಿಯನ್ನು ಕುಶಸ್ಥಲಿಯ ರಾಜ ಎಂದು ವರ್ಣಿಸಲಾಗಿದೆ. ಅವನು ರೇವತನ ಮಗ, [೧] ಮತ್ತು ಬಲರಾಮನ ಪತ್ನಿಯಾದ ರೇವತಿಯ ತಂದೆ. ಇವನ ಕುರಿತಾಗಿ ಮಹಾಭಾರತ, ಹರಿವಂಶ, ದೇವಿ ಭಾಗವತ, ಮತ್ತು ಭಾಗವತ ಪುರಾಣದಂತಹ ಹಲವಾರು ಗ್ರಂಥಗಳಲ್ಲಿ ಊಲ್ಲೇಖಿಸಲಾಗಿದೆ .
ದಂತಕಥೆ
[ಬದಲಾಯಿಸಿ]ಬ್ರಹ್ಮನ ಸಮ್ಮುಖದಲ್ಲಿ
[ಬದಲಾಯಿಸಿ]ಭಾಗವತ ಪುರಾಣ ಮತ್ತು ವಿಷ್ಣು ಪುರಾಣದ ಪ್ರಕಾರ, ಕಕುದ್ಮಿಯ ಮಗಳು ರೇವತಿಯು ತುಂಬಾ ಸುಂದರಿಯಾಗಿದ್ದಲು ಮತ್ತು ಬಹಳ ಸಾಧನೆ ಮಾಡಿದ್ದಳು. ಅವಳು ಮದುವೆಯ ವಯಸ್ಸನ್ನು ತಲುಪಿದಾಗ ಅವಳಿಗೆ ಯೋಗ್ಯವಾದ ಪುರುಷ ಸಿಗಲಿಲ್ಲ. ಆದ್ದರಿಂದ, ಅವನು ತನ್ನ ಮಗಳಿಗೆ ಸೂಕ್ತವಾದ ಗಂಡು ಹುಡುಕುವ ಬಗ್ಗೆ ಸಲಹೆ ಕೇಳಲು ಬ್ರಹ್ಮನನ್ನು ಹುಡುಕಿಕೊಂಡು ಸತ್ಯಲೋಕಕ್ಕೆ ಹೋದನು. ರೇವತಿ ಹಾಗೂ ಕಕುದ್ಮಿ ಅಲ್ಲಿಗೆ ಹೋದಾಗ , ಬ್ರಹ್ಮನು ಗಂಧರ್ವರಾದ ಹಾಹಾ ಮತ್ತು ಹೂಹು ಅವರ ಸಂಗೀತ ಕಾರ್ಯಕ್ರಮವನ್ನು ಕೇಳುತ್ತಿದ್ದನು, ಆದ್ದರಿಂದ ಅವರು ಪ್ರದರ್ಶನ ಮುಗಿಯುವವರೆಗೆ ತಾಳ್ಮೆಯಿಂದ ಕಾದರು. ನಂತರ, ಕಕುದ್ಮಿ ನಮ್ರತೆಯಿಂದ ನಮಸ್ಕರಿಸಿ, ತಾನು ತನ್ನ ಮಗಳಿಗೆ ಹುಡುಕಿದ್ದ ವರರ ಕಿರುಪಟ್ಟಿಯನ್ನು ಪ್ರಸ್ತುತಪಡಿಸುತ್ತಾ ತನ್ನ ಸೂಕ್ತ ವರನನ್ನು ಹುಡುಕಿ ಕೊಡಬೇಕೆಂಬ ತನ್ನ ವಿನಂತಿಯನ್ನು ಮುಂದಿರಿಸಿದನು. ಬ್ರಹ್ಮನು ಮುಗುಳ್ನಕ್ಕು ರಾಜನಿಗೆ ತನ್ನ ಸಾಮ್ರಾಜ್ಯದಲ್ಲಿನ ಗಾಯಕರ ಹಾಡನ್ನು ಕೇಳುತ್ತಿರುವಾಗ ಭೂಮಿಯ ಮೇಲೆ ಅನೇಕ ಯುಗಗಳು ಕಳೆದಿವೆ ಎಂದು ವಿವರಿಸಿದನು. ಅವರೀಗ ಇಪ್ಪತ್ತೆಂಟನೇ ಮನ್ವಂತರವನ್ನು ತಲುಪಿದ್ದಾರೆ ಮತ್ತು ಕಕುದ್ಮಿ ತನ್ನ ಮಗಳಿಗಾಗಿ ಹುಡುಕಿದ್ದ ಅಭ್ಯರ್ಥಿಗಳೆಲ್ಲರೂ ಈಗ ಬಹಳ ಹಿಂದೆಯೇ ಸತ್ತಿದ್ದಾರೆ ಮತ್ತು ಅವರ ವಂಶಸ್ಥರು ಕೂಡಾ ಈಗ ಬದುಕಿಲ್ಲ ಎಂದು ತಿಳಿಸಿದನು. ರೇವತಿಗೆ ಬೇರೊಬ್ಬ ಗಂಡನನ್ನು ಹುಡುಕಲು ಕಕುದ್ಮಿಗೆ ಸಲಹೆ ನೀಡಿದನು. [೨] [೩]
ಈ ಸುದ್ದಿಯನ್ನು ಕೇಳಿದ ರಾಜ ಕಕುದ್ಮಿ ಆಶ್ಚರ್ಯಚಕಿತನಾದನು. ಆದಾಗ್ಯೂ, ಬ್ರಹ್ಮನು ಅವನನ್ನು ಸಾಂತ್ವನಗೊಳಿಸಿದನು ಮತ್ತು ರಕ್ಷಕ ದೇವತೆಯಾದ ವಿಷ್ಣುವು ಪ್ರಸ್ತುತ ಭೂಮಿಯ ಮೇಲೆ ಕೃಷ್ಣ ಮತ್ತು ಬಲರಾಮನ ರೂಪದಲ್ಲಿ ಅವತರಿಸಿದ್ದಾನೆ ಎಂದು ತಿಳಿಸಿದನು. ಅವರು ಬಲರಾಮನನ್ನು ರೇವತಿಗೆ ಯೋಗ್ಯ ವರನೆಂದು ಶಿಫಾರಸು ಮಾಡಿದರು. ಕಕುದ್ಮಿ ಮತ್ತು ರೇವತಿ ನಂತರ ಭೂಮಿಗೆ ಮರಳಿದರು. ಭೂಮಿಗೆ ಮರಳಿದ ನಂತರ ಅವರು ಭೂಮಿಯಲ್ಲಿ ಸಂಭವಿಸಿದ ಬದಲಾವಣೆಗಳಿಂದ ಆಘಾತಕ್ಕೊಳಗಾದರು. ಕೇವಲ ಭೂದೃಶ್ಯ ಮತ್ತು ಪರಿಸರ ಬದಲಾಗಿದೆ, ಆದರೆ ಮಧ್ಯಂತರ ೨೭ ಚತುರ್ಯುಗಗಳಲ್ಲಿ, ಮಾನವಕುಲವು ತಮ್ಮ ಸಮಯದಲ್ಲಿ ಆದ ಅಭಿವೃದ್ಧಿಗಿಂತ ಕಡಿಮೆ ಮಟ್ಟದ ಅಭಿವೃದ್ಧಿಯಲ್ಲಿತ್ತು. ಭಾಗವತ ಪುರಾಣವು "ಈ ಸಮಯದಲ್ಲಿ ಪುರುಷರ ಜನಾಂಗವು ಸ್ಥಳದಲ್ಲಿ ಕ್ಷೀಣಿಸುತ್ತಿದೆ, ಅವರಲ್ಲಿನ ಚೈತನ್ಯವೂ ಕಡಿಮೆಯಾಗುತ್ತದೆ ಮತ್ತು ಬುದ್ಧಿಶಕ್ತಿಯೂ ದುರ್ಬಲವಾಗುತ್ತದೆ" ಎಂದು ವಿವರಿಸಿದೆ. ಅವರ ಕುಶಸ್ಥಲಿ ನಗರವನ್ನು ಈಗ ದ್ವಾರಕಾ ಎಂದು ಕರೆಯಲಾಯಿತು. ಇಬ್ಬರೂ ಬಲರಾಮನನ್ನು ಕಂಡು ಮದುವೆಯನ್ನು ಪ್ರಸ್ತಾಪಿಸಿದರು, ಅದನ್ನು ಬಲರಾಮನು ಒಪ್ಪಿಕೊಂಡನು. ತನ್ನ ವಧು ತನಗಿಂತ ಎತ್ತರವಾಗಿರುವುದನ್ನು ಕಂಡು ಬಲರಾಮನು ತನ್ನ ನೇಗಿಲಿನಿಂದ ಅವಳ ತಲೆಯ ಮೇಲೆ ತಟ್ಟಿದನು, ಅದು ಅವಳನ್ನು ಆ ವಯಸ್ಸಿನ ಮಾನವರ ಸರಾಸರಿ ಗಾತ್ರಕ್ಕೆ ಇಳಿಸಿತು. [೪]
ತಪಸ್ಸು
[ಬದಲಾಯಿಸಿ]ತನ್ನ ಮಗಳ ಮದುವೆಯನ್ನು ನಡೆಸಿಕೊಟ್ಟ ನಂತರ, ಕಕುದ್ಮಿ ತನ್ನ ತಂದೆಯ ಕರ್ತವ್ಯಗಳು ಪೂರ್ಣಗೊಂಡಿದೆ ಎಂದು ಪರಿಗಣಿಸಿದನು. ಅವನು ಬ್ರಹ್ಮನನ್ನು ಭೇಟಿಯಾದ ಸಮಯದಲ್ಲಿ ಬ್ರಹ್ಮ ಅವನಿಗೆ ನೀಡಿದ ಸಲಹೆಯನ್ನು ಮೇರೆಗೆ, ಅವನು ಧ್ಯಾನ ಮತ್ತು ತಪಸ್ಸಿನ ಅಭ್ಯಾಸ ಮಾಡಲು ಉತ್ತರ ಹಿಮಾಲಯದ, ಬದರಿನಾಥಕ್ಕೆ ಹೋದನು.
ದೇವಿ ಭಾಗವತವು "ಬ್ರಹ್ಮನ ಅಪ್ಪಣೆಯಂತೆ ಕಕುದ್ಮಿ ಬದರಿನಾಥದಲ್ಲಿ ಕಠೋರ ತಪಸ್ಸಿನಲ್ಲಿ ನಿರತನಾದನು ಮತ್ತು ಮರಣದ ಸಮಯ ಬಂದಾಗ ನದಿಯ ದಡದಲ್ಲಿ ಭೂಲೋಕ ತ್ಯಜಿಸಿ ದೇವಲೋಕಕ್ಕೆ ಹೋದನು" ಎಂದು ವಿವರಿಸುತ್ತದೆ. [೫]
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Bhag-P, 9.3.32 (see texts 27-28)
- ↑ Vishnu-Purana (see Book IV, chap I)
- ↑ Bhag-P, 9.3.32 (see texts 29-32)
- ↑ Ph.D, Lavanya Vemsani (2016-06-13). Krishna in History, Thought, and Culture: An Encyclopedia of the Hindu Lord of Many Names: An Encyclopedia of the Hindu Lord of Many Names (in ಇಂಗ್ಲಿಷ್). ABC-CLIO. p. 233. ISBN 978-1-61069-211-3.
- ↑ Devi Bhagavatam, 7.8 (see texts 44-46)