ವಿಷಯಕ್ಕೆ ಹೋಗು

ಸದಸ್ಯ:Ishwaragouda Patil/ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗಮೇಶ್ವರ ದೇವಸ್ಥಾನ, ಪಟ್ಟದಕಲ್ಲು, ನಿರ್ಮಾಣ ಕ್ರಿ.ಶ. ೭೨೫

ಭಾರತಕರ್ನಾಟಕ ರಾಜ್ಯದ ಪ್ರಸ್ತುತ ಬಾಗಲಕೋಟೆ ಜಿಲ್ಲೆಯಲ್ಲಿನ ಮಲಪ್ರಭಾ ನದಿ ತೀರದಲ್ಲಿ, ೫ ರಿಂದ ೮ನೇ ಶತಮಾನಗಳಲ್ಲಿ ಅಸ್ತಿತ್ವದಲ್ಲಿದ್ದ ಚಾಲುಕ್ಯರ ಆಡಳಿತಾವಧಿಯಲ್ಲಿ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ ಎಂಬ ದೇಗುಲ ಕಟ್ಟಡ ವಿನ್ಯಾಸ ವಿಕಸನಗೊಂಡಿತು. ಈ ವಾಸ್ತು ಪ್ರಕಾರವನ್ನು ವೇಸರ ಶೈಲಿ ಮತ್ತು ಚಾಲುಕ್ಯ ಶೈಲಿ ಎಂದಾಗಿಯೂ ಕರೆಯಲಾಗುತ್ತದೆ. ಅದಾಗ್ಯೂ ಈ ಪದವು 11 ಮತ್ತು 12 ನೇ ಶತಮಾನಗಳ ನಂತರದ ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪವನ್ನೂ ಒಳಗೊಂಡಿದೆ. ಜಾರ್ಜ್ ಮಿಚೆಲ್ ಮತ್ತು ಇತರರು ಬಳಸಿದ ಆರಂಭಿಕ ಚಾಲುಕ್ಯ ವಾಸ್ತುಶಿಲ್ಪವು ಬಾದಾಮಿ ಚಾಲುಕ್ಯಕ್ಕೆ ಸಮನಾಗಿದೆ. ಬಾದಾಮಿಯ ಚಾಲುಕ್ಯರು ಬನವಾಸಿಯ ಕದಂಬರ ಸಾಮಂತರಾಗಿದ್ದಾಗ ಬಾದಾಮಿ ಚಾಲುಕ್ಯರ ದೇವಾಲಯಗಳು ಕ್ರಿ.ಶ. 450 ರ ಐಹೊಳೆಯಲ್ಲಿವೆ . ಇತಿಹಾಸಕಾರ ಕೆ.ವಿ. ಸೌಂದರ್ ರಾಜನ್ ಅವರ ಪ್ರಕಾರ, ಬಾದಾಮಿ ಚಾಲುಕ್ಯರು ದೇವಾಲಯ ನಿರ್ಮಾಣಕ್ಕೆ ನೀಡಿದ ಕೊಡುಗೆಯು ಯುದ್ಧದಲ್ಲಿನ ಅವರ ಶೌರ್ಯ ಮತ್ತು ಸಾಧನೆಗಳಿಗೆ ಸಮನಾಗಿದೆ.

ಸುಮಾರು ಕ್ರಿ.ಶ. 450 ರಲ್ಲಿ ಐಹೊಳೆ ಎಂಬಲ್ಲಿ ಚಾಲುಕ್ಯ ಶೈಲಿಯ ಉಗಮವಾಯಿತು ಮತ್ತು ಕರ್ನಾಟಕದ ಬಾದಾಮಿ ಮತ್ತು ಪಟ್ಟದಕಲ್ಲು ಎಂಬಲ್ಲಿ ಪರಿಪೂರ್ಣವಾಯಿತು. ಕೆಲವು ಅಜ್ಞಾತ ವಾಸ್ತುಶಿಲ್ಪಿಗಳು ಮತ್ತು ಕಲಾವಿದರು, ನಾಗರ ಮತ್ತು ದ್ರಾವಿಡ ಶೈಲಿಗಳ ವಿಭಿನ್ನ ಶೈಲಿಗಳ ಸಂಯೋಜನೆಯ ಮೂಲಕ ಚಾಲುಕ್ಯ ಶೈಲಿಯ ಮೇಲೆ ವಿವಿಧ ಪ್ರಯೋಗಗಳನ್ನೂ ಮಾಡಿದರು.

ಇವರ ವಾಸ್ತುಶಿಲ್ಪ ಶೈಲಿಯಲ್ಲಿ ಎರಡು ಬಗೆಯ ಸ್ಮಾರಕಗಳಿವೆ, ಒಂದು: ಬಂಡೆಗಳನ್ನು ಕತ್ತರಿಸಿದ ಪ್ರಾಂಗಣಗಳು ಅಥವಾ "ಗುಹಾಂತರ ದೇವಾಲಯಗಳು", ಮತ್ತು ಇನ್ನೊಂದು ಭೂಮಿಯ ಮೇಲೆ ನಿರ್ಮಿಸಲಾದ "ರಚನಾತ್ಮಕ" ದೇವಾಲಯಗಳು, .

ಬಾದಾಮಿ ಗುಹಾಂತರ ದೇವಾಲಯಗಳು

[ಬದಲಾಯಿಸಿ]
ಕರ್ನಾಟಕದ ಬಾದಾಮಿಯಲ್ಲಿರುವ ಗುಹಾಂತರ ದೇವಾಲಯ
ಭೂತನಾಥ ದೇವಾಲಯ

ಬಾದಾಮಿ ಗುಹಾಂತರ ದೇವಾಲಯಗಳಲ್ಲಿ ಮೂರು ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಪ್ರಾಂಗಣಗಳಿವೆ. ಅವುಗಳೆಂದರೆ, ಸ್ತಂಭಗಳ ಜಗುಲಿ, ಅಡ್ಡ ಕಂಬಗಳ ಜಗುಲಿ ಮತ್ತು ಬಂಡೆಯನ್ನು ಆಳದವರೆಗೆ ಕೊರೆದು ರೂಪಿಸಲಾದ ಗರ್ಭಗುಡಿ.

ಬಂಡೆಯನ್ನು ಕೊರೆದು ದೇವಾಲಯಗಳ ನಿರ್ಮಾಣ ಕಾರ್ಯವನ್ನು ಮೊದಲು ಐಹೊಳೆಯಲ್ಲಿ ಕೈಗೊಳ್ಳಲಾಯಿತು. ಅಲ್ಲಿ ಮೂರು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಮೂರು ದೇವಾಲಯಗಳೂ ವೈದಿಕ, ಬೌದ್ಧ ಮತ್ತು ಜೈನ ಶೈಲಿಗಳಲ್ಲಿ ನಿರ್ಮಾಣಗೊಂಡಿವೆ. ನಂತರದಲ್ಲಿ ಅವರು ತಮ್ಮ ಶೈಲಿಯನ್ನು ಪರಿಷ್ಕರಿಕೊಂಡು, ಬಾದಾಮಿಯಲ್ಲಿ ನಾಲ್ಕು ಅದ್ಭುತವಾದ ಗುಹಾಂತಹ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿನ ಪ್ರತಿ ಸ್ತಂಭದ ಮೇಲೆ ವಿಭಿನ್ನ ಗಣಗಳು ವಿವಿಧ ಮನೋರಂಜನಾ ಭಂಗಿಗಳಲ್ಲಿ ಓಡಾಡುತ್ತಿರುವ ಕಲಾ ಕೌಶಲ್ಯ ಗಮನಾರ್ಹವಾಗಿದೆ.

ಗುಹಾಂತರ ದೇವಾಲಯಗಳ ಹೊರಭಾಗದಲ್ಲಿನ ಜಗುಲಿಗಳು ಸಮತಟ್ಟಾಗಿವೆಯಾದರೂ, ಒಳಾಂಗಣದಲ್ಲಿರುವ ಸಭಾಂಗಣವು ಶ್ರೀಮಂತ ಮತ್ತು ಸಮೃದ್ಧ ಶಿಲ್ಪಕಲೆಯ ಸಂಕೇತಗಳನ್ನು ಒಳಗೊಂಡಿವೆ. ಅವರು ದೈತ್ಯರಂತೆ ಬಂಡೆಗಳನ್ನು ಕೊರೆಯುತ್ತಾರೆ ಆದರೆ ನುರಿತ ಅಕ್ಕಸಾಲಿಗರಂತೆ ಅವುಗಳಿಗೆ ಕಲೆಯ ಮೆರಗು ನೀಡುತ್ತಾರೆ ಎಂದು ಕಲಾ ವಿಮರ್ಶಕರಾದ ಡಾ.ಎಂ.ಶೇಷಾದ್ರಿ ಅವರು ಚಾಲುಕ್ಯ ಕಲೆಯ ಬಗ್ಗೆ ಉಲ್ಲೇಖಿಸಿದ್ದಾರೆ. ವಿಮರ್ಶಕ ಜಿಮ್ಮರ್ ಕೂಡ, ಚಾಲುಕ್ಯರ ಗುಹಾಂತರ ದೇವಾಲಯಗಳು ಸಮತೋಲಿತ ಬಹುಮುಖ ಮತ್ತು ಸಂಯಮ ಸಂಲಗ್ನವಾಗಿವೆ ಎಂದು ನಮೂದಿಸಿದ್ದಾರೆ.

ಅತ್ಯುತ್ತಮ ರಚನಾತ್ಮಕ ದೇವಾಲಯಗಳು ಪಟ್ಟದಕಲ್ಲಿನಲ್ಲಿ ಕಂಡುಬರುತ್ತವೆ. ಪಟ್ಟದಕಲ್ಲಿನ ಹತ್ತು ದೇವಾಲಯಗಳಲ್ಲಿ ಆರು ದೇವಾಲಯಗಳು ದ್ರಾವಿಡ ಶೈಲಿಯಲ್ಲಿ ಮತ್ತು ನಾಲ್ಕು ರೇಖಾನಗರ ಶೈಲಿಯಲ್ಲಿವೆ. ವಿರೂಪಾಕ್ಷ ದೇವಾಲಯವು ಹಲವಾರು ವಿಧಗಳಲ್ಲಿ ಕೆಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಚೀಪುರದ ಕೈಲಾಸನಾಥ ದೇವಾಲಯವನ್ನು ಹೋಲುತ್ತದೆ.

ಇದೊಂದು ಸಮಗ್ರ ದೇವಸ್ಥಾನವಾಗಿದ್ದು, ಈ ದೇವಸ್ಥಾನದಲ್ಲಿ ಮಧ್ಯದ ರಚನೆಯಿದೆ, ಮುಂಭಾಗದಲ್ಲಿ ನಂದಿ ಮಂಟಪವಿದೆ ಮತ್ತು ಪ್ರಮುಖ ದ್ವಾರದ ಮೂಲಕ ಪ್ರವೇಶಿಸುವ ಗೋಡೆಯ ಆವರಣವಿದೆ. ಮುಖ್ಯ ಗರ್ಭಗುಡಿಯಲ್ಲಿ ಪ್ರದಕ್ಷಿಣಪಥ ಮತ್ತು ಮಂಟಪವಿದೆ . ಮಂಟಪವು ಕಂಬಗಳಿಂದ ಕೂಡಿದ್ದು ರಂಧ್ರಗಳಂತಹ ಕಿಟಕಿಗಳನ್ನು ಹೊಂದಿದೆ (ಛೇದಿಸಲಾದ ಕಿಟಕಿ ಪರದೆ). ಹೊರ ಗೋಡೆಯ ಮೇಲ್ಮೈಯನ್ನು ಸಮನಾದ ಚೌಕಟ್ಟುಗಳಿಂದ ಸಿಂಗರಿಸಿ, ಕೆತ್ತನೆಗಳು ಅಥವಾ ರಂಧ್ರಗಳಂತಹ ಕಿಟಕಿಗಳಿಂದ ತುಂಬಿದ ಉತ್ತಮ ಅಲಂಕಾರಿಕ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ನಿರಂತರ ಹರಿಯುವ ನೀರಿನಂತೆ ಇಲ್ಲಿನ ವಾಸ್ತುಶಿಲ್ಪವು ನಿರಂತರವಾಗಿ ಹರಿಯುತ್ತಿರುತ್ತದೆ ಎಂದು ಕಲಾ ವಿಮರ್ಶಕ ಪರ್ಸಿ ಬ್ರೌನ್ ಉಲ್ಲೇಖಿಸಿದ್ದಾರೆ. ಇದನ್ನು ನಿರ್ಮಿಸಿದ ಜೀವಗಳು, ಇನ್ನೂ ಇಲ್ಲಿ ಜೀವ ಚೈತನ್ಯದೊಂದಿಗೆ ನೆಲೆಸಿವೆ ಎಂಬಂತೆ ಗೋಚರಿಸುವ ಸ್ಮಾರಕಗಳಲ್ಲಿ ವಿರೂಪಾಕ್ಷ ದೇವಸ್ಥಾನವೂ ಒಂದು ಎನ್ನಲಾಗುತ್ತದೆ.

ಹಲವು ಶತಮಾನಗಳ ನಂತರ, ಬಾದಾಮಿ ಚಾಲುಕ್ಯರ ಪ್ರಶಾಂತ ಕಲೆಯು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದಲ್ಲಿ ಪುನಃ ಸ್ತಂಭಗಳ ರೂಪದಲ್ಲಿ ಕಾಣಿಸಿಕೊಂಡಿತು. ಇವರು ನಿರ್ಮಿಸಿದ ಗುಹೆಗಳಲ್ಲಿ ನುಣುಪಾಗಿ ಕೆತ್ತಿದ ಹರಿಹರ, ತ್ರಿವಿಕ್ರಮ, ಮಹಿಷ ಮರ್ದಿನಿ, ತಾಂಡವಮೂರ್ತಿ, ಪರವಸುದೇವ, ನಟರಾಜ, ವರಾಹ, ಗೊಮ್ಮಟೇಶ್ವರ ಮತ್ತು ಇನ್ನಿತರ ಶಿಲ್ಪಗಳೂ ಸೇರಿವೆ. ಸಾಕಷ್ಟು ಪ್ರಾಣಿ ಮತ್ತು ಎಲೆಗಳ ಗೊಂಚಲಿನ ಲಕ್ಷಣಗಳನ್ನು ಸಹ ಸೇರಿಸಲಾಗಿದೆ.

ಅವರ ಕಾಲದ ಕೆಲವು ಪ್ರಮುಖ ಶಿಲ್ಪಿಗಳು ಗುಂಡನ್ ಅನಿವಾರಿತಾಚಾರಿ, ರೇವಡಿ ಓವಜ್ಜ ಮತ್ತು ನರಸೊಬ್ಬ.

ಪಟ್ಟದಕಲ್ಲಿನ ವಿರೂಪಾಕ್ಷ ದೇವಸ್ಥಾನ
ರಾವಣ ಫಡಿ ಗುಹೆ, ಐಹೊಳೆ

ಪಟ್ಟದಕಲ್ಲು

  • ವಿರೂಪಾಕ್ಷ ದೇವಸ್ಥಾನ
  • ಸಂಗಮೇಶ್ವರ ದೇವಸ್ಥಾನ
  • ಕಾಶಿವಿಶ್ವನಾಥ ದೇವಸ್ಥಾನ ( ರಾಷ್ಟ್ರಕೂಟ )
  • ಮಲ್ಲಿಕಾರ್ಜುನ ದೇವಸ್ಥಾನ
  • ಗಳಗನಾಥ ದೇವಸ್ಥಾನ
  • ಕಾಡಸಿದ್ದೇಶ್ವರ ದೇವಸ್ಥಾನ
  • ಜಂಬೂಲಿಂಗ ದೇವಸ್ಥಾನ
  • ಜೈನ ನಾರಾಯಣ ದೇವಸ್ಥಾನ (ರಾಷ್ಟ್ರಕೂಟ)
  • ಪಾಪನಾಥ ದೇವಸ್ಥಾನ
  • ಹೊರಾಂಗಣ ಮತ್ತು ಶಿಲ್ಪಕಲಾ ಗ್ಯಾಲರಿಯ ವಸ್ತುಸಂಗ್ರಹಾಲಯ
  • ನಾಗನಾಥ ದೇವಸ್ಥಾನ
  • ಚಂದ್ರಶೇಖರ
  • ಮಹಾಕೂಟೇಶ್ವರ ದೇವಸ್ಥಾನ
  • ಸೂರ್ಯ ದೇವಸ್ಥಾನ
ಜೈನ ತೀರ್ಥಂಕರ ಪಾರ್ಶ್ವನಾಥ, ಗುಹೆ ಸಂಖ್ಯೆ 4, ಬದಾಮಿ ಗುಹಾಂತರ ದೇವಾಲಯಗಳು
  • ಲಾಡ್ ಖಾನ್ ದೇವಸ್ಥಾನ
  • ಹುಚ್ಚಿಯಪ್ಪಯ್ಯಗುಡಿ ದೇವಸ್ಥಾನ
  • ಹುಚ್ಚಿಯಪ್ಪಯ್ಯ ಮಠ
  • ದುರ್ಗಾ ದೇವಸ್ಥಾನ
  • ಮೇಗುತಿ ಜೈನ ದೇವಸ್ಥಾನ
  • ರಾವಣಫಡಿ ದೇವಸ್ಥಾನ
  • ಗೌಡ ದೇವಸ್ಥಾನ
  • ವಸ್ತು ಸಂಗ್ರಹಾಲಯ ಮತ್ತು ಆರ್ಟ್ ಗ್ಯಾಲರಿ
  • ಸೂರ್ಯನಾರಾಯಣ ದೇವಸ್ಥಾನ

ಗೇರುಸೊಪ್ಪ

  • ವರ್ಧಮಾನಸ್ವಾಮಿ ದೇವಸ್ಥಾನ

ಸಂಡೂರು

  • ಪಾರ್ವತಿ ದೇವಸ್ಥಾನ

ಆಲಂಪುರ್, ಆಂಧ್ರಪ್ರದೇಶ

  • ನವಬ್ರಹ್ಮ ದೇವಸ್ಥಾನಗಳು
  • ಕುಡವೆಲ್ಲಿ ಸಂಗಮೇಶ್ವರ ದೇವಸ್ಥಾನ

ಉಲ್ಲೇಖಗಳು

[ಬದಲಾಯಿಸಿ]

 

ಟಿಪ್ಪಣಿಗಳು

[ಬದಲಾಯಿಸಿ]
  • ನೀಲಕಂಠ ಶಾಸ್ತ್ರಿ, ಕೆ.ಎ. (1955). ದಕ್ಷಿಣ ಭಾರತದ ಇತಿಹಾಸ, ಇತಿಹಾಸಪೂರ್ವ ಕಾಲದಿಂದ ವಿಜಯನಗರ ಪತನದವರೆಗೆ, ಒಯುಪಿ, ನವದೆಹಲಿ (ಮರು ಮುದ್ರಣ 2002).
  • ಡಾ.ಸೂರ್ಯನಾಥ ಯು.ಕಾಮತ್ (2001). ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಎಂಸಿಸಿ, ಬೆಂಗಳೂರು (ಮರುಮುದ್ರಣ 2002).
  • ಕರ್ನಾಟಕದ ಇತಿಹಾಸ, ಶ್ರೀ ಆರ್ಥಿಕಾಜೆ © 1998-00 OurKarnataka.com

ಬಾಹ್ಯ ಕೊಂಡಿಗಳು

[ಬದಲಾಯಿಸಿ]

[[ವರ್ಗ:Category:ಭಾರತೀಯ ವಾಸ್ತುಶೈಲಿಯ ಇತಿಹಾಸ]]