ಸದಸ್ಯ:Harsha Priyanka Chopra

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರಿಯಾಂಕ.ಜಿ ನಾನು ಕ್ರೈಸ್ಟ್ ಯೂನಿವರ್ಸಿಟಿ, ಹೊಸೂರ್ ರೋಡ್ , ಬೆಂಗಳೂರಿನಲ್ಲಿ ಓದುತಿದ್ದೇನೆ.

ಪರಿಚಯ[ಬದಲಾಯಿಸಿ]

ನಾನು ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವಳಾಗಿದ್ದು, ನನ್ನ ಮಾತೃಭಾಷೆ ಕನ್ನಡವಾಗಿದೆ. ನನ್ನ ತಂದೆಯ ಹೆಸರು ಗುಣಶೇಖರ್.ನನ್ನ ತಾಯಿಯ ಹೆಸರು ಶೋಭಾ.ನನ್ನ ತಂಗಿಯ ಹೆಸರು ಶಾಲಿನಿ.ಜಿ. ಅವಳು ಪ್ರಥಮ ಪಿ.ಯು.ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜು , ಹೊಸೂರ್ ರೋಡ್,ಬೆಂಗಳೂರಿನಲ್ಲಿ ಓದುತಿದ್ದಾಳೆ.ನಾನು ಎಲ್.ಕೆ.ಜಿ ಮತ್ತು ಯು.ಕೆ.ಜಿ ಯನ್ನು ಮೈಸೂರಿನಲ್ಲಿ ಮುಗಿಸಿದ್ದು,ನನ್ನ ಪ್ರೈಮರಿ ಮತ್ತು ಹೈಸ್ಕೂಲನ್ನು ಬೆಂಗಳೂರಿನ ಕ್ರೈಸ್ಟ್ ಕನ್ನಡ ಶಾಲೆಯಲ್ಲಿ ಓದಿದ್ದು ,ಪಿ.ಯು.ಸಿ ಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜುನಲ್ಲಿ ಪೂರ್ಣಗೊಳಿಸಿದ್ದೇನೆ.ಪ್ರಸ್ತುತ ಪ್ರಥಮ ಬಿ.ಎಸ್ಸಿ ಯಲ್ಲಿ ಪಿ.ಸಿ.ಮ್ ಅನ್ನು ಕ್ರೈಸ್ಟ್ ಯೂನಿವರ್ಸಿಟಿ,ಹೊಸೂರ್ ರೋಡ್,ಬೆಂಗಳೂರುನಲ್ಲಿ ವ್ಯಾಸಂಗ ಮಾಡುತಿದ್ದೇನೆ.    

ಹವ್ಯಾಸ[ಬದಲಾಯಿಸಿ]

ನನಗೆ ಸಾಕಷ್ಟು ಹವ್ಯಾಸಗಳಿವೆ. ನಾನು ಬಿಡುವಿನ ಸಮಯದಲ್ಲಿ ಅಂಗಳದ ಗಿಡಗಳಿಗೆ ನೀರನ್ನು ಹಾಕುವ ಹಾಗೂ ಊರಿಗೋದಾಗ ಅಲ್ಲಿನ ಮರಗಳಿಗೆ ನೀರನ್ನು ಹಾಕುವ ಹವ್ಯಾಸ ಹೊಂದಿದ್ದೇನೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದು ಸಮಯ ಸಿಕ್ಕಾಗಲೆಲ್ಲ ಓದುತಲ್ಲೆ ಇರುತ್ತೇನೆ.ನಾನು ಹಲವಾರು ಪುಸ್ತಕಗಳನ್ನು ಓದಿದ್ದು ಅದರಲ್ಲಿ, ವಿನಾಯಕ ಕೃಷ್ಣ ಗೋಕಾಕ, ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಎಸ್.ನಿಸಾರ್ ಅಹಮದ್, ಪಂಪ, ರನ್ನ, ಚಂದ್ರಶೇಖರ ಕಂಬಾರ, ಷೇಕ್ಸ್ ಪಿಯರ್, ವಿಲಿಯಂ ವರ್ಡ್ಸ್‌ವರ್ತ್,ಬಸವಣ್ಣ, ಅಕ್ಕಮಹಾದೇವಿ ಯವರ ಮುಂತಾದ ಕೃತಿಗಳನ್ನು ಓದಿದ್ದೇನೆ. ನನಗೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವನ್ನೂ ಹೊಂದಿದ್ದೇನೆ.ಅದರಲ್ಲೂ ಷಡಕ್ಷರಿಯವರ 'ಕ್ಷಣ ಹೊತ್ತು ಆಣಿ ಮುತ್ತು' ನನಗೆ ಅತ್ಯಂತ ಪ್ರಿಯವಾದ ಪುಸ್ತಕವಾಗಿದೆ ಹಾಗೂ 'ಪಂಚತಂತ್ರ' ಪುಸ್ತಕವೂ ಅಚ್ಚುಮೆಚ್ಚಿನ ಪುಸ್ತಕಗಳಲ್ಲೊಂದಾಗಿದೆ. .

ಆಸಕ್ತಿ[ಬದಲಾಯಿಸಿ]

ಮೈಸೂರು ಅರಮನೆ

ಕ್ರೀಡೆಯಲ್ಲಿ ನನಗೆ ತುಂಬ ಆಸಕ್ತಿಯಿದ್ದು ಬಾಸ್ಕೆಟ್ ಬಾಲ್, ಫುಟ್ಬಾಲ್, ಬ್ಯಾಡ್ಮಿಂಟನ್‌, ಕ್ರಿಕೆಟ್, ರನ್ನಿಂಗ್ ರೇಸ್, ಕೊಕ್ಕೋ, ಟೆನ್ನಿಸ್ ಗಳಲ್ಲಿ ಯಾವಾಗಲು ಮುಂದಿದ್ದೇನೆ. ನನಗೆ ಪ್ರಾಣಿ, ಪಕ್ಷಿಗಳೆಂದರೆ ತುಂಬ ಪ್ರೀತಿ. ಅದರಲ್ಲೂ ನಾಯಿ ಎಂದರೆ ಅಚ್ಚುಮೆಚ್ಚು. ನಮ್ಮ ಊರಿನಲ್ಲಿ ನಾನು ಎರಡು ನಾಯಿಗಳನ್ನು ಸಾಕಿಕೊಂಡಿದ್ದೇವೆ. ನನಗೆ ಪ್ರವಾಸವೆಂದರೆ ಹುಚ್ಚು. ನಾನು ಇದುವರೆಗೆ ಅರಮನೆ ನಗರಿ  ಮೈಸೂರು, ಡೆಲ್ಲಿ, ಮಲೇಷ್ಯಾ, ಚೆನ್ನೈ,ಹೈದರಾಬಾದ್‌, ತೆಲಂಗಾಣ ನಗರಗಳಿಗೆ ಪ್ರಯಾಣ ಬೆಳೆಸಿದ್ದೇನೆ. ನನಗೆ ಸಿಹಿ ತಿಂಡಿಗಳೆಂದರೆ ತುಂಬ ಇಷ್ಟ. ನನಗೆ ಸ್ವೀಟ್ ನಲ್ಲಿ ಮೈಸೂರು ಪಾಕ್, ಚಂಪಾಕಲಿ ,ಗುಲಾಬ್ ಜಾಮುನ್, ಬರ್ಫಿ ,ರಸಗುಲ್ಲ ಗಳೆಂದರೆ ಪಂಚಪ್ರಾಣ.

ಸಾಧನೆ[ಬದಲಾಯಿಸಿ]

  1. ಚರ್ಚಾಸ್ಪರ್ಧೆಗಲ್ಲಿ ೧ನೇ ಇಲ್ಲವೇ ೨ನೇ ಬಹುಮಾನಗಳಿಸಿದವಳಾಗಿದ್ದೇನೆ.
  2. ಪ್ರಬಂಧದ ಯಾವುದೇ ಸ್ಪರ್ಧೆಗಳಲ್ಲಿ ೧ನೇ ಬಹುಮಾನವನ್ನುಗೆದ್ದವಳಾಗಿದ್ದೇನೆ.
  3.  ಆಂತರಿಕ-ಶಾಲಾ ಭಾಷಣ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದೇನೆ.
  4. ಸಂಗೀತ ಸ್ಪರ್ದೆಗಳಲ್ಲಿ ಸ್ಪರ್ಧಿಸಿ ಹಲವಾರು ಬಹುಮಾನಗಳಿಸಿದ್ದೇನೆ.


ಉಲ್ಲೇಖಗಳು[ಬದಲಾಯಿಸಿ]