ಸದಸ್ಯ:169meghana

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ,

Abdul kalam.jpg

ನನ್ನ ಹೆಸರು ಮೇಘನ.ಯು. ನನ್ನ ತಂದೆಯ ಹೆಸರು ಉಮೇಶ್. ಎನ್ ಹಾಗೂ ತಾಯಿ ಗಾಯಿತ್ರಿ.ಎನ್. ನಾನು ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲೇ. ನನ್ನ ಹುಟ್ಟಿದ ದಿನಾಂಕ ೦೭-೦೭-೧೯೯೯. ಪ್ರಸ್ತುತ ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೇ ಹೊಸ ಹೊಸ ವಿಷಯಗಳನ್ನು ಕಲಿಯುವುದೆಂದರೆ ಬಹಳ ಆಸಕ್ತಿ. ಆ ಕಲಿಕೆಗಳನ್ನು ನಾನು ದಿನನಿತ್ಯ ಅಳವಡಿಸಿಕೊಂಡೇ ಇಲ್ಲಿಯವರೆಗೂ ಬಂದಿದ್ದೇನೆ. ನನಗೆ ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ನನ್ನ ಪೋಷಕರೇ ಆದರ್ಶ ವ್ಯಕ್ತಿಗಳು. ನನ್ನ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಎಲ್ಲವೂ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯಲ್ಲೇ ಆಗಿದ್ದೂ.

ಬಾಲ್ಯದ ದಿನಗಳು[ಬದಲಾಯಿಸಿ]

ನನಗೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದೇ ಒಂದು ಸವಿ ನೆನಪು. ಏಕೆಂದರೆ ನನ್ನ ಬಾಲ್ಯದ ಸ್ನೇಹಿತರು, ಶಾಲೆಯ ಶಿಕ್ಷಕರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಎಲ್ಲಾ ವಿಷಯದಲ್ಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನಾನು ಅವರ ಜೊತೆ ಇದ್ದಾಗ ನನಗೆ ದಿನ ಕಳೆಯುತ್ತಿದ್ದುದ್ದೇ ಗೊತ್ತಾಗುತ್ತಿರಲಿಲ್ಲ. ಸ್ನೇಹಿತರೊಡನೆ ಕಾಲ ಕಳೆಯುವುದು, ಅವರೊಡನೆ ಹರಟೆ ಹೊಡೆಯುವುದು, ಚಿಕ್ಕ ಚಿಕ್ಕ ವಿಷಯಕ್ಕೂ ಜಗಳವಾಡುವುದು, ಶಿಕ್ಷಕರು ಪಾಠ ಮಾಡುತ್ತಿದ್ದರೆ ಏನಾದರೂ ಹಾಸ್ಯ ಮಾಡುವುದು ಇವೆಲ್ಲಾ ನನ್ನನ್ನು ಈಗಲೂ ತುಂಬಾ ಕಾಡುತ್ತಿರುತ್ತದೆ.ನಂತರ ನನ್ನ ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಓದಿದೆ. ಅಲ್ಲಿ ನಾನು ತುಂಬಾ ವಿಚಾರಗಳನ್ನು ಕಲಿತೆ. ದೇಶದ ಹಲವಾರು ಪ್ರದೇಶಗಳಿಂದ ವಿದ್ಯಾರ್ಥಿಗಳು ಬಂದಿದ್ದರು.ಅವರೊಡನೆ ಹೇಗೆ ಹೊಂದಿಕೊಂಡು ಹೋಗುವುದೆಂಬುದು ನನಗೆ ಚಿಂತೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಅವರೆಲ್ಲರೂ ನನ್ನಂತೆಯೇ ಒಬ್ಬ ವಿದ್ಯಾರ್ಥಿಗಳು, ಕಲಿಯಲು ಬರುವರೆಲ್ಲರಲ್ಲಿಯೂ ಯಾವುದೇ ಬೇಧ ಭಾವವಿರುವುದಿಲ್ಲವೆಂದು ನನಗೆ ತಿಳಿಯಿತು. ಅಲ್ಲಿಯೂ ನನಗೆ ಹೊಸ ಹೊಸ ಸ್ನೇಹಿತರು ಪರಿಚಯವಾದರು. ಅಲ್ಲಿಯೂ ಹೇಗೆ ಎರಡು ವರ್ಷ ಕಳೆಯಿತೆಂದೇ ಗೊತ್ತಾಗಲಿಲ್ಲ. ಈ ಕಾಲೇಜಿನಲ್ಲಿ ಎಲ್ಲರಿಗೂ ಕಲಿಯುವ ವಿಚಾರಗಳು ಬಹಳಷ್ಟಿದ್ದವು. ಬರುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂಬುದು, ಯಾವುದಕ್ಕೂ ಹಿಂಜರಿಯಬಾರದೆಂಬುದು, ಸಾರ್ವಜನಿಕ ಭಾಷಣಗಳಲ್ಲಿ ಸ್ಪರ್ಧಿಸುವುದೇಗೆ, ನಮ್ಮಲ್ಲಿ ಆತ್ಮ ವಿಶ್ವಾಸವನ್ನುಗಳಿಸುವುದೇಗೆ ಈ ಎಲ್ಲಾ ವಿಚಾರಗಳನ್ನು ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲೇ ಕಲಿತದ್ದು.

ಆಸಕ್ತಿಗಳು[ಬದಲಾಯಿಸಿ]

ನನಗೆ ಚಿತ್ರ ಬಿಡಿಸುವುದು, ನೃತ್ಯ, ಪ್ರಬಂಧ ಬರೆಯುವುದು,ನಾಟಕಗಳನ್ನು ನೋಡುವುದು ಹಾಡುಗಾರಿಕೆಯಲ್ಲಿ ಬಹಳಷ್ಟು ಆಸಕ್ತಿ. ಇವೇ ನನ್ನ ಸಾಮರ್ಥ್ಯಗಳು. ಕಾಲೇಜಿನಲ್ಲೂ ಸಹ ನಾನು ಚಿತ್ರ ಬಿಡಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುವೆ.

ದೌರ್ಬಲ್ಯಗಳು[ಬದಲಾಯಿಸಿ]

ನಾನು ನಿರಾಸಕ್ತಿ ತೋರಿಸುವುದೆಂದರೆ ಆಟವಾಡುವುದು ಅಂದರೆ ಕ್ರೀಡೆಗಳು. ನನ್ನನ್ನು ನಾನು ಯಾವ ಕ್ರೀಡೆಯಲ್ಲೂ ತೋಡಗಿಸಿಕೊಳ್ಳುವುದಿಲ್ಲ. ನನ್ನ ದೌರ್ಬಲ್ಯಗಳೆನೆಂದರೆ ಬೇಗ ಜನರನ್ನು ನಂಬುವುದು, ಒಟ್ಟಿಗೆ ಎರಡು ಕೆಲಸಗಳ ಮೇಲೆ ಏಕಾಗ್ರತೆ ಇಲ್ಲದಿರುವುದು ಹಾಗೂ ನಾನು ಅಲ್ಪ ಮತ್ತು ವಿಷಾದ ಮನೋಭಾವದ ಹುಡುಗಿ. ನನಗೆ ಪ್ರತಿಯೊಂದು ವಿಷಯಕ್ಕೂ ಕೋಪ ಬಹಳ ಬೇಗ ಬರುತ್ತದೆ ಮತ್ತು ಯಾವುದಾದರೂ ಕೆಲಸ ಯಶಸ್ವಿಯಾಗದಿದ್ದರೆ ನಾನು ಬಹಳ ವಿಷಾದಿಸುತ್ತೇನೆ. ಇನ್ನೊಂದು ಏನೆಂದರೆ ನಾನೇ ಎಲ್ಲಾ ಒತ್ತಡಗಳನ್ನು ನನ್ನ ಮೇಲೆ ಒಟ್ಟಿಗೆ ಹೇರಿಕೊಳ್ಳುತ್ತೇನೆ. ಇವೇ ನನ್ನ ದೌರ್ಬಲ್ಯಗಳು.

ನನ್ನ ಬಗ್ಗೆ[ಬದಲಾಯಿಸಿ]

TajMahal20080211-1.jpg

ನನ್ನ ಬಗ್ಗೆ ಇನ್ನೂ ಹೇಳಬೇಕೆಂದರೆ ನನ್ನಇಷ್ಟವಾದ ಬಣ್ಣ ನೇರಳೆ ಬಣ್ಣ. ನಾನು ಹೆಚ್ಚು ಅದೇ ಬಣ್ಣದ ಉಡುಪುಗಳನ್ನು ತೊಡುತ್ತೇನೆ. ನನಗೆ ಮಾಂಸಹಾರವೆಂದರೆ ತುಂಬಾ ಇಷ್ಟ. ಅದರಲ್ಲೂ ಬಿಸಿ ಬಿಸಿ ನಾಟಿ ಕೋಳಿ ಸಾರು, ಮುದ್ದೆ ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ, ಅದರಲ್ಲಿ ಸಿಗುವ ಆನಂದವೇ ಬೇರೆ. ನಾನು ತುಂಬಾ ಸರಳ ವ್ಯಕ್ತಿ, ಯಾರನ್ನೂ ಜಾಸ್ತಿ ಮನರಂಜಿಸುವುದಿಲ್ಲ, ನನ್ನನ್ನು ನಾನು ಹೆಚ್ಚು ನಂಬುತ್ತೇನೆ. ಬಹಳಷ್ಟು ಸಮಯ ನಾನು ನನ್ನ ಕುಟುಂಬದ ಜೊತೆ ಕಾಲ ಕಳೆಯಲು ಇಚ್ಛಿಸುತ್ತೇನೆ. ನನಗೆ ಒಬ್ಬ ತಂಗಿ ಹಾಗೂ ತಮ್ಮನಿದ್ದಾನೆ. ನನಗೆ ಒಮ್ಮೆಯಾದರು ತಾಜ್ ಮಹಲ್ನ್ನು ನೋಡಬೇಕೆನ್ನುವ ಆಸೆ.

ನನ್ನತಂಗಿ[ಬದಲಾಯಿಸಿ]

ನನ್ನ ತಂಗಿಯನ್ನು ನಾನು ತಂಗಿ ಎನ್ನುವುದಕ್ಕಿಂತಲೂ ನನ್ನ ಸ್ನೇಹಿತೆ ಎನ್ನಬಹುದು. ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿರುವ ವ್ಯಕ್ತಿ ಹಾಗೂ ನನ್ನ ಹಿತೈಷಿ. ಸದಾ ನನ್ನ ಒಳ್ಳೆಯದನ್ನೇ ಬಯಸುವ ಹುಡುಗಿ. ನಾನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚು ಅವಳನ್ನು ಪ್ರೀತಿಸುತ್ತೇನೆ. ನನ್ನ ಎಲ್ಲಾ ಸುಖ ದುಃಖಗಳನ್ನು ಅವಳೊಡನೆ ಹಂಚಿಕೊಳ್ಳುತ್ತೇನೆ.

ನನ್ನ ಗುರಿ[ಬದಲಾಯಿಸಿ]

ಮುಂದೆ ನನ್ನ ಜೀವನದಲ್ಲಿ ಬಹಳಷ್ಟು ಸಾಧಿಸಬೇಕೆಂಬುದು ನನ್ನ ಹಾಗೂ ನನ್ನ ತಂದೆ-ತಾಯಿಯರ ಆಸೆ, ಕನಸು. ನನ್ನ ವಾಣಿಜ್ಯಶಾಸ್ತ್ರ ಪದವಿಧೇರ ಮುಗಿದ ನಂತರ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಬೇಕೆಂದು ನನಗೆ ಆಸೆ. ಇಲ್ಲವಾದರೆ ಬ್ಯಾಂಕಿಂಗ್ ಪರೀಕ್ಷೆ ಬರೆದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುಬೇಕೆಂದು ಯೋಚಿಸಿದ್ದೇನೆ. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಯಾವ ಯಾವ ಖುಷಿಯನ್ನು ಅನುಭವಿಸಬೇಕೋ ಆ ಎಲ್ಲಾ ಕನಸುಗಳನ್ನು ನನ್ನ ಪೋಷಕರು ಈಡೇರಿಸಿದ್ದಾರೆ. ನನಗೆ ಯಾವ ಕೊರತೆಯನ್ನು ಬಾರದಂತೆ ನೋಡಿಕೊಂಡಿದ್ದಾರೆ. ನನಗೆ ಇನ್ನು ಯಾವ ಆಸೆ-ಆಕಾಂಕ್ಷೆಗಳು ಉಳಿದಿಲ್ಲ. ನಾನು ಅಂದುಕೊಂಡಿರುವುದನ್ನು ಸಾಧಿಸಿ ನಾನು ನನ್ನ ಕಾಲಿನ ಮೇಲೆ ನಿಂತುಕೊಂಡು ನನ್ನ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವುದಷ್ಟೇ ನನಗಿರುವ ಆಸೆ, ಬೇಡಿಕೆ. ಏಕೆಂದರೆ ನಮ್ಮನ್ನು ಓದಿಸಲು ಅವರು ಬಹಳ ಶ್ರಮ ಪಟ್ಟಿದ್ದಾರೆ. ಅವರನ್ನು ಖುಷಿಯಾಗಿರಿಸುವುದೇ ನನ್ನ ಗುರಿ.

ಧನ್ಯವಾದಗಳು