ವಿಷಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಷಾದ ವೈಯಕ್ತಿಕ ಹಿಂದಿನ ಕೃತ್ಯಗಳು ಮತ್ತು ವರ್ತನೆಗಳಿಗೆ ಒಂದು ನಕಾರಾತ್ಮಕ ಜಾಗೃತ ಮತ್ತು ಭಾವನಾತ್ಮಕ ಪ್ರತಿಕ್ರಿಯೆ. ವಿಷಾದವು ಹಲವುವೇಳೆ ಒಬ್ಬರು ಒಂದು ರೀತಿಯಲ್ಲಿ ನಡೆದುಕೊಂಡು ಆಮೇಲೆ ಹಾಗೆ ಮಾಡಬಾರದಿತ್ತು ಎಂದು ಬಯಸಿದ ನಂತರ ಆಗುವ ದುಃಖ, ನಾಚಿಕೆ, ಮುಜುಗರ, ಖಿನ್ನತೆ, ಕಿರುಕುಳ ಅಥವಾ ಅಪರಾಧ ಪ್ರಜ್ಞೆಯ ಒಂದು ಅನಿಸಿಕೆಯಾಗಿರುತ್ತದೆ. ವಿಷಾದವು ಅಪರಾಧಿ ಪ್ರಜ್ಞೆಯಿಂದ ಭಿನ್ನವಾಗಿದೆ, ಅಪರಾಧಿ ಪ್ರಜ್ಞೆಯು ವಿಷಾದದ ಒಂದು ತೀವ್ರ ಭಾವನಾತ್ಮಕ ರೂಪ — ಇದು ವಸ್ತುನಿಷ್ಠ ಅಥವಾ ಪರಿಕಾಲ್ಪನಿಕ ರೀತಿಯಲ್ಲಿ ಗ್ರಹಿಸಲು ಕಷ್ಟವಾಗಬಹುದು. ಈ ನಿಟ್ಟಿನಲ್ಲಿ, ವಿಷಾದದ ಪರಿಕಲ್ಪನೆ ಅದರ ಭಾವನಾತ್ಮಕ ತೀವ್ರತೆಯ ವಿಷಯದಲ್ಲಿ ಅಪರಾಧಿ ಪ್ರಜ್ಞೆಗೆ ಅಧೀನವಾಗಿದೆ. ಹೋಲಿಕೆಯಿಂದ, ನಾಚಿಕೆಯು ಸಾಮಾನ್ಯವಾಗಿ ಸಮಾಜ ಅಥವಾ ಸಂಸ್ಕೃತಿಯಿಂದ ಹೇರಲ್ಪಟ್ಟ ಅಪರಾಧಿ ಪ್ರಜ್ಞೆ ಅಥವಾ (ಚಿಕ್ಕ ಅರ್ಥದಲ್ಲಿ) ವಿಷಾದದ (ವೈಯಕ್ತಿಕದ ಬದಲು) ಸಾಮಾಜಿಕ ಅಂಶವನ್ನು ಸೂಚಿಸುತ್ತದೆ. ಇದು (ವೈಯಕ್ತಿಕ ಮತ್ತು ಸಾಮಾಜಿಕ) ಮರ್ಯಾದೆಯ ವಿಷಯಗಳಲ್ಲಿ ಗಣನೀಯ ಭಾರ ಹೊಂದಿದೆ.

ವಿಷಾದವು ಪರಿತಾಪದಿಂದ ಸಹ ಭಿನ್ನವಾಗಿದೆ, ಏಕೆಂದರೆ ಪರಿತಾಪವು ಸಮಾಜದಿಂದ ನೋಯಿಸುವ, ಅವಮಾನಕಾರಿ, ಅಥವಾ ಹಿಂಸಾತ್ಮಕವೆಂದು ಪರಿಗಣಿತವಾದ ಹಿಂದಿನ ಕೃತ್ಯಕ್ಕೆ ವಿಷಾದದ ಹೆಚ್ಚು ನೇರ ಮತ್ತು ಭಾವನಾತ್ಮಕ ರೂಪವಾಗಿದೆ. ವಿಷಾದಕ್ಕಿಂತ ಬೇರೆಯಾಗಿ, ಅದು ತಮ್ಮ ಕೃತ್ಯಗಳ ಆಂತರಿಕ ಪರ್ಯಾಲೋಚನೆಯ ಬದಲು ಇತರರಲ್ಲಿ ಕ್ಷಮೆಕೋರಿಕೆಯ ಬಯಕೆಯ ಒಂದು ಪ್ರಬಲ ಅಂಶವನ್ನು ಒಳಗೊಂಡಿರುತ್ತದೆ, ಮತ್ತು ಒಬ್ಬರು ಪಡೆಯುವ ಶಿಕ್ಷೆಯನ್ನು ಕಡಿಮೆಗೊಳಿಸುವ ಸಲುವಾಗಿ ವ್ಯಕ್ತವಾಗಬಹುದು.

"https://kn.wikipedia.org/w/index.php?title=ವಿಷಾದ&oldid=740892" ಇಂದ ಪಡೆಯಲ್ಪಟ್ಟಿದೆ