ಶ್ರೀ ಮಹಾಗಣಪತಿ ದೇವಸ್ಥಾನದ ತೊಂಬಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಮಹಾಗಣಪತಿ temple, photo © Avinash Shettigar

ಇತಿಹಾಸ[ಬದಲಾಯಿಸಿ]

ತೊಂಬಟ್ಟು ಮಹಾಗಣಪತಿ ದೇವಸ್ಥಾನವು ಸುಮಾರು ೨೩೦೦ ವರ್ಷಗಳ ಇತಿಹಾಸ ಹೊಂದಿದ್ದು ಈ ದೇವಸ್ಥಾನವು ಆದುನಿಕ ಇತಿಹಾಸದಲ್ಲಿ ಟಿಪ್ಪು ಸುಲ್ತಾನ ನು ಆಗುಂಬೆ ಮಾರ್ಗವಾಗಿ ಮಂಗಳೂರಿನ ದಂಡೆಯಾತ್ರೆಯ ಸಮಯದಲ್ಲಿ ಬಾರ್ಕೂರು ಸಂಸ್ಥಾನದಿಂದ ಈ ಭಾಗದ ಆಡತವು ಟಿಪ್ಪುವುಗೆ ವರ್ಗಾವಣೆಗೊಂಡಿತು. ನಂತರ ನಮಗೆಲ್ಲ ಗೊತ್ತಿರುವುಂತೆ ಬ್ರಿಟಿಷರಿಗೆ ಆಡತವು ವರ್ಗಾವಣೆಗೊಂಡಿತು. ನಂತರ ಸ್ವತಂತ್ರಗೊಂಡು ಈ ದೇವಸ್ಠಾನವು ಅಭಿವ್ರದ್ದಿಯತ್ತ ಸಾಗಿತು.

ಇತಿಹಾಸ ಸಾರುವ ಶಾಸನ

ಪ್ರಾಚಿನ ಇತಿಹಾಸದಂತೆ 'ತೊಂಬಟ್ಟು ಮಹಾಗಣಪತಿ' ದೇವಸ್ಥಾನವು ಅಸ್ಟ ದಿಕ್ಕುಗಳಲ್ಲಿ ಸುಮಾರು ತೊಂಬತ್ತಕ್ಕೂ ಅದಿಕ ಬೆಟ್ಟ -ಗುಡ್ಡಗಳಿಂದ ದೇವಸ್ಥಾನವು ಸುತ್ತುವರಿದಿದ್ದು ಆದ್ದರಿಂದ ತೊಂಬಟ್ಟು ಎಂಬ ಹೆಸರು ಬಂದಿದೆ ಪ್ರಥಿತಿ ಇದೆ. ಶ್ರೀ ತೊಂಬಟ್ಟು ಮಹಾಗಣಪತಿ ದೇವರು ಪ್ರಾಚಿನ ಕಾಲದಲ್ಲಿ ದಟ್ಟಾರಣ್ಯದ ಬೆಟ್ಟ ದಲ್ಲಿ ನದಿ ಉಗಮವಾಗುವ ಭಾಗದಲ್ಲಿ ನೆಲೆಸಿತ್ತು. ಅಲ್ಲಿಗೆ ಪ್ರತಿ ದಿನ ಅರ್ಚಕರು ೧೦ಕಿ.ಮೀ ಅಧಿಕ ಸಾಗಿ ನಿತ್ಯ ಪೂಜೆ ಸಲ್ಲಿಸಿ ಬರುತ್ತಿದ್ದರು.ದಿನಗಳು ಉರುಳಿದಂತೆ ಅರ್ಚಕರು ಹೊಗಿ ಬರಲು ಕಷ್ಟ ಪಡುತ್ತಿದ್ದರು, ಇದನ್ನು ಅರಿತ ಶ್ರೀ ಮಹಾಗಣಪತಿ ಕನಸ್ಸಿನಲ್ಲಿ ಒಂದು ಸೂಚನೆ ನೀಡಿ ಇನ್ನು ಮುಂದೆ ಬೆಟ್ಟದ ತುದಿಯಿಂದ ಊರಿನಲ್ಲಿ ಬಂದು ನೆಲೆಸುವ ಸೂಚನೆ ನೀಡುತ್ತಾರೆ. ಆದರೆ ದೇವರ ಸೂಚನೆಯಂತೆ ಕುತೊಹಲಭರಿತ ಅರ್ಚಕರು ಮಡಿಕೆಯನ್ನು ೭ ದಿನದ ಬದಲಾಗಿ ೪ ದಿನಕ್ಕೆ ತೆರೆದು ನೊಡುತ್ತಾರೆ, ಆಗ ಗಣಪತಿಯು ಪೂರ್ಣ ಕಾಣಿಸದೆ ಮಂಡಿ ಊರಿ ಕುಳಿತ ಸ್ಠಿತಿಯಲ್ಲಿದೆ, ನಂತರ ಇಲ್ಲಿಯೆ ದೇವಸ್ಥಾನ ನಿರ್ಮಾಣ ಮಾಡಲಾಯಿತು. ನಿತ್ಯ ಬಲಿ ಪೂಜೆ ನಡೆಸುವ ಬಲಿ ಕಲ್ಲು ಹೊಂದಿರುವ ಕೆಲವೇ ದೇವಸ್ಥಾನಗಳಲ್ಲಿ ಇದು ಒಂದು, ಇಲ್ಲಿಯ ದೇವರಿಗೆ 'ಅಪ್ಪ-ಕಜ್ಜಾಯ' ಪ್ರೀಯ ಪ್ರಸಾದ.

ಪ್ರತಿ ವರ್ಷಕೊಮ್ಮೆ ಜಾತ್ರಾ ಮಹೊತ್ಸವ ಅನ್ನ ದಾನ,ಕೆಂಡ ಸೇವೆ ಹಾಗೂ ಯಕ್ಷಗಾನ  ಸೇವೆ   ನಡೆಸಲಾಗುತ್ತದೆ.ತಿಂಗಳಿಗೊಮ್ಮೆ ಚೌತಿ ಗಣಹೊಮ ನಡೆಯುತ್ತದೆ,ಸಂಕಷ್ಟ ಚೌತಿಪೂಜೆ ನಡೆಯುತ್ತದೆ,


ಹಿಗೆ ಇಷ್ಟಾರ್ಥ ನೇರವೆರಿಸುವ ಗಣಪತಿ ಎಲ್ಲರಿಗೂ ಬೇಡಿದ್ದನ್ನು ಕೊಡುವ ಶ್ರೀ ತೊಂಬಟ್ಟು ಮಹಾಗಣಪತಿ ಈ ದೆವಸ್ಥಾನದಲ್ಲಿ ''ಶ್ರೀ ಮಹಾಗಣಪತಿ ಭಜನಾಮಂಡಲಿ ತೊಂಬಟ್ಟು''ಭಜನಾ ಸಂಘವು ಸ್ಥಾಪನೆ ಗೊಂಡು ಉತ್ತಮವಾದ ಸೆವೆ ನೀಡುತ್ತಾ ಬಂದಿದೆ, ದರ್ಮಸ್ಥಳದ ಭಜನಾ ಕಮ್ಮಟದಲ್ಲಿ ಭಾಗವಹಿಸಿ ಯಶಸ್ಸು ಪಡೆದಿದೆ', ಮಕ್ಕಳಿಗೆ,ಯುವಕರಿಗೆ ತರಬೇತಿ ನೀಡುತ್ತಿದೆ, ಜೊತೆಗೆ ಸಮಾಜ ಪರಿವರ್ತನೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಒಟ್ಟಾರೆಯಾಗಿ ಸತ್ಸಂಗದಲ್ಲಿ ಉತ್ತಮವಾದ ಕಾರ್ಯನಿರ್ವಹಣೆ ಮಾಡುತ್ತದೆ.