ಬ್ರಹ್ಮಾವರ
ಬ್ರಹ್ಮಾವರ ಬ್ರಹ್ಮಾವರ | |
---|---|
![]() ಬ್ರಹ್ಮಾವರ | |
ಜಾಲತಾಣ | www.brahmavara.com |
ಬ್ರಹ್ಮಾವರ ರಾಷ್ಟೀಯ ಹೆದ್ದಾರಿ ೬೬(೧೭) ರಲ್ಲಿ ಉಡುಪಿ ಜಿಲ್ಲೆಯಿಂದ ಉತ್ತರಕ್ಕೆ ಇರುವ ತಾಲ್ಲೂಕು. ಪುರಾಣದ ಪ್ರಕಾರ ಬ್ರಹ್ಮಾವರ ನಗರವನ್ನು ರಾಜರು ಬ್ರಾಹ್ಮಣರಿಗೆ ಉಡುಗೊರೆಯಾಗಿ ಕೊಟ್ಟ ಪೇಟೆಯೆಂದು, ನಂತರ ಆಡುಭಾಷೆಯಲ್ಲಿ "ಬ್ರಹ್ಮಾವರ"(ಅಜಪುರ)ಯೆಂದು ಕರೆಯಲ್ಫಟ್ಟಿತು.
ಇತಿಹಾಸ[ಬದಲಾಯಿಸಿ]
ಬ್ರಹ್ಮಾವರದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ಕ್ರಿ.ಶ. ೯ ನೇ ಶತಮಾನದಲ್ಲಿ ಕಟ್ಟಲಾಯಿತು ಎಂದು ನಂಬಲಾಗಿದೆ. ದೇವಸ್ಥಾನದ ಗೋಡೆಗಳಲ್ಲಿ ಗಜ-ಗೌರಿಯ ಚಿತ್ರವಿದ್ದು ಅದನ್ನು ನವರಂಗದಲ್ಲಿ ಇಡಲಾಗಿದೆ ಆದ್ದರಿಂದ ಅದನ್ನು ಹೊಯ್ಸಳರ ಕಾಲದ್ದೆಂದು ನಂಬಲಾಗಿದೆ. ಹಂದಾಡಿ ಬ್ರಹ್ಮಾವರದ ಹತೀರದ ಚಿಕ್ಕ ಊರು, ಅದನ್ನು ಹಂದೆ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಯಿತು ಎನ್ನಲಾಗಿದೆ. ಬ್ರಹ್ಮಾವರದಲ್ಲಿರುವ ಗೊಪಿನಾಥ ದೇವಸ್ತಾನ ೩ನೇಯ ಶತಮಾನದ ದೇವಸ್ಥಾನ ಎಂದು ಬರವಣಿಗೆಯಲ್ಲಿ ಇದೆ.ಹಾಗೂ ಚಾಂತಾರು ಗ್ರಾಮದ ನಂದಿಗುಡ್ಡೆಯಲ್ಲಿ ನೆಲೆನಿಂತಿರುವ ತುಳುನಾಡಿನ ಕಾರ್ಣಿಕ ಪುರುಷ ಊರಿಗೆ ದಾತ ಮಾರಿಗೆ ಧೂತ ನಂಬಿದವರಿಗೆ ವೈದ್ಯನಾಥ ಏಂದು ಕರೆಯುವ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ತನ್ನ ಪರಿವಾರ ದೈವಗಳೊಂದಿಗೆ ಕಾರ್ಣಿಕ ಮೆರೆಯುತ್ತ ಮುಂಡಾಲ ಜನಾಂಗದವರ ಕುಲದೇವರಾಗಿ ಇಡೀ ಗ್ರಾಮದ ಜನರ ನಂಬಿಕೆಯ ಹಾಗೂ ಭಕ್ತರ ಇಷ್ಟಾರ್ಥಗಳನ್ನು ನೆರೆವೇರಿಸುವ ಪ್ರಧಾನ ಶಕ್ತಿಯಾಗಿದ್ದಾರೆ. ಇಲ್ಲಿ ಪ್ರತಿವರ್ಷ ಡಿಸಂಬರ್ ನಲ್ಲಿ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದರ್ಶನ ಸೇವೆ ಬಲಿಮೂರ್ತಿಯ ಭವ್ಯ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ನಡೆಯೋದು ಗ್ರಾಮದ ಎಲ್ಲಾ ಭಕ್ತರು ಭಾಗವಹಿಸೋದು ವಿಶೇಷ
ಜನಸಂಖ್ಯೆ[ಬದಲಾಯಿಸಿ]
ಬ್ರಹ್ಮಾವರದಲ್ಲಿ ಬಂಟರು,ಕೊಂಕಣಿ, ಬ್ರಾಹ್ಮಣರು, ಕ್ರೈಸ್ತ ಧರ್ಮದವರು, ಹಾಗು ಚಿಕ್ಕ ಸಂಖ್ಯೆಯಲ್ಲಿ ಮುಸಲ್ಮಾನ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳು[ಬದಲಾಯಿಸಿ]
- ಸಂಥ ಮೇರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ
- ಸಂಥ ಮೇರಿ ಆಂಗ್ಲ ಮಾಧ್ಯಮ ಶಾಲೆ, ಬ್ರಹ್ಮಾವರ
- ಕೊಸ್ಮೊಪೊಲಿಟನ್ ಕಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ
- ನಿರ್ಮಲಾ ಕಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ
- ನಿರ್ಮಲಾ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ
- ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
- ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ
ಇತರೆ ಸ್ಥಳಗಳು[ಬದಲಾಯಿಸಿ]
- ಅಖಿಲ ಭಾರತ ಬಾನುಲಿ ಕೇಂದ್ರ(All India Radio Station)
- ಪ್ರಾದೇಶಿಕ ಕೃಷಿ ಸಂಶೋಧನ ಕೇಂದ್ರ, ಬ್ರಹ್ಮಾವರ. (Regional Agricultural Research Center)
- ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ, ಬ್ರಹ್ಮಾವರ.
ಇಲ್ಲಿಗೆ ತಲುಪುದು ಹೇಗೆ[ಬದಲಾಯಿಸಿ]
ಸಾರಿಗೆ ಸಂಪರ್ಕ[ಬದಲಾಯಿಸಿ]
ಬ್ರಹ್ಮಾವರವು ರಾ.ಹೆ. ೬೬(೧೭) ರಲ್ಲಿ ಉಡುಪಿ ಮತ್ತು ಕುಂದಾಪುರಗಳ ನಡುವೆ ಇರುವುದರಿಂದಾಗಿ ನೇರ ಖಾಸಗಿ ಮತ್ತು ಸರಕಾರಿ ಬಸ್ ಸಂಪರ್ಕ ಹೊಂದಿದೆ. ಇಲ್ಲಿಂದ ರಾಜ್ಯದ ಬೆಂಗಳೂರು, ಮುಂಬಯಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಮೊದಲಾದ ಸ್ಥಳಗಳಿಗೆ ನೇರ ರಸ್ತೆ ಸಂರ್ಪಕವನ್ನು ಕೂಡ ಹೊಂದಿದೆ.
ರೈಲು ಸಂಪರ್ಕ[ಬದಲಾಯಿಸಿ]
ಬಾರ್ಕೂರು ಹತ್ತಿರದ ರೈಲು ನಿಲ್ದಾಣವಾಗಿರುತ್ತಾದೆ..
ವಿಮಾನ ನಿಲ್ಡಾಣ[ಬದಲಾಯಿಸಿ]
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿರುತ್ತಾದೆ.
ನದಿಗಳು[ಬದಲಾಯಿಸಿ]
ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ರುವ ಸುವರ್ಣ ಹಾಗು ಸೀತಾ ನದಿಗಳು ಬ್ರಹ್ಮಾವರದ ಮೂಲಕ ಹರಿದು ಅರಬ್ಬೀ ಮಹಾಸಾಗರದಲ್ಲಿ ಸೇರುತ್ತವೆ.
ಹೊಸ ಲೇಖನ
References[ಬದಲಾಯಿಸಿ]
- ↑ "STD Codes for cities in Karnataka". Bharat Sanchar Nigam Limited (BSNL). Archived from the original on 2008-04-17. Retrieved 2008-07-06.
- ↑ "Central Excise and Service Tax Location Code (Areas Under the Range West of Mangalore-II DVN (610201)". Central Excise and Service Tax. Retrieved 2008-07-14.[ಶಾಶ್ವತವಾಗಿ ಮಡಿದ ಕೊಂಡಿ]
- ↑ "List of RTOs". AICDA (All India Car Dealers Association). Retrieved 2008-07-14.
- Pages using duplicate arguments in template calls
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using infobox settlement with unknown parameters
- Pages using infobox settlement with missing country
- ಉಡುಪಿ ಜಿಲ್ಲೆ
- ಕರ್ನಾಟಕದ ಪ್ರಮುಖ ಸ್ಥಳಗಳು