ವಿ. ಎಸ್. ರಮಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:RD.jpg
'ಕರ್ನಾಟಕದ ಪ್ರಥಮ ರಾಜ್ಯಪಾಲೆ'

'ವಿ.ಎಸ್.ರಮಾದೇವಿ,' ಕರ್ನಾಟಕದ ಮಾಜೀ ರಾಜ್ಯಪಾಲರಾಗಿದ್ದರು; ಇವರ ಅವಧಿ ೨ ಡಿಸೆಂಬರ್ ೧೯೯೯ ರಿಂದ, ೨೦ ಆಗಸ್ಟ್ ೨೦೦೨ ವರೆಗೆ ಇತ್ತು. ರಮಾದೇವಿಯವರು, ಹಿಂದೆ, 'ಹಿಮಾಚಲ ಪ್ರದೇಶ'ರಾಜ್ಯಪಾಲೆಯಾಗಿದ್ದರು.

ಜನನ ಹಾಗೂ ಪರಿವಾರ[ಬದಲಾಯಿಸಿ]

ರಮಾದೇವಿಯವರು, ಆಂಧ್ರ ಪ್ರದೇಶದ 'ವಿ.ವಿ.ಸುಬ್ಬಯ್ಯ' ಮತ್ತು 'ವಿ. ವೆಂಕಟರತ್ನಮ್ಮ' ದಂಪತಿಗಳಿಗೆ ೧೯೩೪ ರ ಜನವರಿ ೧೫ ರಂದು, ಎಮ್.ಎ;ಎಲ್.ಎಲ್.ಬಿ ಪದವಿಗಳಿಸಿದನಂತರ 'ಆಂಧ್ರ ಪ್ರದೇಶಸದ ಹೈಕೋರ್ಟ್ ನಲ್ಲಿ ವಕೀಲಿ' ಆರಂಭಿಸಿದರು. ಆಮೇಲೆ ಹಂತ ಹಂತ ಮೇಲೇರಿ ಭಾರತೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ, ಶಾಸಕಾಂಗ ಇಲಾಖೆಯ ವಿಶೇಷ ಕಾರ್ಯದರ್ಶಿ, ಕೆಂದ್ರ ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿ, ಮಹಿಳಾ ಆಯೋಗದ ಸಲಹೆಗಾರ ಹುದ್ದೆ, ಮೊದಲಾದ ಕೆಂದ್ರ ಸರಕಾರದ 'ಎ' ದರ್ಜೆ ಹುದ್ದೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ರಾಜಕೀಯ ಜೀವನ[ಬದಲಾಯಿಸಿ]

೧೯೯೦ ರ ನವೆಂಬರ್ ೨೬ ರಿಂದ ಡಿಸೆಂಬರ್ ೧೧ ರವರೆಗೆ, ಎರಡುವಾರ 'ಕೆಂದ್ರ ಸರಕಾರದ ಚುನಾವಣಾ ಆಯುಕ್ತ'ರಾಗಿ, ೧೯೩ ರ ಜುಲೈ ೧ ರಿಂದ ೧೯೭೭ ರ ಜುಲೈ ೨ ೫ ರವರೆಗೆ 'ರಾಜ್ಯಸಭೆಯ ಸೆಕ್ರೆಟರಿ ಜನರಲ್' ಆಗಿ ಸೇವೆಸಲ್ಲಿಸಿದರು. ಕನ್ನಡ ಕಲಿತರು.ತಾವು ರಾಜಭವನದಲ್ಲಿ ವಾಸ್ತವ್ಯದಲ್ಲಿದ್ದಾಗ, ರಾಜಭವನಕ್ಕೆ ಶ್ರೀ ಸಾಮಾನ್ಯನಿಗೆ ಮುಕ್ತ ಪ್ರವೇಶ ಕಲ್ಪಿಸಿ, ಅವರ ಅಹವಾಲುಗಳನ್ನು ಆಲಿಸಿ ಅವುಗಳಿಗೆ ಸ್ಪಂದಿಸುತ್ತಿದ್ದರು. 'ಕನ್ನಡದಲ್ಲೇ ಪ್ರತಿಜ್ಞಾವಿಧಿ' ಸ್ವೀಕರಿಸಿ,ಕನ್ನಡದಲ್ಲೇ ವ್ಯವಹರಿಸುತ್ತಿದ್ದರು. ನಾಡಿನುದ್ದಕ್ಕೂ ಸಂಚರಿಸಿ ಸಣ್ಣ-ಪುಟ್ಟಕಾರ್ಯಕ್ರಮಗಳಲ್ಲೂ ಅತಿಥಿಯಾಗಿ ಭಾಗಿಯಾಗಿ, ಕನ್ನಡದಲ್ಲೇ ಭಾಷಣಮಾಡಿ,ಜನರ ಆದರಕ್ಕೆ ಪಾತ್ರರಾಗಿದ್ದರು.ಕರ್ನಾಟಕದ ರಾಜ್ಯಪಾಲೆಯಾದ ಸಮಯದಲ್ಲೇ ಅವರ ಪತಿ 'ರಾಮಾವತಾರ್,' ನಿಧನರಾದರು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗಣರಾಜ್ಯದ ಸಂದರ್ಭದಲ್ಲಿ ಗೌರವಿಸುವ ಪರಿಪಾಠವನ್ನು ಹುಟ್ಟುಹಾಕಿದ ಶ್ರೇಯಸ್ಸು ರಮಾದೇವಿಯವರಿಗೆ ಸಲ್ಲಬೇಕು. ಏಪ್ರಿಲ್,೧೭, ರ ಬುಧವಾರದಿಂದ ಕರ್ನಾಟಕ ರಾಜ್ಯದಲ್ಲಿ ೩ ದಿನಗಳ ಶೋಕವನ್ನು ಆಚಾರಿಸಲಾಗುವುದು.

ನಿಧನ[ಬದಲಾಯಿಸಿ]

ಮೂಲತಃ ಆಂಧ್ರಪ್ರದೇಶದವರಾದ 'ರಮಾದೇವಿಯವರು', ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.೭೯ ವರ್ಷ ಪ್ರಾಯದ ರಮಾದೇವಿಯವರು, ಬೆಂಗಳೂರಿನ 'ಎಚ್.ಎಸ್.ಆರ್.ಲೇ ಔಟ್' ನಲ್ಲಿರುವ 'ತಮ್ಮ ಸ್ವಗೃಹ'ದಲ್ಲಿ ಸನ್.೨೦೧೩ ರ,ಏಪ್ರಿಲ್, ೧೭ ರ ಮಧ್ಯಾನ್ಹದಂದು ಕೊನೆಯುಸಿರೆಳೆದರು.