ಗೋವಿಂದ ನಾರಾಯಣ
ಗೋಚರ
(ಗೋವಿಂದ್ ನರಿನ್ ಇಂದ ಪುನರ್ನಿರ್ದೇಶಿತ)
ಗೋವಿಂದ ನಾರಾಯಣ | |
---|---|
8th ಕರ್ನಾಟಕದ ರಾಜ್ಯಪಾಲ | |
In office 2 August 1977 – 15 April 1983 | |
Preceded by | Uma Shankar Dikshit |
Succeeded by | A. N. Banerji |
Personal details | |
Born | Mainpuri, British Raj | ೫ ಮೇ ೧೯೧೬
Died | 3 April 2012 New Delhi, India | (aged 95)
ಗೋವಿಂದ ನಾರಾಯಣ ಕರ್ನಾಟಕದ ಎಂಟನೆಯ ರಾಜ್ಯಪಾಲರು, ಇವರ ಅವಧಿ ೨ ಆಗಸ್ಟ್ ೧೯೭೭ ರಿಂದ ೧೫ ಏಪ್ರಿಲ್ ೧೯೮೩ ವರೆಗೆ.ಇವರು ಮೂಲತಃ ಭಾರತೀಯ ನಾಗರಿಕ ಸೇವೆಯಲ್ಲಿದ್ದು,ನಿವೃತ್ತರಾದ ಬಳಿಕ ರಾಜ್ಯಪಾಲರಾಗಿ ಆಯ್ಕೆಯಾದವರು.
ಅವರು ಮೈನ್ಪುರಿ, ಉತ್ತರ ಪ್ರದೇಶದಲ್ಲಿ ಒಂದು ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರು ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣವನ್ನು ಪಡೆದರು. ಅವರು ಹಿಂದೆ ಭಾರತದ ೧೨ನೇ ರಕ್ಷಣಾ ಕಾರ್ಯದರ್ಶಿಯಾಗಿ (೧೯೭೩- ೧೯೭೫), ಭಾರತದ ಗೃಹ ಕಾರ್ಯದರ್ಶಿಯಾಗಿ (೧೯೭೧- ೧೯೭೩) ಮತ್ತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ (೧೯೫೮- ೧೯೬೧) ಸೇವೆ ಸಲ್ಲಿಸಿದ್ದಾರೆ.