ವಿಷಯಕ್ಕೆ ಹೋಗು

ವಿಡಿಯೋಕಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Videocon Industries Ltd.
ಸಂಸ್ಥೆಯ ಪ್ರಕಾರPublic (ಬಿಎಸ್‌ಇ: 511389)
ಸ್ಥಾಪನೆ1979
ಸಂಸ್ಥಾಪಕ(ರು)Nandlal Madhavlal Dhoot
ಮುಖ್ಯ ಕಾರ್ಯಾಲಯAurangabad, ಮಹಾರಾಷ್ಟ್ರ, India
ಪ್ರಮುಖ ವ್ಯಕ್ತಿ(ಗಳು)Venugopal Dhoot
(Chairman)
K. R. Kim
(CEO)
ಉದ್ಯಮConglomerate
ಉತ್ಪನ್ನConsumer Electronics
Home Appliances
Components
Office Automation
Mobile phones
Wireless
Internet
Petroleum
Satellite television
Power
ಆದಾಯ US$2 billion (2010)[]
ನಿವ್ವಳ ಆದಾಯ US$276 million (2010)[]
ಉದ್ಯೋಗಿಗಳು5,000 (2010)[]
ಜಾಲತಾಣVideocon.com

ವಿಡಿಯೋಕಾನ್ ಒಂದು ಸಂಘಟಿತ ವ್ಯಾಪಾರ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ.ಅದಲ್ಲದೇ ಇದು ಭಾರತದ ಮೂಲದ್ದಾಗಿದೆ. ಈ ವ್ಯಾಪಾರ ಸಮೂಹವು ಭಾರತದಲ್ಲಿ 17 ಉತ್ಪಾದನಾ ತಾಣಗಳನ್ನು ಹೊಂದಿದೆ. ಅಲ್ಲದೇ ಚೀನಾ, ಪೊಲೆಂಡ್, ಇಟಲಿ ಮತ್ತು ಮೆಕ್ಸಿಕೊದಲ್ಲಿ ಉತ್ಪಾದನಾ ಸ್ಥಾವರಗಳನ್ನು ಪಡೆದಿದೆ. ಇದು ವಿಶ್ವದಲ್ಲೆ ಮೂರನೆಯ ಅತ್ಯಂತ ದೊಡ್ಡ ಪಿಕ್ಚರ್ ಟ್ಯೂಬ್ ತಯಾರಕ ಎನಿಸಿದೆ.[][]

ಕಾರ್ಪೊರೇಟ್ ವಿವರ

[ಬದಲಾಯಿಸಿ]

ವಿಡಿಯೋಕಾನ್ ಸಮೂಹವು 2 ಬಿಲಿಯನ್ US$ ನಷ್ಟು ವಾರ್ಷಿಕ ವಹಿವಾಟು ಹೊಂದಿದ್ದು, ಭಾರತದಲ್ಲಿ ಗ್ರಾಹಕರ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಗೃಹಬಳಕೆಯ ಸಾಧನಗಳ ಉತ್ಪಾದನೆಗಳಿಗಾಗಿ ಅತ್ಯಂತ ದೊಡ್ಡ ಕಂಪನಿಯಾಗಿದೆ. ಇದರ ಕಾರ್ಯಾಚರಣೆಯನ್ನು ಜಾಗತಿಕವಾಗಿ 1998ರಿಂದ ವಿಸ್ತರಿಸಿದೆ. ಅದರಲ್ಲೂ ವಿಶೇಷವಾಗಿ ಮಧ್ಯ ಪ್ರಾಚ್ಯದಲ್ಲಿ ಇದರ ಕಾರ್ಯಚಟುವಟಿಕೆಯನ್ನು ವ್ಯಾಪಕವಾಗಿ ವಿಸ್ತರಿಸಲಾಗಿದೆ.[]

ಇಂದು ಈ ವ್ಯಾಪಾರ ಸಮೂಹ, ಪ್ರಮುಖ ಆರು ಕ್ಷೇತ್ರಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ: '

ಗ್ರಾಹಕರ ಎಲೆಕ್ಟ್ರಾನಿಕ್ಸ್

[ಬದಲಾಯಿಸಿ]

ಭಾರತದಲ್ಲಿ ಈ ವ್ಯಾಪಾರ ಸಮೂಹವು, ಬಣ್ಣದ ಟಿವಿಗಳು,ಬಟ್ಟೆ ಒಗೆಯುವ ಯಂತ್ರಗಳು, ಹವಾನಿಯಂತ್ರಕಗಳು, ಶೀತಕಗಳು,ಮೈಕ್ರೋವೇವ್ ಒಲೆಗಳಂತಹ ಗ್ರಾಹಕರ ಉತ್ಪನ್ನಗಳು ಮತ್ತು ಅನೇಕ ಇತರ ಗೃಹಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತದೆ. ಈ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮತ್ತು ಸೇವೆಯ ಬೃಹತ್ ಜಾಲದ ಸಂಪರ್ಕದೊಂದಿಗೆ ಬಹು ಬ್ರ್ಯಾಂಡ್ (ವ್ಯಾಪಾರ ಮುದ್ರೆ) ಕಾರ್ಯನೀತಿಗಳ ಮೂಲಕ ಮಾರಾಟ ಮಾಡುತ್ತದೆ.[] ವಿಡಿಯೋಕಾನ್ ಸಮೂಹದ ಬ್ರ್ಯಾಂಡ್ ಗಳು ಅಕಾಯ್, ಎಲೆಕ್ಟ್ರೋಲಕ್ಸ್, ಹೊಂಡೈ, ಕೆಲ್ವಿನೇಟರ್, ಕೆನ್ ಸ್ಟಾರ್, ಕೆನ್ ವುಡ್, ನೆಕ್ಸ್ಟ್, ಪ್ಲ್ಯಾನೆಟ್ M, ಸ್ಯಾನ್ ಸ್ಯೂಯಿ, ತೋಷಿಬಾ, ಫಿಲಿಪ್ಸ್(ಟಿವಿ ಉತ್ಪನ್ನಗಳು) ಇತ್ಯಾದಿಗಳನ್ನು ಒಳಗೊಂಡಿವೆ.

ಮೊಬೈಲ್ ಫೊನ್‍ಗಳು(ಮೊಬೈಲ್ ದೂರವಾಣಿಗಳು)

[ಬದಲಾಯಿಸಿ]

ವಿಡಿಯೋಕಾನ್ ಮೊಬೈಲ್ ಫೋನ್ ಗಳ ಮಾರಾಟವು ಇದರ ಹೊಸ ಕ್ಷೇತ್ರ,ಅದನ್ನು 2009ರ ನವೆಂಬರ್ ನಲ್ಲಿ ಆರಂಭಿಸಿತು.[]

ಕಲರ್ ಪಿಕ್ಚರ್ ಟ್ಯೂಬ್ ಗ್ಲಾಸ್(ಬಣ್ಣದ ಚಿತ್ರಗಳ ಟ್ಯೂಬ್ ಗ್ಲಾಸ್)

[ಬದಲಾಯಿಸಿ]

ವಿಡಿಯೋಕಾನ್, ಮೆಕ್ಸಿಕೊ, ಪೊಲೆಂಡ್, ಇಟಲಿ ಮತ್ತು ಚೀನಾಗಳಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ವಿಶ್ವದ ಅತ್ಯಂತ ದೊಡ್ಡ (ಕರಂಟ್ ಪ್ರೊಸಿಜೆರಿಯಲ್ ಟರ್ಮಿನ್ಯಾಲಜಿ ಪ್ರಕಾರ ಕಲರ್ ಪಿಕ್ಚರ್ ಟ್ಯೂಬ್)CPTಗ್ಲಾಸ್ ತಯಾರಕರಲ್ಲಿ ಇದೂ ಕೂಡ ಒಂದಾಗಿದೆ.

ತೈಲ ಮತ್ತು ಅನಿಲ

[ಬದಲಾಯಿಸಿ]

ಇದರ Ravva ತೈಲ ಕ್ಷೇತ್ರವು ಈ ವ್ಯಾಪಾರ ಸಮೂಹದ ಅತ್ಯಂತ ದೊಡ್ಡ ಆಸ್ತಿಯಾಗಿದ್ದು, ವಿಶ್ವದಲ್ಲೇ ಅತ್ಯಂತ ಕಡಿಮೆ ಖರ್ಚಿನಲ್ಲಿ ತೈಲ ಉತ್ಪಾದಿಸುತ್ತದೆ. ಅಲ್ಲದೇ ಒಂದು ದಿನಕ್ಕೆ 50,000 ಬ್ಯಾರಲ್ ಗಳಷ್ಟು ತೈಲ ಉತ್ಪಾದನೆಯಾಗುತ್ತದೆ.[]

DTH (ಡೈರೆಕ್ಟ್ ಟು ಹೋಮ್)

[ಬದಲಾಯಿಸಿ]

ವಿಡಿಯೋಕಾನ್ 'd2h' ಎಂದು ಕರೆಯಲಾಗುವ ಅದರ DTH ಉತ್ಪನ್ನವನ್ನು 2009ರಲ್ಲಿ, ಬಿಡುಗಡೆಮಾಡಿತು. ಭಾರತದ DTH ಮಾರುಕಟ್ಟೆಯಲ್ಲಿ ಹೊಸ ಅವಕಾಶದ ರೂಪದಲ್ಲಿ, ವಿಡಿಯೋಕಾನ್ DTH ಉಪಗ್ರಹ ಸ್ವೀಕೃತಿ ಕೇಂದ್ರದಲ್ಲಿ ನಿರ್ಮಿತ LCD ಮತ್ತು ಟಿವಿಗಳ ಸೌಕರ್ಯ ನೀಡುವಲ್ಲಿ ಪ್ರವರ್ತಕ ಎನಿಸಿದೆ. ಈ ರಿಸೀವರ್ 19" ರಿಂದ 32" ಗಾತ್ರದಲ್ಲಿರುತ್ತವೆ. ಕೇವಲ ಸೆಟ್ ಟಾಪ್ ಬಾಕ್ಸ್ ಮಾತ್ರ ಒದಗಿಸುವ ಪ್ರಸ್ತುತ ಇತರ ಕಂಪನಿಗಳಾದ ಝೀ ಟಿವಿಯ ಡಿಷ್ ಟಿವಿ, ಟಾಟಾ ಸ್ಕೈ, ಏರ್ ಟೆಲ್ ಡಿಜಿಟಲ್ ಟಿವಿ, ರಿಲಯನ್ಸ್ ನ ಬಿಗ್ ಟಿವಿಗಳಿಗೆ ಹೋಲಿಸಿದರೆ DTH ಸೇವೆಯಲ್ಲಿನ ಈ ಪರಿಕಲ್ಪನೆ ಹೊಸದಾಗಿದೆ.

ದೂರಸಂಪರ್ಕ ವ್ಯವಸ್ಥೆ(ಟೆಲಿಕಮ್ಯೂನಿಕೇಷನ್)

[ಬದಲಾಯಿಸಿ]

ವಿಡಿಯೋಕಾನ್ ಟೆಲಿಕಮ್ಯೂನಿಕೇಷನ್ ಲಿಮಿಟೆಡ್, ಭಾರತದಾದ್ಯಂತ ಮೊಬೈಲ್ ಸೇವಾ ಕಾರ್ಯಾಚರಣೆಗಾಗಿ ಅನುಮತಿ ಪಡೆದಿದೆ. ಈ ಸೇವೆಯನ್ನು 2010 ರ ಮಾರ್ಚ್ 7 ರಂದು ಮುಂಬಯಿನಲ್ಲಿ ಆರಂಭಿಸಲಾಯಿತು.

ಥಾಮ್ಸನ್ SA ದ ಸ್ವಾಧೀನತೆ

[ಬದಲಾಯಿಸಿ]

ವಿಡಿಯೋಕಾನ್, ಪೊಲೆಂಡ್, ಇಟಲಿ, ಮೆಕ್ಸಿಕೊ ಮತ್ತು ಚೀನಾದಲ್ಲಿ, ಪೂರಕ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳೊಂದಿಗೆ ಉತ್ಪಾದನಾ ಘಟಕಗಳನ್ನು ಹೊಂದಿದೆ. ಸಂಪೂರ್ಣ ಮಾಲೀಕತ್ವ ಹೊಂದಿರುವ ವಿದೇಶಿ ಅಂಗ ಸಂಸ್ಥೆಗಳ ಮೂಲಕ ಥಾಮ್ಸನ್ S.A ಯಿಂದ ಕಲರ್ ಪಿಕ್ಚರ್ ಟ್ಯೂಬ್(CPT) ವ್ಯಾಪಾರವನ್ನು ಸ್ವಾಧೀನಪಡಿಸಿಕೊಂಡಿತು.

ವಿವೇಚನಾಯುಕ್ತ ಸ್ವಾಧೀನತೆ

[ಬದಲಾಯಿಸಿ]

ಥಾಮ್ಸನ್ CPT ಯೊಂದಿಗಿನ ದೂರದರ್ಶನಗಳಿಗೆ ಬೆಳೆದ ಮಾರುಕಟ್ಟೆಗಳಲ್ಲಿ ಬೇಡಿಕೆಯಿಲ್ಲದ ಪರಿಸ್ಥಿತಿ ಎದುರಿಸುತ್ತಿರುವಾಗ ಹಾಗು ಪ್ಲ್ಯಾಟ್ ಸ್ಕ್ರೀನ್(ತೆಳುಪರದೆ) ಮತ್ತು ಪ್ಲಾಸ್ಮಾ ಟಿವಿಯ ಕಡೆಗೆ ಹೆಚ್ಚು ಒಲವು ತೋರುತ್ತಿದ್ದ ಸಂದರ್ಭದಲ್ಲಿ ವಿಡಿಯೋಕಾನ್ ಅದನ್ನು ಸ್ವಾಧೀನಪಡಿಸಿಕೊಂಡಿತು. ಅದೇನೇ ಆದರೂ, ವಿಡಿಯೋಕಾನ್ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ CPT ಗಳಿಗೆ ಬೇಡಿಕೆ ಇರುವುದನ್ನು ಕಂಡುಕೊಂಡು, ಈ ಸ್ವಾಧೀನತೆಯೊಂದಿಗೆ ಅದನ್ನು ಮುಂದುವರೆಸಿತು. ಥಾಮ್ಸನ್ ವಿಡಿಯೋಕಾನ್ ಗೆ ಸ್ವಾಧೀನತೆ ನೀಡಿದ್ದಲ್ಲದೇ, ಪರಿಷ್ಕೃತ ತಂತ್ರಜ್ಞಾನದ ಬಳಕೆಗಾಗಿ ಇಟಲಿಯ ಅಗ್ಯಾನಿಯಲ್ಲಿರುವ R&D ಸೌಲಭ್ಯದ ಮೇಲೆ ನಿಯಂತ್ರಣವನ್ನೂ ನೀಡಿತು. ಈ ಸ್ವಾಧೀನತೆಯ ಹಿಂದಿರುವ ಪ್ರಮುಖ ಕಾರಣಗಳು.[] ಅವುಗಳೆಂದರೆ:

ಕಾಸ್ಟ್ ಕಟ್ಟಿಂಗ್ (ಉತ್ಪಾದನಾ ವೆಚ್ಚ ಉಳಿತಾಯ) – ವಿಡಿಯೋಕಾನ್, ಕಡಿಮೆ ವೆಚ್ಚದ ತಾಣಗಳಿಗೆ ತಮ್ಮ ಕಾರ್ಯಾಚರಣೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಅಲ್ಲದೇ ಥಾಮ್ಸನ್ S.A. ಯಿಂದ ಸ್ವಾಧೀನ ಪಡಿಸಿಕೊಂಡ CPT ಉತ್ಪಾದನಾ ಸೌಲಭ್ಯಗಳೊಂದಿಗೆ ಮತ್ತು ಗ್ಲಾಸ್ ಪ್ಯಾನಲ್(ಗಾಜಿನ ಫಲಕ) ಸೌಲಭ್ಯದೊಂದಿಗೆ ಭಾರತದಲ್ಲಿ ಅದರ ಕಾರ್ಯಚಟುವಟಿಕೆಯನ್ನು ಸಂಘಟಿಸಬೇಕೆಂದು ಬಯಸಿತ್ತು. ವಿಡಿಯೋಕಾನ್, ವ್ಯಾಪಾರೀ ಅಸ್ತಿತ್ವದ ಭಾಗಗಳಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕೆಂದು ಬಯಸಿತ್ತು. ಈ ಸ್ವಾಧೀನತೆಯಿಂದ ಅದಕ್ಕೆ ಪ್ರಬಲ ವ್ಯಾಪಾರಿ ಒಪ್ಪಂದದ ಅವಕಾಶವೂ ದೊರೆಯಲಿತ್ತು; ಗಾಜಿನ ಬೆಲೆಯಲ್ಲಿ ಉಂಟಾಗುತ್ತಿದ್ದ ಅಸ್ಥಿರತೆಯ ಪ್ರಭಾವವನ್ನು ಇದು ಕಡಿಮೆ ಮಾಡಬಹುದಾಗಿತ್ತು. ವಿಡಿಯೋಕಾನ್, ಅಸ್ಥಿತ್ವದಲ್ಲಿರುವ ಉತ್ಪಾದನಾ ಕ್ಷೇತ್ರಗಳನ್ನು ಉನ್ನತೀಕರಿಸಿ ಮತ್ತು ಸುಧಾರಣಾ ಕ್ರಮಗಳಿಂದ ವೆಚ್ಚವನ್ನು ಕೂಡ ಕಡಿಮೆ ಮಾಡಬಹುದಾಗಿತ್ತು.

ಎಲ್ಲಾ ತೆರನಾದ ಅತ್ಯುನ್ನತ ಸಂಘಟನೆ – ಸ್ವಾಧೀನತೆಯು ವಿಡಿಯೋಕಾನ್ ಗೆ ಅಸ್ತಿತ್ವದಲ್ಲಿರುವ ಅದರ ಗಾಜಿನ ವಸ್ತುಗಳ ವ್ಯಾಪಾರವನ್ನು ಸಮಗ್ರವಾಗಿ ಸಂಘಟಿಸಲು ಸಹಾಯ ಮಾಡಿತು. ಇದರಿಂದಾಗಿ ಅದು ಅಧಿಕ ಉತ್ಪಾದನೆಯನ್ನೂ ಕಂಡಿತು.[] ವಿಡಿಯೋಕಾನ್ ನ ಗಾಜಿನ ವಿಭಾಗವು, ಒಂದೇ ಸ್ಥಳದಲ್ಲಿ ಗಾಜಿನ ವಸ್ತುಗಳ ಅತ್ಯಂತ ದೊಡ್ಡ ಉತ್ಪಾದನಾ ಸ್ಥಾವರ ಹೊಂದಿದೆ. ಇದು ಆರ್ಥಿಕ ಲಾಭದ ರೂಪದಲ್ಲಿ ಕಂಪನಿಗೆ ಸಾಟಿಯಿಲ್ಲದ ಪ್ರಯೋಜನಗಳನ್ನು ನೀಡಿತಲ್ಲದೇ,ಗಾಜಿನ ವಸ್ತುಗಳ ಉದ್ಯಮದಲ್ಲಿ ಮುಂಚೂಣಿ ಸ್ಥಾನವನ್ನು ಕೂಡ ತಂದುಕೊಟ್ಟಿತು. ಈ ಸ್ವಾಧೀನತೆ ವಿಡಿಯೋಕಾನ್ ಗೆ ಅದರ ಗಾಜಿನ ವ್ಯಾಪಾರಕ್ಕಾಗಿ ಸಿದ್ಧ ಮಾರುಕಟ್ಟೆಯನ್ನು ಒದಗಿಸಿದೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ಸಮಗ್ರವಾಗಿ ಸಂಘಟಿತ ಉತ್ಪಾದನಾ ಸೌಲಭ್ಯ ಹೊಂದುವಲ್ಲಿ ಇದು ವಿಡಿಯೋಕಾನ್ ನ ದೀರ್ಘಕಾಲದ ಶ್ರಮದ ಭಾಗವಾಗಿತ್ತು.

ಉತ್ಪನ್ನ ವೈಶಿಷ್ಟ್ಯದ ರೂಪಾಂತರ – ಅತ್ಯಂತ ದೊಡ್ಡ ಗಾತ್ರದ ಪಿಕ್ಚರ್ ಟ್ಯೂಬ್ ಗಳಿಂದ ಸಣ್ಣ ಟ್ಯೂಬ್ ಗಳ ಕಡೆಗೆ ಆಕರ್ಷಿಸಲ್ಪಡುತ್ತಿರುವ, ಬದಲಾಗುತ್ತಿರುವ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ವಿಡಿಯೋಕಾನ್ ಅದರ ಉತ್ಪನ್ನದ ವೈಶಿಷ್ಟ್ಯವನ್ನು ಬದಲಾಯಿಸಿತು.[]

ಒಟ್ಟು ಎಲ್ಲಾ ನಿರ್ವಹಣೆಗಳ ಹೊರತಾಗಿ ವಿಡಿಯೋಕಾನ್, ತಂತ್ರಜ್ಞಾನ ಕಾರ್ಯಕ್ಷೇತ್ರದ ಮೇಲೂ ಕಾರ್ಯನಿರ್ವಹಿಸುವ ಯೋಜನೆ ಹೊಂದಿದೆ. ವಿಲೀನದ ನಂತರ ಇದು ಉತ್ಪಾದನಾ ಕ್ಷೇತ್ರಕ್ಕಾಗಿ ಮತ್ತು ವೇಗದ ಅಂಚೆ ಮಾರ್ಗದ ವ್ಯವಸ್ಥೆ ಅಭಿವೃದ್ಧಿಪಡಿಸಲು ಬಯಸಿತು. ವೆಚ್ಚ ಕಡಿಮೆ ಮಾಡುವ ಬದಲು ಅದು ಮಾರಾಟ ಹೆಚ್ಚಿಸುವುದರ ಕಡೆಗೆ ಗಮನಹರಿಸಿತು. ಈ ಮೂಲಕ ಅಸ್ತಿತ್ವದಲ್ಲಿರುವ ಕಾರ್ಯಕ್ಷೇತ್ರಗಳಲ್ಲಿನ ಉತ್ಪಾದನೆಯನ್ನು ಹೆಚ್ಚಿಸಿತು. ಕಂಪನಿಯು, ಹಿಂಭಾಗದ ಜೋಡಣೆ ಹೊಂದಿರುವ LCD ಪ್ಯಾನಲ್ಸ್(ಫಲಕಗಳು)ಗಳ ಬೃಹತ್ ಮಟ್ಟದ ವ್ಯಾಪಾರೀ ವಲಯದೆಡೆ ನುಗ್ಗಲು ಬಯಸಿತು. ಮಾರಾಟದ ಕ್ಷೇತ್ರದಲ್ಲಿ ಕಂಪನಿಯು, ಅಸ್ಥಿತ್ವದಲ್ಲಿರುವ ಥಾಮ್ಸನ್ ನ ಗ್ರಾಹಕರ ಮೇಲೆ ಪ್ರಭಾವ ಬೀರಬೇಕು ಹಾಗು ಮಾರಾಟವನ್ನು ಗರಿಷ್ಠಗೊಳಿಸಲು, ಗ್ರಾಹಕರರೊಂದಿಗೆ ಆದ್ಯತೆಯ ಪೂರೈಕೆದಾರನ ಸಂಬಂಧ ಬೆಳೆಸಬೇಕೆಂದು ನಿರ್ಧರಿಸಿತು. ಇದರೊಂದಿಗೆ, ವಿಡಿಯೋಕಾನ್ ನ CTV ವಿಭಾಗದ ಸಹಾಯದೊಂದಿಗೆ OEM CTV ವ್ಯಾಪಾರಗಳಲ್ಲೂ ಕೂಡ ವಿಡಿಯೋಕಾನ್ ಲಾಭ ಪಡೆಯಬಲ್ಲದು. ಹೊಸ ಮಾದರಿಗಳ ಮೇಲೆ ಬಂಡವಾಳ ಹೂಡುವುದರೊಂದಿಗೆ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದರಿಂದಲೂ ಕೂಡ ಲಾಭ ಪಡೆಯಬಹುದಾಗಿದೆ.[೧೦]

ಥಾಮ್ಸನ್ ನ ದೃಷ್ಟಿಕೋನ

[ಬದಲಾಯಿಸಿ]

ಥಾಮ್ಸನ್ 2004ರಲ್ಲಿ , ಅತ್ಯಧಿಕ ಅಭಿವೃದ್ಧಿ ಹೊಂದಿದ ಡಿಜಿಟಲ್ ಮೀಡಿಯ ಮತ್ತು ತಂತ್ರಜ್ಞಾನ ವ್ಯವಹಾರ ಕ್ಷೇತ್ರಗಳನ್ನು ಪ್ರವೇಶಿಸಲು ಯೋಜಿಸಿತ್ತು. ವಾಸ್ತವವಾಗಿ ನಷ್ಟ ಅನುಭವಿಸುತ್ತಿದ್ದ ಗ್ರಾಹಕರ ಮತ್ತು ಎಲೆಕ್ಟ್ರಾನಿಕ್ಸ್ ವ್ಯಾಪಾರಗಳನ್ನು ಕೈಬಿಡಲು ಅದೇ ವೇಳೆಗೆ ಥಾಮ್ಸನ್ ಬಯಸಿತ್ತು. ಇದರ ಟಿವಿ ವ್ಯವಹಾರವನ್ನು ಚೀನೀ ವ್ಯಾಪಾರ ಸಮೂಹ TCL ಗೆ ಹಾಗು ಟ್ಯೂಬ್ ವ್ಯಾಪಾರವನ್ನು ವಿಡಿಯೋಕಾನ್ ಗೆ ಮಾರಾಟ ಮಾಡಿದ ಬಳಿಕ, ಥಾಮ್ಸನ್ ಅದರ ಆಡಿಯೋ/ವಿಡಿಯೋ ಬಿಡಿ ಭಾಗಗಳ ವ್ಯಾಪಾರವನ್ನು ಕೈಬಿಟ್ಟಿತು. ಈ ವಿಭಾಗವು ಅದರ ಗ್ರಾಹಕರ ಎಲೆಕ್ಟ್ರಾನಿಕ್ಸ್ ವ್ಯಾಪಾರದ ಕೊನೆಯ ಘಟಕವಾಗಿತ್ತು. ಥಾಮ್ಸನ್ , ವಿಡಿಯೋಕಾನ್ ಗೆ ಮಾರಿದ , ಆಪ್ಟಿಕಲ್ ಘಟಕ ಮತ್ತು ಆಡಿಯೋ/ವೀಡಿಯೋ ಬಿಡಿಭಾಗಗಳ ವ್ಯಾಪಾರದಿಂದ ಉಂಟಾದ ನಷ್ಟದಿಂದಾಗಿ ಇವುಗಳನ್ನು ಮಾರಲೇಬೇಕಾದ ಪರಿಸ್ಥಿತಿಯಲ್ಲಿತ್ತು. ಇವುಗಳಿಂದಾದ ನಷ್ಟ 2005 ರ ಹೊತ್ತಿಗೆ ಒಟ್ಟು €749 ಮಿಲಿಯನ್ ಆಗಿತ್ತು. ಥಾಮ್ಸನ್ ಅನಂತರದ ವರ್ಷಗಳಲ್ಲಿ ತನಗೆ ಆದಾಯ ಉತ್ತೇಜಿಸುವ ಕೆಲವು ವ್ಯಾಪಾರಗಳನ್ನು ಸ್ವಾಧೀನ ಪಡಿಸಿಕೊಂಡಿತು. [೧೧]

ಸ್ವಾಧೀನತೆಗೆ ಇತರ ಸ್ಪರ್ಧಿಗಳು

[ಬದಲಾಯಿಸಿ]

ವಿಡಿಯೋಕಾನ್,2004 ರ ನವೆಂಬರ್ ನಲ್ಲಿ ಥಾಮ್ಸನ್ SA ನ ಕಲರ್ ಪಿಕ್ಚರ್ ಟ್ಯೂಬ್ಸ್ ನ ಉತ್ಪಾದನಾ ಘಟಕವನ್ನು ಖರೀದಿಸುವಾಗ, ಅಲ್ಲಿ ಇತರ 16 ಸ್ಪರ್ಧಿಗಳೂ ಕೂಡ ಹರಾಜಿನಲ್ಲಿದ್ದರು. ವಿಡಿಯೋಕಾನ್, LG ,ಫಿಲಿಪ್ಸ್, ಸ್ಯಾಮ್ ಸಂಗ್, ಮ್ಯಾಟ್ ಸುಷಿತ, ಡೇವೂ ಮತ್ತು ಅನೇಕ ಚೀನೀ ಉತ್ಪಾದಕರೊಂದಿಗೆ ಹರಾಜಿನಲ್ಲಿ ಸೆಣೆಸಬೇಕಾಯಿತು. ಆದರೂ ಅಂತಿಮವಾಗಿ ಇದನ್ನು ಪಡೆದುಕೊಳ್ಳುವಲ್ಲಿ ಸಫಲವಾಯಿತು. ಈ ಒಪ್ಪಂದವು ವಿಡಿಯೋಕಾನ್ ಅನ್ನು CPT ಮಾರುಕಟ್ಟೆಗಾಗಿ ಜಾಗತಿಕ ಶ್ರೇಣಿಯಲ್ಲಿ, ನಂಬರ್ 3 ರ ಸ್ಥಾನಕ್ಕೇರಿಸಿತು. ಈ ಒಪ್ಪಂದ ಕುರಿತು ವಿಡಿಯೋಕಾನ್ ನ ಅಧಿಕಾರಿಯೊಬ್ಬರು ಕೆಳಕಂಡಂತೆ ಹೇಳಿದ್ದಾರೆ: "ಭಾರತ ಮತ್ತು ಭಾರತೀಯ ಕಂಪನಿಗಳು ಕೇವಲ ಅವುಗಳೊಳಗೆ ಮಾತ್ರ ಸವಾಲು ಎದುರಿಸಬೇಕಲ್ಲದೇ, ಚೀನಾದ ವಿರುದ್ಧವೂ ರಕ್ಷಣೋಪಾಯಗಳನ್ನು ನಿರ್ಮಿಸಿ ಸವಾಲು ಎದುರಿಸಬಲ್ಲವು.“ [೧೨]

ವಿಲೀನ ಪೂರ್ವ ವಿದ್ಯಮಾನಗಳ ವಿಶ್ಲೇಷಣೆ

[ಬದಲಾಯಿಸಿ]

CPT ಉದ್ಯಮವು, ಗ್ರಾಹಕರ ಆದ್ಯತೆಗಳಲ್ಲಿ ಉಂಟಾದ ಬದಲಾವಣೆಗಳು, ಸಗಟು ವ್ಯಾಪಾರಿಗಳು ಉತ್ಪನ್ನವನ್ನು ಮಾರಾಟ ಮಾಡುವ ವಿಧಾನ, ಪರ್ಯಾಯ ತಂತ್ರಜ್ಞಾನದ ಮೂಲಕ ಉತ್ಪಾದಕರಿಂದಾದ ಪ್ರಗತಿ, ಪ್ರತಿಸ್ಪರ್ಧಿಗಳ ಸೌಲಭ್ಯ ಸಾಮರ್ಥ್ಯದ ಹೊಂದಾಣಿಕೆ, ಇತ್ಯಾದಿ ಸ್ಪರ್ಧಾತ್ಮಕ ಅಂಶಗಳಿಂದಾಗಿ ತೊಂದರೆಗೊಳಗಾಗಿದೆ.ಈ ಎಲ್ಲಾ ಅಂಶಗಳನ್ನು ಆಧರಿಸಿ ವಿಡಿಯೋಕಾನ್ 2005 ರ ಆಯವ್ಯಯದಿಂದ ಎರಡು ವಿದ್ಯಮಾನಗಳು ಹೊರಬಂದವು. ಮಿತವ್ಯಯವು ಮೊದಲನೆಯ ವಿದ್ಯಮಾನವಾಗಿದೆ. ಇದು ಪ್ರಧಾನವಾಗಿರುವ ಈ ಹಿಂದಿನ (-8 ರಿಂದ -12ಪ್ರತಿಶತ) ಸದೃಶವಾಗಿರುವ ಬೆಲೆ ಒತ್ತಡವನ್ನು, ಎರಡು ವರ್ಷಗಳ ಕಾಲಾವಧಿಯಲ್ಲಿ ಕಡಿಮೆಯಾದ ಸಾಮರ್ಥ್ಯವನ್ನು, ಟ್ರೂ ಫ್ಲ್ಯಾಟ್ ಮತ್ತು LCD ಉತ್ಪಾದಕರಿಗೆ ಉತ್ತಮ ಬೆಳವಣಿಗೆ ನೀಡಿದೆ.ಹೀಗಾಗಿ ಹೊಸ ತಂತ್ರಜ್ಞಾನಕ್ಕೆ ವರ್ಗಾಯಿಸಲ್ಪಡುವುದನ್ನು ಕೂಡಾ ಊಹಿಸಬಹುದಾಗಿದೆ.

ಎರಡನೆಯ ವಿದ್ಯಮಾನವು ಹೆಚ್ಚು ಪ್ರಚೋದನಕಾರಿ, ಊಹಿಸಲಾದ ರೀತಿಯಲ್ಲಿರುತ್ತದೆ. ಗ್ರಾಹಕರು ಟ್ರೂ ಫ್ಲ್ಯಾಟ್ ನ ಕಡೆಗೆ ವೇಗವಾಗಿ ಬದಲಾಗುತ್ತಾರೆ. ಇದರಿಂದಾಗಿ LCD ಉತ್ಪಾದಕರು ಅಧಿಕ ಸಾಮರ್ಥ್ಯ, ಅಧಿಕ ಸ್ಪರ್ಧೆಯನ್ನು ಕಾಣಬಹುದಾಗಿದೆ, ಅಲ್ಲದೇ ಬೆಲೆ ಏರಿಕೆ ಕಾರ್ಯತಂತ್ರಗಳನ್ನು ಗಮನಿಸಬಹುದಾಗಿದೆ ಎಂದೂ ಇದು ಊಹಿಸುತ್ತದೆ. ಎರಡನೆ ವಿದ್ಯಮಾನವು, ವಾತಾವರಣಕ್ಕೆ ಸರಿಯಾಗಿ ಹೊಂದಿಕೆಯಾಗುವ ಕೈಗಾರಿಕಾ ಸೂತ್ರದ ಅಳವಡಿಕೆಯ ಅಗತ್ಯವನ್ನು ಹೊಂದಿದೆ.

ಅದೇನೇ ಆದರೂ ಕೂಡ, ಎರಡನೇ ವಿದ್ಯಮಾನವೇನಾದರೂ ಸಂಭವಿಸಿದಲ್ಲಿ, ವಿಡಿಯೋಕಾನ್ CRT ವ್ಯವಹಾರದಲ್ಲಿ ಅವಕಾಶ ದೊರೆಯಬಹುದೆಂಬ ನಂಬಿಕೆ ಹೊಂದಿದೆ. ಪಾಶ್ಚಿಮಾತ್ಯ ಮಾರುಕಟ್ಟೆಯಲ್ಲಿ ಇದು ಅತ್ಯಂತ ಸಾಮಾನ್ಯವಾದರೂ ಕೂಡ, ಇನ್ನೂ ವ್ಯಾಪಾರವನ್ನು ಹೊಂದಿರುವ BRIC CRT ಯಂತಹ ಮಾರುಕಟ್ಟೆಯಲ್ಲಿ ಬೇಡಿಕೆಯು ಫ್ಲ್ಯಾಟ್ ಪ್ಯಾನಲ್ ನ ಕಡೆಗೆ (ಈ ಪ್ರದೇಶಗಳಲ್ಲಿ ಟಿವಿ ಮಾರುಕಟ್ಟೆಗೆ FPD 70 ಪ್ರತಿಶದ ದಷ್ಟು ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.) ಬದಲಾಗುತ್ತಿದೆ. ಈ ಮಾರುಕಟ್ಟೆಗಳಲ್ಲಿ CRT ನ ಆದ್ಯತಾ ಶ್ರೇಣಿಯ 70 ಪ್ರತಿಶತ ಶೇರುಗಳನ್ನು ಹೊಂದಿದೆ. ಅನೇಕ ಘಟಕಗಳಾಗಿ ಬದಲಾಯಿಸಿದಾಗ ಬೇಡಿಕೆಯು, 100 ಮಿಲಿಯನ್ ಘಟಕಗಳಿಗಿಂತ ಹೆಚ್ಚಿರುತ್ತದೆ. ಈ ರಾಷ್ಟ್ರಗಳಲ್ಲಿ ಪ್ರಧಾನವಾಗಿರುವ ವಿಡಿಯೋಕಾನ್, ಥಾಮ್ಸನ್ ಸ್ವಾಧೀನತೆಯ ಮೌಲ್ಯವನ್ನು ಮುಂದಿನ ವರ್ಷಗಳಲ್ಲಿ ಸಾಧನವಾಗಿ ಬಳಸುವ ಭರವಸೆ ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]

ವಿಲೀನ ನಂತರದ ಸ್ಥಿತಿ(2008)

[ಬದಲಾಯಿಸಿ]

ವಿಡಿಯೋಕಾನ್ ಗೆ ಇಂದೂ ಕೂಡ ಇಟಲಿಯಲ್ಲಿರುವ ಸ್ಥಾವರದಲ್ಲಿ ಸಫಲತೆ ಕಾಣಲಾಗುತ್ತಿಲ್ಲ. ಇದು ಸ್ಥಳೀಯ ಸರ್ಕಾರದಿಂದ (ನಿರುದ್ಯೋಗವನ್ನು ತಡೆಗಟ್ಟಲು ಬಯಸುವ ಸರ್ಕಾರಗಳಿಂದ) ಅನುದಾನದ ರೂಪದಲ್ಲಿ ಬೆಂಬಲ ಪಡೆಯುತ್ತಿದ್ದರೂ ಈ ಸ್ಥಿತಿಯಿದೆ. ಸರ್ಕಾರವು, ವಿಡಿಯೋಕಾನ್ ನೊಂದಿಗೆ ಪಾಲುದಾರಿಕೆಯಲ್ಲಿ LCD ಉತ್ಪಾದನಾ ಸೌಲಭ್ಯದ ರೂಪದಲ್ಲಿ ಹಸಿರುಕ್ಷೇತ್ರದ ಉದ್ಯಮ ಆರಂಭಿಸಲು ಪ್ರಯತ್ನಿಸುತ್ತಿದೆ. ಬ್ಯಾಂಕ್ ಗಳು ಕೂಡ ವಿಡಿಯೋಕಾನ್ ಗೆ ಬೆಂಬಲದ ಹಸ್ತ ಚಾಚುತ್ತಿವೆ. ಈ ಎಲ್ಲಾ ವಲಯಗಳಲ್ಲಿನ ಸಹಾಯದೊಂದಿಗೆ ವಿಡಿಯೋಕಾನ್ ಇಟಲಿಯಲ್ಲಿ ಸ್ಥಾವರವನ್ನು ಯಶಸ್ವಿಯಾಗಿಸುವ ನಿರೀಕ್ಷೆಯಲ್ಲಿದೆ.[೧೩] ಥಾಮ್ಸನ್ ಸ್ಥಾವರವು ಮೆಕ್ಸಿಕೊದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ ಉತ್ಪಾದನೆಯೂ ಕೂಡ ಅಲ್ಲಿ ಕಡಿಮೆಯಾಗಿದೆ. ಪೊಲೆಂಡ್ ನಲ್ಲಿ ಸ್ಥಿತಿಯು ಹೆಚ್ಚು ಆಶಾದಾಯವಾಗಿದ್ದು, ವಿಡಿಯೋಕಾನ್ ಅಲ್ಲಿರುವ ಸ್ಥಾವರಗಳು ಮುಂಬರುವ ದಿನಗಳಲ್ಲಿ ಉತ್ತಮ ಸಾಧನೆ ಮಾಡುತ್ತವೆ ಎಂಬ ಭರವಸೆ ಹೊಂದಿದೆ.[೧೪] ಅದೇನೇ ಆದರೂ ಚೀನೀಯರ ಮಾರುಕಟ್ಟೆಯಲ್ಲಿ ಇದು ಸೋಜಿಗವನ್ನುಂಟು ಮಾಡಬಹುದಾಗಿದೆ.ಅತ್ಯಂತ ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಎದುರಿಸಿದರೂ ಕೂಡ ಇತರ ಸ್ಪರ್ಧಿಗಳ ನಡುವೆಯೂ ವಿಡಿಯೋಕಾನ್ ಅಲ್ಲಿ ತನ್ನ ಸ್ಥಾವರವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಚೀನಾದಲ್ಲಿ CTVಯನ್ನು ಉತ್ಪಾದಿಸಲು ವಿಡಿಯೋಕಾನ್ ವಿಭಿನ್ನ ತಂತ್ರವನ್ನು ಅಳವಡಿಸಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಥಳೀಯ ಜಾಲ ಆಗಿದೆ.ಪ್ರಧಾನ ಕ್ಷೇತ್ರದ ಕಡಿಮೆ ವೆಚ್ಚದ ಅನುಕೂಲಗಳನ್ನು ತೆಗೆದುಕೊಂಡು, ಈ ಪ್ಲೇಯರ್ ಗಳನ್ನು ಸರಬರಾಜು ಮಾಡಲು ಇದು ಯೋಜನೆ ಹಾಕಿದೆ.(ಇದು ಸುಮಾರು 6 ಮಿಲಿಯನ್ CPTs ಗಳನ್ನು ಸರಬರಾಜು ಮಾಡುವ ಗುರಿ ಹೊಂದಿತ್ತು).[೧೫]

ಸ್ವಾಧೀನಪಡಿಸಿಕೊಂಡ ಘಟಕಗಳಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರ

[ಬದಲಾಯಿಸಿ]

LCD ದೂರದರ್ಶನ ವಿಭಾಗವು, ಇಟಲಿಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿದವುಗಳಲ್ಲಿ ಒಂದಾಗಿದೆ. ಇದರ ಒಟ್ಟಾರೆ ಅಭಿವೃದ್ಧಿಯ ದರವು ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 70 ಪ್ರತಿಶತಕಕ್ಕೇರಬಹುದೆಂದು ನಿರೀಕ್ಷಿಸಲಾಗಿದೆ. ಈ ವಿಭಾಗದಲ್ಲಿ ವಿಡಿಯೋಕಾನ್, ಸ್ಥಳೀಯ ಸರ್ಕಾರಗಳೊಂದಿಗೆ ಪಾಲುದಾರಿಕೆಯಲ್ಲಿ ಹಸಿರುಕ್ಷೇತ್ರ ಉದ್ಯಮ ಆರಂಭಿಸಲಿದೆ. ಇಟಲಿಯ ಕೇಂದ್ರ ಸರ್ಕಾರ 180 ಮಿಲಿಯನ್ ಯೂರೋ ಅನುದಾನವನ್ನು ನೀಡಲಿದ್ದು, ಸ್ಥಳೀಯ ಆಡಳಿತಗಳು 40 ಮಿಲಿಯನ್ ನಷ್ಟು ಅನುದಾನವನ್ನೂ ನೀಡಲಿವೆ. ವಿಡಿಯೋಕಾನ್ ಸ್ವತಃ ಸುಮಾರು 300 ಮಿಲಿಯನ್ ಯುರೋ ಹೂಡಲಿದ್ದು, ಉಳಿದ 700 ಮಿಲಿಯನ್ ಅನ್ನು ಬ್ಯಾಂಕ್ ಸಾಲಗಳ ನೆರವೂ ದೊರೆಯಲಿದೆ.

ಚೀನಾದಲ್ಲಿರುವ ಥಾಮ್ಸನ್ ಸ್ಥಾವರದಲ್ಲಿ ಚೀನಾದ ಸ್ಥಳೀಯ ಸರ್ಕಾರವು ಅಲ್ಪಮಟ್ಟಿಗಿನ ಶೇರುದಾರನಾಗಿದೆ.

ಮೆಕ್ಸಿಕೊ

[ಬದಲಾಯಿಸಿ]

ವಿಡಿಯೋಕಾನ್, ಥಾಮ್ಸನ್ ನ CPT ವ್ಯವಹಾರವನ್ನು ವಶಪಡಿಸಿಕೊಂಡಾಗ, ಇದು ಥಾಮ್ಸನ್ ನ ಮೆಕ್ಸಿಕೊ ಸ್ಥಾವರಗಳ ನಿಯಂತ್ರಣವನ್ನೂ ಕೂಡ ಪಡೆಯಿತು. ಅದೇನೇ ಆದರೂ ವಿಡಿಯೋಕಾನ್, ಸರ್ಕಾರವು ಅಗತ್ಯವಿರುವ ಪ್ರೋತ್ಸಾಹದ ಅನುದಾನ ನೀಡಿದರೆ ಮಾತ್ರ ರಾಷ್ಟ್ರದಲ್ಲಿ ಇದನ್ನು ವಿಸ್ತರಿಸುವ ಯೋಜನೆ ಹೊಂದಿದೆ. ಪ್ರಸ್ತುತ ಕೇವಲ 20 ಪ್ರತಿಶತದಷ್ಟು ಅನುದಾನವನ್ನು ಮಾತ್ರ ನೀಡಲು ಸಿದ್ಧವಿರುವ ಆಡಳಿತಗಳಿಂದ ವಿಡಿಯೋಕಾನ್ 25 ರಿಂದ 30 ಪ್ರತಿಶದಷ್ಟು ಅನುದಾನದ ಬೇಡಿಕೆಯನ್ನು ಮುಂದಿಟ್ಟಿದೆ.

ವಿಡಿಯೋಕಾನ್ ನಿಂದ ಥಾಮ್ಸನ್ ನ ನಿರ್ಗಮನ

[ಬದಲಾಯಿಸಿ]

ಥಾಮ್ಸನ್ , ವಿಡಿಯೋಕಾನ್ ನಲ್ಲಿರುವ ಅದರ ಪಾಲನ್ನು ಮಾರುವ ಯೋಜನೆ ಹೊಂದಿತ್ತು. (GDRs ಮೂಲಕ 10 ಪ್ರತಿಶತ ಪಾಲು) ಬಹುಶಃ ಇದನ್ನು ವಿಡಿಯೋಕಾನ್ ನೇ ಕೊಂಡು ಕೊಂಡಿರಬಹುದು. ಥಾಮ್ಸನ್ , ಪ್ರತಿ ಶೇರಿಗೆ 400 ರೂಪಾಯಿಗಳಂತೆ (ಸರಿಸುಮಾರಾಗಿ ಪ್ರತಿ ಶೇರಿಗೆ $10ನಂತೆ) ಪಾಲು ಪಡೆಯುವ ಮೂಲಕ ನಷ್ಟದಲ್ಲಿ ನಿರ್ಗಮಿಸಿತು.ಈ ಒಪ್ಪಂದವು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ನಡೆಯುವುದೆಂದು ನಿರೀಕ್ಷಿಸಲಾಗಿತ್ತು. ಲಕ್ಸಂಬರ್ಗ್ ಶೇರು ವಿನಿಮಯ ಕೇಂದ್ರದಲ್ಲಿ ವಿಡಿಯೋಕಾನ್ ನ GDR ಇತ್ತೀಚೆಗೆ ಸುಮಾರು $5.06 ಗೆ ಮಾರಾಟವಾದವು. ಇವು ಬಾಂಬೆ ಶೇರು ವಿನಿಮಯ ಕೇಂದ್ರದಲ್ಲಿ ಸುಮಾರು 150 ರೂಪಾಯಿಗಳಿಗೆ ಮಾರಾಟವಾಗುತ್ತಿವೆ. ಕಳೆದ 2008 ರ ಜನವರಿ ತಿಂಗಳಿನಲ್ಲಿ ಅತ್ಯಧಿಕ ಎಂದರೆ 52 ವಾರಗಳ ಹಿಂದಿನ ಸೂಚ್ಯಾಂಕ್ಕಿಂತ ಅಧಿಕ ಅಂತರದಲ್ಲಿ 868 ರೂಪಾಯಿಗೆ ಮಾರಾಟವಾಗಿದ್ದವು. ಇದು ಮಾರುಕಟ್ಟೆಯ ನಿಯಂತ್ರಕರ “ಮಂದಗತಿಯ ಸ್ವಾಧೀನತೆ” ಯ ಮಾದರಿಯನ್ನು ಆಕರ್ಷಿಸುವುದಿಲ್ಲ, ಎಂಬುದನ್ನು ಕೂಡ ಗಮನಿಸಬೇಕಾಗಿದೆ. ಒಮ್ಮೆ ಅವರು 5ಪ್ರತಿಶತಕ್ಕಿಂತ ಹೆಚ್ಚು ಪಾಲನ್ನು ಸ್ವಾಧೀನಪಡಿಸಿಕೊಂಡರೆ ಈ ಒಪ್ಪಂದ ವಿದೇಶದ್ದಾಗುತ್ತದೆ. [೧೬]

ಜನರಲ್ ಎಲೆಕ್ಟ್ರಿಕ್ ಅಪ್ಲೈಯನ್ಸ್ ನ ವಿಭಾಗದ ಸಂಭವನೀಯ ಖರೀದಿ

[ಬದಲಾಯಿಸಿ]

ವಿಡಿಯೋಕಾನ್, ಜನರಲ್ ಎಲೆಕ್ಟ್ರಾನಿಕ್ (GE) ನಿಂದ ಬಂದಿರುವ ಆಹ್ವಾನವನ್ನು ಗಮನಿಸುತ್ತಿರುವುದಾಗಿ 2008ರ ಮೇ 23 ರಲ್ಲಿ ಪ್ರಕಟಿಸಿತು. ಗೃಹಬಳಕೆಯ ವಿಭಾಗವು ಇದರ ಶತಮಾನದಷ್ಟು ಹಳೆಯ ವಿಭಾಗವಾಗಿದ್ದು, ಅದನ್ನು ಮಾರಾಟಕ್ಕಿಡಲಾಗಿತ್ತು; ಇದರ ಹರಾಜಿನಲ್ಲಿ ವಿಡಿಯೋಕಾನ್ ಗೂ ಆಹ್ವಾನವಿತ್ತು.[೧೭]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Rakesh R.S. Garia (2010-04-13). ""Results for the Fourth Quarter and Year ended 31 March 2010"" (PDF). videocon.com. Videocon. Archived from the original (PDF) on 2010-07-05. Retrieved 2010-04-13.
  2. ೨.೦ ೨.೧ "Tube Opportunist". Forbes.com. Archived from the original on 2011-07-11. Retrieved 2011-02-03.
  3. "Videocon Industries".
  4. "Company Profile". Videoconworld.com. Archived from the original on 2010-05-28. Retrieved 2010-07-29.
  5. "Videocon Mobile Phones, Compare/Buy Online Mobile Phones Deals India". Videoconmobiles.com. Archived from the original on 2014-12-30. Retrieved 2010-07-29.
  6. "Reserves deplete at PMT, Ravva fields". www.business-standard-b.com.
  7. "Videocon FY 2006 Annual Report" (PDF). videoconworld.com. Archived from the original (PDF) on 2009-03-06. Retrieved 2011-02-03.
  8. "Business World – Oct 06 article" (PDF). videoconworld.com. Archived from the original (PDF) on 2009-01-06. Retrieved 2011-02-03.
  9. "Videocon FY 2006 Annual Report" (PDF). videoconworld.com. Archived from the original (PDF) on 2009-03-06. Retrieved 2011-02-03.
  10. "Videocon Thomson CPT article". videoconworld.com. Archived from the original on 2009-07-07. Retrieved 2011-02-03.
  11. "Thomson FY 2005 Annual Report article" (PDF). Thomson.net.
  12. "Business Today Article on Videocon December 2006" (PDF). www.videoconworld.com.
  13. "Videocon plans Rs 6100 cr LCD facility in Italy". www.rediff.com.
  14. "Mexico seeks Indian investment". www.business-standard.com.
  15. "Videocon and Thomson SA in circular deal for picture tube businessnews". www.domain-b.com.
  16. "Dhoots to buy Thomson's residual stake in Videocon". www.business-standard-b.com.
  17. ವಿಡಿಯೋಕಾನ್ ಮೇ ಬಿಡ್ ಫಾರ್ GE'ಸ್ ಅಪ್ಲಯನ್ಸಸ್ ಡಿವಿಷನ್


ಬಾಹ್ಯ ಕೊಂಡಿಗಳು

[ಬದಲಾಯಿಸಿ]