ವಿಜಯದಾಸರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯದಾಸರು

ವಿಜಯದಾಸರು (ಕ್ರಿ.ಶ.೧೬೮೨ - ೧೭೫೫) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಅಸಂಖ್ಯಾತ ಸುಳಾದಿಗಳನ್ನು ಬರೆದಿದ್ದಾರೆ.ಇದರಿಂದ ವಿಜಯ ದಾಸರನ್ನು ಸುಳಾದಿ ದಾಸರೆಂದು ಪ್ರಸಿದ್ಧಿರಾಗಿದರೆ.

ಜೀವನ[ಬದಲಾಯಿಸಿ]

ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಚೀಕಲಪರವಿಯಲ್ಲಿ ಜನ. ಮೂಲ ಹೆಸರು ದಾಸಪ್ಪ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕಾರ.

ಪುರಂದರದಾಸರು ಇವರಿಗೆ ಹರಿದಾಸ ದೀಕ್ಷೆಯನ್ನಿತ್ತು, ವಿಜಯವಿಠಲ ಎಂಬ ಅಂಕಿತವನ್ನು ಕೊಟ್ಟರೆಂದು ಹೇಳಲಾಗುತ್ತದೆ. ಸುಮಾರು ೨೫,೦೦೦ ಸುಳಾದಿಗಳು, ಉಗಾಭೋಗಗಳನ್ನು ವಿಜಯದಾಸರು ರಚಿಸಿದ್ದಾರೆ. ಇವರ ಶಿಷ್ಯರು ಗೋಪಾಲದಾಸರು.

ಬೃಂದಾವನ[ಬದಲಾಯಿಸಿ]

ಆಂಧ್ರಪ್ರದೇಶ ದ ಗುಂತಕಲ್ ಹತ್ತಿರ ಚಿಪ್ಪಗಿರಿಯಲ್ಲಿ ಇವರ ದೇಹ ನಿರ್ಯಾಣ ಸ್ಥಳವಿದ್ದು, "ಶ್ರೀ ವಿಜಯದಾಸರ ಕಟ್ಟೆ"ಯೆಂದೇ ಪ್ರಖ್ಯಾತವಾಗಿದೆ. ಪ್ರತಿ ವರ್ಷ ಕಾರ್ತೀಕ ಶುಕ್ಲ ದಶಮಿ ದಿನದಂದು ಆರಾಧನೆ ನಡೆಸಲಾಗುತ್ತದೆ.

ಕೀರ್ತನೆಗಳು[ಬದಲಾಯಿಸಿ]

೧.ಅಂತರಂಗದ ಕದವು ತೆರೆಯಿತಿಂದು|ಪ|
ಎಂತು ಪುಣ್ಯದ ಫಲ ಪ್ರಾಪ್ತಿಯಾಯಿತೊ ಎನಗೆ ||ಅ.ಪ||
೨.ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀ ಹರಿ|ಪ|
ನಾದ ಮೂರ್ತಿ ನಿನ್ನ ಪಾದಮೋದದಿಂದ ಭಾವಿಸುವೆ||ಅ.ಪ||

೩.ಪರದೇಶಿ ನೀನು ಸ್ವದೇಶಿ ನಾನು |ಪ|
ಪರಮ ಭಾಗವತರ ಬಾ ಹೋಗಿ ಕೇಳೋಣ||ಅ.ಪ||

೪.ನಿನ್ನ ದರುಶನಕೆ ಬಂದವನಲ್ಲವೋ ಮಹಾ|ಪ|ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ||ಅ.ಪ||

೫.ಎಲ್ಲಿದ್ದರೇನು ಹರಿಗಲ್ಲದವನು |ಪ|
ಸಂತತವು ಜಪಿಸಿದರೆ ಸಲ್ಲುವನೆ ಸದ್ಗತಿಗೆ ||ಅ.ಪ||

೬.ಕಾದನಾ ವತ್ಸವ ಹರಿ ಕಾದನು|ಪ|
ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ||ಅ.ಪ||

೭.ಕಲ್ಲಿನಿಂದಲಿ ಸರ್ವಫಲ ಬಾಹುದೊ |ಪ|
ಕಲ್ಲು ಭಜಿಸಿದರೆ ಕೈವಲ್ಯ ತೋರುವುದು||ಅ.ಪ||

ದೇವರ ನಾಮಗಳು[ಬದಲಾಯಿಸಿ]

ವಿಜಯದಾಸರ ಒಂದು ಅಪರೂಪದ ದೇವರನಾಮ ಇಲ್ಲಿದೆ. ವಿಜಯದಾಸರು ತಿರುಪತಿ ಶ್ರೀನಿವಾಸನ ದರ್ಶನಕ್ಕೆಂದು ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ಇದನ್ನು ರಚಿಸಿದ್ದು ಎಂದು ಹೇಳಲಾಗುತ್ತದೆ. ನಿಂದಾಸ್ತುತಿ ಗಳ ಪ್ರಕಾರಕ್ಕೆ ಸೇರುವ ರಚನೆಯಿದು -

೧.ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

೨.ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

೩.ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
.

==ಉಲ್ಲೇಖ

ಗಳು==