ವಿಕಿರಣಶೀಲ ಅಪಕರ್ಷಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಕಿರಣಶೀಲ ಅಪಕರ್ಷಣ ಒಂದು ಅಸ್ಥಿರವಾದ ಪರಮಾಣು ಕೇಂದ್ರಿಕೆಯು ವಿದ್ಯುದಣು ಕಣಗಳು ಹಾಗೂ ವಿಕಿರಣವನ್ನು ಉತ್ಸರ್ಜಿಸಿ ಸ್ವಯಂಪ್ರೇರಿತವಾಗಿ ಶಕ್ತಿಯನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಈ ಅಪಕರ್ಷಣ, ಅಥವಾ ಶಕ್ತಿಯ ಕಳೆತವು, ತಂದೆ ನ್ಯೂಕ್ಲೈಡ್ ಎಂದು ಕರೆಯಲಾಗುವ ಒಂದು ಬಗೆಯ ಪರಮಾಣುವು ತನುಜೆ ನ್ಯೂಕ್ಲೈಡ್ ಎಂದು ಹೆಸರಿಸಲಾಗುವ ಮತ್ತೊಂದು ಬಗೆಯ ಪರಮಾಣುವಾಗಿ ಪರಿವರ್ತನೆಯಾಗುವಲ್ಲಿ ಪರಿಣಮಿಸುತ್ತದೆ. ಉದಾಹರಣೆಗೆ: ಕಾರ್ಬನ್-೧೪ ಪರಮಾಣುವು ("ತಂದೆ") ವಿಕಿರಣವನ್ನು ಉತ್ಸರ್ಜಿಸಿ ನೈಟ್ರೋಜನ್-೧೪ ಪರಮಾಣುವಿಗೆ ("ತನುಜೆ") ಪರಿವರ್ತನೆಯಾಗುತ್ತದೆ.