ವಿಷಯಕ್ಕೆ ಹೋಗು

ಹೆನ್ರಿ ಬೆಕರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿ ಬೆಕರಲ್

ಹೆನ್ರಿ ಬೆಕರಲ್(15 ಡಿಸೆಂಬರ್ 1852 ;25 ಆಗಸ್ಟ್ 1908)ಫ್ರಾನ್ಸ್‌ನ ಭೌತಶಾಸ್ತ್ರಜ್ಞ.ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿಯವರೊಂದಿಗೆ ವಿಕಿರಣಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿ ೧೯೦೩ ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾದವರು.

ಜೀವನ[ಬದಲಾಯಿಸಿ]

ಹೆನ್ರಿ ಬೆಕೆರಲ್ ಒಬ್ಬ ಪ್ರಸಿದ್ಧ ಭೌತಶಾಸ್ತ್ರ ವಿಜ್ಞಾನಿ. ಕ್ರಿ.ಶ ೧೯೦೩ ರಲ್ಲಿ ವಿಕಿರಣ ಪಟುತ್ವ ವಿದ್ಯಮಾನವನ್ನ ಸಂಶೋಧಿಸಿದ್ದಕ್ಕಾಗಿ ಆ ವರ್ಷದ ನೋಬಲ್ ಪ್ರಶಸ್ತಿಯನ್ನ ಪಡೆದರು. ಈ ಭೌತಶಾಸ್ತ್ರದ ಮಹತ್ವದ ಸಂಶೋಧನೆಗಾಗಿ ನೋಬಲ್ ಪ್ರಶಸ್ತಿಯನ್ನ ಪಿಯರೆ ಕ್ಯೂರಿ ಮತ್ತು ಮೇರಿ ಕ್ಯೂರಿಯೊಂದಿಗೆ ಹಂಚಿಕೊಂಡರು.[೧]

ಸಾಧನೆ[ಬದಲಾಯಿಸಿ]

ಇವರು, ರೇಡಿಯಂನಿಂದ ಉತ್ಸರ್ಜಿತವಾಗುವ ವಿಕಿರಣಗಳು ಎಲೆಕ್ಟ್ರಾನ್ ಗಳ ಪ್ರವಾಹದಿಂದ ಕೂಡಿರುತ್ತವೆ ಎಂಬುದನ್ನ ಕಂಡುಹಿಡಿದರು. ಹೀಗಾಗಿ, ಇವರು ಕಂಡುಹಿಡಿದ ಕಿರಣಗಳಿಗೆ ಬೇಕೆರಲ್ ಕಿರಣಗಳು ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲದೇ, ವಿಕಿರಣ ಪಟುತ್ವದ ಎಸ್. ಐ. ಏಕಮಾನಕ್ಕೆ ಇವರ ಹೆಸರನ್ನೇ ಇಟ್ಟು ಗೌರವಿಸಲಾಗಿದೆ.[೨]

ಹೆನ್ರಿ ಬೇಕೆರಲ್, ಭೌತಶಾಸ್ತ್ರದ ಪ್ರಾಧ್ಯಾಪಕರಾಗಿಯೂ, ಇಂಜಿನಿಯರ್ ಆಗಿಯೂ ಅಪೂರ್ವ ಸೇವೆಯನ್ನ ಸಲ್ಲಿಸಿದ್ದಾರೆ. ಕ್ರಿ.ಶ ೧ ೯ ೦ ೮ ರಲ್ಲಿ ಇವರು ನಿಧನರಾದರು.

ಪ್ರಮುಖ ಸಂಶೋಧನೆಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://www.nobelprize.org/nobel_prizes/physics/laureates/1903/becquerel-bio.html
  2. "ಆರ್ಕೈವ್ ನಕಲು". Archived from the original on 2018-03-23. Retrieved 2013-07-31. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)