ವಿಷಯಕ್ಕೆ ಹೋಗು

ವಿಕಿರಣಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಧುನಿಕ ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆ (ಪಿಎಸಿಎಸ್‌) ಕಂಪ್ಯೂಟರ್ ಕಾರ್ಯಸ್ಥಾನದಲ್ಲಿ ಮೂಡಿಬಂದಿರುವ ವೈದ್ಯಕೀಯ ಚಿತ್ರಗಳನ್ನು ವ್ಯಾಖ್ಯಾನಿಸುತ್ತಿರುವ ವಿಕಿರಣಶಾಸ್ತ್ರಜ್ಞ.ಸ್ಯಾನ್ ಡೀಗೊ, ಕ್ಯಾಲಿಫೊರ್ನಿಯಾ, 2010.
Dr. Macintyre's X-Ray Film (1896)

ವಿಕಿರಣಶಾಸ್ತ್ರ ವೆಂಬುದು ವಿಜ್ಞಾನದ ಒಂದು ಭಾಗ. ಇದರಲ್ಲಿ ವಿಜ್ಞಾನಿಗಳು ಮಾನವ ಶರೀರದ ಒಳಭಾಗವನ್ನು ವಿವಿಧ ಕಿರಣಗಳಿಂದ ವೀಕ್ಷಿಸಲು ಕ್ಷ-ಕಿರಣಗಳನ್ನು ಬಳಸುವರು.

ರೋಗಗಳನ್ನು ನಿರ್ಣಯಿಸಿ ಅವುಗಳಿಗೆ ಚಿಕಿತ್ಸೆ ನೀಡಲು, ವಿಕಿರಣಶಾಸ್ತ್ರಜ್ಞರು ಚಿತ್ರಣ ತಂತ್ರಜ್ಞಾನಗಳ ಸರಣಿಗಳನ್ನೇ ಬಳಸಿಕೊಳ್ಳುವರು. ಅವುಗಳಲ್ಲಿ ಶ್ರವಣಾತೀತ ದ್ವನಿ (ultrasound), ಕಂಪ್ಯೂಟೆಡ್‌ ತಲಲೇಖನ (computed tomography) (CT), ಪರಮಾಣು ವೈದ್ಯಕೀಯಶಾಸ್ತ್ರ (nuclear medicine), ಧನ-ಋಣಕಣ ಹೊರಸೂಸುವಿಕೆ ತಲಲೇಖನ (positron emission tomography) (PET) ಹಾಗೂ ಆಯಸ್ಕಾಂತೀಯ ಅನುರಣನ ಚಿತ್ರಣ (magnetic resonance imaging) (MRI) ಸೇರಿವೆ.   ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ (Interventional radiology) ಎಂಬುದು ಸಾಮಾನ್ಯವಾಗಿ, ಚಿತ್ರಣ ತಂತ್ರಜ್ಞಾನಗಳ ಮಾರ್ಗದರ್ಶನದಲ್ಲಿ ಕನಿಷ್ಠಪಕ್ಷ ಗಾಯವುಳ್ಳ ಚಿಕಿತ್ಸೆ ನೀಡುವ ವಿಧಾನವಾಗಿದೆ.  ಸಾಮಾನ್ಯವಾಗಿ, ವಿಕಿರಣ ಚಿತ್ರಣಕಾರ ಅಥವಾ ವಿಕಿರಣಶಾಸ್ತ್ರೀಯ ತಂತ್ರಜ್ಞರು ಈ ವೈದ್ಯಕೀಯ ಚಿತ್ರಣ ಪರೀಕ್ಷೆ ನಡೆಸುವರು.

ವಿಕಿರಣಶಾಸ್ತ್ರೀಯ ಚಿತ್ರಗಳ ಗ್ರಹಣ

[ಬದಲಾಯಿಸಿ]

ರೋಗನಿರ್ಣಯದ ವಿಕಿರಣಶಾಸ್ತ್ರದ ಕ್ಷೇತ್ರದಲ್ಲಿ ಕೆಳಕಂಡ ಚಿತ್ರಣ ವಿಧಾನಗಳನ್ನು ಬಳಸಲಾಗಿದೆ:

ಮುನ್ನಂದಾಜು (ಸಾಮಾನ್ಯ) ವಿಕಿರಣ-ಚಿತ್ರಣ

[ಬದಲಾಯಿಸಿ]
ಮ್ಯಾಡ್ಯೂರಾ ಪಾದದ ಕ್ಷ-ಕಿರಣ

ಕ್ಷ-ಕಿರಣಗಳನ್ನು ರೋಗಿಯ ಮೂಲಕ ಗ್ರಹಣಾ ಉಪಕರಣಕ್ಕೆ ಹಾಯಿಸಿದಾಗ ವಿಕಿರಣಚಿತ್ರಗಳು (Radiographs) (ಅಥವಾ ರಾಂಟ್ಜೆನೊಗ್ರಾಫ್‌ಗಳು (roentgenographs) - ಕ್ಷ-ಕಿರಣಗಳನ್ನು ಪರಿಶೋಧಿಸಿದ ವಿಲ್ಹೆಮ್‌ ಕಾನ್ರಾಡ್‌ ರಾಂಟ್ಜೆನ್‌ ಅವರ ಸ್ಮರಣಾರ್ಥವಾಗಿ) ಉತ್ಪಾದನೆಯಾಗುತ್ತವೆ. ರೋಗನಿರ್ಣಯದಲ್ಲಿ ಉಪಯುಕ್ತವಾಗಿಸಲು ಈ ಕಿರಣಗಳನ್ನು ಚಿತ್ರರೂಪಕ್ಕೆ ಪರಿವರ್ತಿಸಲಾಗುತ್ತದೆ.

ಮೂಲತಃ ಮತ್ತು ಸಾಮಾನ್ಯ ಚಿತ್ರಣಗಳು ಬೆಳ್ಳಿಯಂತಿರುವ ವರ್ಣ ಪದರಗಳನ್ನು ಉತ್ಪಾದಿಸುತ್ತವೆ.  ಪೊರೆ-ಪರದೆಯ ವಿಕಿರಣ-ಚಿತ್ರಣದಲ್ಲಿ, ಕ್ಷ-ಕಿರಣದ ನಳಿಕೆಯು ಕ್ಷ-ಕಿರಣಗಳನ್ನು ಉತ್ಪಾದಿಸುತ್ತವೆ. ಇದನ್ನು ರೋಗಿಯ ಶರೀರದ ರೋಗದ ಭಾಗದತ್ತ ಹಾಯಿಸಲಾಗುತ್ತದೆ.  ರೋಗಿಯ ಮೂಲಕ ಹಾದುಹೋಗುವ ಕ್ಷ-ಕಿರಣಗಳು ಚದುರುಹೋಗುವಿಕೆ ಮತ್ತು ಗದ್ದಲವನ್ನು ಕಡಿಮೆಗೊಳಿಸಲು ಅವನ್ನು ಶೋಧಿಸಲಾಗುವುದು. ನಂತರ ಅವನ್ನು ಬೆಳಕು-ಹಾದುಹೋಗದ ಬಿಲ್ಲೆಯಲ್ಲಿ ಬೆಳಕು-ಬೀರುವ ಫೊಸ್ಫೊರ್ಸ್‌ ಪರದೆಯ ಮೇಲೆ ಬಿಗಿಯಾಗಿ ಕೂಡಿಸಲಾದ, ಸಂಸ್ಕರಿಸಿಲ್ಲದ ಪದರವೊಂದಕ್ಕೆ ರಾಚಲಾಗುವುದು.  ಈ ಪದರವನ್ನು ನಂತರ ರಾಸಾಯನಿಕ ರೀತ್ಯಾ ಸಂಸ್ಕರಿಸಿದ ನಂತರ ಅದರ ಮೇಲೆ ಚಿತ್ರವೊಂದು ಮೂಡಿಬರುವುದು.  ಇಂದು, ಪದರ-ಪರದೆ ವಿಕಿರಣ-ಚಿತ್ರಣದ (Film-Screen Radiography) ಸ್ಥಳದಲ್ಲಿ ಡಿಜಿಟಲ್‌ ವಿಕಿರಣ-ಚಿತ್ರಣವು (Digital Radiography (DR)) ಪ್ರಚಲಿತವಾಗಿದೆ. ಇದರಲ್ಲಿ ಕ್ಷ-ಕಿರಣಗಳು ಸಂವೇದಿಗಳ ಬಿಲ್ಲೆಗೆ ತಾಗುತ್ತವೆ. ಈ ಸಂವೇದಿಗಳು ಸಂಕೇತಗಳನ್ನು ಡಿಜಿಟಲ್‌ ಮಾಹಿತಿಯಾಗಿ ಪರಿವರ್ತಿಸಿ, ಕಂಪ್ಯೂಟರ್‌ ಪರದೆಯ ಮೇಲೆ ಚಿತ್ರ-ರೂಪದಲ್ಲಿ ಮೂಡಿಸುತ್ತವೆ.

ವಿಕಿರಣಶಾಸ್ತ್ರದ ಮೊದಲ 50 ವರ್ಷಗಳಲ್ಲಿ, ಸಾಮಾನ್ಯ ವಿಕಿರಣ-ಚಿತ್ರಣವು ಏಕೈಕ ಲಭ್ಯ ಚಿತ್ರಣ ವಿಧಾನವಾಗಿತ್ತು. ಇದರ ವ್ಯಾಪಕ ಲಭ್ಯತೆ, ವೇಗ ಮತ್ತು ತುಲನಾತ್ಮಕವಾಗಿ ಕಡಿಮೆ ವೆಚ್ಚವಿರುವ ಕಾರಣ, ಶ್ವಾಸಕೋಶಗಳು, ಹೃದಯ ಮತ್ತು ಆಸ್ಥಿಪಂಜರಗಳನ್ನು ಸ್ಪಷ್ಟವಾಗಿ ನಿರ್ಣಯಿಸಲು ಇದು ಮೊದಲ ಅಧ್ಯಯನವಾಗಿದೆ.

ಫ್ಲುವೊರೊಸ್ಕೊಪಿ (ಅಂಗರಚನೆ ವೀಕ್ಷಿಸುವ ವಿಧಾನ)

[ಬದಲಾಯಿಸಿ]

ಫ್ಲುವೊರೊಸ್ಕೊಪಿ ಮತ್ತು ರಕ್ತನಾಳ-ಚಿತ್ರಣ (angiography) ಕ್ಷ-ಕಿರಣ ಚಿತ್ರಣದ ವಿಶೇಷ ಆನ್ವಯಿಕೆಗಳಾಗಿವೆ. ಇದರಲ್ಲಿ ಪ್ರತಿದೀಪಕ ಪರದೆ ಮತ್ತು ಚಿತ್ರದ ತೀವ್ರತೆ ತೋರಿಸುವ ನಳಿಕೆಯನ್ನು ಸೀಮಿತ ಮಂಡಲದ ಕಿರುತೆರೆ ವ್ಯವಸ್ಥೆ (ಸಿಸಿಟಿವಿ)ಗೆ ಸಂಪರ್ಕಿಸಲಾಗಿರುತ್ತದೆ.[]: 26  ಇದರಿಂದಾಗಿ ಚಲಿಸುತ್ತಿರುವ ರಚನೆಗಳ ಚಿತ್ರಣಕ್ಕೆ ಅನುಕೂಲಕರವಾಗಿಸುತ್ತದೆ, ಅಥವಾ ವಿಕಿರಣ-ತದ್ವಿರುದ್ಧ (radiocontrast)ದ ಕಾರಕದೊಂದಿಗೆ ವರ್ಧಿತವಾಗಿರುತ್ತದೆ. ರೇಡಿಯೊಕಾಂಟ್ರಾಸ್ಟ್‌ ಕಾರಕಗಳನ್ನು ರೋಗಿಗೆ ನೀಡಲಾಗುತ್ತದೆ. ರಕ್ತನಾಳಗಳು, ಮೂತ್ರಾಂಗ-ಜನನಾಂಗ ವ್ಯವಸ್ಥೆ, ಅಥವಾ ಉದರ ಮತ್ತು ಕರುಳು ವ್ಯವಸ್ಥೆಯ ಅಂಗರಚನಾ ಶಾಸ್ತ್ರ ಹಾಗೂ ಕ್ರಿಯೆಯನ್ನು ರೇಖಿಸಲು, ರೋಗಿಯ ಬಾಯಿ ಮೂಲಕ ಅಥವಾ ಚುಚ್ಚುಮದ್ದಿನ ಮೂಲಕ ಇದನ್ನು ದೇಹದೊಳಗೆ ಸೇರಿಸಲಾಗುತ್ತದೆ. ಸದ್ಯಕ್ಕೆ ಎರಡು ರೇಡಿಯೊಕಾಂಟ್ರಾಸ್ಟ್‌ಗಳು ಬಳಕೆಯಲ್ಲಿವೆ. ಉದರ ಮತ್ತು ಕರುಳು ವ್ಯವಸ್ಥೆಯ ತಪಾಸಣೆ ಮಾಡಲು ಬೇರಿಯಮ್‌ (BaSO4 ರೂಪದಲ್ಲಿ)ದ್ರವವನ್ನು ಬಾಯಿ ಮೂಲಕ ಅಥವಾ ಗುದದ್ವಾರದ ಮೂಲಕ ರೋಗಿಗೆ ನೀಡಬಹುದಾಗಿದೆ. ಬಹು-ಸ್ವಾಮ್ಯ ರೂಪದಲ್ಲಿ ಅಯೊಡಿನ್‌ನ್ನು ಬಾಯಿ, ಗುದದ್ವಾರ, ಅಪಧಮನಿ, ಅಥವಾ ಅಭಿದಮನಿ ಮೂಲಕ ರೋಗಿಗೆ ನೀಡಬಹುದು. ಈ ರೇಡಿಯೊಕಾಂಟ್ರಾಸ್ಟ್‌ ಕಾರಕಗಳು ಕ್ಷ-ಕಿರಣ ವಿಕಿರಣಗಳನ್ನು ಬಲವಾಗಿ ಹೀರುತ್ತವೆ ಅಥವಾ ಚದುರಿಸುತ್ತವೆ. ನೈಜ-ಸಮಯದ ಚಿತ್ರಣದೊಂದಿಗೆ, ಅನ್ನನಾಳದಲ್ಲಿನ ಸಂಕೋಚವಿಸ್ತಾರ ಚಲನ(ಆಕುಂಚನ) ಅಥವಾ ಅಪಧಮನಿಗಳು ಹಾಗೂ ಸಿರೆಗಳಲ್ಲಿ ರಕ್ತದ ಹರಿವನ್ನು ತೋರಿಸಲು ಇದು ಅನುಕೂಲಕರವಾಗಿಸುತ್ತದೆ. ಅಯೊಡಿನ್‌ ವೈದೃಶ್ಯದರ್ಶನವು ಶರೀರದ ಅಪಸಾಮಾನ್ಯ ಭಾಗಗಳಲ್ಲಿ ಸಾಮಾನ್ಯ ಅಂಗಾಂಶಗಳಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ, ದುರ್ಮಾಂಸಗಳು, ಉರಿಯೂತದ ಚೀಲ, ಉರಿಯೂತದಂತಹ ಅಪಸಾಮಾನ್ಯತೆಗಳು ಎದ್ದು ಕಾಣುತ್ತವೆ. ಇನ್ನೂ ಹೆಚ್ಚಿಗೆ, ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ, ಉದರ-ಕರುಳು ವ್ಯವಸ್ಥೆಗಳಿಗಾಗಿ ಗಾಳಿಯನ್ನೂ ಸಹ ಕಾರಕದ ರೂಪದಲ್ಲಿ ಬಳಸಲಾಗುತ್ತದೆ. ಇಂಗಾಲ ಡಯಾಕ್ಸೈಡ್‌ನ್ನು ವೈದೃಶ್ಯದರ್ಶನ ಕಾರಕದ ರೂಪದಲ್ಲಿ ಬಳಸಲಾಗುತ್ತದೆ. ಈ ನಿದರ್ಶನಗಳಲ್ಲಿ, ವೈದೃಶ್ಯದರ್ಶನ ಕಾರಕವು ಸುತ್ತಮುತ್ತಲ ಅಂಗಾಂಶಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಕ್ಷ-ಕಿರಣ ವಿಕಿರಣದ ಪ್ರಭಾವವನ್ನು ಹೀರಿಕೊಳ್ಳುತ್ತದೆ.

ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ (Interventional radiology)

[ಬದಲಾಯಿಸಿ]

ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ ವನ್ನು ('ಐಆರ್ ‌' ಅಥವಾ ಕೆಲವೊಮ್ಮೆ 'ವಿಐಆರ್ '‌ (ನಾಳೀಯ ಮತ್ತು ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ) ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ ಅಥವಾ ಚಿತ್ರ-ಮಾರ್ಗದರ್ಶಿತ ಶಸ್ತ್ರಚಿಕಿತ್ಸೆ ಎಂದೂ ಹೇಳಲಾಗಿದೆ. ಇದು ವಿಕಿರಣಶಾಸ್ತ್ರದ ಉಪವಿಶಿಷ್ಟವಾಗಿದೆ. ಇದರಲ್ಲಿ ಚಿತ್ರ ಮಾರ್ಗದರ್ಶಕ ಬಳಸಿ ಕನಿಷ್ಠಪಕ್ಷದ ಶಸ್ತ್ರಚಿಕಿತ್ಸೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವಿಧಾನಗಳನ್ನು ಕೇವಲ ರೋಗ ನಿರ್ಣಯಕ್ಕಾಗಿ ಮಾತ್ರ ಬಳಸಲಾಗುತ್ತದೆ. (ಉದಾಹರಣೆಗೆ, ನಾಳ-ಚಿತ್ರಣ (angiogram) ಇನ್ನು ಕೆಲವನ್ನು ಏಂಜಿಯೊಪ್ಲಾಸ್ಟಿಯಂತಹ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

ರೋಗವನ್ನು ನಿರ್ಣಯಿಸಿ, ಕನಿಷ್ಠ ಮಟ್ಟದ ಚರ್ಮದ ಗಾಯಗೊಳಿಸುವಿಕೆಯ ಮೂಲಕ ಚಿಕಿತ್ಸೆ ನೀಡುವುದು, ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರದ ಹಿಂದಿನ ಮೂಲಭೂತ ಪರಿಕಲ್ಪನೆಯಾಗಿದೆ. ಬಾಹ್ಯ ನಾಳೀಯ ರೋಗ (peripheral vascular disease), ಮೂತ್ರಪಿಂಡಗಳ ಅಪಧಮನಿ ಅತಿಸಂಕೋಚನ (renal artery stenosis), ಕೆಳಗಣ ವೆನಾ ಕಾವಾ ಶೋಧಕ ಸಮಸ್ಯೆ, ಗ್ಯಾಸ್ಟ್ರೊಸ್ಟೊಮಿ (gastrostomy) ನಳಿಕೆ ಸಮಸ್ಯೆ, ಪಿತ್ತದ (biliary) ಸ್ಟೆಂಟ್‌ಗಳು ಹಾಗೂ (hepatic) ಸಮಸ್ಯೆಗಳನ್ನು ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರಜ್ಞರು ರೋಗನಿರ್ಣಯ ಮಾಡಿ, ಹಲವು ಬೇನೆಗಳಿಗೆ ಚಿಕಿತ್ಸೆ ನೀಡುವರು.

ಚಿತ್ರಗಳನ್ನು ಮಾರ್ಗದರ್ಶಕ ರೂಪದಲ್ಲಿ ಬಳಸಲಾಗುತ್ತದೆ. ಸೂಜಿಗಳು ಮತ್ತು ತೂರುನಳಿಕೆಗಳು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುವ ಪ್ರಾಥಮಿಕ ಉಪಕರಣಗಳಾಗಿವೆ.  ಶಸ್ತ್ರಚಿಕಿತ್ಸಾ ವಿಕಿರಣಶಾಸ್ತ್ರಜ್ಞರು ತಮ್ಮ ಉಪಕರಣಗಳನ್ನು ರೋಗಿಯ ಶರೀರದಲ್ಲಿನ ರೋಗಗ್ರಸ್ಥ ಅಂಗದತ್ತ ತಳ್ಳಲು ಈ ಈ ಚಿತ್ರಗಳು ನಕ್ಷೆ ಒದಗಿಸುತ್ತವೆ.  ರೋಗಿಗೆ ಸಂಭವಿಸಬಹುದಾದ ನೋವನ್ನು ಕಡಿಮೆಗೊಳಿಸುವುದರ ಮೂಲಕ, ಈ ಬಾಹ್ಯ ಶಸ್ತ್ರ ಚಿಕಿತ್ಸೆಗಳು ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಿ, ರೋಗಿ ಗುಣಮುಖರಾಗುವ ಸಮಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾತಿಯ ಸಮಯವನ್ನೂ ಸಹ ಕಡಿಮೆಗೊಳಿಸುತ್ತವೆ.  ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ತರಬೇತಿ ಪಡೆದ ಶಸ್ತ್ರಚಿಕಿತ್ಸಾ ವಿಕಿರಣಶಾಸ್ತ್ರಜ್ಞರಾಗಲು, ವ್ಯಕ್ತಿಯೊಬ್ಬರಿಗೆ ಸುಮಾರು ಹದಿನೈದು ವರ್ಷಗಳ ಕಾಲ ಪ್ರೌಢ-ಶಾಲಾ-ನಂತರದ ತರಬೇತಿ ಪಡೆಯುವ ಅಗತ್ಯವಿದೆ. ಇದರಲ್ಲಿ ಏಳು ವರ್ಷ ತರಬೇತಿ ಅವಧಿಯಾಗಿರುವುದು.[]

ಕಂಪ್ಯೂಟರ್‌ ತಲಲೇಖನ ಸ್ಕ್ಯಾನಿಂಗ್‌

[ಬದಲಾಯಿಸಿ]
ಮೆದುಳಿನ ಕಂಪ್ಯೂಟರ್‌ ತಲಲೇಖನಾ ಸ್ಕ್ಯಾನ್‌ ಚಿತ್ರದ ಒಂದು ಭಾಗ.

ಸಿಟಿ ಚಿತ್ರಣವು ಶರೀರದ ಚಿತ್ರ ಸೆರೆಹಿಡಿಯಲು ಕಂಪ್ಯೂಟಿಂಗ್‌ ಗಣನೆಗಳೊಂದಿಗೆ ಕ್ಷ-ಕಿರಣಗಳನ್ನು ಬಳಸುತ್ತದೆ.[] (ಕಂಪ್ಯುಟರ ಸ್ಕ್ಯಾನಿಂಗ್)ಸಿಟಿಯಲ್ಲಿ, ಉಂಗುರಾಕಾರದ ಉಪಕರಣದಲ್ಲಿ ಕ್ಷ-ಕಿರಣ ಪರಿಶೋಧಕ ಅಥವಾ ಪರಿಶೋಧಕಗಳೆದುರು ಕ್ಷ-ಕಿರಣ ಉತ್ಪಾದಿಸುವ ನಳಿಕೆಯು ತಪಾಸಣೆಗೊಳಗಾಗಿರುವ ರೋಗಿಯ ಸುತ್ತಲೂ ಸುತ್ತಿ, ಕಂಪ್ಯೂಟರ್‌-ಜನಿತ ಅಡ್ಡಕೊಯ್ತ ಚಿತ್ರವನ್ನು (ಟೊಮೊಗ್ರಾಮ್‌) ಪ್ರದರ್ಶಿಸುತ್ತದೆ. ಸಿಟಿಯನ್ನು ಅಕ್ಷೀಯ ಸಮತಲದಲ್ಲಿ ಸೆರೆಹಿಡಿಯಲಾಗಿದೆ, ಹಣೆಯ ಮೇಲ್ಭಾಗದ ಹಾಗೂ sagittal(ಆಂತರಿಕ) ಚಿತ್ರಗಳನ್ನು ಕಂಪ್ಯೂಟರ್‌ ಮರುನಿರ್ಮಾಣದ ಮೂಲಕ ಹೊರಹೊಮ್ಮಿಸಬಹುದು. ಅಂಗರಚನಾ ಶಾಸ್ತ್ರದ ವರ್ಧಿತ ರೇಖನಕ್ಕಾಗಿ ರೇಡಿಯೊಕಾಂಟ್ರಾಸ್ಟ್‌ ಕಾರಕಗಳನ್ನು ಆಗಾಗ್ಗೆ ಸಿಟಿಯೊಂದಿಗೆ ಬಳಸಲಾಗುತ್ತದೆ. ವಿಕಿರಣ-ಚಿತ್ರಗಳು ಸುಸ್ಪಷ್ಟ ದೈಶಿಕ ಚಿತ್ರ ಉತ್ಪಾದಿಸಿದರೂ, ಸಿಟಿಯು ಕ್ಷ-ಕಿರಣಗಳ ಹೀರುವಿಕೆಯಲ್ಲಿ ಇನ್ನಷ್ಟು ನಾಜೂಕಾದ ವ್ಯತ್ಯಾಸಗಳನ್ನು ಪತ್ತೆ ಮಾಡಬಲ್ಲದು. . ವಿಕಿರಣ-ಚಿತ್ರಕ್ಕಿಂತಲೂ ಸಿಟಿಯು ರೋಗಿಯನ್ನು ಹೆಚ್ಚು ಅಯಾನೀಕರಿಸುವ ವಿಕಿರಣಕ್ಕೆ ಒಡ್ಡಿಸುತ್ತದೆ.

ವಿಕಿರಣವು ರೋಗಿಯ ಸುತ್ತ ಸತತವಾಗಿ ಹಾಯುವಾಗ, ಕಡಿಮೆ ಸಮಯದಲ್ಲಿ ಇನ್ನಷ್ಟು ಸುಸ್ಪಷ್ಟ ಚಿತ್ರಗಳನ್ನು ಉತ್ಪಾದಿಸಲು, ಸುರುಳಿಯಾಕಾರದ ಪರಿಶೋಧಕ ಸಿಟಿಯು 8, 16, 64 ಅಥವಾ ಹೆಚ್ಚು ಪರಿಶೋಧಕಗಳನ್ನು ಬಳಸುತ್ತದೆ.. ಸಿಟಿ ಸ್ಕ್ಯಾನ್‌ ನಡೆಯುವ ಸಮ ಐವಿ ವೈದೃಶ್ಯದರ್ಶನದ ತ್ವರಿತ ನೀಡುವಿಕೆಯೊಂದಿಗೆ, ಈ ಸುಸ್ಪಷ್ಟ ಚಿತ್ರಗಳನ್ನು ಶೀರ್ಷಧಮನಿ, ಮೆದುಳಿನ ಮತ್ತು ಪರಿಧಮನಿಯ ತ್ರಿವಿಮಿತೀಯ ಚಿತ್ರಗಳನ್ನಾಗಿ ಮಾರ್ಪಾಡು ಮಾಡಬಹುದು.

ಮೆದುಳಿನ ರಕ್ತಸ್ರಾವ, ಶ್ವಾಸಕೋಶದ ಧಮನಿರೋಧ (ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ), ಮಹಾಪಧಮನಿಯ ಹರಿತ, ಕರುಳುವಾಳ ರೋಗ, ದೊಡ್ಡಕರುಳಿನ ಉರಿಯೂತ ಹಾಗೂ ಅಡಚಣೆಯಾಗಿಸುವ ಮೂತ್ರ ಪಿಂಡದ ಕಲ್ಲುಗಳು - ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ತ್ವರಿತ ಚಿಕಿತ್ಸೆಯ ಅಗತ್ಯವಿದ್ದು, ರೋಗನಿರ್ಣಯಕ್ಕಾಗಿ ಸಿಟಿ ಸ್ಕ್ಯಾನಿಂಗ್‌ ಬಹಳಷ್ಟು ಉಪಯುಕ್ತ ವಿಧಾನವಾಗಿದೆ. ಸಿಟಿ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿರುವ ಸುಧಾರಣೆಗಳಲ್ಲಿ ಬಹಳ ವೇಗವಾದ ಸ್ಕ್ಯಾನಿಂಗ್‌ ಹಾಗೂ ಉತ್ತಮಗೊಂಡ ಚಿತ್ರ-ಸ್ಪಷ್ಟನೆಯು ಸಿಟಿ ಸ್ಕ್ಯಾನಿಂಗ್‌ನ ನಿಖರತೆ ಮತ್ತು ಉಪಯುಕ್ತತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ವೈದ್ಯಕೀಯ ರೋಗನಿರ್ಣಯ ಹೆಚ್ಚು ಸೂಕ್ತವಾಗಿ ಬಳಕೆಯಾಗುತ್ತಿದೆ.

ಮೊಟ್ಟಮೊದಲ ವಾಣಿಜ್ಯ ಪ್ರಮಾಣದ ಸಿಟಿ ಸ್ಕ್ಯಾನರನ್ನು ಸರ್‌ ಗಾಡ್ಫ್ರೇ ಹೌನ್ಸ್‌ಫೀಲ್ಡ್‌ 1972ರಲ್ಲಿ ಗ್ರೇಟ್‌ ಬ್ರಿಟನ್‌ನ ಇಎಂಐ ಸೆಂಟ್ರಲ್‌ ರಿಸರ್ಚ್‌ ಲ್ಯಾಬ್ಸ್‌ನಲ್ಲಿ ಆವಿಷ್ಕರಿಸಿದರು. ದಿ ಬೀಟ್ಲ್ಸ್‌ರ ಸಂಗೀತಕ್ಕೆ ಇಎಂಐ ವಿತರಣಾ ಸ್ವಾಮ್ಯ ಹೊಂದಿತ್ತು. ಈ ಲಾಭಾಂಶದಿಂದ ಅದು ಈ ಸಂಶೋಧನೆಗೆ ಧನಸಹಾಯ ಮಾಡಿತ್ತು.[] ಸಿಟಿ ಸ್ಕ್ಯಾನಿಂಗ್‌ಗಾಗಿ ಸರ್‌ ಹೌನ್ಸ್‌ಫೀಲ್ಡ್‌ ಮತ್ತು ಅಲಾನ್‌ ಮೆಕ್ಲಿಯೊಡ್‌ ಮೆಕಾರ್ಮಿಕ್‌ ಒಟ್ಟಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ಗಳಿಸಿದರು. ಉತ್ತರ ಅಮೆರಿಕಾದಲ್ಲಿ ಮಿನೆಸೊಟಾದ ರೊಚೆಸ್ಟರ್‌ನ ಮೆಯೊ ಕ್ಲಿನಿಕ್‌ನಲ್ಲಿ ಮೊಟ್ಟಮೊದಲ ಸಿಟಿ ಸ್ಕ್ಯಾನರ್‌ನ್ನು ಸ್ಥಾಪಿಸಲಾಯಿತು.

ಶ್ರವಣಾತೀತ

[ಬದಲಾಯಿಸಿ]

ವೈದ್ಯಕೀಯ ಶ್ರವಣಾತೀತ-ಚಿತ್ರಗ್ರಹಣ (Medical ultrasonography) ನೈಜ ಸಮಯದಲ್ಲಿ ಮೃದು ಅಂಗಾಂಶ ರಚನೆಗಳನ್ನು ವೀಕ್ಷಿಸಲು ಶ್ರವಣಾತೀತ ತಂತ್ರಜ್ಞಾನ (ಅತಿಹೆಚ್ಚು ಆವರ್ತನದ ಧ್ವನಿತರಂಗ (high-frequency sound waves)) ಬಳಸುತ್ತದೆ. ಇಲ್ಲಿ ಯಾವುದೇ ಅಯಾನೀಕರಿಸಿದ ವಿಕಿರಣವಸ್ತುವನ್ನು ಒಳಗೊಂಡಿಲ್ಲ. ಆದರೆ ಶ್ರವಣಾತೀತ ತಂತ್ರಜ್ಞಾನ ಬಳಸಿ ಉತ್ಪಾದಿಸಿದ ಚಿತ್ರಗಳು, ಶ್ರವಣಾತೀತ-ಛಾಯಾಗ್ರಹಣ ನಡೆಸುತ್ತಿರುವ ವ್ಯಕ್ತಿಯನ್ನು ಅವಲಂಬಿಸಿವೆ. ಶ್ರವಣಾತೀತ ಚಿತ್ರಗ್ರಹಣವು ಶ್ವಾಸಕೋಶ, ದೊಡ್ಡ ಕರುಳು ಮತ್ತು ಗುದದ್ವಾರದಂತಹ ಅಂಗಗಳಲ್ಲಿ ಗಾಳಿಯ ಮೂಲಕ ಹಾದು ಚಿತ್ರವನ್ನು ಉತ್ಪಾದಿಸಲಾಗದು. ವೈದ್ಯಕೀಯ ಚಿತ್ರಗ್ರಹಣದಲ್ಲಿ ಶ್ರವಣಾತೀತ ತಂತ್ರಜ್ಞಾನದ ಬಳಕೆಯು ಬಹುಶಃ ಕಳೆದ 30 ವರ್ಷಗಳಲ್ಲಿ ಹೆಚ್ಚಾಗಿದೆ. ಮೊದಲ ಶ್ರವಣಾತೀತ ಚಿತ್ರಗಳು ಸ್ಥಿರ ಹಾಗು ದ್ವಿಮಿತೀಯವಾಗಿದ್ದವು. ಆದರೆ, ಇಂದು ಆಧುನಿಕ ಶ್ರವಣಾತೀತ-ಚಿತ್ರಗ್ರಹಣ, ತ್ರಿವಿಮಿತೀಯ ಮರುನಿರ್ಮಾಣಗಳನ್ನು ನೈಜ ಸಮಯದಲ್ಲಿ ವೀಕ್ಷಿಸಬಹುದು. ಇದು ಒಟ್ಟಾರೆ ಚತುರ್ವಿಮಿತೀಯವೂ ಆಗುವ ಸಾಧ್ಯತೆಯಿದೆ.

ವಿಕಿರಣ-ಚಿತ್ರಣ, ಸಿಟಿ ಸ್ಕ್ಯಾನ್‌ಗಳು ಮತ್ತು ಪರಮಾಣು ವೈದ್ಯಕೀಯ ಚಿತ್ರಣ ತಂತ್ರಗಳಿಗೆ ಹೋಲಿಸಿದರೆ, ಶ್ರವಣಾತೀತ ತಂತ್ರಜ್ಞಾನವು ಅಯಾನೀಕರಿಸುವ ವಿಕಿರಣವನ್ನು ಬಳಸದ ಕಾರಣ, ಬಹಳಷ್ಟು ಸುರಕ್ಷಿತ ಎನ್ನಲಾಗಿದೆ. ಈ ಕಾರಣಕ್ಕಾಗಿ, ಈ ವಿಧಾನವು ಪ್ರಸೂತಿ ಚಿತ್ರಣಸಂದರ್ಭದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭ್ರೂಣದ ಅಂಗರಚನಾಶಾಸ್ತ್ರೀಯ ಬೆಳವಣಿಗೆಯನ್ನು ಕೂಲಂಕಷವಾಗಿ ಗಮನಿಸಿ, ಯಾವುದೇ ಕ್ರಮಬದ್ದವಲ್ಲ ಎನಿಸಿದ ವಿಚಾರಗಳನ್ನು ಬೇಗನೆ ಪತ್ತೆ ಮಾಡಬಹುದಾಗಿದೆ. ಕಾಲಾನಂತರದ ಬೆಳವಣಿಗೆಗಳನ್ನು ಪರಿಶೀಲಿಸಬಹುದು. ಪದೇ-ಪದೇ ಉಂಟಾಗುವ ರೋಗಗಳಿಂದ ಪೀಡಿತರು, ಅಥವಾ ಗರ್ಭಾವಸ್ಥೆಯಿಂದ ಉಂಟಾಗುವ ರೋಗ, ಅಥವಾ ಬಹು-ಗರ್ಭಾವಸ್ಥೆ (ಅವಳಿ, ತ್ರಿವಳಿಗಳು ಇತ್ಯಾದಿ). ಬಣ್ಣದ ಹರಿವಿನ ಡಾಪ್ಲರ್‌ ಶ್ರವಣಾತೀತ ತಂತ್ರಜ್ಞಾನವು (Color-Flow Doppler Ultrasound) ಬಾಹ್ಯ ರಕ್ತ ನಾಳೀಯ ರೋಗದ ತೀವ್ರತೆಯನ್ನು ಅಳೆಯುತ್ತದೆ. ಹೃದಯವಿಜ್ಞಾನವು ಹೃದಯದ ತಪಾಸಣೆ, ಹೃದಯದ ಕವಾಟಗಳು ಮತ್ತು ಪ್ರಮುಖ ಸಿರೆಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಲು ಇದನ್ನು ಬಳಸುತ್ತದೆ. ಶೀರ್ಷಧಮನಿ ಅಪಧಮನಿಯ ಅತಿಸಂಕೋಚನವು ಮೆದುಳಿನ ಮೃತ-ಊತಕಗಳಿಗೆ (ಲಕ್ವಗಳು) ಮುನ್ಸೂಚನೆ ನೀಡಬಹುದು. ಕಾಲುಗಳಲ್ಲಿ Deep Vein Thrombosis (DVT)‌ ಸ್ಥಾನಪಲ್ಲಟವಾಗಿ ಶ್ವಾಸಕೋಶಗಳನ್ನು ತಲುಪುವ ಮುಂಚೆ (ಶ್ವಾಸಕೋಶದ ಧಮನಿಬಂಧ) ಶ್ರವಣಾತೀತ ತಂತ್ರಜ್ಞಾನದ ಮೂಲಕ ಪತ್ತೆ ಮಾಡಬಹುದು. ಚಿಕಿತ್ಸೆ ನೀಡದಿದ್ದಲ್ಲಿ ಮಾರಣಾಂತಿಕವಾಗಬಹುದು. ಶ್ರವಣಾತೀತ ತಂತ್ರಜ್ಞಾನವು, ಅಂಗಾಂಶ ಪರೀಕ್ಷೆಗಳಂತಹ ಚಿತ್ರ-ಮಾರ್ಗದರ್ಶಿತ ಶಸ್ತ್ರಚಿಕಿತ್ಸೆಗಳು ಹಾಗೂ ಥೊರಸೆಂಟೆಸಿಸ್‌ (thoracentesis)(ನೀರು ತುಂಬಿದ ಎದೆಗೂಡಿನೊಳಗಿನನೀರು ತೆಗೆಯುವ)ಅಂತಹ ಬಸಿಕೊಳವೆ ಚಿಕಿತ್ಸೆಗಳಿಗಾಗಿ ಬಹಳ ಉಪಯುಕ್ತವಾಗಿವೆ. ಹಠಾತ್ ಆಘಾತ ಕ್ಕೊಳಗಾದ ರೋಗಿಗಳ ಚಿಕಿತ್ಸೆ ನಿರ್ಧಾರದಲ್ಲಿ, ಜಠರದ ಒಳಚರ್ಮದ ತೊಳೆಯುವ ಉಪಕರಣ ಬದಲಿಗೆ, ಸಣ್ಣ ಗಾತ್ರದ, ಸುಲಭವಾಗಿ ಒಯ್ಯಬಹುದಾದ ಉಪಕರಣಗಳನ್ನು ಬಳಸಬಹುದಾಗಿದೆ. ಹೇಗೆಂದರೆ, ಜಠರದ ಒಳಚರ್ಮದಲ್ಲಿ ರಕ್ತ ಸ್ರಾವ ಇದೆಯೇ ಎಂಬುದನ್ನು ಪತ್ತೆ ಮಾಡಲು ಹಾಗೂ ಪಿತ್ತಜನಕಾಂಗ, ಗುಲ್ಮ ಹಾಗೂ ಮೂತ್ರಪಿಂಡ ಸೇರಿದಂತೆ ಪ್ರಮುಖ ಒಳಾಂಗಗಳು ಸರಿಯಿವೆಯೇ ಎಂಬುದನ್ನು ನಿರ್ಣಯಿಸಬಹುದು. ಆಂತರಿಕ ರಕ್ತಸ್ರಾವ ಅಥವಾ ಯಾವುದಾದರೂ ಪ್ರಮುಖ ಅಂಗಕ್ಕೆ ಗಾಯವಾಗಿದ್ದಲ್ಲಿ, ತ್ವರಿತ, ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ತಪಾಸಣೆ ಮತ್ತು ಸರಿಪಡಿಸುವ ಅಗತ್ಯವಿದೆ.

ಎಂಆರ್‌ಐ (ಆಯಸ್ಕಾಂತೀಯ ಅನುರಣನ ಚಿತ್ರಣ)

[ಬದಲಾಯಿಸಿ]
ಮಾನವ ಮಂಡಿಯಲ್ಲಿ ಸ್ಥಾನಪಲ್ಲಟವಾಗಿರುವ ಮಂಡಿಮೂಳೆ ತೋರಿಸುತ್ತಿರುವ ಎಂಆರ್‌ಐ ಚಿತ್ರ.

ಶರೀರ ಅಂಗಾಂಶಗಳೊಳಗೆ ಅಣುವಿನ ಬೀಜಕಣವನ್ನು (ಸಾಮಾನ್ಯವಾಗಿ ಜಲಜನಕಧನಕಣಗಳು) ಪುನಃ ಜೋಡಿಸಲು ಎಂಆರ್‌ಐ ಬಲವಾದ ಆಯಸ್ಕಾಂತೀಯ ಕ್ಷೇತ್ರಗಳನ್ನು ಬಳಸುತ್ತವೆ. ನಂತರ, ಈ ಬೀಜಕಣಗಳ ತಿರುವಿನ ಅಕ್ಷದ ಸ್ಥಾನಪಲ್ಲಟಗೊಳಿಸಲು ರೇಡಿಯೊ ಸಂಕೇತವನ್ನು ಬಳಸಿ, ಬೀಜಕಣಗಳು ತಮ್ಮ ಸ್ಥಾನ ಹಾಗೂ ಸುತ್ತಮುತ್ತಲ ಸ್ಥಾನಗಳಿಗೆ ಮರಳುವಾಗ ಹೊರಡಿಸುವ ರೇಡಿಯೊ ಆವರ್ತನ ಸಂಕೇತಗಳನ್ನು ಗುರುತಿಸುತ್ತವೆ. ಸ್ಕ್ಯಾನ್‌ ಮಾಡಲಾಗುವ ಅಂಗದ ಹತ್ತಿರ ಇಡಲಾದ ಸುರುಳಿ ರೂಪದ ಆಂಟೆನಾಗಳು ಈ ಸಂಕೇತಗಳನ್ನು ಗ್ರಹಿಸುತ್ತವೆ. ಎಂಆರ್‌ಐ(ಮ್ಯಾಗ್ನೆಟಿಕ್ ರೆಸೊನನ್ಸ್ ಇಮೇಜಿಸ್ ) ಅನುಕೂಲವೇನೆಂದರೆ, ಇದು ಅಕ್ಷೀಯ, ನೆತ್ತಿಯ, sagittal{/2(ಆಂತರಿಕ)} ಹಾಗು ಬಹಳಷ್ಟು ಓರೆ ಸಮತಲಗಳಲ್ಲಿ ಅಷ್ಟೇ ಸುಲಭವಾಗಿ ಚಿತ್ರಗಳನ್ನು ಹೊರಹೊಮ್ಮಿಸುತ್ತದೆ. ಎಲ್ಲಾ ಚಿತ್ರಣ ವಿಧಾನಗಳ ಪೈಕಿ ಎಂಆರ್‌ಐ ಮೃದು ಅಂಗಾಂಶಗಳ ಅತ್ಯುತ್ತಮ ವೈದೃಶ್ಯದರ್ಶನ ನೀಡುತ್ತದೆ. ಸ್ಕ್ಯಾನ್ ಮಾಡುವ ವೇಗ ಮತ್ತು ದೈಶಿಕ ಚಿತ್ರಸ್ಪಷ್ಟತೆಯಲ್ಲಿ ಆಧುನೀಕರಣ, ಜೊತೆಗೆ ಕಂಪ್ಯೂಟರ್‌ ತ್ರಿವಿಮಿತೀಯ ಗಣನೆ ಮತ್ತು ಯಂತ್ರಾಂಶಗಳಲ್ಲಿ ಸುಧಾರಣೆಯಿಂದಾಗಿ, ಸ್ನಾಯು-ಮೂಳೆಯ ವಿಕಿರಣಶಾಸ್ತ್ರ ಮತ್ತು ನರ-ವಿಕಿರಣಶಾಸ್ತ್ರ ಕ್ಷೇತ್ರಗಳಲ್ಲಿ ಎಂಆರ್‌ಐ ಒಂದು ಪ್ರಮುಖ ಸಾಧನವಾಗಿದೆ.

ಒಂದು ನ್ಯೂನತೆಯೇನೆಂದರೆ, ಚಿತ್ರಣ ನಡೆಸುವ ಸಮಯ, ರೋಗಿಯು ದೀರ್ಘಸಮಯ ಬಹಳಷ್ಟು ಸದ್ದಿನ, ಇಕ್ಕಟ್ಟಾದ ಜಾಗದಲ್ಲಿ ಕೈಕಾಲಾಡಿಸದೇ ಬಹಳ ಹೊತ್ತು ತಟಸ್ಥರಾಗಿರಬೇಕು. ಎಂಆರ್‌ಐ ಪರೀಕ್ಷೆಗೆ ಒಳಗಾಗುತ್ತಿರುವ ರೋಗಿಗಳಲ್ಲಿ, ಸುಮಾರು 5%ರಷ್ಟು ಜನರು ಅದನ್ನು ಬೇಡವೆನ್ನುವ ಸಂದರ್ಭಗಳೂ ಉಂಟು. ಇನ್ನಷ್ಟು ಪ್ರಬಲವಾದ ಆಯಸ್ಕಾಂತೀಯ ಕ್ಷೇತ್ರಗಳು (3 ಟೆಸ್ಲಾಗಳು), ತಪಾಸಣಾ ಸಮಯದ ಕಡಿಮೆಗೊಳಿಸುವಿಕೆ, ಇನ್ನಷ್ಟು ಅಗಲವಾದ, ಕಿರಿದಾದ ಆಯಸ್ಕಾಂತೀಯ ಬೋರ್‌ಗಳು ಹಾಗೂ ಇನ್ನಷ್ಟು ಮುಕ್ತ ಆಯಸ್ಕಾಂತದ ವಿನ್ಯಾಸಗಳು ಸೇರಿದಂತೆ ಇತ್ತೀಚೆಗಿನ ಉತ್ತಮಗೊಳಿಸುವಿಕೆಗಳು ಇಕ್ಕಟ್ಟು ಭೀತಿಯಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗಿಸಿವೆ. ಆದರೆ, ಸಮನಾದ ಕ್ಷೇತ್ರಬಲ ಹೊಂದಿರುವ ಆಯಸ್ಕಾಂತಗಳಲ್ಲಿ ಚಿತ್ರದ ಗುಣಮಟ್ಟ ಮತ್ತು ಮುಕ್ತ ವಿನ್ಯಾಸಗಳ ನಡುವೆ ವಿನಿಮಯವಾದಂತಿದೆ. ಮೆದುಳು, ಬೆನ್ನುಹುರಿ ಹಾಗೂ ಸ್ನಾಯು-ಮೂಳೆ ವ್ಯವಸ್ಥೆಯ ಚಿತ್ರಣದಲ್ಲಿ ಎಂಆರ್‌ಐ ಬಹಳಷ್ಟು ಉಪಯುಕ್ತವಾಗಿದೆ. ಕೃತಕ ಹೃದಯ ನಿರ್ವಾಹಕ (pacemaker), ಒಳಕಿವಿ ಸುರುಳಿ, ಶರೀರದೊಳಗೇ ಇರುವ ಔಷಧ ವಿತರಣಾ ಸಾಧನಗಳು, ಕೆಲವು ವಿಶಿಷ್ಟ ಮೆದುಳಿನ ನಾಳವ್ಯಾಕೋಚ ಕ್ಲಿಪ್‌ಗಳು, ಕಣ್ಣುಗಳಲ್ಲಿ ಲೋಹದ ಚೂರುಗಳು ಹಾಗೂ ಲೋಹದ ಯಂತ್ರಾಂಶ ಅಳವಡಿಸಿಕೊಂಡಿರುವ ರೋಗಿಗಳು, ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗುವುದು ಬೇಡ. ಏಕೆಂದರೆ, ಎಂಆರ್‌ಐ ಉಪಕರಣದಲ್ಲಿ ಬಹಳಷ್ಟು ಪ್ರಬಲವಾದ ಆಯಸ್ಕಾಂತೀಯ ಕ್ಷೇತ್ರಗಳು, ಹಾಗೂ ಹೃದಯ ನಿರ್ವಾಹಕದ ನಡುವಿನ ಆಯಸ್ಕಾಂತೀಯ ಘರ್ಷಣೆಗಳ ಸಂಭವಿಸಬಹುದು. ಸಂಭಾವ್ಯ ಆಧುನೀಕರಣಗಳಲ್ಲಿ ಕ್ರಿಯಾ ಚಿತ್ರಣ, ಹೃದಯರಕ್ತನಾಳದ ಎಂಆರ್‌ಐ, ಜಾಗೂ ಎಂಆರ್‌ ಚಿತ್ರ-ಮೂಡಿಸಿದ ಪ್ರಕಾರ ಚಿಕಿತ್ಸೆಗಳೂ ಸೇರಿವೆ.

ಬೀಜಕಣದ ವೈದ್ಯಶಾಸ್ತ್ರ

[ಬದಲಾಯಿಸಿ]

ಬೀಜಕಣದ ವೈದ್ಯಕೀಯ ಶಾಸ್ತ್ರೀಯ ಚಿತ್ರಣವು ವಿಕಿರಣ ಸೂಸುವ ಔಷಧಗಳನ್ನು ರೋಗಿಗಳಿಗೆ ನೀಡುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈ ವಿಕಿರಣ ಸೂಸುವ ಔಷಧಗಳಲ್ಲಿ, ಶರೀರದ ಕೆಲವು ಅಂಗಾಂಶಗಳತ್ತ ಆಕರ್ಷಿತವಾಗುವ ರಾಸಾಯನಿಕ ವಸ್ತುಗಳಿರುತ್ತವೆ. ಇವುಗಳನ್ನು ವಿಕಿರಣ ಆನ್ವೇಷಕದೊಂದಿಗೆ ಗುರುತಿಸಲಾಗುತ್ತದೆ. ಟೆಕ್ನೆಟಿಯಮ್‌-99ಎಂ, ಅಯೊಡಿನ್‌-123, ಅಯೊಡಿನ್‌-131, ಗ್ಯಾಲಿಯಂ-67 ಮತ್ತು ಥ್ಯಾಲಿಯಮ್‌-201 ಸಾಮಾನ್ಯವಾಗಿ ಬಳಸಲಾಗುವ ಆನ್ವೇಷಕಗಳು. ಈ ತಂತ್ರಗಳನ್ನು ಬಳಸಿ, ಹೃದಯ, ಶ್ವಾಸಕೋಶಗಳು, ಥೈರಾಯ್ಡ್‌, ಪಿತ್ತಜನಕಾಂಗ, ಪಿತ್ತಕೋಶ ಮತ್ತು ಮೂಳೆಗಳನ್ನು ಕೆಲವು ನಿರ್ದಿಷ್ಟ ಸ್ಥಿತಿಗಳಿಗಾಗಿ ತಪಾಸಣೆ ಮಾಡಲಾಗುತ್ತದೆ. ಈ ಅಧ್ಯಯನಗಳಲ್ಲಿ ಅಂಗರಚನಾಶಾಸ್ತ್ರೀಯ ವಿವರವು ಸೀಮಿತವಾಗಿದ್ದರೂ, ಬೀಜಕಣದ ವೈದ್ಯಕೀಯ ಶಾಸ್ತ್ರವು ಶರೀರವೈಜ್ಞಾನಿಕ ಕ್ರಿಯೆಯನ್ನು ತೋರಿಸಲು ಬಹಳ ಉಪಯುಕ್ತವಾಗಿದೆ. ಮೂತ್ರಪಿಂಡಗಳ ವಿಸರ್ಜನಾ ಕ್ರಿಯೆ, ಥೈರಾಯ್ಡ್‌ ಗ್ರಂಥಿಯ ಅಯೊಡಿನ್‌ ಸಾರೀಕರಿಸುವ ಕ್ಷಮತೆ, ಹೃದಯದ ಸ್ನಾಯುವಿಗೆ ರಕ್ತದ ಹರಿವು ಇವೆಲ್ಲವನ್ನೂ ಸಹ ಮಾಪನ ಮಾಡಬಹುದಾಗಿದೆ. ಗ್ಯಾಮಾ ಛಾಯಾಗ್ರಾಹಕವು ಪ್ರಮುಖ ಚಿತ್ರಣ ಉಪಕರಣವಾಗಿದೆ. ಶರೀರದಲ್ಲಿರುವ ಆನ್ವೇಷಕವು ಸೂಸುವ ವಿಕಿರಣವನ್ನು ಪತ್ತೆ ಮಾಡಿ ಇದನ್ನು ಚಿತ್ರರೂಪದಲ್ಲಿ ಪ್ರದರ್ಶಿಸುತ್ತದೆ. ಕಂಪ್ಯೂಟರ್ ಸಂಸ್ಕರಣದೊಂದಿಗೆ, ಮಾಹಿತಿಯನ್ನು ಅಕ್ಷೀಯ, ನೆತ್ತಿಯ ಮತ್ತು sagittal(ಆಂತರಿಕ) ಒಳಭಾಗದ ಚಿತ್ರಗಳ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ (ಎಸ್‌ಪಿಇಸಿಟಿ ಚಿತ್ರಗಳು, ಏಕ-ಫೊಟಾನ್‌ ಸೂಸುವಿಕೆಯ ಕಂಪ್ಯೂಟರ್‌ ತಲಲೇಖನ). ಅತ್ಯಾಧುನಿಕ ಉಪಕರಣಗಳಲ್ಲಿ, ಬೀಜಕಣದ ವೈದ್ಯಕೀಯಶಾಸ್ತ್ರೀಯ ಚಿತ್ರಗಳನ್ನು, ಒಟ್ಟಿಗೆಯೆಂದು ತೋರುವಂತಹ ಸಿಟಿ ಸ್ಕ್ಯಾನ್ ಒಂದಿಗೆ ಒಗ್ಗೂಡಿಸಬಹುದು. ಇದರಿಂದಾಗಿ, ರೋಗನಿರ್ಣಯದ ನಿಖರತೆಯನ್ನು ಉತ್ತಮಗೊಳಿಸಲು, ಶರೀರವೈಜ್ಞಾನಿಕ ಮಾಹಿತಿಯನ್ನು ಅಂಗರಚನಾಶಾಸ್ತ್ರೀಯ ರಚನೆಗಳೊಂದಿಗೆ ಆವರಿಸುವಿಕೆ ಅಥವಾ ಅಂಗರಚನಾಶಾಸ್ತ್ರೀಯ ರಚನೆಗಳೊಂದಿಗೆ ಒಟ್ಟಗೆ ನೋಂದಾಯಿಸಬಹುದಾಗಿದೆ.

ಧನ-ಋಣಕಣ ಹೊರಸೂಸುವಿಕೆ ತಲಲೇಖನ (ಪಿಇಟಿ) ಸ್ಕ್ಯಾನಿಂಗ್‌ ಸಹ 'ಬೀಜಕಣ ವೈದ್ಯಕೀಯ' ಶಾಸ್ತ್ರದ ವ್ಯಾಪ್ತಿಗೆ ಬರುತ್ತದೆ. ಪಿಇಟಿ ಸ್ಕ್ಯಾನಿಂಗ್‌ನಲ್ಲಿ, ವಿಕಿರಣವುಳ್ಳ, ಜೈವಿಕವಾಗಿ ಸಕ್ರಿಯ ವಸ್ತುವೊಂದನ್ನು (ಬಹುಮಟ್ಟಿಗೆ ಫ್ಲುಡಿಯಾಕ್ಸಿಗ್ಲೂಕೊಸ್‌ (18ಎಫ್‌) ವಸ್ತುವನ್ನು ರೋಗಿಗೆ ಚುಚ್ಚಲಾಗುತ್ತದೆ. ರೋಗಿಯು ಹೊರಸೂಸುವ ವಿಕಿರಣವನ್ನು ಪತ್ತೆ ಮಾಡಿ, ಶರೀರದ ಬಹು-ಸಮತಲದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಚಯಾಪಚಯ ಕ್ರಿಯೆಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಅರ್ಬುದ ರೋಗದ (ಕ್ಯಾನ್ಸರ್‌) ಅಂಗಾಂಶಗಳು, ಸಾಮಾನ್ಯ ಅಂಗಾಂಶಗಳಿಗಿಂತಲೂ ಹೆಚ್ಚಾಗಿ ಸಕ್ರಿಯ ವಸ್ತುಗಳನ್ನು ಹೆಚ್ಚು ಸಾಂದ್ರೀಕರಿಸುತ್ತವೆ. ಪಿಇಟಿ ಪರಿಶೋಧನೆಗಳನ್ನು ಇನ್ನಷ್ಟು ನಿಖರವಾಗಿ ಸ್ಥಳೀಯಗೊಳಿಸಿ ರೋಗನಿರ್ಣಯದ ನಿಖರತೆಯನ್ನು ಉತ್ತಮಗೊಳಿಸಲು, ಅಂಗರಚನಾಶಾಸ್ತ್ರೀಯ ಚಿತ್ರಣ ಅಧ್ಯಯನದೊಂದಿಗೆ (ಸದ್ಯಕ್ಕೆ ಒಟ್ಟಾರೆ ಸಿಟಿ ಚಿತ್ರಗಳು) ಪಿಇಟಿ ಚಿತ್ರಗಳನ್ನು ಒಟ್ಟುಗೂಡಿಸಬಹುದು ಅಥವಾ ಏಕೀಕೃತಗೊಳಿಸಬಹುದು.

ದೂರ-ವಿಕಿರಣಶಾಸ್ತ್ರ

[ಬದಲಾಯಿಸಿ]

ವಿಕಿರಣಶಾಸ್ತ್ರ ತಜ್ಞರೊಬ್ಬರ ಅಭಿಪ್ರಾಯವನ್ನು ತಿಳಿದುಕೊಳ್ಳಲು ವಿಕಿರಣ-ಚಿತ್ರಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ರವಾನಿಸುವುದಕ್ಕೆ ದೂರಸಂವೇದಿ-ವಿಕಿರಣಶಾಸ್ತ್ರ ಎನ್ನಲಾಗಿದೆ. ಎಂದಿನಂತಿನ ಶಸ್ತ್ರಚಿಕಿತ್ಸೆಯ ನಂತರ, ರಾತ್ರಿಯ ವೇಳೆ ಅಥವಾ ವಾರಾಂತ್ಯಗಳಲ್ಲಿ ತುರ್ತು ಸ್ಥಿತಿಗಳಲ್ಲಿ ಕೋಣೆ, ಐಸಿಯು ಮತ್ತು ಇತರೆ ತುರ್ತು ಪರೀಕ್ಷೆಯ ವ್ಯಾಖ್ಯಾನಗಳಿಗಾಗಿ, ಇದನ್ನು ಆಗಾಗ್ಗೆ ಸ್ಥಳದಿಂದ ಸ್ಥಳಕ್ಕೆ ರವಾನಿಸಲಾಗುತ್ತದೆ. ಈ ನಿದರ್ಶನಗಳಲ್ಲಿ, ಚಿತ್ರಗಳನ್ನು ಸಮಯ, ವಲಯಗಳನ್ನು ದಾಟಿಯೂ ಸಹ ರವಾನಿಸಲಾಗುತ್ತದೆ. (ಉದಾಹರಣೆಗೆ, ಸ್ಪೇನ್‌, ಆಸ್ಟ್ರೇಲಿಯಾ, ಭಾರತ) ಈ ದೇಶಗಳಲ್ಲಿ ಈ ಚಿತ್ರಗಳನ್ನು ಸ್ವೀಕರಿಸುವ ವಿಕಿರಣಶಾಸ್ತ್ರಜ್ಞರು ತಮ್ಮ ಎಂದಿನಂತಹ ಹಗಲಿನ ವೇಳೆಯಲ್ಲಿ ಕಾರ್ಯಮಗ್ನರಾಗಿರುತ್ತಾರೆ. ಬಹಳ ಜಟಿಲವಾದ ವೈದ್ಯಕೀಯ ಸಮಸ್ಯೆಗಳ ಬಗ್ಗೆ ತಜ್ಞ ಅಥವಾ ಸಹಾಯಕತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅವರಿಂದ ಸಲಹೆ ಪಡೆಯಲು ದೂರಸಂವೇದಿ-ವಿಕಿರಣಶಾಸ್ತ್ರ ಬಹಳ ಉಪಯುಕ್ತವಾಗಿದೆ.

ದೂರ-ವಿಕಿರಣಶಾಸ್ತ್ರಕ್ಕೆ ಪ್ರೇಷಣಾ ಕೇಂದ್ರ, ಹೆಚ್ಚು-ವೇಗದ ಅಂತರಜಾಲ ಸಂಪರ್ಕ ಹಾಗೂ ಉನ್ನತ ಮಟ್ಟದ ಸ್ವೀಕೃತಿ ಕೇಂದ್ರ. ಪ್ರೇಷಣಾ ಕೇಂದ್ರದಲ್ಲಿ, ಸಾಧಾರಣ ವಿಕಿರಣ-ಚಿತ್ರಗಳನ್ನು ರವಾನಿಸುವ ಮೊದಲು ಡಿಜಿಟೀಕರಿಸುವ ಯಂತ್ರಕ್ಕೆ ಕಳುಹಿಸಲಾಗುತ್ತದೆ. ಸಿಟಿ ಸ್ಕ್ಯಾನ್‌ಗಳು, ಎಂಆರ್‌ಐಗಳು ಹಾಗೂ ಬೀಜಕಣ ವೈದ್ಯಕೀಯ ಸ್ಕ್ಯಾನ್‌ಗಳು ಮೊದಲೇ ಡಿಜಿಟಲ್‌ ಮಾಹಿತಿಯಾಗಿರುವ ಕಾರಣ, ಅವನ್ನು ನೇರವಾಗಿ ಕಳುಹಿಸಬಹುದು. ಸ್ವೀಕರಿಸುವ ಕೇಂದ್ರದಲ್ಲಿ, ವೈದ್ಯಕೀಯ ಕ್ಷೇತ್ರಕ್ಕೆಂದೇ ತಯಾರಿಸಿ, ಪರೀಕ್ಷಿಸಲಾಗಿರುವ ಕಂಪ್ಯೂಟರ್‌ನ ಉನ್ನತ ಗುಣಮಟ್ಟದ ದರ್ಶಕಗಳನ್ನು ಹೊಂದಿರತಕ್ಕದ್ದು. ನಂತರ, ವ್ಯಾಖ್ಯಾನ ನೀಡುವ ವಿಕಿರಣಶಾಸ್ತ್ರಜ್ಞರು ಈ ವಿಕಿರಣಶಾಸ್ತ್ರ ಫಲಿತಾಂಶವನ್ನು ಕೋರಿಕೆ ಸಲ್ಲಿಸಿದ್ದ ವೈದ್ಯರಿಗೆ ಫ್ಯಾಕ್ಸ್‌ ಅಥವಾ ವಿದ್ಯುನ್ಮಾನ ಅಂಚೆ ಮೂಲಕ ರವಾನಿಸುವರು.

ದೂರ-ವಿಕಿರಣಶಾಸ್ತ್ರದ ದೊಡ್ಡ ಅನುಕೂಲವೇನೆಂದರೆ, ಇಡೀ ದಿನದಲ್ಲಿ ನೈಜ-ಸಮಯದ ತುರ್ತು-ಸಮಯದ ವಿಕಿರಣಶಾಸ್ತ್ರ ಸೇವೆ ಒದಗಿಸಲು-ಪಡೆಯಲು ವಿಭಿನ್ನ ಸಮಯ-ವಲಯಗಳ ಬಳಕೆ. ಇದರ ಅನನುಕೂಲಗಳೇನೆಂದರೆ, ದುಬಾರಿ ವೆಚ್ಚಗಳು, ಕೋರಿಕೆ ಸಲ್ಲಿಸುವ ವೈದ್ಯ ಹಾಗೂ ವಿಕಿರಣಶಾಸ್ತ್ರಜ್ಞರ ನಡುವೆ ಸೀಮಿತ ಸಂಪರ್ಕ, ಹಾಗೂ, ಬೇರೆಡೆಯಿರುವ ವಿಕಿರಣಶಾಸ್ತ್ರಜ್ಞರ ಅಗತ್ಯವನ್ನು ಬೇಡುವ ವಿಧಾನಗಳಿಗೆ ಪೂರೈಕೆಯ ಕೊರತೆ. ದೂರ-ವಿಕಿರಣಶಾಸ್ತ್ರ ಬಳಕೆಯ ಬಗ್ಗೆ ಕಾನೂನು ಮತ್ತು ನಿಯಮಾವಳಿಗಳು ರಾಜ್ಯದಿಂದ ರಾಜ್ಯಗಳಿಗೆ, ದೇಶದಿಂದ ದೇಶಗಳಿಗೆ ವ್ಯತ್ಯಾಸಗಳುಂಟು. ಕೆಲವು ರಾಜ್ಯಗಳಲ್ಲಿ, ವಿಕಿರಣಶಾಸ್ತ್ರೀಯ ಮಹಿತಿ ಕೋರಿಕೆ ರವಾನಿಸುವ ರಾಜ್ಯದಲ್ಲಿ ಕಳುಹಿಸುವ ವ್ಯಕ್ತಿಯೂ ಸಹ ವೈದ್ಯಕೀಯ ವೃತ್ತಿಯ ಅನೂಜ್ಞಾಪತ್ರ ಹೊಂದಿರಬೇಕೆಂಬ ಷರತ್ತು ವಿಧಿಸುತ್ತವೆ. ಕೆಲವು ರಾಜ್ಯಗಳಲ್ಲಿ ಈ ದೂರ-ವಿಕಿರಣಶಾಸ್ತ್ರ ಫಲಿತಾಂಶವನ್ನು ಪ್ರಾಥಮಿಕ ಎಂದು ಪರಿಗಣಿಸಿ, ಆಸ್ಪತ್ರೆಯ ಸಿಬ್ಬಂದಿ ವಿಕಿರಣಶಾಸ್ತ್ರಜ್ಞರು ನೀಡುವ ಫಲಿತಾಂಶವನ್ನು ಅಧಿಕೃತ ಎಂದು ಪರಿಗಣಿಸಬೇಕು.

ವಿಕಿರಣಶಾಸ್ತ್ರಜ್ಞ ತರಬೇತಿ

[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]

ವಿಕಿರಣಶಾಸ್ತ್ರ ಕ್ಷೇತ್ರವು ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಸ್ಪರ್ಧಾತ್ಮಕ ಕ್ಷೇತ್ರವಾಗಿದೆ. ಸಾಫಲ್ಯ ಪಡೆದ ಅಭ್ಯರ್ಥಿಗಳು ಆಗಾಗ್ಗೆ ಬಹಳ ಉತ್ತಮ ಅಂಕ/ಗ್ರೇಡ್‌ ಗಳಿಸಿ, ತಮ್ಮ ಪಂಕ್ತಿಯಲ್ಲಿ ಅಗ್ರಸ್ಥಾನದಲ್ಲಿರುವರು. ಆಧುನಿಕ ಚಿತ್ರಣಕ್ಕೆ ಬಹಳಷ್ಟು ನಿಕಟ ಸಂಬಂಧ ಹೊಂದಿರುವ ಕಂಪ್ಯೂಟರ್‌ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರೆಯುವಿಕೆಯಾಗಿ, ಈ ಕ್ಷೇತ್ರವು ತ್ವರಿತ ವಿಸ್ತರಣೆ ಕಾಣುತ್ತಿದೆ. ರೋಗನಿರ್ಣಯಿಸುವ ವಿಕಿರಣಶಾಸ್ತ್ರಜ್ಞರು ಕನಿಷ್ಠಪಕ್ಷ 13 ವರ್ಷಗಳ ಪ್ರೌಢಶಾಲಾ ನಂತರದ ಶಿಕ್ಷಣ ಸಂಪೂರ್ಣಗೊಳಿಸಿರಬೇಕು; ಇದರಲ್ಲಿ ನಾಲ್ಕು ವರ್ಷ ಕಾಲದ ಪದವಿ ತರಬೇತಿ, ನಾಲ್ಕು ವರ್ಷಗಳ ವೈದ್ಯಕೀಯ ಶಾಲೆ ಹಾಗೂ ಐದು ವರ್ಷಗಳ ಕಾಲದ ಸ್ನಾತಕೋತ್ತರ ತರಬೇತಿ ಸೇರಿವೆ. ಸ್ನಾತಕೋತ್ತರ ಶೈಕ್ಷಣಿಕ ವರ್ಷದಲ್ಲಿ ಮೊದಲನೆಯದು ಸಾಮಾನ್ಯವಾಗಿ ವಿವಿಧ ಆವರ್ತನಗಳುಳ್ಳ ಸಂಕ್ರಮಣದ ವರ್ಷವಾಗಿರುತ್ತದೆ. ಆದರೆ ಕೆಲವೊಮ್ಮೆ ಇದು ಔಷಧ ಕ್ಷೇತ್ರ ಅಥವಾ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಪ್ರಾಥಮಿಕ ತರಬೇತಿ ಅವಧಿಯೂ ಆಗಿರುತ್ತದೆ. ನಂತರ ನಾಲ್ಕು-ವರ್ಷಗಳ ರೋಗನಿರ್ಣಯದ ವಿಕಿರಣಶಾಸ್ತ್ರ ತರಬೇತಿ ಅವಧಿಯಿರುತ್ತದೆ. ವಿಕಿರಣಶಾಸ್ತ್ರ ತರಬೇತಿ ಪಡೆಯುತ್ತಿರುವವರು ಶ್ರವಣಾತೀತ ತಂತ್ರಜ್ಞಾನ, ಕಂಪ್ಯೂಟರ್‌ ತಲಲೇಖನಶಾಸ್ತ್ರ, ಕ್ಷ-ಕಿರಣ, ಬೀಜಕಣ ವೈದ್ಯಕೀಯಶಾಸ್ತ್ರ ಮತ್ತು ವೈದ್ಯಕೀಯ ಅನುರಣದ ಚಿತ್ರಣ (ಎಂಆರ್‌ಐ) ವಿಷಯಗಳ ವೈಜ್ಞಾನಿಕ ಮತ್ತು ತಂತ್ರಜ್ಞಾನದ ವಿಚಾರಗಳನ್ನು ಒಳಗೊಳ್ಳುವ ವೈದ್ಯಕೀಯ ಭೌತಶಾಸ್ತ್ರ ಪರೀಕ್ಷಯಲ್ಲಿ ಉತ್ತೀರ್ಣರಾಗಲೇಬೇಕು. ತರಬೇತಿ ಸಂಪೂರ್ಣತೆಯ ಸನಿಹದಲ್ಲಿ, ತರಬೇತಿ ಪಡೆಯುತ್ತಿರುವ ವಿಕಿರಣಶಾಸ್ತ್ರಜ್ಞರು, ಅಮೆರಿಕನ್‌ ವಿಕಿರಣಶಾಸ್ತ್ರ ಮಂಡಲಿ (ಎಬಿಆರ್‌) ನಡೆಸುವ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗಿರುತ್ತಾರೆ. 2010ರಿಂದ ಆರಂಭಗೊಂಡು, ಎಬಿಆರ್‌ ಮಂಡಲಿಯ ಪರೀಕ್ಷಾ ಮಾದರಿಗಳು ಬದಲಾಗಿ, ಹೊಸದಾಗಿ ಕಂಪ್ಯೂಟರ್‌ ಅಧಾರಿತ ಎರಡು ಪರೀಕ್ಷೆಗಳನ್ನು ಹೊಸದಾಗಿ ಸೇರಿಸಲಾಗಿದೆ. ಇದರಲ್ಲಿ ಮೊದಲ ಪರೀಕ್ಷೆಯನ್ನು ತರಬೇತಿ ಅವಧಿಯ ಮೂರನೆಯ ವರ್ಷದ ನಂತರ, ಹಾಗೂ ಮೊದಲ ಪರೀಕ್ಷೆ ಮುಗಿದು 18 ತಿಂಗಳುಗಳ ನಂತರ ಎರಡನೆಯ ಪರೀಕ್ಷೆ ನೀಡಲಾಗುವುದು.

ವೇಯ್ನ್‌ ಸ್ಟೇಟ್‌ ವೈದ್ಯಕೀಯ ವಿಶ್ವವಿದ್ಯಾನಿಲಯ ಶಾಲೆ ಹಾಗೂ ದಕ್ಷಿಣ ಕೆರೊಲಿನಾ ವಿಶ್ವವಿದ್ಯಾನಿಲಯ ವೈದ್ಯಕೀಯ ಶಾಲೆ - ಇವೆರಡೂ ವಿದ್ಯಾಲಯಗಳು, ತಮ್ಮ-ತಮ್ಮ ಎಂಡಿ ಪಠ್ಯಕ್ರಮದಲ್ಲಿ ಏಕೀಕೃತ ವಿಕಿರಣಶಾಸ್ತ್ರ ವಿಷಯಗಳನ್ನು ಬೋಧಿಸುತ್ತವೆ. ಇವೆರಡೂ ವಿಶ್ವವಿದ್ಯಾನಿಲಯಗಳೊಂದಿಗೆ ಜಿಇ ಸಹಯೋಗವಿದ್ದು, ಅಡ್ವಾನ್ಸ್ಡ್‌ ಡಯಗ್ನೊಸ್ಟಿಕ್‌ ಅಲ್ಟ್ರಾಸೌಂಡ್‌ ಇನ್‌ ಮೈಕ್ರೊಗ್ರ್ಯಾವಿಟಿ ಅಧ್ಯಯನದ ಸಂಶೋಧಕರು ಇದರ ನೇತೃತ್ವ ವಹಿಸಿರುವರು.[][][]

ತರಬೇತಿ ಸಂಪೂರ್ಣಗೊಂಡ ನಂತರ, ವಿಕಿರಣಶಾಸ್ತ್ರಜ್ಞರು ತಾವು ವೃತ್ತಿಯನ್ನು ಆರಂಭಿಸಬಹುದು, ಅಥವಾ ಫೆಲೊಷಿಪ್ಸ್‌ ಎನ್ನಲಾದ ಉಪ-ವಿಶೇಷತಾ ತರಬೇತಿ ಪಡೆಯಬಹುದಾಗಿದೆ. ವಿಕಿರಣಶಾಸ್ತ್ರದಲ್ಲಿ ಉಪ-ವಿಶೇಷ ತರಬೇತಿಗಳ ಉದಾಹರಣೆಗಳಲ್ಲಿ ಉದರದ ಚಿತ್ರಣ, ಕುತ್ತಿಗೆಯ ಚಿತ್ರಣ, ಸಿಟಿ/ಶ್ರವಣಾತೀತ ತಂತ್ರಜ್ಞಾನ, ಎಂಆರ್‌ಐ, ಸ್ನಾಯು-ಮೂಳೆ ಚಿತ್ರಣ ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ, ನರ-ವಿಕಿರಣಶಾಸ್ತ್ರ, ಶಸ್ತ್ರಚಿಕಿತ್ಸೆಯ ನರ-ವಿಕಿರಣಶಾಸ್ತ್ರ, ಶಿಶುವೈದ್ಯಕೀಯ ವಿಕಿರಣಶಾಸ್ತ್ರ, ಸ್ತನರೇಖನ ಹಾಗೂ ಮಹಿಳಾ ಆರೋಗ್ಯ ಚಿತ್ರಣ ಸೇರಿವೆ. ವಿಕಿರಣಶಾಸ್ತ್ರಗಳಲ್ಲಿ ಫೆಲೊಷಿಪ್‌ ತರಬೇತಿ ಕಾರ್ಯಕ್ರಮಗಳು ಸಾಮಾನ್ಯವಾಗಿ ಒಂದರಿಂದ ಎರಡು ವರ್ಷಗಳ ಕಾಲ ನಡೆಯುತ್ತವೆ.[]

ವಿಕಿರಣಚಿತ್ರಣ ಪರೀಕ್ಷೆಗಳನ್ನು ಸಾಮಾನ್ಯವಾಗಿ ವಿಕಿರಣಶಾಸ್ತ್ರೀಯ ತಂತ್ರಜ್ಞರು ನಡೆಸುವರು. (ಇವರನ್ನು ರೋಗನಿರ್ಣಯದ ವಿಕಿರಣಚಿತ್ರಣಕಾರರು ಎನ್ನಲಾಗಿದೆ). ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇವರು ಎರಡು-ವರ್ಷಗಳ ಸಹಯೊಗಿ ಪದವಿ ಹೊಂದಿರುತ್ತಾರೆ. ಅಲ್ಲದೇ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಮೂರು ವರ್ಷಗಳ ಆನರ್ಸ್‌ ಪದವಿ ಹೊಂದಿರುತ್ತಾರೆ.

ಪಶುವೈದ್ಯ ವಿಕಿರಣ ತಜ್ಞರು ಪ್ರಾಣಿಗಳಲ್ಲಿ ಉಂಟಾಗಿರುವ ರೋಗಗಳ ನಿರ್ಣಯ ಮತ್ತು ಚಿಕಿತ್ಸೆ ನೀಡಲು ಕ್ಷ-ಕಿರಣಗಳು, ಶ್ರವಣಾತೀತ ತಂತ್ರಜ್ಞಾನ, ಎಂಆರ್‌ಐ ಮತ್ತು ಬೀಜಕಣ ವೈದ್ಯಕೀಯ ಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಪಶುವೈದ್ಯರಾಗಿರುತ್ತಾರೆ. ಅವರು ಅಮೆರಿಕನ್‌ ಪಶು ವಿಕಿರಣಶಾಸ್ತ್ರ ವಿದ್ಯಾನಿಲಯದಿಂದ ರೋಗನಿರ್ಣಯದ ವಿಕಿರಣಶಾಸ್ತ್ರ ಅಥವಾ ವಿಕಿರಣ ಗಂಥಿಶಾಸ್ತ್ರದಲ್ಲಿ ಪ್ರಮಾಣ ಪತ್ರ ಗಳಿಸಿರುತ್ತಾರೆ.

ಜರ್ಮನಿ

[ಬದಲಾಯಿಸಿ]

ವೈದ್ಯಕೀಯ ಅನೂಜ್ಞಾಪತ್ರ ಪಡೆದ ನಂತರ, ಜರ್ಮನ್‌ ವಿಕಿರಣಶಾಸ್ತ್ರಜ್ಞರು ಐದು ವರ್ಷಗಳ ತರಬೇತಿ ಅವಧಿ, ಅದರ ಅಂತ್ಯದಲ್ಲಿ ಮಂಡಲಿ-ಆಯೋಜಿತ ಪರೀಕ್ಷೆ (Facharztausbildung) ಉತ್ತೀರ್ಣರಾಗುವರು.

2008ರ ತನಕ, ವಿಕಿರಣಶಾಸ್ತ್ರ ತರಬೇತಿ ಯೋಜನಾ ಕಾರ್ಯಕ್ರಮ ನಾಲ್ಕು ವರ್ಷಗಳ ಅವಧಿಯದ್ದಾಗಿತ್ತು. ಸದ್ಯಕ್ಕೆ, ವಿಕಿರಣ ಶಾಸ್ತ್ರ ತರಬೇತಿ ಕಾರ್ಯಕ್ರಮ ಐದು ವರ್ಷಗಳ ಅವಧಿಯದ್ದಾಗಿರುತ್ತದೆ. ವಿಕಿರಣ ಚಿಕಿತ್ಸಾಶಾಸ್ತ್ರ ಅಥವಾ ಬೀಜಕಣ ವೈದ್ಯಕೀಯ ಶಾಸ್ತ್ರದಲ್ಲಿ ಪರಿಣತಿ ಪಡೆಯಲು ಇನ್ನಷ್ಟು ತರಬೇತಿಯ ಅಗತ್ಯವಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕ್ಷ-ಕಿರಣ ಚಿತ್ರ ತೀವ್ರಕಾರಿ (ಸಿ-ಆರ್ಮ್‌ (C-Arm)) - ಟಿವಿ ಪರದೆಯ ಮೇಲೆ ಪ್ರದರ್ಶಿಸಲಾದ ಚಿತ್ರವನ್ನು ಸಿದ್ಧಪಡಿಸಲು ಬಳಸಲಾದ ಉಪಕರಣ.
  • ಡಿಜಿಟಲ್‌ ಸ್ತನರೇಖನ ಮತ್ತು ಪಿಎಸಿಎಸ್‌
  • ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ (Interventional radiology) - ಇದರಲ್ಲಿ, ಚಿತ್ರ ಮಾರ್ಗರ್ಶನ ಬಳಸಿ ಕನಿಷ್ಠಪಕ್ಷದ ಗಾಯಗೊಳಿಸುವ ಶಸ್ತ್ರಕ್ರಿಯೆ ನಡೆಸಲಾಗುವುದು.
  • ವೈದ್ಯಕೀಯ ವಿಕಿರಣ-ಚಿತ್ರಗ್ರಹಣ (Medical radiography), ವೈದ್ಯಕೀಯ ಶಾಸ್ತ್ರದಲ್ಲಿ ಕ್ಷ-ಕಿರಣಗಳಂತಹ ಅಯಾನೀಕರಿಸುವ ವಿದ್ಯುತ್ಕಾಂತೀಯ ವಿಕಿರಣಗಳ ಬಳಕೆ.
  • ಪೊಸಿಟ್ರಾನ್‌ (ಧನ-ಋಣಕಣ) ಹೊರಸೂಸುವಿಕೆ ತಲಲೇಖನ (Positron emission tomography) - ಇದು ತ್ರಿವಿಮಿತೀಯ ಚಿತ್ರವನ್ನು ಸಿದ್ಧಪಡಿಸಿ ಪ್ರದರ್ಶಿಸುತ್ತದೆ.
  • ವಿಕಿರಣ ಜೀವವಿಜ್ಞಾನ (Radiobiology) - ಇಡೀ ವಿದ್ಯುತ್ಕಾಂತೀಯ ವರ್ಣಪಟಲದ (electromagnetic spectrum) ಅಯಾನೀಕರಿಸುವ ಅಥವಾ ಅಯಾನೀಕರಿಸದ ವಿಕಿರಣಗಳಿಂದಾಗುವ ಜೈವಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಅಂತರಶಾಸ್ತ್ರೀಯ ವಿಜ್ಞಾನವಿದು.
  • ವಿಕಿರಣ ರಕ್ಷಣೆ, ಅಯಾನಿಕರಿಸುವ ವಿಕಿರಣಗಳ ಹಾನಿಕಾರಕ ಪ್ರಭಾವಗಳಿಂದ ಜನ ಮತ್ತು ಪರಿಸರವನ್ನು ರಕ್ಷಿಸುವ ವಿಜ್ಞಾನವಿದು.
  • ವಿಕಿರಣ-ಚಿತ್ರಗ್ರಹಣ (Radiography) - ಕಾಣದ ಅಥವಾ ಚಿತ್ರಿಸಲು ಕ್ಲಿಷ್ಟಕರವಾದ ವಸ್ತುಗಳನ್ನು ವೀಕ್ಷಿಸಲು ಕ್ಷ-ಕಿರಣಗಳ ಬಳಕೆ.
  • ವಿಕಿರಣ-ಸಂವೇದನತ್ವ (Radiosensitivity), ಅಯಾನೀಕರಿಸುವ ವಿಕಿರಣಗಳ ಹಾನಿಕಾರಕ ಪ್ರಭಾವಗಳಿಗೆ, ಸಾವಯವ ಜೀವಕೋಶಗಳ ಈಡಾಗುವಿಕೆ.


  • ದೂರ-ವಿಕಿರಣಶಾಸ್ತ್ರ (Teleradiology) - ವ್ಯಾಖ್ಯಾನಕ್ಕಾಗಿ ಅಥವಾ ಸಲಹೆಗಾಗಿ, ಒಂದು ಸ್ಥಳದಿಂದ ಇನ್ನೊಂದೆಡೆಗೆ ವಿಕಿರಣಶಾಸ್ತ್ರೀಯ ರೋಗಿಯ ಚಿತ್ರಗಳ ವಿದ್ಯುನ್ಮಾನ ರೀತ್ಯಾ ರವಾನೆ.


  • ವಿಕಿರಣಶಾಸ್ತ್ರ ತಂತ್ರಜ್ಞ

ಉಲ್ಲೇಖಗಳು

[ಬದಲಾಯಿಸಿ]
  1. ನೊವೆಲೀನ್‌, ರಾಬರ್ಟ್‌. ಸ್ಕ್ವೈರ್ಸ್‌ ಫಂಡಮೆಂಟಲ್ಸ್‌ ಆಫ್‌ ರೇಡಿಯಾಲಜಿ . ಹಾರ್ವರ್ಡ್‌ ಯುನಿವರ್ಸಿಟಿ ಪ್ರೆಸ್‌, ಐದನೆಯ ಆವೃತ್ತಿ. 1997 ISBN 0688168949
  2. ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ ಸಂಸ್ಥೆ -- ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರವನ್ನು ವ್ಯಾಖ್ಯಾನಿಸುವ ಜಾಗತಿಕ ಘೋಷಣೆ. http://www.sirweb.org/news/newsPDF/IR_Global_Statement.pdf Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ.
  3. ಹರ್ಮನ್‌ ಜಿ. ಟಿ., ಫಂಡಮೆಂಟಲ್ಸ್‌ ಆಫ್‌ ಕಂಪ್ಯೂಟರೈಸ್ಡ್‌ ಟೊಮೊಗ್ರಫಿ: ಇಮೇಜ್‌ ರಿಕಂಸ್ಟ್ರಕ್ಷನ್‌ ಫ್ರಮ್‌ ಪ್ರೊಜೆಕ್ಷನ್‌, ಎರಡನೆಯ ಆವೃತ್ತಿ, ಸ್ಪ್ರಿಂಗರ್‌, 2009
  4. Filler, Aaron (2010). "The History, Development and Impact of Computed Imaging in Neurological Diagnosis and Neurosurgery: CT, MRI, and DTI". Internet Journal of Neurosurgery. 7 (1). {{cite journal}}: External link in |journal= (help)
  5. http://www.gehealthcare.com/usen/ultrasound/genimg/products/logiq_e/hryfrdhosp_waynestuni.html
  6. "ಆರ್ಕೈವ್ ನಕಲು". Archived from the original on 2008-10-08. Retrieved 2010-10-15.
  7. "ಆರ್ಕೈವ್ ನಕಲು". Archived from the original on 2010-07-13. Retrieved 2010-10-15.
  8. http://www.healthsystem.virginia.edu/internet/ವಿಕಿರಣಶಾಸ್ತ್ರ/educ-opps/fellowships.cfm

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ದಪ್ಪ ಅಕ್ಷರಗಳು