ಆಂಟೋಯ್ನ್ ಹೆನ್ರಿ ಬೆಕೆರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಟೋಯ್ನ್ ಹೆನ್ರಿ ಬೆಕೆರಲ್
ಆಂಟೋಯ್ನ್ ಹೆನ್ರಿ ಬೆಕೆರಲ್
ಜನನ
ಆಂಟೋಯ್ನ್ ಹೆನ್ರಿ ಬೆಕೆರಲ್

೧೮೫೨ ಡಿಸೆಂಬರ್ ೧೫
ಫ್ರಾನ್ಸ್
ರಾಷ್ಟ್ರೀಯತೆಫ್ರಾನ್ಸ್

ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಆಂಟೋಯ್ನ್ ಹೆನ್ರಿ ಬೆಕೆರಲ್‌ರವರು ಪ್ಯಾರಿಸ್ಸಿನಲ್ಲಿ ೧೮೫೨ರ ಡಿಸೆಂಬರ್ ೧೫ರಂದು ಜನಿಸಿದರು. ಪ್ರತಿದೀಪ್ತ ಹರಳುಗಳು ಉತ್ಸರ್ಜಿಸುವ ಕ್ಷ-ಕಿರಣಗಳ ಬಗ್ಗೆ ಬೆಕೆರಲ್‌ರವರು ೧೮೯೬ರಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಯುರೇನಿಯಮ್ ಲವಣಗಳ ವಿಕಿರಣಪಟುತ್ವವನ್ನು ಕಂಡುಹಿಡಿದರು. ಅದೇ ಸಂದರ್ಭದಲ್ಲಿಯೇ ಅಂದರೆ ೧೮೯೮ರಲ್ಲಿ ಪಿಯರೆ ಮತ್ತು ಮೇರಿ ಕ್ಯೂರಿ ದಂಪತಿಗಳು ಸಹ ಇತರ ವಿಕಿರಣಪಟುತ್ವವುಳ್ಳ ಪದಾರ್ಥಗಳಿಗೆ ಹುಡುಕಾಟ ನಡೆಸುವಾಗ, ಪೊಲೋನಿಯಮ್ ಮತ್ತು ರೇಡಿಂiiಮ್‌ಗಳನ್ನು ಕಂಡುಹಿಡಿದರು. ಬೆಕೆರಲ್‌ರವರು ರೇಡಿಯಮ್ ಮೇಲೆ ಪ್ರಯೋಗಗಳನ್ನು ಮಾಡಿ ಅದರಲ್ಲಿಯೂ ಇಲೆಕ್ಟ್ರಾನ್‌ಗಳ ಪ್ರವಾಹವಿದೆ ಎಂಬುದಾಗಿ ೧೯೦೦ರಲ್ಲಿ ಕಂಡುಹಿಡಿದರು. ಹಾಗೆಯೇ ಒಂದು ಧಾತು ಇನ್ನೊಂದು ಧಾತುವಿಗೆ ಪರಿವರ್ತಿತವಾಗಲು ವಿಕಿರಣಪಟುತ್ವ ಕಾರಣಭೂತವಾಗಿದೆ ಎಂಬುದಾಗಿಯೂ ಬೆಕೆರಲ್‌ರವರು ಕಂಡುಹಿಡಿದರು. ಹಾಗಾಗಿ ೧೯೦೩ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಮೂವರಿಗೂ ಅಂದರೆ ಬೆಕೆರಲ್ ಜೊತೆಗೆ ಪಿಯರೆ ಕ್ಯೂರಿ ಮತ್ತು ಮೇರಿ ಕ್ಯೂರಿ ದಂಪತಿಗಳಿಗೆ ನೀಡಲಾಯಿತು. ಬೆಕೆರಲ್‌ರವರು ೧೯೦೮ರ ಆಗಸ್ಟ್ ೨೫ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]