ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ಪಾಲಗಿರಿ ರಾಮಕೃಷ್ಣ ರೆಡ್ಡಿ
ಈ ತಿಂಗಳ ವಿಕಿಪೀಡಿಯ ಸಂಪಾದಕರು ಪಾಲಗಿರಿ ರಾಮಕೃಷ್ಣ ರೆಡ್ಡಿ ಅವರು. ವಿಕಿಪೀಡಿಯದಲ್ಲಿ Palagiri ಎಂದು ಪರಿಚಿತ. ಇವರು ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದು ಕೇವಲ ೪ ವರ್ಷಗಳ ಹಿಂದೆ. ಕನ್ನಡ ವಿಕಿಪೀಡಿಯದಲ್ಲಿ ಈ ವರೆಗೆ ಇವರು ಸುಮಾರು ೧೩,೯೬೦ರಷ್ಟು ಸಂಪಾದನೆಗಳನ್ನು ಮಾಡಿದ್ದಾರೆ. ಇವರ ಖಾತೆಯ ಒಟ್ಟು ಸಂಪಾದನೆಗಳ ಸಂಖ್ಯೆ ೬೨,೪೯೩. ಕನ್ನಡ ವಿಕಿಪೀಡಿಯ ಅಲ್ಲದೇ ಕನ್ನಡ ವಿಕ್ಷನರಿಯಲ್ಲಿಯೂ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.
ಪರಿಚಯ
[ಬದಲಾಯಿಸಿ]ಪಾಲಗಿರಿ ಅವರು ಮೂಲತಃ ಆಂದ್ರಪ್ರದೇಶದವರು. ಇವರು ಆಂದ್ರಪ್ರದೇಶದ ಗೆದ್ದಲೂರಿನಲ್ಲಿ ಜನಿಸಿದರು. ಪ್ರಸ್ತುತ ಇವರು ಆಂದ್ರಪ್ರದೇಶದ ನೆಲ್ಲೂರಿನಲ್ಲಿ ನೆಲೆಸಿದ್ದಾರೆ. ಇವರು ಮೂಲತಃ ತೆಲುಗು ವಿಕಿಪೀಡಿಯ ಸಂಪಾದಕರು. ವೃತ್ತಿಯಲ್ಲಿ ಇವರು ತೈಲ ವಿಜ್ಣಾನಿ. ಇವರು ಕನ್ನಡ ವಿಕಿಪೀಡಿಯದಲ್ಲಿ ತೈಲಗಳ ಬಗ್ಗೆ ತುಂಬಾ ವಿಸ್ತಾರವಾದ ಲೇಖನಗಳನ್ನು ಬರೆದಿದ್ದಾರೆ. ಇವರು ಮೈಸೂರಿನ ಹತ್ತಿಬೀಜ ಮತ್ತು ತೈಲೋತ್ಪಾದನಾ ಸಂಸ್ಥೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿರುವಾಗ ತಮ್ಮ ಭಾಷಾ ಪ್ರೇಮದಿಂದ ಕನ್ನಡವನ್ನು ಮಾತನಾಡಲು ಅಲ್ಲದೆಯೇ ಅಕ್ಷರಜ್ಞಾನವನ್ನೂ ಕಲಿತರು. ಇವರು ಸೃಷ್ಟಿಸಿದ ಕೆಲವು ಪುಟಗಳು 1.ಹತ್ತಿಬೀಜದ ಎಣ್ಣೆ, 2.ಕುಸುಮಎಣ್ಣೆ, 3.ಬೇವಿನ ಎಣ್ಣೆ, 4.ಎಳ್ಳೆಣ್ಣೆ, 5.ಮುತ್ತುಗ ಎಣ್ಣೆ, 6.ಕಡಲೇಕಾಯಿ, 7.ಶೇಂಗಾ ಎಣ್ಣೆ, 8.ರಬ್ಬರು ಬೀಜದ ಎಣ್ಣೆ, 9.ಹೊಂಗೆ ಎಣ್ಣೆ 10.ಜಟ್ರೋಫಾ ಎಣ್ಣೆ. ಅಲ್ಲದೇ ಕನ್ನಡ ವಿಕಿಪೀಡಿಯದಿಂದ ತೆಲುಗು ವಿಕಿಪೀಡಿಯಕ್ಕೆ ಲೇಖನಗಳನ್ನೂ ಅನುವಾದಿಸಿದ್ದಾರೆ. ಅವುಗಳು 1.ಕಿತ್ತೂರು ಚೆನ್ನಮ್ಮ (te:కిత్తూరు చెన్నమ్మ), 2.ಯಕ್ಷಗಾನ (te:యక్షగానం), 3.ಗಿರೀಶ್ ಕಾರ್ನಾಡ್ (te:గిరీష్ కర్నాడ్) ಇವರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿನೀಡಿ.