ವಿಷಯಕ್ಕೆ ಹೋಗು

ವಾಣಿ ಹರಿಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಣಿ ಹರಿಕೃಷ್ಣ
ಹುಟ್ಟು
ಉದ್ಯೋಗsಗಾಯಕಿ, ಸಂಯೋಜಕಿ
ಸಕ್ರಿಯ ವರ್ಷಗಳು೨೦೦೮ ಪ್ರಸ್ತುತ

ವಾಣಿ ಹರಿಕೃಷ್ಣ ರವರು ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ದೇಶಕಿಯಾಗಿದ್ದು, ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಚಿತ್ರ ಹಿನ್ನೆಲೆ ಗಾಯನಕ್ಕೆ ಪ್ರವೇಶಿಸುವ ಮೊದಲು ಹಲವಾರು ಭಕ್ತಿ ಗೀತೆಗಳನ್ನು ರಚಿಸಿ, ಬರೆದು, ಹಾಡಿದ್ದಾರೆ.'ಇಂತಿ ನಿನ್ನ ಪ್ರೀತಿಯ' ಚಿತ್ರದ "ಮಧುವನ ಕರೆದರೆ" ಗೀತೆಗಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದೆ.೨೦೧೩ ರಲ್ಲಿ 'ಲೂಸ್ಗಳು' ಚಿತ್ರದಲ್ಲಿ ಮೊದಲ ಬಾರಿಗೆ ಸಂಗೀತ ಸಂಯೋಜಕಿಯಾಗಿ ಕೆಲಸ ಮಾಡಿದರು.‌[]

ಕುಟುಂಬ

[ಬದಲಾಯಿಸಿ]

ವಾಣಿಯವರು ಸಂಗೀತಗಾರರ ಕುಟುಂಬದಲ್ಲಿ ಜನಿಸಿದವರು.ಅವರ ಅಜ್ಜ, ಜಿ.ಕೆ.ವೆಂಕಟೇಶ್, ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿದ್ದರು.ವಾಣಿಯವರು ಸಂಗೀತ ನಿರ್ದೇಶಕರಾದ ವಿ‌.ಹರಿಕೃಷ್ಣ ಅವರನ್ನು ಮದುವೆಯಾಗಿದ್ದಾರೆ ಹಾಗೂ ಅವರಿಬ್ಬರಿಗೆ ಆದಿತ್ಯ ಎಂಬ ಮಗನಿದ್ದಾನೆ.[][]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಸಂಗೀತ ನಿರ್ದೇಶಕಿಯಾಗಿ

[ಬದಲಾಯಿಸಿ]
ವರ್ಷಚಲನಚಿತ್ರಭಾಷೆಟಿಪ್ಪಣಿ
೨೦೧೩ಲೂಸ್ಗಳುಕನ್ನಡಸಂಯೋಜಕಿಯಾಗಿ ಮೊದಲ ಬಾರಿಗೆ
೨೦೧೩ಮೀನಾಕ್ಷೀಕನ್ನಡ
೨೦೧೫ರಿಂಗ್ ರೋಡ್[]ಕನ್ನಡ

ಗಾಯಕಿಯಾಗಿ

[ಬದಲಾಯಿಸಿ]
ವರ್ಷಚಲನಚಿತ್ರಹಾಡುಸಂಗೀತ ನಿರ್ದೇಶಕರು
೨೦೦೮ಇಂತಿ ನಿನ್ನ ಪ್ರೀತಿಯಮಧುವನ ಕರೆದರೆಸಾಧು ಕೋಕಿಲ
೨೦೦೮ಮೇಘವೇ ಮೇಘವೇಹೇ ನೀಲಿ ಗಗನವಿ.ಹರಿಕೃಷ್ಣ
೨೦೦೮ಪಯಣಜಾರೆವಿ.ಹರಿಕೃಷ್ಣ
೨೦೦೯ಮಳೆಯಲಿ ಜೊತೆಯಲಿಮಳೆಯಲಿ ಜೊತೆಯಲಿವಿ.ಹರಿಕೃಷ್ಣ
೨೦೦೯ಚೆಲುವೆಯೇ ನಿನ್ನೇ ನೋಡಲುಒಲವೇ ನಿನ್ನೆವಿ.ಹರಿಕೃಷ್ಣ
೨೦೧೧ಪರಮಾತ್ಮಹೆಸರು ಪೂರ್ತಿವಿ.ಹರಿಕೃಷ್ಣ
೨೦೧೧ಸಾರಥಿಹಾಗೋ ಹೀಗೋವಿ.ಹರಿಕೃಷ್ಣ
೨೦೧೧ಪೋಲಿಸ್ ಸ್ಟೋರಿ ೩ಬಣ್ಣ ಬಣ್ಣಸಾಗರ್ ಎಸ್
೨೦೧೧ದುಷ್ಟಜಿಂಕೆ ಓ ಜಿಂಕೆಎಸ್.ನಾರಾಯಣ್
೨೦೧೨ಅದ್ದೂರಿಮುಸ್ಸಂಜೆ ವೇಳೇಲಿವಿ.ಹರಿಕೃಷ್ಣ
೨೦೧೨ಶಿಕಾರಿಕನ್ನಡಿಯೇವಿ.ಹರಿಕೃಷ್ಣ
೨೦೧೨ಸ್ನೇಹಿತರುಬದುಕೋದು ಹೇಗೆವಿ.ಹರಿಕೃಷ್ಣ
೨೦೧೩ಲೂಸ್ಗಳುಬೇಲಿ ಹಾರಿವಾಣಿ ಹರಿಕೃಷ್ಣ
೨೦೧೩ಕಡ್ಡಿಪುಡಿಬೇರೆ ಯಾರೊವಿ.ಹರಿಕೃಷ್ಣ
೨೦೧೪ಉಳಿದವರು ಕಂಡಂತೆಕಣ್ಣಾ ಮುಚ್ಚೆಅಜನೀಶ್ ಲೋಕನಾಥ್
೨೦೧೪ಡವ್ಹೀಗೂ ಇರಬಹುದೇಅರ್ಜುನ್ ಜನ್ಯ
೨೦೧೭ಹೊಂಬಣ್ಣಅಂಭಿಗನಿರದೆವಿನು ಮನಸು

ಪ್ರಶಸ್ತಿಗಳು

[ಬದಲಾಯಿಸಿ]
  • 'ಇಂತಿ ನಿನ್ನ ಪ್ರೀತಿಯ' ಚಿತ್ರದ "ಮಧುವನ ಕರೆದರೆ" ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.
  • 'ಸಾರಥಿ' ಚಿತ್ರದ "ಹಾಗೋ ಹೀಗೋ" ಹಾಡಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ(೨೦೧೧).
  • 'ಅದ್ದೂರಿ' ಚಿತ್ರದ "ಮುಸ್ಸಂಜೆ ವೇಳೇಲಿ" ಹಾಡಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ(೨೦೧೨), ಮಿರ್ಚಿ ಮ್ಯೂಸಿಕ್ ಪ್ರಶಸ್ತಿ (ಸೌತ್-೨೦೧೨), ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಪ್ರಶಸ್ತಿ.
  • 'ಕಡ್ಡಿಪುಡಿ' ಚಿತ್ರದ "ಬೇರೆ ಯಾರೊ" ಹಾಡಿಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಪ್ರಶಸ್ತಿ. ‌‌‌‌‌‌‌‌[]

ಉಲ್ಲೇಖಗಳು

[ಬದಲಾಯಿಸಿ]
  1. Vaani turns music director Archived 2012-08-28 ವೇಬ್ಯಾಕ್ ಮೆಷಿನ್ ನಲ್ಲಿ. IndiaGlitz, 24 August 2012. Retrieved 25 May 2013.
  2. V Harikrishna's wife turns composer 24 August 2012. Retrieved 25 May 2013.
  3. https://www.veethi.com/india-people/vani_harikrishna-profile-6037-24.htm
  4. "Archived copy". Archived from the original on 2015-04-02. Retrieved 2013-08-19. {{cite web}}: Unknown parameter |dead-url= ignored (help)CS1 maint: archived copy as title (link)
  5. https://www.nettv4u.com/celebrity/kannada/playback-singer/vani-harikrishna