ರೊಹಿತಕ
ಗೋಚರ
ಅಮುರಾ ರೋಹಿತಕ ಭಾರತೀಯ ವೈದ್ಯರು ದಿರ್ಘಕಾಲದಿಂದಲೂ ಸ್ಪ್ಲೇನಿಕ್ ಅಸ್ವಸ್ಥತೆಗಳಿಗೆ ಔಷಧವಾಗಿ ಬಳಸುತ್ತಿದ್ದರು.ಆರ್ಯುವೇದ ಸಾಹಿತ್ಯದಲ್ಲಿಇದನ್ನು ಪರಿವರ್ತಕ, ಸಂಕೋಚಕ ಹಿಗ್ಗುವಿಕೆಗೆ ಸಂಬಂಧಿಸಿದ ಒಂದು ನಾದ ಎಂದು ಉಲ್ಲೇಖಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಅಫನಮಿಕ್ಸಿಸ್ ಪಾಲಿಸ್ಟಚಿಯಾ.
ಇತರೆಹೆಸರುಗಳು
[ಬದಲಾಯಿಸಿ]- ಇಂಗ್ಲೀಷ್: ರೋಹಿತುಕ ಮರ
- ಹಿಂದಿ: ಹರಿನ್-ಹರಾ, ಹರಿಂಖಾನಾ
- ಮಣಿಪುರಿ: ಹೀರಾಂಗ್ಖೋಯಿ
- ಮರಾಠಿ: ರಾಕ್ಷರೋಹಿಡಾ
- ತಮಿಳು: ಮಲಂಪುಲುವನ್, ಸೆಮ್, ಸೆಮರ್ಮಮ್
- ಮಲೆಯಾಳಂ: ಚೆಮರಾಮ್
- ತೆಲಗು: ಚೆವಮಾನು, ರೋಹಿಟಾಕ
- ಕನ್ನಡ: ಮುಲ್ಲುಮುಟ್ಟಾಗ, ಮುಲ್ಲುಹೀತಲು, ರೋಹಿತಕ
- ಬೆಂಗಾಲಿ: ಟಿಕ್ತರಾಜ್
- ರೊಂಗ್ಮೇಯ್: ಅಗಾನ್
- ಅಸ್ಸಾಮಿ: ಹಕೋರಿ ವಿಕೋರಿ
- ಸಂಸ್ಕೃತ: ಅನವಲಭ, ಕ್ಷಾರಯೋಗ್ಯ, ಲಕ್ಷ್ಮೀವಾಣ, ಲೋಹಿಟಾ
- ಸಿಂಹಳ: ಹಿಗ್ಲ.[೧][೨][೩]
ವಿವರಣೆ
[ಬದಲಾಯಿಸಿ]ಇದು ಭಾರತ, ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಯನ್ಮಾರ್ ಮತ್ತು ಶ್ರೀಲಂಕಾಗಳಿಗೆ ಸ್ಥಳೀಯವಾಗಿದೆ. ಇದನ್ನು ಆರ್ಯವೇದದಲ್ಲಿ ವ್ಯಾಪಕವಾಗಿ ಔಷಧೀಯ ಸಸ್ಯವಾಗಿ ಬಳಸಲಾಗುತ್ತದೆ.[೪]
ಸಸ್ಯದ ದೈಹಿಕ ರಚನೆ
[ಬದಲಾಯಿಸಿ]ರೋಹಿತಕ ೬-೧೦ ಮೀಟರ್ ಎತ್ತರಕ್ಕೆ ಬೆಳೆಯುವುದಾಗಿದ್ದು ಉತ್ತರ ಮತ್ತು ಪಶ್ಚಿಮ ಭಾರತದ ಹಿಮಾಲಯದ ಬೆಟ್ಟ ಮತ್ತು ಬಯಲು ಪ್ರದೇಶಗಳಲ್ಲಿ ಬೆಳೆಯುವ ಒಂದು ಮಧ್ಯಮಗಾತ್ರದ ಮರವಾಗಿದೆ. ಮರದ ಎಲೆಗಳು ದಾಳಿಂಬೆ ಎಲೆಗಳಿಗೆ ಹೋಲುತ್ತದೆ. ಹೂಗಳು ಹಳದಿ ಅಥವಾ ಪ್ರಕಾಶಮಾನವಾದ ಕಿತ್ತಳೆ ಬಣ್ಣದಾಗಿದ್ದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಂಡುಬರುತ್ತವೆ.
ಉಪಯೋಗಗಳು
[ಬದಲಾಯಿಸಿ]- ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ರೋಹಿತಕ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ಬಳಸಲಾಗುತ್ತದೆ.
- ಲ್ಯೂಕೊರಿಯಾವನ್ನು ಗುಣಪಡಿಸಲು ಈ ಸಸ್ಯದಿಂದ ತಯಾರಿಸಲಾದ ಪೇಸ್ಟ್ ಅನ್ನು ಬಳಸಲಾಗುತ್ತದೆ.
- ಮರದ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ರೋಗಗಳನ್ನು ಗುಣಪಡಿಸಲು ಉಪಯೋಗಿಸಲಾಗುತ್ತದೆ.
- ಮಧುಮೇಹ ಮತ್ತು ಕಾಮಾಲೆ ನಿಯಂತ್ರಿಸಲು ಉಪಯುಕ್ತವಾಗಿದೆ.
- ಅಜೀರ್ಣ, ಹಸಿವು ಮತ್ತು ಕರುಳಿನ ಹುಳುಗಳ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ.
- ನೆನೆಪಿನ ಶಕ್ತಿಯ ದುರ್ಬಲದ ಪರಿಹಾರಕ್ಕಾಗಿಉಪಯೋಗಿಸುತ್ತಾರೆ.
- ಚಲನ ಶೀಲತೆಯನ್ನು ಉಂಟುಮಾಡುತ್ತದೆ.
- ಅತಿಸಾರ, ಶುದ್ಧೀಕರಣವನ್ನುಉಂಟುಮಾಡುತ್ತದೆ.
- ಮಲಬದ್ಧತೆಯನ್ನು ನಿವಾರಿಸುತ್ತದೆ.
- ರಕ್ತಸ್ರಾವದ ತೊಂದರೆಗಳ ನಿವಾರಣೆ.
- ಮಾನಸಿಕ ಅಸ್ವಸ್ಥತೆಗಳಿಗೆ ಉಪಯೋಗ.[೫]http://www.mpbd.info/plants/aphanamixis-polystachya.php Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಸಸ್ಯ ಹೊಂದಿರುವ ಆರ್ಯುವೇದ ಔಷಧಿಗಳು
[ಬದಲಾಯಿಸಿ]- ರೋಹಿಟಾಕಾಲೌಹಾ: ಮಾತ್ರೆ ಅಥವಾ ಪುಡಿ ರೂಪದಲ್ಲಿ ದೊರೆಯುವ ಆರ್ಯುವೇದ ಔಷಧವಾಗಿದ್ದು, ಗುಲ್ಮ ಸಂಬಧಿತ ಅಸ್ವಸ್ಥೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
- ಅಶೋಕ ಸಂಯುಕ್ತ: ಇದು ಸ್ವಾಮ್ಯದ ಆರ್ಯುವೇದ ಔಷಧ. ಇದು ಗರ್ಭಾಶಯದ ಸಂಕೋಚನಗಳ ಅವರ್ತನ ಮತ್ತು ತೀವ್ರತೆಯನ್ನುಕಡಿಮೆ ಮಾಡುತ್ತದೆ.
- ಯಕ್ರುತ್ಶುಲಾ ವಿನಾಶಿಣಿ ವ್ಯಾಟಿಕೆ: ಗುಲ್ಮ ಸಂಬಂಧಿತ ರೋಗಗಳ ಆಯುರ್ವೇದಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
- ಕಲ್ಮೇಗಸಮ್: ಧೀರ್ಘಕಾಲದಜ್ವರ, ರಕ್ತಹೀನತೆ, ಮೊಡವೆ, ಯಕೃತ್ತು ಮತ್ತು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
- ಅಲೈಕ್ಯೂರ್ಡಿಎಸ್ಕ್ಯಾಪ್ಸುಲ್: ಹೆಪಟಿ ಕಾಯಿಲೆಗಳ ನಿರ್ವಹಣೆಗೆ ಉಪಯುಕ್ತವಾದ ಸ್ವಾಮ್ಯದ ಆರ್ಯುವೇದ ಔಷಧವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-06-04. Retrieved 2018-09-30.
- ↑ http://envis.frlht.org/botanical_search.php?txtbtname=&gesp=203%7CAmoora+rohituka+%28ROXB.%29+WIGHT+%26+ARN[ಶಾಶ್ವತವಾಗಿ ಮಡಿದ ಕೊಂಡಿ].
- ↑ https://alchetron.com/Aphanamixis-polystachya
- ↑ "ಆರ್ಕೈವ್ ನಕಲು". Archived from the original on 2022-05-17. Retrieved 2018-09-30.
- ↑ http://www.flowersofindia.net/catalog/slides/Pithraj%20Tree.html