ರೀಸಸ್ ಮಂಗ
ರೀಸಸ್ ಮಂಗ | |
---|---|
ಗಂಡು, ಗೋಕರ್ಣ ಅರಣ್ಯ, ನೇಪಾಳ | |
ಗಲ್ತಾಜಿ, ಜೈಪುರದಲ್ಲಿ ಮರಿಯೊಂದಿಗೆ ಹೆಣ್ಣು | |
Conservation status | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | Mammalia |
ಗಣ: | ಪ್ರೈಮೇಟ್ಸ್ |
ಕುಟುಂಬ: | ಸರ್ಕೋಪಿತೇಸಿಡೇ |
ಕುಲ: | ಮಕಾಕಾ |
ಪ್ರಜಾತಿ: | M. mulatta
|
Binomial name | |
Macaca mulatta (Zimmermann, 1780)[೨]
| |
Rhesus macaque native range | |
Synonyms[೩] | |
Species synonymy
|
ರೀಸಸ್ ಮಂಗವು ಪ್ರೈಮೇಟ್ ಗಣ, ಸರ್ಕೊಪಿತಿಸಿಡೀ ಕುಟುಂಬ, ಸರ್ಕೊಪಿತಿಸಿನೀ ಉಪಕುಟುಂಬ, ಮಕಾಕ ಜಾತಿಯ ನಾಲ್ಕು ಪ್ರಭೇದಗಳ ಪೈಕಿ ಒಂದು ಮಂಗ. ದ್ವಿನಾಮ ಪದ್ಧತಿ ಹೆಸರು: ಮಕಾಕ ಮುಲೇಟ. ದಕ್ಷಿಣ ಮತ್ತು ಆಗ್ನೇಯ ಏಷ್ಯವಾಸಿ. ಭಾರತ ಉಪಖಂಡದ ಉತ್ತರ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿವೆ.
ಲಕ್ಷಣಗಳು
[ಬದಲಾಯಿಸಿ]ಹಳದಿ ಮಿಶ್ರಿತ ಅಥವಾ ಮರಳಿನ ಬಣ್ಣ; 47-64 ಸೆಮೀ ಉದ್ದದ ಬಲಿಷ್ಠ ದೇಹ; 20-30 ಸೆಂಮೀ ಉದ್ದದ ಬಾಲ;[೪] 4.5-11 ಕಿ.ಗ್ರಾಮ್ ತೂಕ; ಕಿತ್ತಳೆ-ಕೆಂಪು ಬಣ್ಣದ ಕೂದಲು ಇರುವ ಪೃಷ್ಠ ಹಾಗೂ ಒಳತೊಡೆ; ಹಣೆಯಿಂದ ಹಿಮ್ಮುಖವಾಗಿ ಬೆಳೆದಿರುವ ಬೈತಲೆರಹಿತ ತಲೆಗೂದಲು - ಇವು ವಯಸ್ಕ ರ‍್ಹೀಸಸ್ ಮಂಗದ ವಿಶಿಷ್ಟ ಲಕ್ಷಣಗಳು.
ನಡವಳಿಕೆ
[ಬದಲಾಯಿಸಿ]ಸಾಮಾಜಿಕ ಸ್ವಭಾವ
[ಬದಲಾಯಿಸಿ]ಬಲಿಷ್ಠ ಗಂಡು ಮಂಗದ ನಾಯಕತ್ವದಲ್ಲಿ 8-180 ಸದಸ್ಯರಿರುವ ಗುಂಪುಗಳಲ್ಲಿ ವಾಸ. ಅಲೆಮಾರೀ ಪ್ರವೃತ್ತಿ.
ಸಂತಾನೋತ್ಪತ್ತಿ
[ಬದಲಾಯಿಸಿ]ಅಕ್ಟೋಬರ್-ಡಿಸೆಂಬರ್ ಗಂಡುಹೆಣ್ಣುಗಳು ಕೂಡುವ ಕಾಲ.
ಆಹಾರ
[ಬದಲಾಯಿಸಿ]ಹಣ್ಣು, ಬೀಜ, ಬೇರು, ಮೂಲಿಕೆ ಮತ್ತು ಚಿಕ್ಕ ಕೀಟಗಳು.
ಧಾರ್ಮಿಕ ಮಹತ್ತ್ವ
[ಬದಲಾಯಿಸಿ]ಹಿಂದು ಮತ್ತು ಬೌದ್ಧರಿಗೆ ಇದು ಪವಿತ್ರ ಪ್ರಾಣಿ. ಎಂದೇ, ಭಾರತದಲ್ಲಿ ಮಾನವ ಆವಾಸ ಮತ್ತು ದೇವಾಲಯಗಳ ಆಸುಪಾಸಿನಲ್ಲಿ ಇವು ನೆಲಸಿವೆ.
ವೈದ್ಯಕೀಯ ಮಹತ್ವ
[ಬದಲಾಯಿಸಿ]ದೈಹಿಕ ಪ್ರಕ್ರಿಯೆಗಳಲ್ಲಿ ಮಾನವನನ್ನು ಹೋಲುವುದರಿಂದ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಪ್ರಯೋಗಪಶುವಾಗಿ ವ್ಯಾಪಕ ಬಳಕೆ. ಮಾನವನ ಕೆಂಪು ರಕ್ತಕಣಗಳ ಮೇಲ್ಮೈಯಲ್ಲಿರುವ ರ‍್ಹೀಸಸ್ ಅಂಶ ಎಂಬ ಪ್ರತಿಜನಕಗಳು (ಆಂಟಿಜೆನ್) ರ‍್ಹೀಸಸ್ ಮಂಗಗಳ ರಕ್ತದಲ್ಲಿ ಮೊದಲು ಪತ್ತೆಯಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ Singh, M.; Kumar, A.; Kumara, H.N. (2020). "Macaca mulatta". IUCN Red List of Threatened Species. 2020: e.T12554A17950825. doi:10.2305/IUCN.UK.2020-2.RLTS.T12554A17950825.en. Retrieved 10 January 2022.
- ↑ Groves, C. P. (2005). "Species Macaca mulatta". In Wilson, D. E.; Reeder, D. M (eds.). Mammal Species of the World (3rd ed.). Baltimore: Johns Hopkins University Press. p. 163. OCLC 62265494. ISBN 0-801-88221-4.
{{cite book}}
: Invalid|ref=harv
(help) - ↑ "Macaca mulatta". Integrated Taxonomic Information System.
- ↑ Fooden, J. (2000). "Systematic review of the rhesus macaque, Macaca mulatta (Zimmermann, 1780)". Fieldiana. 96: 1–180. doi:10.5962/bhl.title.7192.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ARKive: images and movies of the rhesus macaque Macaca mulatta
- Brain maps and brain atlases of rhesus macaque
- Primate Info Net: Macaca mulatta Factsheet
- University of Michigan Museum of Zoology's Animal Diversity Web: Macaca mulatta
- Macaca mulatta Genome Archived 2019-01-18 ವೇಬ್ಯಾಕ್ ಮೆಷಿನ್ ನಲ್ಲಿ.
- Rhesus Play Film analysis of agonistic play by Donald Symons (UCSB) on DVD
- View the Macaque genome in Ensembl.
- ಟೆಂಪ್ಲೇಟು:UCSC genomes
- Pages using the JsonConfig extension
- CS1 errors: invalid parameter value
- Pages using ISBN magic links
- IUCN Red List least concern species
- Articles with 'species' microformats
- Taxoboxes with no color
- Taxobox articles missing a taxonbar
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಸಸ್ತನಿ ಪ್ರಾಣಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ