ವಿಷಯಕ್ಕೆ ಹೋಗು

ರಸ್ಸೆಲ್ ಪೀಟರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಸ್ಸೆಲ್ ಪೀಟರ್ಸ್
Russell Peters
ಪೂರ್ಣ ಹೆಸರುRussell Dominic Peters
ಜನನ (1970-09-29) ಸೆಪ್ಟೆಂಬರ್ ೨೯, ೧೯೭೦ (ವಯಸ್ಸು ೫೪)
Toronto, Ontario, ಕೆನಡಾ
ಮಧ್ಯಮstand-up, television, film, radio
ರಾಷ್ಟ್ರೀಯತೆCanadian
ಸಕ್ರಿಯವಾಗಿದ್ದ ವರ್ಷಗಳು1989–present
ಶೈಲಿSatire, Improvisational comedy, Observational comedy
ವರ್ಗracism, race relations, stereotypes, multiculturalism, Indian culture
ಪ್ರಭಾವಗಳುGeorge Carlin, Steve Martin, Cheech and Chong,[] Don Rickles,[] Eddie Murphy
ಸಹಿ
ವೆಬ್ಸೈಟ್RussellPeters.com

ರಸ್ಸೆಲ್ ಡೋಮಿನಿಕ್ ಪೀಟರ್ಸ್ [] (ಜನನ ಸೆಪ್ಟೆಂಬರ್ 29, 1970)[] ಕೆನಡಾದ ಒಬ್ಬ ನಿಂತಾಡುವ ವಿದೂಷಕ ಮತ್ತು ನಟ.

ಆರಂಭಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]

ರಸ್ಸೆಲ್ ಪೀಟರ್ಸ್, ಒಂಟಾರಿಯೋದ ಟೊರೊಂಟೊದಲ್ಲಿ ಎರಿಕ್ ಮತ್ತು ಮೌರೀನ್ ಪೀಟರ್ಸ್ ದಂಪತಿಯ ಪುತ್ರನಾಗಿ ಜನಿಸಿ, ಬ್ರಾಂಪ್ಟನ್‌ನಲ್ಲಿ ಬೆಳೆದ. ಆತ ಆಂಗ್ಲೋ-ಭಾರತೀಯ ಸಂತತಿಗೆ ಸೇರುತ್ತಾನೆ. ಅವನ ತಂದೆ ಭಾರತಬಾಂಬೆಯಲ್ಲಿ ಜನಿಸಿದವರಾಗಿದ್ದ. ಅವನು ಕೇಂದ್ರ ಸರ್ಕಾರದ ಒಬ್ಬ ಆಹಾರ ತನಿಖಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ; ಅವನ ತಾಯಿ ಭಾರತದ ಕಲ್ಕತ್ತಾದಲ್ಲಿ ಜನಿಸಿದಳು. ಅವನ ಹಿರಿಯ ಸಹೋದರ ಕ್ಲೆಯ್ಟನ್ ಕೂಡ ಕಲ್ಕತ್ತಾದಲ್ಲಿ ಜನಿಸಿದ.[ಸೂಕ್ತ ಉಲ್ಲೇಖನ ಬೇಕು]

ಅವನು ಜಾರ್ಜ್‌ಸ್‌ ವ್ಯಾನಿಯೇರ್ ಕ್ಯಾಥೊಲಿಕ್ ಎಲಿಮೆಂಟರಿ ಶಾಲೆಯಲ್ಲಿ ಶಿಶುವಿಹಾರದಿಂದ 8 ತರಗತಿವರೆಗೂ ಶಿಕ್ಷಣ ಪಡೆದ ಹಾಗೂ ಬ್ರಾಂಪ್ಟನ್ನಲ್ಲಿರುವ ನಾರ್ತ್ ಪೀಲ್ ಸೆಕೆಂಡರಿ ಶಾಲೆಯಲ್ಲಿ 9-12 ತರಗತಿಯವರೆಗೂ ಓದಿದ.

ವೃತ್ತಿಜೀವನ

[ಬದಲಾಯಿಸಿ]

ಒಂಟಾರಿಯೋದ ಟೊರೊಂಟೊದಲ್ಲಿ 1989ರಲ್ಲಿ ಪೀಟರ್ಸ್ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದ.[] ಅಲ್ಲಿಂದೀಚೆಗೆ ಆತ ಅಮೆರಿಕಾ ಸಂಯುಕ್ತ ಸಂಸ್ಥಾನಗಳು, UK, ಆಸ್ಟ್ರೇಲಿಯ, ಚೀನಾದ ಪ್ರಧಾನ ಭೂಭಾಗ, ಹಾಂಗ್ ಕಾಂಗ್, ಸಿಂಗಾಪುರ್, ಡೆನ್ಮಾರ್ಕ್, ದಕ್ಷಿಣ ಆಫ್ರಿಕ, ಕೆರೆಬಿಯನ್, ವಿಯೆಟ್ನಾಂ,ನ್ಯೂಜಿಲ್ಯಾಂಡ್, ಫಿಲಿಪೈನ್ಸ್, ಶ್ರೀಲಂಕಾ, ಸ್ವೀಡನ್, ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹರೈನ್, ಜೋರ್ಡನ್,ಲೆಬನೋನ್, ಮತ್ತು ಟ್ರಿನಿಡಾಡ್ ಒಳಗೊಂಡಂತೆ ಇತರ ಕಡೆಗಳಲ್ಲೂ ಪ್ರದರ್ಶನ ನೀಡಿದ.

ಅವನನ್ನು ನಾಲ್ಕು ಜೆಮಿನಿ ಪ್ರಶಸ್ತಿಗಳಿಗೆ,[] ಕೆನಡಾದ ದೂರದರ್ಶನ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಮಾಡಲಾಗಿದೆ. ಕೆನಡಾದ ಹಾಸ್ಯ ಪ್ರಶಸ್ತಿ ಸಮಾರಂಭದಲ್ಲಿ ಆತ ಅತ್ಯುತ್ತಮ ಪುರುಷ ವಿದೂಷಕ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದ.[ಸೂಕ್ತ ಉಲ್ಲೇಖನ ಬೇಕು] ಮಾಂಟ್ರಿಯಲ್‌ಜಸ್ಟ್ ಫಾರ್ ಲಾಫ್ಸ್ (ಜುಸ್ಟೆ ಪೋರ್ ರೈರ್) ಹಾಸ್ಯೋತ್ಸವ, ದಿ ವಿನ್ನಿಪೆಗ್ ಹಾಸ್ಯೋತ್ಸವ, ಮತ್ತು ಎಡಿನ್‌ಬರ್ಗ್‌ ಉತ್ಸವಗಳ ಪ್ರದರ್ಶನದಲ್ಲಿ ಪೀಟರ್ಸ್ ಕಾಣಿಸಿಕೊಂಡಿದ್ದಾನೆ. 2006ರ ಕೆನಡಾ ಡೇ ಹಾಸ್ಯೋತ್ಸವವನ್ನು ಆತ ನಿರೂಪಿಸಿದ.

ಅವನ ಹಾಸ್ಯ ವಿಶೇಷ ಕಾರ್ಯಕ್ರಮವಾದ ...Russell Peters: Outsourced , ಕಾಮಿಡಿ ಸೆಂಟ್ರಲ್ನಲ್ಲಿ, 2006ರ ಆಗಸ್ಟ್‌ 16ರಂದು ಬಿತ್ತರವಾಯಿತು. ಇದರ DVD ರೂಪಾಂತರದಲ್ಲಿ ಕತ್ತರಿ ಪ್ರಯೋಗವಾಗದ ಅವನ ಪ್ರದರ್ಶನವನ್ನು ಕಾಣಬಹುದು. ಈ DVDಯು ಜನಪ್ರಿಯವಾಗಿದ್ದು, ವಿಶೇಷವಾಗಿ ಕೆನಡಾದಲ್ಲಿ 100,000ಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಔಟ್ ಸೋರ್ಸ್ಡ್ ಸಂಪುಟವು ಬಿಡುಗಡೆಯಾದ ಒಂದೂವರೆ ವರ್ಷದ ಬಳಿಕವೂ ರಾಷ್ಟ್ರೀಯ DVD ಕೋಷ್ಟಕದಲ್ಲಿ ಹಾಗೆಯೇ ಉಳಿದಿದೆ.

ಪೀಟಸ್‌ನ ...Russell Peters: Red, White, and Brown ಎಂಬ DVD/CD ಸಂಯೋಜನೆಯು 2008ರ ಫೆಬ್ರವರಿ 2ರಂದು ಮ್ಯಾಡಿಸನ್ ಸ್ಕ್ವೆರ್ ಗಾರ್ಡನ್‌ನಲ್ಲಿರುವ ದಿ WAMU ಥಿಯೇಟರ್‌ನಲ್ಲಿ ಧ್ವನಿ ಮುದ್ರಿಸಲ್ಪಟ್ಟಿತು. ಪೀಟರ್ಸ್ ಮತ್ತು ಅವನ ಸಹೋದರ ಸೇರಿಕೊಂಡು ರೆಡ್, ವೈಟ್ ಅಂಡ್ ಬ್ರೌನ್ ಅನ್ನು ಸ್ವತಃ ನಿರ್ಮಿಸಿದರು ಮತ್ತು ಬಂಡವಾಳ ಹೂಡಿದರು.

CBC ರೇಡಿಯೋ ಒನ್‌ನಲ್ಲಿ ಬಿತ್ತರವಾಗುವ ಮಾನ್ಸೂನ್ ಹೌಸ್‌ ಎಂಬ ಸಂದರ್ಭ ಹಾಸ್ಯ ಸರಣಿಯನ್ನು ಪ್ರಸ್ತುತ ನಿರ್ಮಿಸುತ್ತಿರುವುದರ ಜೊತೆಗೆ, ಒಂದು ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾನೆ.

2008ರ ಮತ್ತು 2009ರ ಜೂನ್ ನಡುವಿನ ಅವಧಿಯಲ್ಲಿ ಪೀಟರ್ಸ್‌ 10 ದಶಲಕ್ಷ$ ಹಣವನ್ನು ಗಳಿಸಿದ್ದು, ಇದರಿಂದಾಗಿ ಹನ್ನೆರಡು-ತಿಂಗಳ ಅವಧಿಯಲ್ಲಿ ಅಧಿಕ-ಸಂಭಾವನೆ ಪಡೆದ ಹಾಸ್ಯಗಾರನೆಂಬ ಹೆಗ್ಗಳಿಕೆಗೆ ಆತ ಪಾತ್ರನಾಗಿದ್ದಾನೆ.[]

ಫಾಕ್ಸ್ ಜೊತೆಗಿನ ಹೊಸ ಸಾಂದರ್ಭಿಕ ಹಾಸ್ಯ

[ಬದಲಾಯಿಸಿ]

ಕೆನಡಾದಲ್ಲಿನ ತನ್ನ ಅನುಭವದ ಆಧಾರದ ಮೇಲೆ, ಒಂದು ಹೊಸ ಸಾಂಧರ್ಬಿಕ ಹಾಸ್ಯವನ್ನು ಅಭಿವೃದ್ಧಿಪಡಿಸಲು ಫಾಕ್ಸ್ ಸಂಸ್ಥೆಯೊಂದಿಗೆ ಪೀಟರ್ಸ್‌ ಒಂದು ವ್ಯವಹಾರ ಒಪ್ಪಂದವನ್ನು ಮಾಡಿಕೊಂಡ ಎಂದು 2007ರ ಸೆಪ್ಟೆಂಬರ್‌ನಲ್ಲಿ ದೃಢೀಕರಿಸಲಾಯಿತು. ಈ ಕುರಿತು ಪೀಟರ್ಸ್‌ ಮಾತನಾಡುತ್ತಾ, "ವಾಸ್ತವವಾಗಿ ಇದು ಸುಮಾರು ಹತ್ತುವರ್ಷಗಳ ಹಿಂದೆ ನನ್ನ ಕುಟುಂಬವು ಹೇಗಿತ್ತು ಎಂಬುದರ ಕುರಿತಾದ ಒಂದು ಚಿಟಿಕೆ ಛಾಯಾಚಿತ್ರ" ಎಂದು ಹೇಳಿ ಸದರಿ ಸಾಂದರ್ಭಿಕ ಹಾಸ್ಯವು "ಒಂದಷ್ಟು ಹಾಸ್ಯ ಹಾಗೂ ಪ್ರಾಮಾಣಿಕತೆಯನ್ನು ಒಳಗೊಂಡಿರುತ್ತದೆ" ಎಂದು ಭರವಸೆ ನೀಡಿದ.[][]

USO ಪ್ರವಾಸ

[ಬದಲಾಯಿಸಿ]

ವಿಲ್ಮರ್‌ ವಾಲ್ಡೆರ್ರಾಮಾ ಮತ್ತು ಮಯ್ರ ವೆರೋನಿಕಾ ಜೊತೆಯಲ್ಲಿ 2007ರ ನವೆಂಬರ್‌ನಲ್ಲಿ ಇರಾಕ್‌, ಆಫ್ಘಾನಿಸ್ತಾನ್‌, ಜರ್ಮನಿ, ಆಫ್ರಿಕಾ ಮತ್ತು ಗ್ರೀನ್‌ಲ್ಯಾಂಡ್‌ ದೇಶಗಳನ್ನೊಳಗೊಂಡ ಒಂದು USO ಪ್ರವಾಸದಲ್ಲಿ ಪೀಟರ್ಸ್‌ ಭಾಗಿಯಾಗಿದ್ದ.[]

2008ರ ಜುನೋ ಪ್ರಶಸ್ತಿಗಳು

[ಬದಲಾಯಿಸಿ]

2008ರ ಏಪ್ರಿಲ್‌ 6ರಂದು[೧೦] ಕ್ಯಾಲ್ಗರಿಯಲ್ಲಿ ನಡೆದ 2008ರ ಜುನೋ ಪ್ರಶಸ್ತಿ ಪ್ರದಾನಗಳ, ದೂರದರ್ಶನದ ಮೂಲಕ ಸಾದರಪಡಿಸಲಾದ ಸಮಾರಂಭಗಳಿಗೆ ಪೀಟರ್ಸ್‌ ನಿರೂಪಕನಾಗಿದ್ದ ಮತ್ತು ಈ ಸಂದರ್ಭದಲ್ಲಿ, "ವೈವಿಧ್ಯಮಯ ಕಾರ್ಯಕ್ರಮ ಅಥವಾ ಸರಣಿಯಲ್ಲಿನ ಅತ್ಯುತ್ತಮ ಪಾತ್ರನಿರ್ವಹಣೆ ಅಥವಾ ನಿರೂಪಣೆಗಾಗಿ" ಮೀಸಲಾಗಿದ್ದ ಜೆಮಿನಿ ಪ್ರಶಸ್ತಿಯೊಂದನ್ನು ಆತ ಗೆದ್ದುಕೊಂಡ. 2008ರ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಸಾರವು ಹಿಂದೆಂದೂ ಪಡೆಯದ ಎರಡನೇ-ಅತ್ಯಂತ ಹೆಚ್ಚಿನ ಶ್ರೇಯಾಂಕಗಳನ್ನು ಪಡೆಯಿತು.

2009ರ ಜುನೋ ಪ್ರಶಸ್ತಿಗಳು

[ಬದಲಾಯಿಸಿ]

ಪೀಟರ್ಸ್‌ನನ್ನು ಸತತ ಎರಡನೇ ಬಾರಿಗೆ 2009ರ ಜುನೋ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆ ಮಾಡಲು ಕೋರಿಕೊಳ್ಳಲಾಯಿತು. 2009ರ ಜುನೋ ಪ್ರಶಸ್ತಿ ಪ್ರದಾನ ಸಮಾರಂಭವು 2009ರ ಮಾರ್ಚ್‌ 29ರಂದು ವ್ಯಾಂಕೂವರ್‌‌ನಲ್ಲಿ ನಡೆಯಿತು.

ರೆಡ್, ವೈಟ್, ಅಂಡ್ ಬ್ರೌನ್

[ಬದಲಾಯಿಸಿ]

ಪೀಟರ್ಸ್‌ನ ಇತ್ತೀಚಿನ DVD/CDಯನ್ನು ...Russell Peters: Red, White, and Brown ಎಂದು ಕರೆಯಲಾಗಿದೆ. ಇದನ್ನು ಕೆನಡಾದಲ್ಲಿ 2008ರ ಸೆಪ್ಟೆಂಬರ್‌ನಲ್ಲಿ ಮತ್ತು USನಲ್ಲಿ 2009ರ ಜನವರಿ 27ರಂದು ಬಿಡುಗಡೆ ಮಾಡಲಾಯಿತು. ತನ್ನ ಸೋದರ ಹಾಗೂ ವ್ಯವಸ್ಥಾಪಕನಾದ ಕ್ಲೆಯ್ಟನ್ ಪೀಟರ್ಸ್ ಜೊತೆಗೂಡಿ ಪೀಟರ್ಸ್‌ ಈ DVDಯನ್ನು ನಿರ್ಮಾಣ ಮಾಡಿದ.

ಚಲನಚಿತ್ರ

[ಬದಲಾಯಿಸಿ]

ಪೀಟರ್ಸ್ ಕೆಲವೊಂದು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾನೆ. ಅವುಗಳಲ್ಲಿ ಇತ್ತೀಚಿನದು "ಸೀನಿಯರ್ ಸ್ಕಿಪ್ ಡೇ" ಚಿತ್ರ. ಇದರಲ್ಲಿ ಲ್ಯಾರಿ ಮಿಲ್ಲರ್, ತಾರಾ ರೀಡ್‌ & ಗ್ಯಾರಿ ಲುನ್ಡಿ ಕೂಡ ಪಾತ್ರ ವಹಿಸಿದ್ದಾರೆ. ಇದರ ಜೊತೆಗೆ, 1994ರಲ್ಲಿ ಬಂದ ಬೂಝ್‌ಕ್ಯಾನ್‌ ಎಂಬ ಚಲನಚಿತ್ರದಲ್ಲಿ ಹಾವಿನ ಸ್ನೇಹಿತನಾಗಿ ಪೀಟರ್ಸ್‌ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅದೇ ರೀತಿಯಲ್ಲಿ 1999ರ ಟೈಗರ್ ಕ್ಲಾಸ್‌ III ಚಿತ್ರದಲ್ಲಿ ಪತ್ತೇದಾರ ಎಲಿಯಟ್‌ ಆಗಿ, 1999ರ "ಅನಲೈಸ್‌ ದಿಸ್‌" ಚಿತ್ರದಲ್ಲಿ, 2004ರ ಮೈ ಬೇಬಿ'ಸ್ ಡ್ಯಾಡಿ ಚಿತ್ರದಲ್ಲಿ ಪ್ರಸೂತಿ ತಜ್ಞನಾಗಿ, 2006ರ ಕ್ವಾರ್ಟರ್ ಲೈಫ್ ಕ್ರೈಸಿಸ್ ಚಿತ್ರದಲ್ಲಿ ದಿಲೀಪ್‌ ಕುಮಾರ್‌ ಆಗಿ, 2007ರ ದಿ ಟೇಕ್ ಚಿತ್ರದಲ್ಲಿ ಡಾ.ಶರ್ಮಾ ಆಗಿ, ಮತ್ತು 2008ರ ಸೀನಿಯರ್ ಸ್ಕಿಪ್ ಡೇ ಚಿತ್ರದಲ್ಲಿ ಅಂಕಲ್‌ ಟಾಡ್‌ ಆಗಿ ಪೀಟರ್ಸ್‌ ಕಾಣಿಸಿಕೊಂಡಿದ್ದಾನೆ. ಮುಂಬರಲಿರುವ ಎರಡು ಚಲನಚಿತ್ರಗಳಲ್ಲಿನ ಆತನ ಅಭಿನಯಗಳಿಗಾಗಿಯೂ ಪೀಟರ್ಸ್‌ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದ್ದಾನೆ. ನ್ಯಾಷನಲ್‌ ಲಂಪೂನ್‌'ಸ್‌ ದಿ ಲೆಜೆಂಡ್‌ ಆಫ್‌ ಆವ್‌ಸಮೆಸ್ಟ್‌ ಮ್ಯಾಕ್ಸಿಮಸ್‌ ನಲ್ಲಿ "ಪರ್ವಿಯಸ್‌" ಆಗಿ ಪಾತ್ರವಹಿಸಲು ಅವನನ್ನು ಆಯ್ಕೆಮಾಡಲಾಗಿದೆ.

ಜನಪ್ರಿಯತೆ

[ಬದಲಾಯಿಸಿ]

ಪೀಟರ್ಸ್‌ನ ಜನಪ್ರಿಯತೆ ಹಲವಾರು ದೇಶಗಳಿಗೆ ವ್ಯಾಪಿಸಿದೆ. ಕೆನಡಾದಲ್ಲಿ ಟೊರೊಂಟೋದ ಏರ್ ಕೆನಡಾ ಸೆಂಟರ್‌‌ನಲ್ಲಿನ[೧೧] ಏಕೈಕ ಪ್ರದರ್ಶನಕ್ಕೆ 15,000ಕ್ಕೂ ಹೆಚ್ಚಿನ ಟಿಕೆಟ್ಟುಗಳನ್ನು ಎರಡೇ ದಿನಗಳಲ್ಲಿ ಮಾರಾಟಮಾಡಿದ ಮೊದಲ ಹಾಸ್ಯಗಾರ ಎಂಬ ಹೆಗ್ಗಳಿಕೆಗೆ ಪೀಟರ್ಸ್‌ ಪಾತ್ರನಾದ. ಎರಡು ದಿನಗಳ ಮಾರಾಟದ ಅವಧಿಯಲ್ಲಿ 30,000ಕ್ಕೂ ಹೆಚ್ಚು ಟಿಕೆಟ್ಟುಗಳನ್ನು ದೇಶವ್ಯಾಪಿಯಾಗಿ ಮಾರಾಟ ಮಾಡುವಲ್ಲಿ ಆತ ಯಶಸ್ವಿಯಾದ. ಒಟ್ಟಾರೆಯಾಗಿ 60,000 ಟಿಕೆಟ್ಟುಗಳು ಆರು ನಗರಗಳಲ್ಲಿ ಬಿಕರಿಯಾದವು.[ಸೂಕ್ತ ಉಲ್ಲೇಖನ ಬೇಕು]

ಪ್ರಶಸ್ತಿಗಳು ಮತ್ತು ಮಾನ್ಯತೆಗಳು

[ಬದಲಾಯಿಸಿ]
  • 1997- "ಹಾಸ್ಯ ಕಾರ್ಯಕ್ರಮ ಅಥವಾ ಸರಣಿಯೊಂದರಲ್ಲಿನ ಅತ್ಯುತ್ತಮ ವೈಯುಕ್ತಿಕ ಪ್ರದರ್ಶನ" ವರ್ಗದಲ್ಲಿನ ಜೆಮಿನಿ ಪ್ರಶಸ್ತಿಗಾಗಿರುವ ನಾಮನಿರ್ದೇಶನ. ಕಾಮಿಕ್ಸ್‌ ಎಂಬ TV-ಸರಣಿಯಿಂದ ಬಂದ, ಶೋ ಮೀ ದಿ ಫನ್ನಿ ಎಂಬ ಕಾರ್ಯಕ್ರಮಕ್ಕಾಗಿ ಇದು ದಕ್ಕಿತು. (1997)[೧೨]
  • 2004- ಆತನ ಕಾಮಿಡಿ ನೌ ಎಂಬ ಕಾರ್ಯಕ್ರಮಕ್ಕಾಗಿ ಸಂದ ಜೆಮಿನಿ ಪ್ರಶಸ್ತಿಯೊಂದರ ನಾಮನಿರ್ದೇಶನ.

! ವಿಶೇಷವಾದದ್ದು

  • 2008- ದಿ ಜುನೋ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಗಾಗಿರುವ ಜೆಮಿನಿ ಪ್ರಶಸ್ತಿಯೊಂದರ ನಾಮನಿರ್ದೇಶನ.
  • 2008- 'ವೈವಿಧ್ಯಮಯ ಕಾರ್ಯಕ್ರಮ ಅಥವಾ ಸರಣಿಯ ಅತ್ಯುತ್ತಮ ಪಾತ್ರನಿರ್ವಹಣೆ ಅಥವಾ ನಿರೂಪಣೆ'ಗಾಗಿರುವ ಜೆಮಿನಿ ಪ್ರಶಸ್ತಿಯೊಂದರ ವಿಜೇತ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ಶೀರ್ಷಿಕೆ ವರ್ಷ
"ಶೋ ಮೀ ದಿ ಫನ್ನಿ" ೧೯೯೭
"ಕಾಮಿಡಿ ನೌ!" ೨೦೦೪
"ಲೈವ್ ಇನ್ ನ್ಯೂಯಾರ್ಕ್" ೨೦೦೪
"ಔಟ್‌ಸೋರ್ಸ್ಡ್‌" ೨೦೦೬
"Russell Peters: Red, White, and Brown" ೨೦೦೮

[೧೩]

ಅಭಿನಯಿಸಿದ ಗಮನಾರ್ಹ ಪಾತ್ರಗಳು

[ಬದಲಾಯಿಸಿ]

ನಟನೆಯ ಪಾತ್ರಗಳು - ದೂರದರ್ಶನ

[ಬದಲಾಯಿಸಿ]
  • "ಕಾಮಿಕ್ಸ್ ವಿಥೌಟ್ ಬಾರ್ಡರ್ಸ್"(2008)
  • ರಸ್ಸೆಲ್ ಪೀಟರ್ಸ್: ರೆಡ್, ವೈಟ್ ಅಂಡ್ ಬ್ರೌನ್ (2008)
  • ಸೀನಿಯರ್ ಸ್ಕಿಪ್ ಡೇ/ಹೈಸ್ಕೂಲ್'ಸ್ ಡೇ ಆಫ್ ( ಆಸ್ಟ್ರೇಲಿಯನ್ ಶೀರ್ಷಿಕೆ) (2008)- ಅಂಕಲ್ ಟಾಡ್

TVಯಲ್ಲಿ ಕಾಣಿಸಿಕೊಳ್ಳುವಿಕೆ

[ಬದಲಾಯಿಸಿ]
  • "ದಿ ಲೇಟ್ ಲೇಟ್ ಶೋ ವಿಥ್ ಕ್ರೈಗ್ ಫರ್ಗುಸನ್" - ಸ್ವತಃ ಅವನೇ (2009)
  • "9ನೇ ವಾರ್ಷಿಕ ಕೆನಡಿಯನ್ ಹಾಸ್ಯ ಪ್ರಶಸ್ತಿಗಳು" (2008)- ಸ್ವತಃ ಅವನೇ (ದೊಡ್ಡ ತಾಣದ ಅತ್ಯುತ್ತಮ ನಿಂತಾಡುವ ವಿದೂಷಕ - ಪ್ರಶಸ್ತಿ ವಿಜೇತ)
  • "CBC ನ್ಯೂಸ್: ದಿ ಅವರ್".... ಸ್ವತಃ ಅವನೇ - 2008ರ ಸೆಪ್ಟೆಂಬರ್ 18ರ ದಿನಾಂಕದ ಸಂಚಿಕೆ (2008) TV ಸಂಚಿಕೆ .... ಸ್ವತಃ ಅವನೇ
  • "ದಿ ಟುನೈಟ್ ಶೋ ವಿಥ್ ಜೇ ಲೆನೋ" - ಸ್ವತಃ ಅವನೇ - 2008ರ ಫೆಬ್ರವರಿ 15ರ ದಿನಾಂಕದ ಸಂಚಿಕೆ (2008)
  • "ಡೆಫ್ ಕಾಮಿಡಿ ಜಾಮ್" - ಸಂಚಿಕೆ #8.4 (2008) TV ಸಂಚಿಕೆ - ಸ್ವತಃ ಅವನೇ/ಹಾಸ್ಯಗಾರ
  • "Pulse: The Desi Beat"- ಸಂಚಿಕೆ #1.9 (2007) TV ಸಂಚಿಕೆ - ಸ್ವತಃ ಅವನೇ
  • "ವೀಡಿಯೊ ಆನ್ ಟ್ರಯಲ್" ಸಂಚಿಕೆ #3.3 (2007) TV ಸಂಚಿಕೆ - ಸ್ವತಃ ಅವನೇ.
  • "ಕಾಮಿಕ್ಸ್ ಅನ್‌ಲೀಶ್ಡ್‌" - ಸಂಚಿಕೆ #1.6 (2006) TV ಸಂಚಿಕೆ - ಸ್ವತಃ ಅವನೇ
  • 4ನೇ ವಾರ್ಷಿಕ ಕೆನಡಿಯನ್ ಹಾಸ್ಯ ಪ್ರಶಸ್ತಿಗಳು (2003) - ಸ್ವತಃ ಅವನೇ
  • 5ನೇ ವಾರ್ಷಿಕ ಕೆನಡಿಯನ್ ಹಾಸ್ಯ ಪ್ರಶಸ್ತಿಗಳು (2004)- ನಾಮ ನಿರ್ದೇಶಿತ (ನಿಂತಾಡುವ ಪುರುಷ ವಿದೂಷಕ)
  • MTV ಕ್ರಿಬ್ಸ್

ಸ್ವಯಂ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "Russell Peters Official Bio Press". Russell Peters Official Bio Press. Archived from the original on 2007-10-11. Retrieved 2010-02-25.
  2. Comedy Preview: Russell Peters won't a hurt you real bad. Gauntlet Entertainment.
  3. ೩.೦ ೩.೧ "Russell Peters IMDB profile". IMDB Profile.
  4. "Russell Peters Official FAQ". russellpeters.com - FAQ FAQ. Archived from the original on 2007-10-14. Retrieved 2010-02-25.
  5. "Russell Peters ~ Booking, Tour dates and video Information". Archived from the original on 2009-02-10. Retrieved 2010-02-25. Help Management Services
  6. "ಆರ್ಕೈವ್ ನಕಲು". Archived from the original on 2013-01-04. Retrieved 2013-01-04.
  7. ರಸ್ಸೆಲ್ ಪೀಟರ್ಸ್ ಸ್ಕೋರ್ಸ್‌ ಸ್ಕ್ರಿಪ್ಟ್‌ ಡೀಲ್‌ ವಿತ್‌ FOX Archived 2010-04-02 ವೇಬ್ಯಾಕ್ ಮೆಷಿನ್ ನಲ್ಲಿ.. ನ್ಯೂಸ್ ಬ್ಲೇಜ್ .
  8. ರಸ್ಸೆಲ್ ಹ್ಯಾಸ್‌ ಎ ನ್ಯೂ ಗಿಗ್ Archived 2008-12-06 ವೇಬ್ಯಾಕ್ ಮೆಷಿನ್ ನಲ್ಲಿ.. ಮೆಟ್ರೋ ಇಂಟರ್‌ನ್ಯಾಷನಲ್‌ .
  9. "USO visits Bagram". United States Department of Defense. November 21, 2007. Retrieved 2008-01-24.
  10. "Russell Peters to Host The 2008 JUNO Awards, April 6 on CTV" (PDF). CARAS. February 5, 2008. Archived from the original (PDF) on 2008-02-16. Retrieved 2008-02-05.
  11. "Russell Peters' Homecoming Tour SELLS OUT Across Canada!". News Blaze. Archived from the original on 2012-06-07. Retrieved 2010-02-25.
  12. "Russell Peters IMDB profile - awards". IMDB Profile - Awards.
  13. "Russel Peters List of Films Produced (IMDB)".
  14. "IMDB Official Russel Peters Filmography".

ಹೊರಗಿನ ಕೊಂಡಿಗಳು

[ಬದಲಾಯಿಸಿ]
ರಸ್ಸೆಲ್ ಪೀಟರ್ಸ್