ರತ್ನಮಾಲಾ ಸವಣೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರತ್ನಮಾಲಾ ಧಾರೇಶ್ವರ ಸವಣೂರು (ಕೆಲವೊಮ್ಮೆ ಸವಣೂರು ಎಂದು ಉಚ್ಚರಿಸಲಾಗುತ್ತದೆ; ಜನನ ೧೯೫೦) ಒಬ್ಬ ಭಾರತೀಯ ರಾಜಕಾರಣಿ. ಇವರು ಈ ಹಿಂದೆ ಜನತಾ ದಳಕ್ಕೆ ಸೇರಿದ್ದರು ಮತ್ತು ಈಗ ಜನತಾ ದಳ (ಜಾತ್ಯತೀತ)ಕ್ಕೆ ಸೇರಿದ್ದಾರೆ. ಅವರು ೧೧ ನೇ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಗುಜ್ರಾಲ್ ಐ.ಕೆ ಸಚಿವಾಲಯದಲ್ಲಿ ಯೋಜನೆ ಮತ್ತು ಅನುಷ್ಠಾನದ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು..

ಆರಂಭಿಕ ಜೀವನ[ಬದಲಾಯಿಸಿ]

ಸವಣೂರು ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ೩ ಡಿಸೆಂಬರ್ ೧೯೫೦ ರಂದು ಜನಿಸಿದರು. ಇವರು ಶ್ರೀ ಗೋಪಾಲರಾವ್ ಮಾಸಾಜಿ ಪೋಲ್ ಅವರ ಪುತ್ರಿ. ಅವರು ಕೊಲ್ಲಾಪುರದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. [೧]

ವೃತ್ತಿ[ಬದಲಾಯಿಸಿ]

ಸವಣೂರು ಅವರು ಈ ಹಿಂದೆ ಜನತಾದಳದ ಸದಸ್ಯರಾಗಿದ್ದರು. ೧೯೯೬ ರ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅವರು ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಚಿಕ್ಕೋಡಿ ಸ್ಥಾನದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ‌ಎನ್‌ಸಿ)ನ ಬಿ. ಶಂಕರಾನಂದ ರ ವಿರುದ್ಧ ಸ್ಪರ್ಧಿಸಿ ,ಅವರನ್ನು ೧,೧೨,೭೫೯ ಮತಗಳ ಅಂತರದಿಂದ ಸೋಲಿಸಿದರು. [೨] ಶಂಕರಾನಂದ ಅವರು ಈ ಮೊದಲು ಸತತ ಒಂಭತ್ತು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು. [೩] ಪ್ರಧಾನ ಮಂತ್ರಿ ಐ.ಕೆ. ಗುಜ್ರಾಲ್ ಅವರ ಮಂತ್ರಿಮಂಡಲದಲ್ಲಿ ಸವಣೂರ್ ಅವರನ್ನು ಯೋಜನೆ ಮತ್ತು ಅನುಷ್ಠಾನದ ರಾಜ್ಯ ಸಚಿವೆಯನ್ನಾಗಿ ನೇಮಿಸಲಾಯಿತು. [೪] [೫] ಆದರೆ, ೧೯೯೮ ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಳ ಚಿಕ್ಕೋಡಿಯಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. [೩]

ಮಾರ್ಚ್ ೨೦೦೪ ರಲ್ಲಿ ಜನತಾ ದಳಕ್ಕೆ (ಜಾತ್ಯತೀತ) ಸೇರುವ ಮೊದಲು ಸವಣೂರು ಅವರು [೬] ಭಾರತೀಯ ರಾಷ್ಟೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ೨೦೦೮ ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು . [೭]

ವೈಯಕ್ತಿಕ ಜೀವನ[ಬದಲಾಯಿಸಿ]

ಅವರು ಧಾರೇಶ್ವರ ಸವಣೂರು ಅವರನ್ನು ೧೨ ಮೇ ೧೯೭೪ ರಂದು ವಿವಾಹವಾದರು ಮತ್ತು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. [೪]

ಉಲ್ಲೇಖಗಳು[ಬದಲಾಯಿಸಿ]

  1. "Biographical Sketch of Member of XI Lok Sabha: Savanoor, Smt. Ratnamala". Lok Sabha. Retrieved 27 November 2017.
  2. "Statistical Report on General Elections, 1996 to the Eleventh Lok Sabha" (PDF). Election Commission of India. p. 194. Retrieved 27 November 2017.
  3. ೩.೦ ೩.೧ Prabhudesai, Sandesh (16 February 1998). "Shankaranand may still pull off a surprise". Rediff.com. Retrieved 27 November 2017.
  4. ೪.೦ ೪.೧ "Biographical Sketch of Member of XI Lok Sabha: Savanoor, Smt. Ratnamala". Lok Sabha. Retrieved 27 November 2017."Biographical Sketch of Member of XI Lok Sabha: Savanoor, Smt. Ratnamala". Lok Sabha. Retrieved 27 November 2017.
  5. "Demand for Congress ticket". Deccan Herald. 19 March 2004. Retrieved 27 November 2017.[ಶಾಶ್ವತವಾಗಿ ಮಡಿದ ಕೊಂಡಿ][ಮಡಿದ ಕೊಂಡಿ]
  6. "Huge demand for Janata Dal (S) ticket". The Hindu. 19 March 2004. Retrieved 27 November 2017.[ಮಡಿದ ಕೊಂಡಿ]
  7. "Cong, JDS leaders join BJP". Outlook. 5 April 2008. Retrieved 27 November 2017.