ರಂಗುಮಾಲೆ
Achiote | |
---|---|
Achiote seed pods | |
Conservation status | |
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | Rosids |
ಗಣ: | ಮಾಲ್ವೇಲೀಸ್ |
ಕುಟುಂಬ: | ಬಿಕ್ಸೇಸೀ |
ಕುಲ: | ಬಿಕ್ಸಾ |
ಪ್ರಜಾತಿ: | B. orellana
|
Binomial name | |
Bixa orellana | |
Synonyms[೨] | |
|
ರಂಗುಮಾಲೆ ಬಿಕ್ಸೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯಜಾತಿ. ಬಿಕ್ಸಾ ಓರೆಲ್ಲಾನಾ ಇದರ ವೈಜ್ಞಾನಿಕ ಹೆಸರು. ಮಧ್ಯ ಅಮೆರಿಕದ ಮೂಲನಿವಾಸಿಯಾದ[೩][೪] ಇದನ್ನು ಬ್ರಜಿಲ್, ಮೆಕ್ಸಿಕೋ ಗಯಾನ, ಆಂಟಿಲೀಸ್ ಮುಂತಾದೆಡೆ ವ್ಯಾಪಕವಾಗಿ ಬೆಳೆಸಲಾಗಿದೆ. ಭಾರತದಲ್ಲೂ ಪಶ್ಚಿಮ ಘಟ್ಟ ಶ್ರೇಣಿಯ ಜಿಲ್ಲೆಗಳಲ್ಲಿ, ಬಂಗಾಲ ಮತ್ತು ಅಸ್ಸಾಮ್‌ಗಳಲ್ಲಿ ಇದನ್ನು ಕಾಣಬಹುದು. ಮಲೆನಾಡಿನಲ್ಲಿ ಇದನ್ನು ಜಪಲಿ ಎಂಬ ಹೆಸರಿನಿಂದ ಕರೆಯುತ್ತಾರೆ.
ಗುಣಲಕ್ಷಣಗಳು
[ಬದಲಾಯಿಸಿ]ಇದು 3-4 ಮೀ. ಎತ್ತರಕ್ಕೆ ಬೆಳೆಯುವ ಸಣ್ಣ ಗಾತ್ರದ ಮರ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. 14 X 9 ಸೆಂಮೀ ವಿಸ್ತಾರದ ಇವು ಹೃದಯದ ಆಕಾರದಲ್ಲಿವೆ. ಹೂಗಳು ಆಕರ್ಷಕವಾಗಿದ್ದು ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಅರಳುವುವು. ದಳಗಳ ಬಣ್ಣ ಬಿಳಿ ಇಲ್ಲವೆ ಕೆಂಪು. ಫಲ ಸಂಪುಟ ಮಾದರಿಯದು, ಕೊಂಚ ಚಪ್ಪಟೆ. ಎರಡು ಭಾಗಗಳಾಗಿ ಸೀಳುತ್ತದೆ. ಹಣ್ಣಿನ ಹೊರಸಿಪ್ಪೆಯ ಮೇಲೆ ಮುಳ್ಳುಗಳಿವೆ. ಬೀಜಗಳು ಕೆಂಪು ಬಣ್ಣದವು.
ಕೃಷಿ
[ಬದಲಾಯಿಸಿ]ರಂಗುಮಾಲೆಯನ್ನು ಬೀಜಗಳಿಂದ ಇಲ್ಲವೆ ಕಾಂಡತುಂಡುಗಳಿಂದ ವೃದ್ಧಿಸಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಬೀಜಗಳು ಚೆನ್ನಾಗಿ ಬಲಿತ ಮೇಲೆ, ಇದ್ನನು ಸಂಗ್ರಹಿಸಿ, ಜಜ್ಜಿ, ಬಿಸಿನೀರಿನಲ್ಲಿ ಸೇರಿಸಿಡಲಾಗುವುದು. ಆಗ ತಿರುಳಿನಿಂದ ಕೆಂಪುಬಣ್ಣ ಹೊರಬಂದು ನೀರಿನೊಂದಿಗೆ ಕಲಿಲ ರೂಪದಲ್ಲಿ ಮಿಶ್ರವಾಗುವುದು. ಕೆಲವು ದಿವಸಗಳ ತರುವಾಯ ಈ ಬಣ್ಣ ಕೊಳೆತು ತಳದಲ್ಲಿ ಸಂಗ್ರಹಗೊಳ್ಳುತ್ತದೆ. ಅನಂತರ ಇದನ್ನು ಬೇರ್ಪಡಿಸಿ, ಹಲ್ಲೆಗಳ ರೂಪದಲ್ಲಿ ಒಣಗಿಸಲಾಗುವುದು. ಹೀಗೆ ದೊರೆಯುವ ಬಣ್ಣವೇ ರಂಗು ಅಥವಾ ಅನಾಟೊ. ಈ ಬಣ್ಣಕ್ಕೆ ಕಾರಣ ಅನಾಟೊದಲ್ಲಿರುವ ಬಿಕ್ಸಿನ್ ಎಂಬ ಕೆಂಪುವರ್ಣಕ ಮತ್ತು ಓರೆಲಿನ್ ಎಂಬ ಹಳದಿ ವರ್ಣಕ.[೫][೬] ಹಿಂದೆ ಅನಾಟೊವನ್ನು ರೇಷ್ಮೆ ಮತ್ತು ಹತ್ತಿ ಬಟ್ಟೆಗಳಿಗೆ ಬಣ್ಣಕಟ್ಟಲು ಬಳಸಲಾಗುತ್ತಿತ್ತು. ಆದರೆ ಇದು ಗಟ್ಟಿ ಬಣ್ಣವಲ್ಲವಾದ್ದರಿಂದ ಬಳಕೆ ಕಡಿಮೆಯಾಗಿದೆ. ಆದರೆ ಬೆಣ್ಣೆ, ತುಪ್ಪ, ವನಸ್ಪತಿ, ಗಿಣ್ಣು ಮತ್ತು ಚಾಕಲೇಟುಗಳಿಗೆ ಬಣ್ಣಕೊಡಲು ಇದನ್ನು ಬಳಸುತ್ತಾರೆ. ಅಲ್ಲದೆ ಬೂಟ್‌ಪಾಲಿಷ್, ಮೆರುಗೆಣ್ಣೆ, ಕೇಶತೈಲ, ಸಾಬೂನು ಮುಂತಾದವಕ್ಕೆ ಬಣ್ಣ ಕಟ್ಟಲೂ ಬಳಸುವುದುಂಟು. ರಂಗಮಾಲೆಯ ಬೇರು ಅಡುಗೆ ಮಸಾಲೆಯಾಗಿ ಬಳಕೆಯಲ್ಲಿದೆ. ಎಲೆಗಳು ಕಾಮಾಲೆರೋಗ ಚಿಕಿತ್ಸೆಗೆ ಉಪಯುಕ್ತ ಎನ್ನಲಾಗಿದೆ.
ಛಾಯಾಂಕಣ
[ಬದಲಾಯಿಸಿ]-
With fruits in Hyderabad, India
-
Fruit in Hyderabad, India
-
Split seed pod
-
Seed pod closeup
-
Fruit
-
Bixa orellana - MHNT
ಉಲ್ಲೇಖಗಳು
[ಬದಲಾಯಿಸಿ]- ↑ Wheeler, L.; Beech, E. (2019). "Bixa orellana". IUCN Red List of Threatened Species. 2019: e.T61986316A61986320. doi:10.2305/IUCN.UK.2019-2.RLTS.T61986316A61986320.en. Retrieved 11 December 2022.
- ↑ Kew World Checklist of Selected Plant Families.
- ↑ "Bixa orellana (annatto)". Center for Agriculture and Biosciences International (CABI). 27 September 2018. Retrieved 10 October 2018.
- ↑ Morton, Julia F. (1960). "Can Annatto (Bixa orellana, L.), an old source of food color, meet new needs for safe dye?". Proceedings of the Florida State Horticultural Society. 73: 301–309. Archived from the original on 11 ಅಕ್ಟೋಬರ್ 2018. Retrieved 10 October 2018.
- ↑ Vilar, Daniela de Araújo; Vilar, Marina Suênia de Araujo; Moura, Túlio Flávio Accioly de Lima e; et al. (2014). "Traditional Uses, Chemical Constituents, and Biological Activities of Bixa orellana L.: A Review". The Scientific World Journal (in ಇಂಗ್ಲಿಷ್). 2014: 857292. doi:10.1155/2014/857292. ISSN 2356-6140. PMC 4094728. PMID 25050404.
- ↑ Ul-Islam, S.; Rather, L. J.; Mohammad, F. (2015). "Phytochemistry, biological activities and potential of annatto in natural colorant production for industrial applications – A review". Journal of Advanced Research. 7 (3): 499–514. doi:10.1016/j.jare.2015.11.002. PMC 4856788. PMID 27222755.