ಚಾಕೋಲೆಟ್

ವಿಕಿಪೀಡಿಯ ಇಂದ
Jump to navigation Jump to search
ಚಾಕಲಿಟ್ ಹೆಚ್ಚು ಸಾಮಾನ್ಯವಾಗಿ ಗಾಢ, ಹಾಲು ಮತ್ತು ಬಿಳಿ ಪ್ರಕಾರಗಳಲ್ಲಿ ಸಿಗುತ್ತದೆ, ಮತ್ತು ಕೋಕೋ ಘನಪದಾರ್ಥಗಳು ಕಂದು ಬಣ್ಣವನ್ನು ನೀಡುತ್ತವೆ.

ಚಾಕಲಿಟ್ ಉಷ್ಣವಲಯದ ಥಿಯೋಬ್ರೋಮಾ ಕಕೇಯೋ ಮರದ ಬೀಜದಿಂದ ಉತ್ಪಾದಿಸಲಾದ ಹಲವಾರು ಸಂಸ್ಕರಿಸದ ಮತ್ತು ಸಂಸ್ಕರಿಸಿದ ಆಹಾರಗಳನ್ನು ಒಳಗೊಳ್ಳುತ್ತದೆ. ಕನಿಷ್ಠಪಕ್ಷ ಮೂರು ಸಾವಿರ ವರ್ಷಗಳಿಂದ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಕಾವೋವನ್ನು ಬೇಸಾಯಮಾಡಲಾಗಿದೆ, ಮತ್ತು ಅದರ ಅತ್ಯಂತ ಮುಂಚಿನ ಬಳಕೆ ಸರಿಸುಮಾರು ಕ್ರಿ.ಪೂ. ೧೧೦೦ ಎಂದು ದಾಖಲಿಸಲಾಗಿದೆ. ಅದರಿಂದ, "ಕಹಿ ನೀರು" ಎಂಬ ಅರ್ಥನೀಡುವ ಒಂದು ನಾವಾಟಲ್ ಪದವಾದ, ಶೋಕೋಲಾಟಲ್ ಎಂಬ ಹೆಸರಿನಿಂದ ಪರಿಚಿತವಾದ ಪಾನೀಯವನ್ನು ತಯಾರಿಸುತ್ತಿದ್ದ ಆಜ್ಟೆಕ್ ಜನರನ್ನು ಒಳಗೊಂಡಂತೆ, ಮೆಸೋಅಮೇರಿಕಾದ ಬಹುಸಂಖ್ಯೆಯ ಜನರು ಚಾಕಲಿಟ್ ಪೇಯಗಳನ್ನು ತಯಾರಿಸುತ್ತಿದ್ದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]"https://kn.wikipedia.org/w/index.php?title=ಚಾಕೋಲೆಟ್&oldid=401066" ಇಂದ ಪಡೆಯಲ್ಪಟ್ಟಿದೆ