ಅನಾಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Open fruit of the achiote tree (Bixa orellana), showing the seeds from which annatto is extracted.

ಅನಾಟೋ ಬಿಕ್ಸಾ ಒವೆಲೀನ ಎಂಬ ಗಿಡದ ಬೀಜಗಳಿಂದ ತಯಾರಿಸಿದ ಹಳದಿ ವರ್ಣದ ಪದಾರ್ಥವನ್ನು ಅನಾಟೋ ಎಂದು ಕರೆಯುತ್ತಾರೆ.

ಸಸ್ಯ[ಬದಲಾಯಿಸಿ]

ಅನಾಟೋವನ್ನು ಕೊಡುವಂಥ ಸಸ್ಯಕ್ಕೆ ಅನಾಟೋಸಸ್ಯವೆಂದು ಕರೆಯುತ್ತಾರೆ. ಈ ಸಸ್ಯ ಮಧ್ಯ ಹಾಗೂ ದಕ್ಷಿಣ ಅಮೆರಿಕದ ಮೂಲವಾಸಿ. ಇದರ ಬೀಜದ ಸುತ್ತ ಮೇಣದಂತಿರುವ ಪೊರೆಯಿದೆ; ಸಾಕಷ್ಟು ನೆನೆದಾಗ ಪೊರೆ ಬೀಜದಿಂದ ಬೇರ್ಪಟ್ಟು ನೀರಿನಲ್ಲುಳಿಯುತ್ತದೆ. ಹಾಗೆ ತೊಳೆದ ನೀರನ್ನು ಸೋಸಿ, ಬಂದ ಜಿಗುಟಾದ ತಿರುಳನ್ನು (ಪಲ್ಪ್) ಒಂದು ಕಡೆ ಶೇಖರಿಸಿ ಒಣಗಲು ಬಿಡುವರು. ನೀರಿನ ಅಂಶ ಆವಿಯಾಗಿ ಹೋದಂತೆ ತಿರುಳು ಗಟ್ಟಿಯಾದ ಪಾಕದಂತೆ ನಿಲ್ಲುತ್ತದೆ. ಈ ರೀತಿಯ ಪಾಕದ ಸ್ಥಿತಿಗೆ ರೋಲ್ ಅಥವಾ ಫ್ಲೇಅನಾಟೋ ಎಂದು ಕರೆಯುತ್ತಾರೆ. ಈ ಪಾಕವನ್ನು ಮತ್ತಷ್ಟು ಒಣಗಿಸಿ, ಶೈತ್ಯಾಂಶವನ್ನು ಪೂರ್ಣವಾಗಿ ತೆಗೆದುಹಾಕಿ ಅನಾಟೋ ಬಿಲ್ಲೆಗಳನ್ನು ತಯಾರಿಸುತ್ತಾರೆ.

ಉಪಯೋಗಗಳು[ಬದಲಾಯಿಸಿ]

Colby cheese colored with annatto

ಹೀಗೆ ಒಣಗಿಸಿದ ವರ್ಣಕಪಾಕವನ್ನು ದೇಹದ ಮೇಲೆ ಬಣ್ಣ ಹಾಕುವುದಕ್ಕೂ ಬೆಣ್ಣೆಗೆ ಬಣ್ಣ ಹಾಕುವುದಕ್ಕೂ ಕ್ಯಾಲಿಕೋ ಪ್ರಿಂಟಿಂಗ್‍ನಲ್ಲಿ ಬಟ್ಟೆಗೆ ಬಣ್ಣ ಹಾಕುವುದಕ್ಕೂ ಬಳಸುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಅನಾಟೋ&oldid=1139339" ಇಂದ ಪಡೆಯಲ್ಪಟ್ಟಿದೆ