ಅನಾಟೋ
ಗೋಚರ
ಅನಾಟೋ ಬಿಕ್ಸಾ ಒವೆಲೀನ ಎಂಬ ಗಿಡದ ಬೀಜಗಳಿಂದ ತಯಾರಿಸಿದ ಹಳದಿ ವರ್ಣದ ಪದಾರ್ಥ.
ಸಸ್ಯ, ಅನಾಟೋವನ್ನು ಪಡೆಯುವುದು
[ಬದಲಾಯಿಸಿ]ಅನಾಟೋವನ್ನು ಕೊಡುವಂಥ ಸಸ್ಯಕ್ಕೆ ಅನಾಟೋಸಸ್ಯವೆಂದು ಕರೆಯುತ್ತಾರೆ. ಈ ಸಸ್ಯ ಮಧ್ಯ ಹಾಗೂ ದಕ್ಷಿಣ ಅಮೆರಿಕದ ಮೂಲವಾಸಿ.[೧] ಇದರ ಬೀಜದ ಸುತ್ತ ಮೇಣದಂತಿರುವ ಪೊರೆಯಿದೆ; ಸಾಕಷ್ಟು ನೆನೆದಾಗ ಪೊರೆ ಬೀಜದಿಂದ ಬೇರ್ಪಟ್ಟು ನೀರಿನಲ್ಲುಳಿಯುತ್ತದೆ. ಹಾಗೆ ತೊಳೆದ ನೀರನ್ನು ಸೋಸಿ, ಬಂದ ಜಿಗುಟಾದ ತಿರುಳನ್ನು (ಪಲ್ಪ್) ಒಂದು ಕಡೆ ಶೇಖರಿಸಿ ಒಣಗಲು ಬಿಡುವರು. ನೀರಿನ ಅಂಶ ಆವಿಯಾಗಿ ಹೋದಂತೆ ತಿರುಳು ಗಟ್ಟಿಯಾದ ಪಾಕದಂತೆ ನಿಲ್ಲುತ್ತದೆ. ಈ ರೀತಿಯ ಪಾಕದ ಸ್ಥಿತಿಗೆ ರೋಲ್ ಅಥವಾ ಫ್ಲೇಅನಾಟೋ ಎಂದು ಕರೆಯುತ್ತಾರೆ. ಈ ಪಾಕವನ್ನು ಮತ್ತಷ್ಟು ಒಣಗಿಸಿ, ಶೈತ್ಯಾಂಶವನ್ನು ಪೂರ್ಣವಾಗಿ ತೆಗೆದುಹಾಕಿ ಅನಾಟೋ ಬಿಲ್ಲೆಗಳನ್ನು ತಯಾರಿಸುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಹೀಗೆ ಒಣಗಿಸಿದ ವರ್ಣಕಪಾಕವನ್ನು ದೇಹದ ಮೇಲೆ ಬಣ್ಣ ಹಾಕುವುದಕ್ಕೂ ಬೆಣ್ಣೆಗೆ ಬಣ್ಣ ಹಾಕುವುದಕ್ಕೂ,[೨] ಕ್ಯಾಲಿಕೋ ಪ್ರಿಂಟಿಂಗ್‍ನಲ್ಲಿ ಬಟ್ಟೆಗೆ ಬಣ್ಣ ಹಾಕುವುದಕ್ಕೂ ಬಳಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Bixa orellana (annatto)". CABI. 27 September 2018. Retrieved 14 October 2018.
- ↑ Socaciu, Carmen (2007-10-24). Food Colorants: Chemical and Functional Properties (in ಇಂಗ್ಲಿಷ್). CRC Press. ISBN 9781420009286.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Major Colorants and Dyestuffs Entering International Trade, Annatto Seed and Its Extracts Archived 2019-02-08 ವೇಬ್ಯಾಕ್ ಮೆಷಿನ್ ನಲ್ಲಿ. from the UN's Food and Agriculture Organization
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: