ಯೆಲವರ್ತಿ ನಾಯುಡಮ್ಮ

ವಿಕಿಪೀಡಿಯ ಇಂದ
Jump to navigation Jump to search

ಯೆಲವರ್ತಿ ನಾಯುಡಮ್ಮ.
ಚಿತ್ರ:YNAYUDAMMA.JPG
Nayudamma
Born
Yelavarthy Nayudamma

10 September 1922
Died23 June 1985 (age 62)

ಯೆಲವರ್ತಿ ನಾಯುಡಮ್ಮರವರು ಕೆಮಿಕಲ್ ಎಂಜಿನಿಯರ್,ಏರ್‌ ಇಂಡಿಯಾ ಉಡ್ಡಯನ -೧೮೨(ಚಕ್ರವರ್ತಿ ಕನಿಷ್ಕ ಬಾಂಬಿಂಗ್ )ನಲ್ಲಿ ಮೃತಪಟ್ಟ ಒಬ್ಬ ಪುರುಷ ವಿಜ್ಞಾನಿ.

ಪರಿಚಯ[ಬದಲಾಯಿಸಿ]

ನಾಯುಡಮ್ಮ ರವರು ಭಾರತದಲ್ಲಿ ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ತೆನಾಲಿ ಬಳಿಯ ಯೆಲವರ್ರು ಗ್ರಾಮದಲ್ಲಿ ಕೃಷಿ ಕುಟುಂಬವೊಂದರಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿಯೇ ಪಡೆದರು ಮತ್ತು ಎಸಿ(AC) ಕಾಲೇಜಿನಲ್ಲಿ ತಮ್ಮ ಮಧ್ಯಂತರದ‌ ಅಧ್ಯಯನವನ್ನು ಮಾಡಿದರು. ನಂತರ, ಅವರು ಪ್ರಸಿದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ(ರಾಸಾಯನಿಕ ತಂತ್ರಜ್ಞಾನ) ಮಾಡಿದರು ಮತ್ತು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಲೆದರ್ ಟೆಕ್ನಾಲಜಿಯಲ್ಲಿ ಚರ್ಮದ ತಂತ್ರಜ್ಞಾನದಲ್ಲಿ ಕೋರ್ಸ್ ಮಾಡಿದರು. ಭಾರತದ ಲೆದರ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ತಮ್ಮ ಅಪಾರ ಕೊಡುಗೆಯನ್ನು ಅರ್ಪಿಸಿದರು. ಅವರು ಇನ್ಸ್ಟಿಟ್ಯೂಟ್ನ ಅಂತರಾಷ್ಟ್ರೀಯ ಚಿತ್ರವನ್ನು ನಿರ್ಮಿಸಲು ಮತ್ತು ಭಾರತೀಯ ಚರ್ಮದ ಉದ್ಯಮದೊಂದಿಗೆ ನಿಕಟ ಸಂಬಂಧಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಅವರು ವೈ ಪವನ ಳನ್ನು ಮದುವೆಯಾದರು. ಅವರು ಮೂವರು ಮಕ್ಕಳನ್ನು ಹೊಂದಿದ್ದರು,ರಥೀಶ್,ರಮೇಶ್‌ ಮತ್ತು ಶಾಂತಿ.[೧]

ಗೌರವಗಳು[ಬದಲಾಯಿಸಿ]

 • ನಾಯುಡಮ್ಮ ರವರಿಗೆ ೧೯೭೧ ರಲ್ಲಿ ಪದ್ಮಶ್ರೀ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಯಿತು.
 • ಚೆನ್ನೈ ಶ್ರೀ ರಾಜ-ಲಕ್ಷ್ಮಿ ಫೌಂಡೇಶನ್ ನಿಂದ ೧೯೮೩ ರಲ್ಲಿ ನಾಯುಡಮ್ಮ ರವರಿಗೆ ಪ್ರತಿಷ್ಠಿತ ರಾಜ-ಲಕ್ಷ್ಮಿ ಪ್ರಶಸ್ತಿಯನ್ನು ನೀಡಲಾಯಿತು.
 • ನಾಯುಡಮ್ಮ ರವರು ನವದೆಹಲಿಯ ಸಿಎಸ್ಐಆರ್(CSIR) ನ ನಿರ್ದೇಶಕ ಜನರಲ್ ಆಗಿ ಸೇವೆ ಸಲ್ಲಿಸಿದರು.
 • ೧೨ ಜೂನ್ ೧೯೮೧ ರಿಂದ ೨೭ ಅಕ್ಟೋಬರ್ ೧೯೮೨ ರ ವರೆಗೆ ನವದೆಹಲಿಯ ಪ್ರತಿಷ್ಠಿತ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ನಾಲ್ಕನೇ ವೈಸ್ - ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದರು.
 • ನಾಯುಡಮ್ಮ ರವರು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮಿತಿಗಳಲ್ಲಿಯೂ ಸೇವೆ ಸಲ್ಲಿಸಿದರು.

ಡಾ.ವೈ.ನಾಯುಡಮ್ಮ ಸ್ಮಾರಕ ಪ್ರಶಸ್ತಿ[ಬದಲಾಯಿಸಿ]

 • ಟಿ.ರಾಮಸಾಮಿ.
 • ಎ.ಸಿವತನು ಪಿಳೈ.
 • ನೋರಿ ದತ್ತಾತ್ರೇಯುಡು.
 • ಸ್ಯಾಮ್ ಪಿತ್ರೋಡಾ‌.
 • ಜಿ.ಮಾಧವನ್ ನಾಯರ್.
 • ಕೋಟ ಹರಿನಾರಾಯಣ.
 • ವಿ.ಕೆ.ಆತ್ರೆ.
 • ಆರ್.ಚಿದಂಬರಂ.
 • ಆರ್.ಎ.ಮಶೇಲ್ಕರ್.
 • ಜೆ.ಎಸ್.ಬಜಾಜ್.
 • ಎಸ್.ಜೆಡ್.ಕಾಸಿಮ್.
 • ವರ್ಘೀಸ್ ಕುರಿಯನ್.
 • ಎಂ.ಜಿ.ಕೆ.ಮೆನನ್.
 • ಎಮ್.ಎಸ್.ಸ್ವಾಮಿನಾಥನ್.
 • ಕೆ.ಕಸ್ತೂರಿರಂಗನ್.

೨೦೦೯ ರ ಪ್ರಶಸ್ತಿಯನ್ನು ಖ್ಯಾತ ರಕ್ಷಣಾ ವಿಜ್ಞಾನಿ ಡಾ.ವಿಜಯ್ ಕುಮಾರ್ ಸರಸ್ವತ್ ರವರು ಸ್ವೀಕರಿಸಿದರು.ಅವರು ಸತತ ಮೂರು ಬಾರಿ ಅಗ್ನಿ-೩ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಥಕಣಿಸಿದರು.[೨]

ಮರಣ[ಬದಲಾಯಿಸಿ]

ನಾಯುಡಮ್ಮ ರವರು ಏರ್ ಇಂಡಿಯಾ -೧೮೨ ಬಾಂಬ್ ದಾಳಿಯಲ್ಲಿ ೨೩ ಜೂನ್ ೧೯೮೫ ರಂದು ಸಿಖ್ ಉಗ್ರಗಾಮಿ ಗುಂಪಿನಿಂದ ನಡೆದ ದಾಳಿಯಿಂದ ಮೃತಪಟ್ಟರು. ನಾಯುಡಮ್ಮ ರವರ ಮರಣದ ನಂತರ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡರು.

ಉಲ್ಲೇಖಗಳು[ಬದಲಾಯಿಸಿ]

 1. https://www.quora.com/Why-is-Yelavarthy-Nayudamma-famous
 2. https://wikivisually.com/wiki/Yelavarthy_Nayudamma