ಮುದ್ದು ಮೂಡುಬೆಳ್ಳೆ
ಗೋಚರ
ಮುದ್ದು ಮೂಡುಬೆಳ್ಳೆ ಆಕಾಶವಾಣಿಯ ಹಿರಿಯ ಶ್ರೇಣಿ ಉದ್ಘೋಷಕರು [೧]ತುಳು ಭಾಷೆಯ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ. ಇವರು ತನ್ನ ಕೆಲಸದ ಸಮಯದಲ್ಲಿ ೧೫೦ರಷ್ಟು ನಾಟಕ, ಬರೆದಿದ್ದಾರೆ ನಿರ್ಮಾಣ ಮಾಡಿದ್ದಾರೆ ಆಕಾಶವಾಣಿಯಲ್ಲಿ ಪ್ರಸಾರ ಆಗಿದೆ. ೨೦೦೯ರಿಂದ ಈ ವರೆಗೆ ಇವರ ನಾಟಕಗಳು ಆಕಾಶವಾಣಿ ರಾಜ್ಯಮಟ್ಟದ ಬಾನುಲಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ[೨] . ಆವರ ೨೦೧೩ರ 'ಪದ ಪಾಡ್ದನ ಪಣ್ಪುನ' ಎಂದು ಹೇಳುವ ತುಳು ಸಾಕ್ಷ್ಯ ರೂಪಕ ರಾಷ್ಟ್ರಮಟ್ಟದ ಪ್ರಶಸ್ತಿ ಪಡದಿದೆ[೩].
ಹುಟ್ಟು ಮತ್ತು ಬಾಲ್ಯ
[ಬದಲಾಯಿಸಿ]ಉಡುಪಿ ತಾಲೂಕಿನ ಮೂಡುಬೆಳ್ಳೆಯ ಕಪ್ಪಂದ ಕರಿಯಡ್ ಪುಟ್ಟುದಿನಾರ್, ಮೂಡುಬೆಳ್ಳೆಯ ಸಂತ ಲಾರೆನ್ಸ್ ಚರ್ಚ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ.
ವಿದ್ಯಾಭ್ಯಾಸ
[ಬದಲಾಯಿಸಿ]- ಎಂ.ಜಿ.ಎಂ ಕಾಲೇಜಿನ ಪಿ.ಯು.ಸಿ, ಪೂರ್ಣಪ್ರಜ್ಝಾ ಕಾಲೇಜುವಿನಲ್ಲಿ.
- ಕನ್ನಡ ಎಂ.ಎ. ಮೈಸೂರು ವಿಶ್ವವಿದ್ಯಾನಿಲಯ
- ಸಮಾಜಶಾಸ್ತ್ರದಲ್ಲಿ ಎಂ.ಎ.
- ಕೊಂಕಣಿ ಭಾಷೆಯ ಸಾಹಿತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮೊ
- ಪತ್ರಿಕೋದ್ಯಮ ಡಿಪ್ಲೊಮೊ
- ಅಕೌಂಟ್ಸ್ ಡಿಪ್ಲೊಮೊ
- ಬಿಸ್‍ನೆಸ್ ಕರೆಸ್ಪಾಂಡೆನ್ಸ್ ಡಿಪ್ಲೊಮೊ
- ನಾಟಕ ಮತ್ತು ಭಾರತ ಸರಕಾರದ ಯುವಜನ ಮುಂದಾಳತ್ವ ತರಬೇತಿ
- ಆಕಾಶವಾಣಿಯ `ಬಿ-ಹೈ' ಶ್ರೇಣಿದ ನಾಟಕ ಕಲಾವಿದ
- `ಬಿ' ಶ್ರೇಣಿದ ಲಘುಸಂಗೀತ ಗಾಯಕ
ಉದ್ಯೋಗ
[ಬದಲಾಯಿಸಿ]- ಅರೆನ ೧೫ನೇ ವರ್ಷ ಪ್ರಾಯದಲ್ಲಿ ಗಳಿಕೆ ಮತ್ತು ಶಿಕ್ಷಣ.
- ಕರ್ನಾಟಕದ ಬೇರೆ ಬೇರೆ ದಿಕ್ಕಿನಿಂದ ಮತ್ತು ಬೊಂಬಾಯಿಯಲ್ಲಿ ಖಾಸಗಿ ಉದ್ಯೋಗ.
- ೧೯೭೬-೧೯೮೫ರವರೆಗೆ ಕರ್ನಾಟಕ ಸರಕಾರದ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ
- ೧೯೮೫ರಿಂದ ಮಂಗಳೂರು ಆಕಾಶವಾಣಿಯ ಹಿರಿಯ ಶ್ರೇಣಿ ಕಾರ್ಯಕ್ರಮ ಪ್ರಸಾರಕ, ೨೦೧೩ರಲ್ಲಿ ಹಿರಿಯ ಶ್ರೇಣಿಯಲ್ಲಿ ನಿವೃತ್ತಿ
- `ಮಂಗಳೂರು ದರ್ಶನ' ಸಂಪುಟದ ಉಪಸಂಪಾದಕ
- ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಯಣ ಗುರು ಅಧ್ಯಯನ ಕೇಂದ್ರದ ನಿರ್ದೇಶಕರುರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ
ಪುಸ್ತಕಗಳು
[ಬದಲಾಯಿಸಿ]- ಚೆರಾನ್ ರಹಸ್ಯ (ಪತ್ತೇದಾರಿ ಕಾದಂಬರಿ) ೧೯೭೨
- ನಮನ (ಕವನ ಸಂಕಲನ) ೧೯೭೮
- ಓದುತ್ತೀರಾ ನನ್ನ ಕಥೆ (ಕಥಾ ಸಂಕಲನ) ೧೯೮೪
- ಮೆಟ್ಟಿಲುಗಳು (ಕಥಾ ಸಂಕಲನ) ೧೯೯೦
- ಗೂಢ ಮತ್ತು ಇತರ ಕಥೆಗಳು (ಕಥಾ ಸಂಕಲನ) ೧೯೯೭
- ಸುಖಧ್ವನಿ (ಕಥಾ ಸಂಕಲನ) ೨೦೦೭
- ಉದಿಪು (ತುಳು ಕಥಾ ಸಂಕಲನ) (ಎಂ.ಎ.ಯಲ್ಲಿ ಪಠ್ಯವಾಗಿತ್ತು ) ೧೯೮೭
- ಒಸಯೊ (ತುಳು ಕಥಾ ಸಂಕಲನ) (ಅಕಾಡೆಮಿಯ ಬಹುಮಾನ ಸಿಕ್ಕಿದೆ) (ಪಠ್ಯವಾಗಿದೆ) ೧೯೯೪/೨೦೧೪
- ನೇತಾಜಿ ಸುಭಾಷ್ ಚಂದ್ರ ಬೋಸ್ (ವ್ಯಕ್ತಿಚಿತ್ರ) ೧೯೯೦
- ಜಾನಪದ ಇನೆರೂಪಕೊಲು (ತುಳು ಜಾನಪದ) ೧೯೯೧
- ನಮ ಎಡ್ಡನಾ ಊರ್ಯೆಡ್ಡೆ (ಏಕಾಂಕ ನಾಟಕಗಳು) ೧೯೯೧
- ಮೂಲ್ಕಿ ಸೀಮೆಯ ಅವಳಿ ವೀರರು ಕಾಂತಬಾರೆ ಬೂದಬಾರೆ(ಸಂಶೋಧನೆ) ೧೯೯೮, ಪರಿಷ್ಕೃತ ಅಧ್ಯಯನ ೨೦೧೧
- ಪೂವರಿ (ತುಳು ಅಧ್ಯಯನ ಲೇಖನಗಳು)(ಅಕಾಡೆಮಿಯ ಬಹುಮಾನ ಸಿಕ್ಕಿದೆ) ೧೯೯೯
- ನಾಡುನುಡಿಯಿದೊಂದು ಬಗೆ (ಸಂಸ್ಕೃತಿ ಅಧ್ಯಯನ)(ಭಾರತೀಯ ಭಾಷಾ ಸಂಸ್ಥೆಯ ಪುರಸ್ಕಾರ ಪಡೆದಿದೆ) ೨೦೦೪ ಮತ್ತು ೨೦೦೭ ಮುದ್ರಣ
- ಸತ್ಯದ ಸುರಿಯ ಸಾಯದ ಪಗರಿ (ತುಳು ಕಾದಂಬರಿ) (ಪಣಿಯಾಡಿ ಪ್ರಶಸ್ತಿ ಪಡೆದಿದೆ) ೨೦೦೪
- ಒಸಯೊ (ತುಳು ಕತೆಕ್ಲು)ಪರಿಷ್ಕೃತ ೨೦೧೪
- ಬಜಿಲ್ ಬಣ್ಣಂಗಾಯಿ (ತುಳು ಭಾಷೆ,ಸಾಹಿತ್ಯ,ಸಂಸ್ಕೃತಿ ಸಂಬಂಧಪಟ್ಟ ಲೇಖನ)೨೦೧೪
- ಪದ್ದೆಯಿ (ತುಳು ಕಾದಂಬರಿ-ಸಂಜೆವಾಣಿ ಧಾರಾವಾಹಿ) ೨೦೦೬
- ತುಳು ರಂಗಭೂಮಿ (ಅಧ್ಯಯನ) ೨೦೦೫
- ಉಳ್ಳಾಲ ಶ್ರೀನಿವಾಸ ಮಲ್ಯೆರ್ (ಅನುವಾದ, ಕೊಂಕಣಿ ಮೂಲ:ಬಸ್ತಿ ವಾಮನ ಶೆಣೈ) ೨೦೦೭
- ಕನ್ನೆಗ (ತುಳು ಕವನ ಸಂಕಲನ) ೨೦೦೯
- ಮಾನವತಾವಾದಿ ಜಗದ್ಗುರು ಶ್ರೀ ನಾರಾಯಣ (ಬದುಕು-ಸಂದೇಶ) ೨೦೧೨
- ಮೂಡುಬೆಳ್ಳೆ ಕತೆಗಳು (ಸಮಗ್ರ ಕಥಾಸಂಕಲನ) ೨೦೧೩
- ಬಜಿಲ ಬನ್ನಂಗಾಯಿ (ತುಳು ಅಧ್ಯಯನ ಲೇಖನ) ೨೦೧೪
- ಕಾಂತಬಾರೆ ಬೂದಬಾರೆ ಜನ್ಮಕ್ಷೇತ್ರ ಕೊಲ್ಲೂರು-ಕ್ಷೇತ್ರ ಪರಿಚಯ ೨೦೧೫
- ತುಳು ಜನ ಜಾನಪದ (ತುಳು ಜಾನಪದ ಅಧ್ಯಯನದ ಕನ್ನಡ ಕೃತಿ) ೨೦೧೫
ಪ್ರಶಸ್ತಿ
[ಬದಲಾಯಿಸಿ]- ಮೊಗವೀರ (ಮುಂಬಯಿ)ಪತ್ರಿಕೆಯ ಅತ್ಯುತ್ತಮ ಲೇಖಕ ಪ್ರಶಸ್ತಿ ೧೯೮೦.[೪]
- ಭಾರತೀಯ ಜೇಸೀಸ್ ಪ್ರಶಸ್ತಿ (ಲಲಿತಕಲೆ ವಿಭಾಗ) ೧೯೮೬
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬಹುಮಾನ ೧೯೯೬, ೨೦೦೧, ೨೦೦೯
- ಗೋರೂರು ಸಾಹಿತ್ಯ ಪುರಸ್ಕಾರ (ಕಾಂತಾಬಾರೆ ಬೂದಬಾರೆ ಪುಸ್ತಕ್ಕೆ) ೧೯೯೮
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-2016(ಸಾಹಿತ್ಯ ಸಂಶೋಧನಾ ಕ್ಷೇತ್ರದ ಸಾಧನೆಗಾಗಿ)
ಉಲ್ಲೇಖ
[ಬದಲಾಯಿಸಿ]- ↑ http://www.bellevision.com/belle/index.php?action=personality_inner&type=37
- ↑ http://airddfamily.blogspot.in/2013/04/muddu-moodubelle-sr-announcer-retired.html
- ↑ http://www.daijiworld.com/news/news_disp.asp?n_id=196914
- ↑ "ಆರ್ಕೈವ್ ನಕಲು". Archived from the original on 2020-08-05. Retrieved 2016-11-19.