ವಿಷಯಕ್ಕೆ ಹೋಗು

ಮಾಸ್ ಲೀಡರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಸ್ ಲೀಡರ್ ೨೦೧೭ ರ ಕನ್ನಡ ಭಾಷೆಯ ಆಕ್ಷನ್-ಥ್ರಿಲ್ಲರ್ ಚಲನಚಿತ್ರವಾಗಿದ್ದು, ನರಸಿಂಹ ಬರೆದು ನಿರ್ದೇಶಿಸಿದ್ದಾರೆ. ಇದನ್ನು ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. [೧] ಇದರಲ್ಲಿ ಶಿವ ರಾಜ್‌ಕುಮಾರ್ , ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಣಿತಾ ಸುಭಾಷ್ ಪ್ರಮುಖ ಪಾತ್ರದಲ್ಲಿದ್ದರೆ ಮತ್ತು ವಿಜಯ್ ರಾಘವೇಂದ್ರ, ಯೋಗೇಶ್, ಗುರುರಾಜ್ ಜಗ್ಗೇಶ್, ಶರ್ಮಿಳಾ ಮಾಂಡ್ರೆ, ವಂಶಿ ಕೃಷ್ಣ, ಆಶಿಕಾ ರಂಗನಾಥ್ ಮತ್ತು ಪರಿಣಿತಾ ಕಿಟ್ಟಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. [೨] ಚಿತ್ರದ ಹಿನ್ನೆಲೆಸಂಗೀತವನ್ನು ವೀರ್ ಸಮರ್ಥ್ ಅವರು ಸಂಯೋಜಿಸಿದ್ದಾರೆ, ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣವಿದೆ.

ಕಥಾವಸ್ತು

[ಬದಲಾಯಿಸಿ]

ಈ ಚಿತ್ರವು ಕ್ಯಾಪ್ಟನ್ ಶಿವರಾಜ್ ಜೀವನದ ಸುತ್ತ ಸುತ್ತುತ್ತದೆ. ವೋಟ್-ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿಗಳ ಸಹಾಯದಿಂದ ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಪ್ರವರ್ಧಮಾನಕ್ಕೆ ಬರುತ್ತಾರೆ ಎಂಬ ವಿಷಯದೊಂದಿಗೆ ಚಿತ್ರವು ಆರಂಭವಾಗುತ್ತದೆ. ಶಿವರಾಜ್, ತನ್ನ ಇಬ್ಬರು ಸಹಚರರಾದ ವಿಜಿ ಮತ್ತು ಗುರುಗಳೊಂದಿಗೆ, ಬಾಂಗ್ಲಾದೇಶಿ ನುಸುಳುಕೋರರ ಮೇಲೆ ದಾಳಿ ಮಾಡಲಾಗುವುದು ಎಂದು ವ್ಯಾಪಕವಾದ ವದಂತಿಗಳನ್ನು ಹರಡುವ ಮೂಲಕ ಅವರನ್ನು ಓಡಿಸುತ್ತಾನೆ. ಅವರು ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿಯೊಂದಿಗೆ ವೈಮನಸ್ಯ ಹೊಂದುತ್ತಾನೆ. ಡ್ರಗ್ ಮಾಫಿಯಾ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮಂಗಳೂರಿನ ಭೂಗತ ಪಾತಕಿಯೊಬ್ಬನಿಗೆ ಶಿವರಾಜ್‌ನನ್ನು ಕೊಲ್ಲುವ ಕೆಲಸ ಕೊಡಲಾಗಿದೆ, ಆದರೆ ಅವನು ನಂತರ ನಿಷ್ಠಾವಂತನಾಗಿ ಬದಲಾಗುತ್ತಾನೆ.

ಚಿತ್ರದ ದ್ವಿತೀಯಾರ್ಧದಲ್ಲಿ, ಫ್ಲ್ಯಾಷ್‌ಬ್ಯಾಕ್ ಇದೆ. ಅದರಲ್ಲಿ ಶಿವರಾಜ್ ಕಾಶ್ಮೀರದಲ್ಲಿ ದೇಶಭಕ್ತ ಭಾರತೀಯ ಸೇನೆಯ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದು ಪ್ರೀತಿಯ ಹೆಂಡತಿ, ಮಗು, ತನ್ನ ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಇದ್ದಾನೆ. ಅವನ ಸಹೋದರಿ ತಿಳಿಯದೆ ಒಬ್ಬ ಪಾಕಿಸ್ತಾನಿಯನ್ನು ಪ್ರೀತಿಸುತ್ತಾಳೆ. ಭಯೋತ್ಪಾದಕರಿಂದಾಗಿ ಕುಟುಂಬವು ನಾಸವಾಗುತ್ತದೆ, ಅವನ ಮಗು ಅಂಗವಿಕಲವಾಗುತ್ತದೆ. ಭಯೋತ್ಪಾದಕರ ನಾಯಕನನ್ನು ಮುಗಿಸುವ ಮೂಲಕ ಶಿವರಾಜ್ ತನ್ನ ಹೆತ್ತವರು, ಹೆಂಡತಿ ಮತ್ತು ಸಹೋದರಿಯ ಸಾವಿಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಅಲ್ಲಿದೆ.

ನಾಯಕ ಎಂದರೆ ವೋಟು ಪಡೆಯಲು ನೋಟು ಕೊಡುವವನಲ್ಲ, ಗಡಿಯಲ್ಲಿ ನಿಂತು ಇಡೀ ರಾಷ್ಟ್ರಕ್ಕಾಗಿ ಹೋರಾಡುವವನೇ ನಾಯಕ ಎನ್ನುವುದನ್ನು ಸಿನಿಮಾ ಹೇಳುತ್ತದೆ! [೩]

ಪಾತ್ರವರ್ಗ

[ಬದಲಾಯಿಸಿ]

ಉತ್ಪಾದನೆ

[ಬದಲಾಯಿಸಿ]

ಈ ಚಲನಚಿತ್ರವನ್ನು ಅಧಿಕೃತವಾಗಿ ೧೯ ಏಪ್ರಿಲ್ ೨೦೧೬ ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. [೪] ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ಸ್ಥಳಗಳನ್ನು ಹೊರತುಪಡಿಸಿ, ಚಿತ್ರೀಕರಣವು ಭಾರೀ ಹಿಮಪಾತದ ನಡುವೆ ಕಾಶ್ಮೀರದಲ್ಲಿ ನಡೆಯಿತು. [೫] ಜನವರಿ ೨೦೧೭ ರಲ್ಲಿ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ್ದರಿಂದ ಸಿಬ್ಬಂದಿಯು ಮನಾಲಿಗೆ ತೆರಳಿ ಚಿತ್ರೀಕರಣವನ್ನು ಮುಂದುವರೆಸಿತು [೬]

ಹಿನ್ನೆಲೆಸಂಗೀತ

[ಬದಲಾಯಿಸಿ]

ವೀರ್ ಸಮರ್ಥ್ ಚಿತ್ರದ ಸಂಗೀತ ಸಂಯೋಜನೆಗೆ ಸಹಿ ಹಾಕಿದರು, ಇದು ಅವರ ೨೫ ನೇ ಚಿತ್ರವಾಗಿದೆ. [೭] ೯ ಜುಲೈ ೨೦೧೭ ರಂದು ಹಾಡುಗಳನ್ನು ಬಿಡುಗಡೆ ಮಾಡಲಾಯಿತು, ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಅಧಿಕೃತವಾಗಿ ಆಡಿಯೊವನ್ನು ಬಿಡುಗಡೆ ಮಾಡಿದರು. [೮]


ಎಲ್ಲ ಹಾಡುಗಳು ವಿ. ನಾಗೇಂದ್ರ ಪ್ರಸಾದ್ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಮುಂದೆ ನಿಂತರು"ಚೇತನ್ ಗಂಧರ್ವ೪:೪೬
2."ಗೆಳೆಯ ಎನ್ನಲೆ"ಚೇತನ್ ಗಂಧರ್ವ, ಶ್ರೇಯಾ ಘೋಷಾಲ್೪:೩೭
3."Aabida Aabida"ವೀರ್ ಸಮರ್ಥ್, ಸುಪ್ರಿಯಾ ಲೋಹಿತ್೪:೦೪
4."ದೀಪವೇ ನಿನ್ನ"ಜುಬಿನ್ ನೌಟಿಯಾಲ್, ಐಶ್ವರ್ಯ ರಂಗರಾಜನ್೨:೫೩
5."ಈ ಮಣ್ಣಲಿ"ಪ್ರೇಮ್, ಚಿಂತನ್ ವಿಕಾಸ್, ಗೋವಿಂದ್ ಕರ್ನೂಲ್೪:೫೮
ಒಟ್ಟು ಸಮಯ:೨೧:೧೮

ಉಲ್ಲೇಖಗಳು

[ಬದಲಾಯಿಸಿ]
  1. "Sahana Murthy's second film after Rose is Mass Leader". pinterest.com.
  2. "Shiva Rajkumar, Yogesh, Jaggesh, Pranitha at Leader movie launch". International Business Times. 18 August 2016.
  3. "Mass Leader Movie Review: Hunt The Hunters With Patriotism!". 11 August 2017.
  4. "Shivarajkumar's Leader Launched Officially". Filmibeat.com.
  5. "Determined 'Leader' shoots amid snowfall". The New Indian Express.
  6. "Leader packs for Manali". The New Indian Express.
  7. Mass Leader complete, Shiv in intro song.
  8. "Telugu Superstar Nandamuri Balakrishna Launches The Audio of Shivarajkumar's Mass Leader". Filmibeat.com. Retrieved 11 July 2017.

ಬಾಹ್ಯ ಕೊಂಡಿಗಳು

[ಬದಲಾಯಿಸಿ]