ಮನಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಾಲಿ
ಗಿರಿಧಾಮ
ದೇಶಭಾರತ
ರಾಜ್ಯಹಿಮಾಚಲ ಪ್ರದೇಶ
ಜಿಲ್ಲೆಕುಲು
Elevation
೨,೦೫೦ m (೬,೭೩೦ ft)
ಜನಸಂಖ್ಯೆ
 (2011)
 • ಒಟ್ಟು೮,೦೯೬[೧]
Languages
 • Officialಹಿಂದಿ
ಸಮಯ ವಲಯಯುಟಿಸಿ+5:30 (IST)
PIN
175131
Telephone code+911902
ವಾಹನ ನೋಂದಣಿHP-58

ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಇದು ಒಂದು ಸುಂದರ ಗಿರಿಧಾಮ.೧೯೯೦ ಮೀ ಎತ್ತರದಲ್ಲಿರುವ 'ಮನಾಲಿ'ಯು, ಕುಲು ಜಿಲ್ಲೆಯ ಗಡಿಯಲ್ಲಿರುವ ಇನ್ನೊಂದು ಅತ್ಯಂತ ಸುಂದರವಾದ ಪ್ರದೇಶವಿದೆ. ಕುಲುವಿನಿಂದ ಕೇವಲ ೪೫೦ ಕಿ.ಮೀ. ದೂರದಲ್ಲಿದೆ. ಸದಾ ಮಂಜಿನಿಂದ ಅವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆಗಳಿಗೆ 'ಬೆಳ್ಳಿಯ ಕಣಿವೆ'ಗಳು ಎಂಬ ಹೆಸರು ಬಂದಿದೆ. ಬೇಸಗೆಯಲ್ಲೂ ಹಿತವಾದ ಹಾಗೂ ಆಹ್ಲಾದಕರವೆನಿಸುವ ಈ ಪ್ರದೇಶದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೩೦೦೦೦. ಇದು ಭಾರತದ ಒಂದು ಸಾಂಸ್ಕೃತಿಕ(ಸಪ್ತ ಋಷಿಗಳು ನೆಲೆಸಿದ) ನೆಲೆವೀಡು ಎನಿಸಿದೆ. 'ಮನು ಸ್ಮೃತಿ'ಯನ್ನು ರಚಿಸಿದ 'ಮನು ನಿಲಯ'ವೇ ಕಾಲಕ್ರಮೇಣ 'ಮನಾಲಿ' ಆಯಿತೆಂಬ ಪ್ರತೀತಿಯಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೊಂದಿದೆ. ಮನಾಲಿ ಕಣಿವೆಯನ್ನು 'ದೇವರ ಕಣಿವೆ' ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮನಾಲಿ&oldid=1181055" ಇಂದ ಪಡೆಯಲ್ಪಟ್ಟಿದೆ