ಕುಲ್ಲು
ಕುಲ್ಲು
कुल्लू | |
---|---|
ಪಟ್ಟಣ | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Himachal Pradesh" does not exist. | |
Coordinates: 31°35′N 77°06′E / 31.58°N 77.10°E | |
ದೇಶ | ಭಾರತ |
ರಾಜ್ಯ | ಹಿಮಾಚಲ ಪ್ರದೇಶ |
ಜಿಲ್ಲೆ | ಕುಲ್ಲು |
Government | |
• Type | ಪ್ರಜಾಪ್ರಭುತ್ವ |
• Zonal Headquarters | ಕುಲ್ಲು |
Elevation | ೧,೨೭೯ m (೪,೧೯೬ ft) |
Population (೨೦೧೧) | |
• Total | ೧೮,೫೩೬ (೧೦th) |
ಭಾಷೆಗಳು | |
• ಅಧಿಕೃತ | ಹಿಂದಿ |
Time zone | UTC+5:30 (IST) |
ಅಂಚೆ ಸೂಚ್ಯಂಕ ಸಂಖ್ಯೆ | ೧೭೫೧೦೧ |
ದೂರವಾಣಿ ಕೋಡ್ | ೦೧೯೦೨ |
Vehicle registration | ಹೆಚ್ ಪಿ ೩೪ ಹೆಚ್ ಪಿ ೬೬ |
Sex ratio | 1.17 (1000/852) ♂/♀ |
Website | www.hpkullu.gov.in |
ಕುಲ್ಲು ಅಥವ ಕುಲು ಭಾರತದ ರಾಜ್ಯವಾದ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪ್ರಮುಖ ಪಟ್ಟಣ. ಈ ಪಟ್ಟಣವು ಬುಂಟರ್ ಅಂತಾರಾಷ್ಟ್ರೀಯ ನಿಲ್ದಾಣದಿಂದ ೧೦ ಕಿ.ಮಿ ಉತ್ತರಕ್ಕಿರುವ ಕುಲ್ಲು ಕಣಿವೆಯಲ್ಲಿರುವ ಬೀಸ್ ನದಿಯ ದಂಡೆಯಲ್ಲೆದೆ. ಕುಲ್ಲು ಪಟ್ಟಣವು ಮನಾಲಿ ಮತ್ತು ಲಾರ್ಗಿಯ ನಡುವಿನಲ್ಲಿ ಬೀಸ್ ನದಿಯಿಂದ ನಿರ್ಮಿತವಾದ ವಿಶಾಲವಾದ ತೆರೆದ ಕಣಿವೆ. ಕುಲುವಿನ ಪುರಾತನ ಹೆಸರು ಕುಲಾಂತಿ ಪೀಠ. ಇದು ಚಂಡಿಗಡದಿಂದ ೨೩೩ ಕಿ.ಮೀ. ದೂರದಲ್ಲಿದೆ. ಈ ಪ್ರದೇಶದ ಸರಾಸರಿ ಎತ್ತರ ೧೨೨೦ ಮೀ. ಈ ಕಣಿವೆಯು ಅದರ ಸೌಂದರ್ಯ, ಧಾರ್ಮಿಕ ಸ್ಥಳಗಳು ಹಾಗು ಪೈನ್, ದೇವದಾರು ಮತ್ತು ವಿಸ್ತಾರವಾದ ಸೇಬು ತೋಟಗಳಿಂದ ಆವೃತ್ತವಾದ ಬೆಟ್ಟಗಳಿಗೆ ಪ್ರಸಿದ್ಧಿ ಹೊಂದಿದೆ. ಕುಲ್ಲು ಕಣಿವೆಯು ಪಿರ್ ಪನ್ಜಲ್, ಕೆಳ ಹಿಮಾಲಯ ಮತ್ತು ಶ್ರೇಷ್ಠ ಹಿಮಾಲಯನ್ ಶ್ರೇಣಿಗಳ ನಡುವಿದೆ.
ಆಡಳಿತ
[ಬದಲಾಯಿಸಿ]ಕುಲ್ಲು ಪಟ್ಟಣವು ಕುಲ್ಲು ಜಿಲ್ಲೆಯ ಆಡಳಿತ ಪ್ರಧಾನ ಕಚೇರಿ. ಈ ಪಟ್ಟಣವು ಉಪ ಕಮಿಷನರ್ ಕಛೇರಿ, ಪೊಲೀಸ್ ಅಧೀಕ್ಷಕರ ಕಛೇರಿ ಮತ್ತು ಜಿಲ್ಲೆಯ ನ್ಯಾಯಲಯಗಳನ್ನು ಹೊಂದಿದೆ. ಇದು ಅತಿದೊಡ್ಡ ಹಾಗು ಹೆಚ್ಚು ವೈವಿಧ್ಯಮಯವಾದ ಲೋಕ ಸಭೆಯ ಕ್ಷೇತ್ರ ಹಾಗು ಪಾರ್ಲಿಮೆಂಟ್ ನ ಕೆಳಮನೆ.
ಹವಾಮಾನ
[ಬದಲಾಯಿಸಿ]ಚಳಿಗಾಲದಲ್ಲಿ ಡಿಸೆಂಬರ್ ಹಾಗು ಜನವರಿಯಲ್ಲಿ ಅತಿ ಕಡಿಮೆ ತಾಪಮಾನವನ್ನು ಮತ್ತು ಹಿಮಪಾತವನ್ನು ಕಾಣಬಹುದು. ಚಳಿಗಾಲದಲ್ಲಿ ಸಂಜೆಯ ವೇಳೆ ಹಾಗು ಮುಂಜಾನೆ ಬಹಳ ಚಳಿಯಿರುತ್ತದೆ. ಬೇಸಿಗೆಯಲ್ಲಿ ವಾರ್ಷಿಕ ಗರಿಷ್ಟ ತಾಪಮಾನವು ೨೪ ರಿಂದ ೩೪ ಸೆಲ್ಶಿಯಸ್ ಇರುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳು ಮಳಿಗಾಲವಾಗಿರುತ್ತದೆ.
ನೆರೆ ಹೊರೆ
[ಬದಲಾಯಿಸಿ]ಕುಲ್ಲುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಿನೀರಿನ ಬುಗ್ಗೆಗಳಿಗೆ ಪ್ರಸಿದ್ದಿಯಾದ ಮಣಿಕರನ್,ಪ್ರವಾಸಿಗರ ನೆಚ್ಚಿನ ತಾಣವಾದ ಮನಾಲಿ ಸೇರಿದೆ. ಧಾರ್ಮಿಕ ಸ್ಥಳಗಳಾದ ಮಲಾನ, ಲುನ್ಗ್ ಕಣಿವೆಯ ಕೆಶ್-ಧಾರ್, ಬಿಜ್ಲಿ ಮಹಾದೇವ್, ಕಸೊಲ್ ಮುಂತಾದವು ಕುಲ್ಲುವಿನ ನೆರೆಹೊರೆಯ ಪ್ರದೇಶಗಳು. ಕುಲ್ಲುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನಾಲಿ ಅತ್ಯಂತ ಪ್ರಸಿದ್ದವಾದ ಹಾಗು ಆ ರಾಜ್ಯದ ಆಕರ್ಷಣೆಗಳಲ್ಲಿ ಒಂದು. ಮನಾಲಿಯು ಹಿಡಿಂಬ ದೇವಿಯ ದೇವಸ್ಥಾನವನ್ನು ಹೊಂದಿದೆ.
ಈ ಪಟ್ಟಣದ ಆರ್ಥಿಕತೆಯು ಹೆಚ್ಚಾಗಿ ಪ್ರವಾಸೋದ್ಯಮ, ತೋಟಗಾರಿಕೆ (ಸೇಬು,[೧] ಒಣಗಿದ ದ್ರಾಕ್ಷಿ, ಪೇರಳೆ, ಮತ್ತು ಬಾದಾಮಿ) ಮತ್ತು ಕರಕುಶಲ ವಸ್ತುಗಳ[೨] ಮೇಲೆ ಅವಲಂಬಿತವಾಗಿದೆ. ಈ ಪ್ರದೇಶದ ಬಹುತೇಕ ಯುವ ಜನಾಂಗವು ಜೀವನೋಪಾಯವಾಗಿ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದೆ.
-
ಶಿವ ಶ್ರೈನ್, ಕುಲ್ಲು
-
ಕುಲ್ಲು ಕಣಿವೆಯಿಂದ ಕಾಣುವ ಹಿಮಾಲಯ
-
ರೊರಿಚ್ ಕುಟುಂಬ, ಕುಲ್ಲು ಕಣಿವೆ
-
ರಾಜ ರುಪಿ ಕುಲ್ಲು ಅರಮನೆ
-
ಕೆಶ್-ಧಾರ್
-
ಕೆಶ್-ಧಾರ್ ಹುಲ್ಲುಗಾವಲುಗಳು
-
ಕುಲ್ಲು, ಲಹಶ್ನಿಯಿಂದ ಸುಂದರವಾದ ಪ್ರಕೃತಿ ನೋಟ
ಉಲ್ಲೇಖಗಳು
[ಬದಲಾಯಿಸಿ]- ↑ "Agriculture - Horticulture". kullu.net.
- ↑ "Kinnaur: Land of Gods, Kullu Shawls & Untold Adventures". AlienAdv Blog (in ಅಮೆರಿಕನ್ ಇಂಗ್ಲಿಷ್). Archived from the original on 2015-11-22. Retrieved 2017-05-24.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Kullu Manali Tourism Archived 2017-04-19 ವೇಬ್ಯಾಕ್ ಮೆಷಿನ್ ನಲ್ಲಿ.
- Kullu Himachal Pradesh Tourism Guide Archived 2014-07-28 ವೇಬ್ಯಾಕ್ ಮೆಷಿನ್ ನಲ್ಲಿ.
- News and videos of Kullu Archived 2008-06-29 ವೇಬ್ಯಾಕ್ ಮೆಷಿನ್ ನಲ್ಲಿ.
- Website gives details information about kullu valley
- Himachal Tourism website Archived 2011-03-20 ವೇಬ್ಯಾಕ್ ಮೆಷಿನ್ ನಲ್ಲಿ.
- Malana, IGNCA archive Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- Kullu Archived 2013-05-17 ವೇಬ್ಯಾಕ್ ಮೆಷಿನ್ ನಲ್ಲಿ. * International Roerich Memorial Trust
- Pages using gadget WikiMiniAtlas
- Pages with script errors
- Pages with non-numeric formatnum arguments
- Pages using the JsonConfig extension
- CS1 ಅಮೆರಿಕನ್ ಇಂಗ್ಲಿಷ್-language sources (en-us)
- Short description is different from Wikidata
- Pages using infobox settlement with bad settlement type
- Coordinates on Wikidata
- Commons category link from Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಪ್ರವಾಸಿ ತಾಣಗಳು
- ಭಾರತದ ಭೂಗೋಳ