ಮಾಂಜಿ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಂಜಿ ಮೀನು - ಸ್ಟ್ರೊಮಾಟಿಡೆ ಕುಟುಂಬಕ್ಕೆ ಸೇರಿದ ಮೀನುಗಳು. ಸಾಮಾನ್ಯವಾಗಿ ಪಾಂಫ್ರೆಟ್ಸ್ ಎಂದು ಕರೆಯಲಾಗುತ್ತದೆ. ಪಾಂಪಸ್ ಚೈನೆನ್ಸಿಸ್ (ಚೈನೀಸ್ ಪಾಂಫ್ರೆಟ್), ಪಾಂಪಸ್ ಅರ್ಜೆಂಟಿಯಸ್ (ಗ್ರೇ ಅಥವಾ ಸಿಲ್ವರ್ ಪಾಂಫ್ರೆಟ್) ಮತ್ತು ಪ್ಯಾರಾಸ್ಟ್ರೊಮಾಟಿಯಸ್ ನೈಜರ್ (ಬ್ಲ್ಯಾಕ್ ಪಾಂಫ್ರೆಟ್) ಎನ್ನುವ ಮೂರು ಪ್ರಭೇದಗಳು ಕಾಣಸಿಗುತ್ತವೆ.

ಬೇರೆ ಬೇರೆ ಹೆಸರು[ಬದಲಾಯಿಸಿ]

ಈ ಮೀನುಗಳಿಗೆ ಕನ್ನಡದಲ್ಲಿರುವ ಹೆಸರುಗಳು ಕ್ರಮವಾಗಿ, ಮಾಂಜಿ, ಬಿಳಿ ಮಾಂಜಿ ಮತ್ತು ಕಪ್ಪು ಮಾಂಜಿ ಎಂದು. ಇವು ಉತ್ತಮ ಆಹಾರ ಮೀನುಗಳಾಗಿ ಪ್ರಸಿದ್ಧವಾಗಿವೆ. ವಿಶೇಷವಾಗಿ ಮುಂಬೈ ನಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಮೀನು. ಬಿಳಿ ಮಾಂಜಿ ಮೀನುಗಳು ಸುಮಾರು 30 ಸೆಂ,ಮೀ ಉದ್ದ 500 ಗ್ರಾಂ ತೂಕದವರೆಗೆ ಬೆಳೆಯುತ್ತವೆ. ಬಿಳಿ ಮಿಶ್ರಿತ ಕಂದು ಬಣ್ಣದ್ದಾಗಿದ್ದು ಕಿವಿರು ಮುಚ್ಚುಳದ ಮೇಲೆ ಕಪ್ಪು ಚುಕ್ಕೆ ಇರುತ್ತದೆ. ದೇಹ ಚಪ್ಪಟೆಯಾಗಿದ್ದು ತಲೆ ಮತ್ತು ಬಾಯಿ ಚಿಕ್ಕದಾಗಿರುತ್ತದೆ. ಬಾಲದ ಈಜುರೆಕ್ಕೆ ಆಳವಾಗಿ ಕವಲೊಡಿದೆದೆ.

ಕಂಡು ಬರುವುದು[ಬದಲಾಯಿಸಿ]

ಭಾರತದ ಪೂರ್ವ ಮತ್ತು ಪಶ್ವಿಮ ಕರಾವಳಿಗಳೆರಡಲ್ಲೂ ಕಂಡು ಬರುತ್ತವೆ. ಗಂಗೊಳ್ಳಿ (ದಕ್ಷಿಣ ಕನ್ನಡ), ಬಡಗರ, ಪುಡಿಯಕಡಪುರ್ರಮ್, ಮತ್ತು ಪರವಣ್ಣ (ಮಲಬಾರ್ ತೀರ), ರಜಿಯಾಪೇಟೆ, ಕುಮಾರವೇಣಿಪೇಟೆ (ಆಂದ್ರ ಪ್ರದೇಶ), ನೆಲತ್ತೂರುಪಾಳ್ಯಮ್, ಪುಲಿಯಾಂಜಿರಿಕುಷ್ಟಂ (ತಮಿಳುನಾಡು), ಈ ಮೀನಿನ ಪ್ರಮುಖ ಮೀನುಗಾರಿಕೆ ತಾಣಗಳು. ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯದ ಕರಾವಳಿಗಳಲ್ಲೂ ಇತ್ತೀಚೆಗೆ ಗಣನೀಯ ಪ್ರಮಾಣದಲ್ಲಿ ಹಿಡಿಯಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]