ಮಟಪಕ್ಷಿ
ಮಟಪಕ್ಷಿ | |
---|---|
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಡಿ.. ವಾಗಬಂಡಾ
|
Binomial name | |
ಡೆಂಡ್ರೋಸಿಟ್ಟಾ ವಾಗಬಂಡಾ (Latham, 1790)
| |
Synonyms | |
ಡೆಂಡ್ರೋಸಿಟ್ಟಾ ರೂಫ |
"ಮಟಪಕ್ಷಿ” (Dendrocitta vagabunda) ಮಟಪಕ್ಷಿ, ಇದರ ಮೂಲ ವಾಸಸ್ಥಳ ಭಾರತದ ಉಪಖಂಡ ಮತ್ತು ಈಶಾನ್ಯ ಏಷ್ಯಾ ದ ಪ್ರದೇಶ. ಮಟಪಕ್ಷಿಯು ಕೊರ್ವಿಡಿಯ (ಕಾಗೆ) ಕುಂಟುಂಬಕ್ಕೆ ಸೇರಿದ ಹಕ್ಕಿ.. ಇದು ಉದ್ದವಾದ ಬಾಲದ ಹಕ್ಕಿ, ಈ ಹಕ್ಕಿಯ ಕೂಗು ಕೇಳಲು ಇಂಪಾಗಿದ್ದು ಗಮನ ಸೆಳೆಯುತ್ತದೆ. ಈ ಹಕ್ಕಿಯು ಸಾಮಾನ್ಯವಾಗಿ ಕುರುಚಲು ಕಾಡು, ಪರ್ಣಪಾತಿ ಕಾಡು, ಕೃಷಿಭೂಮಿ, ನಗರದ ಉದ್ಯಾನವನಗಳ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಕಾಗೆಗಳ ಕುಟುಂಬ(ಕಾರ್ವಿಡೇ)ಗಳಂತೆಯೇ ಹೊಂದಿಕೊಂಡಿರುವ ಹಕ್ಕಿ , ಈ ಹಕ್ಕಿ ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನುತ್ತದೆ. ಕೆಲವೊಮ್ಮೆ ಕೀಟಗಳು, ಕಪ್ಪೆ, ಹಲ್ಲಿ ಮುಂತಾದ ಮಾಂಸಹಾರವನ್ನು ಭಕ್ಷಿಸುವುದುಂಟು.
ವಿವರ
[ಬದಲಾಯಿಸಿ]ಕಾಗೆ ಗಾತ್ರದ, ಹಳದಿ ಮಿಶ್ರಿತ ಕಂದು ಹಕ್ಕಿ , ಕಪ್ಪು ತಲೆ, ನಸು ನೀಲಿ ಮಿಶ್ರಿತ ಬೂದು ಬಣ್ಣದ ಉದ್ದವಾದ ಬಾಲ ತುದಿಯಲ್ಲಿ ಕಪ್ಪು ಪಟ್ಟಿ ಇದೆ. ರೆಕ್ಕೆ ಯ ಮೇಲೆ ಬಿಳಿಯ ಅಡ್ಡ ಪಟ್ಟಿ ಇದ್ದು. ನೋಡಲು Grey Treepie ಹೋಲುತ್ತದೆ, ಬಲಿಷ್ಠವಾದ ಕೊಕ್ಕು, ಕೊಕ್ಕಿನ ತುದಿ ಕೊಕ್ಕೆಯಾಕಾರವಾಗಿರುತ್ತದೆ. ದೇಹದ ಕೆಳಭಾಗ ಮತ್ತು ಕೆಳಭಾಗದ ತುದಿ ಬೆಚ್ಚಗಿನ ಕಂದುಮಿಶ್ರಿತ ಬೂದು ಬಣ್ಣದಿಂದ ಕೂಡಿದ್ದು. ಬಿಳಿಯ ರೆಕ್ಕೆಯ ಕೆಳಗೆ ಕಪ್ಪು ಬಣ್ಣ ಪ್ರಧಾನವಾಗಿ ಕಾಣುತ್ತದೆ. ಕೊಕ್ಕು, ಕಾಲುಗಳು, ಪಾದಗಳು ಕಪ್ಪು ಬಣ್ಣದಿಂದಕೂಡಿದೆ.[೨]
ಈ ಜಾತಿಯ ಹಕ್ಕಿಗಳು ಹೇರಳವಾಗಿದ್ದು ಹಲವಾರು ವ್ಯತ್ಯಾಸಗಳು ಇರುವುದರಿಂದ ಈ ಜಾತಿಯ ಪಕ್ಷಿಗಳಲ್ಲಿ ಹಲವಾರು ಉಪಜಾತಿಗಳನ್ನು ಗುರುತಿಸಲಾಗಿದೆ. ಭಾರತ ಉಪಖಂಡದ ಈಶಾನ್ಯ ಭಾಗ ಹೈದರಾಬಾದ್ ವರಿಗೆ ಈ ಹಕ್ಕಿಗಳ ಉಪಜಾತಿಗಳು ಕಾಣಸಿಗುತ್ತವೆ. ಮರುಭೂಮಿಯ ಗಡಿಯಲ್ಲಿ ಇದನ್ನು ಒಂದು ಬಗೆ "ಪ್ಯಾಲಿಡ (Pallida) " ಎಂದು ಕರೆದರೆ, ಪೂರ್ವಘಟ್ಟಗಳಲ್ಲಿ ಇದನ್ನು "ವೆರ್ಣಯಿ (vernayi)"ಎಂತಲೂ, ಪಶ್ಚಿಮಘಟ್ಟಗಳಲ್ಲಿ ಸ್ವಲ್ಪ ಚಿಕ್ಕದಾದ ಯಾವಾಗಲೂ ಹೊಳೆಯುವ "ಪರ್ವುಳ (parvula)” ಎಂತಲೂ.[೨] ಆಫ್ಗಾನಿಸ್ತಾನ್ ಮತ್ತು ಪಾಕೀಸ್ತಾನ" ಬ್ರೊಸ್ತೊಲಿ (bristoli)” ಎಂದು ಕರೆಯಲ್ಪಡುವ ಇವು. ದಕ್ಷಿಣದ ಥೈಲ್ಯಾಂಡಿನಲ್ಲಿ ಸ್ಯಾಚುರೇಶರ್ (saturatior)ಎಂದು ಕರೆಯುದುಂಟು. ಇ ಸಿ ಸ್ಟ್ಯಾರ್ಟ್ ಬ್ಯಾಕರ್ವರದಿಯಲ್ಲಿ ಮೇಲಿನ ಚೀನ್ಡ್ ವೀನ್ ನಿಂದ ಹಿಡಿದು ಚೀನಾದ ಬೆಟ್ಟಗಳ ವರೆಗೆ ಸ್ಚ್ಲಟೇರಿ" (sclateri)ಎಂದು ಕರೆಯುತ್ತಾರೆ. ದಕ್ಷಿಣದ ಮ್ಯಾನ್ಮಾರ್ ಯಿಂದ ಥೈಲ್ಯಾಂಡ್ ನ ವಾಯುವ್ಯ ಭಾಗದವರಿಗೂ ಕಿನ್ನೇರಿ (kinneari) ಎಂದು ಗುರುತಿಸಲಾಗಿದೆ ಈ ಹಕ್ಕಿಗಳನ್ನು .[೩] ಮಟಪಕ್ಷಿಗಳು ಪೂರ್ವ ಥೈಲ್ಯಾಂಡ್ , ಇಂಡೋಚೀನಾದಲ್ಲಿ ಸಕೆರಟೆಂನ್ಸಿಸ್ (sakeratensis)ಎಂದು ಕರೆಯುತ್ತಾರೆ.[೪] ಸಂಸ್ಕೃತದಲ್ಲಿ ಕರಾಯಿಕ, ಕೃಶಕೂಟ, ಎಂದು. ತುಳುವಿನಲ್ಲಿ ಕುಟ್ಲುಂಕು, ಕೊಡವದಲ್ಲಿ ನೂಕರೆಬಾಲ ಎಂತಲೂ, ಇನ್ನೂ ಸ್ಥಳಿಯವಾಗಿ ಕದುಗನ ಹಕ್ಕಿ, ಕಳ್ಳಹಕ್ಕಿ, ಬಿಳಿಕೋಗಿಲೆ, ಮರಕೋಗಿಲೆ ಇತ್ಯಾದಿಯಾಗಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಹಂಚಿಕೆ
[ಬದಲಾಯಿಸಿ]ಮಟಪಕ್ಷಿ ಜಾತಿಯ ಹಕ್ಕಿಗಳ ಪ್ರದೇಶವು ಅತ್ಯಂತ ದೊಡ್ಡದು, ಈ ಪಕ್ಷಿಯ ಹಂಚಿಕೆಯು ವಿಶಾಲವಾದ ಭೂಭಾಗವನ್ನು ಹೊಂದಿದೆ. ಭಾರತ ಹಿಮಾಲಯಪರ್ವತಗಳವರೇಗೂ ಮತ್ತು ಬರ್ಮಾ (ಮ್ಯಾನ್ಮಾರ್), ಲಾಸ್ ಮತ್ತು ಥೈಲ್ಯಾಂಡ್ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಕುರುಚಲು ಕಾಡು, ನೆಡುತೋಪುಗಳು ಮತ್ತು ತೋಟಗಳು ಮಟಪಕ್ಷಿಗಳ ಆವಾಸಗಳಾಗಿವೆ.
ವರ್ತನೆ ಮತ್ತು ಪರಿಸರ
[ಬದಲಾಯಿಸಿ]ಈ ಮಟಪಕ್ಷಿಗಳು ವೃಕ್ಷಸಂಬಂಧಿಯ ಸರ್ವಭಕ್ಷಕ ಹಕ್ಕಿ, ಪ್ರಮುಖವಾಗಿ ಹಣ್ಣು, ಬೀಜಗಳನ್ನು ತಿನ್ನುತ್ತವೆ.[೫] ಕೀಟಗಳು, ಚಿಕ್ಕ ಚಿಕ್ಕ ಸರೀಸೃಪಗಳನ್ನು ಮತ್ತು ಮೊಟ್ಟೆಗಳು, ಮತ್ತು ಪಕ್ಷಿಗಳ ಸಣ್ಣ ಮರಿಗಳನ್ನು ತಿನ್ನುತವೆ.[೬] ಇತ್ತಿಚ್ಚಿಗೆ ತಿಳಿದುಬಂದಿರುವಂತೆ ಈ ಹಕ್ಕಿಗಳು ಸತ್ತ ಹಸುವಿನ ಮಾಂಸವನ್ನು ಕೂಡ ತಿಂದ ನಿದರ್ಶನಗಳಿವೆ. ಇವು ಚಟುವಟಿಕೆಯಿಂದ ಆಹಾರವನ್ನು ತಿನ್ನುತ್ತವೆ, ರೆಂಬೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಸರಾಗವಾಗಿ ಹತ್ತುತ್ತವೆ. ಮತ್ತು ಕೆಲವು ವೇಳೆ ಬೇರೆ ಪಕ್ಷಿಗಳ ಜೊತೆ ಒಟ್ಟುಗೂಡಿ ಬೇಟೆಯಾಡುವುದುಂಟು ಇವುಗಳ ಜೊತೆಯಲ್ಲಿ ಕಾಜಾಣಗಳು ಮತ್ತು ಸಿದಗಾರ ಹಕ್ಕಿಗಳು ಸೇರಿಕೊಳ್ಳುತ್ತವೆ. ಈ ಮಟಪಕ್ಷಿಗಳು ಕೆಲವೊಮ್ಮೆ ಜಿಂಕೆಗಳಲ್ಲಿರುವ ಪರೋಪ ಜೀವಿಗಳಾದ ಉಣ್ಣೆ, ಚಿಗಟೆ, ಹೇನುಗಳು ಮುಂತಾದ ಜೀವಿಗಳನ್ನು ತಿನ್ನುವುದುಂಟು.[೭]ಕಾಗೆಗಳಂತೆ ಇವೂ ಸಹ ಮಿಶ್ರಹಾರಿಗಳೇ [೮] ದಕ್ಷಿಣ ಭಾರತದಲ್ಲಿ ಬೆಳೆಯುವ ತಾಳೆ ಬೆಳೆಗಾರರಿಗೆ ಮಟಪಕ್ಷಿಗಳು ಮಿತ್ರರಂತೆ ಏಕೆಂದರೆ ಇವು ತಾಳೆ ಗಿಡಕ್ಕೆ ಬೀಳುವ en:Rhynchophorus ferrugineusಎಂಬ ಕೀಟಗಳನ್ನ ತಿನ್ನುತ್ತವೆ.[೯] ಸಸ್ತನಿಗಳಿಗೆ ವಿಷಕಾರಿಯಾದ en:Trichosanthes palmata ಎಂಬ ಹಣ್ಣನ್ನು ಈ ಮಟಪಕ್ಷಿಗಳು ತಿನ್ನುತ್ತವೆ.[೧೦]
ಸಾಮಾನ್ಯವಾಗಿ ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಸಂತಾನೋತ್ಪತ್ತಿ ಮಾಡುವ ಇವು, ತಮ್ಮ ಗೂಡುಗಳನ್ನ ಮರ,ಪೊದೆಗಳಲ್ಲಿ ಕಡ್ಡಿಗಳಿಂದ ಕೂಡಿದ ಬಟ್ಟಲಿನಾಕಾರದ ಗೂಡು ಕಟ್ಟಿ ಮೂರರಿಂದ ಐದು ಮೊಟ್ಟೆಗಳನ್ನ ಇಟ್ಟು ಮರಿ ಮಾಡುತ್ತವೆ. [೧೧][೧೨]
ಈ ಜಾತಿಯ ಪಕ್ಷಿಗಳ ಕೂಗು ವಿಭಿನ್ನವಾಗಿದ್ದು ಕೆಕ್ಕೆಕ್ಕೆಕ್ಕೆಕ್ಕೆಕ್ಕೆ...... ಕೆಕ್ಕೆಕ್ಕೆಕ್ಕೆಕ್ಕೆಕ್ಕೆ ,ಬಾಬ್-ಒ-ಲಿಂಕ್..... ,ಕೋ-ಟ್ರೀ.... ಎಂಬ ಕೂಗು ಸಾಮಾನ್ಯವಾಗಿರುತ್ತದೆ. [೨] ಇವುಗಳ ಕೂಗಿನ ಅನುಸಾರವಾಗಿ ಹಳ್ಳಿಗಳ ಪ್ರಾದೇಶಿಕ ಭಾಷೆಯಲ್ಲಿ " ಕೋ ಟ್ರಿ" “ಹಂದಿ ಚಂಚಾ" ಮತ್ತು "ಟಾಕಾ ಚೋರ್"(ಕಳ್ಳಹಕ್ಕಿ),ಕದುಗನಹಕ್ಕಿ, ಬಿಳಿಕೋಗಿಲೆ,ಮರಕೋಗಿಲೆ, ತುಳು ಭಾಷೆಯಲ್ಲಿ "ಕುಟ್ಲುಂಕ್ಕು" , ಕೊಡವ ಬಾಷೆಯಲ್ಲಿ "ನೂಕರೆ ಬಾಲ"ಎಂದೂ ಕರೆಯುವುದುಂಟು.[೧೦][೧೩] en:Trypanosoma corvi ಎಂಬ ಪರಾವಲಂಬಿ ಪ್ರೋಟೋಜೋವಾವು ಇದೇ ಜಾತಿಯ ಹಕ್ಕಿಗಳಿಂದ ವಿವರಿಸಲಾಗಿದೆ. [೧೪] ಮತ್ತು en:Babesia ವನ್ನು ಕೂಡ ಇದೇ ಜಾತಿಯ ಪಕ್ಷಿಗಳಿಂದ ವರದಿಯಾಗಿದೆ.[೧೫] en:Trematode ಪರಾವಲಂಬಿಗಳು ಮತ್ತು Haplorchis vagabundi ಗಳು ಮಟಪಕ್ಷಿಯ ಕರಳಿನಲ್ಲಿ ದೊರೆತಿವೆ.[೧೬] Syringophiloidus dendrocittae ಎಂಬ ದೊಡ್ಡ ಪುಕ್ಕಗಳನ್ನ ಹೊಂದಿರುವ ಪಕ್ಷಿಗಳು ಈ ಮಟಪಕ್ಷಿಗಳಿಂದಲೇ ವಿವರಿಸಲಾಗಿದೆ .[೧೭]
ಮೂಲಗಳು
[ಬದಲಾಯಿಸಿ]- ↑ BirdLife International (2009). Dendrocitta vagabunda. In: IUCN 2008. IUCN Red List of Threatened Species. Retrieved 12 November 2009.
- ↑ ೨.೦ ೨.೧ ೨.೨ Rasmussen, PC & JC Anderton (2005). Birds of South Asia: The Ripley guide. Volume 2. Smithsonian Institution & Lynx Edicions. p. 595.
- ↑ Baker, EC Stuart (1922). The Fauna of British India, Including Ceylon and Burma. Birds. Volume 1. Taylor and Francis, London. pp. 48–52.
- ↑ Dickinson, E.C., R.W.R.J. Dekker, S. Eck & S. Somadikarta (2004). "Systematic notes on Asian birds. 45. Types of the Corvidae". Zool. Verh. Leiden. 350: 111–148.
{{cite journal}}
: CS1 maint: multiple names: authors list (link) - ↑ Sharma,Satish Kumar (1992). "Tree Pie Dendrocitta vagabunda (Latham) feeding on aril of seeds of Pithecellobium dulce". J. Bombay Nat. Hist. Soc. 89 (3): 374.
- ↑ Begbie,A (1905). "Curious ferocity of the Indian Tree-pie Dendrocitta rufa". J. Bombay Nat. Hist. Soc. 16 (3): 502–503.
- ↑ Bharucha,EK (1987). "An observation on the relationship between a Sambar and a Tree-Pie". J. Bombay Nat. Hist. Soc. 84 (3): 675.
- ↑ de Kort, Selvino R & Nicola S. Clayton (2006). "An evolutionary perspective on caching by corvids". Proc. R. Soc. B. 273 (1585): 417–423. doi:10.1098/rspb.2005.3350. PMC 1560201. PMID 16615207.
- ↑ Krishnakumar R., Sudha G. (2002). "Indian tree pie Dendrocitta vagabunda parvula (Whistler and Kinnear) (Corvidae). A predatory bird of red palm weevil Rhynchophorus ferrugineus (Oliv.)". Insect Environment. 8: 133.
- ↑ ೧೦.೦ ೧೦.೧ Ali, S & SD Ripley (1986). Handbook of the birds of India and Pakistan. Volume 5 (2 ed.). Oxford University Press. pp. 216–221.
- ↑ Whistler, Hugh (1949). Popular Handbook of Indian Birds. 4th Edition. Gurney and Jackson. pp. 12–14.
- ↑ Hume, AO (1889). The nests and eggs of Indian birds. Volume 1. R H Porter, London. pp. 19–22.
- ↑ Finn, Frank (1904). The Birds of Calcutta. Thacker, Spink & co. pp. 10–13.
- ↑ Nandi N. C., Bennett G. F. (1994). "Re-description of Trypanosoma corvi Stephens and Christophers, 1908 emend Baker, 1976 and remarks on the trypanosomes of the avian family Corvidae". Mem. Inst. Oswaldo Cruz. 89 (2): 145–151. doi:10.1590/S0074-02761994000200005.
- ↑ Peirce MA (2000). "A taxonomic review of avian piroplasms of the genus Babesia Starcovici, 1893 (Apicomplexa: Piroplasmorida: Babesiidae)". J. Nat. Hist. 34 (3): 317–32. doi:10.1080/002229300299507.
- ↑ Baugh, S.C. (1963). "Contributions to our knowledge of digenetic trematodes VI". Parasitology Research. 22 (4): 303–315. doi:10.1007/BF00260191. PMID 13966962.
- ↑ Fain A; Bochkov, A.; Mironov, S. (2000). "New genera and species of quill mites of the family Syringophilidae (Acari, Prostigmata)". Bulletin van het Koninlijk Belgisch Instituut voor Natuurwetenschappen - Entomologie. 70: 33–70.
{{cite journal}}
: CS1 maint: multiple names: authors list (link)
೧೭. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Photos and other media Archived 2016-03-15 ವೇಬ್ಯಾಕ್ ಮೆಷಿನ್ ನಲ್ಲಿ.
- Type specimen of sakeratensis Archived 2012-02-24 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 maint: multiple names: authors list
- IUCN Red List least concern species
- Articles with 'species' microformats
- Taxoboxes with the error color
- Taxobox articles missing a taxonbar
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Dendrocitta
- Birds of India
- Birds of Bangladesh
- ಪಕ್ಷಿಗಳು