ಭಾರತೀಯ ರಾಜ್ಯ ಪಕ್ಷಿಗಳು
ಗೋಚರ
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತ ದೇಶದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯವು ತನ್ನದೇ ಸರ್ಕಾರ ಹೊಂದಿರುತ್ತದೆ ಮತ್ತು ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ಆಡಳಿತ ಹೊಂದಿದೆ. ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು. ಈ ದೇಶದ ರಾಷ್ಟ್ರ ಪಕ್ಷಿಯು ನವಿಲು ಮತ್ತು ರಾಷ್ಟ್ರ ಪ್ರಾಣಿಯು ಹುಲಿಯು ಆಗಿದೆ.
ಈ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ ಆದ ಮುದ್ರೆ ಮತ್ತು ಲಾಂಛನ ಹೊಂದಿದೆ. ಭಾರತದ ರಾಜ್ಯ ಪಕ್ಷಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ರಾಜ್ಯಗಳು
[ಬದಲಾಯಿಸಿ]ರಾಜ್ಯ | ಸಾಮಾನ್ಯ ಹೆಸರು | ದ್ವಿಪದ ಹೆಸರು | ಚಿತ್ರ |
---|---|---|---|
ಆಂಧ್ರ ಪ್ರದೇಶ | ಗುಲಾಬಿ ಕೊರಳಿನ ಗಿಳಿ | ಸಿಟ್ಟಾಕುಲ ಕ್ರಮೇರಿ | [[]] |
ಅರುಣಾಚಲ ಪ್ರದೇಶ | ದೊಡ್ಡ ದಾಸಮಂಗಟ್ಟೆ | ಬ್ಯುಸೆರೊಸ್ ಬೈಕಾರ್ ನಿಸ್ | |
ಅಸ್ಸಾಂ | ಬಿಳಿ ರೆಕ್ಕೆಯ ಬಾತುಕೋಳಿ | ಅಸಾರ್ಕೋರ್ನಿಸ್ ಕ್ಯೂಟಲಾಟ | |
ಬಿಹಾರ | ಗುಬ್ಬಚ್ಚಿ | ಪ್ಯಾಸೆರ್ ಡೊಮೆಸ್ಟಿಕಸ್ | |
ಛತ್ತೀಸ್‌ಘಡ್ | ಬೆಟ್ಟದ ಗೊರವಂಕ | ಗ್ರಾಕುಲ ರಿಲಿಜಿಯಸ್ ಪೆನಿನ್ಸುಲಾರಿಸ್ | |
ಗೋವ | ಜ್ವಾಲೆಯ ಗಂಟಲಿನ ಬುಲ್ಬುಲ್ | ಪಿಕ್ನೋನೊಟುಸ್ ಗ್ಯುಲರಿಸ್ | |
ಗುಜರಾತ್ | ಭಾರಿ ಗಾತ್ರದ ರಾಜಹಂಸಗಳು | ಫಿನಿಕೊಪ್ಟರಸ್ ರೊಸಿಯುಸ್ | |
ಹರಿಯಾಣ | ಕಪ್ಪು ಕವಜುಗ | ಫ್ರಾಂಕೋಲಿನಸ್ ಫ್ರಾಂಕೋಲಿನಸ್ | |
ಹಿಮಾಚಲ ಪ್ರದೇಶ | Western tragopan (Jujurana) | ಟ್ರಾಗೋಪನ್ ಮೆಲನೊಸೆಫಾಲಸ್ | |
ಜಾರ್ಖಂಡ್ | ಕೋಗಿಲೆ | ಯುಡೈನಾಮೈಸ್ ಸ್ಕೋಲೊಪೇಸಿಯಸ್ | |
ಕರ್ನಾಟಕ | ನೀಲಕಂಠ | ಕೊರಾಶಿಯಾಸ್ ಬೆಂಗಲೆನ್ಸಿ | |
ಕೇರಳ | ದೊಡ್ಡ ದಾಸಮಂಗಟ್ಟೆ | ಬ್ಯುಸೆರೊಸ್ ಬೈಕಾರ್ ನಿಸ್ | |
ಮಧ್ಯ ಪ್ರದೇಶ | ರಾಜ ಹಕ್ಕಿ | ತೇರ್ಪ್ಸೈಫೋನ್ ಪ್ಯಾರಡೈಸೈ | |
ಮಹಾರಾಷ್ಟ್ರ | ಹಳದಿಕಾಲಿನ ಹಸಿರು ಪಾರಿವಾಳ | ಟೀರೊನ್ ಫಿನಿಕಾಪ್ಟೆರಾ | |
ಮಣಿಪುರ | Mrs. Hume's pheasant | ಸಿರ್ಮ್ಯಾಟಿಕಸ್ ಹ್ಯೂಮಿಯ | |
ಮೇಘಾಲಯ | ಬೆಟ್ಟದ ಗೊರವಂಕ | ಗ್ರಾಕುಲ ರಿಲಿಜಿಯಸ್ ಪೆನಿನ್ಸುಲಾರಿಸ್ | |
ಮಿಝೋರಂ | Mrs. Hume's pheasant | ಸಿರ್ಮ್ಯಾಟಿಕಸ್ ಹ್ಯೂಮಿಯ | |
ನಾಗಲ್ಯಂಡ್ | ಬ್ಲೈತ್‌ನ ಟ್ರಾಗೋಪನ್ | ಟ್ರಾಗೋಪನ್ ಬ್ಲೈತಿ | |
ಒಡಿಶಾ | ನೀಲಕಂಠ | ಕೊರಾಶಿಯಾಸ್ ಬೆಂಗಲೆನ್ಸಿ | |
ಪಂಜಾಬ್ | ಉತ್ತರ ಗೋಶಾಕ್ | ಆಕ್ಸಿಪಿಟರ್ ಜೆಂಟಿಲಿಸ್ | |
ರಾಜಸ್ಥಾನ | ಹೆಬ್ಬಕ | ಅರ್ಡಿಯೊಟಿಸ್ ನಿಗ್ರಿಸೆಪ್ಸ | |
ಸಿಕ್ಕಿಂ | ರಕ್ತದ ಫೆಸೆಂಟ್ | ಇಥಾಗಿನಿಸ್ ಕ್ರೂಯೆಂಟಸ್ | |
ತಮಿಳುನಾಡು | ಹರಳು ಚೋರೆ | ಚಾಲ್ಕೊಪಾಪ್ಸ್ ಇಂಡಿಕಾ | |
ತೆಲಂಗಾಣ | ನೀಲಕಂಠ | ಕೊರಾಶಿಯಾಸ್ ಬೆಂಗಲೆನ್ಸಿ | |
ತ್ರಿಪುರ | ಗುಮ್ಮಾಡಲು | ಡುಕುಲಾ ಏನಿಯಾ | |
ಉತ್ತರಾಖಂಡ | ಸಾರಸ್ ಕ್ರೇನ್ | "ಗ್ರಸ್ ಆಂಟಿಗೋನ್ | |
ಉತ್ತರ ಪ್ರದೇಶ | ಹಿಮಾಲಯನ್ ಮೋನಾಲ್ | ಲೋಫೋಫರಸ್ ಇಂಪೆಜಾನಸ್ | |
ಪಶ್ಚಿಮ ಬಂಗಾಳ | ಬಿಳಿಕಂಠದ ಮಿಂಚುಳ್ಳಿ | ಹ್ಯಾಲ್ಸಿಯಾನ್ ಸ್ಮಿರ್ನೆನ್ಸಿಸ್ |