ವಿಷಯಕ್ಕೆ ಹೋಗು

ಭಾರತದ ಆನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Indian Elephant
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
Subspecies:
E. m. indicus
Trinomial name
Elephas maximus indicus
Cuvier, 1798

ಭಾರತದ ಈ ಆನೆ ಯು (Elephas maximus indicus )ಏಷ್ಯಾದ ಆನೆಗಳಲ್ಲಿನ ಮೂರು ಉಪಸಸ್ತನಿ ಜೀವಿಗಳಲ್ಲಿ ಗುರುತಿಸಿಕೊಂಡಿದೆ.ಏಷ್ಯಾವು ಇದರ ಪ್ರಮುಖ ನೆಲೆಯಾಗಿದೆ. ಸುಮಾರು ೧೯೮೬ ರಿಂದ Elephas maximus ಪ್ರಭೇದವು ಅಳಿವಿನ ಅಂಚಿನಲ್ಲಿದೆ, ಎಂದು IUCN ನಡೆಸಿದ ಪ್ರಾಣಿಗಳ ಗಣತಿಯಲ್ಲಿ ತಿಳಿಸಿದೆ.ಕಳೆದ ಮೂರು ತಲೆಮಾರುಗಳಿಂದ ಈ ಸಂತತಿಯು ೫೦% ಕ್ಕಿಂತ ಹೆಚ್ಚು ಅಳಿದು ಹೋಗಿದೆ ಎಂದು ಹೇಳಲಾಗಿದೆ.ಸುಮಾರು ೬೦–೭೫ ವರ್ಷಗಳಿಂದೀಚೆಗೆ ಇದರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈ ಪ್ರಭೇದವರ್ಗವು ಪ್ರಾಥಮಿಕವಾಗಿ ನೆಲೆವಾಸದ ವಿನಾಶ,ಅರಣ್ಯ ನಾಶ ಮತ್ತು ಛಿದ್ರೀಕರಣದಿಂದಾಗಿ ಅಪಾಯಕ್ಕೀಡಾಗಿದೆ.[೧]

ಗುಣಲಕ್ಷಣಗಳು[ಬದಲಾಯಿಸಿ]

ಸಾಮಾನ್ಯವಾಗಿ ಏಷ್ಯನ್ ಆನೆಗಳು ಆಫ್ರಿಕನ್ ಆನೆಗಳಿಗಿಂತ ಗಾತ್ರದಲ್ಲಿ ಚಿಕ್ಕವೆನಿಸಿವೆ.ಅದಲ್ಲದೇ ತಮ್ಮ ಶಿರದಲ್ಲಿಯೇ ಅತ್ಯಧಿಕ ಶಕ್ತಿಯ ಕೇಂದ್ರ ಪಡೆದಿವೆ. ಅವುಗಳ ದಂತವು ಒಂದು ಬೆರಳಿನಂತೆ ಮುಂದೆ ಚಾಚಿದಂತೆ ಕಾಣುತ್ತವೆ. ಅವುಗಳ ಬೆನ್ನಿನ ಭಾಗ ಉಬ್ಬಿದಂತೆ ಅಥವಾ ಒಂದೇ ಸಮನಾಗಿ ಕಾಣುವುದು.[೨] ಭಾರತದ ಆನೆಗಳು ತೋಳಿನೆತ್ತರದ ಅಂದರೆ 2 and 3.5 m (6.6 and 11.5 ft)ರಷ್ಟು ಎತ್ತರಕ್ಕೆ,ಸುಮಾರು 2,000 and 5,000 kg (4,400 and 11,000 lb),ರಷ್ಟರ ನಡುವಿನ ತೂಕ ಹೊಂದಿರುತ್ತವೆ.ಅಲ್ಲದೇ ಇದಕ್ಕೆ ೧೯ ಜೊತೆ ಪಕ್ಕೆಲುಬುಗಳಿವೆ. ಅವುಗಳ ಬಣ್ಣವು ಬೃಹತ್ ಗಾತ್ರದ ಆನೆ ಗಳಿಗಿಂತ ತಿಳಿಯಾಗಿರುತ್ತದೆ.ಚರ್ಮವು ಸಣ್ಣ ಪಟ್ಟೆಗಳೊಂದಿಗೆ ವರ್ಣದ್ರವ್ಯ ನಾಶವಾಗಿರುವುದು ಕಂಡು ಬರುತ್ತದೆ.ಆದರೆ ಚರ್ಮವು ಸುಮಾತ್ರಾದ ಆನೆ ಗಳಿಗಿಂತ ಕಡುಕಪ್ಪಾಗಿರುತ್ತದೆ. ಹೆಣ್ಣಾನೆಗಳು ಸಾಮಾನ್ಯವಾಗಿ ಗಂಡಾನೆಗಳಿಗಿಂತ ಗಾತ್ರದಲ್ಲಿ ಚಿಕ್ಕವಾಗಿರುತ್ತವೆ.ಇವುಗಳಿಗೆ ಸಣ್ಣ ಪ್ರಮಾಣದ ಕೋರೆ ದಂತಗಳು ಇರಬಹುದು ಅಥವಾ ಇಲ್ಲದೇ ಇರಬಹುದಾಗಿದೆ.[೩]

ಭಾರತದ ಅತ್ಯಂತ ವೈಶಾಲ್ಯತೆ ಹೊಂದಿದ್ದ ಆನೆಯೆಂದರೆ 3.43 metres (11.3 ft)ತೋಳೆತ್ತರದ್ದಾಗಿದೆ[೪] ಆಗ ೧೯೮೫ ರಲ್ಲಿ ಅತ್ಯಂತ ಬೃಹತ್ ಗಾತ್ರದ ಎರಡು ಗಂಡಾನೆಗಳು ಮೊದಲ ಬಾರಿಗೆ ಬಾರ್ಡಿಯಾ ನ್ಯಾಶನಲ್ ಪಾರ್ಕ್ ನಲ್ಲಿ ಕಂಡು ಬಂದವು.ಅವುಗಳಿಗೆ ರಾಜಾ ಗಜ ಮತ್ತು ಕಾಂಛಾ ಎಂಬ ಹೆಸರುಗಳನ್ನಿಡಲಾಗಿತ್ತು. ಅವರೆಡೂ ಉದ್ಯಾನದಾದ್ಯಂತ ಸ್ವೇಚ್ಛವಾಗಿ ತಿರುಗಾಡಿಕೊಂಡಿದ್ದವಲ್ಲದೇ ಆಗಾಗ ಹೆಣ್ಣಾನೆಗಳೊಂದಿಗೆ ಭೇಟಿ ಮಾಡುತ್ತಿದ್ದವು. ರಾಜಾ ಗಜ ವು ಭುಜದೆತ್ತರಕ್ಕೆ ಬೆಳೆದು ನಿಂತು 11.3 ft (3.4 m)ರಷ್ಟಾಗಿತ್ತು.ಅಲ್ಲದೇ ಅತ್ಯಧಿಕ ತೂಕವನ್ನೂ ಪಡೆದಿತ್ತು. ಆ ಗಜವು ರೋಮಯುಕ್ತ ಬೃಹತ್ ಗಜದ ಗಾತ್ರ ಹೊಂದಿದಂತೆ ಕಾಣುತ್ತದೆ.ಅದರ ಶಿರ ಭಾಗವು ಎರಡು-ಖಂಡದ ಆಕಾರ ತಳೆದಿದ್ದು ಕಾಣುವುದು. ಅದರ ಹಣೆ ಮತ್ತು ಗುಮ್ಮಟಾಕಾರದ ಮೇಲಾವರಣಗಳು ಹೆಚ್ಚಾಗಿದ್ದವು. ಇನ್ನುಳಿದ ಪ್ರಮುಖ ಏಷ್ಯನ್ ಗಂಡಾನೆಗಳಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆದಿವೆ.[೫]

ಭಾರತದ ಆನೆಗಳು ಸಣ್ಣ ಗಾತ್ರದ ಕಿವಿಗಳನ್ನು ಹೊಂದಿವೆ.ಆದರೆ ಇನ್ನುಳಿದವುಗಳಿಗೆ ಹೋಲಿಸಿದರೆ ಅಗಲ ವಿಸ್ತೃತ ತಲೆ ಬುರುಡೆಗಳನ್ನು ಪಡೆದಿವೆ.ಅದಲ್ಲದೇ ಇವುಗಳಿಗೆ ಆಫ್ರಿಕನ್ ಆನೆಗಳಿಗಿಂತ ವಿಶಾಲವಾದ ಕೋರೆ ದಂತಗಳಿವೆ. ಮುಂಗೊರಸುಗಳು ವಿಶಾಲ ಮತ್ತು ಅಗಲವಾಗಿವೆ. ತಮ್ಮ ಆಫ್ರಿಕನ್ ಸೋದರ ಸಂಬಂಧಿಗಳಿಗಿರುವಂತೆ ಅವುಗಳ ಉದರ ಭಾಗವು ಅವುಗಳ ದೇಹದ ತೂಕಕ್ಕೆ ಅನುಪಾತದಲ್ಲಿದೆ.ಆದರೆ ಆಫ್ರಿಕನ್ ಆನೆಯು ವಿಶಾಲ ಉದರ ಹೊಂದಿದ್ದು, ಇದನ್ನು ತಲೆ ಬುರುಡೆಗಳಿಗೆ ಹೋಲಿಸಿದರೆ ದೊಡ್ಡ ಗಾತ್ರ ಎಂದು ಹೇಳಬಹುದು.

ಹರಡುವಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಕೇರಳದ ಮುನ್ನಾರದಲ್ಲಿನ ಕಾಡಾನೆಗಳು
ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ನಲ್ಲಿನ ಆನೆ ಹಿಂಡು
ಬಂಡಿಪುರ ನ್ಯಾಶನಲ್ ಪಾರ್ಕ್ ನಲ್ಲಿನ ಒಂದು ಕಾಡಾನೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಸ್ನಾನ ಮಾಡುತ್ತಿರುವುದು.

ಭಾರತದ ಆನೆಗಳು ಏಷ್ಯಾದ ಪ್ರಮುಖ ಸ್ಥಳಗಳಲ್ಲಿ ತಮ್ಮ ಮೂಲ ನೆಲೆವಾಸ ಕಂಡುಕೊಂಡಿವೆ: ಭಾರತ, ನೇಪಾಳ, ಬಾಂಗ್ಲಾದೇಶ, ಭೂತಾನ, ಮಯನ್ಮಾರ್, ಥೈಲ್ಯಾಂಡ್, ಮಲಯಾ ದ್ವೀಪ, ವಿಯೆಟ್ನಾಮ್, ಕಾಂಬೊಡಿಯಾ, ಲಾವೊಸ್, ಮತ್ತು ಚೀನಾ ಪ್ರಮುಖ ಆವಾಸ ಸ್ಥಾನಗಳಾಗಿವೆ. ಅವುಗಳು ಹುಲ್ಲುಗಾವಲು,ಒಣ ಎಲೆಕಾಡುಗಳು,ತೇವ ಎಲೆಕಾಡುಗಳು,ಸದಾ ಹಸಿರು ಮತ್ತು ಅರೆ ಹರಿದ್ವರ್ಣ ಕಾಡುಗಳಲ್ಲಿ ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಆಗ ೧೯೯೦ ರಲ್ಲಿ ಅವುಗಳ ಅಂದಾಜು ಸಂಖ್ಯಾಗಾತ್ರವು[೬] ರಷ್ಟಾಗಿತ್ತು.

 • ೭೦–೧೫೦ ವಿಯೆಟ್ನಾಮ್ ನ ದಕ್ಷಿಣದಲ್ಲಿನ ಅಂದಾಜು ಸಂಖ್ಯೆ;
 • ೧೦೦–೧೨೫ ನೇಪಾಳದಲ್ಲಿ, ಕೆಲವು ಅಂದಾಜು ಸೀಮಿತ ಪ್ರದೇಶಗಳಲ್ಲಿ ಮತ್ತು ನಿರ್ಬಂಧಿತ ಕೆಲವು ಸಂರಕ್ಷಿತ ತೆರೈ ಭೂಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದು ಭಾರತದ ಗಡಿಯೊಂದಿಗೆ ಹೊಂದಿಕೊಂಡಿದೆ. ನಂತರ ೨೦೦೨ ರಲ್ಲಿ ಈ ಅಂದಾಜು ೧೦೬ ರಿಂದ ೧೭೨ರಷ್ಟಾಗಿತ್ತು.ಇದರಲ್ಲಿ ಸ್ಥಳೀಯ ಮತ್ತು ವಲಸೆ ಬಂದ ಆನೆಗಳೂ ಸೇರಿವೆ.ಇವುಗಳಲ್ಲಿ ಬಹುತೇಕ ಬಾರ್ಡಿಯಾ ನ್ಯಾಶನಲ್ ಪಾರ್ಕ್ ನಲ್ಲಿ ಕಂಡು ಬರುತ್ತವೆ.[೭]
 • ೧೫೦–೨೫೦ ಬಾಂಗ್ಲಾದೇಶದಲ್ಲಿ, ಸುಮಾರಾಗಿ ಇವುಗಳ ವಾಸ ಸ್ಥಾನವು ಚಿತ್ತ್ ಗಾಂಗ್ ಹಿಲ್ಲ್ಸ್ ಗಳಲ್ಲಿ ವಿರಳವಾಗಿ ಕಾಣಿಸುತ್ತದೆ;
 • ೨೦೦–೨೫೦ ಚೀನಾದಲ್ಲಿ, ಅವು ಕೇವಲ ದಕ್ಷಿಣದ ಯುನ್ನಾನ್ ನಸಿಗುಬನ್ನಾ, ಸಿಮಾವೊ, ಮತ್ತು ಇಂಕಾಗ್ ನಲ್ಲಿ ಬದುಕುಳಿದಿವೆ.
 • ೨೫೦–೫೦೦ ಭೂತಾನದಲ್ಲಿ,ದಕ್ಷಿಣ ಭಾಗದಲ್ಲಿನ ಭಾರತದ ಗಡಿಗುಂಟ ಅವುಗಳು ಸಂರಕ್ಷಿತ ಪ್ರದೇಶಗಳಲ್ಲಿ ವಾಸಿಸುತ್ತವೆ;
 • ೨೫೦–೬೦೦ ಕಾಂಬೊಡಿಯಾದಲ್ಲಿ, ಅವು ನೈಋತ್ಯದ ಬೆಟ್ಟಗಳಲ್ಲಿ ಮತ್ತು ಮೊಂಡಲಕಿರಿ ಮತ್ತು ರತ್ನಾಕಿರಿ ಪ್ರಾಂತಗಳಲ್ಲಿ ನೆಲೆವಾಸ ಕಂಡುಕೊಂಡಿವೆ;
 • ೫೦೦–೧,೦೦೦ ಲಾವೊಸ್ ನಲ್ಲಿ, ಇವು ಸಾಮಾನ್ಯವಾಗಿ ವಿಸ್ತಾರ ರೂಪದಲ್ಲಿ ಕಾಡು ಪ್ರದೇಶದಲ್ಲಿ ಅಲ್ಲಲ್ಲಿ ವಿಂಗಡಿಸಲ್ಪಟ್ಟಿವೆ.ಕಾಡಿನ ಎತ್ತರ ಮತ್ತು ಇಳಿಜಾರಿನ ಪ್ರದೇಶಗಳೆರಡರಲ್ಲಿಯೂ ಉಳಿದಿವೆ;
 • ೨,೧೦೦–೩,೧೦೦ ಮಲೆಷ್ಯಾದಲ್ಲಿ;
 • ೨,೫೦೦–೩,೨೦೦ ಥೈಲ್ಯಾಂಡ್ ನಲ್ಲಿ, ಪ್ರಮುಖವಾಗಿ ಮಯನ್ಮಾರ್ ನ ಗಡಿಗುಂಟ ಇರುವ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತವೆ.ದಕ್ಷಿಣದ ದ್ವೀಪ ಪ್ರದೇಶದಲ್ಲಿ ವಿರಳ ಸಂಖ್ಯೆಯಲ್ಲಿರುವ ಆನೆಗಳು ಕಾಣಿಸುತ್ತವೆ;
 • ೪,೦೦೦–೫,೦೦೦ ಮಯನ್ಮಾರ್ ನಲ್ಲಿ, ಹೆಚ್ಚಾಗಿ ಆನೆಗಳ ಸಂಖ್ಯೆಯು ದೊಡ್ಡ ಪ್ರಮಾಣದಲ್ಲಿ ವಿಂಗಡಿಸಲ್ಪಟ್ಟಿದೆ.ಉತ್ತರ ಮತ್ತು ಪಶ್ಚಿಮ ಪರ್ವತ ಶ್ರೇಣಿಗಳಲ್ಲಿ ಅಂದರೆ ಮಯನ್ಮಾರ್ ಕೇಂದ್ರ ಭಾಗವಾದ ಪೆಗು ಯೊಮಾ/೦} , ಟೆನೆಸಿರಿಯಮ್ ಮತ್ತುಶಾನ್ ಸ್ಟೇಟ್ ಪ್ರದೇಶಗಳಲ್ಲಿ ಕಂಡು ಬರುತ್ತವೆ;
 • ೨೬,೩೯೦–೩೦,೭೭೦ ಭಾರತದಲ್ಲಿ, ಇವುಗಳ ಸಂಖ್ಯೆಯು ನಾಲ್ಕು ಜನಪ್ರಿಯ ಪ್ರದೇಶಗಳಲ್ಲಿ ವಿತರಣೆಯಾಗಿದೆ:
  • ಈಶಾನ್ಯದಲ್ಲಿ — ನೇಪಾಳದ ಪೂರ್ವ ಭಾಗ ಮತ್ತು ಉತ್ತರದ ಪಶ್ಚಿಮ ಬಂಗಾಲದ ಮೂಲಕ ಪಶ್ಚಿಮದ ಆಸ್ಸಾಂ ಅದಲ್ಲದೇ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಮಿಶ್ಮಿ ಬೆಟ್ಟಗಳು, ಇದು ಪೂರ್ವದ ಅರುಣಾಚಲ ಪ್ರದೇಶದ ವರೆಗೆ ವಿಸ್ತರಿಸುತ್ತದೆ, ಆಸ್ಸಾಂನ ಬಯಲು ಪ್ರದೇಶದ ಪ್ರಸ್ಥ ಭೂಮಿ ಅದಲ್ಲದೇ ನಾಗಾಲ್ಯಾಂಡ್ ನ ಬೆಟ್ಟ ಪ್ರದೇಶ, ಇದು ಗಾರೊ ಬೆಟ್ಟಗಳ ಮೇಘಾಲಯವನ್ನು ಒಳಗೊಂಡಿದೆ. ಇದು ಅನಂತರ ಖಾಸಿ ಬೆಟ್ಟಗಳ ಮೂಲಕ ಹಾದು ಹೋಗುತ್ತದೆ, ಹೀಗೆ ಇದು ಬ್ರಹ್ಮಪುತ್ರದ ಪ್ರಸ್ಥಭೂಮಿಯ ಭಾಗಗಳನ್ನೊಳಗೊಂಡಿದೆ.ಅದಲ್ಲದೇ ಕಾರ್ಬಿ ಪ್ರಸ್ಥಭೂಮಿಯು; ವಿರಳವಾಗಿ ತ್ರಿಪುರಾ, ಮಿಜೊರಾಮ್, ಮನಿಪುರ್, ಮತ್ತು ಆಸ್ಸಾಂ ಜಿಲ್ಲೆಯ ಬರಾಕ್ ಕಣಿವೆ ಪ್ರದೇಶಗಳಲ್ಲಿ ಕಂಡು ಬರುವ ಆನೆ ಹಿಂಡಿನ ಪ್ರದೇಶವನ್ನೊಳಗೊಂಡಿವೆ:
  • ನೈಋತ್ಯದಲ್ಲಿ — ಹಿಮಾಲಯದ ಪರ್ವತ ಶ್ರೇಣಿಗಳಿರುವ ಉತ್ತರಾಂಚಲ್ ಮತ್ತು ಉತ್ತರ ಪ್ರದೇಶ, ಇದು ಕತರಿನಾ ಘಾಟ್ ವೈಲ್ಸ್ಡ್ಲೈಫ್ ಸ್ಯಾಂಕ್ಚುವರಿ ಯಿಂದ ಯಮುನಾ ನದಿ ವರೆಗೆ ವಿಸ್ತರಿಸಿದೆ;
  • ಕೇಂದ್ರಭಾಗದಲ್ಲಿನ — ಒರಿಸ್ಸಾದಲ್ಲಿ, ಜಾರ್ಖಂಡ್ ನಲ್ಲಿ, ಮತ್ತು ಪಶ್ಕಿಮ ಬಂಗಾಲದ ದಕ್ಷಿಣ ಭಾಗ, ಅಲ್ಲದೇ ಕೆಲವು ಪ್ರಾಣಿಗಳು ಛತ್ತೀಸ್ ಘಡ್ ದಲ್ಲಿಯೂ ಕಾಣಿಸುತ್ತವೆ;
  • ದಕ್ಷಿಣದಲ್ಲಿ — ಎಂಟು ವಿಭಾಗಗಳಲ್ಲಿ ಒದೊಂದು ಉತ್ತರ ಕರ್ನಾಟಕದಲ್ಲಿವೆ,ಅದಲ್ಲದೇ ಕರ್ನಾಟಕದ ವಿಸ್ತಾರ ಅರಣ್ಯ ವಲಯಗಳಲ್ಲಿ –ಪಶ್ಚಿಮ ಘಟ್ಟಗಳು, ಅಂದರೆ ಭದ್ರಾ–ಮಲೆನಾಡ, ಇದಲ್ಲದೇ ಬ್ರಹ್ಮಗಿರಿಯಲ್ಲಿ–ನೀಲ್ ಗಿರೀಸ್–ಪೂರ್ವ ಘಟ್ಟಗಳ,ಪ್ರದೇಶಗಳಾದ ನಿಲಂಬುರ್–ಸೈಲೆಂಟ್ ವ್ಯಾಲ್ಲಿ–ಕೊಯಿಮತ್ತೂರು, ಅನ್ನಾಮಲೈನಲ್ಲಿ–ಪರಂಬಿಕುಲಮ್, ಪೆರಿಯಾರ್ನಲ್ಲಿ–ಸ್ರಿವಿಲ್ಲಿಪುತ್ರ್, ಮತ್ತು ಒಂದು ಅಗಸ್ತ್ಯ ಮಲಯನಲ್ಲಿ ಕಾಣಬಹುದಾಗಿದೆ.

ಪರಿಸರ ವೃತ್ತಾಂತ ಮತ್ತು ನಡವಳಿಕೆ[ಬದಲಾಯಿಸಿ]

ಆನೆಗಳ ಚಲನವಲನ ಮತ್ತು ವಾಸಸ್ಥಾನಗಳ ವಿಧಾನಗಳ ಬಗ್ಗೆ ದಕ್ಷಿಣ ಭಾರತದಲ್ಲಿ ೧೯೮೧-೮೩ರ ಅವಧಿಯಲ್ಲಿ ಒಂದು 1,130 km2 (440 sq mi) ಅಧ್ಯಯನ ಮಾಡಲಾಗಿತ್ತು. ಈ ಪ್ರದೇಶವು ಹಸಿರು ಅರಣ್ಯಪ್ರದೇಶವನ್ನು ಆವರಿಸಿ ವಿವಿಧ ಪ್ರಕೃತಿ ವೈವಿಧ್ಯತೆ ತೋರಿದೆ-ಅದರಲ್ಲಿಯೂ ಒಣ ಹುಲ್ಲು ಗರಿ-ಮುಳ್ಳುಪ್ರದೇಶದ 250 to 400 m (820 to 1,310 ft) ಕಾಡು ಪರ್ಣಕಾಡು (400 to 1,400 m (1,300 to 4,600 ft)) ಅಕ್ಷಾಂಶಗಳಲ್ಲಿ ಸೇರಿದೆ.ಇದರಲ್ಲಿ ಸದಾ ಹಸಿರಿನ ಶೊಲಾ ಅರಣ್ಯ ಭಾಗ ಮತ್ತು ಹುಲ್ಲುಗಾವಲು ಸೇರಿವೆ.(1,400 to 1,800 m (4,600 to 5,900 ft)) ಐದು ವಿವಿಧ ಆನೆಗಳ ಪ್ರಭೇದಗಳಲ್ಲಿ ಪ್ರತಿಯೊಂದು ಸುಮಾರು ೫೦ ಮತ್ತು ೨೦೦ ವಿಂಗಡಿತ ಜಾತಿಗಳಿವೆ.ಇವುಗಳು 105 km2 (41 sq mi) ಮತ್ತು 320 km2 (120 sq mi) ರ ಮಧ್ಯ ಸ್ಥಿತವಾಗಿವೆ. ಆಯಾ ಋತುಮಾನದಲ್ಲಿನ ವಾಸಸ್ಥಾನಗಳು ಅಲ್ಲಿ ದೊರೆಯುವ ನೀರು ಮತ್ತು ಆಹಾರದ ಸಸ್ಯವರ್ಗ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅತ್ಯಂತ ಒಣ ವಾತಾವರಣದ ಜನವರಿ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಇವುಗಳ ಹಿಂಡು ಆಯಾ ಅರಣ್ಯ ಪ್ರದೇಶದ ದಟ್ಟ ಸಸ್ಯಭಾಗಗಳಲ್ಲಿ ಸೇರಿಕೊಳ್ಳುತ್ತದೆ.ಪ್ರತಿಕಿಲೊಮೀಟರ್ ಗೆ ಒಂದು ಅಥವಾ ಎಂದು ನದಿ ಕಣಿವೆ ಭಾಗಗಳಿಗೆ ವಲಸೆ ಹೋಗುತ್ತವೆ.ಇಲ್ಲಿ ಅವುಗಳು ಅತ್ಯಂತ ಪ್ರೊಟೀನುಯುಕ್ತ ಹುಲ್ಲನ್ನು ಅರಸಿ ಹೋಗುತ್ತವೆ.ಬೆಟ್ಟ-ಪರ್ವತ ಪ್ರದೇಶಗಳಲ್ಲಿನ ಒಣಹುಲ್ಲನ್ನು ಮಾತ್ರ ಮೇಯ್ದಿದ್ದ ಅವು ನದಿ ಪಾತಳಿಯಲ್ಲಿ ಉತ್ತಮ ಮೇವನ್ನು ಪಡೆಯುತ್ತವೆ. ಮಳೆಗಾಲದ ಆರಂಭದ ಮೇ ತಿಂಗಳಲ್ಲಿ ಅವುಗಳು ವಿಸ್ತೃತ ಕಾಡು ಪ್ರದೇಶಗಳಲ್ಲಿ ಕಡಿಮೆ ಸಾಂದ್ರತೆಯಲ್ಲಿ ವಾಸಿಸುತ್ತವೆ,ಬಹಳವಾಗಿ ಎತ್ತರದ ಹುಲ್ಲುಗಾವಲಿನ ಕಾಡುಗಳು,ಅವುಗಳಲ್ಲಿ ಹಸಿರು ಮತ್ತು ಪ್ರೊಟೀನುಯುಳ್ಳ ಹುಲ್ಲನ್ನು ದೊರಕಿಸುವ ಜಾಗಗಳಲ್ಲಿ ಅವು ವಾಸಸ್ಥಾನ ಆಯ್ಕೆ ಮಾಡಿಕೊಳ್ಳುತ್ತವೆ. ಎರಡನೆಯ ತೇವ ಋತುಮಾನವಾದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಎತ್ತರದ ಹುಲ್ಲು ಸಮೃದ್ಧವಾಗಿ ಬೆಳೆಯುತ್ತದೆ.ಆಗ ಅವು ಸಣ್ಣ ಹಸಿರು ಹುಲ್ಲುಗಾವಲಿಂದ ಇತರ ಮುಕ್ತ ಅರಣ್ಯಗಳೆಡೆಗೆ ವಲಸೆ ಹೋಗುತ್ತವೆ. ಕೆಲವು ಪರಿಸರ-ವಾತಾವರಣದ ವೈಪರಿತ್ಯಗಳಿಂದಾಗಿ ಆನೆಗಳ ಸಹಜ ಚಲವಲನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದರೆ ಈ ವಾತಾವರಣದಲ್ಲಿ ಆನೆಗಳ ಚಲನವನವು ಸಾಮಾನ್ಯವಾಗಿ ಕಳೆದೊಂದು ಶತಮಾನದಿಂದ ಬದಲಾವಣೆಯಾಗಿಲ್ಲ.ಅಂದರೆ ೧೯ ನೆಯ ಶತಮಾನದಲ್ಲಿ ಈ ಬಗ್ಗೆ ಉಲ್ಲೇಖಿತ ವಿಷಯಗಳನ್ನು ಗಮನಿಸಿದರೆ ಇದು ಕಾಣಸಿಗುತ್ತದೆ.[೮]

ಆದರೆ ನೀಲಗಿರಿ ಬಯೊಸ್ಪಿಯರ್ ರಿಜರ್ವ್ ನಲ್ಲಿ ಮಾತ್ರ ಮೂರು ಆನೆಗಳ ಪ್ರಭೇದಗಳು, ೧೯೯೦ ರ ಆರಂಭದಲ್ಲಿ ಅಲ್ಲಿನ ಸ್ಥಳೀಯ 562 km2 (217 sq mi), 670 km2 (260 sq mi) ಮತ್ತು 799 km2 (308 sq mi) ರ ಪ್ರವರ್ಗಕ್ಕೆ ಸೇರಿವೆ. ಸುಮಾರು ಮೂರು ವರ್ಷಗಳ ಸರ್ವೇಕ್ಷಣೆಯಲ್ಲಿ ಅವುಗಳ ವಾರ್ಷಿಕ ವಲಸೆ ಪ್ರಮಾಣವು ವಿಶಾಲ ಪ್ರಮಾಣದಲ್ಲಿ ಬದಲಾವಣೆ ಕಂಡಿಲ್ಲ ಎಂದು ಹೇಳಬಹುದು.ಈ ವರ್ಷಗಳ ಅವಧಿಗಳಲ್ಲಿ ಇದು ಅತ್ಯಂತ ಕಡಿಮೆ ಪ್ರಮಾಣ ಎನ್ನಬಹುದು.[೯]

ಆನೆಗಳನ್ನು ಬೃಹತ್ ಪ್ರಮಾಣದ ಸಸ್ಯಾಹಾರಿಗಳು ಎಂದು ಪರಿಗಣಿಸಲಾಗುತ್ತದಲ್ಲದೇ ಅವು ಪ್ರತಿ ದಿನ ಒಂದು ದೊಡ್ಡ ಮರವನ್ನೇ ತಮ್ಮ 150 kg (330 lb)ಆಹಾರಕ್ಕಾಗಿ ಬಳಸುತ್ತವೆ ಎಂದು ಊಹಿಸಲಾಗುತ್ತದೆ.[೧೦] ಅವುಗಳು ಸಾಮಾನ್ಯವಾಗಿ ಮೇಯುವುದಲ್ಲದೇ ದೊಡ್ಡ ಪ್ರಮಾಣದಲ್ಲಿ ಆಹಾರಕ್ಕಾಗಿ ಅಲೆದಾಡುತ್ತವೆ. ದಕ್ಷಿಣ ಭಾರತದಾದ್ಯಂತ 1,130 km2 (440 sq mi)ನಡೆದ ಅಧ್ಯಯನವೊಂದರಲ್ಲಿ ಆನೆಗಳು ಸುಮಾರು೧೧೨ ಜಾತಿಯ ವಿವಿಧ ಸಸ್ಯಗಳನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ.ಬಹಳಷ್ಟು ಬಾರಿ ಬಿದಿರು ಸಸ್ಯಜಾತಿಗಳು ಮತ್ತು ದ್ವಿದಳ ಧಾನ್ಯದ ಸಸ್ಯ,ತಾಳೆ ಜಾತಿ ಮರ,ಜೊಂಡು ಹುಲ್ಲು ಮತ್ತು ಹರಿದ್ವರ್ಣದ ಹುಲ್ಲಿನ ಜಾತಿಯ ಸಸ್ಯಗಳನ್ನು ಬಳಸುತ್ತವೆ. ಅವು ಬಹುತೇಕ ಎತ್ತರವಾಗಿ ಬೆಳೆದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಮೇಯುತ್ತವೆ,ಆದರೆ ಆಯಾ ಋತುಮಾನದಲ್ಲಿ ಅವುಗಳ ಆಹಾರ ಸೇವಿಸುವ ಪ್ರಮಾಣದ ಮೇಲೆ ಅದು ನಿಗದಿಯಾಗಿರುತ್ತದೆ. ಏಪ್ರಿಲ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಹೊಸಹುಲ್ಲು ಬೆಳೆಯುತ್ತದೆ,ಆಗ ಅವು ತುದಿ ಭಾಗದ ಮೆತ್ತಗಿನುದನ್ನು ತೆಗೆದು ಪೊದೆಗಳಲ್ಲಿ ಮೇಯುತ್ತವೆ. ಹುಲ್ಲು ಸಸ್ಯಗಳು ಎತ್ತರವಾಗಿದ್ದರೆ0.5 m (1.6 ft) ಆಗ ಅವು ಇಡೀ ಪೊದೆಯನ್ನೇ ಬುಡಸಮೇತ ಕೀಳಿ ಅದರ ಮಣ್ಣಿನ ಭಾಗ ಮತ್ತು ಬೇರನ್ನು ಜಾಣತನದಿಂದ ತೆಗೆದು ತಾಜಾ ಎಲೆ,ಹುಲ್ಲು ಸಸ್ಯಗಳನ್ನೇ ಸೇವಿಸುತ್ತವೆ. ಶರತ್ಕಾಲದಲ್ಲಿ ಸಾಮಾನ್ಯವಾಗಿ ಹುಲ್ಲು ಪೂರ್ಣ ಪ್ರಮಾಣದಲ್ಲಿ ಬೆಳೆಯುತ್ತದೆ.ಆಗ ಆನೆಗಳು ಇಂತಹ ರಸಭರಿತ ಹುಲ್ಲನ್ನು ಸ್ವಚ್ಛಗೊಳಿಸಿ ಅದರ ಬೇರುಗಳನ್ನು ಬೇರ್ಪಡಿಸಿ,ಚೂಪಾದ ಭಾಗವನ್ನು ತೆಗೆದು ಹುಲ್ಲನ್ನು ಮೇಯುತ್ತವೆ. ಬಿದಿರು ಸಸ್ಯಗಳಿಂದ ಎಳೆಯ ಕಾಂಡಗಳ ಭಾಗವನ್ನು,ಪಾರ್ಶ್ವದ ಸಸ್ಯಭಾಗ ಮತ್ತು ಸಣ್ಣ ಕೊಂಬೆಗಳನ್ನು ತಿನ್ನುತ್ತವೆ. ಜನವರಿಯಿಂದ ಏಪ್ರಿಲ್ ವರೆಗಿನ ಶುಷ್ಕ ವಾತಾವರಣದ ಅವಧಿಯಲ್ಲಿ ಹುಲ್ಲುಗಾವಲುಗಳಲ್ಲಿ ಅಲೆದಾಡಿ ತಮ್ಮ ಪ್ರಮುಖ ಆಹಾರ ಮೂಲಗಳನ್ನು ಪಡೆಯುತ್ತವೆ. ಅವು ಎಲೆಗಳು ಮತ್ತು ಕೊಂಬೆಗಳನ್ನು ಅವುಗಳ ತಾಜಾತನದ ಮೇಲೆ ಆಯ್ಕೆ ಮಾಡಿಕೊಳ್ಳುತ್ತವೆ.ಅಕೇಶಿಯಾದ ಮುಳ್ಳುಭರಿತ ಪೊದೆಯನ್ನು ಯಾವುದೇ ಅಡೆತಡೆಗಳಿಲ್ಲದೇ ಸೇವಿಸುತ್ತವೆ. ಅವುಗಳು ಮರದ ತೊಗಟೆಯನ್ನು ಬಿಳಿದಾದ ಮುಳ್ಳುಗಳ ಹೊರಪದರಿನಭಾಗ ಮತ್ತು ಇನ್ನಿತರ ಹೂಬಿಡುವ ಸಸ್ಯಗಳನ್ನು ಆಹಾರಕ್ಕಾಗಿ ಅವಲಂಬಿಸಿವೆ.ಕಾಡು ಸೇಬು,ಹುಣಸೆ,ಕುಂಭಿ ಮತ್ತು ಖರ್ಜೂರ ಗಿಡದ ಎಲೆಗಳನ್ನು ತಿನ್ನುತ್ತವೆ.[೧೧]

ಸಾಮಾನ್ಯವಾಗಿ ನೇಪಾಳದ ಬಾರ್ಡಿಯಾ ನ್ಯಾಶನಲ್ ಪಾರ್ಕ್ ನಲ್ಲಿನ ಆನೆಗಳು ದೊಡ್ಡ ಪ್ರಮಾಣದ ನದಿ ದಂಡೆಯಲ್ಲಿನ ಹುಲ್ಲನ್ನು ಅದರಲ್ಲೂ ಹೆಚ್ಚಾಗಿ ಮುಂಗಾರು ಮಳೆಕಾಲದಲ್ಲಿ ಬೆಳೆದ ನೆರೆಕಾಲದಲ್ಲಿ ಬೆಳೆದ ಹುಲ್ಲು ತಿನ್ನುತ್ತವೆ. ಅವುಗಳು ಸಾಮಾನ್ಯವಾಗಿ ಶುಷ್ಕ ಹವಾಮಾನದಲ್ಲಿ ತಂಪು ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿ ಸಮೃದ್ಧ ಹಸಿರನ್ನು ಪಡೆಯುತ್ತವೆ.[೧೨] ಉಷ್ಣವಲಯದ ತೇವ ಪ್ರದೇಶದ ಹರಿದ್ವರ್ಣ ಕಾಡುಗಳಿರುವ ಆಸ್ಸಾಂ 160 km2 (62 sq mi)ಪ್ರದೇಶಗಳಲ್ಲಿ ಆನೆಗಳು ಆಹಾರಕ್ಕಾಗಿ ವಿಭಿನ್ನ ೨೦ ಸಸ್ಯವರ್ಗದ ಹುಲ್ಲು,ಗಿಡಗಳು ಮತ್ತು ಮರಗಳನ್ನು ಅವಲಂಬಿಸಿವೆ. ಹುಲ್ಲುಗಳ ಪ್ರಭೇದಗಳಾದ ಇಂಪೆರಾ ಸಿಲಿಂಡರಿಕಾ ಮತ್ತು ಲೀರ್ಸಿಯಾ ಹೆಕ್ಸಾಂಡ್ರಾ ಜಾತಿಯ ಸಸ್ಯಗಳು ಹೆಚ್ಚಾಗಿ ಆನೆಗಳಿಗೆ ಬೇಕಾಗುವ ಮೇವನ್ನು ಒದಗಿಸುತ್ತವೆ.[೧೩]

ಬೆದರಿಕೆಗಳು[ಬದಲಾಯಿಸಿ]

ಆನೆಗಳ ವಾಸಸ್ಥಳ ನಾಶವಾಗುತ್ತಿರುವುದು, ಮತ್ತು ಮುಕ್ತ ಚಲನವಲನಗಳು ಇದೀಗ ನಿರ್ಬಂಧಕ್ಕೊಳಪಟ್ಟು ಬೆದರಿಕೆಯ ಅಪಾಯದಲ್ಲಿವೆ.ಜಲಾಶಯಗಳು,ಜಲವಿದ್ಯುತ್ ಯೋಜನೆಗಳು,ದೊಡ್ಡ ಪ್ರಮಾಣದ ಜಾಗೆ ಆಕ್ರಮಣ ಗಳು,ಅದಕ್ಕೆ ಪೂರಕ ಕಾಲುವೆಗಳು,ನೀರಾವರಿ ಅಣೆಕಟ್ಟೆಗಳು,ಅಸಂಖ್ಯಾತ ಕೃಷಿ ಮತ್ತು ಸಸ್ಯತೋಪುಗಳ ಭೂಪ್ರದೇಶಗಳು,ಹೆದ್ದಾರಿಗಳು ರೈಲ್ವೆ ಮಾರ್ಗಗಳು,ಗಣಿಗಾರಿಕೆ ಮತ್ತು ಕೈಗಾರಿಕಾಭಿವೃದ್ಧಿ ಇತ್ಯಾದಿ ಆನೆಗಳ ಹಿಂಡಿನ ಮುಕ್ತ ಸಂಚಾರಕ್ಕೆ ಬೆದರಿಕೆಯೊಡ್ಡಿವೆ.[೬]

ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಆನೆಗಳ ಸಂರಕ್ಷಣಾ ಯೋಜನೆಗಳು ಜನಸಂಘರ್ಷ ಮತ್ತು ಆನೆಗಳ ಬಗೆಗಿನ ಅಲ್ಪ ಕಾಳಜಿಗಳು ಹೊಡೆತ ತಂದಿವೆ.ರೈಲ್ವೆಗಳ ಅಪಘಾತಗಳಿಂದಲೂ ಆನೆ ಸಂತತಿ ನಾಶವಾಗುತ್ತಿದೆ. ಸಿಲಿಗುರಿ ಮತ್ತು ಅಲಿಪುರ್ದೂರ್ ನಡುವಿನ ರೈಲ್ವೆ ಮಾರ್ಗವು ದಟ್ಟ ಕಾನನದ ೭೪ ಕಿ.ಮೀ ಉದ್ದದಲ್ಲಿ ಹಾದು ಹೋಗುತ್ತದೆ.ಇಲ್ಲಿ ವಿವಿಧ ಅರಣ್ಯ ವಿಭಾಗಗಳು ಬರುತ್ತವೆ. ಪ್ರತಿದಿನ ಅತ್ಯಂತ ವೇಗದ ೨೦ ರೈಲುಗಳು ಈ ಮಾರ್ಗವಾಗಿ ಚಲಿಸುತ್ತವೆ. ಒಂದು ಅರಣ್ಯ ಭಾಗದಿಂದ ಇನ್ನೊಂದೆಡೆಗೆ ಹೋಗುವಾಗ ಆನೆಗಳು ರೈಲಿಗೆ ಸಿಕ್ಕಿ ಸಾವನ್ನಪ್ಪುತ್ತವೆ. ಒಟ್ಟಾರೆ ೧೯೫೮ ಮತ್ತು ೨೦೦೮ ರ ನಡುವಿನ ಅವಧಿಯಲ್ಲಿ ಒಟ್ಟು ಮರಣವನ್ನಪ್ಪಿದ ಆನೆಗಳ ಸಂಖ್ಯೆ ೩೯ ಇದೆ.ಇದರಲ್ಲಿನ ನಾಲ್ಕು ಕೇವಲ ೨೦೦೪ ಮತ್ತು ೨೦೦೮ ರ ಅವಧಿಯಲ್ಲಿ ಸಾವಿಗೀಡಾಗಿವೆ.[೧೪]

ಬಾಂಗ್ಲಾದೇಶದಲ್ಲಿಯೂ ಸಹ ಆನೆಗಳ ವಾಸದ ಬಹುತೇಕ ಅರಣ್ಯ ಪ್ರದೇಶವು ತುಂಬಾ ಇಳಿಮುಖವಾಗಿದೆ.ಇದು ಕಾಡಾನೆಗಳ ಸಂಖ್ಯಾಬಲದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ವಾಸಸ್ಥಳಗಳ ನಾಶ ಮತ್ತು ಅರಣ್ಯ ಭಾಗ ಹರಿದು ಹಂಚಿಹೋಗಿದ್ದು ಕೂಡಾ ಜನವಸತಿಯ ಹೆಚ್ಚಳವೇ ಕಾರಣವಾಗಿದೆ.ಇದರಿಂದ ಜನರ ಅಗತ್ಯಗಳಾದ ಸೌದೆ ಇಂಧನ ಪೂರೈಕೆ ಮತ್ತು ಮರಮಟ್ಟುಗಳ ಬೇಡಿಕೆಯ ಹೆಚ್ಚಳವೂ ಅರಣ್ತ್ಯ ನಾಶಕ್ಕೆ ಕಾರಣವಾಗಿದೆ. ಕಾನೂನು ಬಾಹಿರ ಮರಮುಟ್ಟುಗಳನ್ನು ಸಾಗಿಸುವುದು ಕೂಡ ಅರಣ್ಯ ನಾಶಕ್ಕೆ ಮೂಲ ಕಾರಣವಾಗಿದೆ.ಇದರಿಂದ ವನ್ಯಪ್ರಾಣಿಗಳ ಮೂಲ ವಾಸಸ್ಥಾನಗಳು ನಾಶವಾಗಿವೆ. ವಾಸಸ್ಥಾನಗಳ ತೀವ್ರ ಇಳಿಮುಖತೆಯಿಂದ ಆನೆಗಳು ಹೆಚ್ಚು ಹೆಚ್ಚು ಜನರೊಂದಿಗೆ ಮುಖಾಮುಖಿಯಾಗಿ ಸಂಘರ್ಷ ಅನುಭವಿಸಬೇಕಾಗಿದೆ.[೧೫]

ಸದ್ಯ ಮಯನ್ಮಾರದಲ್ಲಿ ಪ್ರವಾಸಿಗರಿಗಾಗಿ ತಯಾರಿಸುವ ತೊಡುಗೆಗಳಿಗಾಗಿ ಆನೆದಂತದ ಆಭರಣಗಳ ಬೇಡಿಕೆ ಹೆಚ್ಚಾಗಿದೆ.ಈ ಮೊದಲಿಗಿಂತಲೂ ಈಗ ಆನೆ ದಂತಗಳಿಗೆ ಅತ್ಯಧಿಕ ಮಾರುಕಟ್ಟೆ ದೊರಕುತ್ತಿದೆ. ಅಲ್ಲಿನ ಮಿಲಿಟರಿ ಆಡಳಿತವು ಆನೆದಂತ ವ್ಯಾಪಾರ ತಡೆಗಟ್ಟಲು ಅಲ್ಪಪ್ರಮಾಣದ ಆಸಕ್ತಿ ತೋರುತ್ತಿದೆ.ಹೀಗಾಗಿ ದೇಶದಲ್ಲಿನ ಆನೆಗಳು ಮೌನ ಬಲಿಗಳಾಗಿ ಹೋಗುತ್ತಿವೆ. ವಿಶ್ವಾದ್ಯಂತ ಆನೆದಂತ ಮಾರಾಟದ ನಿಷೇಧದಿಂದಾಗಿ ೧೯೯೦ ರ ಮಧ್ಯಾವಧಿಯಿಂದ ಸದ್ಯ ಕಚ್ಚಾ ಆನೆದಂತದ ಬೆಲೆಯು ಗಗನಕ್ಕೇರಿದೆ.ಒಂದು ಕಿಲೊ ಧಾರಣೆಯು $೭೬ ದಿಂದ $೨೦೦ ಕ್ಕೆ ನೆಗೆತ ಕಂಡಿದೆ. ಇಂತಹ ದುಬಾರಿತನಕ್ಕೆ ವಿದೇಶೀ ಪ್ರವಾಸಿಗರೇ ಕಾರಣರಾಗಿದ್ದಾರೆ.ಅವರ ನಿರಂತರ ಬೇಡಿಕೆಯಿಂದಾಗಿ ಆನೆದಂತಗಳ ಪಡೆಯಲು ಕಾನೂನು ಬಾಹಿರವಾಗಿ ಹತ್ಯೆ ಮತ್ತು ಅಮಾನವೀಯವಾಗಿ ಗಂಡು ಸಲಗಗಳನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತದೆ. ಇದಲ್ಲದೇ ಬಹಳಷ್ಟು ಪ್ರಮಾಣದಲ್ಲಿ ಭೋಜನದಲ್ಲಿ ಚಮಚಗಳಂತೆ ಬಳಸಲು ಚಾಪ್ ಸ್ಟಿಕ್ಸ್ ಮತ್ತು ಕೆತ್ತನೆ ಕೆಲಸಗಳಿಗಾಗಿ ವ್ಯಾಪಾರಿಗಳು ಆನೆದಂತವನ್ನು ಮಯನ್ಮಾರ್ ನಿಂದ ಚೀನಾದೊಳಕ್ಕೆ ಕಳ್ಳಸಾಗಣೆ ಮಾಡುತ್ತಾರೆ.[೧೬]

ಸಂರಕ್ಷಣೆ[ಬದಲಾಯಿಸಿ]

Elephas maximus ನ್ನು CITES ಸೂಚಿ I.ಯಲ್ಲಿ ನಮೂದಿಸಲಾಗಿದೆ.[೧]

ಇವನ್ನೂ ಗಮನಿಸಿ‌[ಬದಲಾಯಿಸಿ]

 • ಕೇರಳ ಸಂಸ್ಕೃತಿಯಲ್ಲಿ ಆನೆಗಳು
 • ಮೇಲಾ ಶಿಕಾರ್ , ಎ ಟ್ರಾಡಿಶನಲ್ ಮೆಥೆಡ್ ಆಫ್ ಕ್ಯಾಪ್ಚರಿಂಗ್ ವೈಲ್ಡ್ ಎಲೆಫಂಟ್ಸ್ ಇನ್ ನಾರ್ತ್ ಈಸ್ಟ್ ಇಂಡಿಯಾ
 • ಶ್ರೀಲಂಕಾದ ಆನೆ
 • ಸುಮಾತ್ರನ್ ಆನೆ
 • ಬೊರ್ನಿಯೊ ಆನೆ

ಉಲ್ಲೇಖಗಳು‌[ಬದಲಾಯಿಸಿ]

 1. ೧.೦ ೧.೧ ೧.೨ Choudhury, A., Lahiri Choudhury, D.K., Desai, A., Duckworth, J.W., Easa, P.S., Johnsingh, A.J.T., Fernando, P., Hedges, S., Gunawardena, M., Kurt, F., Karanth, U., Lister, A., Menon, V., Riddle, H., Rübel, A., Wikramanayake, E. (2008). "Elephas maximus". IUCN Red List of Threatened Species. Version 2010.4. International Union for Conservation of Nature. {{cite web}}: Invalid |ref=harv (help)CS1 maint: multiple names: authors list (link)
 2. ಶೊಶಾನಿ, ಜೆ., ಐಸೆನ್ ಬರ್ಗ್, ಜೆ.ಎಫ್. (೧೯೮೨) Elephas maximus . ಮಮ್ಮಲಿಯನ್ ಸ್ಪೀಸಸ್ ೧೮೨: ೧–೮
 3. ಶೊಶನಿ, ಜೆ. (೨೦೦೬) ಟ್ಯಾಕ್ಸೊಮೊನಿ, ಕ್ಲಾಸಿಫಿಕೇಶನ್, ಅಂಡ್ ಎವುಲುಶನ್ ಆಫ್ ಎಲೆಫಂಟ್ಸ್ ಇನ್: ಫೌಲರ್, ಎಂ. ಇ., ಮಿಕೊತಾ, ಎಸ್. ಕೆ. (eds.) ಬಯಾಲಜಿ, ಮೆಡಿಸಿನ್, ಅಂಡ್ ಸರ್ಜರಿ ಆಫ್ ಎಲೆಫಂಟ್ಸ್. ವಿಲ್ಲಿ-ಬ್ಲ್ಯಾಕ್ ವೆಲ್. ISBN ೦೬೮೮೧೬೮೯೪೯ ಪುಟಗಳು. ೩ / ೧೪
 4. ಪಿಳ್ಳೈ, N.G. (೧೯೪೧) ಆನ್ ದಿ ಹೈಟ್ ಅಂಡ್ ಏಜ್ ಆಫ್ ಆನ್ ಎಲೆಫಂಟ್ . ಜರ್ನಲ್ ಆಫ್ ದಿ ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ ೭೦(೩): ೫೫೭–೫೫೮.
 5. ಫರಾ ಟೆನ್ ವೆಲ್ದೆ, ಪಿ. (೧೯೯೭) ದಿ ವೈಲ್ಡ್ ಎಲೆಫಂಟ್ಸ್ ಆಫ್ ರಾಯಲ್ ಬಾರ್ಡಿಯಾ ನ್ಯಾಶನಲ್ ಪಾರ್ಕ್, ನೇಪಾಳ್ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೧೭: ೪೧–೪೪
 6. ೬.೦ ೬.೧ ಸುಕುಮಾರ್, ಆರ್. (೧೯೯೩) ದಿ ಏಷ್ಯನ್ ಎಲೆಫಂಟ್: ಎಕಾಲಜಿ ಅಂಡ್ ಮ್ಯಾನೇಜ್ ಮೆಂಟ್ ಸೆಕೆಂಡ್ ಎಡಿಶನ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ISBN ೦೬೮೮೧೬೮೯೪೯
 7. ಭಟ್ಟಾ, ಎಸ್ ಆರ್. (೨೦೦೬) ಎಫರ್ಟ್ಸ್ ಟು ಕಾಂಜರ್ವ್ ದಿ ಏಷ್ಯನ್ ಎಲೆಫಂಟ್ ಇನ್ ನೇಪಾಳ್ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೨೫: ೮೭–೮೯.೧೫:
 8. ಸುಕುಮಾರ್, ಆರ್. (೧೯೮೯) ಎಕಾಲಜಿ ಆಫ್ ದಿ ಏಷ್ಯನ್ ಎಲೆಫಂಟ್ ಇನ್ ಸದರ್ನ್ ಇಂಡಿಯಾ. l. Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ.ಮೂಮೆಂಟ್ ಅಂಡ್ ಹ್ಯಾಬಿಟಾಟ್ ಯುಟಿಲೈಜೇಶನ್ ಪ್ಯಾಟರ್ನ್ಸ್ Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ.. ಜರ್ನಲ್ ಆಫ್ ಟ್ರಾಪಿಕಲ್ ಎಕಾಲಜಿ ೫: ೧–೧೮
 9. ಬಾಸ್ಕರನ್, ಎನ್., ದೆಸಾಯಿ, ಎ. ಎ. (೧೯೯೬) ರೇಂಜಿಂಗ್ ಬಿವೇಹಿಯರ್ ಆಫ್ ದಿ ಏಷ್ಯನ್ ಎಲೆಫಂಟ್ (Elephas maximus) ಇನ್ ದಿ ನಿಲಗಿರಿ ಬಯಾಸ್ಪಿಯರ್ ರಿಜರ್ವ್, ಸೌತ್ ಇಂಡಿಯಾ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೧೫: ೪೧–೫೭
 10. ಸಮನಸಿರಿ, ಕೆ. ಎ ಪಿ., ವೀರ್ಕೂನ್, ಡಿ. ಕೆ (೨೦೦೭) ಫೀಡಿಂಗ್ ಬಿವೇರಿಯರ್ ಆಫ್ ಏಷ್ಯನ ಎಲೆಫಂಟ್ಸ್ ಇನ್ ದಿ ನಾರ್ತ್ ವೆಸ್ಟರ್ನ್ ರಿಜನ್ ಆಫ್ ಶ್ರೀಲಂಕಾ Archived 2016-11-18 ವೇಬ್ಯಾಕ್ ಮೆಷಿನ್ ನಲ್ಲಿ.. ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ಸಂಖ್ಯೆ ೨: ೨೭–೩೪
 11. ಸುಕುಮಾರ್, ಆರ್. (೧೯೯೦) ಎಕಾಲಜಿ ಆಫ್ ದಿ ಏಷ್ಯನ್ ಎಲೆಫಂಟ್ ಇನ್ ಸದರ್ನ್ ಇಂಡಿಯಾ. Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.II. ಫೀಡಿಂಗ್ ಹ್ಯಾಬಿಟ್ಸ್ ಅಂಡ್ ಕ್ರಾಪ್ ರೇಡಿಂಗ್ ಪಾಟರ್ನ್ಸ್ Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ.. ಜರ್ನಲ್ ಆಫ್ ಟ್ರಾಪಿಕಲ್ ಎಕಾಲಜಿ(೧೯೯೦) ೬: ೩೩–೫೩
 12. ಪ್ರಧಾನ್,ಎನ್.ಎಂ.ಬಿ., ವೆಗ್ಗೆ, ಪಿ., ಮೊಯ್, ಎಸ್.ಆರ್., ಶ್ರೇಷ್ಟಾ, ಎ.ಕೆ. (೨೦೦೮) ಫೀಡಿನ್ಗ್ ಎಕಾಲಜಿ ಆಫ್ ಟು ಎಂಡೇಂಜರ್ಡ್ ಸಿಂಪಾಟ್ರಿಕ್ ಮೆಗಾಹರ್ಬಿವೊರ್ಸ್: ಏಷ್ಯನ್ ಎಲೆಫಂಟ್ Elephas maximus ಅಂಡ್ ಗ್ರೇಟರ್ ಒನ್-ಹಾರ್ನೆಡ್ ರೈನ್ಹೊಸರ್ಸ್ ರೈನ್ಹೊಸರ್ಸ್ ಯುನಿಕಾರ್ನಿಸ್ ಇನ್ ಲೊಲ್ಯಾಂಡ್ ನೇಪಾಳ . ವೈಲ್ಡ್ ಲೈಫ್ ಬಯಾಲಜಿ ೧೪: ೧೪೭–೧೫೪
 13. ಬೊರಾಹ್, ಜೆ., ದೆಕಾ, ಕೆ. (೨೦೦೮) ನುಟ್ರಿಶನಲ್ ಇವ್ಯಾಲುವೇಶನ್ ಆಫ್ ಫೊರ್ಜ್ ಪ್ರಿಫರ್ಡ್ ಬೈ ವೈಲ್ಡ್ ಎಲೆಫಂಟ್ಸ್ ಇನ್ ದಿ ರಾಣಿ ರೇಂಜ್ ಫಾರೆಸ್ಟ್,ಆಸ್ಸಾಂ,ಇಂಡಿಯಾ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೨೮: ೪೧–೪೩
 14. ರಾಯ್, ಎಂ. ಬಾಸ್ಕರನ್, ಎನ್., ಸುಕುಮಾರ್, ಆರ್. (೨೦೦೯) ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ರೈಲ್ವೆ ಹಳಿಗೆ ಸಿಲುಕಿ ಮೃತಪಟ್ಟ ಬೃಹತ್ ಗಾತ್ರದ ಆನೆ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೩೧: ೩೬–೩೯
 15. ಇಸ್ಲಾಮ್, ಎಂ. ಎ. (೨೦೦೬) ಬಾಂಗ್ಲಾದೇಶದಲ್ಲಿ ಏಷ್ಯನ್ ಆನೆಗಳ ಸಂರಕ್ಷಣೆ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೨೫: ೨೧–೨೬
 16. ವಿಗ್ನೆ, ಎಲ್., ಮಾರ್ಟಿನ್, ಇ. (೨೦೦೨) ಮಯನ್ಮಾರ್ ನ ಆನೆದಂತ ಮಾರಾಟವು ಕಾಡಾನೆಗಳಿಗೆ ಅಪಾಯಕಾರಿಯಾಗಿದೆ’ . ಗಜ: ಜರ್ನಲ್ ಆಫ್ ದಿ IUCN/SSC ಏಷ್ಯನ್ ಎಲೆಫಂಟ್ ಸ್ಪೆಸಿಲಿಸ್ಟ್ ಗ್ರುಪ್ ೨೧: ೮೫–೮೬

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಜಿ. ಪಿ. ಸಂಡೆರ್ಸನ್(೧೯೦೭) ಥರ್ಟೀನ್ ಇಯರ್ಸ್ ಅಮಂಗ್ ದಿ ವೈಲ್ಡ್ ಬೀಸ್ಟ್ಸ್ ಆಫ್ ಇಂಡಿಯಾ: ದೇರ್ ಹಾಂಟ್ಸ್ ಅಂಡ್ ಹಾಬಿಟ್ಸ್ ಫ್ರಮ್ ಪರ್ಸನಲ್ ಆಬ್ಜವರ್ವೇಶನ್ : ಉಯಿತ್ ಆನ್ ಅಕೌಂಟ್ ಆಫ್ ದಿ ಮೋಡ್ಸ್ ಆಫ್ ಕ್ಯಾಪ್ಚರಿಂಗ್ ಅಂಡ್ ಟೇಮಿಂಗ್ ಎಲೆಫಂಟ್ಸ್ . ಜಾನ್ ಗ್ರ್ಯಾಂಟ್, ಎಡಿನ್ ಬರ್ಗ್. ೬ತ್ ಎಡಿಶನ್ ಇನ್ ೨೦೦೦ ಬೈ ಏಷ್ಯನ್ ಎಜುಕೇಶನಲ್ ಸರ್ವಿಸಿಸ್, ನ್ಯುದೆಲ್ಹಿ. ISBN ೮೧೨೦೬೧೪೬೪X ೯೭೮೮೧೨೦೬೧೪೬೪೨

ಬಾಹ್ಯ ಕೊಂಡಿಗಳು‌[ಬದಲಾಯಿಸಿ]